Search
  • Follow NativePlanet
Share
» »ಮನಸೂರೆಗೊಳ್ಳುತ್ತಿರುವ ಐತಿಹಾಸಿಕ ತಾಜ್ ಕೋಟೆ

ಮನಸೂರೆಗೊಳ್ಳುತ್ತಿರುವ ಐತಿಹಾಸಿಕ ತಾಜ್ ಕೋಟೆ

By Sowmyabhai

ತಾಜ್ ಮಹಲ್ ಯಾರಿಗೆ ಗೊತ್ತಿಲ್ಲ ಹೇಳಿ? ಅಷ್ಟು ಪ್ರಖ್ಯಾತವಾಗಿದೆ ಈ ಆಗ್ರಾದ ತಾಜ್. ಈ ಮಹಲ್‍ಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ದಿನವು ಭೇಟಿ ನೀಡುತ್ತಿರುತ್ತಾರೆ. ಆಗ್ರಾದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಕೇವಲ ತಾಜ್ ಮಹಲ್ ಅಲ್ಲದೆ ಆಗ್ರಾ ಕೋಟೆ ಕೂಡ ಪ್ರಸಿದ್ದವಾದುದು. ಈ ಆಗ್ರಾ ಕೋಟೆಯು ತಾಜ್ ಮಹಲ್‍ನ ಸಮೀಪದಲ್ಲೇ ಇದೆ. ಒಮ್ಮೆ ತಾಜ್ ಮಹಲ್‍ಗೆ ಹೋದಾಗ ಆಗ್ರಾದ ಕೋಟೆಗೂ ಭೇಟಿ ನೀಡಿ.

Interesting Facts About Agra Fort

Photo Courtesy: Dan Lundberg

ಆಗ್ರಾ ಕೋಟೆ ಒಂದು ಬೃಹತ್ ಆದ ಐತಿಹಾಸಿಕ ಕೋಟೆ. ಈ ಕೋಟೆ ನೋಡುತ್ತಿದ್ದಂತೆ ಮೊಗಲರ ಕಾಲದಲ್ಲಿದ್ದೆವೆನೋ ಎಂಬ ಅನುಭವ ಉಂಟಾಗುತ್ತದೆ. ಸುಮಾರು 8 ವರ್ಷಗಳ ಕಾಲ (1565-73) ಮೊಗಲರ ಚಕ್ರವರ್ತಿ ಅಕ್ಬರ್ ಯಮುನ ನದಿಯ ತಟದ ಮೇಲೆ ಈ ಕೋಟೆಯನ್ನು ನಿರ್ಮಿಸಿದನು.

Interesting Facts About Agra Fort

Photo Courtesy: Sundaram + Annam

ಆಗ್ರಾ ಕೋಟೆಯ ವಾಸ್ತುಶಿಲ್ಪ
ಈ ಕೋಟೆಯ ವಾಸ್ತುಶಿಲ್ಪವು ಹಿಂದೂ ಹಾಗೂ ಇಸ್ಲಾಮಿಕ್ ಎರಡೂ ಶೈಲಿಯಲ್ಲಿದ್ದು ಮರಳುಗಲ್ಲು ಹಾಗೂ ಬಿಳಿ ಅಮೃತ ಶಿಲೆಗಳಿಂದ ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ಹಲವಾರು ಪಕ್ಷಿ, ಆನೆ, ಮೃಗಗಳ, ಡ್ರ್ಯಾಗನ್‍ಗಳ ಚಿತ್ರಗಳಿವೆ. ಇಂತಹ ಚಿತ್ರ ವಿಚಿತ್ರ ಕಲಾಕೃತಿಗಳು ಇಡೀ ಭಾರತದ ಇಸ್ಲಾಮಿಕ್ ವಾಸ್ತುಶಿಲ್ಪದಲ್ಲಿ ಎಲ್ಲೂ ಕಾಣಲಾಗದು. ಈ ಕೋಟೆಯು 2.4 ಕೀ.ಮೀ ಉದ್ದ ಹಾಗೂ 21 ಮೀಟರ್ ಎತ್ತರವಿದೆ. ಈ ಕೋಟೆಗೆ ಅಲಂಕಾರದಂತೆ ಎರಡು ಭವ್ಯವಾದ ಮಹಾ ದ್ವಾರಗಳಿವೆ. ಒಂದು ದಕ್ಷಿಣಾಭಿಮುಖವಾಗಿದ್ದರೆ ಮತ್ತೋಂದು ಪಶ್ಚಿಮಾಭಿಮುಖವಾಗಿದೆ. ಅವುಗಳು ದೆಹಲಿ ಗೇಟ್ ಮತ್ತು ಲಾಹೋರ್ ಗೇಟ್‍ಗಳು ಇವುಗಳನ್ನು ಅಮರ್ ಸಿಂಗ್ ಗೇಟ್ ಎಂದೂ ಸಹ ಕರೆಯಲಾಗುತ್ತದೆ.

Interesting Facts About Agra Fort

Photo Courtesy: Sanyam Bahga

ಪ್ರಸಿದ್ದವಾದ ಸ್ಥಳಗಳು
ಈ ಕೋಟೆಯಲ್ಲಿ ಜಹಂಗೀರ್ ಮಹಲ್, ಕಾಸ್ ಮಹಲ್, ದಿವಾನ್ ಐ ಆಮ್, ದಿವಾನ್ ಐ ಕಾಸ್, ಮಾಚ್ಚಿ ಭವನ, ಬೆಂಗಾಲಿ ಮಹಲ್, ಷೀಶ್ ಮಹಲ್ ಮತ್ತು ಅಕ್ಬರಿ ಮಹಲ್‍ಗಳಿವೆ. ಈ ಕೋಟೆಯ ಒಳಗೆ ಮೂರು ಮಸೀದಿಗಳಿವೆ. ಅವುಗಳೆಂದರೆ ಮೋತಿ ಮಸೀದಿ, ಮೀನ ಮಸೀದಿ ಮತ್ತು ನಾಗೀನ ಮಸೀದಿ.

ಉತ್ತಮ ಕಾಲಾವಧಿ
ಈ ಕೋಟೆಗೆ ಭೇಟಿ ನೀಡಲು ಉತ್ತಮ ಕಾಲಾವಧಿ ಎಂದರೆ ಅಕ್ಟೋಬರ್‍ನಿಂದ ಮಾರ್ಚ್‍ನವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X