Search
  • Follow NativePlanet
Share
» »ಭಾರತ ದೇಶದ ಅತ್ಯಂತ ದೊಡ್ಡದಾದ ಬೀಚ್ : ಚೆನ್ನೈನಲ್ಲಿದೆ!!

ಭಾರತ ದೇಶದ ಅತ್ಯಂತ ದೊಡ್ಡದಾದ ಬೀಚ್ : ಚೆನ್ನೈನಲ್ಲಿದೆ!!

ಪ್ರಸ್ತುತ ಭಾರತದ ಅರ್ಥಶಾಸ್ತ್ರದ ಬಗ್ಗೆ ವಿವರಣೆ ಬೇಡ. ಬೀಚ್‍ನ ವಿಷಯಕ್ಕೆ ಬಂದರೆ ಪ್ರಪಂಚದಲ್ಲಿಯೇ ಎರಡನೇ ದೊಡ್ಡದಾದ ಬೀಚ್ ನಮ್ಮ ಭಾರತ ದೇಶದ ತಮಿಳುನಾಡು ರಾಜ್ಯದಲ್ಲಿರುವುದು ಹೆಮ್ಮೆಯ ವಿಷಯವೇ.

ಬೀಚ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕವೂ ಕೂಡ ಬೀಚ್ ಎಂದರೆ ಇಷ್ಟ ಪಡುತ್ತಾರೆ. ವಿಶೇಷ ಏನಪ್ಪ ಎಂದರೆ ನಮ್ಮ ಭಾರತ ದೇಶವು ತನ್ನ ಎಲ್ಲಾ ರಂಗಗಳಲ್ಲಿಯೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ, ಪಡೆಯುತ್ತಲಿದೆ. ಭಾರತದಂತಹ ದೇಶದ ಮುಂದೆ ಯಾವ ದೇಶವು ಸಾಟಿ ಇಲ್ಲ ಎಂಬಂತೆ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ.

ಪ್ರಸ್ತುತ ಭಾರತದ ಅರ್ಥಶಾಸ್ತ್ರದ ಬಗ್ಗೆ ವಿವರಣೆ ಬೇಡ. ಬೀಚ್‍ನ ವಿಷಯಕ್ಕೆ ಬಂದರೆ ಪ್ರಪಂಚದಲ್ಲಿಯೇ ಎರಡನೇ ದೊಡ್ಡದಾದ ಬೀಚ್ ನಮ್ಮ ಭಾರತ ದೇಶದ ತಮಿಳುನಾಡು ರಾಜ್ಯದಲ್ಲಿರುವುದು ಹೆಮ್ಮೆಯ ವಿಷಯವೇ.

ಆ ಬೀಚ್ ಯಾವುದು ಗೊತ್ತೆ? ಅದೇ ಮರೀನಾ ಬೀಚ್. ಈ ಬೀಚ್ ದೇಶದಲ್ಲಿಯೇ ಅತಿ ಉದ್ದದ ಹಾಗು ನೈಸರ್ಗಿಕವಾದ ಕಡಲ ತೀರವಾಗಿದೆ. ಈ ಬೀಚ್‍ಗೆ ಪ್ರಪಂಚದ ಎರಡನೇ ದೊಡ್ಡದಾದ ಬೀಚ್ ಎಂದೂ ಕೂಡ ಪ್ರಖ್ಯಾತಿ ಪಡೆದಿದೆ.

ಪ್ರಸ್ತುತ ಲೇಖನದ ಮೂಲಕ ಮರೀನಾ ಬೀಚ್‍ನ ಬಗ್ಗೆ ತಿಳಿಯೋಣ.

ಮರೀನಾ ಬೀಚ್

ಮರೀನಾ ಬೀಚ್

ಈ ವಿಶ್ವ ವಿಖ್ಯಾತೆ ಮರೀನಾ ಬೀಚ್ ಇರುವುದು ತಮಿಳು ನಾಡಿನ ಚೆನ್ನೈನಲ್ಲಿ. ದೇಶದ ಅತ್ಯಂತ ಜನನಿಬಿಡವಾದ ಬೀಚ್‍ಗಳಲ್ಲಿ ಇದೂ ಒಂದಾಗಿದೆ. ವಾರಾಂತ್ಯದಲ್ಲಿ ದಿನಕ್ಕೆ ಸುಮಾರು 50,000 ಪ್ರವಾಸಿಗರು ಹಾಗೂ 30,000 ಸಂದರ್ಶಕರು ಭೇಟಿ ನೀಡುವ ಅದ್ಭತವಾದ ಬೀಚ್ ಇದಾಗಿದೆ. ಬೇಸಿಗೆಯ ಸಮಯದಲ್ಲಿ ದಿನಕ್ಕೆ ಸುಮಾರು 15,000 ರಿಂದ 20,000 ಪ್ರವಾಸಿಗರು ಭೇಟಿ ನೀಡುತ್ತಾರೆ.

PC: pranab.mund

ಆಹ್ಲಾದಕರವಾದ ವಾತಾವರಣ

ಆಹ್ಲಾದಕರವಾದ ವಾತಾವರಣ

ಇಲ್ಲಿನ ಪ್ರಶಾಂತವಾದ ವಾತಾವರಣವು ಎಂಥವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಇನ್ನೊಂದು ವಿಶೇಷವೆನೆಂದರೆ ಈ ಬೀಚ್ ಆಹಾರದ ಅಂಗಡಿಗಳಿಗೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ವಾಕಿಂಗ್, ಸ್ಮಾರಕಗಳು ಕೂಡ ಇದೆ. ಮುಖ್ಯವಾಗಿ ಪ್ರೇಮಿಗಳು ಈ ಬೀಚ್‍ನಲ್ಲಿ ಅಡ್ಡಾಡಲು ಇಷ್ಟಪಡುತ್ತಾರೆ. ಪ್ರೇಮಿಗಳಿಗೆ ಇದೊಂದು ಸ್ವರ್ಗವಿದ್ದಂತೆ.

PC:tshrinivasan

ಎಚ್ಚರಿಕೆ

ಎಚ್ಚರಿಕೆ

ಮರೀನಾ ಬೀಚ್ ಸೌಂದರ್ಯ ಕಾಣುತ್ತಾ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಎನಿಸದರೆ ಅದು ತಪ್ಪು. ಏಕೆಂದರೆ ಕಾನೂನು ಪ್ರಕಾರ ಇಲ್ಲಿ ಈಜುವುದು ಹಾಗೂ ಸ್ನಾನ ಮಾಡುವಂತೆ ಇಲ್ಲ. ಏಕೆಂದರೆ ಅಂಡರ್ರೆಂಟ್ ತುಂಬಾ ಅಪಾಯಕಾರವಾಗಿದೆ.

PC:AwesomeSA

ಗ್ಯಾಲರಿ

ಗ್ಯಾಲರಿ

ಈ ಅದ್ಭುತವಾದ ಬೀಚ್‍ನಲ್ಲಿ ಮಹಾತ್ಮ ಗಾಂಧಿ ವಿಗ್ರಹದ ಹಿಂದೆ ಒಂದು ಸ್ಕೇಟಿಂಗ್ ರಿಂಗ್ ಇದೆ. ಕಾರ್ಮಿಕ ವಿಜಯೋತ್ಸವ ವಿಗ್ರಹ ಹಾಗೂ ಲೈಟ್ ಹೌಸ್‍ನ ಮಧ್ಯೆ 2.8 ಕಿ,ಮೀ ವಿಸ್ತರಣದಲ್ಲಿ ಒಟ್ಟು 14 ಗ್ಯಾಲರಿಗಳುನ್ನು ಇಲ್ಲಿನ ಪ್ರವಾಸಿಗರು ಕಂಡು ಆನಂದಿಸಬಹುದಾಗಿದೆ.


PC:J'ram DJ

ಲೈಟ್ ಹೌಸ್

ಲೈಟ್ ಹೌಸ್

ಈ ಲೈಟ್ ಹೌಸ್ ಮರೀನಾ ಬೀಚ್‍ನ ಸಮೀಪದಲ್ಲಿನ ತಾಣಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. 1977ರಲ್ಲಿ ಜನವರಿಯಂದು ಈ ಲೈಟ್ ಹೌಸ್ ಪ್ರಾರಂಭವಾಯಿತು. ವಿಶ್ವದ ಕೆಲವು ದೀಪ ಸ್ತಂಭಗಳಲ್ಲಿ ಇದೂ ಒಂದಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಭಾರತದ ನಗರ ವ್ಯಾಪ್ತಿಯಲ್ಲಿಯೇ ಏಕೈಕ ಲೈಟ್ ಹೌಸ್ ಇದಾಗಿದೆ.

PC:Srinivasan G

ಚೆನ್ನೈ ಫರ್ ಎವರ್

ಚೆನ್ನೈ ಫರ್ ಎವರ್

ತಮಿಳು ನಾಡು ರಾಜ್ಯ ಸರ್ಕಾರವು ಪ್ರಾರಂಭಿಸಿದ " ಚೆನ್ನೈ ಫರ್ ಎವರ್"ನ ಭಾಗವಾಗಿ 2005 ಸೆಪ್ಟೆಂಬರ್ 1.5 ಮಿಲಿಯನ್ ರೂಪಾಯಿ ವೆಚ್ಚದಲ್ಲಿ 35 ಅಡಿ ಎತ್ತರದ ಮರೀನಾ ಜಲಪಾತವನ್ನು ಏರ್ಪಾಟು ಮಾಡಿದರು.

PC:Nagarjun Kandukuru

ನಿರ್ಮಾಣ

ನಿರ್ಮಾಣ

ಸಂತಸದ ಸುದ್ಧಿ ಏನು ಎಂದರೆ? ಈ ಮರೀನಾ ಬೀಚ್‍ನ ಸಮೀಪದಲ್ಲಿ ಹಲವಾರು ಪ್ರವಾಸಿತಾಣಗಳಿಗೆ ಭೇಟಿ ನೀಡಬಹುದಾಗಿದೆ. ಅವು ಯಾವುದೆಂದರೆ ಮರೀನಾ ಬೀಚ್ ಎದುರಲ್ಲಿ ಇರುವ ವಿವೇಕಾನಂದ ಹೌಸ್, ಇದನ್ನು ಐಸ್ ಹೌಸ್ ಎಂದೂ ಸಹ ಕರೆಯುತ್ತಾರೆ. ವಿಶೇಷವೆಂದರೆ ಇಲ್ಲಿ ಸುಮಾರು 9 ವರ್ಷಗಳ ಕಾಲ ಸ್ವಾಮಿ ವಿವೇಕಾನಂದರು ನಿವಾಸಿಸಿದ್ದರಂತೆ.

ಇದರಲ್ಲಿ ಅವರ ಜೀವನ ಹಾಗೂ ಗುರಿ, ಹಿಂದೂ ಮತದ ಕೆಲವು ಅನಿಷ್ಟ ಪದ್ಧತಿಗಳು ಮೊದಲಾದ ಅಂಶಗಳ ಬಗ್ಗೆ ಕಲಾ ಪ್ರದರ್ಶನವಿದೆ.


PC:Nagarjun Kandukuru

ವಿಗ್ರಹಗಳು

ವಿಗ್ರಹಗಳು

ಈ ಮರೀನಾ ಬೀಚ್‍ನ ದಾರಿಯಲ್ಲಿ ಕೆಲವು ಕಲ್ಲಿನ ವಿಗ್ರಹಗಳಿಂದ ಅಲಂಕಾರವಾಗಿರುವುದನ್ನು ಕಾಣಬಹುದು. ಹೆಚ್ಚಾಗಿ ಈ ವಿಗ್ರಹಗಳಲ್ಲಿ ಮಹಾತ್ಮ ಗಾಂಧಿ, ತಿರುವಲ್ವಾರ್ ಎಂಬುವ ಕೆಲವು ಜಾತಿಯ ಪ್ರಮುಖರ ವಿಗ್ರಹಗಳನ್ನು ಕಾಣಬಹುದಾಗಿದೆ. ಇತರ ವಿಗ್ರಹಗಳಲ್ಲಿ ಕಾರ್ಮಿಕ ವಿಜಯೋತ್ಸವ ಸಂಘಟನೆಯ ಸ್ಮಾರಕಗಳೂ ಕೂಡ ಕಾಣಬಹುದಾಗಿದೆ.

PC:Nagarjun Kandukuru

ಸಮಾಧಿಗಳು

ಸಮಾಧಿಗಳು

ಈ ಮರೀನಾ ಬೀಚ್‍ನ ಬಳಿ ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿಗಳಾದ ಎಂ.ಜಿ ಆರ್ ಇನ್ನೂ ಕೆಲವು ಮುಖ್ಯಮಂತ್ರಿಗಳ ಸಮಾಧಿಯನ್ನು ಕಾಣಬಹುದಾಗಿದೆ. ಹೀಗಾಗಿ ತಮಿಳು ನಟ ಶಿವಾಜಿ ಗಣೇಶನ್‍ರವರ ವಿಗ್ರಹವನ್ನು ಕೂಡ ಇಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ದಿವಂಗತ ಕುಮಾರಿ ಜಯಲಲಿತ ಸಮಾಧಿ ಕೂಡ ಇಲ್ಲಿ ಕಾಣಬಹುದಾಗಿದೆ.


PC:Irfanahmed605

ಚೆನ್ನೈ ತಲುಪುವ ಬಗೆ?

ಚೆನ್ನೈ ತಲುಪುವ ಬಗೆ?

ಬೀಚ್ ಸಮೀಪದ ರೈಲ್ವೆ ಸ್ಟೇಷನ್ ತಿರುಚುನಾಪಲ್ಲಿ, ಲೈಟ್ ಹೌಸ್ ರೈಲ್ವೆ ಸ್ಟೇಷನ್ ಸಮೀಪವಾದುದು. ಹಾಗೂ ಹಲವಾರು ಸಾರಿಗೆ ವ್ಯವಸ್ಥೆ ಕೂಡ ಇಲ್ಲಿ ಇದೆ.

PC:Aravindan Ganesan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X