ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಾರತದ ಅತ್ಯಂತ ಎತ್ತರದ ಜಲಪಾತದ ದುರಂತ ಕಥೆಯ ಬಗ್ಗೆ ನಿಮಗೆಷ್ಟು ಗೊತ್ತು?

Written by:
Published: Thursday, June 29, 2017, 15:14 [IST]
Share this on your social network:
   Facebook Twitter Google+ Pin it  Comments

ಜಲಪಾತವೆಂದರೆ ಅದೇನೂ ಖುಷಿ. ಭೋರ್ಗರೆಯುವ ಹಾಲಿನಂತಹ ಜಲಪಾತ, ಹಕ್ಕಿಗಳ ಕಲರವ, ದಟ್ಟವಾದ ಸಹ್ಯಾದ್ರಿ ಕಾಡು, ಸುವಾಸನೆಯುಳ್ಳ ಬಗೆ ಬಗೆಯ ಹೂವು ಆಹಾ ಎಂತಹ ಸೌಂದರ್ಯ. ಈ ಪ್ರಾಕೃತಿಕ ಸೌಂದರ್ಯವನ್ನು ಕಾಣಲು ದೇಶದ ಮೂಲೆ ಮುಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಪ್ರಕೃತಿ ಪ್ರೇಮಿಗಳು ಬರುತ್ತಾರೆ.

ಸಾಮಾನ್ಯವಾಗಿ ಪ್ರತಿಯೊಂದು ರಾಜ್ಯಗಳಲ್ಲಿಯೂ ಕೂಡ ಸುಂದರವಾದ ಜಲಪಾತಗಳು ಇರುತ್ತವೆ. ಆದರೆ ಭಾರತ ದೇಶದ ಅತ್ಯಂತ ಎತ್ತರದ ಜಲಪಾತದ ಬಗ್ಗೆ ನಿಮಗೆ ತಿಳಿದಿದೆಯೇ? ಈ ಜಲಪಾತದ ದುರಂತ ಕಥೆಯನ್ನು ಕೇಳಿದರೆ ಯಾರಿಗೇ ಆಗಲಿ ದುಃಖವಾಗದೇ ಇರದು.

ಈ ಸುಂದರವಾದ ಜಲಪಾತವಿರುವುದು ಮೇಘಾಲಯ ರಾಜ್ಯದಲ್ಲಿನ ಚೀರಾಪುಂಜಿಯಲ್ಲಿ ಪ್ರಸ್ತುತ ಲೇಖನದಲ್ಲಿ ದುರಂತ ಕಥೆ ಹೊಂದಿರುವ ಜಲಪಾತದ ಬಗ್ಗೆ ತಿಳಿಯೋಣ.

ಜಲಪಾತ

1115 ಅಡಿಗಳ ಎತ್ತರದಲ್ಲಿರುವ ಮೇಘಾಲಯದ ಚಿರಾಪುಂಜಿಯ ಸಮೀಪ ನೊಕಲಿಕಾಕಿ ಫಾಲ್ಸ್ ಜಲಪಾತವು ಭಾರತದ ಅತಿ ದೊಡ್ಡ ಜಲಪಾತವಾಗಿದೆ. ಈ ಜಲಪಾತಕ್ಕೆ ಕಾ ಲಿಕೈ ಎಂಬ ದುರಂತ ಮಹಿಳೆಯ ಹೆಸರನ್ನು ಇಡಲಾಗಿದೆ.


PC:SangitaChatterjee

 

ಜಂಪ್ ಆಫ್ ಕಾ ಲಿಕೈ

ಖಾಸಿ ಭಾಷೆಯ ಜಲಪಾತದ ಹೆಸರು " ಜಂಪ್ ಆಫ್ ಕಾ ಲಿಕೈ " ಎಂಬ ಅರ್ಥವನ್ನು ಸ್ಥಳೀಯ ಮಹಿಳಾ ಲಿಕಾಯ್ ದಂತಕಥೆಯನ್ನು ಆಧರಿಸಿದೆ.


PC:Dhwani Shree

 

ದುರಂತ ಕಥೆ

ದಂತ ಕಥೆಯ ಪ್ರಕಾರ ಲಿಕಾಯ್ ಎಂಬ ಮಹಿಳೆಯೊಬ್ಬಳು ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಆದರೆ ಅವಳ ಪತಿಯ ಮರಣಾನಂತರ ಮರು ಮದುವೆಯಾಗಬೇಕಾಯಿತು.

 

PC:भवानी गौतम

 

ಉದ್ಯೋಗ

ಅವಳಿಗೆ ಒಂದು ಪುಟ್ಟದಾದ ಹೆಣ್ಣು ಮಗುವಿತ್ತು. ಜೀವನ ನಡೆಸಲು ಉದ್ಯೋಗವನ್ನು ಹುಡುಕಿದಳು. ಹೆಚ್ಚು ಕಾಲ ಅವಳ ಪುಟ್ಟ ಮಗುವಿನ ಜೊತೆಗೆ ಕಾಲ ಕಳೆಯಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ.

 

PC:Cryptickk

 

ವಿರಾಮ

ಕೆಲಸವಿಲ್ಲದಿದ್ದಗಾ ತನ್ನ ಪುಟ್ಟದಾದ ಮಗುವ ಕಾಳಜಿಯನ್ನು ವಹಿಸುತ್ತಿದ್ದಳು. ತನ್ನ ಒಂಟಿತನದಿಂದ ಬೇಸತ್ತ ಲಿಕಾಯ್ ಮರು ಮದುವೆಯಾದಳು.

 

PC:Sohel78bd

 

ಪುನರ್ ವಿವಾಹ

ಲಿಕಾಯ್ ಪುನರ್ ವಿವಾಹವಾದಳು. ಆದರೆ ಅವಳು ತನ್ನ ಗಂಡನಿಗಿಂತ ಹೆಚ್ಚಾಗಿ ತನ್ನ ಮಗುವ ಬಗ್ಗೆ ಕಾಳಜಿ ವಹಿಸುತ್ತಿದ್ದದ್ದು ಎರಡನೇ ಗಂಡನಿಗೆ ಇಷ್ಟವಾಗುತ್ತಿರಲಿಲ್ಲ.

 

PC:Vikrantdhiman189381

 

ಕೊಲೆ

ಅಸೂಯೆ ಪತಿಯು ಆ ಪುಟ್ಟ ಮಗುವನ್ನು ಕೊಂದನು. ಆ ಮಗುವಿನ ತಲೆ ಮತ್ತು ಮೂಳೆ ಎಸೆದು ನಂತರ ಉಳಿದ ಮಾಂಸದಲ್ಲಿ ಅಡುಗೆ ತಯಾರಿಸಿದನು.

 

PC:Pic Boy 101

 

ಮಾಂಸ

ಆಕೆಯು ತನ್ನ ಮಗಳಿಗೆ ಕಾಣದಂತೆ ಮನೆಗೆ ಹೋಗಬೇಕು ಎಂದು ಕೊಂಡಿದ್ದಳು. ಕೆಲಸ ಮಾಡಿ ಆಯಾಸಗೊಂಡಿದ್ದರಿಂದ ಅವಳು ಅಡುಗೆ ಮನೆಗೆ ಹೋಗಿ ಮಾಂಸವನ್ನು ತಿನ್ನುತ್ತಾ ಕುಳಿತಳು.

 


PC:Kunal Dalui

 

ಬಿಲ್ ಬೀಜ

ಕೆಲಸದ ವೇಳೆಯಲ್ಲಿ ಅವಳು ಬೀಲ್ ಬೀಜಗಳು ಮತ್ತು ಬೀಲ್ ಎಲೆಗಳನ್ನು ಕತ್ತರಿಸುವ ಸ್ಥಳದ ಬಳಿ ಕತ್ತರಿಸಿದ್ದ ಬೆರಳುಗಳನ್ನು ಕಂಡಿದ್ದಳು.

 

PC:Sujan Bandyopadhyay

 

ಅನುಮಾನ

ಆ ಬೆರಳುಗಳು ಮಾಂಸ ತಿನ್ನುವಾಗ ಅವಳಿಗೆ ನೆನೆಪಿಗೆ ಬಂದಿತ್ತು. ತನ್ನ ಮಗುವಿನ ಅನುಪಸ್ಥಿತಿಯಲ್ಲಿ ಏನಾಯಿತು ಎಂದು ಅನುಮಾನ ಅವಳಿಗೆ ಮೂಡಿತು. ನಂತರ ಅವಳಿಗೆ ಎಲ್ಲಾ ಬೆಳವಣಿಗೆಗಳನ್ನು ಅರಿತಳು.

 

PC:Sujan Bandyopadhyay

 

ದುಃಖ

ತನ್ನ ಮಗುವ ಸ್ಥತಿಯ ಕಂಡು ಕೋಪ ಮಾಗೂ ದುಃಖದಿಂದ ಹುಚ್ಚಿಯಾದಳು. ತನಗೆ ದಿಕ್ಕುಗಳೇ ತೋಚದಂತೆ ಓಡಿದಳು. ತನ್ನ ಮಗುವನ್ನು ನೆನೆದು ಅವಳು ಕೂಡ ಈ ಜಲಪಾತಕ್ಕೆ ಜಿಗಿದಳು. ಅದ್ದರಿಂದಲೇ ಈ ಜಲಪಾತವನ್ನು ದುರಂತ ನೊಕಲಿಕಾಕಿ ಫಾಲ್ಸ್ ಎಂದು ಕರೆಯಲಾಗುತ್ತದೆ.

 

PC:PurohitHimanshu

 

ಪ್ರಾಕೃತಿಕ ಸೊಬಗು

ಇಂತಹ ದುರಂತ ಕಥೆಯಿಂದ ಕೊನೆಗೊಂಡ ಈ ಜಲಪಾತದ ದಂತ ಕಥೆಯೇ ಅಲ್ಲದೇ. ಸುಂದರವಾದ ಹುಲ್ಲು, ಪೂದೆಗಳು ಮತ್ತು ಎತ್ತರವಾದ ಮರಗಳಿಂದ ಪ್ರಕೃತಿಯು ಕಂಗೊಳಿಸುತ್ತಿದೆ. ಇಲ್ಲಿನ ಪ್ರವಾಸಿಗರಿಗೆ ಸ್ವರ್ಗೀಯ ಭಾವನೆಯನ್ನು ಉಂಟು ಮಾಡುತ್ತದೆ.

 

PC:Udayaditya Kashyap

 

ಸಾಂಬಾರು ಪಾರ್ದಥಗಳು

ಈ ಚಿರಾಪುಂಜಿ ಪ್ರದೇಶದಲ್ಲಿ ಸ್ಥಳೀಯರು ದಾಲ್ಚಿನ್ನಿ ಸ್ಟಿಕ್, ಮೆಣಸು, ಜೇನುತುಪ್ಪ ಮತ್ತು ಬೇ ಎಲೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಂಬಾರು ಪಾರ್ದಥಗಳನ್ನು ಮಾರಾಟ ಮಾಡಲಾಗುತ್ತದೆ.

 

PC:Vijayakumarblathur

 

ಉತ್ತಮ ಕಾಲ

ಚಿರಾಪುಂಜಿಯಲ್ಲಿ ವರ್ಷಪೂರ್ತಿ ಅದ್ಭುತ ವಾತಾವರಣವಿರುವುದರಿಂದ ಯಾವಾಗ ಬೇಕಾದರೂ ಭೇಟಿ ನೀಡಬಹುದಾಗಿದೆ. ಆದರೆ ಮಾನ್ಸೂನ್‍ನಲ್ಲಿ ಈ ಜಲಪಾತ ಅತ್ಯಂತ ಸುಂದರವಾಗಿ ಕಾಣುವುದರಿಂದ ಮಳೆಗಾಲ ಅತ್ಯಂತ ಉತ್ತಮವಾದ ಕಾಲವಾಗಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಅತ್ಯಂತ ಉತ್ತಮವಾದ ಕಾಲವಾಗಿದೆ.

 

PC:David Borgoyary

 

ಟ್ರೆಕ್ಕಿಂಗ್ ಸಾಹಸ

ಸಾಹಸ ಪ್ರಿಯರಿಗೆ ಈ ಜಲಪಾತವು ಅತ್ಯಂತ ಪರಿಪೂರ್ಣವಾದ ತಾಣವಾಗಿದೆ. ಟ್ರೆಕ್ಕಿಂಗ್, ಕ್ಯಾಪಿಂಗ್, ಹಕ್ಕಿ ವೀಕ್ಷಣೆ, ಭೂದೃಶ್ಯ, ಛಾಯಾಗ್ರಹಣ, ಈಜು ಮತ್ತು ಆಂಗ್ಲಿಂಗ್ ಮುಂತಾದ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು. ಇಲ್ಲಿ ರೇಸಾರ್ಟ್‍ಗಳು, ಹೋಟೆಲ್‍ಗಳು, ಕುಟೀರಗಳು ಹೊಂದಿರುವ ಅತಿಥಿ ಗೃಹಗಳಿವೆ.


PC:Sujan Bandyopadhyay

 

ವಿಮಾನ ಮಾರ್ಗದ ಮೂಲಕ

ಈ ಸುಂದರವಾದ ದೃಶ್ಯವನ್ನು ಕಾಣಲು ಸಮೀಪದ ವಿಮಾನ ನಿಲ್ದಾಣವೆಂದರೆ ಗೋವಾಹಟಿಯ ಬೋರ್‍ಜಾರ್ ವಿಮಾನ ನಿಲ್ದಾಣ. ಇಲ್ಲಿಂದ ನೊಕಲಿಕಾಕಿ ಫಾಲ್ಸ್ ಗೆ ತೆರಳಲು ಸುಮಾರು 166 ಕಿ,ಮೀ ದೂರದಲ್ಲಿದೆ.

ರೈಲ್ವೆ ಮಾರ್ಗದ ಮೂಲಕ

ಮೇಘಾಲಯದ ಗೋವಾಹಟಿ ರೈಲ್ವೆ ನಿಲ್ದಾಣ ಅತ್ಯಂತ ಸಮೀಪದ ನಿಲ್ದಾಣ. ಇಲ್ಲಿಂದ ಚಿರಾಪುಂಜಿಗೆ ಸುಮಾರು 99 ಕಿ,ಮೀ ದೂರದಲ್ಲಿದೆ ಈ ನೊಕಲಿಕಾಕಿ ಫಾಲ್ಸ್ ಇದೆ.

 

 

ರಸ್ತೆಯ ಮಾರ್ಗದ ಮೂಲಕ

ಮೇಘಾಲಯದ ರಾಜಧಾನಿ ಶಿಲ್ಲಾಂಗ್‍ನಿಂದ ಸುಮಾರು 54 ಕಿ,ಮೀ ದೂರದಲ್ಲಿ ನೊಕಲಿಕಾಕಿ ಫಾಲ್ಸ್‍ಗೆ ತಲುಪಬಹುದಾಗಿದೆ.


PC:Sai Avinash

 

English summary

India's Highest and Most Tragic Waterfall- Nohkalikai Falls, Meghalaya

At a height of 1115 feet, the Nohkalikai Falls near Cherrapunji is India's highest plunge waterfall. Fed naturally by rainwater, this waterfall is named after the tragic tale of a woman called Ka Likai. After the death of her husband, Ka Likai remarried. But her new husband was extremely jealous of her love for her daughter. He murderd the daughter, and to hide the evidence, cooked up her remains into a meal. Kali Kai searched high and low for her daughter but cannot find her. Her husband offers her the meal, as she is exhausted.
Please Wait while comments are loading...