Search
  • Follow NativePlanet
Share
» »ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ಈ ಹಿಂದೂ ದೇವಾಲಯದಲ್ಲಿ ಮುಸ್ಲಿಂರು ಅಭಿಷೇಕವನ್ನು ಮಾಡುತ್ತಾರೆ

ದೇವಾಲಯಗಳು ಮುಸ್ಮಿಂರಿಗೆ, ಹಿಂದೂಗಳಿಗೆ, ಕೈಸ್ತರಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್‍ರಿಗೆ ಎಂದು ಹಲವಾರು ವಿಭಿನ್ನವಾದ ದೇವಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದ ದೇವರು ಕೂಡ ಒಬ್ಬನೇ " ದೇವ ಒಬ್ಬನೇ ನಾಮ ಹಲವು" ಎಂಬ ರೀತಿಯನ್ನು ಎಲ್ಲರೂ ಕೂಡ ಮೈಗೂ

ದೇವಾಲಯಗಳು ಮುಸ್ಮಿಂರಿಗೆ, ಹಿಂದೂಗಳಿಗೆ, ಕೈಸ್ತರಿಗೆ, ಬೌದ್ಧರಿಗೆ, ಜೈನರಿಗೆ, ಸಿಖ್‍ರಿಗೆ ಎಂದು ಹಲವಾರು ವಿಭಿನ್ನವಾದ ದೇವಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದ ದೇವರು ಕೂಡ ಒಬ್ಬನೇ " ದೇವ ಒಬ್ಬನೇ ನಾಮ ಹಲವು" ಎಂಬ ರೀತಿಯನ್ನು ಎಲ್ಲರೂ ಕೂಡ ಮೈಗೂಡಿಸಿಕೊಳ್ಳಬೇಕು. ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ತೆಲಂಗಾಣದ ಖಮ್ಮಂ ನಗರದಿಂದ ಸುಮಾರು 20 ಕಿ,ಮೀ ದೂರದಲ್ಲಿನ ಪರ್ವತದ ಮೇಲಿರುವ ಉಗ್ರ ನರಸಿಂಹ ದೇವಾಲಯ.

ಅಷ್ಣಗುರ್ತಿ ಗ್ರಾಮಕ್ಕೆ ಸೇರಿದ ಭೂಪತಿ ವೆಂಕಮ್ಮ ಅತ್ಯಂತ ದೊಡ್ಡ ಭಕ್ತೆಯಾಗಿದ್ದಳು.ಒಮ್ಮೆ ವೆಂಕಮ್ಮಳ ಕನಸಿನಲ್ಲಿ ಸ್ವಾಮಿಯು ತಾನು ಸ್ತಂಭಾದ್ರಿ ಗುಡ್ಡದ ಮೇಲೆ ನೆಲೆಸಿದ್ದೇನೆ ಎಂದು ಹೇಳಿದನು.ಅಲ್ಲಿ ತನಗೆ ನಿತ್ಯ ನೈವೆಧ್ಯ ಹಾಗೂ ಪೂಜೆಗಳನ್ನು ಮಾಡಬೇಕು ಎಂದು ಆದೇಶವನ್ನು ಸ್ವಾಮಿಯು ನೀಡಿದ.

ಅವಳ ಕನಸನ್ನು ಪ್ರಜೆಗಳಿಗೆ ತಿಳಿಸಿ ತಕ್ಷಣವೇ ಸ್ತಂಭಗಿರಿಯ ಮೇಲೆ ಹೋರಟರು ಸ್ವಾಮಿ ಹೇಳಿದ ಪ್ರದೇಶವು ಕಾಣಿಸಿತು. ಅಲ್ಲಿ ನರಸಿಂಹನ ಗುಡಿ ಕೂಡ ಇತ್ತು. ಆನಂದಾಶ್ಚರ್ಯಗೊಂಡ ಭಕ್ತರು ಸ್ವಾಮಿಯನ್ನು ಹಲವು ಪೂಜಾ ಕೈಂಕರ್ಯವನ್ನು ಮಾಡತೊಡಗಿದರು. ಆದರೆ ಈ ದೇವಾಲಯದಲ್ಲಿ ಮುಸ್ಲಿಂರು ಹಿಂದೂ ದೇವರಾದ ಉಗ್ರ ನರಸಿಂಹ ಸ್ವಾಮಿಗೆ ಅಭಿಷೇಕವನ್ನು ಮಾಡುತ್ತಾರೆ.

ಆ ಪದ್ದತಿ ಹೇಗೆ ಬಂತು? ಕಾರಣವೇನು? ಎಂಬುದುನ್ನು ಸ್ಲೈಡ್ ಮೂಲಕ ತಿಳಿಯಿರಿ.

ಕಾಕತೀಯ ಸಾಮ್ರಾಜ್ಯ

ಕಾಕತೀಯ ಸಾಮ್ರಾಜ್ಯ

16 ನೇ ಶತಮಾನದಲ್ಲಿ ಕಾಕತೀಯ ಸಾಮ್ರಾಜ್ಯದ ಅರಸ ಪ್ರತಾಪರುದ್ರ ನಗರದಲ್ಲಿನ ಖಿಲ್ಲಾ ನಿರ್ಮಾಣ ಸಮಯದಲ್ಲಿ ಉಗ್ರ ನರಸಿಂಗ ಸ್ವಾಮಿಯ ದರ್ಶನ ಪಡೆದು. ಮುಖಮಂಟಪ ನಿರ್ಮಾಣ, ಕಲ್ಲಿನ ಧ್ವಜಸ್ತಂಭ ಪ್ರತಿಷ್ಟಾಪಿಸಿದನಂತೆ.

PC:YOUTUBE

 ನಿರ್ಮಾಣ ಮಾಡಿದವರು

ನಿರ್ಮಾಣ ಮಾಡಿದವರು

ಈ ದೇವಾಲಯವನ್ನು 32 ಅಕ್ಷರದಲ್ಲಿರುವ ನರಸಿಂಗ ಸ್ವಾಮಿಯ ಬೀಜಾಕ್ಷರದ ಆಧಾರವಾಗಿ ಮಾಡಿಕೊಂಡು 32 ಸ್ತಂಭದಿಂದ ಮುಖಮಂಟಪ, 32 ಅಡಿಯ ಕಲ್ಲಿನ ಧ್ವಜಸ್ತಂಭ ನಿರ್ಮಿಸಿರುವುದು ವಿಶೇಷ. ಈ ದೇವಾಲಯವನ್ನು ಅಂದಿನ ಸಾಮಂತರಾಜರಾದ ವೇಮಾರೆಡ್ಡಿ, ಲಕ್ಷ್ಮಾರೆಡ್ಡಿ ನಿರ್ಮಾಣ ಮಾಡಿದರು ಎಂಬ ಆಧಾರಗಳಿವೆ.

PC:YOUTUBE

ಭಕ್ತ ಪ್ರಹ್ಲದ

ಭಕ್ತ ಪ್ರಹ್ಲದ

ಭಕ್ತ ಪ್ರಹ್ಲದನನ್ನು ರಕ್ಷಿಸಿಸಲು ಉಗ್ರ ನರಸಿಂಹ ಮೂರ್ತಿ ಸ್ತಂಭದಿಂದ ಉದ್ಭವಗೊಂಡ ಸ್ಥಳ ಇದೆ ಎಂದು ಹಾಗೂ ಇಲ್ಲಿನ ನರಸಿಂಹ ಸ್ವಾಮಿಗೆ ಹಲವು ಯುಗಗಳ ಸ್ಥಳ ಪೂರಾಣವಿದೆ ಎಂದು ಗುರುತಿಸಲಾಗಿದೆ.


PC:YOUTUBE

ನರಸಿಂಹವತಾರ

ನರಸಿಂಹವತಾರ

ರಾಮಾವತಾರಕ್ಕಿಂತ ಮೊದಲು ನರಸಿಂಹವತಾರ ಕೃತಯುಗಕ್ಕೆ ಸೇರಿದ್ದಾಗಿದೆ. ಹಿರಣ್ಯ ಕಷ್ಯಪನನ್ನು ಹೊಟ್ಟೆ ಬಗೆದ ನಂತರ ಸ್ವಾಮಿ ಈ ಜಾಗದಲ್ಲಿಯೇ ನೆಲೆಸಿದ್ದನು ಎಂದು ಪುರಾಣಗಳು ಹೇಳುತ್ತವೆ. ನಂತರದ ಯುಗದಲ್ಲಿ ಭಾರದ್ವಜ ಮಹಾಋಷಿಯು ಈ ಸ್ವಾಮಿಯ ಗುಹೆಯನ್ನು ಆಶ್ರಯವಾಗಿ ಮಾಡಿಕೊಂಡಿದ್ದರು ಎಂದು ಸ್ಥಳ ಪೂರಾಣವಿದೆ.


PC:YOUTUBE

ಆಶ್ರಯ

ಆಶ್ರಯ

ಭಾರದ್ವಜ ಋಷಿಗಳು ತನ್ನ ಪರಿವಾರದವರೊಂದಿಗೆ ಇಲ್ಲಿ ನೆಲೆಸಿದ್ದೇ ಅಲ್ಲದೇ ಈ ದೇವಾಲಯದ ಸಮೀಪದಲ್ಲಿರುವ ನದಿಯಲ್ಲಿ ಸ್ನಾನ ಕೂಡ ಮಾಡುತ್ತಿದ್ದರಂತೆ. ಈ ದೇವಾಲಯದ ಉಗ್ರ ನರಸಿಂಹ ಸ್ವಾಮಿಯ ಅರ್ಚನೆ ಮಾಡಲು ನರಸಿಂಹ ವಂಶಸ್ಥರನ್ನು ಕರೆತಂದು ವಂಶ ಪಾರಂಪರ್ಯವಾಗಿ ಅರ್ಚನೆ ಮುಂದುವರೆಸಲು ಅವಕಾಶ ಮಾಡಿಕೊಟ್ಟರು.


PC:YOUTUBE

ಸ್ತಂಭಾದ್ರಿ

ಸ್ತಂಭಾದ್ರಿ

ಪ್ರಹ್ಲಾದನನ್ನು ರಕ್ಷಿಸಲು ಇಲ್ಲಿನ ಸ್ತಂಭಗಳಲ್ಲಿ ಹುಟ್ಟಿ ಬಂದ ಕಾರಣಕ್ಕಾಗಿ ಈ ಗ್ರಾಮವನ್ನು ಸ್ತಂಭಾಧ್ರಿ ಎಂದೂ ಸಹ ಕರೆಯುತ್ತಾರೆ. ಪಾನಕ ಪ್ರಿಯಕರನಾದ ನರಸಿಂಹನಿಗೆ ಪಾನಕದಿಂದ ಅಭಿಷೇಕ ಮಾಡುವುದು ಮತ್ತೊಂದು ವಿಶೇಷ.

PC:YOUTUBE

ಪರ್ವತ

ಪರ್ವತ

ಖಮ್ಮಂ ನಗರದಲ್ಲಿನ ಪರ್ವತದ ಮೇಲೆ ನೆಲೆಸಿರುವ ನರಸಿಂಹ ಮೂರ್ತಿಯ ದರ್ಶನ ಭಯನಾಶಕವಾಗಿರುತ್ತದೆ. ಹಾಗಾಗಿ ಹಲವಾರು ಭಕ್ತರು ದಿನ ನಿತ್ಯ ಸ್ವಾಮಿಯ ದರ್ಶನವನ್ನು ಪಡೆಯಲು ಬರುತ್ತಾರೆ.

PC:YOUTUBE

ಹರಿ ನಾಮ

ಹರಿ ನಾಮ

ಹಲವಾರು ಹಿಂಸೆಗಳನ್ನು ಅನುಭವಿಸುತ್ತಿದ್ದ ಪ್ರಹ್ಲಾದ ಹರಿ ನಾಮವನ್ನು ಜಪ ಮಾಡಿದ. ಹರಿಯ ಸ್ವರೂಪಿ ನರಸಿಂಹ ತನ್ನ ಭಕ್ತ ಪ್ರಹ್ಲಾದನ್ನು ರಕ್ಷಿಸಲು ಸ್ತಂಭದಿಂದ ಬಂದು ಹಿರಣ್ಯ ಕಶ್ಯಪನ ಹೊಟ್ಟೆಯನ್ನು ಬಗೆದು ಸಂಹರಿಸಿದ.

PC:YOUTUBE

ರಾಕ್ಷಸ ಸಂಹಾರ

ರಾಕ್ಷಸ ಸಂಹಾರ

ನರಸಿಂಹ ರಾಕ್ಷಸ ಸಂಹಾರದ ನಂತರ ಭಕ್ತರನ್ನು ಕಾಪಡಲು ನೆಲೆಯಾಗಿರುವ ಸ್ವಾಮಿಯ ಕ್ಷೇತ್ರ ತೆಲಂಗಾಣದ ಖಮ್ಮಂ ನಗರದ ಸ್ತಂಭಾದ್ರಿ ಪರ್ವತ.


PC:YOUTUBE

ಭಕ್ತರು

ಭಕ್ತರು

ವಿವಾಹ, ಸಂತಾನ, ದೀರ್ಘಕಾಲಿಕ ಆನಾರೋಗ್ಯ ಸಮಸ್ಯೆಗಳು ಇದ್ದರೆ " ಲಕ್ಷ್ಮಿನೃಸಿಂಹ ಮಮದೇಹಿ ಕರಾವಲಂಬಂ " ಎಂದು ಬೇಡಿಕೊಂಡವರಿಗೆ ನರಸಿಂಹ ಕಾಪಾಡುತ್ತಾನೆ ಹಾಗೂ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.


PC:YOUTUBE

ಮುಸ್ಲಿಂರು

ಮುಸ್ಲಿಂರು

ಉಗ್ರ ನರಸಿಂಹನಿಗೆ ಯುಗಾದಿಯೊಂದು ಅತ್ಯಂತ ಸಡಗರದಿಂದ ಸಂಭ್ರಮಾಚರಣೆ ಮಾಡಲಾಗುತ್ತದೆ. ಇಲ್ಲಿ ಸ್ವಾಮಿಗೆ ಮೊದಲ ಅಭೀಷೇಕವು ಮುಸ್ಲಿಂರು ಮಾಡುವ ಆಚಾರವನ್ನು ರೂಢಿಸಿಕೊಂಡು ಬಂದಿದ್ದಾರೆ.


PC:YOUTUBE

ಚರಿತ್ರೆ

ಚರಿತ್ರೆ

ನಿಜಾಮ ನವಾಬರ ಕಾಲದಿಂದಲೂ ನರಸಿಂಹನಿಗೆ ಮುಸ್ಲಿಂರೇ ಅಭೀಷೇಕ ಮಾಡುವ ಪಾರಿ ಪಾಠವಿದೆ. ಇಲ್ಲಿ ಸ್ವಾಮಿಯು ಇಂದಿಗೂ ಪರ್ವತದ ಮೇಲೆ ನೆಲೆಸಿದ್ದಾನೆ ಎಂದು ಭಕ್ತರ ನಂಬಿದ್ದಾರೆ.

PC:YOUTUBE

ಲಕ್ಷ್ಮಿ

ಲಕ್ಷ್ಮಿ

ಈ ದೇವಾಲಯದಲ್ಲಿ ಉಗ್ರ ನರಸಿಂಹನೇ ಅಲ್ಲದೇ ನರಸಿಂಹನ ಪತ್ನಿ ಲಕ್ಷ್ಮಿ ದೇವತೆಯ ವಿಗ್ರಹವನ್ನು ಕೂಡ ಇಲ್ಲಿ ಕಾಣಬಹುದಾಗಿದೆ.


PC:YOUTUBE

ನಿತ್ಯ ಪಾನಕ

ನಿತ್ಯ ಪಾನಕ

ಇಲ್ಲಿನ ನರಸಿಂಹ ಸ್ವಾಮಿ ಅತ್ಯಂತ ರೌದ್ರನಾಗಿರುವುದರಿಂದ ಆತನನ್ನು ಶಾಂತಗೊಳಿಸಲು ನಿತ್ಯ ಪಾನಕದ ಅಭಿಷೇಕವನನ್ನು ಮಾಡುತ್ತಿರುತ್ತಾರೆ.


PC:YOUTUBE

ಕೊಬ್ಬರಿ ಕಾಯಿಯ ಮುಡುಪು

ಕೊಬ್ಬರಿ ಕಾಯಿಯ ಮುಡುಪು

ಭಕ್ತರು ತಮ್ಮ ಕೂರಿಕೆಗಳನ್ನು ಈಡೇರಿಸಿಕೊಳ್ಳಲು ಕೊಬ್ಬರಿ ಕಾಯಿಯ ಮುಡುಪನ್ನು ಈ ದೇವಾಲಯದಲ್ಲಿ ಕಟ್ಟುವುದು ಸಂಪ್ರದಾಯ. ಉನ್ನತ ವಿದ್ಯೆ, ವಿವಾಹ, ಸಂತಾನ, ಆರೋಗ್ಯ, ವಿದೇಶಿ ಪ್ರಯಾಣ ಇನ್ನೂ ಹಲವಾರು ಕೋರಿಕೆಗಳಿಗೆ ಪ್ರತ್ಯೇಕವಾದ ಪೂಜೆಯನ್ನು ಸ್ವಾಮಿಗೆ ಮಾಡಲು ಭಕ್ತರು ಭೇಟಿ ನೀಡುತ್ತಾರೆ.

PC:YOUTUBE

ಅನ್ನದಾನ ಕಾರ್ಯಕ್ರಮ

ಅನ್ನದಾನ ಕಾರ್ಯಕ್ರಮ

ಪ್ರತಿ ಭಾನುವಾರ ಉಗ್ರನರಸಿಂಹನ ದೇವಾಲಯದಲ್ಲಿ ಶಾಂತಿ ಕಲ್ಯಾಣ, ಅನ್ನದಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

PC:YOUTUBE

ಉತ್ಸವ

ಉತ್ಸವ

ವೈಶಾಖ ಮಾಸದಲ್ಲಿ ಒಂದು ವಾರ ಬ್ರಹ್ಮ ಉತ್ಸವ, ಶ್ರಾವಣ ಮಾಸದಲ್ಲಿ ಪವಿತ್ರ ಉತ್ಸವ, ಅಶ್ವಯುಜ ಮಾಸದಲ್ಲಿ ನವರಾತ್ರಿ ಉತ್ಸವ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಧ್ವಜಸ್ತಂಭದ ಮೇಲೆ ಆಕಾಶ ದೀಪೋತ್ಸವ, ಧನುರ್ ಮಾಸದಲ್ಲಿ ಒಂದು ತಿಂಗಳ ಕಾಲ ಸ್ವಾಮಿಗೆ ಮುಂಜಾನೆಯೇ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

PC:YOUTUBE

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ತೆಲಂಗಾಣದ ಖಮ್ಮಂ ನಗರದಲ್ಲಿನ ಈ ದೇವಾಲಯಕ್ಕೆ ಭೇಟಿ ನೀಡಲು ಹೈದ್ರಾಬಾದ್ ನಿಂದ ಸುಮಾರು 200 ಕಿ,ಮೀ ಹಾಗೂ, ವಿಜಯವಾಡದಿಂದ ಸುಮಾರು 120 ಕಿ,ಮೀ ಪ್ರಯಾಣವನ್ನು ಮಾಡಬೇಕಾಗುತ್ತದೆ. ಬೆಂಗಳೂರಿನಿಂದ ಈ ದೇವಾಲಯಕ್ಕೆ ಹೋಗಲು ಹೈದ್ರಾಬಾದ್‍ಗೆ ಹಲವು ರೈಲು ಸಂಪರ್ಕವಿದ್ದು ಸುಲಭವಾಗಿ ತಲುಪಬಹುದು.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X