Search
  • Follow NativePlanet
Share
» »ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

By Vijay

ತ್ರಿಮೂರ್ತಿಗಳಲ್ಲೊಬ್ಬನಾದ ಶಿವನನ್ನು ಆರಾಧಿಸುವ ದೇವಾಲಯಗಳು ಅದೆಷ್ಟೊ ಲಕ್ಷಗಳ ಸಂಖ್ಯೆಯಲ್ಲಿ ಕಂಡುಬರುತ್ತವೆ ನಮ್ಮ ದೇಶದಲ್ಲಿ. ಜಗತ್ತಿಗೊದಗಿ ಬರುವ ಕಷ್ಟ ಕಾರ್ಪಣ್ಯಗಳನ್ನು ವಿನಾಶಿಸುವ ಸಮರ್ಥ್ಯ ಹೊಂದಿರುವ ಶಿವನು ಹಿಂದೂ ಧರ್ಮದ ಪ್ರಮುಖ ದೇವರಲ್ಲಿ ಒಬ್ಬನು.

ಹೋಟೆಲ್, ಬಸ್ ಮತ್ತು ಫ್ಲೈಟ್ಸ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ

ಶಿವನ ಪ್ರಭಾವವಿರುವ ಅಥವಾ ಶಿವನನ್ನು ಜ್ಯೋತಿರ್ಲಿಂಗ ರೂಪದಲ್ಲಿ ಫುಜಿಸುವ ಸಾಕಷ್ಟು ದೇವಾಲಯಗಳು ದೇಶದ ಉದ್ದಗಲಕ್ಕೂ ಕಂಡುಬರುತ್ತವೆ. ಅಲ್ಲದೆ ಪ್ರತಿಯೊಬ್ಬ ಹಿಂದೂ ಧರ್ಮದವನು ಮೋಕ್ಷದಲ್ಲಿ ನಂಬಿಕೆ ಹೊಂದಿದ್ದು, ಅದು ಶಿವ ಹಾಗೂ ವಿಷ್ಣುವಿನ ಕೃಪಾಕಟಾಕ್ಷ ದೊರಕಿದಾಗ ಲಭಿಸುವ ವರವಾಗಿದೆ ಎಂದು ಅರಿತಿರುವುದರಿಂದ ಈ ದೇವಾಲಯಗಳಿಗೆ ಭೇಟಿ ನೀಡಲು ಸದಾ ಹಂಬಲಿಸುತ್ತಿರುತ್ತಾನೆ.

ವಿಶೇಷ ಲೇಖನ : ವಿಸ್ಮಯಗೊಳಿಸುವಂತಹ ಶಿವಲಿಂಗಗಳು

ಪ್ರಸ್ತುತ ಲೇಖನವು ದೇಶದಲ್ಲಿರುವ ಸಾಕಷ್ಟು ಶಿವನ ದೇವಾಲಯಗಳ ಪೈಕಿ ಕೆಲವೆ ಕೆಲವು ಆಯ್ದ ಶಿವ ದೇವಾಲಯಗಳ ಕುರಿತು ಮಾತ್ರವೆ ತಿಳಿಸುತ್ತದೆ.

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಬೃಹದೇಶ್ವರ ದೇವಸ್ಥಾನ : ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ. ಈ ದೇವಸ್ಥಾನವು ಪುರಾತನ ವಾಸ್ತುಶಾಸ್ತ್ರ ಹಾಗು ಆಗಮ ಶಾಸ್ತ್ರಗಳ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಈ ಶಿವನ ದೇವಾಲಯವು ತಮಿಳುನಾಡು ರಾಜ್ಯದ ತಂಜಾವೂರು ಪಟ್ಟಣದಲ್ಲಿ ಸ್ಥಿತವಿದೆ.

ಚಿತ್ರಕೃಪೆ: vishwaant avk

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಸೋಮನಾಥ ದೇವಾಲಯ: ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ. ಶಿವನ ಪ್ರಮುಖ ದೇವಾಲಯಗಳ ಪೈಕಿ ಇದೂ ಸಹ ಒಂದಾಗಿದೆ.

ಚಿತ್ರಕೃಪೆ: BeautifulEyes

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಮಹಾಕಾಲೇಶ್ವರ ದೇವಾಲಯ: ಮಧ್ಯ ಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ.

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಓಂಕಾರೇಶ್ವರ ದೇವಾಲಯ : ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ/ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ॐ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು/ಅಮರನಾದ ಅಮರೇಶ್ವರ ದೇವಸ್ಥಾನ. ದಂತಕಥೆಯ ಪ್ರಕಾರ, ಶಿವ ಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಪ್ರಸಿದ್ಧವಾಗಿವೆ.

ಚಿತ್ರಕೃಪೆ: ShivShankar.in

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಕೇದಾರನಾಥ ದೇವಾಲಯ : ಉತ್ತರಾಖಂಡ ರಾಜ್ಯದ ಮಂದಾಕಿನಿ ನದಿ ತಟದಲ್ಲಿ ಸ್ಥಿತವಿರುವ ಕೇದಾರನಾಥದ ಈ ದೇವಾಲಯವು ಕೇದಾರನಾಥ ದೇವಾಲಯವೆಂದೆ ಜನಜನಿತವಾಗಿದ್ದು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಬಹು ಎತ್ತರದಲ್ಲಿ ನೆಲೆಸಿದ್ದು ಹಿಮಾಲಯ ಶ್ರೇಣಿಗಳ ಒಡಲಿನಲ್ಲಿರುವುದರಿಂದ ವಿಪರೀತವಾದ ವಾತಾವರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಕಾರಣ ಈ ಶಿವನ ದೇವಾಲಯವು ಭಕ್ತರಿಗೆಂದು ವರ್ಷದ ಬೇಸಿಗೆಯ ಸಂದರ್ಭದಲ್ಲಿ ಅಂದರೆ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ.

ಚಿತ್ರಕೃಪೆ: Shaq774

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಭೀಮಾಶಂಕರ ದೇವಾಲಯ : ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಅಶಿರ್ವದಿಸುತ್ತಿದ್ದಾನೆ.

ಚಿತ್ರಕೃಪೆ: ସୁରଥ କୁମାର ପାଢ଼ୀ

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಕಾಶಿ ವಿಶ್ವನಾಥ ದೇವಾಲಯ : ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ಚಿತ್ರಕೃಪೆ: Wedstock 2011

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ತ್ರಯಂಬಕೇಶ್ವರ ದೇವಾಲಯ : ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ನಾಶಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರಯಂಬಕೇಶ್ವರವು ಪೆನಿನ್ಸುಲಾ ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.

ಚಿತ್ರಕೃಪೆ: Niraj Suryawanshi

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ವೈದ್ಯನಾಥ ದೇವಾಲಯ : ಇದರ ನಿಖರವಾದ ಸ್ಥಳದ ಕುರಿತು ಇನ್ನೂ ವಿವಾದವಿದ್ದರೂ ಜಾರ್ಖಂಡ್ ರಾಜ್ಯದ ದೇವ್ಗಡ್ ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ.

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ನಾಗೇಶ್ವರ ದೇವಾಲಯ : ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತವಾದ ಜ್ಯೋತಿರ್ಲಿಂಗ ತಾಣವಾಗಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ರಾಮೇಶ್ವರ : ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವು ದಕ್ಷಿಣದ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.

ಚಿತ್ರಕೃಪೆ: Jyothis

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಘುಶ್ಮೇಶ್ವರ ದೇವಾಲಯ : ರಾಜಸ್ಥಾನದ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿದೆ ಈ ಜ್ಯೋತಿರ್ಲಿಂಗ ದೇವಸ್ಥಾನ. ಇದನ್ನು ಕೊನೆಯ ಅಂದರೆ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.

ಚಿತ್ರಕೃಪೆ: Ghushmeshwar jyotirlinga

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಮಲ್ಲಿಕಾರ್ಜುನ ದೇವಾಲಯ : ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವು ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನವು ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಭೂತನಾಥ ದೇವಾಲಯಗಳ ಸಮೂಹ, ಬಾದಾಮಿ : ಕರ್ನಾಟಕದ ಐತಿಹಾಸಿಕ ಪಟ್ಟಣ ಬಾದಾಮಿಯಲ್ಲಿ ಕಂಡುಬರುತ್ತದೆ ಶಿವನಿಗೆ ಸಮರ್ಪಿತವಾದ ಈ ದೇವಾಲಯ ಸಮೂಹ. ಈ ಸಮೂಹದಲ್ಲಿ ಎರಡು ದೇವಾಲಯಗಳನ್ನು ಕಾಣಬಹುದು. ಮೊದಲನೆಯ ಹಾಗು ದೊಡ್ಡದಾದ ದೇವಾಲಯವು ಕೆರೆಯ ಪೂರ್ವಭಾಗದಲ್ಲಿ ನಿರ್ಮಿತವಾಗಿದ್ದು ಭೂತನಾಥ ದೇವಾಲಯವಾಗಿದೆ. ಎರಡನೆಯ ದೇವಾಲಯ ರಚನೆಯು ಸ್ವಲ್ಪ ಚಿಕ್ಕದಾಗಿದ್ದು ಕೆರೆಯ ಈ ಶಾನ್ಯ ದಿಕ್ಕಿನಲ್ಲಿದೆ. ಇದನ್ನು ಮಲ್ಲಿಕಾರ್ಜುನ ದೇವಾಲಯ ಸಮೂಹವೆಂದು ಕೂಡ ಆಗಾಗ ಕರೆಯಲಾಗುತ್ತದೆ. ದಕ್ಷಿಣ ಹಾಗು ಉತ್ತರ ಭಾರತದ ವಾಸ್ತುಶೈಲಿಯನ್ನು ಮೊದಲನೆಯ ದೇವಾಲಯಯದಲ್ಲಿ ಕಾಣಬಹುದಾಗಿದ್ದು ಕಲ್ಯಾಣಿ ಚಾಲೂಕ್ಯರ ಶೈಲಿಯನ್ನು ಎರಡನೆಯ ದೇವಾಲಯದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Gs9here

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಹೊಯ್ಸಳೇಶ್ವರ ದೇವಾಲಯ, ಹಳೇಬೀಡು : ಸುಮಾರು ಹನ್ನೆರಡನೇಯ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾದ ಶಿವನ ಈ ದೇವಾಲಯವು ಅದ್ಭುತವಾದ ವಾಸ್ತುಶಿಲಿಗೆ ಉದಾಹರಣೆಯಾಗಿದ್ದು, ಪ್ರಖ್ಯಾತ ಪ್ರವಾಸಿ ಕ್ಷೇತ್ರವೂ ಆಗಿದೆ.

ಚಿತ್ರಕೃಪೆ: Karthikbs23

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಕಾಲಕಾಲೇಶ್ವರ ದೇವಾಲಯ, ಗಜೇಂದ್ರಗಡ್ : ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡ್ ಸುತ್ತಮುತ್ತಲಿನ ಪ್ರದೇಶದಲ್ಲೆ ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ, ಕಾರಣ ಇಲ್ಲಿರುವ ದಕ್ಷಿಣ ಕಾಶಿ ಎಂದೆ ಬಿಂಬಿತವಾದ ಕಾಲಕಾಲೇಶ್ವರನ ದೇವಾಲಯದಿಂದಾಗಿ. ಪ್ರಸಿದ್ಧ ಪ್ರವಾಸಿ ತಣವಾಗಿರುವ ಈ ದೇವಾಲಯದ ಆವರಣದಲ್ಲಿ ಚಿಕ್ಕದೊಂದು ಚೌಕಾಕಾರದ ನೀರಿನ ಮೂಲವೊಂದನ್ನು ಕಾಣಬಹುದು. ಇದರ ವಿಶೇಷತೆಯೆಂದರೆ ಸುಡು ಬಿಸಿಲಿನ ಬೇಸಿಗೆಯ ಕಾಲದಲ್ಲೂ ಇದು ಬತ್ತುವುದಿಲ್ಲ.

ಚಿತ್ರಕೃಪೆ: Manjunath Doddamani

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಕೋಟಿಲಿಂಗೇಶ್ವರ ದೇವಸ್ಥಾನ, ಕಮ್ಮಸಂದ್ರ : ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಹಳ್ಳಿಯಲ್ಲಿ ಕೋಟಿಲಿಂಗೇಶ್ವರ ಎಂಬ ಈ ದೇವಸ್ಥಾನವನ್ನು ಕಾಣಬಹುದು. ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು ಜಗತ್ತಿನ ಅತಿ ಎತ್ತರದ ಶಿವಲಿಂಗಗಳ ಪೈಕಿ ಒಂದನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೆ ದೇವಾಲಯದ ಆವರಣದಲ್ಲಿ ಸಾಕಷ್ಟು ಸಂಖ್ಯೆಯ ಪುಟ್ಟ ಶಿವಲಿಂಗಗಳನ್ನು ಕಾಣಬಹುದು.

ಚಿತ್ರಕೃಪೆ: gsnewid

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ : ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಎಂಬಲ್ಲಿ ಶಿವನ ಈ ಪ್ರಸಿದ್ಧವಾದ ದೇವಾಲಯವಿದೆ. ಕುರುಬ ಗೌಡ ಸಮುದಾಯದವರಿಂದ ಶಿವನು ಇಲ್ಲಿ ಮೈಲಾರಿಯಾಗಿ ಪೂಜಿಸಲ್ಪಡುತ್ತಾನೆ. ಮೈಲಾರವು ರಾಣಿಬೆನ್ನೂರಿನಿಂದ 34 ಹಾಗು ಹಡಗಲಿಯಿಂದ 40 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Manjunath Doddamani

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಅಮರನಾಥ ದೇವಾಲಯ : ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ. ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ. ಈ ಗುಹಾ ದೇವಾಲಯವು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದ್ದು, ಸಮುದ್ರ ಮಟ್ಟದಿಂದ 3,888 ಮೀ (12,756 ಅಡಿಗಳು) ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ.

ಚಿತ್ರಕೃಪೆ: Gktambe

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಕೈಲಾಶನಾಥ ದೇವಾಲಯ, ಎಲ್ಲೋರಾ : ಮಹಾರಾಷ್ಟ್ರದ ಎಲ್ಲೋರಾ ತಾಣದಲ್ಲಿರುವ ಶಿವನಿಗೆ ಮುಡಿಪಾದ ಈ ಕಡೆದ ಕಲ್ಲಿನ ದೇವಸ್ಥಾನವು ಪ್ರಸಿದ್ಧ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ. ಕ್ರಿ.ಶ 757-783 ರ ಮಧ್ಯದಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದೆ.

ಚಿತ್ರಕೃಪೆ: Pratheepps

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಭೋಜೇಶ್ವರ ದೇವಾಲಯ, ಭೋಜಪುರ : ಮಧ್ಯ ಪ್ರದೇಶ ರಾಜ್ಯದ ಭೋಜಪುರ ಪಟ್ಟಣವು ತನ್ನಲ್ಲಿರುವ ಅಪೂರ್ಣವಾದ ಶಿವನಿಗೆ ಮುಡಿಪಾದ ಭೋಜೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದಲ್ಲಿ ಕಂಡುಬರುವ ಶಿವಲಿಂಗವು ಅತ್ಯಂತ ಎತ್ತರದ ಶಿವ ಲಿಂಗಗಳ ಪೈಕಿ ಒಂದಾಗಿದೆ. ಇದರ ಎತ್ತರವು ಸುಮಾರು 18 ಅಡಿಗಳು.

ಚಿತ್ರಕೃಪೆ: sanjay austa

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಜಂಬುಕೇಶ್ವರರ್ ದೇವಾಲಯ, ತಿರುವನೈಕಾವಲ್ : ತಮಿಳುನಾಡು ರಾಜ್ಯದತಿರುಚ್ಚಿಯಲ್ಲಿನ ಈ ದೇವಸ್ಥಾನವನ್ನು ಸುಮಾರು 1800 ವರ್ಷಗಳ ಹಿಂದೆ ಚೋಳರ ಆಳ್ವಿಕೆ ಪ್ರಾರಂಭವಾದ ಕಾಲದಲ್ಲಿ ರಾಜನಾಗಿದ್ದ ಕೊಚೆಂಗ ಚೋಳನು ಈ ದೇವಾಲಯವನ್ನು ಕಟ್ಟಿಸಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ಪ್ರಾಚೀನ ದೇವಾಲಯವನ್ನು ಆ ಬಳಿಕ ಆಳ್ವಿಕೆಗೆ ಬಂದ ಎಲ್ಲಾ ರಾಜರು ನಿರ್ವಹಣೆಗೆ ಒತ್ತು ಕೊಟ್ಟಿರುವುದು ಈ ದೇವಾಲಯದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಈ ದೇವಾಲಯದ ವಿಸ್ಮಯವೆಂದರೆ ಗರ್ಭಗುಡಿಯ ತಲದಿಂದ ಸ್ಪಟಿಕಶುಭ್ರ ನೀರಿನ ಒರತೆಯಿದೆ. ಈ ನೀರನ್ನು ಎಷ್ಟು ಖಾಲಿ ಮಾಡಿದರೂ ಮತ್ತೆ ತುಂಬಿಕೊಳ್ಳುತ್ತಿದ್ದು ನೀರಿನ ಸೆಲೆ ಎಲ್ಲಿದೆಯೆಂದೇ ಗೊತ್ತಾಗದಿರುವುದು ಸ್ಥಳದ ಮಹಾತ್ಮೆಯನ್ನು ಬಣ್ಣಿಸುತ್ತದೆ. ತಮಿಳುನಾಡಿನ ಐದು ಧಾತುಗಳನ್ನು ಪ್ರತಿನಿಧಿಸುವ ಐದು ಶಿವಾಲಯಗಳಲ್ಲಿ ಜಂಬುಲಿಂಗೇಶ್ವರರ್ ಸಹಾ ಒಂದು. ಈ ದೇವಾಲಯ ಪಂಚಧಾತುಗಳಲ್ಲೊಂದಾದ ನೀರನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Mohan Krishnan

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಒಚಿರಾ ದೇವಾಲಯ : ಇದು ಕೇರಳದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿದ್ದು ಶಿವನಿಗೆ ಮುಡಿಪಾದ ದೇವಸ್ಥಾನವಾಗಿದೆ. ಕೊಲ್ಲಂ ಜಿಲ್ಲೆಯ ಒಚಿರಾ ಎಂಬಲ್ಲಿ ಸ್ಥಿತವಿದೆ. ಸಾಂಕೇತಿಕವಾಗಿ ಕೆಸರಿನಲ್ಲಿ ಆಡುವ ಕುಸ್ತಿಗೆ ಹಾಗೂ ಕೇರಳದಲ್ಲೆ ಅತಿ ಪ್ರಮುಖ ಹಬ್ಬವಾದ ಓಣಂ ಮುಗಿದ 28 ನೇಯ ದಿನಕ್ಕೆ ಮತ್ತೊಮ್ಮೆ ಅದ್ದೂರಿಯಾಗಿ ಓಣಂ ಆಚರಿಸುವ ಉತ್ಸವಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ. ಚಕಿತಗೊಳಿಸುವ ವಿಷಯವೆಂದರೆ ಈ ಒಚಿರಾ ದೇವಾಲಯಕ್ಕೆ ಯಾವುದೆ ಕಟ್ಟಡ ರಚನೆಯಿಲ್ಲ. ನಿರಾಕಾರ ಪರಬ್ರಹ್ಮನ ರೂಪದಲ್ಲಿ ಶಿವನನ್ನು ಗಿಡಗಳ ಮೂಲಕವಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Neon

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಅರುಣಾಚಲೇಶ್ವರ ದೇವಾಲಯ : ತಿರುವಣ್ಣಾಮಲೈ ಬೆಟ್ಟ ಕ್ಷೇತ್ರವು ತನ್ನಲ್ಲಿರುವ ಅಣ್ಣಾಮಲಯಾರ್ ದೇವಾಲಯಕ್ಕೆ ಪ್ರಖ್ಯಾತಿ ಪಡೆದಿದೆ. ಇದು ಶಿವನಿಗೆ ಮುಡಿಪಾದ ದೇವಸ್ಥಾನವಾಗಿದೆ. ಅಷ್ಟೆ ಅಲ್ಲ, ಪಂಚಭೂತ ಸ್ಥಳಗಳ ಪೈಕಿ ಈ ಸ್ಥಳವೂ ಸಹ ಒಂದು. ಇದು ಪಂಚಭೂತಗಳ ಪೈಕಿ ಒಂದಾದ ಅಗ್ನಿಯನ್ನು ಪ್ರತಿನಿಧಿಸುತ್ತದೆ. ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ ತಿರುವಣ್ಣಾಮಲೈ ಕ್ಷೇತ್ರ. ಬೆಂಗಳೂರಿನಿಂದ 220 ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪಗೊಂಡ ಪಟ್ಟಣವಾಗಿದೆ. ಈ ಎರಡೂ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಚಿತ್ರಕೃಪೆ: Adam Jones

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಗೋಕರ್ಣನಾಥೇಶ್ವರ ದೇವಾಲಯ, ಕುದ್ರೋಳಿ : ಮಂಗಳೂರಿನ ಕುದ್ರೋಳಿಯಲ್ಲಿರುವ ಶಿವನಿಗೆ ಮುಡಿಪಾದ ಗೋಕರ್ಣನಾಥೇಶ್ವರನ ದೇವಸ್ಥಾನವಿದೆ. ಮಂಗಳೂರಿನಲ್ಲಿ ಕಂಡುಬರುವ ದೇವಾಲಯಗಳ ಪೈಕಿ ಇದು ಇತ್ತೀಚಿಗಷ್ಟೆ ನಿರ್ಮಾಣಗೊಂಡ ದೇವಾಲಯವಾಗಿದೆ. ನಾರಯಣ ಗುರು ಎಂಬ ಆಧ್ಯಾತ್ಮಿಕ ಸಂತರಿಂದ ಈ ದೇವಾಲಯದ ಪರಿಕಲ್ಪನೆ ಮೂಡಿ ಬಂದಿದೆ.

ಚಿತ್ರಕೃಪೆ: Premkudva

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು : ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಶಿವನಿಗೆ ಸಮರ್ಪಿತವಾದ ಈ ಅತಿ ಪುರಾತನ ದೇವಾಲಯವನ್ನು ಕಾಣಬಹುದು. ನಂಜನಗೂಡು ಕ್ಷೇತ್ರದಲ್ಲಿ ಹರಿದಿರುವ ಕಪಿಲಾ ನದಿಯ ಬಲದಂಡೆಯಲ್ಲಿ ಈ ಸುಂದರ ದೇವಸ್ಥಾನವಿದೆ. ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಅಥವ "ದಕ್ಷಿಣದ ವಾರಣಾಸಿ" ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Dineshkannambadi

ಶಿವನ ಪ್ರಮುಖ ದೇವಸ್ಥಾನಗಳು:

ಶಿವನ ಪ್ರಮುಖ ದೇವಸ್ಥಾನಗಳು:

ತುಂಗನಾಥ ದೇವಾಲಯ : ಉತ್ತರಾಖಂಡ ರಾಜ್ಯವನ್ನು "ದೇವ ಭೂಮಿ" ಎಂಬ ಹೆಸರಿನಿಂದಲೂ ಸಹ ಸಂಭೋದಿಸಲಾಗುತ್ತದೆ. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥವು ಶಿವನ ದೇವಸ್ಥಾನಕ್ಕೆ ಬಹು ಪ್ರಖ್ಯಾತವಾಗಿದೆ. ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಚಂದ್ರಪರ್ವತ ಗಿರಿ ಶಿಖರದಲ್ಲಿ ಪಂಚ ಕೇದಾರಗಳ ಪೈಕಿ ಒಂದಾದ ಪವಿತ್ರ ತುಂಗನಾಥವು ನೆಲೆಸಿದೆ. ತುಂಗನಾಥದಲ್ಲಿರುವ ಶಿವನ ದೇವಸ್ಥಾನವು ಸಮುದ್ರ ಮಟ್ಟದಿಂದ 3,680 ಮೀ. ಅಥವಾ 11,220 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಸುಮಾರು 1000 ವರ್ಷಗಳಷ್ಟು ಪುರಾತನವಾದುದು ಎಂದು ಅಂದಾಜಿಸಲಾಗಿದೆ. ಇಲ್ಲಿರುವ ಶಿವನನ್ನು ಮೂಲತಃ ಆದಿ ಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಪ್ರತೀತಿ ಇದೆ. ಇದು ವಿಶ್ವದಲ್ಲೆ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಏಕೈಕ ಶಿವ ದೇವಾಲಯವಾಗಿದೆ.

ಚಿತ್ರಕೃಪೆ: Varun Shiv Kapur

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X