Search
  • Follow NativePlanet
Share
» »ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ

ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ

By Vijay

ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ.

ಬೆಂಗಳೂರಿನಿಂದ ತುಮಕೂರಿಗೆ ರೈಲು ಹಾಗೂ ಬಸ್ಸುಗಳ ಸಾಕಷ್ಟು ಸೌಲಭ್ಯವಿದ್ದುಅಲ್ಲಿಂದ ತಿಪಟೂರಿಗೆ ನಿರಾಯಾಸವಾಗಿ ತಲುಪಬಹುದು. ಅಲ್ಲದೆ ಬೆಂಗಳೂರಿನಿಂದಲೂ ಸಹ ತಿಪಟೂರಿಗೆ ಬಸ್ಸುಗಳು ದೊರೆಯುತ್ತವೆ. ಬೆಂಗಳೂರಿನಿಂದ ತಿಪಟೂರಿಗೆ ಒಟ್ಟು ದೂರ ಸುಮಾರು 145 ಕಿ.ಮೀ ಗಳು.

ಇನ್ನೂ ದಸರಿಘಟ್ಟದ ಚೌಡೇಶ್ವರಿಯ ದೇವಸ್ಥಾನವು ಅತಿ ಪ್ರಭಾವಶಾಲಿ ದೇವಸ್ಥಾನ ಎಂದು ಜನಮನ್ನಣೆ ಪಡೆದಿದ್ದು ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಅಕ್ಕ ಪಕ್ಕದ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಸಹ ಭಕ್ತರು ಈ ದೇವಿಯ ದರುಶನ ಕೋರಿ, ತಮ್ಮ ಸಮಸ್ಯೆ ಅಥವಾ ಪ್ರಶ್ನೆಗಳನ್ನು ನಿವೇದಿಸಲು ಇಲ್ಲಿಗೆ ಬರುತ್ತಿರುತ್ತಾರೆ.

ಈ ಅಮ್ಮನವರ ದೇವಸ್ಥಾನದ ಹಿಂದಿರುವ ಕಥೆಯು ಅತ್ಯಂತ ರೋಚಕಮಯವಾಗಿದ್ದು ಒಂದೊಂದಾಗಿ ಸ್ಲೈಡುಗಳ ಮೂಲಕ ಓದುತ್ತ ತಿಳಿಯಿರಿ.

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಮೊದಲನೆಯದಾಗಿ ಇಲ್ಲಿರುವ ದೇವಿಯ ಪಂಚಲೋಹದ ವಿಗ್ರಹವು ಕೇಳಿದ ಪ್ರಶ್ನೆಗಳಿಗೆ/ಸಮಸ್ಯೆಗಳಿಗೆ ಉತ್ತರಿಸುತ್ತದೆ. ಎಲ್ಲರೂ ಸಮ್ಮಿಳಿತರಾದಾಗ ಗ್ರಾಮದ ಇಬ್ಬರು ಅನಕ್ಷರಸ್ಥರು ದೇವಿಯ ವಿಗ್ರಹವನ್ನು ಹಿಡಿದು ಮನಸೊ ಇಚ್ಛೆ ಬರೆಯುತ್ತಾರೆ.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ನಂತರ ದೇವಸ್ಥಾನದ ಹಿರಿಯ ಅರ್ಚಕರು ಅಕ್ಕಿ ಹಿಟ್ಟಿನಲ್ಲಿ ಸುಲಲಿತವಾಗಿ ಕನ್ನಡದಲ್ಲಿ ಪರಿಹಾರವನ್ನು ಬರೆಯುತ್ತಾರೆ. ಕೇಳುಗರು ಯಾವುದೇ ಭಾಷೆಯಲ್ಲಿ ಬೇಕಾದರೂ ಸಮಸ್ಯೆಗಳನ್ನ, ಪ್ರಶ್ನೆಗಳನ್ನ ಮನದಲ್ಲಿ ನಿವೇದಿಸಿಕೊಳ್ಳಬಹುದು.

ಚಿತ್ರಕೃಪೆ: Bpdg1989

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಕಥೆ: ನೂರಾರು ವರ್ಷಗಳ ಹಿಂದೆ ಕರ್ನಾಟಕದ ರಾಯಚೂರು ಜಿಲ್ಲೆಯ ಬಳಿ ತುಂಗಾ ನದಿ ತೀರದಲ್ಲಿ ನಂದವರ ಎಂಬ ಸಾಮ್ರಾಜ್ಯವಿತ್ತು. ಇದನ್ನು ಪರಿಪಾಲಿಸುತ್ತಿದ್ದ ರಾಜನು ಶಕ್ತಿ ದೇವಿಯ ಉಪಾಸಕನಾಗಿದ್ದನು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ರಾಜನು ಶಕ್ತಿಯ ಉಪಾಸಕನಾಗಿದ್ದುದರಿಂದ ಅನೇಕ ಮಂತ್ರ ವಿದ್ಯೆಗಳು ಕರಗತವಾಗಿದ್ದವು. ಅದರಂತೆ ತನ್ನ ಮಂತ್ರ ಶಕ್ತಿಯಿಂದ ಪ್ರತಿ ನಿತ್ಯ ನಸುಕಿನ ನಾಲ್ಕು ಘಂಟೆಗೆ ಎದ್ದು ದೂರದ ಕಾಶಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಸಾಯಂಕಾಲದ ಸಮಯದಂದು ಮತ್ತೆ ತನ್ನ ಸಾಮ್ರಾಜ್ಯಕ್ಕೆ ಮರಳುತ್ತಿದ್ದನು.

ಚಿತ್ರಕೃಪೆ: Bpdg1989

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಪ್ರತಿನಿತ್ಯ ರಾಜನ ಅನುಪಸ್ಥಿತಿಯಿಂದ ಬೇಸರಗೊಂಡ ರಾಣಿಯು ಸಂಶಯಗೊಂಡು ರಾಜನಲ್ಲಿ ಒಮ್ಮೆ ಈ ಕುರಿತು ಪ್ರಶ್ನಿಸಿದಳು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಮನಸ್ಸಿಲ್ಲದ ಮನಸ್ಸಿನಿಂದ ರಾಜನು ರಾಣಿಯ ಒತ್ತಾಸೆಯ ಮೆರೆಗೆ ತನ್ನ ಪ್ರತಿನಿತ್ಯದ ಕಾರ್ಯ ಚಟುವಟಿಕೆಯ ಕುರಿತು ನಿಜ ಹೇಳಬೇಕಾಯಿತು.

ಚಿತ್ರಕೃಪೆ: Bpdg1989

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ನಿಜ ಸ್ಥಿತಿಯನ್ನರಿತ ರಾಣಿಗೆ ಇದನ್ನು ನಂಬುವುದು ಅಸಾಧ್ಯವಾಗಿ ತಾನು ಕಣ್ಣಾರೆ ಇದನ್ನು ನೋಡಬೇಕೆಂದು ಪಟ್ಟು ಹಿಡಿದಳು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಕೊನೆಗೆ ರಾಣಿಯ ಅಪೇಕ್ಷೆಗೆ ರಾಜನು ತಲೆ ಬಾಗಿ ಮರುದಿನ ಆಕೆಯನ್ನು ತನ್ನೊಡನೆ ಕರೆದೊಯ್ದನು. ಹೀಗೆ ಇಬ್ಬರು ಕಾಶಿಯಲ್ಲಿರುವಾಗ ರಾಣಿಯು ಮಾಸಿಕ ಋತುಚಕ್ರ ಅನುಭವಿಸಬೇಕಾಯಿತು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಇದರಿಂದ ರಾಜನು ತನ್ನ ಮಂತ್ರ ಶಕ್ತಿಯನ್ನು ಕಳೆದುಕೊಂಡು, ಎಂದಿನಂತೆ ಹಿಂತಿರುಗಲಾರದೆ ಆಯಾಸಗೊಂಡು ಚಿಂತೆಗಿಡಾದನು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಈ ರೀತಿಯಾಗಿ ಹತಾಶೆಗೊಂಡು ರಾಜನು ಗಂಗೆಯ ದಡದಲ್ಲಿ ಅಲೆಯುತ್ತಿರುವಾಗ ಬ್ರಾಹ್ಮಣರ ಗುಂಪೊಂದು ಚಂಡಿಯಾಗ ಮಾಡುತ್ತಿರುವುದು ಕಣ್ಣಿಗೆ ಬಿತ್ತು. ತಕ್ಷಣ ಅವರಲ್ಲಿ ತೆರಳಿ ತನಗುಂಟಾದ ಸಮಸ್ಯೆಯ ಕುರಿತು ಅವರಲ್ಲಿ ಕಳಕಳಿಯಿಂದ ವಿನಂತಿಸಿದನು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಅವನ ದುಖವನ್ನು ಕಂಡ ಬ್ರಾಹ್ಮಣರ ಗುಂಪು, ಮರುಗಿ ಅವನಿಗೆ ಸಹಾಯ ಮಾಡಲು ಸಮ್ಮತಿಸಿ ತಾವು ಪಡೆದ ಪುಣ್ಯದ ಕೆಲ ಭಾಗವನ್ನು ಉಪಯೋಗಿಸಿ ರಾಣಿಯನ್ನು ಮತ್ತೆ ಶುದ್ಧ/ಪವಿತ್ರಳನ್ನಾಗಿ ಮಾಡುವುದಾಗಿ ಹೇಳಿದರು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಅಲ್ಲದೆ ತಾವು ಮಾಡಿದ ಸಹಾಯಕ್ಕಾಗಿ ರಾಜನಿಂದ ಕೊಡುಗೆಯನ್ನೂ ಅಪೇಕ್ಷಿಸಿದರು. ಅದಕ್ಕೆ ರಾಜನು ಯಾವಾಗ ಈ ಬ್ರಾಹ್ಮಣರ ಗುಂಪು ತನ್ನ ಬಳಿ ಬಂದು ಕೇಳುತ್ತಾರೊ ಆವಾಗ ಜಹಾಗೀರುಗಳನ್ನು ದಾನವಾಗಿ ಕೊಡುವುದಾಗಿ ಮಾತು ಕೊಟ್ಟನು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ನಂತರ ಬ್ರಾಹ್ಮಣರ ಸಹಾಯದಿಂದ ರಾಜನು ರಾಣಿಯ ಸಮೇತ ತನ್ನ ರಾಜ್ಯಕ್ಕೆ ನಿರಾಯಾಸವಾಗಿ ಬಂದು ತಲುಪಿದನು ಹಾಗೂ ಮತ್ತೆ ಎಂದಿಗೂ ತನ್ನ ಮಂತ್ರ ಶಕ್ತಿಯನ್ನು ಬಳಸಲಿಲ್ಲ.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಹೀಗೆ ವರ್ಷಗಳು ಉರುಳಿದವು. ಒಮ್ಮೆ ಕಾಶಿಯಲ್ಲಿ ಘೋರವಾದ ಕ್ಷಾಮ ಉಂಟಾಯಿತು. ಇಂತಹ ದುಸ್ಥಿತಿಯಲ್ಲಿ ಬ್ರಾಹ್ಮಣರಿಗೆ ರಾಜನು ಕೊಟ್ಟ ಮಾತು ನೆನಪಿಗೆ ಬಂದು ನೇರವಾಗಿ ನಂದವರಕ್ಕೆ ಬಂದಿಳಿದು ರಾಜನನ್ನು ಕಂಡು ಅವನು ಕೊಟ್ಟ ಮಾತನ್ನು ನೆನಪಿಸಿದರು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಆದರೆ ತಾನು ಕೊಟ್ಟ ಮಾತನ್ನು ಸಂಪೂರ್ಣವಾಗಿ ಮರೆತಿದ್ದ ರಾಜನು ಅವರಿಗೆ ಸಹಾಯ ಮಾಡುವ ಬದಲು ನಿಂದಿಸಿದನು. ಇದರಿಂದ ಬ್ರಾಹ್ಮಣರ ಅವಕೃಪೆಗೆ ಪಾತ್ರನಾದನು. ನಂತರದ ದಿನಗಳಿಂದ ರಾಜನು ದುರದೃಷ್ಟಕ್ಕೆ ಒಳಗಾಗಿ ಮಾಡುವ ಎಲ್ಲ ಕಾರ್ಯಗಳು ಭಗ್ನಗೊಳ್ಳತೊಡಗಿದವು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಅತ್ತ ಬ್ರಾಹ್ಮಣರ ಗುಂಪು, ರಾಜನು ಮಾತು ಕೊಟ್ಟಿದ್ದಕ್ಕೆ ಚೌಡೇಶ್ವರಿ ದೇವಿಯೆ ಏಕ ಸಾಕ್ಷಿಯಾಗಿರುವಳೆಂದು ಅರಿತು ಅವಳನ್ನು ನಂದವರಕ್ಕೆ ಬರಲು ಪ್ರಾರ್ಥಿಸಿದರು. ಅವರ ಇಚ್ಛೆಯಂತೆ ಚೌಡೇಶ್ವರಿ ದೇವಿಯು ನಂದವರಕ್ಕೆ ಬಂದಿಳಿದಳು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಇತ್ತ ಈ ಎಲ್ಲ ಬೆಳವಣಿಗೆಗಳಿಂದ ತನ್ನ ತಪ್ಪನ್ನು ಅರಿತ ರಾಜನು ಬ್ರಾಹಮಣರ ಗುಂಪು ಹಾಗೂ ದೇವಿಯಲ್ಲಿ ಅತಿ ವಿನಮ್ರದಿಂದ ಕ್ಷಮೆ ಕೋರಿದನು. ಹೀಗೆ ಇಲ್ಲಿ ನೆಲೆಸಿದ ಬ್ರಾಹ್ಮಣ ಸಮುದಾಯದವರು ಕಾಲಾಂತರದಲ್ಲಿ ನಂದವರಿಕ ಬ್ರಾಹಣರಾಗಿ ತಮ್ಮ ಕುಲದೇವತೆಯಾಗಿ ಚೌಡೇಶ್ವರಿ ದೇವಿಯನ್ನು ಆರಾಧಿಸತೊಡಗಿದರು. ತೊಗಟವೀರ ಕ್ಷತ್ರಿಯರ ಕುಟುಂಬ ದೇವತೆಯಾಗಿಯೂ ಚೌಡೇಶ್ವರಿ ದೇವಿ ಆರಾಧಿಸಲ್ಪಡುತ್ತಾರೆ.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಸುಮಾರು 300 ವರ್ಷಗಳ ಹಿಂದೆ ತಿಪಟೂರಿನಲ್ಲಿ ಜಸವಂತರಾಯ ಎಂಬ ಪಾಳೇಗಾರನಿದ್ದನು. ಚೌಡೇಶ್ವರಿ ದೇವಿಯ ಶಕ್ತಿಯ ಕುರಿತು ತಿಳಿದಿದ್ದ ಪಾಳೇಗಾರನು ತನ್ನ ಸಾಮರಾಜ್ಯವನ್ನು ವಿಸ್ತರಿಸುವ ಉದ್ದೇಶದಿಂದ ನಂದವರಕ್ಕೆ ಹೋಗಿ ಅತಿ ಭಕ್ತಿಯಿಂದ ದೇವಿಯನ್ನು ಪೂಜಿಸತೊಡಗಿದನು.

ಚಿತ್ರಕೃಪೆ: Bpdg1989

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಇವನ ಶೃದ್ಧೆ ಭಕ್ತಿಗಳಿಂದ ಪ್ರಸನ್ನಳಾದ ದೇವಿಯು ಇವನ ಮುಂದೆ ಪ್ರತ್ಯಕ್ಷಳಾಗಿ ವರವನ್ನು ಬೇಡಲು ಹೇಳಿದಳು. ಅದಕ್ಕೆ ಪಾಲೇಗಾರನು ತನ್ನ ಬಯಕೆಯನ್ನು ನಿವೇದಿಸಿ ತನ್ನ ಹಿಂದೆ ಯಾವಾಗಲೂ ರಕ್ಷಣೆ ಮಾಡುತ್ತ ಇರಬೇಕೆಂದು ಪ್ರಾರ್ಥಿಸಿದನು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಅದಕ್ಕೆ ಸಮ್ಮತಿಸಿದ ದೇವಿಯು ಒಂದು ಶರತ್ತನ್ನು ವಿಧಿಸಿದಳು. ಅದೇನೆಂದರೆ ತನಗೆಲ್ಲಿ ಇಷ್ಟವಾಗುತ್ತದೊ ಅಲ್ಲಿ ತಾನು ನೆಲೆಸುವುದಾಗಿ ಹೇಳಿದಳು. ಅದಕ್ಕೊಪಿದ ರಾಜನು ಒಂದರ ಮೇಲೊಂದಂತೆ ಪ್ರದೇಶಗಳನ್ನು ವಿಸ್ತರಿಸುತ್ತ ಸಾಗಿದನು.

ಚಿತ್ರಕೃಪೆ: Bpdg

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಹೀಗೆ ಪಾಳೇಗಾರನ ವಿಜಯಗಾಥೆಯು ಮುಂದುವರೆಯುತ್ತಿದ್ದಾಗ ದೇವಿಯು ಒಮ್ಮೆ ಸುಂದರವಾದ ಗಿಡ ಮರಗಳು, ಹಸಿರಿನಿಂದ ತುಂಬಿದ ಒಂದು ಸಮತಟ್ಟಾದ ಪ್ರದೇಶಕ್ಕೆ ಬಂದು ಅಲ್ಲಿನ ಪರಿಸರ ದೇವಿಗೆ ಹಿಡಿಸಿ ಅವಳು ಅಲ್ಲಿಯೆ ನೆಲೆಸಲು ತೀರ್ಮಾನಿಸಿದಳು. ನಂತರ ಇದು ಜಸವಂತರಾಯ ಪಟ್ಟಣ ಎಂದು ಕರೆಯಲ್ಪಟ್ಟಿತು.

ಚಿತ್ರಕೃಪೆ: Bp

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ದಸರಿಘಟ್ಟ ಚೌಡೇಶ್ವರಿ ದೇವಸ್ಥಾನ:

ಕಾಲಕ್ರಮೇಣ ಈ ಜಸವಂತರಾಯ ಪಟ್ಟಣವೆ ಇಂದಿನ ದಸರಿಘಟ್ಟವಾಗಿ ದೇವಿ ಚೌಡೇಶ್ವರಿ ನೆಲೆಸಿರುವ ಪವಿತ್ರ ತಾಣವಾಗಿದೆ. ಇಲ್ಲಿನ ಪುಟ್ಟ ಬೆಟ್ಟದ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಸಾಮಾನ್ಯವಾದ ಎತ್ತರ ಹೊಂದಿರುವ ಇಚಲ ಮರ ಹಾಗೂ ಸಮಿವೃಕ್ಷ ಈ ದೇವಾಲಯದ ಆಕರ್ಷಣೆಗಳಾಗಿದ್ದು ಇದರ ಸೌಂದರ್ಯಕ್ಕೆ ಇಂಬು ನೀಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X