Search
  • Follow NativePlanet
Share
» »ಹೈದ್ರಾಬಾದ್‍ನ ಕೆಲವು ಭಯಾನಕವಾದ ಪ್ರದೇಶಗಳು

ಹೈದ್ರಾಬಾದ್‍ನ ಕೆಲವು ಭಯಾನಕವಾದ ಪ್ರದೇಶಗಳು

9 ಭಯಾನಕವಾದ ಪ್ರದೇಶಗಳು ಕೂಡ ಇವೆ ಎಂದು ನಿಮಗೆ ಗೊತ್ತೆ? ಆ ಪ್ರದೇಶದಲ್ಲಿನ ಸ್ಥಳೀಯ ಪ್ರಜೆಗಳು ಈ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಗಳನ್ನು ಆ ಪ್ರದೇಶಗಳ ಬಗ್ಗೆ ನೀಡುತ್ತಾರೆ. ಅವುಗಳು ಪ್ರಚಾರ ಎಂದು ಅಂದುಕೊಳ್ಳಬೇಕು ಅಥವಾ ಅವರ ಮೂಢ ನಂಬಿ

ಹೈದ್ರಾಬಾದ್ ಎಲ್ಲಿರಿಗೂ ಸಾಮಾನ್ಯವಾಗಿ ತಿಳಿದಿರುವ ಪ್ರದೇಶವೇ. ಬೆಂಗಳೂರಿನಂತೆ ಹೈದ್ರಾಬಾದ್ ಯಾವಾಗಲೂ ಜನ ಸಂದಣಿಯಿಂದ ಕೂಡಿರುತ್ತದೆ. ಚಾಯ್ ಅಂಗಡಿಗಳು, ಸಮೋಸ, ಕಚೋರಿ, ಬಿರಿಯಾನಿ ಇನ್ನೂ ಹಲವಾರು ತಿನಿಸುಗಳು ಬೆಳಗ್ಗೆಯಿಂದ ರಾತ್ರಿಯವರೆವಿಗೂ ಸುವಾಸನೆ ಬೀರುತ್ತಾ ಇರುತ್ತದೆ. ಹೈದ್ರಾಬಾದ್‍ನಲ್ಲಿ ನೋಡಬೇಕಾದ ಹಲವಾರು ಪ್ರವಾಸಿ ತಾಣಗಳು ಇವೆ.

ಅವುಗಳಲ್ಲಿ 9 ಭಯಾನಕವಾದ ಪ್ರದೇಶಗಳು ಕೂಡ ಇವೆ ಎಂದು ನಿಮಗೆ ಗೊತ್ತೆ? ಆ ಪ್ರದೇಶದಲ್ಲಿನ ಸ್ಥಳೀಯ ಪ್ರಜೆಗಳು ಈ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಗಳನ್ನು ಆ ಪ್ರದೇಶಗಳ ಬಗ್ಗೆ ನೀಡುತ್ತಾರೆ. ಅವುಗಳು ಪ್ರಚಾರ ಎಂದು ಅಂದುಕೊಳ್ಳಬೇಕು ಅಥವಾ ಅವರ ಮೂಢ ನಂಬಿಕೆಗಳು ಎಂದು ಅಂದುಕೊಳ್ಳಬೇಕು ಅರ್ಥವಾಗುತ್ತಿಲ್ಲ. ರಾತ್ರಿಯ ಸಮಯದಲ್ಲಿ ವಿಭಿನ್ನವಾದ ಶಬ್ಧಗಳಿಂದ ಜನರಿಗೆ ಭಯವನ್ನು ಉಂಟು ಮಾಡುವ ಆ 9 ಪ್ರದೇಶಗಳ ಬಗ್ಗೆ ನಾವು ಲೇಖನದ ಮೂಲಕ ತಿಳಿಯೋಣ.

ರೋಡ್ ನಂ 12 ಬಂಜಾರಾಹಿಲ್ಸ್

ರೋಡ್ ನಂ 12 ಬಂಜಾರಾಹಿಲ್ಸ್

ಹೈದ್ರಾಬಾದ್‍ನ ವಿಲಾಸಿ ಜೀವನ ಸಾಗಿಸುವ ಹಾಗು ಅತ್ಯಂತ ಕಾಸ್ಟಲೀ ಪ್ರದೇಶವೆಂದರೆ ಅದು ಬಂಜಾರಾಹಿಲ್ಸ್. ಆದರೆ ಇಲ್ಲಿನ ಭಯಾನಕತೆ ಏನೆಂದರೆ ರೋಡ್ ನಂ 12 ನಲ್ಲಿ ವಿದ್ಯುತ್ ದೀಪಗಳು ತನಗೆ ತಾನೆ ಸ್ವಿಚ್ ಆಫ್ ಆಗುತ್ತದೆ ಎಂತೆ.

ರೋಡ್ ನಂ 12 ಬಂಜಾರಾಹಿಲ್ಸ್

ರೋಡ್ ನಂ 12 ಬಂಜಾರಾಹಿಲ್ಸ್

ರಾತ್ರಿಯ ಸಮಯದಲ್ಲಿ ವಾಹನಗಳು ಈ ಮಾರ್ಗ ತೆರಳಿದರೆ ಶೇಕಡ 80% ನಷ್ಟು ವಾಹನಗಳು ಪಂಚರ್ ಆಗುತ್ತದೆ ಎಂತೆ. ಹೈದ್ರಾಬಾದ್‍ನಲ್ಲಿ ಇಂದಿಗೂ ಈ ವಿಷಯವನ್ನು ಬಲವಾಗಿ ನಂಬುತ್ತಾರೆ.

ರವೀಂದ್ರ ನಗರ ಕಾಲೋನಿ

ರವೀಂದ್ರ ನಗರ ಕಾಲೋನಿ

ಅದು 2012ರ ವರ್ಷ ಹೈದ್ರಾಬಾದ್‍ನಲ್ಲಿನ ರವೀಂದ್ರನಗರ ಕಾಲೋನಿಯಲ್ಲಿ ದುಷ್ಟ ಶಕ್ತಿಗಳ ಸಂಚಾರವಿದೆ ಎಂದು ಪ್ರಚಾರ ಹಬ್ಬಿಸಿ ಸಮೀಪದ ಪ್ರದೇಶಗಳೆಲ್ಲವನ್ನು ಅಲ್ಲಾಡಿಸಿದವು.

ರವೀಂದ್ರ ನಗರ ಕಾಲೋನಿ

ರವೀಂದ್ರ ನಗರ ಕಾಲೋನಿ

ಎಲ್ಲರೂ ಮನೆಯ ಗೋಡೆಯ ಮೇಲೆ ಹಾಗು ಬಾಗಿಲುಗಳ ಮೇಲೆ ಅವರವರ ಧರ್ಮಕ್ಕೆ ಸಂಬಂಧಿಸಿದ ಮಂತ್ರಗಳನ್ನು ಮತ್ತು ದೇವರ ನಾಮಗಳನ್ನು ಬರೆಯುತ್ತಾರೆ. ಹಾಗೆ ಬರೆಯದೇ ಇರುವವರು ದೆವ್ವಗಳ ಮುಂದೆ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ನಿರ್ದಶನಗಳು ಇವೆ ಎಂದು ಸ್ಥಳೀಯರು ತಿಳಿಸುತ್ತಾರೆ.

ರವೀಂದ್ರ ನಗರ ಕಾಲೋನಿ

ರವೀಂದ್ರ ನಗರ ಕಾಲೋನಿ

ಇಲ್ಲಿ ದುಷ್ಟ ಶಕ್ತಿಗಳು ಇರುವ ಕಾರಣ, ದೈವ ಕೋಪದ ಒಂದು ರೂಪ ಎಂದು ಸ್ಥಳೀಯರ ಕಥನವಾಗಿದೆ. ಇದರಲ್ಲಿ ನಿಜ ಯಾವುದು ಎಂದು ಇಂದಿಗೂ ಯಾರಿಗೂ ತಿಳಿಯದು.

ಖೈರತಾಬಾದ್

ಖೈರತಾಬಾದ್

ಖೈರತಾಬಾದ್ದಲ್ಲಿನ ಸೈನ್ಸ್ ಕಾಲೇಜ್ ಪ್ರಸ್ತುತ ಈಗ ಒಂದು ಹಂಟೆಡ್ ಪ್ರದೇಶವಾಗಿ ಮಾರ್ಪಟಾಗಿದೆ. ಸೈನ್ಸ್ ಲ್ಯಾಬ್‍ನಲ್ಲಿ ಮರಣ ಹೊಂದಿರುವ ಮೃತ ದೇಹಗಳ ಮೇಲೆ ಪರಿಶೋಧನೆ ಮಾಡುವ ಸಮಯದಲ್ಲಿ ಮೃತ ದೇಹವು ಎದ್ದು ಕುಳಿತುಕೊಂಡಿತೊ ಅಥವಾ ಏನಾದರು ಭಯಾನಕವಾದ ಘಟನೆ ನಡೆಯಿತೊಸ ಗೊತ್ತಿಲ್ಲ. ಆದರೆ ಈ ಕಾಲೇಜ್‍ನ ಸಮೀಪದಲ್ಲಿಯೂ ಕೂಡ ಯಾರು ಕಾಲಿಡುವುದಿಲ್ಲ.

ಖೈರತಾಬಾದ್

ಖೈರತಾಬಾದ್

ಈ ಕಾಲೇಜ್‍ನಲ್ಲಿದ್ದ ವಾಚ್ ಮ್ಯಾನ್‍ನ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಇದೆ. ಉಪ್ಪಲ್ ಎಂಬ ಸ್ಟೇಡಿಯಂ ಅಂದಿಗೂ ಇಂದಿಗೂ ಭಯಾನಕವಾದ ಪ್ರದೇಶವಾಗಿಯೇ ಉಳಿದಿದೆ.

ಖೈರತಾಬಾದ್

ಖೈರತಾಬಾದ್

ಅಲ್ಲಿನ ಸಿಬ್ಬಂದಿ ಮತ್ತು ಪ್ರೇಕ್ಷಕರ ಸ್ಟೇಡಿಯಂನಲ್ಲಿನ ಲೈಟ್‍ಗಳೇ ಇಲ್ಲದ ಕಾರಿಡಾರ್‍ನಲ್ಲಿ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿದ್ದ ಒಂದು ವಿಚಿತ್ರವಾದ ಆಕಾರವನ್ನು ಹಲವಾರು ಮಂದಿ ನೋಡಿದ್ದೇವೆ ಎಂದು ಹೇಳುತ್ತಾರೆ. ಹಾಗೆಯೇ ಅಲ್ಲಿಯೇ ಮಾಯವಾಗುತ್ತದೆ ಎಂದು ಪ್ರಚಾರಗಳು ಇಂದಿಗೂ ಇವೆ.

ಷಂಷಾಬಾದ್ ಏಯರ್ ಫೋರ್ಟ್

ಷಂಷಾಬಾದ್ ಏಯರ್ ಫೋರ್ಟ್

ಷಂಷಾಬಾದ್ ಏಯರ್ ಫೋರ್ಟ್ ಹೈದ್ರಾಬಾದ್‍ನ ಪ್ರಸಿದ್ಧವಾದ ಸ್ಥಳ. ಸುಮಾರು 5000 ಎಕರೆಯಲ್ಲಿ ನಿರ್ಮಾಣ ಮಾಡಿರುವ ಈ ಏಯರ್ ಫೋರ್ಟ್ ಪ್ರಸ್ತುತ ದುಷ್ಟ ಶಕ್ತಿಗಳ ವಾಸಸ್ಥಾನವಾಗಿ ಪರಿಗಣಿಸಿದೆ. ಏರ್ ಫೋರ್ಟ್ ನಿರ್ಮಾಣಕ್ಕಿಂತ ಮುಂಚೆ ಕೆಲವು ಮಂದಿ ಮರಣಿಸಿದ್ದರು ಎಂದೂ ಅವರ ಆತ್ಮವೇ ಇಲ್ಲಿ ತಿರುಗಾಡುತ್ತಿದೆ ಎಂದು ಕೆಲವರು ಹೇಳುತ್ತಾರೆ.

ಷಂಷಾಬಾದ್ ಏಯರ್ ಫೋರ್ಟ್

ಷಂಷಾಬಾದ್ ಏಯರ್ ಫೋರ್ಟ್

ಒಂದು ದೇಹ 300 ಡಿಗ್ರಿಯಲ್ಲಿ ತನ್ನ ತಲೆಯನ್ನು ತಿರುಗಿಸುತ್ತಾ ಕುಳಿತುಕೊಂಡಿರುತ್ತಾನೆ ಎಂದು ಕೆಲವರು ಪ್ರತ್ಯಕ್ಷವಾಗಿ ಕಂಡ ಜನರು ಹೇಳುತ್ತಾರೆ. ಹಾಗೆಯೇ ರನ್‍ವೇ ನಲ್ಲಿ ಬಿಳಿ ಸೀರೆಯನ್ನು ತುಟ್ಟ ಮಹಿಳೆ ಡ್ಯಾನ್ಸ್ ಮಾಡಿಕೊಂಡು ತಿರುಗುತ್ತಿರುತ್ತದೆ ಎಂದು ಅಲ್ಲಿನ ಕ್ಯಾಮೆರಾದಲ್ಲಿ ಕಾಣಿಸಿದೆಯಂತೆ.

ತಲೆಯೇ ಇಲ್ಲದ ಆತ್ಮ

ತಲೆಯೇ ಇಲ್ಲದ ಆತ್ಮ

ಹೈದ್ರಾಬಾದ್‍ನ ಒಂದು ಮನೆಯಲ್ಲಿ ತಲೆಯೇ ಇಲ್ಲದ ಒಂದು ಆತ್ಮ ಇದೆ ಎಂದು ಕೆಲವರು ಹೇಳುತ್ತಾರೆ. ಆ ಮನೆಯ ಮೇಲೆ ಆತನಿಗೆ ಹೇಳಿಕೊಳ್ಳದ ಮಮಕಾರ ಇದ್ದ ಕಾರಣದಿಂದ ಆ ಮನೆಯಲ್ಲಿ ಮೃತನಾದನಂತೆ. ಹಾಗಾಗಿ ಇಂದಿಗೂ ಆ ಮನೆಯಲ್ಲಿಯೇ ಆ ಆತ್ಮ ವಾಸಿಸುತ್ತಿದೆ ಎಂದು ನಂಬಲಾಗಿದೆ.

ಅಪಾರ್ಟ್ ಮೆಂಟ್

ಅಪಾರ್ಟ್ ಮೆಂಟ್

ಸುಮಾರು 40 ವರ್ಷಗಳ ಹಿಂದೆ ಒಂದುವರೆ ವರ್ಷ ಒಂದು ಅಪಾರ್ಟ್‍ಮೆಂಟ್ ನಿರ್ಮಾಣ ಮಾಡಿದರು. ಆ ಅಪಾರ್ಟ್ ಮೆಂಟ್‍ನಲ್ಲಿ ಎಲ್ಲಾ ಕುಟುಂಬಿಕರು ಕೆಲವು ವರ್ಷಗಳವರೆವಿಗೂ ನೆಮ್ಮದಿಯ ಜೀವನವೇ ನಡೆಸಿದರು. ತದ ನಂತರ ಏನಾಯಿತೂ ಏನು ತಿಳಿಯದು ಎಲ್ಲರೂ ಒಬ್ಬಬ್ಬರೇ ಮರಣ ಹೊಂದುತ್ತಾ ಬಂದರು.

ಅಪಾರ್ಟ್ ಮೆಂಟ್

ಅಪಾರ್ಟ್ ಮೆಂಟ್

ಆದರೆ ಸುತ್ತ ಮುತ್ತ ನಿವಾಸಿಗಳು ಮಾತ್ರ ಈ ಅಪಾರ್ಟ್‍ಮೆಂಟ್‍ನಿಂದ ವಿಭಿನ್ನವಾದ ಶಬ್ಧಗಳು ಕೇಳಿಸುತ್ತವೆ ಎಂದು ಹೇಳುತ್ತಾರೆ. ಮುಖ್ಯವಾಗಿ ಮಹಿಳೆಯು ದೀನವಾಗಿ ಅಳುವ ಶಬ್ಧ ಕೇಳಿಸುತ್ತದೆ ಎಂದು ಹೇಳುತ್ತಾರೆ.

ಗೊಲ್ಕೋಂಡ ಕೋಟೆ

ಗೊಲ್ಕೋಂಡ ಕೋಟೆ

ಹೈದ್ರಾಬಾದ್‍ನ ಚರಿತ್ರೆಗೆ ಸಾಕ್ಷಿ ಗೊಲ್ಕೋಂಡ ಕೋಟೆ. ಇಲ್ಲಿಯೂ ದುಷ್ಟ ಶಕ್ತಿಗಳ ಸಂಚಾರವಿದೆ ಎಂದು ಕೆಲವರು ಹೇಳುತ್ತಾರೆ. ಕಳ್ಳರು ಈ ಕೋಟೆಯ ಸಂಪತ್ತನ್ನು ದೋಚಿಕೊಳ್ಳಲು ಬಂದು ಆತ್ಮಗಳಾಗಿ ಮಾರ್ಪಾಟಾದರು. ಕೋಟೆಯ ತಾರಾಮತಿ ದರ್ವಾಜ್‍ನ ಸಮೀಪದಲ್ಲಿ ವೆಶ್ಯರಾಣಿಯ ಸಂಚಾರವಿದೆ ಎಂದು ಪ್ರಚಾರವಿದೆ.

ಕುಂದನ್ ಬಾಗ್

ಕುಂದನ್ ಬಾಗ್

ಕುಂದನ್ ಬಾಗ್‍ನಲ್ಲಿ ಇಂದಿಗೂ ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿದಿದೆ. ಒಂದು ಕಳ್ಳ ಆ ಮನೆಗೆ ಪ್ರವೇಶ ಮಾಡಿದ ನಂತರ ಅಲ್ಲಿ 3 ಶವಗಳನ್ನು ಗುರುತಿಸಿದನಂತೆ. ಅಂದಿಗೆ ಆ ಶವಗಳು ಮೃತ ಹೊಂದಿ 3 ತಿಂಗಳುಗಾಳಗಿತ್ತಂತೆ. ಆದರೆ ಸ್ಥಳೀಯರು ಮಾತ್ರ ತಾಯಿ ಹಾಗು ಆವಳ ಇಬ್ಬರು ಮಕ್ಕಳನ್ನು 2 ದಿನದ ಹಿಂದೆಯೇ ಬೀದಿಯಲ್ಲಿ ಕಂಡೆವು ಎಂದು ಹೇಳುತ್ತಿದ್ದಾರೆ.

ಕುಂದನ್ ಬಾಗ್

ಕುಂದನ್ ಬಾಗ್

ರಾತ್ರಿಯ ಸಮಯದಲ್ಲಿ ಆ ಮನೆಯ ಸುತ್ತಲೂ ಯಾರೂ ಕ್ಯಾಂಡಿಲ್ ಹಿಡಿದುಕೊಂಡು ತಿರುಗುತ್ತಾ ಇರುತ್ತಾರೆ ಎಂದು ವಂದತಿ ಕೂಡ ಹಬ್ಬಿತ್ತು.

ರಸ್ತೆಯ ಮೂಲಕ

ರಸ್ತೆಯ ಮೂಲಕ

ಹೈದ್ರಾಬಾದ್‍ನಿಂದ ಬೆಂಗಳೂರಿಗೆ ಸುಮಾರು 575 ಕಿ.ಮೀ ದೂರದಲ್ಲಿದ್ದು, ಹಲವಾರು ರೈಲ್ವೆ, ವಿಮಾನ, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X