Search
  • Follow NativePlanet
Share
» »ಮರುಳು ಮಾಡುವ ಹೊನ್ನೆಮರುಡು

ಮರುಳು ಮಾಡುವ ಹೊನ್ನೆಮರುಡು

By Vijay

ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ ಪ್ರಿಯರಿಗೆ ಇಲ್ಲಿನ ಎಲ್ಲಾ ಸ್ಥಳಗಳೂ ಕುತೂಹಲ ಹುಟ್ಟಿಸುತ್ತವೆಂದರೆ ತಪ್ಪಾಗಲಾರದು. ಚಾರಣ ಹೊರಡುವುದು, ಐತಿಹಾಸಿಕ ಆಕರ್ಷಣೆಗಳಿಗೆ ಭೇಟಿ ನೀಡುವುದು ಪ್ರವಾಸದ ಅವಿಭಾಜ್ಯ ಅಂಗಗಳು.

ಮೋಡಿ ಮಾಡುವ ಮಾರ್ಚ್ : ಎಕ್ಸ್ ಪೆಡಿಯಾದಲ್ಲಿ ಫ್ಲೈಟ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ

ಪ್ರಸ್ತುತ ಲೇಖನದ ಮೂಲಕ ಒಂದು ಸುಂದರ ಪರಿಸರದ ಹಿತಕರವಾದ ಸ್ಥಳದ ಕುರಿತು ತಿಳಿಯಿರಿ. ಈ ಪ್ರವಾಸಿ ತಾಣವು ಶಿವಮೊಗ್ಗ ಜಿಲ್ಲೆಯಲ್ಲಿದ್ದು, ಭೇಟಿ ನೀಡುವವರಿಗೆ ಅನಂತ ಸಂತಸವನ್ನು ಕರುಣಿಸುತ್ತದೆ. ಅಲ್ಲದೇ ಚಾರಣವನ್ನು ನೆಚ್ಚಿಕೊಂಡವರಿಗೆ ಖುಷಿಯನ್ನೂ ನೀಡುವಂತಹ ಸ್ಥಳ ಇದಾಗಿದೆ. ಈ ಸುಂದರ ಸ್ಥಳದ ಹೆಸರು ಹೊನ್ನೆಮರಡು. ಈ ಸ್ಥಳಕ್ಕೆ ನಿಮ್ಮ ಪ್ರವಾಸ ಕೈಗೊಂಡರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೀವೇ ಮನಸಾರೆ ಮೆಚ್ಚಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಈ ಸ್ಥಳದ ಬಗ್ಗೆ ಸಂಕ್ಷಿಪ್ತ ವಿವರ ಈ ಲೇಖನದಲ್ಲಿ.

ವಿಶೇಷ ಲೇಖನಗಳು : ಶಿವನ ಮುಖದಂತೆ ಕಂಗೊಳಿಸುವ ಶಿವಮೊಗ್ಗ ಸಾಗರದಷ್ಟು ಆನಂದ ಕರುಣಿಸುವ ಸಾಗರ

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಯಾರು ಸಾಹಸವನ್ನು ಇಷ್ಟ ಪಡುತ್ತಾರೋ, ಜಲ ಕ್ರೀಡೆಗಳನ್ನು ಇಷ್ಟ ಪಡುತ್ತಾರೋ ಅಂತಹವರಿಗೆ ಹೊನ್ನೇಮರಡು ಅತ್ಯಂತ ಪ್ರಿಯ ಎನಿಸುವುದರಲ್ಲಿ ಸಂಶಯವಿಲ್ಲ. ಹೊನ್ನೇಮರಡು ಹಳ್ಳಿಯು, ಹೊನ್ನೆಮರಡು ಎಂಬ ಅದೇ ಹೆಸರಿನ ಜಲಾಶಯದ ಬಳಿಯಿರುವ ಬೆಟ್ಟದ ಇಳಿಜಾರಿನಲ್ಲಿ ಸ್ಥಿತವಿದೆ. ಈ ತಾಣವು ಶಿವಮೂಗ್ಗ ಜಿಲ್ಲೆಯಲ್ಲಿಯ ಸಾಗರ ತಾಲೂಕಿನಲ್ಲಿದ್ದು, ಬೆಂಗಳೂರಿನಿಂದ 392 ಕೀ. ಮಿ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: akalle

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಹೊನ್ನೆಮರಡು ತನ್ನ ಹೆಸರನ್ನು 'ಹೊನ್ನೆ' ಮರದಿಂದ ಪಡೆದಿದೆಯಾದರೂ ಇದರ ಅಕ್ಷರಶಃ ಅರ್ಥ "ಬಂಗಾರದ ಸರೋವರ" ಎಂದಾಗುತ್ತದೆ. ಇಲ್ಲಿ ಕಂಡುಬರುವ ಬಂಗಾರದಂತಹ ಸೂರ್ಯೋದಯದ ನೋಟವೂ ಸಹ ಇದಕ್ಕೆ ಪೂರಕವಾಗಿದೆ ಎಂಬ ಅಂಶವು ಮನದಲ್ಲಿ ಮೂಡಿದರೂ ತಪ್ಪಿಲ್ಲ. ಹೊನ್ನೇಮರಡು ಗ್ರಾಮವು ಶರಾವತಿಯ ಹಿನ್ನೀರಿನಲ್ಲಿ ಸ್ಥಿತವಿರುವ ಅದ್ಭುತ ಪ್ರದೇಶವಾಗಿದೆ.

ಚಿತ್ರಕೃಪೆ: Srinath.holla

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಹೊನ್ನೆಮರಡುವಿನ ಪ್ರಮುಖ ಆಕರ್ಷಣೆಯೆಂದರೆ, ಇದರ ದ್ವೀಪ ರಚನೆ. ಇದು ಜಲಾಶಯದ ಮಧ್ಯ ಭಾಗದಲ್ಲಿರುವುದರಿಂದ ವಿಶೇಷವಾಗಿ ಹಾಗೂ ಆಕರ್ಷಕವಾಗಿ ಕಂಡುಬರುತ್ತದೆ. ಪ್ರವಾಸಿಗರಿಗೆ ರಾತ್ರಿಯ ಕ್ಯಾಂಪ್ ಗಳು ಕೂಡಾ ಇಲ್ಲಿ ವ್ಯವಸ್ಥೆ ಮಾಡಲಾಗುವುದರಿಂದ ಇದೊಂದು ಮಹತ್ವದ ಪ್ರವಾಸಿ ಆಕರ್ಷಣೇಯೂ ಸಹ ಆಗಿದೆ. ಇಲ್ಲಿ ಸಿಹಿ ನೀರಿನ ಈಜುಕೊಳ ಹಾಗೂ ಸುತ್ತಲೂ ದೊಡ್ಡ ಅರಣ್ಯ ಪ್ರದೇಶವಿದ್ದು ವಿನೂತನ ಅನುಭವ ಕರುಣಿಸುತ್ತದೆ.

ಚಿತ್ರಕೃಪೆ: Srinath.holla

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಅಲ್ಲದೆ, ಇಲ್ಲಿ ಕ್ಯಾಂಪ್ ನಲ್ಲಿ ಪಾಲ್ಗೋಂಡವರಿಗಾಗಿ ರಾಫ್ಟಿಂಗ್ (ನೀರಿನಲ್ಲಿ ತೆಪ್ಪದ ಪ್ರಯಾಣ), ಈಜುವುದು ಹಾಗೂ ಚಾರಣ ಮಾಡಲು ಅವಕಾಶ ಸಹ ಮಾಡಿಕೊಡಲಾಗುತ್ತದೆ. ಈ ಕಾರಣಕ್ಕಾಗಿ ಚಾರಣವನ್ನು ಇಷ್ಟ ಪಡುವ ಎಲ್ಲರೂ ವರ್ಷಕ್ಕೊಮ್ಮೆಯಾದರೂ ಈ ಸ್ಥಳಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಾ ಹೋದರೆ ವೈವಿಧ್ಯಮಯ ಜೀವರಾಶಿಗಳನ್ನು ನೋಡಬಹುದು.

ಚಿತ್ರಕೃಪೆ: Dheepak Ra

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಮನಸ್ಸಿಗೆ ಪ್ರಸನ್ನಗೊಳಿಸುವಂತಹ ವಾತಾವರಣ ಇಲ್ಲಿರುವುದರಿಂದ ಬೆಳಗಿನ ಜಾವ ಇಲ್ಲಿಗೆ ಬರುವುದು ಸೂಕ್ತ. ಇಲ್ಲಿಯೇ ಹತ್ತಿರದಲ್ಲಿರುವ ವಿಶ್ಯ ವಿಖ್ಯಾತಿ ಪಡೆದ ಜೋಗ್ ಜಲಪಾತಕ್ಕೂ ಸಹ ಭೇಟಿ ನೀಡಬಹುದು. ಏಕೆಂದರೆ ಇಲ್ಲಿಯವರೆಗೆ ಬಂದು ಜೋಗಕ್ಕೆ ಭೇಟಿ ನೀಡದೇ ಇದ್ದರೆ ಹೊನ್ನೇಮರಡು ಪ್ರಯಾಣವು ಅಪೂರ್ಣವಾಗಬಹುದು!

ಚಿತ್ರಕೃಪೆ: Shuba

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಶರಾವತಿ ನದಿಯ ಮೂಲದಿಂದ ಹುಟ್ಟುವ ಈ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿಯೇ ಇದೆ. ಇದು 829 ಅಡಿಯ ಎತ್ತರದ ಜಲಪಾತವಾಗಿದೆ. ಅಲ್ಲದೇ ಜೋಗ್ ಫಾಲ್ಸ್ ನಿಂದ 30 ಕಿ.ಮೀ ದೂರದಲ್ಲಿರುವ ದಬ್ಬೆ ಫಾಲ್ಸ್ ಕೂಡಾ ನೋಡಲೇ ಬೇಕಾದ ಜಲಪಾತವಾಗಿದೆ.

ಚಿತ್ರಕೃಪೆ: lohit v

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಹೊನ್ನೆಮರಡುವಿಗೆ ಅತ್ಯಂತ ಹತ್ತಿರದಲ್ಲಿರುವ ಪ್ರಮುಖ ರೈಲ್ವೆ ನಿಲ್ದಾಣವೆಂದರೆ ಶಿವಮೊಗ್ಗ ರೈಲ್ವೆ ನಿಲ್ದಾಣ. ಅಲ್ಲದೆ (16227) ಸಂಖ್ಯೆಯ ತಳಗುಪ್ಪ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ ಲಭ್ಯವಿದ್ದು ತಳಗುಪ್ಪದವರೆಗಿದೆ (ರೈಲಿನಲ್ಲಿ ಶಿವಮೊಗ್ಗ ಹಾಗೂ ಸಾಗರದ ನಂತರ ಬರುವ ಸಣ್ಣ ಹಳ್ಳಿ). ನಂತರ ತಳಗುಪ್ಪದಿಂದ ಹೊನ್ನೆಮರುಡು ಕೇವಲ 10 ಕಿ.ಮೀ ದೂರವಿದೆ. ಅಲ್ಲದೇ ಬೆಂಗಳೂರಿನಿಂದ ಸ್ವಂತ ವಾಹನಗಳ ಮೂಲಕವೂ ಬರಬಹುದು. ಜೊತೆಗೆ ಸ್ಥಳೀಯ ವಾಹನಗಳಾದ ಬಸ್ ಅಥವಾ ಕ್ಯಾಬ್ ಸೌಲಭ್ಯಗಳೂ ಸಹ ಶಿವಮೊಗ್ಗದಿಂದ ದೊರೆಯುತ್ತವೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಸಂತೋಷವನ್ನು ಕೊಡುತ್ತದೆ.

ಚಿತ್ರಕೃಪೆ: Srinath.holla

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಶರಾವತಿ ಹಿನ್ನೀರಿನಲ್ಲಿ ದ್ವೀಪ ಸಮೂಹದಲ್ಲಿ ರೂಪಗೊಂಡಿರುವ ಹೊನ್ನೆಮರುಡು.

ಚಿತ್ರಕೃಪೆ: Srinath.holla

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಹೊನ್ನೆಮರುಡುವಿಗೆ ಬೆಂಗಳೂರಾದಿಯಾಗಿ ಹಲವು ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಎಲ್ಲರಿಗೂ ಇಲ್ಲಿ ಇಷ್ಟವಾಗುವ ಬಲು ನೆಚ್ಚಿನ ಚಟುವಟಿಕೆಯೆಂದರೆ ತೆಪ್ಪ ಸವಾರಿ. ಶರಾವತಿ ಹಿನ್ನೀರಿನಲ್ಲಿ ವಿಹರಿಸುವುದೇ ಒಂದು ಸುಂದರ ಅನುಭವ.

ಚಿತ್ರಕೃಪೆ: Sarthak Banerjee

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಬೆಳಂಬೆಳಿಗ್ಗೆ ಸೂರ್ಯನ ದರುಶನ ಪಡೆದು ಹಾಯಾಗಿ ತೆಪ್ಪ ಸವಾರಿ ಮಾಡುವುದೂ ಒಂದು ಅದ್ಭುತ ಅನುಭವ. ಏನಂತಿರಿ?

ಚಿತ್ರಕೃಪೆ: Srinath.holla

ಹೊನ್ನಿನಂತಹ ಹೊನ್ನೆಮರುಡು:

ಹೊನ್ನಿನಂತಹ ಹೊನ್ನೆಮರುಡು:

ಸುಂದರ, ಆಕರ್ಷಣೀಯ ಪರಿಸರದ ಹೊನ್ನೆಮರುಡು.

ಚಿತ್ರಕೃಪೆ: Lensman vishy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X