Search
  • Follow NativePlanet
Share
» »ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ

ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ

By Vijay

ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್ಟೆ ಸರಳವಾದ ಜಿಲ್ಲೆಯೆಂದರೆ ಕಾರವಾರ ಅಥವಾ ನಮ್ಮೆಲ್ಲರಿಗೂ ಗೊತ್ತಿರುವ ಉತ್ತರ ಕನ್ನಡ ಜಿಲ್ಲೆ.

ಜೀವ ನದಿ ಕಾಳಿ ಹರಿದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡುವುದೆಂದರೆ ಖಂಡಿತವಾಗಿಯೂ ಮನ ರೋಮಾಂಚನಗೊಳ್ಳದೆ ಇರಲಾರದು. ಏಕೆಂದರೆ ಇಲ್ಲಿ ಕಂಡುಬರುವ ಅನೇಕ ಪ್ರವಾಸಯೋಗ್ಯ ತಾಣಗಳು ಪ್ರವಾಸಿಗರನ್ನು ಒಂದೆ ಕ್ಷಣದಲ್ಲಿ ತಮ್ಮ ಅಂದ ಚೆಂದ ಹಾಗೂ ವಿಶಿಷ್ಟತೆಗಳಿಂದ ಆಕರ್ಷಿಸಿಬಿಡುತ್ತವೆ.

ಮತ್ತೊಂದು ಕುತೂಹಲಕರ ಸ್ಥಳ : ಸಾಗರದಷ್ಟು ಆನಂದ ನೀಡುವ ಸಾಗರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಹಲವು ಆಕರ್ಷಣೆಗಳ ಪೈಕಿ ಹೊನ್ನಾವರ ತಾಲೂಕು ಸಹ ಒಂದು. ಒಂದಾನೊಂದು ಕಾಲದಲ್ಲಿ ವಿಜೃಂಭಿಸಿದ ಈ ಪಟ್ಟಣ ಐತಿಹಾಸಿಕ ಶ್ರೀಮಂತಿಕೆಯಿಂದ ಕೂಡಿದ್ದು ಸಮಯ ಜರಿದಂತೆ ಕಾಲದ ಗರ್ಭದಲ್ಲಿ ಕಳೆದುಹೋಗಿರುವ ಒಂದು ಕುತೂಹಲಕರ ಸ್ಥಳವಾಗಿ ಇಂದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ.

ಪ್ರಸ್ತುತ ಲೇಖನದ ಮೂಲಕ ಹೊನ್ನಾವರ ಪಟ್ಟಣದ ವಿಶೇಷ ಹಾಗೂ ಅದರ ಸುತ್ತಮುತ್ತಲಿರುವ ಹೊನ್ನಿನಂತಹ ಪ್ರವಾಸಿ ತಾಣಗಳ ಕುರಿತು ಮಾಹಿತಿ ಪಡೆಯಿರಿ. ಪ್ರಶಾಂತತೆಯಿಂದ ಕೂಡಿದ ಹಲವು ಸುಂದರ ಕಡಲ ಕಿನಾರೆಗಳ ದರ್ಶನ ಮಾಡಬಯಸಿದಲ್ಲಿ ಈ ಪಟ್ಟಣಕ್ಕೊಮ್ಮೆ ಭೇಟಿ ಇತ್ತು ನೋಡಿ.

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹೊನ್ನಾವರ ಒಂದು ಸುಂದರವಾದ ಬಂದರು ಪಟ್ಟಣ. ಹೊನ್ನಾವರ ತಾಲೂಕಿಗೆ ಕೇಂದ್ರವಾಗಿರುವ ಈ ಪಟ್ಟಣ ಹಿಂದೊಮ್ಮೆ ಐತಿಹಾಸಿಕವಾಗಿ ಹೆಚ್ಚು ಗುರುತರವಾದ ಪ್ರದೇಶವಾಗಿ ಗಮನ ಸೆಳೆದಿತ್ತು.

ಚಿತ್ರಕೃಪೆ: Nagendra Mayya

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಇದರ ಇತಿಹಾಸ ಗಮನಿಸುವುದಾದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಆದಾಗ್ಯೂ ಕೆಲವು ಅಧ್ಯನಕಾರರ ಪ್ರಕಾರ, ಜೈನ ರಾಮಾಯಣದಲ್ಲಿ ಇದನ್ನು ಹನುರುಹಾ ದ್ವೀಪ ಎಂದು ಸಂಭೋದಿಸಲಾಗಿದೆ.

ಚಿತ್ರಕೃಪೆ: Ravi Aparanji

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಇನ್ನೂ ಗಮನಿಸಿದಾಗ 1342 ರಲ್ಲಿ ಆಫ್ರಿಕಾ ದೇಶದ ಯಾತ್ರಿ ಇಬ್ನ್ ಬತುತಾ ಎಂಬಾತನು ಈ ಪಟ್ಟಣವನ್ನು ಹೊನ್ನಾವರ ಅಥವಾ ಹಿನೌರ್ ಎಂದು ಕರೆದಿರುವುದು ಕಂಡುಬರುತ್ತದೆ. ಹಿಂದಿನ ಸಮಯದಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೊನ್ನಾವರ ಬಂದರು ನಗರಿಯಾಗಿ ಹೆಸರುವಾಸಿಯಾಗಿತ್ತು.

ಚಿತ್ರಕೃಪೆ: Isroman.san

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಕರ್ನಾಟಕ ರಾಜ್ಯದ ವೈಶಿಷ್ಟ್ಯವಾದ ಪುರಾತನ ಯಕ್ಷಗಾನ ಕಲೆ ಹಾಗೂ ತಾಳಮದ್ದಲೆ ಕಾರ್ಯಕ್ರಮಗಳು ಹೊನ್ನಾವರದ ಪ್ರಮುಖ ಆಕರ್ಷಣೆಗಳು. ಪ್ರವಾಸಿಗರು ಹೊನ್ನಾವರಕ್ಕೆ ಭೇಟಿ ನೀಡಿದ್ದಾಗ ಈ ಕಲೆಯನ್ನು ಒಮ್ಮೆಯಾದರೂ ಆಸ್ವಾದಿಸಲೇಬೇಕು.

ಚಿತ್ರಕೃಪೆ: Hegades

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಇನ್ನೊಂದು ವಿಶೇಷವೆಂದರೆ ಸುಮಾರು ಎರಡು ಕಿ.ಮೀ ಗಿಂತಲೂ ಅಧಿಕವಾದ ಸೇತುವೆಯಿರುವುದು ಹೊನ್ನಾವರದಲ್ಲೆ. ಈ ಸೇತುವೆಯನ್ನು ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು ನೋಡಲು ನಯನಮನೋಹರವಾಗಿ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಕರಿಕಣ್ಣಮ್ಮ ದೇವಿ ನೆಲೆಸಿರುವ ಗುಡ್ಡದ ಮೇಲಿಂದ ಈ ಸೇತುವೆಯ ನೋಟ ವರ್ಣನಾತೀತ. ಚಿತ್ರವನ್ನು ಗಮನವಿಟ್ಟು ನೋಡಿ, ದೂರದಲ್ಲಿರುವ ಸೇತುವೆಯ ದೃಶ್ಯ.

ಚಿತ್ರಕೃಪೆ: Ravi Aparanji

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಅಲ್ಲದೆ ಹೊನ್ನಾವರದಿಂದ ಅತಿ ಕಡಿಮೆ ದೂರದ ಪರೀಧಿಯಲ್ಲೆ ಸಾಕಷ್ಟು ಗಮ್ಯ ಪ್ರವಾಸಿ ತಾಣಗಳಿದ್ದು ಹೊನ್ನಾವರಕ್ಕೊಮೆ ಭೇಟಿ ನೀಡಿದರೆ ಸುಲಭವಾಗಿ ಈ ಎಲ್ಲ ತಾಣಗಳನ್ನು ಯೋಜನಾಬದ್ಧವಾಗಿ ಸಂದರ್ಶಿಸಿ ಆನಂದಪಡಬಹುದು. ಕೆಲವು ಗುರುತರವಾದ ಪ್ರವಾಸಿ ವಿಶೇಷಗಳನ್ನು ಮುಂದಿನ ಸ್ಲೈಡುಗಳಲ್ಲಿ ತಿಳಿಸಲಾಗಿದೆ.

ಚಿತ್ರಕೃಪೆ: Ashok Neelakanta

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಇಡಗುಂಜಿ ಮಹಾಗಣಪತಿ ದೇವಸ್ಥಾನ ಹೊನ್ನಾವರದ ಬಳಿಯಿದ್ದು ಸಾಕಷ್ಟು ಪ್ರಖ್ಯಾತಿ ಪಡೆದ ದೇವಾಲಯವಾಗಿದೆ. ಗಣಪನ ವಿಗ್ರಹವನ್ನು "ಸ್ಯಾಂಡ್ ಸ್ಟೋನ್" ಕಲ್ಲಿನಲ್ಲಿ ಕೆತ್ತಲಾಗಿದ್ದು ನಿಂತಿರುವ ಭಂಗಿಯಲ್ಲಿದೆ. ಅತಿ ಪ್ರಭಾವಿ ಗಣಪತಿ ಎಂದು ಕರೆಯಲ್ಪಡುವ ಇಡಗುಂಜಿ ಗಣಪನ ಕ್ಷೇತ್ರವು ಹೊನ್ನಾವರದಿಂದ ಹನ್ನೆರಡು ಕಿ.ಮೀ ದೂರದಲ್ಲಿದೆ.

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಾವರದಲ್ಲಿ ಭೇಟಿ ಮಾಡಬಹುದಾದ ಮತ್ತೊಂದು ದೇವಸ್ಥಾನವೆಂದರೆ ಕಾಳಿ ದೇವಿಗೆ ಮುಡಿಪಾದ ಕರಿಕಣ್ಣಮ್ಮನ ದೇವಸ್ಥಾನ. ಇದು ಹೊನ್ನಾವರದ ಪಶ್ಚಿಮಘಟ್ಟಗಳಲ್ಲಿದ್ದು ನಯನಮನೋಹರವಾದ ಪ್ರಾಕೃತಿಕ ಸೊಬಗನ್ನು ಕರುಣಿಸುತ್ತದೆ. ಗುಡ್ಡದ ಮೇಲಿರುವ ಈ ದೇವಸ್ಥಾನದಿಂದ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯನ್ನು ನೋಡಿದಾಗ ರೋಮಾಂಚನ ಉಂಟಾಗುತ್ತದೆ. ಸಾಂದರ್ಭಿಕ ಚಿತ್ರ.

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಅಪ್ಸರಕೊಂಡ ಜಲಪಾತ : ಸ್ವರ್ಗದಲ್ಲಿರುವ ಅಪ್ಸರೆಯರೆ ಬೆರಗಾಗಿ ವಿಶ್ರಾಂತಿ ಸಮಯವನ್ನು ಆಸ್ವಾದಿಸಲೆಂದು ಧರೆಗೆ ಬಂದಾಗ ಇಲ್ಲಿ ಕಾಲ ಕಳೆಯುತ್ತಿದ್ದರಂತೆ. ಅಮೋಘ ಸೃಷ್ಟಿ ಸೌಂದರ್ಯದಿಂದ ಕೂಡಿರುವ ಈ ಜಲಪಾತವು ಅಪ್ಸರಕೊಂಡ ಜಲಪಾತ ಎಂದೆ ಪ್ರಖ್ಯಾತಿಗಳಿಸಿದೆ. ಹೊನ್ನಾವರದಿಂದ ಕೇವಲ ಆರು ಕಿ.ಮೀ ದೂರದಲ್ಲಿ ಈ ಜಲಪಾತವಿದೆ.

ಚಿತ್ರಕೃಪೆ: uttarakannada.nic.in

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಅಪ್ಸರಕೊಂಡ ಜಲಪಾತ ತಾಣದ ಬಳಿಯಲ್ಲೆ ಅಪ್ಸರಕೊಂಡ ಹೆಸರಿನ ಕಡಲ ತೀರವೂ ಸಹ ಇದ್ದು ಪ್ರವಾಸಿಗರಿಗೆ ಹೆಚ್ಚಿನ ಸಂತಸ ಕರುಣಿಸುತ್ತದೆ.

ಚಿತ್ರಕೃಪೆ: Isroman.san

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಅಪ್ಸರಕೊಂಡ ಜಲಾಪತದ ಹಿಂದಿನ ಬದಿಯಲ್ಲಿ ದೇವಸ್ಥಾನವಿದ್ದು ಅಪ್ಸರಕೊಂಡಕ್ಕೆ ಆಗಮಿಸುವ ಪ್ರವಾಸಿಗರು ಈ ದೇವಾಲಯಕ್ಕೂ ಸಹ ಭೇಟಿ ನೀಡುತ್ತಾರೆ. ಈ ದೇವಸ್ಥಾನದಲ್ಲಿ ಉಮಾಂಟಾ ಮಹಾಗಣಪತಿ ಹಾಗೂ ಉಗ್ರನರಸಿಂಹ ದೇವರು ನೆಲೆಸಿದ್ದಾರೆ. ಒಂದೆಡೆ ಸಮುದ್ರ ಇನ್ನೊಂದೆಡೆ ದಟ್ಟ ಹಸಿರಿನ ಕಾಡುಗಳಿದ್ದು ಭವ್ಯ ಪರಿಸರ ಹೊಂದಿದೆ.

ಚಿತ್ರಕೃಪೆ: Isroman.san

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಾವರದಿಂದ ಕೇವಲ ಮೂರ್ನಾಲ್ಕು ಕಿ.ಮೀ ದೂರದಲ್ಲಿ ರಾಮತೀರ್ಥ ಎಂಬ ಪವಿತ್ರ ಕ್ಷೇತ್ರವಿದೆ. ಹೊನ್ನಾವರದಿಂದ ಚಂದಾವರಕ್ಕೆ ಹೋಗುವ ಮಾರ್ಗದಲ್ಲಿ ಈ ಕಲ್ಯಾಣಿಯಿದ್ದು ಇದರಲ್ಲಿ ಎರಡು ಜಾಗಗಳಿಂದ ನೀರು ಧುಮುಕುತ್ತದೆ. ಇವುಗಳನ್ನು ರಾಮತೀರ್ಥ ಹಾಗೂ ಲಕ್ಷ್ಮಣತೀರ್ಥಗಳೆಂದು ಕರೆಯುತ್ತಾರೆ. ಸ್ಥಳಪುರಾಣದಂತೆ ಇಲ್ಲಿ ಹಿಂದೆ ರಾಮ, ಸೀತೆ ಹಾಗೂ ಲಕ್ಷ್ಮಣರು ಸ್ನಾನ ಮಾಡಿದ್ದರಂತೆ.

ಚಿತ್ರಕೃಪೆ: youtube

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ನಗರಬಸ್ತಿಕೇರಿ ಹೊನ್ನಾವರದಲ್ಲಿ ನೋಡಬಹುದಾದ ಐತಿಹಾಸಿಕ ಆಕರ್ಷಣೆಯಾಗಿದೆ. ಗೇರುಸೊಪ್ಪ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ಈ ಹಳ್ಳಿಯಲ್ಲಿ ಚತುರ್ಮುಖ ಬಸದಿ ಹಾಗೂ ಇತರೆ ಪ್ರಾಚೀನ ದೇವಾಲಯಗಳ ರಚನೆಗಳನ್ನು ಕಾಣಬಹುದು.

ಚಿತ್ರಕೃಪೆ: uttarakannada.nic.in

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಿನಂತಹ ಆಕರ್ಷಣೆಗಳ ಹೊನ್ನಾವರ:

ಹೊನ್ನಾವರವು ಹುಬ್ಬಳ್ಳಿಯಿಂದ 177 ಕಿ.ಮೀ, ಕಾರವಾರದಿಂದ 91 ಕಿ.ಮೀ ಹಾಗೂ ಬೆಂಗಳೂರಿನಿಂದ 490 ಕಿ.ಮೀ ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಕೊಂಕಣ ರೈಲು ಮಾರ್ಗವು ಹೊನ್ನಾವರದ ಮೂಲಕ ಹಾದುಹೋಗುವುದರಿಂದ ಮಂಗಳೂರು ಅಥವಾ ಮುಂಬೈನಿಂದಲೂ ಸಹ ಹೊನ್ನಾವರಕ್ಕೆ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Dinesh Valke

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X