ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...

Written by:
Updated: Monday, July 17, 2017, 13:05 [IST]
Share this on your social network:
   Facebook Twitter Google+ Pin it  Comments

ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು "ಭಾರತದ ನಯಾಗಾರಾ ಜಲಪಾತ" ಎಂದು ಸಹ ಕರೆಯುತ್ತಾರೆ. ಈ ಜಲಪಾತವು ಔಷಧಿಗಳನ್ನು ಹಾಗೂ ಹಲವಾರು ಗಿಡಮೂಲಿಕೆಗಳನ್ನು ಹೊಂದಿರುವ ಜೀವ ಸಂರಕ್ಷಕವಾದ ಜಲಪಾತವೆಂದೇ ಹೇಳಬಹುದಾಗಿದೆ.

ಈ ಜಲಪಾತದಲ್ಲಿ ಸ್ನಾನ ಮಾಡುವುದೆಂದರೆಯೇ ಅದು ಸುಂಗಧಯುಕ್ತವಾದ ಔಷಧಿಯಲ್ಲಿ ಸ್ನಾನ ಮಾಡಿದಂತೆ ಹಾಗೂ ದೋಣಿ ಸವಾರಿ ಮಾಡುವುದಕ್ಕೆ ಅದ್ಭುತ ಜಲಪಾತವೆಂದೇ ಹೇಳಬಹುದಾಗಿದೆ. ಇಲ್ಲಿನ ಕಲ್ಲು ಏಷ್ಯಾದಲ್ಲಿಯೇ ಅತ್ಯಂತ ಹಳೆಯಾದಾದುದು ಎಂದು ಎಂದು ಪರಿಗಣಿಸಲ್ಪಟ್ಟಿದೆ.

ಇಂತಹ ಸೊಬಗನ್ನು ಹೊಂದಿರುವ ಜಲಪಾತವನ್ನು ತಮಿಳುನಾಡಿನ ಜನರು "ಮರಿಕೊಟ್ಟಾಯಂ" ಎಂದು ಕೂಡ ಕರೆಯುತ್ತಾರೆ. ಪ್ರಸ್ತುತ ಲೇಖನದಲ್ಲಿ ಹೊಗೆನಕಲ್ ಜಲಪಾತದ ಬಗ್ಗೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ಹೊಗೆನಕಲ್ ಜಲಪಾತದ ಪ್ರಕೃತಿಯ ದೃಶ್ಯ

ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾವೇರಿ ನದಿ ಮೇಲಿರುವ ಜಲಪಾತವಾಗಿದೆ. ಜಲಪಾತದ ಸೌಂದರ್ಯವು ಮನಮೋಹಕವಾಗಿದ್ದು, ಶಕ್ತಿಯುತವಾದ ಔಷಧಿಯ ಚಿಕಿತ್ಸೆ, ಚಾರಣ ಮಾರ್ಗಗಳು ದೋಣಿ ಸವಾರಿಯನ್ನು ಕೂಡ ಇಲ್ಲಿ ಇವೆ.

ಇಲ್ಲಿನ ಅದ್ಭುತ ಅನುಭವ ಪಡೆಯಲು ಸಾವಿರಾರು ಪ್ರವಾಸಿಗರು ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಲಪಾತವು ನೀರಿನಿಂದ ತುಂಬಿ ತುಳುವ ದೃಶ್ಯ ಎಂಥವರನ್ನು ರೋಮಾಂಚನಗೊಳಿಸದೇ ಇರದು.

ಹೊಗೆನಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟಿದೆ.

PC:Mithun Kundu

 

 

 

ಪ್ರವಾಸಿಗರು

ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಈ ಜಲಪಾತದ ಸೌಂದರ್ಯವನ್ನು ಕಾಣುತ್ತಾ ಮೈಮರೆಯುತ್ತಾರೆ. ಶಾಂತಿಯುತವಾದ ವಾತಾವರಣ, ತಂಪಾದ ಗಾಳಿ, ಪಕ್ಷಿಗಳ ಇಂಪುನಾದ ಜಲಪಾತವು ರ್ಭೋಗರೆಯುವ ಶಬ್ದ ಇವೆಲ್ಲಾವು ಎಂಥವರನ್ನು ಮಂತ್ರ ಮುಗ್ಧಗೊಳಿಸದೇ ಇರಲಾರದು.

ದಿವ್ಯವಾದ ಔಷಧಿ ಗುಣಗಳನ್ನು ಹೊಂದಿರುವ ಈ ನೀರನ್ನು ವಿಷೇಶವಾದ ಶಕ್ತಿಯು ಅಡಗಿದೆ ಎಂದು ಸ್ಥಳೀಯರ ನಂಬುತ್ತಾರೆ. ದೋಣಿಯಲ್ಲಿ ಪ್ರಯಾಣ ಮಾಡುವಾಗ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟುಮಾಡುತ್ತದೆ ಈ ಹೊಗೆನಕಲ್ ಜಲಪಾತ.

PC:Ashwin Kumar

 

ಮೀನು

ಈ ಜಲಪಾತದಲ್ಲಿ ಹಲವಾರು ವಿಧ ವಿಧವಾದ ಮೀನುಗಳನ್ನು ಕಾಣಬಹುದು. ಮತ್ತೊಂದು ಸಂಗತಿಯೆಂದರೆ, ಮೀನಿನ ಖಾದ್ಯಗಳನ್ನು ಇಷ್ಟಪಡುವವರಿಗೆ ಈ ತಾಣ ಸೂಕ್ತವಾದುದು.

ಏಕೆಂದರೆ ತಾಜಾ ತಾಜಾವಾಗಿ ದೊರೆಯುವ ಮೀನನ್ನು ರುಚಿ ರುಚಿಯಾಗಿ ತಯಾರಿಸಿ ನೀಡಲಾಗುತ್ತದೆ. ಇಗಾಗಲೇ ಬಾಯಿಯಲ್ಲಿ ನೀರು ಬರುತ್ತಿರಬಹುದು ಅಲ್ಲವೇ?...ಹಾಗಾದರೆ ಆ ಪ್ರಕೃತಿಯ ಮಡಿಲಲ್ಲಿ ಕೆಲವು ಕ್ಷಣಗಳು ಇದ್ದು ಆನಂದವಾಗಿದ್ದು ಬನ್ನಿ...

ವಿಷೇಶವೆನೆಂದರೆ ಕನ್ನಡದ ಪದಗಳಾದ ಹೊಗೆ ಹಾಗೂ ಕಲ್ಲು ಎಂಬ ಎರಡು ಪದಗಳು ಸಂಗಮಗೊಂಡು ಹೊಗೆನಕಲ್ ಎಂಬ ಹೆಸರು ಪಡೆದಿರುವುದು ವಿಶೇಷವಾಗಿದೆ.

PC:PRAVEEN

 

ಹೊನೆಗಲ್ ಜಲಪಾತ ತೆರಳಲು ಸೂಕ್ತವಾದ ಸಮಯ

ಈ ಸುಂದರವಾದ ಜಲಪಾತಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಮಳೆಗಾಲದ ನಂತರದ ದಿನಗಳಲ್ಲಿ. ಆಗ ಅತ್ಯಂತ ಸುಂದರವಾದ ಪ್ರಕೃತಿಯ ಸೊಬಗು ಹಾಗೂ ಅತಿಹೆಚ್ಚು ನೀರಿನಿಂದ ತುಂಬಿತುಳ್ಳುಕ್ಕುತ್ತಿರುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಕೂಡ ಈ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ.


PC:Ashwin Kumar

 

 

 

ಹೊನೆಗಲ್ ಜಲಪಾತಕ್ಕೆ ತಲುಪುವ ಬಗೆ?

ಹೊನೆಗಲ್ ಜಲಪಾತಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಬೆಂಗಳೂರು. ಇಲ್ಲಿಂದ ಸುಮಾರು 130 ಕಿ,ಮೀ ದೂರದಲ್ಲಿ ಈ ಜಲಪಾತವನ್ನು ಕಂಡು ಆನಂದಿಸಬಹುದಾಗಿದೆ.

ಹಾಗೆಯೇ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳುನಾಡು ರಾಜ್ಯದ ಧರ್ಮಪುರಿ. ಇಲ್ಲಿಂದ ಸುಮಾರು 46 ಕಿ,ಮೀ ದೂರದಲ್ಲಿದೆ.

ಹೊಗೆನಕಲ್‍ಗೆ ನೇರ ಬಸ್ ಸಂಚಾರ ವ್ಯವಸ್ಥೆ ಸಂಪರ್ಕವಿದ್ದು, ಸುಮಾರು 1. ಕಿ.ಮೀ ದೂರದಲ್ಲಿ ಸುಲಭವಾಗಿ ತಲುಪಬಹುದಾಗಿದೆ.


PC:Ezhuttukari

 

 

 

ಸಮೀಪದ ಪ್ರವಾಸಿ ತಾಣಗಳು

ಹೊಗೆನಕಲ್ ಸಮೀಪದಲ್ಲಿ ಹಲವಾರು ಪ್ರವಾಸಿತಾಣಗಳಿವೆ ಅವುಗಳಿಗೂ ಕೂಡ ಒಮ್ಮೆ ಭೇಟಿ ನೀಡಬಹುದಾಗಿದೆ. ಅವುಗಳು ಯಾವುವೆಂದರೆ ಮೇಳಗಿರಿ ಫಾಲ್ಸ್, ಮೆಟ್ಟೂರು ಡ್ಯಾಂ ಹೊನೆಗಲ್ ಜಲಪಾತದಿಂದ ಸುಮಾರು 20 ಕಿ,ಮೀ ದೂರದಲ್ಲಿದೆ. ಪೆನ್ನರ್ ಗ್ರಾಮ, ಹೊನೆಗಲ್‍ಯಿಂದ ಪೆನ್ನರ್ ಗ್ರಾಮಕ್ಕೆ ಸುಮಾರು 20 ಕಿ,ಮೀ ದೂರದಲ್ಲಿದೆ. ಪರಮೇಶ್ವರಿ ದೇವಾಲಯ, ಹೊನೆಗಲ್ ಜಲಪಾತದಿಂದ ಪರಮೇಶ್ವರಿ ದೇವಾಲಯಕ್ಕೆ ಸುಮಾರು 20 ಕಿ,ಮೀ ದೂರದಲ್ಲಿದೆ.


PC:jeet_sen

 

 

 

English summary

Hogenakkal Waterfall with its wonderful beauty ...

The Hogenakkal Falls is located in Dharmapuri district in the southern Indian state of Tamil Nadu. This beautiful waterfall is about 180 km from Bangalore and about 46 km from Dharmapuri. The waterfall is also known as the "Niagara Falls of India". The waterfall is a waterfall that preserves medicines and many herbs.
Please Wait while comments are loading...