Search
  • Follow NativePlanet
Share
» »ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ

ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ

By Sowmyabhai

ಈಗಾಗಲೇ ಶಾಲೆಗಳು ಆರಂಭಗೊಳ್ಳುತ್ತಿವೆ ಮಕ್ಕಳೊಂದಿಗೆ ಯಾವುದಾದರೂ ಸುಂದರ ದೇಗುಲಕ್ಕಾದರೂ ಭೇಟಿ ನೀಡಬೇಕು ಅಂತ ಯೋಚಿಸುತ್ತಿದ್ದರೆ ಕೂಡಲೇ ದೇವಿ ಕೋಲರಮ್ಮನ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಕೋಲಾರಕ್ಕೆ ತೆರಳಿ. ಕೋಲಾರಮ್ಮ ದೇವಾಲಯವೂ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ದೇಗುಲವಾಗಿದ್ದು ಪಾರ್ವತಿ ಸ್ವರೂಪಿಯಾಗಿರುವ ಅಷ್ಟಭುಜ ಹೊಂದಿರುವ ಮಹಿಷಾಸುರ ಮರ್ದಿನಿಂ ರೂಪದಲ್ಲಿ ನೆಲೆಸಿದ್ದಾಳೆ. ಈ ದೇವಿಯ ವಿಗ್ರಹದ ಮೂಗು ವಿರೂಪವಾಗಿರುವ ಕಾರಣ ದೇವಿಯನ್ನು ಮೂಕನಾಚ್ಚಾರಮ್ಮ ಎಂದೂ ಸಹ ಸ್ಥಳೀಯರು ಕರೆಯುತ್ತಾರೆ.

ಇಲ್ಲಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಲು ತಾಯಿಯನ್ನು ಪೂಜಿಸುತ್ತಾರೆ. ದೇವಾಲಯವು ಬೆಳ್ಳಿಗ್ಗೆ 8 ಘಂಟೆಯಿಂದ ಸಂಜೆ 6ರ ವರೆಗೆ ತೆರೆದಿರಲಾಗಿದ್ದು ಮಂಗಳವಾರ ಹಾಗೂ ಶುಕ್ರವಾರದಂದೂ ವಿಷೇಶ ಅಲಂಕಾರ ಹಾಗೂ ಪೂಜೆಗಳಿರುತ್ತವೆ. ಈ ದೇವಾಲಯವು ಕೋಲಾರ ಪಟ್ಟಣದ ಫೋರ್ಟ್ ಎರಿಯಾದ ಬಳಿ ಇದೆ. ಕೋಲಾರಮ್ಮ ದೇವಾಲಯವೇ ಅಲ್ಲದೆ ಸೋಮೇಶ್ವರ ದೇವಾಲಯವೂ ಅತ್ಯಂತ ಪ್ರಸಿದ್ದಿಗಳಿಸಿರುವ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಚೇಳಮ್ಮ ಎಂಬ ದೇವಿ ಕೂಡ ನೆಲೆಸಿದ್ದಾಳೆ. ಯಾರದಾರೂ ಚೇಳಿನಿಂದ ಕಚ್ಚಿಸಿಕೊಂಡರೆ ಈ ತಾಯಿಯ ಮೊರೆ ಹೋಗುವುದರಿಂದ ರಕ್ಷಣೆ ನೀಡುತ್ತಾಳೆ ಎಂಬ ನಂಬಿಕೆ ಜನರದ್ದು.

History of Kolaramma Temple Kolar

ಈ ದೇವಾಲಯವನ್ನು ಗಂಗರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಈ ಗತ ವೈಭವ ಹೊಂದಿರುವ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು ಅದ್ಬುತ ಶಿಲ್ಪಕಲೆಯಿಂದ ಕೂಡಿದೆ. ವಿಶೇಷವೆನೆಂದರೆ ಪೂರ್ವದ ಮೈಸೂರು ಮಹಾರಾಜರು ಆಗಾಗ ತಾಯಿ ಕೋಲಾಮ್ಮನ ದರ್ಶನ ಪಡೆಯಲು ಬರುತ್ತಿದ್ದರು ಎಂಬ ಪ್ರತೀತಿ ಇದೆ. ಈ ದೇಗುಲದ ಪ್ರವೇಶದ್ವಾರವೇ ಆಕರ್ಷಣಿಯವಾಗಿದ್ದು ಪ್ರಧಾನ ದೇವಾಲಯ ಪೂರ್ವಭಿಮುಖವಾಗಿದೆ.

History of Kolaramma Temple Kolar

ಇಲ್ಲಿನ ಮಹಾದ್ವಾರ ಅದ್ಬುತ ಶಿಲ್ಪಕಲೆಯಿಂದ ಕೂಡಿದ್ದು, 20 ಅಡಿಗಳಿಗೂ ಹೆಚ್ಚು ಎತ್ತರ ಇರುವ ದ್ವಾರ ಗೋಪುರಗಳ ಕಲ್ಲು ಕಂಬಗಳಲ್ಲಿ ಅಪರೂಪದ ಶಿಲ್ಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಮದನಿಯರ ಶಿಲ್ಪಗಳು,ಕೃಷ್ಣ,ಪರುಶುರಾಮ,ಬಲರಾಮ,ಬಿಲ್ಲು ಹಿಡಿದ ಸ್ತ್ರಿವಿಗ್ರಹ,ಕುಂಭ,ಶುಕ ಪ್ರಭಾವಳಿಗಳ ಸೂಕ್ಷ್ಮ ಕೆತ್ತನೆಗಳಿಂದ ನಯನ ಮನೋಹರ ಕಲಾತ್ಮಕತೆ ಹೊಂದಿದೆ. ದೇವಾಲಯದ ಒಳಗೆ ಸುಮಾರು 30 ಕನ್ನಡ ಹಾಗೂ ತಮಿಳಿನಲ್ಲಿ ಶಾಸನಗಳು ದೊರೆತಿವೆ. ಇಷ್ಟೆಲ್ಲಾ ಸೊಬಗು ಹೊಂದಿರುವ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಲೆಬೇಕು ಅಲ್ಲವೇ? ಭೇಟಿ ನೀಡಲು ಅತ್ಯಂತ ಪ್ರಶಸ್ತವಾದ ಕಾಲಾವಧಿ: ಈ ದೇವಾಲಯದಲ್ಲಿ ಮಾರ್ಚ ನಿಂದ ಏಪ್ರಿಲ್‍ನವರೆಗೆ ವಿಷೇಶ ಪೂಜೆಗಳಿತುವುದರಿಂದ ಈ ಕಲಾವಧಿ ಉತ್ತಮ.

ಕೋಲಾರಮ್ಮ ದೇವಾಲಯಕ್ಕೆ ತಲುಪುವ ಬಗೆ ಹೇಗೆ?
ವಾಯುಮಾರ್ಗದ ಮೂಲಕ: ಕೋಲಾರಮ್ಮ ದೇವಾಲಕ್ಕೆ ತೆರಳಲು ಉತ್ತಮವಾದ ಅತ್ಯಂತ ಸಮೀಪವಾದ ವಾಯುಮಾರ್ಗವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಬೆಂಗಳೂರು ವಿಮಾನ ನಿಲ್ದಾಣದಿಂದ ಕೋಲಾರಕ್ಕೆ 2 ತಾಸು ತೆಗೆದುಕೊಳ್ಳುವುದರಿಂದ ಇದು ಅತ್ಯುತ್ತಮ ಸಂಪರ್ಕವಾಗಿದೆ.

History of Kolaramma Temple Kolar

ರೈಲು ಮಾರ್ಗದ ಮೂಲಕ: ಪ್ರಮುಖವಾದ ರೈಲು ನಿಲ್ದಾಣವೆಂದರೆ ಬಂಗಾರ ಪೇಟೆ ರೈಲ್ವೆ ನಿಲ್ದಾಣ. ಬಂಗಾರ ಪೇಟೆಗೆ ಹಲವಾರೂ ರೈಲುಗಳು ಇದ್ದು, ಅಲ್ಲಿಂದ ಕೋಲಾರಮ್ಮ ದೇವಾಲಯಕ್ಕೆ ಕೇವಲ 15 ಕಿ.ಮಿ ಯಷ್ಟು ಅಂತರದಲ್ಲಿದೆ.

ರಸ್ತೆ ಮಾರ್ಗದ ಮೂಲಕ: ದೇವಾಲಯಕ್ಕೆ ತಲುಪಲು ಅತ್ಯುತ್ತಮವಾದ ಮಾರ್ಗೋಪಾಯವೆಂದರೆ ರಸ್ತೆಯ ಮಾರ್ಗ. ಕೋಲಾರಕ್ಕೆ ಹಲಾವಾರು ಬಸ್‍ಗಳ ಸಂಚಾರವಿರುವುದರಿಂದ ಬೆಂಗಳೂರಿನಿಂದ ಕೋಲಾರಕ್ಕೆ ಕೇವಲ 2 ತಾಸುಗಳಲ್ಲಿ ತಲುಪಬಹುದಾಗಿದೆ.

ಹತ್ತಿರವಿರುವ ದೇವಾಲಯಗಳು: ಕೋಲಾರದಲ್ಲಿ ಭೇಟಿ ನೀಡಬಹುದಾದ ಪ್ರಮುಖ ದೇವಾಲಯಗಳೆಂದರೆ ಅಂತರ ಗಂಗೆ,ಚಿಕ್ಕ ತಿರುಪತಿ,ಕೋಟಿಲಿಂಗೇಶ್ವರ,ಮಾರ್ಕಂಡೇಶ್ವರ ಬೆಟ್ಟ ಇವೆಲ್ಲಾ ಕೋಲಾರದಲ್ಲಿರುವ ಪ್ರಮುಖ ದೇವಾಲಯಗಳಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X