Search
  • Follow NativePlanet
Share
» »ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ

ಅದ್ಭುತ ಐತಿಹಾಸಿಕ ಆಕರ್ಷಣೆಗಳ ಬಾಗಲಕೋಟೆ

By Vijay

ಕರ್ನಾಟಕದ ಸಾಕಷ್ಟು ಸ್ಥಳಗಳು ಐತಿಹಾಸಿಕ ಶ್ರೀಮಂತಿಕೆಯನ್ನು ಹೊಂದಿವೆ. ಹಿಂದೆ ನಮ್ಮ ನಾಡನ್ನಾಳುತ್ತ ಇಂದು ನಾವು ಸುಖಮಯವಾಗಿರುವುದಕ್ಕೆ ಕಾರಣರಾಗಿರುವ ಅನೇಕ ರಾಜ ವಂಶಗಳು ತಮ್ಮದೆ ಆದ ವಿಶಿಷ್ಟ ಕಲೆಯನ್ನು, ಜೀವನ ಶೈಲಿಯ ಕುರುಹುಗಳನ್ನು, ಆಡಳಿತ ವ್ಯವಸ್ಥೆಯ ಕಾರ್ಯ ವೈಖರಿಯನ್ನು ಇಂದು ನಮಗೆ ದೊರೆಯುವಂತೆ ಬಿಟ್ಟು ಹೋಗಿರುವುದು ಒಂದು ಸಂತೋಷದ ಸಂಗತಿಯೆ.

ವಿಶೇಷ ಲೇಖನ : ಎಂದಿಗೂ ಮರೆಯಲಾಗದ ಬಾದಾಮಿ

ಆದರೆ ಪ್ರಸ್ತುತ ಯುವ ಜನಾಂಗದಲ್ಲಿ ನಮ್ಮ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ಕುರಿತು ತಿಳಿಯುವ ಆಸೆ, ಇಚ್ಛೆಗಳು ಕ್ಷಿಣಿಸುತ್ತಿರುವುದು ಬೇಸರದ ಸಂಗತಿಯೆ ಸರಿ. ಆದರೂ ಹಿರಿಯರು ಹೇಳಿದಂತೆ "ಮನಸ್ಸಿದ್ದಲ್ಲಿ ಮಾರ್ಗವಿದೆ" ಎಂಬ ನಾಣ್ಣುಡಿಯ ಪ್ರಕಾರ, ನಮಗಾದಷ್ಟು ಇಂತಹ ಸುಂದರ ಸ್ಥಳಗಳ ಇತಿಹಾಸದ ಕುರಿತು ಇಂದಿನ ಮಕ್ಕಳಿಗೆ ತಿಳಿಸುತ್ತಲೇ ಇರಬೇಕು.

ವಿಶೇಷ ಲೇಖನ : ಸ್ವಾರಸ್ಯಕರ ವಿಜಯಪುರ

ಇದರಿಂದ ಪ್ರತಿ ಹತ್ತು ಮಕ್ಕಳಲ್ಲಿ ಕನಿಷ್ಠ ಒಂದು ಮಗುವಿಗಾದರೂ ನಮ್ಮ ನಾಡಿನ ಇತಿಹಾಸದ ಕುರಿತು ಆಸಕ್ತಿ ಮೂಡಲೂಬಹುದು. ಪ್ರಸ್ತುತ ಲೇಖನವು ಉತ್ತರ ಕರ್ನಾಟಕ ಭಾಗರದ ಪ್ರಖ್ಯಾತ ಐತಿಹಾಸಿಕ ಪ್ರವಾಸಿ ಸ್ಥಳವಾದ ಬಾಗಲಕೋಟೆಯಲ್ಲಿ ಕಂಡುಬರುವ ಅದ್ಭುತ ಪ್ರವಾಸಿ ಕ್ಷೇತ್ರಗಳ ಕುರಿತು ತಿಳಿಸುತ್ತದೆ. ನಮ್ಮ ನಾಡ ನುಡಿ, ಕಲೆ, ಸಂಸ್ಕೃತಿಯ ವಿಶಿಷ್ಟ ಮುಖವನ್ನು ತೆರೆದಿಡುವ ಈ ಸ್ಥಳಗಳಿಗೆ ಸಮಯವಿದ್ದಾಗ ಖಂಡಿತವಾಗಿಯೂ ನಿಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಭೇಟಿ ನೀಡಿ ಅವುಗಳ ಕುರಿತು ತಿಳಿಸಿರಿ. ಈ ನಿಟ್ಟಿನಲ್ಲಿ ಈ ಲೇಖನ ನಿಮಗೊಂದಿಷ್ಟು ಸಹಾಯಕವಾಗಬಹುದು.

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಬಾದಾಮಿಯನ್ನು ರೈಲಿನ ಮೂಲಕ ಬೆಂಗಳೂರು - ಗೋಲ ಗುಂಬಜ್ ರೈಲು ಇಲ್ಲವೆ ಬಾಗಲಕೋಟೆ, ಬಿಜಪುರ ಹಾಗೂ ಹುಬ್ಬಳ್ಳಿಯಿಂದ ಬಸ್ಸುಗಳ ಮೂಲಕ ತಲುಪಬಹುದಾಗಿದೆ. ಹುಬ್ಬಳ್ಳಿಯಿಂದ 130 ಕಿ.ಮೀ ಗಳಷ್ಟು ದೂರವಿರುವ ಬಾದಾಮಿ ಬೆಂಗಳೂರಿನಿಂದ 520 ಕಿ.ಮೀ ಗಳಷ್ಟು ದೂರವಿದೆ.

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಮೊದಲನೆಯದಾಗಿ ಬಾದಾಮಿ. ಹಿಂದೆ ಇದು ವಾತಾಪಿ ಎಂದು ಕರೆಯಲ್ಪಡುತ್ತಿತ್ತು. ಬಾದಾಮಿ ಚಾಲುಕ್ಯರ, ರಾಜಧಾನಿಯಾಗಿ ಮೆರೆದಿದ್ದ ಈ ಸ್ಥಳದಲ್ಲಿ ಅನೇಕ ಐತಿಹಾಸಿಕ ಪ್ರಸಿದ್ಧ ರಚನೆಗಳನ್ನು ಕಾಣಬಹುದಾಗಿದೆ. ಗುಹಾ ದೇವಾಲಯಗಳು, ಹೊಂಡಗಳು, ಭೂತನಾಥ ದೇವಾಲಯ ಸಂಕೀರ್ಣಗಳಿಗೆ ಇದು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sanyam Bahga

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಬಾದಾಮಿಯಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳ ಮಲ್ಲಿಕಾರ್ಜುನ ದೇವಾಲಯಗಳ ಸಂಕೀರ್ಣ. ಈ ದೇವಾಲಯಗಳು ನಕ್ಷತ್ರದಾಕಾರದ ರಚನೆಗೆ ಹೆಸರುವಾಸಿಯಾಗಿದ್ದು ಸುಮಾರು 11 ನೆಯ ಶತಮಾನದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ರಚನೆಗಳಾಗಿವೆ.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಅಗಸ್ತ್ಯ ಕೆರೆ ಬಾದಾಮಿಯ ಒಂದು ವಿಶೇಷ. ಹಿಂದೆ ವಾತಾಪಿ ಹಾಗೂ ಇಲ್ವಲ ಎಂಬ ರಾಕ್ಷಸ ಸಹೋದರರಿದ್ದರು. ಅಣ್ಣನಾದ ಇಲ್ವಲನು ವಾತಾಪಿ ಯಾವ ಲೋಕದಲ್ಲಿದ್ದರೂ ಸಹ ಕರೆದ ತಕ್ಷಣ ದೃಶ್ಯನಾಗುವ ವರದಾನ ಪಡೆದಿದ್ದರಿಂದ ದಾರಿ ಹೋಕರನ್ನು ಇವರಿಬ್ಬರು ವಿಚಿತ್ರ ರೀತಿಯಲ್ಲಿ ಹತ್ಯ್ತೆಗೈಯುತ್ತಿದ್ದರು. ಮೊದಲು ವಾತಾಪಿ ಟಗರಾಗಿ ಬದಲಾಗುತ್ತಿದ್ದನು ನಂತರ ಇಲ್ವಲನು ಆ ಟಗರನ್ನು ವಧಿಸಿ ಮಾಂಸ ವ್ಯಂಜನ ಮಾಡಿ ಭಕ್ಷಿಸುವಂತೆ ಜನಕ್ಕೆ ನೀಡುತ್ತಿದ್ದನು. ಅವರು ಅದನ್ನು ತಿಂದ ತಕ್ಷಣ ಇಲ್ವಲನು ವಾತಾಪಿಯನ್ನು ಕರೆಯುತ್ತಿದ್ದ ಹಾಗೆ ವಾತಾಪಿಯು ಜನರ ದೇಹವನ್ನು ಛಿದ್ರ ಮಾಡಿ ಹೊರಬರುತ್ತಿದ್ದನು. ಒಮ್ಮೆ ಅಗಸ್ತ್ಯರು ಇಲ್ಲಿ ಬರುವಾಗ ಇಲ್ವಲನಿಂದ ಆಹ್ವಾನ ಪಡೆದರು ಅಂದುಕೊಂಡಂತೆ ಎಲ್ಲವೂ ನಡದು ಕೊನೆಗೆ ವಾತಾಪಿಯನ್ನು ಕರೆದಾಗ ಮುನಿಗಳ ಶಕ್ತಿಯಿಂದ ಅವನು ಬರಲಾಗಲಿಲ್ಲ. ಆದ್ದರಿಂದ ಇಲ್ಲಿರುವ ಕೆರೆಯನ್ನು ಅಗಸ್ತ್ಯ ಕೆರೆ ಎನ್ನಲಾಗುತ್ತದೆ.

ಚಿತ್ರಕೃಪೆ: Karunakar Rayker

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಬಾದಾಮಿ ಗುಹೆಗಳು ಬಾದಾಮಿಯ ಆಸಕ್ತಿಕರ ಸ್ಥಳವಾಗಿದೆ. ಇಲ್ಲಿ ಒಂದರಿಂದ ನಾಲ್ಕರವರೆಗೆ ಗುಹಾ ದೇವಾಲಯಗಳನ್ನು ನೋಡಬಹುದಾಗಿದೆ. ಮೊದಲ ಮೂರು ಗುಹೆಗಳು ಹಿಂದು ಧರ್ಮಕ್ಕೆ ಸಂಬಂಧಿಸಿದ ಕಲಾಕೃತಿಗಳು ಹಾಗೂ ವರ್ಣಚಿತ್ರಗಳನ್ನು ಒಳಗೊಂಡಿದ್ದರೆ ನಾಲ್ಕನೆಯ ಗುಹೆಯು ಜೈನ ಧರ್ಮಕ್ಕೆ ಸಂಬಂಧಿಸಿದ್ದುದಾಗಿದೆ. ಇವು ಐದರಿಂದ ಆರನೆಯ ಶತ್ಮಾನದಲ್ಲಿ ನಿರ್ಮಾಣವಾದ ಗುಹೆಗಳಾಗಿವೆ. ಇಂದು ಇವು ಇಲ್ಲಿನ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳವಾಗಿದೆ.

ಚಿತ್ರಕೃಪೆ: Jean-Pierre Dalbéra

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಭೂತನಾಥ ದೇವಾಲಯ ಸಂಕೀರ್ಣ. ಕೆರೆಯ ದಂಡೆಯ ಮೇಲೆ ಸ್ಥಿತವಿರುವ ಈ ಸಂಕೀರ್ಣದಲ್ಲಿ ಎರಡು ದೇವಾಲಯಗಳನ್ನು ನೋಡಬಹುದಾಗಿದೆ. ಒಂದು ಕೆರೆಯ ಪೂರ್ವಕ್ಕಿದ್ದರೆ ಇನ್ನೊಂದು ಕೆರೆಯ ಈಶಾನ್ಯ ದಿಕ್ಕಿನಲ್ಲಿದೆ. ಕಲ್ಯಾಣಿ ಚಾಲುಕ್ಯರ ಮನಮೋಹಕವಾದ ಅಷ್ಟೆ ಕಲಾತ್ಮಕವಾದ ವಾಸ್ತು ಶಿಲ್ಪವನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Nilmoni Ghosh

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಬನಶಂಕರಿ ಅಮ್ಮನವರ ದೇವಸ್ಥಾನ. ಭಕ್ತರ ದೃಷ್ಟಿಯಿಂದ ನೋಡಿದಾಗ ಬಾದಾಮಿಯು ಪ್ರಮುಖವಾಗಿ ಬನಶಂಕರಿ ಅಮ್ಮನವರ ದೇವಸ್ಥಾನದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕದ ಅದೆಷ್ಟೊ ಕುಟುಂಬಗಳ ದೇವತೆಯಾಗಿ ಬನಶಂಕರಿ ದೇವಿಯು ಹರಸುತ್ತಿದ್ದಾಳೆ. ಪ್ರತಿ ವರ್ಷದ ಜನವರಿ ಸಂದರ್ಭ ಅಂದರೆ ಬನದ ಹುಣ್ಣಿಮೆಯ ಸಂದರ್ಭದಲ್ಲಿ ಇಲ್ಲಿ ಅದ್ದೂರಿಯಾಗಿ ದೇವಿಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Nvvchar

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಬಾದಾಮಿಯ ನಂತರ ಅಲ್ಲಿಂದ ಕೇವಲ 15 ಕಿ.ಮೀ ಗಳಷ್ಟು ದೂರವಿರುವ ಮಹಾಕೂಟಕ್ಕೆ ತೆರಳಬಹುದು. ಮಹಾಕೂಟ ದೇವಾಲಯ ಸಂಕೀರ್ಣದಲ್ಲಿ ಹಲವಾರು ದೇಗುಲಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಮಹಾಕೂಟೇಶ್ವರ ದೇವಸ್ಥಾನ ಹಾಗು ಮಾಲಿಕಾರ್ಜುನ ದೇವಾಲಯಗಳು ದೊಡ್ಡ ರಚನೆಗಳಾಗಿವೆ. ಪರಮೇಶ್ವರನ ರೂಪವೆನ್ನಲಾಗುವ ಸಂಗಮೇಶ್ವರನ ದೇವಾಲಯವು ಇಲ್ಲಿರುವ ಮತ್ತೊಂದು ದೇಗುಲವಾಗಿದ್ದು ನಗರ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಮಲ್ಲಿಕಾರ್ಜುನ ದೇವಾಲಯ: ದ್ರಾವಿಡ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡ ಈ ಮಲ್ಲಿಕಾರ್ಜುನ ದೇವಾಲಯವು ಮಹಾಕೂಟ ದೇವಾಲಯ ಸಂಕೀರ್ಣದಲ್ಲಿರುವ ಮತ್ತೊಂದು ದೊಡ್ಡ ರಚನೆಯಾಗಿದೆ. ಸ್ಥಳೀಯವಾಗಿ ಇದನ್ನು ದಕ್ಷಿಣ ಕಾಶಿ ಎಂದು ಭಾವನಾತ್ಮಕತೆಯಿಂದ ಸಂಭೋದಿಸಲಾಗುತ್ತದೆ. ಈ ದೇವಾಲಯದ ಪಕ್ಕದಲ್ಲೆ ಪುಷ್ಕರಣಿಯೊಂದನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ವಿಷ್ಣು ದೇವಾಲಯ: ನಗರ ವಾಸ್ತುಶಿಲ್ಪದಲ್ಲಿ ನಿರ್ಮಾಣವದ ವಿಷ್ಣು ದೇವಾಲಯ (ಎಡಕ್ಕೆ) ಹಾಗು ಕದಂಬ ಶೈಲಿಯ ದೇಗುಲ (ಬಲಕ್ಕೆ). ಇದೊಂದು ಅನನ್ಯ ಬಗೆಯ ವಾಸ್ತು ಶಿಲ್ಪದ ಸಂಯೋಜನೆಯಾಗಿದೆ.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಮಹಾಕೂಟ ದೇವಾಲಯಗಳ ದರ್ಶನದ ನಂತರ ಅಲ್ಲಿಂದ 12 ಕಿ.ಮೀ ಗಳಷ್ಟು ದೂರವಿರುವ ಪಟ್ಟದಕಲ್ಲಿಗೆ ತೆರಳಬಹುದು. ಇದೊಂದು ವಿಶ್ವ ಪಾರಂಪರಿಕ ತಾಣವಾಗಿದ್ದು, ಮಲಪ್ರಭಾ ನದಿಯ ಎಡ ದಂಡೆಯ ಮೇಲೆ ನೆಲೆಸಿದೆ. ಇಲ್ಲಿ ಸಾಕಷ್ಟು ಪ್ರಖ್ಯಾತವಾದ ಸ್ಮಾರಕ ರಚನೆಗಳನ್ನು ಕಾಣಬಹುದಾಗಿದೆ. ಇಲ್ಲಿ ಯಾವೇಲ್ಲ ದೇವಾಲಯಗಳಿವೆ ಎಂಬುದನ್ನು ಮುಂದಿನ ಸ್ಲೈಡುಗಳ ಮೂಲಕ ತಿಳಿಯಿರಿ.

ಚಿತ್ರಕೃಪೆ: Manjunath Doddamani

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷನ ದೇವಸ್ಥಾನ. ಎರಡನೆಯ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ವಿಜಯ ಸಾಧಿಸಿದ ಗೌರವಾರ್ಥವಾಗಿ ಅವನ ಮಡದಿಯಾಗಿದ್ದ ಲೋಕಮಹಾದೇವಿ (ತ್ರಿಲೋಕ್ಯಮಹಾದೇವಿ) ಯಿಂದ ಎಂಟನೆಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಪಟ್ಟದಕಲ್ಲಿನಲ್ಲಿರುವ ಸಂಗಮೇಶ್ವರ ದೇವಾಲಯ. ದ್ರಾವಿಡ ಶೈಲಿಯ ಈ ದೇವಾಲಯವು ಚಾಲುಕ್ಯ ದೊರೆ ವಿಜಯಾದಿತ್ಯನಿಂದ ನಿರ್ಮಾಣವಾಗಿದ್ದು ಸುಂದರ ಕೆತ್ತನೆಯನ್ನು ಹೊಂದಿದೆ.

ಚಿತ್ರಕೃಪೆ: Sanyam Bahga

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಕಾಶಿ ವಿಶ್ವನಾಥ ದೇವಾಲಯ : ಎಂಟನೆಯ ಶತಮಾನದಲ್ಲಿ ನಿರ್ಮಾಣವಾದ, ನಗರ ಶೈಲಿಯಲ್ಲಿರುವ ಈ ಸುಂದರ ಕಾಶಿ ವಿಶ್ವನಾಥ ದೇವಾಲಯವು ರಾಷ್ಟ್ರಕೂಟರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Nithin bolar k

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಜೈನ ನಾರಾಯಣ ದೇವಾಲಯ. ಬಾದಾಮಿ - ಪಟ್ಟದಕಲ್ಲು ರಸ್ತೆಯ ಮೇಲಿರುವ ಒಂದು ಅತ್ಯಾಕರ್ಷಕ ಕೆತ್ತನೆಗಳ ದೇಗುಲವಾಗಿದೆ. ಒಂಬತ್ತನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದ ನಿರ್ಮಾತೃ ರಾಷ್ಟ್ರಕೂಟರ ಒಂದನೆಯ ಅಮೋಘವರ್ಷ ಇಲ್ಲವೆ ಅವನ ಮಗನಾದ ಎರಡನೆಯ ಕೃಷ್ಣನೆಂದು ತಿಳಿಯಲಾಗಿದೆ.

ಚಿತ್ರಕೃಪೆ: Dineshkannambadi

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಪಟ್ಟದಕಲ್ಲಿನ ಇತರೆ ಇನ್ನೂ ಕೆಲವು ರಚನೆಗಳಿದ್ದು ಸಮಯಾವಕಾಶವಿದ್ದರೆ ನೋಡಬಹುದು. ಒಂದೊಮ್ಮೆ ಪಟ್ಟದಕಲ್ಲನ್ನು ತೊರೆದ ನಂತರ ನೇರವಾಗಿ 15 ಕಿ.ಮೀ ಕ್ರಮಿಸಿ ಮತ್ತೊಂದು ಪ್ರಖ್ಯಾತ ಪ್ರೇಕ್ಷಣೀಯ ಸ್ಥಳವಾದ ಐಹೊಳೆಯನ್ನು ತಲುಪಬಹುದು. ಐಹೊಳೆ - ಪಟ್ಟದಕಲ್ಲು ರಸ್ತೆಯ ಚಿತ್ರ.

ಚಿತ್ರಕೃಪೆ: Sanyam Bahga

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಇನ್ನು ಐಹೊಳೆಯ ಕೆಲ ಪ್ರಮುಖ ಸ್ಮಾರಕ ದೇಗುಲಗಳ ಕುರಿತು ತಿಳಿಯಿರಿ. ದುರ್ಗಾ ದೇವಾಲಯ ಶುಭಮಂಟಪ ಹಾಗೂ ಮುಖಮಂಟಪ ಹೊಂದಿರುವ ದುಂದರವಾಗಿ ಕಂಡುಬರುವ ಐಹೊಳೆಯ ದೇವಾಲಯವಾಗಿದೆ. ದುರ್ಗಾ ದೇವಿಗೆ ಸಮರ್ಪಿತವಾದ ಈ ದೇವಾಲಯವು ಏಲನೆಯ ಶತ್ಮಾನದ ಅಂತ್ಯ ಅಥವಾ ಎಂಟನೆಯ ಶತಮಾನದಲ್ಲಿ ನಿರ್ಮಾಣವಾದುದೆನ್ನಲಾಗಿದೆ.

ಚಿತ್ರಕೃಪೆ: Manjunath Doddamani

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಲಾಡ್ ಖಾನ್ ದೇವಾಲಯ : ಶಿವನಿಗೆ ಮುಡಿಪಾದ ಶಿವಲಿಂಗವಿರುವ ಈ ದೇವಾಲಯವು ತನ್ನ ವಿಶಿಷ್ಟ ಹೆಸರಿನಿಂದ ಜನಪ್ರೀಯವಾಗಿದೆ. ಲಾಡ್ ಖಾನ್ ಎಂಬ ಜನರಲ್ ಒಂದು ಕಾಲದಲ್ಲಿ ಇಲ್ಲಿ ವಾಸಿಸುತ್ತಿದ್ದರಿಂದ ಇದಕ್ಕೆ ಲಾಡ್ ಖಾನ್ ಎಂಬ ಹೆಸರು ಬಂದಿರಬಹುದೆಂದು ನಂಬಲಾಗಿದೆ. ಇದರ ವಾಸ್ತುಶಿಲ್ಪವೂ ಸಹ ತುಸು ಭಿನ್ನವಾಗಿರುವುದನ್ನು ಗಮನಿಸಬಹುದಾಗಿದೆ.

ಚಿತ್ರಕೃಪೆ: Sanyam Bahga

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ರಾವಣ ಫಡಿ ಗುಹಾ ದೇವಾಲಯ : ಐಹೊಳೆಯಲ್ಲಿ ಕಂಡುಬರುವ ಪುರಾತನ ಬಂಡೆಯೊಂದರಲ್ಲಿ ಕೆತ್ತಲ್ಪಟ್ಟ ಸುಂದರ ದೇವಾಲಯವಾಗಿದೆ ಇದು. ಸುಮಾರು ಆರನೆಯ ಶತಮಾನದಲ್ಲಿ ನಿರ್ಮಿತವಾದ ಈ ಗುಹಾ ದೇವಾಲಯದಲ್ಲಿ ನರ್ತಿಸುವ ಶಿವನ ಚಿತ್ರವನ್ನು ಕೆತ್ತಲಾಗಿದ್ದು ಆಕರ್ಷಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Manjunath Doddamani

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಹುಚ್ಚಿಮಲ್ಲಿ ಗುಡಿ : ಏಳನೆಯ ಶತ್ಮಾನದಲ್ಲಿ ನಿರ್ಮಿತವಾದ ದೇಗುಲ ಇದಾಗಿದೆ. ವಿನ್ಯಾಸವನ್ನು ಗಮನಿಸಿದಾಗ ಇತಿಹಾಸ ತಜ್ಞರ ಪ್ರಕಾರ, ಈ ದೇವಾಲಯದಲ್ಲಿ ಮೊದಲ ಬಾರಿಗೆ ಶುಖನಾಸವನ್ನು ಪರಿಚಯಿಸಲಾಗಿದೆ ಎನ್ನಲಾಗುತ್ತದೆ. ಇದೊಂದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿದೆ.

ಚಿತ್ರಕೃಪೆ: Alende devasia

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಹುಚ್ಚಪ್ಪಯ್ಯ ಮಠ : ಐಹೊಳೆಯ ಪಶ್ಚಿಮ ದಿಕ್ಕಿನಲ್ಲಿ ಈ ದೇಗುಲವಿರುವುದನ್ನು ಕಾಣಬಹುದಾಗಿದೆ. ಇಲ್ಲಿ ತ್ರಿಮೂರ್ತಿ ವಿಗ್ರಹ ಹಾಗೂ 1067 ರ ಶಾಸನವೊಂದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Mukul Banerjee

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ರಾಚಿ ಗುಡಿ : ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಸ್ಥಿತವಿದೆ. 11 ನೆಯ ಶತಮಾನದಲ್ಲಿ ನಿರ್ಮಾಣವಾದ ಇದು ಒಂದು ಶಿವನಿಗೆ ಮುಡಿಪಾದ ತ್ರಿಕುಟಾಚಲ ದೇವಸ್ಥಾನವಾಗಿದೆ.

ಚಿತ್ರಕೃಪೆ: Alende devasia

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಹಳಬಸಪ್ಪನ ಗುಡಿ : ಇದೊಂದು ಚಿಕ್ಕ ದೇಗುಲವಾಗಿದ್ದು ಶುಭಮಂಟಪ ಹಾಗೂ ಗರ್ಭಗೃಹವನ್ನು ಹೊಂದಿದೆ. ಪ್ರವೇಶ ದ್ವಾರದಲ್ಲಿ ಗಂಗಾ ಹಾಗೂ ಯಮುನಾರ ವಿಗ್ರಹಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Manjunath_Doddamani

ಬಾಗಲಕೋಟೆ ಆಕರ್ಷಣೆಗಳು:

ಬಾಗಲಕೋಟೆ ಆಕರ್ಷಣೆಗಳು:

ಮಲ್ಲಿಕಾರ್ಜುನ ದೇಗುಲ : ಐಹೊಳೆಯಲ್ಲಿ ಕಂಡುಬರುವ ಮಲ್ಲಿಕಾರ್ಜುನ ದೇಗುಲಗಳ ಸಂಕೀರ್ಣ ಇದಾಗಿದೆ.

ಚಿತ್ರಕೃಪೆ: Manjunath Doddamani

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X