Search
  • Follow NativePlanet
Share
» »ಮಹಾರಾಷ್ಟ್ರದಲ್ಲಿನ ಮಂಡಪೇಶ್ವರ ಗುಹೆಯಲ್ಲಿ ಅಡಗಿವೆ ರಹಸ್ಯಗಳು....

ಮಹಾರಾಷ್ಟ್ರದಲ್ಲಿನ ಮಂಡಪೇಶ್ವರ ಗುಹೆಯಲ್ಲಿ ಅಡಗಿವೆ ರಹಸ್ಯಗಳು....

ಗುಹೆಗಳು ಕೂಡ ಸಾಕಷ್ಟು ತನ್ನಲ್ಲಿ ರಹಸ್ಯವನ್ನು ಕೂಡ ಅಡಗಿಸಿಕೊಂಡಿರುತ್ತದೆ ಎಂಬುದು ನಿಮಗೆ ಗೊತ್ತೆ? ಹಾಗಾದರೆ ಮಹಾರಾಷ್ಟ್ರದಲ್ಲಿನ ಮಂಡಪೇಶ್ವರ ಗುಹೆಯು ತನ್ನ ರಹಸ್ಯಗಳಿಂದ ಹಲವಾರು ಪ್ರವಾಸಿಗರನ್ನು ಬರ ಮಾಡಿಕೊಳ್ಳುತ್ತಿವೆ.

ಗುಹೆಗಳ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವೇನೂ ಇಲ್ಲ. ಮಹಾರಾಷ್ಟ್ರದಲ್ಲಿಯೇ ಅಲ್ಲದೇ ದೇಶದ ಮೂಲೆ ಮೂಲೆಗಳಲ್ಲಿಯೂ ಕೂಡ ಗುಹೆಗಳನ್ನು ಕಾಣಬಹುದಾಗಿದೆ. ಗುಹೆಗಳೆಂದರನೇ ಒಂದು ರೀತಿಯ ಕುತೂಹಲ ಹಾಗು ಭಯ ಅವರಿಸುತ್ತದೆ. ಅದರೂ ಸರಿಯೇ ನೋಡಲೇಬೇಕು. ಕೆಲವು ದೇವಾಲಯಗಳು ಹಾಗೂ ನಿಧಿಗಳು ಗುಹೆಗಳಲ್ಲಿ ಇರುತ್ತವೆ ಎಂಬುದು ನಮಗೆ ಸಾಮಾನ್ಯವಾಗಿ ಗೊತ್ತಿರುವ ಸಂಗತಿಯೇ...

ಗುಹೆಗಳು ಕೂಡ ಸಾಕಷ್ಟು ತನ್ನಲ್ಲಿ ರಹಸ್ಯವನ್ನು ಕೂಡ ಅಡಗಿಸಿಕೊಂಡಿರುತ್ತದೆ ಎಂಬುದು ನಿಮಗೆ ಗೊತ್ತೆ? ಹಾಗಾದರೆ ಮಹಾರಾಷ್ಟ್ರದಲ್ಲಿನ ಮಂಡಪೇಶ್ವರ ಗುಹೆಯು ತನ್ನ ರಹಸ್ಯಗಳಿಂದ ಹಲವಾರು ಪ್ರವಾಸಿಗರನ್ನು ಬರ ಮಾಡಿಕೊಳ್ಳುತ್ತಿವೆ.

ಆ ರಹಸ್ಯವಾದಾರು ಏನು ಎಂಬ ಹಲವಾರು ಪ್ರಶ್ನೆಗಳಿಗೆ ಲೇಖನದ ಮೂಲಕ ಉತ್ತರ ತಿಳಿಯಿರಿ.

ಮಂಡಪೇಶ್ವರ ಗುಹೆಗಳು

ಮಂಡಪೇಶ್ವರ ಗುಹೆಗಳು

ರಹಸ್ಯಮಯವಾದ ಮಂಡಪೇಶ್ವರ ಗುಹೆಯು ಮಹಾರಾಷ್ಟ್ರದಲ್ಲಿ ಇದೆ. ಈ ಗುಹೆಯನ್ನು ಸುಮಾರು 1500 ರಿಂದ 1600 ವರ್ಷಗಳ ಮಧ್ಯೆ ಕಾಲದಲ್ಲಿ ನಿರ್ಮಿಸಿರಬಹುದು ಎಂದು ಗುರುತಿಸಲಾಗಿದೆ. ಈ ಗುಹೆಯು ತನ್ನ ಅದ್ಭುತ ಸೌಂದರ್ಯದಿಂದ ಪ್ರವಾಸಿಗರನ್ನು ಮರುಳು ಮಾಡುವ ವಿಶೇಷ ಗುಣವನ್ನು ಹೊಂದಿದೆ.

PC: Kartik Chandramouli

ಎಲ್ಲಿದೆ?

ಎಲ್ಲಿದೆ?

ಈ ರಹಸ್ಯಮಯ ಗುಹಾ ದೇವಾಲಯವು ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದ ಬೋರಿವಾಲಿ ಮೌಂಟ್ ಫೋಯಿನ್ಸೂರ್ನಲಿಯಲ್ಲಿದೆ. ಈ ಗುಹಾ ದೇವಾಲಯವನ್ನು ಕಾಣಲು ದೇಶದ ಹಲವಾರು ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.


PC: Grv rtd490

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಈ ಮಂಡಪೇಶ್ವರ ಗುಹೆಯು ಅತ್ಯಂತ ಪ್ರಾಚೀನವಾದ ರಾಕ್ ಕಟ್ ಗುಹಾ ದೇವಾಲಯವಾಗಿದೆ. ಈ ಗುಹೆಯಲ್ಲಿನ ಕಲಾಕೃತಿಗಳು ಬೌದ್ಧ ಸನ್ಯಾಸಿಗಳು ರಚಿಸಿದ್ದಾರೆ ಎಂದು ಹೇಳಲಾಗಿದೆ.


PC:Grv rtd490

ಶಿವಲಿಂಗ

ಶಿವಲಿಂಗ

ಈ ಗುಹಾ ದೇವಾಲಯದಲ್ಲಿ ಮಂಡಪೇಶ್ವರ ಎಂಬ ಶಿವಲಿಂಗವಿದೆ. ಈ ಶಿವಲಿಂಗದ ಮುಂದೆ ಒಂದು ನಂದಿ ಕೂಡ ನೆಲೆಸಿದ್ದಾನೆ. ಗುಹೆಗಳಲ್ಲಿ ಅಂಕಿತವಾದ ಏಕೈಕ ದೇವಾಲಯವೆಂದರೆ ಅದು ಈ ಶಿವಲಿಂಗವಿರುವ ಗುಹಾ ದೇವಾಲಯ.

PC:Grv rtd490

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಚಾರಿತ್ರಿ ಆಧಾರಗಳ ಪ್ರಕಾರ ಈ ಗುಹೆಯನ್ನು ಪುರಾತನವಾದ ರಾಜರು ತಮ್ಮ ರಹಸ್ಯ ಪ್ರದೇಶವಾಗಿ ಈ ಗುಹೆಯನ್ನು ಬಳಸುತ್ತಿದ್ದರು.


PC:Grv rtd490


ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಈ ಗುಹೆಗಳನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಉಪಯೋಗಿಸುತ್ತಿದ್ದರು ಎಂದು ಮೂಲಗಳು ತಿಳಿಸುತ್ತವೆ. ಈ ಗುಹೆಗಳು ಸಾಹಿಸಾರ್ ಎಂಬ ನದಿಯ ತೀರದ ಮೇಲೆ ನೆಲೆಸಿದೆ.


PC:Grv rtd490

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಇಲ್ಲಿ ನೀವು ಹಲವಾರು ಗುಹೆಗಳನ್ನು ಕಾಣಬಹುದು. ಗುಹೆಯ ಒಳಭಾಗದಲ್ಲಿ ಹಲವಾರು ಸೂಕ್ಷ್ಮವಾದ ಕೆತ್ತನೆಯ ಸ್ತಂಭಗಳನ್ನು ಹಾಗೂ ವಿಗ್ರಹಗಳನ್ನು ಕಾಣಬಹುದಾಗಿದೆ.

PC:Grv rtd490

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಮೊದಲೇ ತಿಳಿಸಿದಂತೆ ಈ ಗುಹೆಗಳಲ್ಲಿ ಒಂದು ಶಿವಲಿಂಗವಿದೆ. ಹಾಗೆಯೇ ವಿನಾಯಕ, ವಿಷ್ಣು ಮತ್ತು ಬ್ರಹ್ಮನ ಕಲ್ಲಿನ ಶಿಲ್ಪಗಳು ಇಲ್ಲಿ ಇವೆ. ಆನೇಕ ಹಿಂದೂ ಧರ್ಮದ ಕೆತ್ತನೆಗಳನ್ನು ಹೊಂದಿರುವ ವಿಗ್ರಹಗಳೂ ಕೂಡ ಇವೆ.

PC:Grv rtd490

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಈ ಗುಹೆಗಳನ್ನು ನಿರ್ಮಾಣ ಮಾಡಿದವರು ಬೌದ್ಧ ಧರ್ಮದ ಕೆಲವು ಸನ್ಯಾಸಿಗಳು ಎಂದು ಕೆಲವರು ಹೇಳುತ್ತಾರೆ. ಇವರು ಧ್ಯಾನ ಮಾಡಲು ಹಾಗೂ ಬೌದ್ಧ ಧರ್ಮದ ಪ್ರಚಾರವನ್ನು ಮಾಡಲು ಇಂತಹ ಸುಂದರವಾದ ಗುಹೆಗಳನ್ನು ಸ್ಥಾಪಿಸಿದರು ಎಂದುಸÉಲವರು ತಿಳಿಸುತ್ತಾರೆ.

PC:wikimedia.org

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಆಕ್ರಮಣದಿಂದಾಗಿ ಪ್ರತಿ ಬಾರಿಯು ಈ ಗುಹೆಗಳನ್ನು ವಿಭಿನ್ನ ಕಾರಣಕ್ಕಾಗಿ ಬಳಸಲಾಗುತ್ತಿತ್ತು. ಹಾಗಾಗಿಯೇ ಇಲ್ಲಿನ ಏಕಶಿಲೆಯ ವರ್ಣಚಿತ್ರಗಳು ವಿರೂಪಗೊಂಡಿರುವುದನ್ನು ಕಾಣಬಹುದಾಗಿದೆ.


PC:wikimedia.org

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಮುಂಬೈನಲ್ಲಿನ ನಾಲ್ಕು ಕಲ್ಲಿನ ಕೆತ್ತನೆಗಳು ಎಂದರೆ ಎಲಿಫೆಂಟಾ ಗುಹೆಗಳು, ಜೋಗೇಶ್ವರಿ ಗುಹೆಗಳು, ಮಂಡಪೇಶ್ವರ ಗುಹೆಗಳು, ಮಹಾಕಾಳಿ ಗುಹೆಗಳಾಗಿವೆ. ಆಶ್ಚರ್ಯವೆನೆಂದರೆ ಈ ನಾಲ್ಕು ಗುಹೆಗಳು ಕೂಡ ಒಂದೇ ಶಿಲ್ಪಗಳನ್ನು ಹೊಂದಿರುವುದು.


PC:wikimedia.org

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಈ ಮಂಡಪೇಶ್ವರ ಗುಹೆಯನ್ನು ಪುರಾತತ್ತ್ವ ಶಾಸ್ತ್ರದ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.


PC:wikimedia.org

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ಈ ಗುಹೆಗಳನ್ನು 18 ನೇ ಶತಮಾನದಲ್ಲಿ ಕೆಲವು ದಾಳಿಗಳಿಂದ ನಾಶವಾಗಿ ಉಳಿದವು ಮಾತ್ರವೇ ಇಲ್ಲಿ ಕಾಣಬಹುದಾಗಿದೆ.


PC:wikimedia.org

ಮಂಡಪೇಶ್ವರ ಗುಹೆ

ಮಂಡಪೇಶ್ವರ ಗುಹೆ

ನಿಶ್ಯಬ್ಧವಾಗಿರುವ ಈ ಪ್ರಾಚೀನವಾದ ಮಂಡಪೇಶ್ವರ ಗುಹೆಗಳು ಆನೇಕ ಚಾರಿತ್ರಿಕ ಸಂಘಟನೆಗಳಿಗೆ ನಿರ್ದಶನವಾಗಿದೆ.


PC:wikimedia.org

ಹೇಗೆ ತಲುಪಬೇಕು

ಹೇಗೆ ತಲುಪಬೇಕು

ಈ ಸುಂದರವಾದ ಮಂಡಪೇಶ್ವರ ಗುಹೆಗೆ ತಲುಪಲುಮಾರ್ಗ.

ಹೇಗೆ ತಲುಪಬೇಕು

ಹೇಗೆ ತಲುಪಬೇಕು

ವಿಮಾನ ಮಾರ್ಗದ ಮೂಲಕ: ಈ ಸುಂದರವಾದ ಮಂಡಪೇಶ್ವರ ಗುಹೆಗೆ ತಲುಪಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮುಂಬೈ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 20 ಕಿ,ಮೀ ದೂರದಲ್ಲಿದೆ ಈ ಗುಹೆ.

ಹೇಗೆ ತಲುಪಬೇಕು

ಹೇಗೆ ತಲುಪಬೇಕು

ರೈಲ್ವೆ ಮಾರ್ಗದ ಮೂಲಕ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮುಂಬೈ ನಿಲ್ದಾಣ. ಇಲ್ಲಿಂದ ಸುಮಾರು 2 ಕಿ,ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X