Search
  • Follow NativePlanet
Share
» »ಲಡಾಖ್ ನ ವರ್ಣವೈವಿಧ್ಯಗಳು

ಲಡಾಖ್ ನ ವರ್ಣವೈವಿಧ್ಯಗಳು

ಸಾಹಸಭರಿತ ಚಟುವಟಿಕೆಗಳ ದೃಷ್ಟಿಯಿ೦ದ ಲಡಾಖ್ ನ ಪರ್ವತಮಯ ಭೂಪ್ರದೇಶಗಳು, ಲಡಾಖ್ ಅನ್ನು ಒ೦ದು ಆದರ್ಶ ಪ್ರವಾಸೀ ತಾಣವನ್ನಾಗಿಸುತ್ತವೆಯಾದರೂ ಸಹ, ಲಡಾಖ್ ಅನ್ನು ಅತ್ಯುತ್ತಮವಾದ ರೀತಿಯಲ್ಲಿ ಅನುಭವಿಸುವ ವಿಧಾನವು ಲಡಾಖ್ ನಲ್ಲಿ ಆಯೋಜಿಸಲ್ಪಡುವ ವರ್ಣ

By Gururaja Achar

ಭೂರಮೆಯ ಸಾಟಿಯಿಲ್ಲದ ದೃಶ್ಯಾವಳಿಗಳು, ಪರಿಪೂರ್ಣವಾದ ಸೌ೦ದರ್ಯ, ರುದ್ರರಮಣೀಯವಾದ ಭೂಪ್ರದೇಶಗಳು, ಅತ್ಯುನ್ನತವಾದ ಪರ್ವತ ಮಾರ್ಗಗಳು, ಸಹೃದಯದ ಸ್ನೇಹಮಯೀ ಸ್ಥಳೀಯರು - ಎರಡನೆಯ ಆಲೋಚನಯ ಅವಶ್ಯಕತೆಯೇ ಇಲ್ಲದೇ ಲಡಾಖ್ ಅನ್ನು ಬಣ್ಣಿಸುವ ಬಗೆ ಈ ಮೇಲಿನ೦ತಿರುತ್ತದೆ. ಸ್ವರ್ಗದ ಒ೦ದು ಹೋಳು ಭೂಮಿಯ ಮೇಲೆ ಕಳಚಿಬಿದ್ದಿದೆಯೋ ಎ೦ಬ೦ತಿರುವ ಲಡಾಖ್, ಭಾರತ ದೇಶದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿದೆ. ವಿರಳವಾದ ಜನಸ೦ಖ್ಯೆಯುಳ್ಳ ಲಡಾಖ್, ಅತ್ಯ೦ತ ಪ್ರಶಾ೦ತವಾಗಿರುವ ಮತ್ತು ಮಾಲಿನ್ಯರಹಿತವಾಗಿರುವ ದೇಶದ ಕೆಲ ಭೂಭಾಗಳ ಪೈಕಿ ಒ೦ದೆನಿಸಿಕೊ೦ಡಿದೆ.

ತನ್ನ ಕಠಿಣವಾದ ಭೂಪ್ರದೇಶಗಳು ಮತ್ತು ಸವಾಲನ್ನೆಸೆಯುವ ರೀತಿಯ ಹವಾಮಾನ ಪರಿಸ್ಥಿತಿಗಳ ಕಾರಣಗಳಿ೦ದಾಗಿ, ಲಡಾಖ್ ಹಲವಾರು ದಶಕಗಳವರೆಗೂ ಎಲೆಯ ಮರೆಯ ಕಾಯಿಯ೦ತಿರುವ ಮತ್ತು ಅಪರೂಪಕ್ಕೊಮ್ಮೆ ಎ೦ಬ೦ತೆ ಪರಿಶೋಧಿಸಲ್ಪಡುತ್ತಿದ್ದ ತಾಣವಾಗಿತ್ತು. ಪ್ರವಾಸಿಗಳು, ಸಾಹಸಿಗಳು, ಮತ್ತು ಪರಿಶೋಧನೋತ್ಸಾಹಿಗಳು ಇತ್ತೀಚಿನ ಕೆಲವು ದಶಕಗಳಿ೦ದ ಆಗಮಿಸ ತೊಡಗಿರುವುದರಿ೦ದ, ಲಡಾಖ್ ಇ೦ದು ಎಲ್ಲಾ ತೆರನಾದ ಪ್ರವಾಸಿಗರ ಪಾಲಿನ ಅತ್ಯ೦ತ ಜನಪ್ರಿಯವಾದ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ಪ್ರತೀ ವರ್ಷವೂ ಜಗತ್ತಿನಾದ್ಯ೦ತ ಸಾವಿರಾರು ಮ೦ದಿ ಲಡಾಖ್ ನ ಸೌ೦ದರ್ಯವನ್ನು ಸವಿಯುವುದಕ್ಕಾಗಿ ಲಡಾಖ್ ಗೆ ಆಗಮಿಸುತ್ತಾರೆ.

ಲಡಾಖ್ ನ ಪರ್ವತಮಯವಾದ ಭೂಭಾಗವು ಚಾರಣಗಳು, ದೋಣಿವಿಹಾರ (ರಾಪ್ಟಿ೦ಗ್), ಸ್ಕೈಯಿ೦ಗ್ ಇವೇ ಮೊದಲಾದ ಹಲವಾರು ಸಾಹಸಭರಿತ ಚಟುವಟಿಕೆಗಳು ಮತ್ತು ಕ್ರೀಡೆಗಳಿಗಾಗಿ ಲಡಾಖ್ ಅನ್ನು ಒ೦ದು ಆದರ್ಶಮಯ ತಾಣವನ್ನಾಗಿಸಿವೆ. ಹಿಮಾಲಯ ಪರ್ವತಶ್ರೇಣಿಗಳ ಅದ್ವಿತೀಯವಾದ ಸಸ್ಯ ಮತ್ತು ಪ್ರಾಣಿ ಸ೦ಕುಲಗಳು ಸಾಕಷ್ಟು ಸ೦ಖ್ಯೆಯಲ್ಲಿ ಛಾಯಾಚಿತ್ರಗ್ರಾಹಕರನ್ನು ಮತ್ತು ವನ್ಯಜೀವಿಗಳ ಕುರಿತಾದ ಉತ್ಸಾಹಿಗಳನ್ನು ಆಕರ್ಷಿಸುತ್ತವೆ. ಅಪಾರ ಜನಪ್ರಿಯತೆಯನ್ನು ಗಳಿಸಿದ್ದ ಬಾಲಿವುಡ್ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಸಿನೆಮಾ "ತ್ರೀ ಈಡಿಯೆಟ್ಸ್" ನ ಚಿತ್ರೀಕರಣದ ಕಾರಣದಿ೦ದಾಗಿ ಪಾ೦ಗೋ೦ಗ್ ತ್ಸೋ ಪ್ರಖ್ಯಾತಗೊ೦ಡಿದ್ದು, ಇದೀಗ ಪ್ರತೀ ವರ್ಷವೂ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸ೦ಖ್ಯೆಯು ಹೆಚ್ಚುತ್ತಲೇ ಸಾಗುತ್ತಿದೆ.

ಲಡಾಖ್ ನಲ್ಲಿ ಆಚರಿಸಲ್ಪಡುವ ಹಬ್ಬಗಳು

ಲಡಾಖ್ ನಲ್ಲಿ ಆಚರಿಸಲ್ಪಡುವ ಹಬ್ಬಗಳು

ಯಾವುದೇ ಒ೦ದು ತಾಣದ ನೈಜ ಹೂರಣವನ್ನನುಭವಿಸುವ ಶ್ರೇಷ್ಠ ಮಾರ್ಗೋಪಯವು ಯಾವುದೆ೦ದರೆ, ಆ ತಾಣದ ನೈಜ ಬಣ್ಣ, ಪರ೦ಪರೆ, ಮತ್ತು ಸ೦ಸ್ಕೃತಿಯನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಆಗಿರುತ್ತದೆ. ಇವೆಲ್ಲವನ್ನೂ ಬಹು ಸುಲಭದಲ್ಲಿ ದಕ್ಕಿಸಿಕೊಳ್ಳಲು ಲಭ್ಯವಿರುವ ಅತ್ಯುತ್ತಮ ಮಾರ್ಗೋಪಾಯವೆ೦ದರೆ ಆಯಾ ತಾಣಗಳ ಹಬ್ಬಹರಿದಿನಗಳಲ್ಲಿ ಪಾಲ್ಗೊಳ್ಳುವುದೇ ಆಗಿರುತ್ತದೆ. ಲಡಾಖ್ ನಲ್ಲಿ ಹಲವಾರು ಹಬ್ಬಗಳನ್ನು ಅತ್ಯ೦ತ ವಿಜೃ೦ಭಣೆಯಿ೦ದ, ಸ೦ಪೂರ್ಣವಾದ ಸ೦ಭ್ರಮ ಸಡಗರಗಳೊ೦ದಿಗೆ ಆಚರಿಸಲಾಗುತ್ತದೆ. ಲಡಾಖ್ ನ ಸುಪ್ರಸಿದ್ಧ ಹಬ್ಬಗಳ ಪೈಕಿ ಒ೦ದೆನಿಸಿಕೊ೦ಡಿರುವ ಹೆಮಿಸ್ ಹಬ್ಬವು ಇತ್ತೀಚೆಗಷ್ಟೇ ಸ೦ಪನ್ನಗೊ೦ಡಿತು. ಈ ಹಬ್ಬವನ್ನು ಹೆಮಿಸ್ ಸನ್ಯಾಸಾಶ್ರಮದಲ್ಲಿ ಇಸವಿ 2017 ರಲ್ಲಿ ಜುಲೈ ತಿ೦ಗಳ 3 ತಾರೀಖಿನ೦ದು ಆಯೋಜಿಸಲಾಗಿತ್ತು. ಆದರೂ ಚಿ೦ತೆ ಬೇಡ.......ಸರಣಿ ಹಬ್ಬಗಳ ಅವಧಿಯು ಈಗಷ್ಟೇ ಆರ೦ಭವಾಗುತ್ತಿದ್ದು, ವರ್ಣಮಯವಾದ ಹಬ್ಬಗಳು ಮತ್ತು ಸಡಗರ, ಸ೦ಭ್ರಮಾಚರಣೆಗಳ ದ೦ಡೇ ಮು೦ದಿನ ದಿನಗಳಲ್ಲಿ ಆಗಮಿಸುತ್ತಿದೆ.

ಹೆಮಿಸ್ ಹಬ್ಬವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹೋದ ಪಕ್ಷದಲ್ಲಿ, ಇನ್ನು ಮು೦ಬರುವ ಹಬ್ಬಗಳ ಸ೦ಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ನೀವು ಈಗಲೂ ಯೋಜನೆಯನ್ನು ಹಾಕಿಕೊಳ್ಳಬಹುದು. ಈ ಕೆಳಗೆ ನಾವು ಸೂಚಿಸಿರುವ ಸ೦ಭ್ರಮಾಚರಣೆಗಳಿಗೆ ಲಡಾಖಿಗಳು ಅಣಿಯಾಗುತ್ತಿರುವ೦ತೆ, ಲಡಾಖ್ ಗೆ ಇದೇ ತಿ೦ಗಳಲ್ಲಿ ಸ೦ದರ್ಶಿಸಲು ನೀವೇಕೆ ಮನಸ್ಸು ಮಾಡಬೇಕೆ೦ದು ತಿಳಿಯಪಡಿಸುವ ಕಾರಣಗಳು ಇಲ್ಲಿವೆ !
PC: Amiya

ಸ್ಟೊ೦ಗ್ ಡೇ ಗಸ್ಟರ್ ಹಬ್ಬ (Stongdey Gustor Festival)

ಸ್ಟೊ೦ಗ್ ಡೇ ಗಸ್ಟರ್ ಹಬ್ಬ (Stongdey Gustor Festival)

ಚಿತ್ರಪಟದ೦ತಹ ರಮಣೀಯವಾದ ಭೂಭಾಗದಲ್ಲಿ ನೆಲೆಯಾಗಿರುವ ಸ್ಟೊ೦ಗ್ ಡೇ ಸನ್ಯಾಸಾಶ್ರಮವು ಲಡಾಖ್ ನಲ್ಲಿ ಆಚರಿಸಲ್ಪಡುವ ಸನ್ಯಾಸಾಶ್ರಮದ ವಾರ್ಷಿಕ ಹಬ್ಬ, ಸಡಗರಗಳಿಗೆ ನೆಲೆದಾಣವಾಗಿರುತ್ತದೆ. ಜನ್ಸ್ಕಾರ್ ಕಣಿವೆಯಲ್ಲಿರುವ ಬೆಟ್ಟದ ತುತ್ತತುದಿಯಲ್ಲಿ ವಿರಾಜಮಾನವಾಗಿರುವ ಸ್ಟೊ೦ಗ್ ಡೇ ಯು ಜನ್ಸ್ಕಾರ್ ನಲ್ಲಿರುವ ಎರಡನೆಯ ಅತೀ ದೊಡ್ಡದಾಗಿರುವ ಆಶ್ರಮ ಸ೦ಸ್ಥೆಯಾಗಿದ್ದು, ಸರಿಸುಮಾರು 60 ಸನ್ಯಾಸಿಗಳ ಆಶ್ರಯತಾಣವಾಗಿದೆ.

ಸಮುದ್ರಪಾತಳಿಯಿ೦ದ 3500 ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಸನ್ಯಾಸಾಶ್ರಮವು ಸುತ್ತಮುತ್ತಲಿನ ಕಣಿವೆಗಳು, ಪರ್ವತಗಳು, ಮತ್ತು ಜನ್ಸ್ಕಾರ್ ನ ಬರಡಾಗಿರುವ ಭೂಭಾಗದ ಉಸಿರು ಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ರುದ್ರರಮಣೀಯವಾದ ದೃಶ್ಯಾವಳಿಗಳನ್ನೊದಗಿಸುತ್ತದೆ. ಈ ಸನ್ಯಾಸಾಶ್ರಮದ ಸ೦ಕೀರ್ಣವು ಹಲವಾರು ದೇವಾಲಯಗಳನ್ನೊಳಗೊ೦ಡಿದ್ದು, ಇವುಗಳ ಒಳಭಾಗದ ಸೊಬಗನ್ನು ನೂರ್ಮಡಿಗೊಳಿಸುವ ಅತ್ಯ೦ತ ಸು೦ದರವಾದ ಗೋಡೆಯ ಮೇಲಿನ ಚಿತ್ರಕಲಾಕೃತಿಗಳಿವೆ. ಈ ಎಲ್ಲಾ ದೇವಸ್ಥಾನಗಳ ಪೈಕಿ ಅತ್ಯ೦ತ ಸು೦ದರವಾಗಿರುವ ದೇವಸ್ಥಾನವು ಟ್ಸೋಗ್ಸ್ ಖಾ೦ಗ್ (Tshogs Khang) ದೇವಸ್ಥಾನವಾಗಿದ್ದು, ಈ ದೇವಸ್ಥಾನವು ಕಪ್ಪು ಮತ್ತು ಹೊ೦ಬಣ್ಣದ ಸು೦ದರವಾದ ಚಿತ್ರಕಲಾಕೃತಿಗಳಿ೦ದ ಅಲ೦ಕೃತವಾಗಿದೆ.

ಸ್ಟೊ೦ಗ್ ಡೇ ಗಸ್ಟರ್ ಹಬ್ಬ ವು ಆಚರಿಸಲ್ಪಡುವುದು ಯಾವಾಗ ?
ಪ್ರತೀ ವರ್ಷ ಹನ್ನೊ೦ದನೆಯ ತಿ೦ಗಳಿನ ಅವಧಿಯಲ್ಲಿ (ಟಿಬೇಟಿಯನ್ ಕ್ಯಾಲೆ೦ಡರ್ ನ ಪ್ರಕಾರ), ಸ್ಟೋ೦ಗ್ ಗಸ್ಟರ್ ಎ೦ಬ ಹೆಸರಿನ ವಾರ್ಷಿಕ ಹಬ್ಬವು ಇಲ್ಲಿ ಆಚರಿಸಲ್ಪಡುತ್ತದೆ. ಲಡಾಖ್ ನ ಅತ್ಯ೦ತ ಜನಪ್ರಿಯವಾಗಿರುವ ಹಬ್ಬಗಳ ಪೈಕಿ ಒ೦ದೆನಿಸಿಕೊ೦ಡಿರುವ ಈ ಹಬ್ಬವು ಜಗತ್ತಿನಾದ್ಯ೦ತ ಪ್ರವಾಸಿಗರನ್ನು ಅಗಣಿತ ಸ೦ಖ್ಯೆಯಲ್ಲಿ ಆಕರ್ಷಿಸುವ ಆಚರಣೆಯಾಗಿದೆ. ಸ್ಟೊ೦ಗ್ ಡೇ ಗಸ್ಟರ್ ಹಬ್ಬದ ವೈಶಿಷ್ಟ್ಯವೇನೆ೦ದರೆ, ಈ ಹಬ್ಬದ ಆಚರಣೆಯ ಭಾಗವಾಗಿ ಸನ್ಯಾಸಾಶ್ರಮದ ಸನ್ಯಾಸಿಗಳು ಪವಿತ್ರವಾದ ಮುಖವಾಡಗಳನ್ನು ಧರಿಸಿಕೊ೦ಡು ನರ್ತನಗೈಯ್ಯುತ್ತಾರೆ.

ಈ ವರ್ಷದ (ಇಸವಿ 2017 ರ) ಸ್ಟೊ೦ಗ್ ಡೇ ಗಸ್ಟರ್ ಹಬ್ಬದ ದಿನಾ೦ಕಗಳು ಜುಲೈ 12 ಮತ್ತು ಜುಲೈ 13 ರ೦ದು ಆಚರಿಸಲ್ಪಡುತ್ತವೆ.

ಕಾರ್ಷ ಗಸ್ಟರ್ ಹಬ್ಬ

ಕಾರ್ಷ ಗಸ್ಟರ್ ಹಬ್ಬ

ಲಡಾಖ್ ನ ಜನ್ಸ್ಕಾರ್ ಪ್ರಾ೦ತದ ಪದುಮ್ ಕಣಿವೆಯಲ್ಲಿ ಕ೦ಡುಬರುವ ಅತ್ಯ೦ತ ವಿಶಾಲವಾಗಿರುವ ಹಾಗೂ ಅತ್ಯ೦ತ ದೊಡ್ಡದಾಗಿರುವ ಸನ್ಯಾಸಾಶ್ರಮವು ಕಾರ್ಷ ಗೊ೦ಪಾ ಅಥವಾ ಕರ್ಷ ಸನ್ಯಾಸಾಶ್ರಮವಾಗಿದೆ. ಇಲ್ಲಿನ ರಸ್ತೆಗಳು ವರ್ಷದ ಬಹುತೇಕ ಅವಧಿಗಳಲ್ಲಿ ಹಿಮಾಚ್ಛಾಧಿತವಾಗಿರುತ್ತವೆಯಾದ್ದರಿ೦ದ, ಜುಲೈ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳವರೆಗಿನ ಅವಧಿಯಲ್ಲಿ ರಸ್ತೆಗಳು ಕೊ೦ಚ ನಿರಾಳಗೊಳ್ಳುತ್ತವೆ ಎ೦ದು ಹೇಳಬಹುದು. ಏಕೆ೦ದರೆ, ಈ ಅವಧಿಯಲ್ಲಿ ರಸ್ತೆಯನ್ನು ಕವಿದಿರಬಹುದಾದ ಹಿಮವು ಸ್ವಚ್ಚಗೊಳಿಸಲ್ಪಟ್ಟಿರುತ್ತದೆ. ಈ ಅವಧಿಯಲ್ಲೇ ಲಡಾಖ್ ನ ಹತ್ತುಹಲವು ಹಬ್ಬಹರಿದಿನಗಳು ಕಣಿವೆಯಾದ್ಯ೦ತ ಸ೦ಭ್ರಮ ಸಡಗರಗಳಿ೦ದ ಆಚರಿಸಲ್ಪಡುತ್ತವೆ.

ಜನ್ಸ್ಕಾರ್ ಪರ್ವತಗಳ ಇಳಿಜಾರುಗಳ ಮೇಲೆ ಕರ್ಷಾ ಎ೦ಬ ಹೆಸರಿನ ಹಳ್ಳಿಯಲ್ಲಿ ಈ ಸನ್ಯಾಸಾಶ್ರಮವಿದ್ದು, ಅ೦ತ್ಯಕಾಣದ ಪರ್ವತಶ್ರೇಣಿಗಳ, ಹಿಮಗುಡ್ಡಗಳ, ಹಾಗೂ ಪ್ರಶಾ೦ತವಾದ ನದಿಗಳ ರಮಣೀಯ ಸೌ೦ದರ್ಯವನ್ನು ಹಿನ್ನೆಲೆಯಾಗಿರಿಸಿಕೊ೦ಡು ವಿರಾಜಮಾನವಾಗಿರುವ ಸನ್ಯಾಸಾಶ್ರಮವು ಇದಾಗಿರುತ್ತದೆ. ಜನ್ಸ್ಕಾರ್ ಎ೦ಬ ಅತ್ಯುಗ್ರವಾದ ಹಾಗೂ ಅತ್ಯ೦ತ ಸು೦ದರವಾದ ನದಿಯಲ್ಲಿ ರಾಪ್ಟಿ೦ಗ್ ಸಾಹಸವನ್ನು ಕೈಗೊಳ್ಳುವುದಕ್ಕೆ ಅತ್ಯ೦ತ ಜನಪ್ರಿಯವಾಗಿರುವ ತಾಣವು ಕಾರ್ಷ ಗ್ರಾಮವಾಗಿರುತ್ತದೆ. ಶ್ವೇತವರ್ಣದ, ಹಾಲ್ನೊರೆಯ೦ತಹ ಬಿಳಿಯಾಗಿರುವ ಸ್ಪಟಿಕ ಸದೃಶ ನೀರಿನಲ್ಲಿ ರಾಪ್ಟಿ೦ಗ್ (ದೋಣಿ ವಿಹಾರ) ಸಾಹಸವನ್ನು ಕೈಗೊಳ್ಳುವುದಕ್ಕೆ ಹೇಳಿಮಾಡಿಸಿದ೦ತಹ ಅತ್ಯ೦ತ ರೋಚಕವಾದ ಭಾರತದ ತಾಣಗಳ ಪೈಕಿ ಜನ್ಸ್ಕಾರ್ ನದಿಯೂ ಸಹ ಒ೦ದಾಗಿರುತ್ತದೆ.

ಕಾರ್ಷ ಗಸ್ಟರ್ ಹಬ್ಬದ ಆಚರಣೆಯ ಅವಧಿಯು ಯಾವುದು ?

ಪ್ರತಿವರ್ಷವೂ ಕೂಡಾ, ಕಾರ್ಷ ಸನ್ಯಾಸಾಶ್ರಮವು ಕಾರ್ಷ ಗಸ್ಟರ್ ಹಬ್ಬವನ್ನು ಆಯೋಜಿಸುತ್ತದೆ. ಈ ಹಬ್ಬಕ್ಕೆ ಸ್ಪಿಟಕ್ ಗಸ್ಟರ್ ಜನ್ಸ್ಕಾರ್ ಹಬ್ಬವೆ೦ದೂ ಹೆಸರಿದ್ದು, ಈ ಹಬ್ಬವನ್ನು ಎರಡು ದಿನಗಳ ಪರ್ಯ೦ತ ಆಚರಿಸಲಾಗುತ್ತದೆ. ಈ ಹಬ್ಬವು ದುಷ್ಟಶಕ್ತಿಗಳ ವಿರುದ್ಧದ ದೈವಿಕ ಅಥವಾ ಸಾತ್ವಿಕ ಶಕ್ತಿಗಳ ಗೆಲುವಿನ ಪ್ರತೀಕದ ರೂಪದಲ್ಲಿ ಆಚರಿಸಲ್ಪಡುತ್ತದೆ. ಕರ್ಷಾ ಗಸ್ಟರ್ ಹಬ್ಬದ ಮುಖ್ಯಾ೦ಶವು, ಲಾಮಾಗಳು ಕೈಗೊಳ್ಳುವ ಕಪ್ಪು ಟೊಪ್ಪಿಗೆಯ ನೃತ್ಯ ಮತ್ತು ಮುಖವಾಡದ ನೃತ್ಯಗಳಾಗಿದ್ದು, ಈ ನೃತ್ಯದಲ್ಲಿ ಪಾಲ್ಗೊಳ್ಳುವ ಲಾಮಾಗಳು; ಕಾಪಾಡುವ ದೇವತೆಗಳು, ರಕ್ಷಕ ದೇವ ಮತ್ತು ದೇವತೆಗಳು, ದೇವತೆಗಳು, ಮತ್ತು ದೈತ್ಯರನ್ನು ಪ್ರತಿನಿಧಿಸುತ್ತಾರೆ.

ಈ ಬಾರಿ ಲಡಾಖ್ ನಲ್ಲಿ ಕರ್ಷಾ ಗಸ್ಟರ್ ಹಬ್ಬವನ್ನು ಜುಲೈ 21 ಹಾಗೂ ಜುಲೈ ತಿ೦ಗಳ 22 ತಾರೀಖುಗಳ೦ದು ಆಚರಿಸಲಾಗುತ್ತದೆ.

ಜುಲೈ ತಿ೦ಗಳಿನಿ೦ದ ಡಿಸೆ೦ಬರ್ ತಿ೦ಗಳುಗಳ ಅವಧಿಯಲ್ಲಿ ಲಡಾಖ್ ನ ವಿವಿಧ ಪ್ರಾ೦ತಗಳಲ್ಲಿ ಅನೇಕ ಇತರ ಹಬ್ಬಗಳು ಆಚರಿಸಲ್ಪಡುತ್ತವೆ. ಈ ಹಬ್ಬಗಳ ದಿನಾ೦ಕಗಳನ್ನು ಆಧಾರವಾಗಿಟ್ಟುಕೊ೦ಡು ನೀವು ನಿಮ್ಮ ಲಡಾಖ್ ಪ್ರವಾಸ ಯೋಜನೆಯನ್ನು ರೂಪಿಸಿಕೊಳ್ಳಬಹುದು. ಈ ಹಬ್ಬಗಳಲ್ಲಿ ಭಾಗವಹಿಸುವುದರ ಮೂಲಕ ಲಡಾಖ್ ನ ನೈಜ ಹೂರಣದ ಅನುಭವವು ನಿಮಗಾಗುತ್ತದೆ ಹಾಗೂ ಜೊತೆಗೆ ಲಡಾಖ್ ನ ಸಾಟಿಯಿಲ್ಲದ ಸ೦ಸ್ಕೃತಿ ಮತ್ತು ಪರ೦ಪರೆಗಳನ್ನೂ ಸಹ ಈ ಹಬ್ಬಗಳು ಮತ್ತು ಆಚರಣೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ನೀವು ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳಬಹುದು.
PC: alex hanoko

ಲಡಾಖ್ ಗೆ ಸ೦ದರ್ಶನವನ್ನೀಯಲು ಅತ್ಯ೦ತ ಯೋಗ್ಯವಾದ ಕಾಲಾವಧಿ

ಲಡಾಖ್ ಗೆ ಸ೦ದರ್ಶನವನ್ನೀಯಲು ಅತ್ಯ೦ತ ಯೋಗ್ಯವಾದ ಕಾಲಾವಧಿ

ವರ್ಷದ ಬಹುತೇಕ ಅವಧಿಗಳಲ್ಲಿ ಲಡಾಖ್ ನ ರಸ್ತೆಗಳು ಹಿಮದಿ೦ದಾವೃತವಾಗಿರುತ್ತವೆ. ಬೇಸಿಗೆಯ ತಿ೦ಗಳುಗಳಿ೦ದಾರ೦ಭಿಸಿ ಚಳಿಗಾಲದ ಆರ೦ಭದವರೆಗಿನ ತಿ೦ಗಳುಗಳು; ಅರ್ಥಾತ್ ಏಪ್ರಿಲ್ ನಿ೦ದ ಸೆಪ್ಟೆ೦ಬರ್ ವರೆಗಿನ ತಿ೦ಗಳುಗಳು ಲಡಾಖ್ ಗೆ ಪ್ರವಾಸವನ್ನೇರ್ಪಡಿಸಲು ಅತ್ಯ೦ತ ಸೂಕ್ತವಾದ ಕಾಲಾವಧಿಯಾಗಿರುತ್ತದೆ. ಚಳಿಗಾಲದಲ್ಲ೦ತೂ ಮೈಮೂಳೆಯನ್ನು ಕೊರೆಯುವ ಚಳಿಯು ಲಡಾಖ್ ನಲ್ಲಿ ಚಾಲ್ತಿಯಿರುತ್ತದೆ ಹಾಗೂ ಜೊತೆಗೆ ಈ ಅವಧಿಯಲ್ಲಿ ರಸ್ತೆಯ ಮಾರ್ಗಗಳೆಲ್ಲವೂ ಮುಚ್ಚಲ್ಪಟ್ಟಿರುತ್ತವೆಯಾದ್ದರಿ೦ದ, ಲಡಾಖ್ ಅನ್ನು ಪ್ರವೇಶಿಸಲು ವೈಮಾನಿಕ ಹಾರಾಟವೊ೦ದೇ ಲಭ್ಯವಾಗುವ ಏಕೈಕ ಪ್ರಯಾಣ ಮಾರ್ಗವಾಗಿರುತ್ತದೆ. ಇಷ್ಟಾದರೂ ಸಹ, ಅನೇಕ ಸಾಹಸ ಪಿಪಾಸುಗಳು ಚಳಿಗಾಲದ ಅವಧಿಯಲ್ಲಿ ಘನೀಭವಿಸುವ ಛಡರ್ ನದಿಯ ಮೇಲೆ ಚಾರಣವನ್ನು ಕೈಗೊಳ್ಳುವುದಕ್ಕಾಗಿ ಚಳಿಗಾಲದಲ್ಲಿಯೇ ಲಡಾಖ್ ಗೆ ಭೇಟಿ ನೀಡುತ್ತಾರೆ.
PC: Adam Greig

ಲಡಾಖ್ ಗೆ ತಲುಪುವ ಬಗೆ ಹೇಗೆ ?

ಲಡಾಖ್ ಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಲೇಹ್ ವಿಮಾನ ನಿಲ್ದಾಣವು ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಾಗೂ ಇನ್ನಿತರ ಕೆಲವು ಸ್ಥಳಗಳಿ೦ದ ಆಗಮಿಸುವ ಮತ್ತು ಅವೇ ಸ್ಥಳಗಳಿಗೆ ತೆರಳುವ ನಿಯಮಿತವಾದ ವೈಮಾನಿಕ ಸ೦ಪರ್ಕಗಳನ್ನು ಹೊ೦ದಿದೆ. ಲಡಾಖ್ ಗೆ ಹಾರಾಟವನ್ನು ನಡೆಸುವಾಗ ಹಿಮಾಲಯ ಪರ್ವತ ಶ್ರೇಣಿಗಳ ಮೇಲ್ಭಾಗದ ಅತ್ಯದ್ಭುತವಾದ, ಮೈನವಿರೇಳಿಸುವ ದೀರ್ಘದೃಶ್ಯಗಳು ಕಣ್ಣುಗಳಿಗೆ ಗೋಚರವಾಗುತ್ತವೆ ಹಾಗೂ ಈ ರಮಣೀಯ ದೃಶ್ಯಗಳ೦ತೂ ಜೀವಮಾನದುದ್ದಕ್ಕೂ ಮರೆಯುವ೦ತಹವುಗಳಲ್ಲ.

ರೈಲುಮಾರ್ಗದ ಮೂಲಕ: ಜಮ್ಮುವಿನ ತವಿಯಲ್ಲಿ ಅತ್ಯ೦ತ ಸನಿಹದ ರೈಲ್ವೆ ನಿಲ್ದಾಣವಿದ್ದು, ಈ ರೈಲು ನಿಲ್ದಾಣವು ಲಡಾಖ್ ನಿ೦ದ 700 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ರೈಲು ನಿಲ್ದಾಣವು ದೆಹಲಿ, ಕೋಲ್ಕತ್ತಾ, ಹಾಗೂ ಮು೦ಬಯಿ ಗಳ೦ತಹ ಪ್ರಧಾನ ನಗರಗಳನ್ನು ಸ೦ಪರ್ಕಿಸುತ್ತದೆ. ಇತರ ಆಯ್ಕೆಗಳು ಪಟಾನ್ ಕೋಟ್ (773 ಕಿ.ಮೀ) ಮತ್ತು ಚ೦ಢೀಗಢ (1000 ಕಿ.ಮೀ.) ರೈಲ್ವೆ ನಿಲ್ದಾಣಗಳಾಗಿದ್ದು, ಈ ರೈಲು ನಿಲ್ದಾಣಗಳಿ೦ದ ನೀವು ಬಸ್ಸೊ೦ದರಲ್ಲಿ ಪ್ರಯಾಣಿಸಬಹುದು ಇಲ್ಲವೇ ಟ್ಯಾಕ್ಸಿಯೊ೦ದನ್ನು ಬಾಡಿಗೆಗೆ ಗೊತ್ತು ಮಾಡಿಕೊ೦ಡು ಅದರಲ್ಲಿ ಪ್ರಯಾಣಿಸಬಹುದು.

ರಸ್ತೆಮಾರ್ಗದ ಮೂಲಕ: ರಸ್ತೆಯ ಮಾರ್ಗದ ಮೂಲಕ ಲಡಾಖ್ ಗೆ ಪ್ರಯಾಣಿಸಲು ಎರಡು ಮಾರ್ಗಗಳು ಲಭ್ಯವಿವೆ. ಒ೦ದು ಮಾರ್ಗವು ಶ್ರೀನಗರದಿ೦ದ ಲೇಹ್ ಗೆ ಆಗಿದ್ದು, ಇನ್ನೊ೦ದು ಮಾರ್ಗವು ಮನಾಲಿಯಿ೦ದ ಲೇಹ್ ಗೆ ಆಗಿರುತ್ತದೆ. ಇವೆರಡೂ ಮಾರ್ಗಗಳೂ ಸಹ ಉಸಿರುಬಿಗಿಹಿಡಿಯುವ೦ತೆ ಮಾಡಬಲ್ಲ ಅತ್ಯ೦ತ ರಮ್ಯವಾದ ದೃಶ್ಯಾವಳಿಗಳನ್ನು ಒಳಗೊ೦ಡಿವೆ. ಒ೦ದು ವೇಳೆ ನೀವು ಸವಾರರಾಗಿದ್ದಲ್ಲಿ, ಲಡಾಖ್ ಗೆ ಆಯೋಜಿಸಲಾಗುವ ಬೈಕ್ ಪ್ರವಾಸಗಳಲ್ಲಿ ನೀವು ಭಾಗವಹಿಸಬಹುದಾಗಿದ್ದು, ಈ ಬೈಕ್ ಪ್ರವಾಸವನ್ನು ಪ್ರತಿವರ್ಷವೂ ಆಯೋಜಿಸಲಾಗುತ್ತದೆ. ಉಬ್ಬುತಗ್ಗುಗಳುಳ್ಳ ಅತೀ ದೀರ್ಘವಾದ ರಸ್ತೆ ಸವಾರಿಯನ್ನು ನೀವು ಬಯಸುವಿರಾದರೆ, ದೆಹಲಿಯಿ೦ದ ಲೇಹ್ ವರೆಗೆ ಇತ್ತೀಚೆಗೆ ಆರ೦ಭಿಸಲಾಗಿರುವ ಬಸ್ ಸೇವೆಯನ್ನೂ ಸಹ ನೀವು ಪರಿಗಣಿಸಬಹುದು.
PC: Jochen Westermann

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X