Search
  • Follow NativePlanet
Share
» »ಏಳು ಶೃಂಗಗಳ ಮಧ್ಯದ ಅದ್ಭುತ ಹೇಮಕುಂಡ

ಏಳು ಶೃಂಗಗಳ ಮಧ್ಯದ ಅದ್ಭುತ ಹೇಮಕುಂಡ

By Vijay

ಹಿಮಾಲಯ ಪರ್ವತಗಳ ಸುಂದರ ಮೈಸಿರಿಯನ್ನು ಅನಾವರಣಗೊಳಿಸುವ ಸ್ಥಾನದಲ್ಲಿ ನೆಲೆಸಿರುವ ಉತ್ತರಾಖಂಡ ರಾಜ್ಯವು ತನ್ನಲ್ಲಿರುವ ಪ್ರವಾಸಿ ಆಕರ್ಷಣೆಯ ಸುಂದರ ಪ್ರಕೃತಿ ತಾಣಗಳ ಜೊತೆಗೆ ಸಾಕಷ್ಟು ಧಾರ್ಮಿಕ ಆಕರ್ಷಣೆಗಳುಳ್ಳ ರಾಜ್ಯವಾಗಿಯೂ ಹೆಸರುವಾಸಿಯಾಗಿದೆ. ಸಾಹಸ ಮನೋಭಾವನೆಯನ್ನು ಪ್ರೇರೆಪಿಸುವಂತಹ ಪ್ರವಾಸಿ ಚಟುವಟಿಕೆಗಳಿರುವ ಈ ರಾಜ್ಯದಲ್ಲಿ ಭಕ್ತಿ ರಸವನ್ನು ಚಿಮ್ಮುವಂತೆ ಮಾಡುವ ಹಲವಾರಿ ತಾಣಗಳಿವೆ ಎಂಬುದು ವಿಶೇಷ.

ಉಚಿತ ಕೂಪನ್ : ಯಾತ್ರಾದಿಂದ ಫ್ಲೈಟ್ ಬುಕ್ಕಿಂಗ್ ಮೇಲೆ ರೂ. 8000 ದವರೆಗೂ ಕಡಿತ

ಹಿಂದೂ ಧರ್ಮವಾಗಲಿ ಇಲ್ಲವೆ ಮುಸ್ಲಿಮ್ ಇಲ್ಲವೆ ಸಿಖ್, ಎಲ್ಲ ಧರ್ಮಿಯರಿಗೂ ಪವಿತ್ರವಾದ ಒಂದಿಲ್ಲೊಂದು ಕ್ಷೇತ್ರಗಳು, ದೇವಾಲಯಗಳು, ಮಸೀದಿಗಳು ಈ ರಾಜ್ಯದ ತುಂಬೆಲ್ಲ ಕಾಣಬಹುದಾಗಿದೆ. ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಅವಲೋಕಿಸಿದಾಗ ಸಿಗುವ ಅಂತಹ ಒಂದು ಸ್ಥಳವೆಂದರೆ ಹೇಮಕುಂಡ. ಹೇಮಕುಂಟ ಎಂತಲೂ ಸಹ ಕರೆಯಲ್ಪಡುವ ಈ ತಾಣವು ರಾಜ್ಯದ ಚಮೋಲಿ ಜಿಲ್ಲೆಯಲ್ಲಿದ್ದು ಸಿಖ್ ಧರ್ಮದವರ ಪಾಲಿಗೆ ಪವಿತ್ರ ಕ್ಷೇತ್ರವಾಗಿ ಸೆಳೆಯುತ್ತದೆ.

ವಿಶೇಷ ಲೇಖನ : ಹಿಮಾಲಯನ್ ರಾಶ್ಟ್ರೀಯ ಉದ್ಯಾನ

ಸಿಖ್ ಧರ್ಮದವರು ಇದನ್ನು ಗುರುದ್ವಾರಾ ಹೇಮಕುಂಡ್ ಸಾಹಿಬ್ ಜಿ ಎಂದು ಕರೆಯುತ್ತಾರೆ ಹಾಗೂ ಇದು ಅವರ ಪವಿತ್ರ ತೀರ್ಥ ಯಾತ್ರಾ ಕೇಂದ್ರವಾಗಿದೆ. ಸಿಖ್ ಧರ್ಮದ ಗುರುಗಳ ಪೈಕಿ ಒಬ್ಬರಾದ ಗುರು ಗೋಬಿಂದ್ ಸಿಂಗ್ ಜಿ ಅವರಿಗೆ ಈ ಕ್ಷೇತ್ರವು ಮುಡಿಪಾಗಿದೆ. ಹಿಮನದಿಯೊಂದರ ಬಳಿ ಈ ಕ್ಷೇತ್ರವು ನೆಲೆಸಿದ್ದು ಸುತ್ತಲೂ ಏಳು ಪರ್ವತ ಶಿಖರಗಳಿಂದ ಆವರಿಸಿದೆ. ಗಮನಿಸ ಬೇಕಾದ ಅಂಶವೆಂದರೆ ಈ ಏಳೂ ಶಿಖರ ಶೃಂಗಗಗ್ಳು ನಿಶಾನ್ ಸಾಹಿಬ್ ನಿಂದ ಭೂಷಿತವಾಗಿವೆ. ನಿಶಾನ್ ಸಾಹಿಬ್ ಎಂದರೆ ಸಿಖ್ ಧರ್ಮ ಸೂಚಿಸುವ ತ್ರಿಭುಜಾಕಾರದ ಪವಿತ್ರ ಧ್ವಜ.

ವಿಶೇಷ ಲೇಖನಗಳು : ಉತ್ತರಾಖಂಡ ಪ್ರಭಾವಿ ಆಕರ್ಷಣೆಗಳು ಗಂಗೋತ್ರಿಯ ಪ್ರವಾಸ ಅಷ್ಟು ಸುಲಭವಲ್ಲ

ಹೇಮಕುಂಡ:

ಹೇಮಕುಂಡ:

ಉತ್ತರಾಖಂಡದ ಇನ್ನಿತರ ಪ್ರದೇಶಗಳಂತೆ ಹೇಮಕುಂಡವೂ ಕೂಡ ಅತ್ಯಂತ ಸುಂದರವಾದ ಹಾಗೂ ಜನಪ್ರಿಯ ಪ್ರದೇಶ. ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಪಾರ.

ಚಿತ್ರಕೃಪೆ: Panesar00888

ಹೇಮಕುಂಡ:

ಹೇಮಕುಂಡ:

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಹೇಮಕುಂಡ ಸಿಖ್ಖರ ಪ್ರಸಿದ್ಧ ಯಾತ್ರಾ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 15200 ಅಡಿ ಎತ್ತರದಲ್ಲಿದ್ದು ಇದನ್ನು ರಿಷಿಕೇಶ-ಬದ್ರಿನಾಥ್ ಹೆದ್ದಾರಿಯಲ್ಲಿರುವ ಗೋಬಿಂದಘಾಟ್ ಮೂಲಕವಷ್ಟೇ ತಲುಪಬಹುದಾಗಿದೆ. ಹೇಮಕುಂಡಕ್ಕೆ ತೆರಳುತ್ತಿರುವ ಯಾತ್ರಿಕರು.

ಚಿತ್ರಕೃಪೆ: Joshua Singh

ಹೇಮಕುಂಡ:

ಹೇಮಕುಂಡ:

ಹೇಮಕುಂಡ ಎಂಬ ಹೆಸರು ಹೇಮ ಮತ್ತು ಕುಂಡ ಎಂಬ ಎರಡು ಸಂಸ್ಕೃತ ಪದಗಳಿಂದ ಉತ್ಪತ್ತಿಯಾಗಿದೆ. ಇವುಗಳ ಅರ್ಥ ಕ್ರಮವಾಗಿ ಹಿಮ/ಮಂಜು ಮತ್ತು ಬಟ್ಟಲು ಎಂದಾಗುತ್ತದೆ. ಈ ಏಳು ಶಿಖರಗಳ ಬೆಟ್ಟವನ್ನು ಸಪ್ತ ಶೃಂಗ ಎಂದು ಕರೆಯುತ್ತಾರೆ. ಸಿಖ್ಖರ ನಂಬಿಕೆಯ ಪ್ರಕಾರ, ಇದೇ ಬೆಟ್ಟದ ಮೇಲ್ ಸಿಖ್ಖರ ಧರ್ಮ ಗುರು, ಗುರು ಗೋವಿಂದ ಸಿಂಗ್ ಜೀ ವರ್ಷಾನುಗಟ್ಟಲೆ ಧ್ಯಾನ ಮಾಡಿದ್ದರು.

ಚಿತ್ರಕೃಪೆ: Guptaele

ಹೇಮಕುಂಡ:

ಹೇಮಕುಂಡ:

ಈ ಪ್ರದೇಶವು, ಗುರು ಗೋವಿಂದ ಸಿಂಗ್ ಜೀ ಅವರಿಗೆ ಅರ್ಪಿತವಾಗಿರುವ ಇಲ್ಲಿನ ಗುರುದ್ವಾರ ಹಾಗೂ ಹೇಮ ಕುಂಡ್ ಸಾಹಿಬ್ ಕಾರಣದಿಂದಲೂ ಬಹಳ ಪ್ರಸಿದ್ಧವಾಗಿದೆ. ಗುರುದ್ವಾರದ ನಿರ್ಮಾಣವನ್ನು 1960 ರಲ್ಲಿ ಆರಂಭಿಸಲಾಯಿತು ಹಾಗೂ ಇದರ ಮೇಲುಸ್ತುವಾರಿಯನ್ನು ಮೇಜರ್ ಜನರಲ್ ಹರ್ಕಿರತ್ ಸಿಂಗ್ ವಹಿಸಿದ್ದರು.

ಚಿತ್ರಕೃಪೆ: Satbir 4

ಹೇಮಕುಂಡ:

ಹೇಮಕುಂಡ:

ಪ್ರವಾಸಿಗರು ಗುರುದ್ವಾರದ ಸಮೀಪದಲ್ಲಿ ಒಂದು ದೊಡ್ಡ ಸರೋವರವನ್ನೂ ಕಾಣಬಹುದು. ಇದು ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ತನಕ ಹಿಮದ ಕಾರಣದಿಂದ ಮುಚ್ಚಲ್ಪಟ್ಟಿರುತ್ತದೆ. ಮೇ ತಿಂಗಳಿನಲ್ಲಿ ಸಿಖ್ಖರು ಕರಸೇವಾ ಎಂಬ ಹೆಸರಿನಲ್ಲಿ ಮುಚ್ಚಿರುವ ರಸ್ತೆಯನ್ನು ತೆರೆಯುವ ಕೆಲಸ ಮಾಡುತ್ತಾರೆ.

ಚಿತ್ರಕೃಪೆ: Dash - Dot

ಹೇಮಕುಂಡ:

ಹೇಮಕುಂಡ:

ನಂದಾ ದೇವಿ ರಾಷ್ಟ್ರೀಯ ಉದ್ಯಾನ ಸಮುದ್ರ ಮಟ್ಟದಿಂದ ಸುಮಾರು 7817 ಮೀ ಎತ್ತರವಾಗಿದ್ದು ಹೇಮಕುಂಡದ ಒಂದು ಪ್ರಸಿದ್ಧ ಸ್ಥಳ. ಹೂಗಳ ಸುಂದರವಾದ ಕಣಿವೆ ಜೀವವೈವಿಧ್ಯದ ಮೀಸಲು ಸ್ಥಳವಾಗಿದೆ ಈ ತಾಣ.

ಚಿತ್ರಕೃಪೆ: Prashant Ram

ಹೇಮಕುಂಡ:

ಹೇಮಕುಂಡ:

ಹೇಮಕುಂಡ ಸರೋವರ, ಇದೊಂದು ಪವಿತ್ರವಾದ ಕೆರೆಯಾಗಿದ್ದು, ವರ್ಷದ ಎಂಟು ತಿಂಗಳುಗಳು ಕಾಲ ಇಲ್ಲಿನ ನೀರು ಹಿಮವಾಗಿರುತ್ತದೆ. ಈ ಸರೋವರ ಗುರುದ್ವಾರದ ಸಮೀಪದಲ್ಲೆ ಇದ್ದು ಸುತ್ತಲೂ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದೆ. ಇಲ್ಲಿನ ಸ್ಥಳೀಯ ಜನರ ಪ್ರಕಾರ, ಸಿಖ್ಖರ ಹತ್ತನೆಯ ಗುರುವಾದ ಗುರು ಗೋವಿಂದ ಸಿಂಗ್ ಇದರ ದಡದಲ್ಲೆ ಕುಳಿತು ಧ್ಯಾನ ಮಾಡಿದ್ದರು.

ಚಿತ್ರಕೃಪೆ: Dash - Dot

ಹೇಮಕುಂಡ:

ಹೇಮಕುಂಡ:

ಗುರುದ್ವಾರಾ ಹೇಮಕುಂಡ ಸಾಹಿಬಕ್ಕೆ ಹೋಗುವಾಗ ಸಿಗುವ ಒಂದು ಪುಟ್ಟ ಗ್ರಾಮವೇ ಘಂಗಾರಿಯಾ. ಗೋವಿಂದಧಾಮ ಎಂದೂ ಕರೆಯಲ್ಪಡುವ ಹಿಮಾಲಯ ಶ್ರೇಣಿಯಲ್ಲಿರುವ ಈ ತಾಣವು ಸಮುದ್ರ ಮಟ್ಟದಿಂದ 3049 ಮೀಟರ್ ಎತ್ತರದಲ್ಲಿ ನೆಲೆಸಿದೆ. ಹೇಮಕುಂಡ ಮತ್ತು ಹೂಗಳ ಕಣಿವೆಗೆ ಚಾರಣಕ್ಕೆ ಹೋಗುವ ಮಾರ್ಗಗಳಿಗೆ ಇದೊಂದು ಬೇಸ್ ಕ್ಯಾಂಪ್ ಆಗಿ ಸೇವೆ ಸಲ್ಲಿಸುತ್ತದೆ.

ಚಿತ್ರಕೃಪೆ: Guptaele

ಹೇಮಕುಂಡ:

ಹೇಮಕುಂಡ:

ಗೋವಿಂದಘಾಟ್ ಮೂಲಕ ಹೇಮಕುಂಡ ಸಾಹಿಬ ತಲುಪುವಾಗ ದಾರಿಯಲ್ಲಿ ಹೂಗಳ ಕಣಿವೆ ಸಿಗುತ್ತದೆ. ಗಂಘಾರಿಯಾ ಹಳ್ಳಿಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಈ ಸ್ಥಳ ಸುತ್ತಲೂ ಇರುವ ಹಿಮ ಆವೃತವಾದ ಬೆಟ್ಟಗಳಿಂದ ಸುತ್ತುವರೆದಿದೆ. ಇಲ್ಲಿ ಹಳದಿ ಆನಿಮೋನ್ಸ್, ಡಿಯಾನ್ಥಸ್, ಚೆಂಡು ಹೂ, ಡೈಸಿ ಹೂ, ಹಿಮಾಲಯದ ನೀಲಿ ಗಸಗಸೆ ಮತ್ತು ಸ್ನೇಕ್ ಲಿಲ್ಲಿ ಯಂತಹ ಹಲವಾರು ತಳಿಯ ಹೂವುಗಳನ್ನು ಕಾಣಬಹುದು.

ಚಿತ್ರಕೃಪೆ: Alosh Bennett

ಹೇಮಕುಂಡ:

ಹೇಮಕುಂಡ:

ಇಲ್ಲಿರುವ ಲಕ್ಷ್ಮಣ ದೇವಾಲಯವೂ ನೋಡಲರ್ಹವಾಗಿದೆ. ಇದನ್ನು ಇಲ್ಲಿ ಲಕ್ಷ್ಮಣ ಗೋಪಾಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದರ ಸುತಲೂ ನಯನಮನೋಹರವಾದ ಪರ್ವತಗಳ ಅದ್ಭುತ ದೃಶ್ಯಗಳನ್ನು ಸವಿಯಬಹುದು ಹಾಗೂ ಇಲ್ಲಿನ ವಾತಾವರಣವೂ ಸಹ ತಂಪಾಗಿರುತ್ತದೆ.

ಚಿತ್ರಕೃಪೆ: Guptaele

ಹೇಮಕುಂಡ:

ಹೇಮಕುಂಡ:

ಹೇಮಕುಂಡದ ಬಳಿಯಿರುವ ವಸುಧಾರಾ ಜಲಪಾತವು ಇನ್ನೊಂದು ನೋಡಲರ್ಹವಾದ ತಾಣವಾಗಿದೆ. 400 ಅಡಿ ಎತ್ತರದಿಂದ ಬೆಟ್ಟದ ಮೂಲಕ ತೆವಳುತ್ತ ಬೀಳುವ ನೀರು ಮತ್ತು ಸುತ್ತಲೂ ಇರುವ ಬೆಟ್ಟಗಳ ಕಾರಣದಿಂದಾಗಿ ಈ ಜಲಪಾತ ಬಹಳ ಸುಂದರವಾಗಿ ಕಾಣಿಸುತ್ತದೆ. ಇದು ಚಾರಣ ಪ್ರಿಯರಿಗೂ ಬಹಳ ಇಷ್ಟವಾದ ತಾಣ. ಮಾನಾ ಹಳ್ಳಿಯಿಂದ ಆರಂಭವಾಗುವ ಚಾರಣ 2-3 ಕಿ.ಮೀ ತನಕ ಉತ್ತಮವಾದ ರಸ್ತೆಯನ್ನು ಹೊಂದಿದೆ ಆದರೆ ನಂತರದ ಹಾದಿ ಕಠಿಣವಾಗಿದೆ.

ಚಿತ್ರಕೃಪೆ: Guptaele

ಹೇಮಕುಂಡ:

ಹೇಮಕುಂಡ:

ಹೇಮಕುಂಡಕ್ಕೆ ಭೇಟಿ ನೀಡಲಿಚ್ಛಿಸುವವರು ಜೂನ್ ನಿಂದ ಅಕ್ಟೋಬರ್ ತನಕದ ಸಮಯದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ ಹೊರಗಡೆ ಸುತ್ತಾಡಿ ಇಲ್ಲಿನ ಸ್ಥಳಗಳನ್ನು ನೋಡಲು ಸೂಕ್ತವಾಗಿದೆ ಮತ್ತು ಈ ಅವಧಿಯಲ್ಲಷ್ಟೇ ನಂದಾದೇವಿ ಜೀವವೈವಿಧ್ಯ ಮೀಸಲು ತಾಣವನ್ನು ನೋಡಲು ಸಾಧ್ಯ.

ಚಿತ್ರಕೃಪೆ: Guptaele

ಹೇಮಕುಂಡ:

ಹೇಮಕುಂಡ:

ಗೋವಿಂದ ಘಾಟ್, ರಿಷಿಕೇಶ, ಪುರಿ, ರುದ್ರಪ್ರಯಾಗ, ಕರ್ಣ ಪ್ರಯಾಗ, ಉಖಿಮಠ, ಶ್ರೀನಗರ ಕೋಟದ್ವಾರಾ, ಡೆಹ್ರಾಡೂನ್, ಹರಿದ್ವಾರಗಳಿಂದ ಚಮೋಲಿ ಗೆ ಉತ್ತಮ ರಸ್ತೆ ಸಂಪರ್ಕವಿದೆ. ಅಲ್ಲದೆ ಗೋವಿಂದ ಘಾಟ್ ನಿಂದ 19 ಕಿ.ಮೀ ಚಾರಣ ಮಾಡಿಯೂ ಹೇಮಕುಂಡ ತಲುಪಬಹುದು. ರಿಷಿಕೇಷ ಹೇಮಕುಂಡಕ್ಕೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣ. ಇದು ಗೋವಿಂದ ಘಾಟ್ ನಿಂದ 273 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Amareshwara Sainadh

ಹೇಮಕುಂಡ:

ಹೇಮಕುಂಡ:

ಹೇಮಕುಂಡದ ಪ್ರಶಾಂತಮಯ ವಾತಾವರಣ.

ಚಿತ್ರಕೃಪೆ: Travayegeur (Sahil)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X