Search
  • Follow NativePlanet
Share
» »ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

By Vijay

ನಾವು ಮೊದಲಿನಿಂದಲೂ ಸಾಕಷ್ಟು ಕಥೆ ಪುರಾಣಗಳನ್ನು ನಮ್ಮ ಹಿರಿಯರ ಬಾಯಿಯಿಂದ ಕೇಳುತ್ತ, ಪುಸ್ತಕಗಳಲ್ಲಿ ಓದುತ್ತ ತಿಳಿದಿದ್ದೇವೆ. ಅದೇಷ್ಟೊ ಸಂತರ, ಪರಮ ಭಕ್ತರ ಕಷ್ಟ ಕಾರ್ಪಣ್ಯದ ಜೀವನದ ಹೊರತಾಗಿಯೂ ಅವರು ತಮ್ಮ ಅಪ್ರತಿಮ ಭಕ್ತಿ ಶೃದ್ಧೆಗಳಿಂದ ದೇವರ ಕೃಪಾ ಕಟಾಕ್ಷಕ್ಕೆ ಒಳಗಾದ ಉದಾಹರಣೆಗಳನ್ನು ನಾವು ನೋಡಬಹುದು.

ದೇಶೀಯ ವಿಮಾನ ಪ್ರಯಾಣ ದರದ ಮೇಲೆ ನೇರ 800 ರೂಪಾಯಿಯಷ್ಟು ಕಡಿತ ಪಡೆಯಲು ಇಲ್ಲಿ ಕ್ಲಿಕ್ಕಿಸಿ.

ಭಕ್ತಿ, ನಂಬಿಕೆಗಳ ಬುನಾದಿಯನ್ನು ಹೊಂದಿರುವ ಹಿಂದೂ ಧರ್ಮದಲ್ಲಿ ಅನೇಕ ಮಹಾ ಭಕ್ತರ ಜೀವನಗಾಥೆಯನ್ನು ಚರಿತ್ರೆಗಳ ಮೂಲಕ ತಿಳಿಯಬಹುದಾಗಿದೆ. ಸಾಮಾನ್ಯ ಮನುಷ್ಯರಾಗಿದ್ದುಕೊಂಡೆ ಅಸಾಮಾನ್ಯ ಜೀವನ ಶೈಲಿಯನ್ನು ರೂಪಿಸಿಕೊಂಡು ದೇವರ ಕೃಪೆಗೆ ಪಾತ್ರರಾದ ಈ ಭಕ್ತರು ಇತರರಿಗೆ ಪ್ರೇರಕರು. ಅಂತೆಯೆ ಇಂದಿಗೂ ಸಾಕಷ್ಟು ಜನ ಭಕ್ತಾದಿಗಳು ಅಂತಹ ಸಂತ/ಭಕ್ತರನ್ನು ಕೊಂಡಾಡುತ್ತಾರೆ ಹಾಗೂ ಅವರಿಗೆ ಮುಡಿಪಾಗಿ ದೇವಾಲಯಗಳೂ ಸಹ ನಿರ್ಮಾಣವಾಗಿರುವುದನ್ನು ಕಾಣಬಹುದು.

ಪ್ರಸ್ತುತ ಲೇಖನವು ಅಂತಹ ಒಬ್ಬ ಪರಮ ಶಿವ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮನ ಹಿನ್ನಿಲೆ ಹಾಗೂ ಅವಳಿಗೆ ಮುಡಿಪಾದ ದೇವಸ್ಥಾನದ ಕುರಿತು ತಿಳಿಸುತ್ತದೆ. ಈ ದೇವಸ್ಥಾನಕ್ಕೆ ಆಂಧ್ರಪ್ರದೇಶ, ಕರ್ನಾಟಕ ಮುಂತಾದ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷವೂ ಭೇಟಿ ನೀಡುತ್ತಾರೆ. ಈ ದೇವಸ್ಥಾನ ಇರುವುದು ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ಧಾರ್ಮಿಕ ಕ್ಷೇತ್ರವಾದ ಶ್ರೀಶೈಲಂನಲ್ಲಿ. ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನವು ದೇಶದ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. [12 ಪವಿತ್ರ ಜ್ಯೋತಿರ್ಲಿಂಗಗಳು]

ಲೇಖನದಲ್ಲಿರುವ ಚಿತ್ರಗಳಿಗೆ ಚಿತ್ರಕೃಪೆ: Vjvikram

ನೀವು ಓದಲು ಇಷ್ಟಪಡಬಹುದಾದ ಇತರೆ ಲೇಖನಗಳು:

ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ಭಕ್ತಿ, ಶೃದ್ಧೆಗಳ ಮಿಲನ ಕೂಡಲಸಂಗಮ

ಲೇ...ಪಕ್ಷಿ ಇಂದ ಉಂಟಾದ ಲೇಪಾಕ್ಷಿ

ಧರ್ಮದ ನೆಲೆಯ ಧಾರ್ಮಿಕ ತಾಣ ಧರ್ಮಸ್ಥಳ

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಶ್ರೀಶೈಲಂನಲ್ಲಿರುವ ಹೇಮರೆಡ್ಡಿ ಮಲ್ಲಮನ ದೇವಸ್ಥಾನವು ಹೊಸತಾಗಿ ನಿರ್ಮಿಸಲಾದ ದೇವಾಲಯವಾಗಿದ್ದು, ಮೇ 26, 2010 ರಲ್ಲಿ ಅಂದಿನ ಆಂಧ್ರಪ್ರದೇಶದ ಮುಖ್ಯ ಮಂತ್ರಿಯಾಗಿದ್ದ, ಕೆ.ರೋಸಯ್ಯರವರಿಂದ ಉದ್ಘಾಟನೆಗೊಂಡಿದೆ.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಈ ಮೊದಲು ಈ ಸ್ಥಳದಲ್ಲಿ ಹರಿದಿರುವ ನೀರನ್ನು ಹೇಮರೆಡ್ಡಿ ಮಲ್ಲಮ್ಮನ ಕಣ್ಣೀರು ಎಂದು ಕರೆಯಲಾಗುತ್ತಿತ್ತು. ನಂತರ ಇಲ್ಲಿ ಈ ದೇವಸ್ಥಾನದ ನಿರ್ಮಾಣ ಮಾಡಲಾಯಿತು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಮಲ್ಲಮ್ಮನ ಕಥೆ: ಹಿಂದೆ ಅಂದರೆ ಸುಮಾರು 14 ನೇಯ ಶತಮಾನದ ಸಂದರ್ಭದಲ್ಲಿಈ ಪ್ರದೇಶದಲ್ಲಿ ನಾಗಿರೆಡ್ಡಿ ಹಾಗೂ ಗೌರಮ್ಮ ಎಂಬ ಸತಿ ಪತಿಗಳಿದ್ದರು. ರೆಡಿ ಕುಲದವರಾಗಿದ್ದ ಇವರು ಈ ಪ್ರದೇಶದಲ್ಲಿ ಅತಿ ಶ್ರೀಮಂತರಾಗಿದ್ದರು. ಆದರೆ ಇವರಿಗೆ ಸ್ವಲ್ಪವೂ ಅಹಂಕಾರವಿರಲಿಲ್ಲ. ಬದಲು ಪರೋಪಕಾರದ ಬುದ್ಧಿಯಿತ್ತು. ಚಿತ್ರದಲ್ಲಿರುವುದು ಹೇಮರೆಡ್ಡಿ ಮಲ್ಲಮನ ಕಣ್ಣೀರು ಧಾರೆ.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ತಮ್ಮ ಕೈಲಾದಷ್ಟು ಬಡ ಬಗ್ಗರಿಗೆ ದಾನ ಧರ್ಮ ಮುಂತಾದ ಪುಣ್ಯ ಕರ್ಮಗಳನ್ನು ಮಾಡುತ್ತಿದ್ದರು. ಇಷ್ಟಾಗಿಯೂ ಅವರ ಮುಖಗಳಲ್ಲಿ ನಗುವಾಗಲಿ ಮನದಲ್ಲಿ ಸಂತಸವಾಗಲಿ ಇರಲಿಲ್ಲ. ಅದಕ್ಕೆ ಕಾರಣ ಎಲ್ಲಾ ಇದ್ದರೂ ಸಹ ಅವರಿಗೆ ಸಂತಾನ ಭಾಗ್ಯವಿಲ್ಲದಿರುವುದು. ಒಮ್ಮೆ ಆ ದಂಪತಿಗಳು ತಮ್ಮ ಬಯಕೆಯನ್ನು ನಿವೇದಿಸಲು ಶ್ರೀಶೈಲಂನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದರು ಹಾಗೂ ಶಿವನನ್ನು ತುಂಬು ಮನಸ್ಸಿನಿಂದ ಪೂಜಿಸುತ್ತ ಪ್ರಾರ್ಥಿಸಿದರು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಕೆಲ ಕಾಲದ ನಂತರ ನಾಗಿರೆಡ್ಡಿಯ ಕನಸಿನಲ್ಲಿ ಶಿವನು ಪ್ರತ್ಯಕ್ಷನಾಗಿ ನಿನಗೊಬ್ಬ ಪರಮಭಕ್ತೆ ಮಗಳು ಹುಟ್ಟುತ್ತಾಳೆ ಎಂದು ತಿಳಿಸಿದನು. ಈ ವಿಷಯವನ್ನು ಆತ ತನ್ನ ಮಡದಿಗೆ ಹೇಳಿದಾಗ ಇಬ್ಬರೂ ಸಂತೋಷಿಸಿದರು. ಇದಾದ ನಂತರ ಅವರಿಗೆ ಶಿವನ ಆದೇಶದ ಹಾಗೆ ಮಗಳು ಹುಟ್ಟಿದಳು ಹಾಗೂ ಅವಳಿಗೆ ಮಲ್ಲಮ್ಮ ಎಂದು ನಾಮಕರಣ ಮಾಡಲಾಯಿತು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಮಲ್ಲಮ್ಮ ಚಿಕ್ಕವಳಿದ್ದಾಗಿನಿಂದಲೆ ಶಿವನನ್ನು ಕುರಿತು ಪೂಜಿಸುವಲ್ಲಿ ಆಸಕ್ತಿ ತೋರುತ್ತಿದ್ದಳು. ಇದರಿಂದ ದಂಪತಿಗಳಿಗೆ ಸಂತೋಷವಾಯಿತು. ಕ್ರಮೇಣ ಮಲ್ಲಮ್ಮ ಬೆಳೆದು ಶಿವನ ಪರಮ ಭಕ್ತೆಯಾದಳು. ಬೆಳೆದ ಮಗಳನ್ನು ನಾಗಿರೆಡ್ಡಿ ಹಾಗೂ ಗೌರಮ್ಮ ದಂಪತಿಗಳು ಪಕ್ಕದ ಗ್ರಾಮದ ಶ್ರೀಮಂತ ವ್ಯಕ್ತಿಯಾಗಿದ್ದ ಹೇಮರೆಡ್ಡಿ ಎಂಬುವನ ಮಗನಾದ ಬರಮರೆಡ್ಡಿಗೆ ಕೊಟ್ಟು ಮದುವೆ ಮಾಡಿದರು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಕುಟುಂಬಕ್ಕೆ ಮಲ್ಲಮ್ಮ ಕಾಳಿಡುತ್ತಿದ್ದಂತೆಯೆ ಅವರ ಐಶ್ವರ್ಯ ಅಭಿವೃದ್ಧಿಯಾಯಿತು. ಅಲ್ಲಿಯೂ ಸಹ ಮಲ್ಲಮ್ಮ ತನ್ನ ಶಿವನ ಪೂಜೆಯನ್ನು ಮುಂದುವರೆಸಿದಳು. ಆದರೆ ಮಲ್ಲಮ್ಮನ ನಾದಿನಿ ಹಾಗೂ ಅತ್ತೆ ಒಳ್ಳೆಯ ಮನಸ್ಸಿನವರಾಗಿರಲಿಲ್ಲ. ಅವರಿಬ್ಬರೂ ಸೇರಿ ಮಲ್ಲಮ್ಮನಿಗೆ ಕಿರುಕುಳ ಕೊಡಲಾರಂಭಿಸಿದರು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಅಷ್ಟಾಗಿಯೂ ಮಲ್ಲಮ್ಮ ಎಲ್ಲ ಕಷ್ಟಗಳನ್ನು ಅನುಭವಿಸುತ್ತ, ಕೆಲಸಕಾರ್ಯಗಳನ್ನು ಮಾಡುತ್ತ ಶಿವನ ಪೂಜೆ ಮುಂದುವರೆಸಿದಳು. ಇದನ್ನು ಕಂಡ ಆಕೆಯ ಅತ್ತೆ ಮತ್ತು ನಾದಿನಿಯು ಅವಳನ್ನು ದನ ಕಾಯಲೂ ಸಹ ಕಳಿಸಿ ಕೊಡಲು ಆರಂಭಿಸಿದರು. ಆದರೂ ಅವಳ ಭಕ್ತಿಯಲ್ಲಿ ಏನೂ ಕಡಿಮೆಯಾಗಲಿಲ್ಲ.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಒಂದೊಮ್ಮೆ ಇಬ್ಬರೂ ಸೇರಿ ಮಗ ಬರಮರೆಡ್ಡಿಯೊಂದಿಗೆ ಅವನ ಹೆಂಡತಿಯಾದ ಮಲ್ಲಮ್ಮನ ಕುರಿತು ಇಲ್ಲಸಲ್ಲದ್ದನ್ನು ಹೇಳಿ ಅವನ ತಲೆ ತುಂಬಿಸಿ ಅವಳನ್ನು ಕೊಲ್ಲುವಂತೆ ಪ್ರೇರೆಪಿಸಿದರು. ಅದರಂತೆ ಮಲ್ಲಮ್ಮನ ಪತಿಯು ಅವಳನ್ನು ಕೊಲ್ಲುವ ದೃಷ್ಟಿಯಿಂದ ಅವಳಿರುವ ಕಡೆ ಬಂದಾಗ, ಸ್ವತಃ ಶಿವನೆ ಋಷಿಯ ವೇಷದಲ್ಲಿ ಬಂದು ತನ್ನ ಹೆಂಡತಿಯನ್ನು ಹರಸುತ್ತಿರುವುದನ್ನು ಕಂಡು ಸ್ಥಂಭಿಭೂತನಾಗಿಬಿಟ್ಟನು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಅವಳ ಭಕ್ತಿಯ ಪರಾಕಾಷ್ಠೆಯ ಮುಂದೆ ಹೇಮರೆಡ್ಡಿ ಕುಟುಂಬದವರೆಲ್ಲರೂ ತಲೆದೂಗಿದರು. ನಂತರ ಮಲ್ಲಮ್ಮಳು ಸಾಂಸಾರಿಕ ಜೀವನದಿಂದ ಹೊರಬಂದು ಶಿವತತ್ವದ ಕುರಿತು ಪ್ರವಚನ ನೀಡುತ್ತ ಎಲ್ಲೆಡೆ ಅಲೆದಾಡಿ ಕೊನೆಗೆ ಶಿವನ ಪಾದ ಸೇರಿದಳು.

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಹೇಮರೆಡ್ಡಿ ಮಲ್ಲಮನ ದೇವಸ್ಥಾನ:

ಇಂದಿಗೂ ಸಹ ಶ್ರೀಶೈಲಂ ಮಹಾ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದ ಹಿಂಭಾಗದಲ್ಲಿ ಮಲ್ಲಮ್ಮನ ಆಕಳು ಕೊಟ್ಟಿಗೆಯನ್ನು ಕಾಣಬಹುದಾಗಿದೆ. ಮಲ್ಲಮ್ಮನ ವಿಗ್ರಹದ ಬಳಿ ಹರಿದಿರುವ ನೀರನ್ನು ಆಕೆಯ ಕಣ್ಣೀರು ಎಂದು ನಂಬಲಾಗಿದ್ದು ಆ ನೀರು ದಿವ್ಯ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X