Search
  • Follow NativePlanet
Share
» »ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!

ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!

ಪ್ರಳಯಕಾರಕ ತ್ರಿಮೂರ್ತಿಗಳಲ್ಲೊಬ್ಬನಾದ ಶಿವನು ಹಿಂದುಗಳಿಂದ ಆರಾಧಿಸಲ್ಪಡುವ ಪ್ರಖ್ಯಾತ ದೇವರಾಗಿದ್ದು ಶಿವನ ಬೃಹತ್ ಪ್ರತಿಮೆಗಳು ಭಾರತದ ಹಲವು ಸ್ಥಳಗಳಲ್ಲಿ ಕಂಡುಬರುತ್ತವೆ

By Vijay

ಈತ ಕೈಲಾಸ ಪರ್ವತದಲಿ ಹಿಮಗಡ್ಡೆಗಳ ಮರಗಟ್ಟುವಂತಹ ಚಳಿಯಲಿ ಚರ್ಮದ ಒಂದು ಹೊದಿಕೆಯನ್ನು ಮಾತ್ರವೆ ಉಟ್ಟು ಬರಿಮೈನಲ್ಲೆ ಇದ್ದು ಧ್ಯಾನ ಮಗ್ನನಾಗಿರುತ್ತಾನೆ, ಶಂಕರಿಯನ್ನು ಹೀರುತ್ತ ಕಾಪಾಲವನ್ನು ಹಿಡಿದು ಮೈಮೇಲೆಲ್ಲ ಭಸ್ಮವ ಲೇಪಿಸಿಕೊಂಡು ಸ್ಮಶಾನದಲ್ಲಿ ಓಡಾಡುತ್ತಿರುತ್ತಾನೆ, ತ್ರಿಕಾಲ ಜ್ಞಾನಿಯಾಗಿ ಮೂರು ಕಣ್ಣುಗಳನ್ನು ಹೊಂದಿದ್ದು ಸರ್ವ ಲೋಕವನ್ನೆ ನಾಶಮಾಡುವಂತಹ ಅಪಾರ ಶಕ್ತಿಯುಳ್ಳವನಾಗಿದ್ದು ಸದಾ ಧ್ಯಾನದಲ್ಲಿ ಲೀನನಾಗಿರುತ್ತಾನೆ.

ಅಷ್ಟೆ ಅಲ್ಲ, ಹಟಯೋಗದ ಮಹಾನ್ ಯೋಗಿಯಾಗಿಯೂ, ಸರ್ವ ಲೋಕದ ಮೂರು ಸೂತ್ರಧಾರಿಗಳಲೊಬ್ಬನಾಗಿಯೂ, ಭಕ್ತರ ಭಕ್ತಿಗೆ ಕ್ಷಣದಲ್ಲೆ ಸೋಲುವ ಸಾಂಬ ಸದಾಶಿಅವನಾಗಿಯೂ, ಬೆಡಿಕೊಂಡು ಬರುವ ಭಕ್ತರ ಸಕಲ ಕಷ್ಟಗಳನ್ನು ದೂರ ಮಾಡಿಸುವ ಕರುಣಾಮಯಿಯಾಗಿಯೂ ಪೂಜಿಸಲ್ಪಡುತ್ತಾನೆ. ಅವನೆ ಪರಮ ಶಿವ, ಪರಮೇಶ್ವರ ಅಥವಾ ಮಹಾದೇವ. ಶಿವನನ್ನು ಆರಾಧಿಸುವ ಕೋಟಿ ಕೋಟಿ ಜನ ಭೂಮಿಯ ಮೇಲಿದ್ದಾರೆ. ಶಿವನ ಹಲವು ರೂಪ ಹಾಗೂ ಗುಣಲಕ್ಷಣಗಳನ್ನು ಕೊಂಡಾಡುವವರಿದ್ದಾರೆ. ಶಿವನ ಭವ್ಯ ರೂಪವನ್ನು ನೋಡುವುದೆಂದೆರೆನೆ ಒಂದು ರೀತಿಯ ರೋಮಾಂಚನವು ಭಕ್ತರಲ್ಲುಂಟಾಗುತ್ತದೆ.

ಹೇಗೆ ನೋಡಿದರೂ ಅಂದ, ನಮ್ಮ ಶಿವನೆ ಚೆಂದ!

ಹಾಗಾದರೆ, ಬನ್ನಿ ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಶಿವನ ಕೆಲವು ಅಪರೂಪದ ಹಾಗೂ ದೃಢ ಕಾಯದ ಪ್ರತಿಮೆಗಳ ಕುರಿತು ತಿಳಿಯೋಣ. ಈ ಬೃಹತ್ ಶಿವನ ಪ್ರತಿಮೆಗಳು ತಮ್ಮ ಉಪಸ್ಥಿತಿಯಿಂದಾಗಿಯೆ ಇಂದು ಪ್ರವಾಸಿ ಆಕರ್ಷಣೆಗಳಾಗಿ ಗಮನಸೆಳೆಯುತ್ತವೆ. ಸಾಂಬ ಸದಾಶಿವನ ಮುಗ್ಧತೆಯನ್ನು ಅನಾವರಣಗೊಳಿಸುವ ಈ ಪ್ರತಿಮೆಗಳನ್ನು ಎಷ್ಟು ಬಾರಿ ನೋಡಿದರೂ ಮನಸ್ಸಿಗೆ ತೃಪ್ತಿ ಎನ್ನುವುದೆ ಸಿಗುವುದಿಲ್ಲ ಎಂಬುದು ಹಲವು ಭಕ್ತರ ಅಭಿಪ್ರಾಯವಾಗಿದೆ.

123 ಅಡಿಗಳಷ್ಟು ಎತ್ತರ

123 ಅಡಿಗಳಷ್ಟು ಎತ್ತರ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿರುವ ಶಿವ ಪ್ರತಿಮೆಯು ಭಾರತದಲ್ಲಿರುವ ಅತಿ ಎತ್ತರದ ಹಾಗೂ ಜಗತ್ತಿನ ಎರಡನೇಯ ಅತಿ ದೊಡ್ಡ ಶಿವನ ಪ್ರತಿಮೆಯಾಗಿದೆ. ಹಸಿರಾದ ಉದ್ಯಾನದ ಮಧ್ಯೆ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಹೊಂದಿರುವ ಈ ಪ್ರತಿಮೆಯು ನೋಡಲು ಬಲು ಆಕರ್ಷಕವಾಗಿದೆ. ಈ ಅದ್ಭುತ ಪ್ರತಿಮೆಯು 123 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: varun suresh

ನಾಮ್ಚಿ

ನಾಮ್ಚಿ

ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದಲ್ಲಿರುವ ನಾಮ್ಚಿ ಪಟ್ಟಣದ ಸಿದ್ಧೇಶ್ವರಧಾಮದಲ್ಲಿ 33 ಮೀ. ಗಳಷ್ಟು ಎತ್ತರದ ಅದ್ಭುತ ಶಿವ ಪ್ರತಿಮೆಯಿದೆ. ಕೇವಲ ದೊಡ್ಡದಾದ ಶಿವ ಪ್ರತಿಮೆ ಮಾತ್ರವಲ್ಲದೆ, ಸಿದ್ಧೇಶ್ವರಧಾಮದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳು ಹಾಗೂ ಚಾರ್ ಧಾಮ್ ಗಳಲ್ಲಿ ಕ್ಕಂಡುಬರುವ ಶಿವಲಿಂಗಗಳ ಪ್ರತಿಕೃತಿಗಳಿವೆ.

ಚಿತ್ರಕೃಪೆ: Ankit Darsi

ಶಿವಗಿರಿ

ಶಿವಗಿರಿ

ಉತ್ತರ ಕರ್ನಾಟಕ ಭಾಗದ ವಿಜಯಪುರದಿಂದ ಮೂರು ಕಿ.ಮೀ ದೂರದಲ್ಲಿ ಉಕ್ಕಳಿ ರಸ್ತೆಯಲ್ಲಿರುವ ಶಿವಗಿರಿ ಎಂಬಲ್ಲಿ 85 ಅಡಿಗಳಷ್ಟು ಎತ್ತರದ ಈ ಅದ್ಭುತ ಶಿವ ಪ್ರತಿಮೆಯಿದೆ. ಸಿಮೆಂಟು ಹಾಗೂ ಉಕ್ಕಿನಿಂದ ನಿರ್ಮಿಸಲಾದ ಈ ಪ್ರತಿಮೆಯು 1500 ಟನ್ ಗಳಷ್ಟು ಭಾರವಿದ್ದು ಕರ್ನಾಟಕದ ಎರಡನೆಯ ಅತಿ ಎತ್ತರದ ಶಿವ ಪ್ರತಿಮೆಯಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Kumar lalit choudhary

ಗುಜರಾತ್

ಗುಜರಾತ್

ಗುಜರಾತ್ ರಾಜ್ಯದ ದ್ವಾರಕಾದ ಬಳಿ ಸ್ಥಿತವಿರುವ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯದ ಆವರಣದಲ್ಲಿರುವ ಈ ಬೃಹತ್ ಶಿವ ಪ್ರತಿಮೆಯು ಪ್ರವಾಸಿಗರ ಬಲು ಸುಂದರ ಆಕರ್ಷಣೆಯಾಗಿದೆ. ಶ್ವೇತ ಬಣ್ಣದಲ್ಲಿ ಕಳೆಯಿಂದ ಕೂಡಿರುವ ಈ ಪ್ರತಿಮೆಯು 82 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Emmanuel DYAN

ಮುರುಗೇಶ ಪಾಳ್ಯ

ಮುರುಗೇಶ ಪಾಳ್ಯ

ಬೆಂಗಳೂರಿನ ಮುರುಗೇಶಪ್ಪಾಳ್ಯ ಬಡಾವಣೆಯಲ್ಲಿರುವ ಕೆಂಪ್ ಫೋರ್ಟ್ ಶಿವ ದೇವಾಲಯದ ಶಿವನ ಪ್ರತಿಮೆಯು ನೋಡಲು ಬಲು ಆಕರ್ಷಕವಾಗಿದೆ. ಇದೊಂದು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾದ ಶಿವನ ಸನ್ನಿಧಿಯಾಗಿದೆ. 65 ಅಡಿಗಳಷ್ಟು ಎತ್ತರದ ಶ್ವೇತವರ್ಣದ ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ ಇದರ ಅತಿ ಪ್ರಮುಖ ಆಕರ್ಷಣೆ. ಹಿಮಾಲಯ ಪರ್ವತಗಳ ಹಿನ್ನಿಲೆಯಲ್ಲಿ ಜಟದಲ್ಲಿ ಗಂಗಾಧಾರಿಯಾಗಿ ಪ್ರತಿಷ್ಠಾಪಿಸಲಾಗಿರುವ ಈ ಪ್ರತಿಮೆ ನಯನ ಮನೋಹರವಾಗಿದೆ.

ಚಿತ್ರಕೃಪೆ: Rajib Shome

ಜಬಲ್ಪುರ

ಜಬಲ್ಪುರ

ಮಧ್ಯಪ್ರದೇಶ ರಾಜ್ಯದ ಜಬಲ್ಪುರವು ಪ್ರವಾಸಿ ವಿಚಾರದಿಂದ ಪ್ರಸಿದ್ಧಿ ಪಡೆದ ತಾಣವಾಗಿದೆ. ಕನ್ಹಾ ರಾಷ್ಟ್ರೀಯ ಉದ್ಯಾನ, ಬೇದಾಘಾಟ್ ಜಲಪಾತ ಹಾಗೂ 64 ಯೋಗಿನಿಯರ ದೇವಾಲಯವು ಜಬಲ್ಪುರದಲ್ಲಿವೆ. ಇದರ ಜೊತೆಗೆ ಈ ಜಿಲ್ಲೆಯ ಕಚ್ನಾರ್ ನಗರದಲ್ಲಿರುವ ಶಿವ ಪ್ರತಿಮೆಯೂ ಸಹ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಶಿವನ ಈ ಪ್ರತಿಮೆಯು 76 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Hshukla

ಒಡಿಶಾ

ಒಡಿಶಾ

ಒಡಿಶಾ ರಾಜ್ಯದಲ್ಲಿರುವ ಪ್ರಸಿದ್ಧ ಭಂಜನಗರ ಜಲಾಶಯವು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಜಲಾಶಯದ ಪಕ್ಕದಲ್ಲಿರುವ ಬಾಲೇಶ್ವರ ಬೆಟ್ಟದಲ್ಲಿರುವ ಶಿವನ ಪ್ರತಿಮೆಯು ನೋಡಲು ಬಲು ಆಕರ್ಷಕವಾಗಿದೆ. ಇದರ ಇನ್ನೊಂದು ವಿಶೇಷತೆಯೆಂದರೆ ಈ ಪ್ರತಿಮೆಯ ಎದುರಿನಲ್ಲಿ ದೊಡ್ಡದಾದ ನಂದಿಯ ಪ್ರತಿಮೆಯನ್ನೂ ಸಹ ನಿರ್ಮಿಸಲಾಗಿದೆ.

ಚಿತ್ರಕೃಪೆ: MKar

ಉತ್ತರಾಖಂಡ

ಉತ್ತರಾಖಂಡ

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇಲ್ಲಿರುವ ಶಿವನ ಪ್ರತಿಮೆಯು ಪಾರ್ಮಾರ್ಥ ನಿಕೇತನದ ಮುಂದಿದ್ದು ಪ್ರತಿ ಗಂಗಾ ಆರತಿಯನ್ನು ಈ ಪ್ರತಿಮೆ ಎದುರ್ಮುಖ ಮಾಡಿ ನಿಂತು ಮಾಡಲಾಗುತ್ತದೆ. ಇದೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯೂ ಹೌದು.

ಚಿತ್ರಕೃಪೆ: Iqbal Mohammed

ಖಾಂಡ್ವಾ

ಖಾಂಡ್ವಾ

ಮಧ್ಯಪ್ರದೇಶ ರಾಜ್ಯದ ಖಾಂಡ್ವಾ ಜಿಲ್ಲೆಯಲ್ಲಿರುವ ನರ್ಮದಾ ನದಿ ತಟದ ಓಂಕಾರೇಶ್ವರ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ನರ್ಮಾದಾ ನದಿಯಲ್ಲಿ ರೂಪಿತವಾದ ಶಿವಪುರಿ ಎಂಬ ದ್ವೀಪವೊಂದರಲ್ಲಿ ಶಿವನ ದೇವಲಾಯವಿದ್ದು ಅಲ್ಲಿ ಬೃಹತ್ ಶಿವ ಪ್ರತಿಮೆಯನ್ನು ಕಾಣಬಹುದು.

ಚಿತ್ರಕೃಪೆ: YashiWong

ಗುಜರಾತ್

ಗುಜರಾತ್

ಗುಜರಾತ್ ರಾಜ್ಯದ ವಡೋದರಾ (ಹಿಂದೆ ಬರೋಡಾ) ನಗರದಲ್ಲಿರುವ ಸುರ್ ಸಾಗರ ಕೆರೆಯು ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಇದರ ಇನ್ನೊಂದು ವಿಶೇಷತೆಯೆಂದರೆ ಈ ಕೆರೆಯ್ ಮಧ್ಯದಲ್ಲಿ ನಿರ್ಮಿಸಲಾಗಿರುವ ಶಿವನ ಬೃಹತ್ ಪ್ರತಿಮೆ. ಇದು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ.

ಚಿತ್ರಕೃಪೆ: Pranav Bhavsar

ಹರಿದ್ವಾರ

ಹರಿದ್ವಾರ

ಉತ್ತರಾಖಂಡ ರಾಜ್ಯದ ಹರಿದ್ವಾರ ಕ್ಷೇತ್ರದಲ್ಲಿರುವ ಪವಿತ್ರಮಯ ಹರ್ ಕಿ ಪೌರಿ ಎಂಬ ಸ್ಥಳದ ಬಳಿ ಶಿವನ ಈ ಪ್ರತಿಮೆಯು ಸ್ಥಿತವಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Rajan.gaul

https://commons.wikimedia.org/wiki/File:Bhagwan_Shankar_Statue_at_Haridwar.jpg

ಜಜ್ಜರ್

ಜಜ್ಜರ್

ಹರಿಯಾಣ ರಾಜ್ಯದ ಜಜ್ಜರ್ ಜಿಲ್ಲೆಯ ಗಂಗ್ಟಾನ್ (ದಿಗಲ್) ಎಂಬ ಪಟ್ಟಣದಲ್ಲಿರುವ ಶಿವನ ಪ್ರತಿಮೆ ಇದಾಗಿದೆ. ಪಟ್ಟಣದ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿಯೂ ಆಗಿರುವ ಈ ಪ್ರತಿಮೆಯು 101 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Channdulalvermaartist

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X