Search
  • Follow NativePlanet
Share
» »ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

ನೀವು ನೋಡಬಯಸುವ ಸುಂದರ ಧ್ವಜಸ್ತಂಭಗಳು!

By Vijay

ಸಾಮಾನ್ಯವಾಗಿ ಎಲ್ಲರೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಹಾಗೂ ಮುಖ್ಯ ದೇವರು ನೆಲೆಸಿರುವ ಗರ್ಭಗುಡಿಯ ಬಳಿ ನಿಂತು ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿ, ಪ್ರಸಾದ ತೆಗೆದುಕೊಂಡು, ಸ್ವಲ್ಪ ಸಮಯ ಕಳೆದು ಮರಳಿ ಬಿಡುತ್ತಾರೆ. ಆದರೆ ನೀವು ದೇವಾಲಯದ ಕೆಲವು ರಚನೆಗಳ ಬಗ್ಗೆ ಗಮನ ಹರಿಸಿದ್ದೀರಾ? ಅವು ಅಲ್ಲಿರುವುದರ ಕುರಿತು ಹಿನ್ನಿಲೆ ಏನೆಂಬುದರ ಬಗ್ಗೆ ಯೋಚಿಸಿದ್ದೀರಾ?

ಹೀಗೆ ನೀವು ದೇವಾಲಯಕ್ಕೆ ಭೇಟಿ ನೀಡಿದಾಗ ಕೆಲ ಅಂಶಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಅವುಗಳಲ್ಲಿ ಒಂದಾಗಿದೆ ಧ್ವಜಸ್ತಂಭ ಅಥವಾ ಧ್ವಜಗಂಬ. ಹೌದು, ಬಹುತೇಕ ಪ್ರಮುಖವಾದ ದೇವಾಲಯಗಳಲ್ಲಿ ಧ್ವಜಸ್ತಂಭಗಳಿರುವುದನ್ನು ನೀವು ಗಮನಿಸಿರಬಹುದು. ಆದರೆ ಆ ಧ್ವಜಸ್ತಂಭ ಏತಕ್ಕಾಗಿ ದೇವಾಲಯಗಳ ಮುಂದೆ ನಿರ್ಮಿಸಲ್ಪಡುತ್ತದೆ ಎಂಬುದು ಗೊತ್ತೆ? ಕೆಲವು ಆಕರ್ಷಕವಾದ ಧ್ವಜಸ್ತಂಭಗಳನ್ನು ಎಲ್ಲಾದರೂ ನೋಡಿದ್ದೀರಾ?

ಕರ್ನಾಟಕದಲ್ಲಿರುವ ಆಕರ್ಷಕ ದೇವಾಲಯ ಗೋಪುರಗಳು

ಹಾಗಾದರೆ, ಪ್ರಸ್ತುತ ಲೇಖನದ ಮೂಲಕ ಕೆಲವು ದೇವಾಲಯಗಳ ಹಾಗೂ ಅವುಗಳ ಆವರಣದಲ್ಲಿರುವ ಸುಂದರ ಧ್ವಜಸ್ತಂಭಗಳ ಪ್ರವಾಸ ಮಾಡಬಯಸುವಿರಾ? ಆಗಮಶಾಸ್ತ್ರದ ಪ್ರಕಾರ ದೇವಾಲಯ ಎಂಬುದು ಮಾನವ ಶರೀರದ ಸಾಂಕೇತಿಕ ರೂಪವಾಗಿದೆ. ಇದರಲ್ಲಿ ಜೀವಧಾರೆಯಾಗಿ ಧ್ವಜಸ್ತಂಭವನ್ನು ಪ್ರತಿನಿಧಿಸಲಾಗುತ್ತದೆ. ಪೌರಾಣಿಕ ಆಧ್ಯಾತ್ಮದ ಪ್ರಕಾರ ಧ್ವಜಸ್ತಂಭವು ಮಾನವ ಹಾಗೂ ದೇವರ ಮಧ್ಯೆ ಸಂಪರ್ಕ ಏರ್ಪಡಿಸುವ ಕೊಂಡಿಯಾಗಿದೆ.

ಇನ್ನೂ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಸ್ಕೃತಿ-ಸಂಪ್ರದಾಯಗಳ ಪ್ರಕಾರ, ಧ್ವಜಸ್ತಂಭವು ದೇವಾಲಯದ ಹಿರಿಮೆ ಹಾಗೂ ಹೆಮ್ಮೆಯಾಗಿದೆ. ಅದರ ರಚನೆಯ ಮೂಲಕವೆ ಆ ದೇವಾಲಯ ಯಾವ ದೇವರಿಗೆ ಮುಡಿಪಾಗಿದೆ ಎಂದೂ ಸಹ ತಿಳಿಯಬಹುದಾಗಿದೆಯಂತೆ. ಮನುಷ್ಯನ ವ್ಯಕ್ತಿತ್ವ ವಿಕಸನ ಹೆಚ್ಚು ಹೆಚ್ಚು ಪ್ರೌಢವಾದಂತೆ ಅವನು ಜೀವನದಲ್ಲಿ ಅಥವಾ ಅಧ್ಯಾತ್ಮಿಕ ಸಾಧನೆಯಲ್ಲಿ ಮೇಲೆರುತ್ತ ಹೋಗುತ್ತಾನೆ. ಇದರ ಒಂದು ಸಂಕ್ಷಿಪ್ತ ರೂಪವೆ ಧ್ವಜಸ್ತಂಭವಾಗಿದ್ದು ದೇವನ ಆಲಯದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಆ ಸ್ಥಾನಮಾನ ಲಭಿಸುತ್ತದೆ ಎಂಬುದರ ಸಂಕೇತವಾಗಿಯೂ ಧ್ವಜಸ್ತಂಭದ ಮಹತ್ವವನ್ನು ವಿವರಿಸಲಾಗಿದೆ.

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ವಿಶಾಲವಾದ ದೇವಾಲಯ ಆವರಣದಲ್ಲಿ ಗಂಭೀರವಾಗಿ ನಿಂತಿರುವ ಈ ಧ್ವಜಸ್ತಂಭ ಯಾವುದೆಂದು ಊಹಿಸಬಲ್ಲಿರಾ? ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚೆನ್ನಕೇಶವನ ದೇವಾಲಯ ಸಂಕೀರ್ಣದಲ್ಲಿರುವ ಧ್ವಜಸ್ತಂಭವಿದು.

ಚಿತ್ರಕೃಪೆ: Jchetan

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ವೈಜ್ಞಾನಿಕವಾಗಿಯೂ ಧ್ವಜಸ್ತಂಭದ ಮಹತ್ವವನ್ನು ಅರಿಯಬಹುದು. ಸಾಮಾನ್ಯವಾಗಿ ಧ್ವಜಸ್ತಂಭಗಳು ಲೋಹದಿಂದ ಮಾಡಲ್ಪಟ್ಟಿರುತ್ತವೆ ಹಾಗೂ ದೇವಾಲಯ ಸಂಕೀರ್ಣದಲ್ಲಿ ಅತಿ ಎತ್ತರದ ಸ್ಥಾನ ಇದರ ತುದಿಯಾಗಿರುತ್ತದೆ. ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ಶಿವ ದೇವಾಲಯದ ಧ್ವಜಸ್ತಂಭ.

ಚಿತ್ರಕೃಪೆ: Vinayaraj

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮಳೆಗಾಲದ ಸಂದರ್ಭದಲ್ಲಿ ಸಿಡಿಲುಗಳು ಬಿಳುತ್ತಿದ್ದಾಗ ಮೊದಲು ಈ ಧ್ವಜಸ್ತಂಭಗಳು ಆ ಸಿಡಿಲುಗಳನ್ನು ಆಕರ್ಷಿಸಿ ಅದರಿಂದುಂಟಾದ ವಿದ್ಯುತ್ ಶಕ್ತಿಯನ್ನು ಭೂಮಿಗೆ ರವಾಂತರಿಸುತ್ತವೆ. ಈ ರೀತಿಯಾಗಿ ದೇವಾಲಯದ ರಕ್ಷಣೆಯಾಗುತ್ತದೆ. ಅಲ್ಲದೆ ಸ್ವರ್ಗ ಹಾಗೂ ಭೂಮಿಯ ಮಧ್ಯೆ ಸಂಪರ್ಕವು ಈ ರೀತಿಯಾಗಿ ಏರ್ಪಡುತ್ತದೆಂದು ಧಾರ್ಮಿಕವಾದಿಗಳು ನಂಬುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕೆಯ ದೇವಾಲಯದಲ್ಲಿರುವ ಧ್ವಜಸ್ತಂಭ.

ಚಿತ್ರಕೃಪೆ: GaneshSB

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿಮಿಷಾಂಬ ದೇವಿ ನೆಲೆಸಿರುವ ದೇವಾಲಯದ ಎದುರಿನಲ್ಲಿರುವ ಧ್ವಜಸ್ತಂಭ.

ಚಿತ್ರಕೃಪೆ: Jayan

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಪೌರಾಣಿಕವಾಗಿ ಧ್ವಜಸ್ತಂಭವನ್ನು ತ್ರಿಮೂರ್ತಿಗಳ ಪ್ರತೀಕವೆಂದು ವಿವರಿಸಲಾಗಿದೆ. ಅದರ ತಳ ಅಥವಾ ಅಡಿಪಾಯ ಶಿವನನ್ನು ಪ್ರತಿನಿಧಿಸಿದರೆ, ಮಧ್ಯದ ಭಾಗವು ಬ್ರಹ್ಮನನ್ನು ಹಾಗೂ ಉಚ್ಛ ಭಾಗವು ವಿಷ್ಣುವಿನನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಆಲಂಪೂರ್ ನಲ್ಲಿರುವ ಜೋಗುಳಾಂಬ ದೇವಾಲಯದಲ್ಲಿರುವ ಧ್ವಜಸ್ತಂಭ.

ಚಿತ್ರಕೃಪೆ: రహ్మానుద్దీన్

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ದಿವಿ ತಾಲೂಕಿನ ಅವನಿಗಡ್ಡದಲ್ಲಿರುವ ಶ್ರೀ ಲಕ್ಷಮ್ಮ ಅಮ್ಮಾವರ ದೇವಾಲಯದ ಎದುರಿನಲ್ಲಿರುವ ಧ್ವಜಸ್ತಂಭ.

ಚಿತ್ರಕೃಪೆ: Tandavakrishna tungala

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗುಂಟೂರು ಪಟ್ಟಣದಲ್ಲಿರುವ ಶ್ರೀ ವೆಂಕಟೇಶ್ವರನ ದೇವಾಲಯ ಹಾಗೂ ಅದರ ಎದುರಿನಲ್ಲಿ ಸ್ಥಾಪಿಸಲಾಗಿರುವ ಧ್ವಜಸ್ತಂಭ.

ಚಿತ್ರಕೃಪೆ: Venkat2336

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಾಮರ್ಲಕೋಟ ಪಟ್ಟಣದಲ್ಲಿರುವ ಕುಮಾರರಾಮ ಭೀಮೇಶ್ವರ ದೇವಾಲಯ ಸಂಕೀರ್ಣದಲ್ಲಿರುವ ಧ್ವಜಸ್ತಂಭ.

ಚಿತ್ರಕೃಪೆ: Palagiri

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟುಮಾನೂರು ಪಟ್ಟಣದಲ್ಲಿರುವ ಪುರಾತನ ಮಹಾದೇವನ ದೇವಾಲಯ ಸಂಕೀರ್ಣದಲ್ಲಿರುವ ಎತ್ತರದ ಧ್ವಜಸ್ತಂಭ.

ಚಿತ್ರಕೃಪೆ: Ranjithsiji

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ತ್ರಿಶ್ಶೂರು ಜಿಲ್ಲೆಯ ಕೊಡುಂಗಲ್ಲೂರು ಪಟ್ಟಣದಲ್ಲಿರುವ ದೇವಾಲಯದ ಧ್ವಜಗಂಬ.

ಚಿತ್ರಕೃಪೆ: Rameshng

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ಅಲಪುಳ ಜಿಲ್ಲೆಯ ಮಾವೆಲಿಕಾರಾ- ಕಂಡಿಯೂರು ದೇವಾಲಯದ ಎದುರಿಗಿರುವ ಧ್ವಜಗಂಬ.

ಚಿತ್ರಕೃಪೆ: RajeshUnuppally

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ಇಡುಕ್ಕಿ ಜಿಲ್ಲೆಯ ವನ್ನಪುರಂ ನಲ್ಲಿರುವ ಕಂಜಿರಕ್ಕಟ್ಟು ಮಹಾದೇವ ಕ್ಷೇತ್ರದ ದೇವಾಲಯದ ಎದುರಿಗಿರುವ ಧ್ವಜಗಂಬ.

ಚಿತ್ರಕೃಪೆ: Shyamalsainath

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯ ಕಾರಿಕ್ಕಾಡ್ ಗ್ರಾಮದಲ್ಲಿರುವ ಸುಬ್ರಹ್ಮಣ್ಯನ ದೇವಾಲಯ ಹಾಗೂ ಧ್ವಜಗಂಬ.

ಚಿತ್ರಕೃಪೆ: Dvellakat

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ತಾಣವಾದ ಗುರುವಾಯೂರಿನ ಗುರುವಾಯೂರಪ್ಪನ ದೇವಾಲಯದ ಧ್ವಜಸ್ತಂಭ.

ಚಿತ್ರಕೃಪೆ: Arjun.theone

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ನೆಯ್ಯಾಟ್ಟಿಂಕಾರಾ ತಿರುವನಂತಪುರಂ ಜಿಲ್ಲೆಯಲ್ಲಿರುವ ಒಂದು ಸ್ಥಳವಗಿದ್ದು ನಗರದಿಂದ ಇಪ್ಪತ್ತು ಕಿ.ಮೀ ದೂರವಿದೆ. ಇದು ಮೂಲತಃ ಕೃಷ್ಣ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Vishnudev01

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಕೇರಳದ ತ್ರಿಶ್ಶುರು ಜಿಲ್ಲೆಯ ತ್ರಿಕ್ಕೂರು ಎಂಬ ಗ್ರಾಮವು ಬಂಡೆಯಲ್ಲಿ ಕೆತ್ತಲಾದ ಮಹಾದೇವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯದ ಧ್ವಜಗಂಬವು ಸಹ ಸಾಕಷ್ಟು ಆಕರ್ಷಕವಾಗಿದೆ.

ಚಿತ್ರಕೃಪೆ: Aruna

ಮನಸೆಳೆವ ಸುಂದರ ಧ್ವಜಸ್ತಂಭಗಳು:

ಮನಸೆಳೆವ ಸುಂದರ ಧ್ವಜಸ್ತಂಭಗಳು:

ವಳಪಲ್ಲಿ ಮಹಾಶಿವನ ದೇವಾಲಯದ ಧ್ವಜಗಂಬ. ಕೇರಳದ ಕೊಟ್ಟಾಯಂ ಜಿಲ್ಲೆಯ ಚೆಂಗನಚೇರಿ ಎಂಬ ಸ್ಥಳದಲ್ಲಿ ಈ ಶಿವನ ದೇವಾಲಯವಿದೆ.

ಚಿತ್ರಕೃಪೆ: RajeshUnuppally

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X