Search
  • Follow NativePlanet
Share
» »ಹರಿಯನೆಡೆ ದಾರಿ ತೋರಿ ಮೆರೆಸುವ ಹರಿದ್ವಾರ

ಹರಿಯನೆಡೆ ದಾರಿ ತೋರಿ ಮೆರೆಸುವ ಹರಿದ್ವಾರ

By Vijay

ಸನಾತನ ಹಿಂದೂ ಧರ್ಮ ನೆಲೆಯುರಿದ ಭರತ ಅಥವಾ ಭಾರತ ದೇಶವು ಪಾವಿತ್ರ್ಯತೆಯುಳ್ಳ ಸ್ಥಳಗಳಿಂದ ಸಂಪದ್ಭರಿತವಾಗಿದೆ. ದೇಶದ ಯಾವ ಭಾಗದಲ್ಲಾದರೂ ಸರಿ ವಿಶೇಷ ಮಹತ್ವ ಪಡೆದ ಸ್ಥಳಗಳನ್ನು ಕಾಣಬಹುದು. ಪ್ರವಾಸ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಧಾರ್ಮಿಕ ನಿಟ್ಟಿನಲ್ಲೂ ಮನಸ್ಸನ್ನು ಪ್ರಸನ್ನಗೊಳಿಸುವ ಒಂದು ಸುಂದರ ಚಟುವಟಿಕೆಯಾಗಿದೆ.

ಹೋಟೆಲ್ ಬುಕಿಂಗ್ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ

ಅಂತೆಯೆ ಇಂದು ಕೂಡ ಭಾರತದಲ್ಲಿ ಪ್ರತಿ ಕುಟುಂಬವೂ ತಮ್ಮ ಜೀವಿತಾವಧಿಯಲ್ಲಿ ಒಂದೊಮ್ಮೆಯಾದರೂ ಧರ್ಮಿಕ ಪ್ರವಾಸ ಮಾಡದೆ ಇರಲಾರರು. ಅಲ್ಲದೆ ಧಾರ್ಮಿಕ ಪ್ರವಾಸವು ಪ್ರವಾಸದ ಅತಿ ಮುಖ್ಯ ಭಾಗವಾಗಿದೆ ಎಂದರೂ ಸಹ ತಪ್ಪಾಗಲಾರದು. ಧಾರ್ಮಿಕ ಪ್ರವಾಸವು ಮುಖ್ಯವಾಗಿ ತೀರ್ಥ ಕ್ಷೇತ್ರಗಳಿಗೆ, ಗುಡಿ-ಗುಂಡಾರಗಳಿಗೆ, ಪುಣ್ಯ ಸ್ಥಳಗಳಿಗೆ ತೆರಳುವುದಾಗಿದೆ.

ವಿಶೇಷ ಲೇಖನ : ಭಾರತದ ಆಧ್ಯಾತ್ಮಿಕ ರಾಜಧಾನಿ

ಪ್ರಸ್ತುತ ಲೇಖನದ ಮೂಲಕ ಉತ್ತರಾಖಂಡ ರಾಜ್ಯದಲ್ಲಿರುವ ಭಾರತದ ಅತಿ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಹರಿದ್ವಾರದ ಕುರಿತು ತಿಳಿಯಿರಿ. ಹರಿದ್ವಾರವು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದ್ದು ದೆಹಲಿಯಿಂದ ಶತಾಬ್ದಿ ರೈಲಿನ ಸೇವೆ ಹರಿದ್ವಾರಕ್ಕೆ ತೆರಳಲು ಲಭ್ಯವಿದೆ. ಅಲ್ಲದೆ ವಿಮಾನಿನ ಮೂಲಕ ಮೊದಲಿಗೆ ದೆಹಲಿ ತೆರಳಿ ಅಲ್ಲಿಂದ ಮತ್ತೆ ಡೆಹ್ರಾಡೂನಿಗೆ ತೆರಳಬೇಕು. ಇಲ್ಲಿಂದ ಹರಿದ್ವಾರ ಕೇವಲ 35 ಕಿ.ಮೀ ಗಳಷ್ಟು ದೂರವಿದೆ.

ವಿಶೇಷ ಲೇಖನ : ಭಾರತದ ಏಳು ಪವಿತ್ರ ನದಿಗಳು

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಹರಿದ್ವಾರವು ಒಂದು ಪ್ರಾಚೀನ ನಗರವಾಗಿದ್ದು ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದೆ. ಪವಿತ್ರ ಗಂಗಾನದಿಯು ಗಂಗೋತ್ರಿ (ಗೋಮುಖ )ಯಲ್ಲಿ ಉದ್ಭವಗೊಂಡು 253 ಕಿ.ಮೀ ಗಳಷ್ಟು ಕ್ರಮಿಸಿ ಉತ್ತರ ಭಾರತದಲ್ಲಿ ಹರಿದ್ವಾರದ ಮೂಲಕ ಪ್ರಥಮವಾಗಿ ಪ್ರವೇಶಿಸುತ್ತದೆ. ಆದ್ದರಿಂದಲೆ ಈ ನಗರವನ್ನು ಗಂಗಾದ್ವಾರಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಪೌರಾಣಿಕವಾಗಿ ಹಾಗೂ ಗರುಡ ಪುರಾಣದ ಪ್ರಕಾರ, ಹರಿದ್ವಾರವು ಏಳು ಅತಿ ಪವಿತ್ರ ನಗರಗಳ ಪೈಕಿ ಒಂದಾಗಿದೆ. ಗರುಡ ಪುರಾಣದಲ್ಲಿ ಈ ನಗರವನ್ನು ಮಾಯಾ ಎನ್ನಲಾಗಿದೆ. ಇನ್ನುಳಿದಂತೆ ಇರುವ ಇತರೆ ಆರು ಪವಿತ್ರ ಕ್ಷೇತ್ರಗಳೆಂದರೆ ಅಯೋಧ್ಯಾ, ಮಥುರಾ, ಕಾಶಿ (ವರಾಣಾಸಿ), ಉಜ್ಜಯಿನಿ, ದ್ವಾರಕಾ, ಕಂಚಿ.

ಚಿತ್ರಕೃಪೆ: j.budissin

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಪೌರಾಣಿಕ ಕಥೆಯ ಪ್ರಕಾರ, ಸಮುದ್ರ ಮಂಥನದಿಂದ ಉತ್ಪನ್ನವಾದ ಅಮೃತವನ್ನು ಗರುಡನು ಒಯ್ಯುತ್ತಿರುವಾಗ ಅದರ ನಾಲ್ಕು ಹನಿಗಳು ನಾಲ್ಕು ವಿವಿಧ ಸ್ಥಳಗಳಲ್ಲಿ ಬಿದ್ದವು. ಹರಿದ್ವಾರವೂ ಸಹ ಆ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಮಿಕ್ಕ ಮೂರು ಸ್ಥಳಗಳೆಂದರೆ ಉಜ್ಜಯಿನಿ, ನಾಶಿಕ್ ಹಾಗೂ ಪ್ರಯಾಗ್ (ಅಲಹಾಬಾದ್).

ಚಿತ್ರಕೃಪೆ: Redtigerxyz

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಈ ಒಂದು ಘಟನೆಯಿಂದಲೆ ಕುಂಭ ಮೇಲವು ಜಾರಿಗೆ ಬಂದಿತೆನ್ನಲಾಗುತ್ತದೆ. ಅಂತೆಯೆ ಪ್ರತಿ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಕುಂಭ ಉತ್ಸವವು ಆಯೋಜನೆಗೊಳ್ಳುತ್ತದೆ. ಹರಿದ್ವಾರದಲ್ಲಿ ಅಮೃತ ಬಿದ್ದ ಸ್ಥಳವನ್ನು ಹರ್ ಕಿ ಪೌರಿ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: -.-Paul-.-

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಹಿಂದೆ ಹರಿದ್ವಾರವನ್ನು ಕಪಾಲಿಸ್ಥಾನ, ಗಂಗಾದ್ವಾರ ಹಾಗೂ ಮಾಯಾಪುರಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. ಪವಿತ್ರ ಚಾರ್ ಧಾಮ್ (ನಾಲ್ಕು ಧಾಮಗಳು) ಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳಿಗೆ ಪ್ರವೇಶ ದ್ವಾರವಾಗಿದೆ ಹರಿದ್ವಾರ. ಶೈವರು ಇದನ್ನು ಹರದ್ವಾರ ಎಂತಲೂ ವೈಷ್ಣವರು ಹರಿದ್ವಾರ ಎಂತಲೂ ಇದನ್ನು ಸಂಭೋದಿಸುತ್ತಾರೆ.

ಚಿತ್ರಕೃಪೆ: Ravinder M A

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಅಲ್ಲದೆ ಈ ಸ್ಥಳದ ಕುರಿತು ಸಾಕಷ್ಟು ಪೌರಾಣಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಿರುವುದನ್ನು ಕಾಣಬಹುದು. ಮಹಾಭಾರತದ ವನಪರ್ವದಲ್ಲಿ ದೌಮ್ಯ ಮುನಿಯು ಯುಧಿಷ್ಟರನಿಗೆ ತೀರ್ಥಗಳ ಪೈಕಿ ಹೇಳುವಾಗ ಈ ಕ್ಷೇತ್ರದ ಕುರಿತು ತಿಳಿಸುತ್ತಾರೆ. ಅಲ್ಲದೆ ಕಪಿಲ ಮಹಾಮುನಿಗಳು ಇಲ್ಲಿ ಆಶ್ರಮ ಸ್ಥಾಪಿಸಿ ತಪ ಗೈದಿದ್ದರಿಂದ ಇದಕ್ಕೆ ಕಪಿಲಾಸ್ಥಾನ ಎಂಬ ಹೆಸರು ಬಂದಿತು.

ಚಿತ್ರಕೃಪೆ: Anshul Dabral

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಹರಿದ್ವಾರದಲ್ಲಿ ಸಾಕಷ್ಟು ಮಹತ್ವ ಪಡೆದಿರುವ ಪುಣ್ಯ ಕ್ಷೇತ್ರಗಳನ್ನು ಕಾಣಬಹುದಾಗಿದೆ. ಹರಿದ್ವಾರವನ್ನೂ ಹಿಡಿದು ನಾಲ್ಕು ಪವಿತ್ರ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದ್ದು, ಸಂಸ್ಕೃತ ಶ್ಲೋಕದನ್ವಯ ಈ ಕ್ಷೇತ್ರಗಳ ದರುಶನವು ಮನುಷ್ಯನಿಗೆ ಪುನರ್ಜನ್ಮದಿಂದ ಮುಕ್ತಿ ದೊರಕಿಸಿಕೊಡುತ್ತವೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Crater11

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಹರ್ ಕಿ ಪೌರಿ : ಇದೊಂದು ಪವಿತ್ರ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳ ಇದಾಗಿದೆ. ಸಂಜೆಯ ಸಮಯವು ಗಂಗೆಗೆ ಆರತಿ ಮಾಡಲಾಗುತ್ತದೆ ಹಾಗೂ ಸಾವಿರಾರು ಭಕ್ತರು ತಮ್ಮ ಪೂರ್ವಜರ ಶಾಂತಿಗಾಗಿ ದೀಪಗಳನ್ನು ತೇಲಿ ಬಿಡುತ್ತಾರೆ. ಈ ಒಂದು ಅನುಭವವು ಅತ್ಯಂತ ಸುಂದರಮಯವಾಗಿರುತ್ತದೆ.

ಚಿತ್ರಕೃಪೆ: Livefree2013

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಚಂಡಿ ದೇವಿ ದೇವಾಲಯ, ಹರಿದ್ವಾರ : ನೀಲ ಪರ್ವತದ ಮೇಲೆ ಆಸೀನಳಾಗಿರುವ ಚಂಡಿ ದೇವಿಗೆ ಮುಡಿಪಾದ ದೇವಾಲಯ ಇದಾಗಿದೆ. ಸ್ಕಂದ ಪುರಾಣದನುಸಾರ ಶುಂಭ ನಿಶುಂಭ ರಕ್ಕಸರಡಿಯಲ್ಲಿ ಸೇನಾಧಿಪತಿಗಳಾಗಿದ್ದ ಚಂಡ ಮುಂಡ ಎಮ್ಬ ಅಸುರರನ್ನು ಇದೆ ಸ್ಥಳದಲ್ಲಿ ದೇವಿಯು ವಧಿಸಿದ್ದಳು. ದೇವಿಯ ವಿಗ್ರಹವನ್ನು 8 ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆಂದು ಹೇಳಲಾಗಿದೆ.

ಚಿತ್ರಕೃಪೆ: World8115

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಚಂಡಿ ದೇವಿ ದೇವಾಲಯವು ಪರ್ವತದ ತುದಿಯಲ್ಲಿ ನೆಲೆಸಿದ್ದು ಇಲ್ಲಿಗೆ ಭಕ್ತರನ್ನು ಕರೆದೊಯ್ಯಲು ಕೇಬಲ್ ಕಾರನ್ನು ಬಳಸಲಾಗುತ್ತದೆ.

ಚಿತ್ರಕೃಪೆ: Abhishekjoshi

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಮಾನಸಾ ದೇವಿ ದೇವಾಲಯ, ಹರಿದ್ವಾರ : ಇದು ಪವಿತ್ರ ಕ್ಷೇತ್ರ ಹರಿದ್ವರದಲ್ಲಿರುವ ಮತ್ತೊಂದು ಪ್ರಮುಖ ಹಿಂದೂ ದೇವಾಲಯ. ಶಕ್ತಿಯ ಅವತಾರವಾದ ಮಾನಸಾ ದೇವಿಗೆ ಮುಡಿಪಾದ ಈ ದೇವಾಲಯವು ಶಿವಾಲಿಕ್ ಪರ್ವತ ಶ್ರೇಣಿಯ ಬಿಲ್ವ ಪರ್ವತದ ಮೇಲೆ ನಿರ್ಮಿತವಾಗಿದೆ.

ಚಿತ್ರಕೃಪೆ: Ekabhishek

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಈ ದೇವಾಲಯಕ್ಕೂ ಸಹ ಕೇಬಲ್ ಕಾರ್ ಬಳಸಿ ತಲುಪಬಹುದಾಗಿದೆ.

ಚಿತ್ರಕೃಪೆ: Ekabhishek

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಮಾಯಾ ದೇವಿ ದೇವಾಲಯ, ಹರಿದ್ವಾರ : ಹರಿದ್ವಾರದ ಪ್ರಮುಖ ತೀರ್ಥಗಳ ಪೈಕಿ ಇದೂ ಒಂದು. ಕಥೆಯ ಅನುಸಾರ, ಸತಿಯ ಮೃತ ದೇಹವನ್ನು ಶಿವನು ಹಿಡಿದು ಒಯ್ಯುತ್ತಿರುವಾಗ ಅವಳ ಹೃದಯ ಹಾಗೂ ಹೊಕ್ಕಳದ ಭಾಗವು ಬಿದ್ದ ಸ್ಥಳದಲ್ಲೆ ಈ ದೇವಾಲಯವಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: World8115

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಹರಿದ್ವಾರ ಪಟ್ಟಣದಿಂದ ನಾಲ್ಕು ಕಿ.ಮೀ ದೂರವಿರುವ ಕಂಖಲ್ ಎಂಬಲ್ಲಿ ದಕ್ಷ ಮಹಾದೇವ ಮಂದಿರವಿದೆ. ದಕ್ಷ ಪ್ರಜಾಪತಿಯ ಕಾರಣ ಇದಕ್ಕೆ ಈ ಹೆಸರು ಬಂದಿದೆ. ಇದು ಶಿವನಿಗೆ ಮುಡಿಪಾದ ದೇವಾಲಯವಾಗಿದೆ.
ಶಿವರಾತ್ರಿಯ ಸಂದರ್ಭದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಭಕ್ತರನ್ನು ಇದು ಆಕರ್ಷಿಸುತ್ತದೆ.

ಚಿತ್ರಕೃಪೆ: Aswani.chauhan

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಭೀಮ್ಗೊದಾ ಹೊಂಡ, ಹರಿದ್ವಾರ : ಹರ್ ಕಿ ಪೌರಿ ಯಿಂದ ಒಂದು ಕಿ.ಮೀ ದೂರದಲ್ಲಿರುವ ಭೀಮ್ಗೊದಾ ಹೊಂಡವು ಒಂದು ಧಾರ್ಮಿಕ ಮಹತ್ವವುಳ್ಳ ಪ್ರೇಕ್ಷಣಿಯ ಸ್ಥಳವಾಗಿದೆ. ಕಥೆಯ ಪ್ರಕಾರ, ಪಾಂಡವರು ಹಿಮಾಲಯಕ್ಕೆ ಹೋಗುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ಭೀಮನು ತನ್ನ ಮೊಣಕಾಲುಗಳನ್ನು ಭೂಮಿಗೆ ಗುದ್ದಿ ನೀರನ್ನು ಹೊರತೆಗೆದಿದ್ದನು. ಆದ್ದರಿಂದ ಇದಕ್ಕೆ ಭೀಮ್ಗೊದಾ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: haridwar.nic.in

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಸಪ್ತರಿಶಿ ಆಶ್ರಮ ಮತ್ತು ಸಪ್ತ ಸರೋವರ : ಈ ಒಂದು ಸ್ಥಳದಲ್ಲಿ ಹಿಂದೆ ಸಪ್ತರ್ಷಿಗಳಾದ ಕಶ್ಯಪ, ವಸಿಷ್ಟ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ ಹಾಗೂ ಗೌತಮ ಮುನಿಗಳು ತಪಸ್ಸು ಗೈಯುತ್ತಿರುವಾಗ ಅವರಿಗೆ ಅಡಚಣೆ ಉಂಟಾಗದಂತೆ ಗಂಗೆಯು ಏಳು ಕವಲುಗಳಾಗಿ ಒಡೆದು ಹರಿದಿದ್ದಳೆನ್ನಲಾಗಿದೆ.

ಚಿತ್ರಕೃಪೆ: haridwar.nic.in

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಪಾರದ ಶಿವಲಿಂಗ, ಹರಿದ್ವಾರ : ಹರಿದ್ವಾರದಿಂದ ನಾಲ್ಕು ಕಿ.ಮೀ ದೂರವಿರುವ ಕಂಖಲ್ ದಲ್ಲಿರುವ ಹರಿಹರ ಆಶ್ರಮದಲ್ಲಿ ಇದನ್ನು ನೋಡಬಹುದಾಗಿದೆ. ಪಾರದ ಎಂದರೆ ಕನ್ನಡದಲ್ಲಿ ಪಾದರಸ ಎಂದಾಗುತ್ತದೆ. 150 ಕೆಜಿ ಯ ಈ ಶಿವಲಿಂಗ ಹಾಗೂ ರುದ್ರಾಕ್ಷ ಗಿಡವು ಇಲ್ಲಿನ ಪ್ರಮುಖ ಆಕರ್ಷಣೆಗಳು.

ಚಿತ್ರಕೃಪೆ: haridwar.nic.in

ಹರಿ ಹಾಗೂ ಹರನ ದ್ವಾರ:

ಹರಿ ಹಾಗೂ ಹರನ ದ್ವಾರ:

ಆನಂದಮೊಯಿ ಮಾತಾ ಆಶ್ರಮ : ಹರಿದ್ವಾರದ ಕಂಖಲ್ ನಲ್ಲಿ ಈ ಮಾತೆಯ ಆಶ್ರಮವನ್ನು ಕಾಣಬಹುದಾಗಿದೆ. ಪಶ್ಚಿಮ ಬಂಗಾಳದ ಮೂಲ ಹೊಂದಿರುವ ಈ ಮಾತೆಯು 1896 ರಿಂದ 1982 ರ ವರೆಗ್ಎ ಜೀವಿಸಿದ್ದರು ಹಾಗೂ ಸಾಕಷ್ಟು ಭಕ್ತರು ಇವರನ್ನು ಒಬ್ಬ ಸಂತೆಯಾಗಿ ಪರಿಗಣಿಸುತ್ತಾರೆ.

ಚಿತ್ರಕೃಪೆ: Naresh Balakrishnan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X