Search
  • Follow NativePlanet
Share
» »ಮೋದಿಯ ಮೋಡಿ ಮಾಡುವ ಗುಜರಾತ್

ಮೋದಿಯ ಮೋಡಿ ಮಾಡುವ ಗುಜರಾತ್

By Vijay

ಭಾರತದ ವಾಯವ್ಯ ಭಾಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಒಂದು ರಾಜ್ಯ ಗುಜರಾತ್. ಸ್ಥಳೀಯವಾಗಿ ಈ ರಾಜ್ಯವನ್ನು "ಪಶ್ಚಿಮದ ಆಭರಣ" ಎಂದು ಕರೆಯಲಾಗುತ್ತದೆ. 196204 ಚ.ಕಿ.ಮೀ ಗಳಷ್ಟು ವ್ಯಾಪ್ತಿಯ ವಿಸ್ತಾರವಾದ ಪ್ರದೇಶವನ್ನು ಹೊಂದಿರುವ ಈ ರಾಜ್ಯವು ಸುಮಾರು 1600 ಕಿ.ಮೀ ಗಳಷ್ಟು ಉದ್ದದ ಕರಾವಳಿ ತೀರವನ್ನು ಹೊಂದಿದೆ. ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಗುಜರಾತ್ ರಾಜ್ಯವು ಪ್ರವಾಸೋದ್ಯಮದ ದೃಷ್ಟಿಯಿಂದ ಗುರುತರವಾದ ರಾಜ್ಯವಾಗಿದೆ.

ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಗುಜರಾತ್ ರಾಜ್ಯದಲ್ಲಿ ಏನೇಲ್ಲ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದು ಹಾಗು ಆ ರಾಜ್ಯದ ಪ್ರಮುಖ ಮಹಾನಗರಗಳ ಕುರಿತು ಈ ಲೇಖನವು ನಿಮಗೆ ಸಂಕ್ಷೀಪ್ತ ಮಾಹಿತಿಯನ್ನು ನೀಡುತ್ತದೆ. ಅಲ್ಲದೆ ಪ್ರಸ್ತುತ ಗುಜರಾತ್ ರಾಜ್ಯದಲ್ಲೆ ಜಗತ್ತಿನ ಅತಿ ಎತ್ತರದ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಉಕ್ಕಿನ ಪ್ರತಿಮೆಯು ಸ್ಥಾಪನೆಯಾಗುತ್ತಿರುವುದು ನಿಮಗೆಲ್ಲ ತಿಳಿದೆ ಇದೆ. ಹಾಗಾದರೆ ಸಮಯ ಸಿಕ್ಕಾಗ ಈ ರಾಜ್ಯಕ್ಕೆ ಒಂದೊಮ್ಮೆ ಭೇಟಿ ನೀಡಿ ಇಲ್ಲಿನ ಪ್ರಮುಖ ಆಕರ್ಷಣೆಗಳನ್ನು ತದೇಕ ಚಿತ್ತದಿಂದ ಸವಿಯಿರಿ.

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ದೊಡ್ಡದಾದ ನಗರ ಅಹ್ಮದಾಬಾದ್ ಪಟ್ಟಣದ ಪಾಕ್ಷಿಕ ನೋಟ. ಚಿತ್ರದಲ್ಲಿ ಕಾಣುತ್ತಿರುವುದು ಸಾಬರಮತಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ.

ಚಿತ್ರಕೃಪೆ: JJaimin

ಗುಜರಾತ್:

ಗುಜರಾತ್:

ಅಹ್ಮದಾಬಾದ್ ಗುಜರಾತ್ ರಾಜ್ಯದ ಅತಿ ದೊಡ್ಡ ಹಾಗೂ ಪ್ರಮುಖ ಪಟ್ಟಣ. ಹಲವಾರು ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Gandhi.rushabh1992

ಗುಜರಾತ್:

ಗುಜರಾತ್:

ಕಂಕಾರಿಯಾ ಕೆರೆ ಅಹ್ಮದಾಬಾದ್ ಪಟ್ಟಣದ ಅತಿ ದೊಡ್ಡ ಕೃತಕ ಕೆರೆಯಾಗಿದೆ. ಅದ್ದೂರಿಯಾಗಿ ಒಂದು ವಾರದ ಕಾಲ ಜರುಗಿದ ಕಂಕಾರಿಯಾ ಉತ್ಸವದ ಮೂಲಕ ಈ ಕೆರೆಯನ್ನು ಡಿಸೆಂಬರ್ 25, 2008 ರಲ್ಲಿ ಉದ್ಘಾಟಿಸಲಾಯಿತು.

ಚಿತ್ರಕೃಪೆ: Mahargh Shah

ಗುಜರಾತ್:

ಗುಜರಾತ್:

ಅಹ್ಮದಾಬಾದ್ ನಲ್ಲಿ ಹರಿದಿರುವ ಸಾಬರಮತಿ ನದಿ ತಟವನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ನಗರದ ಜನಜೀವನಕ್ಕೆ ಒತ್ತಡ ಶಮನಗೊಳಿಸಬಲ್ಲ ಒಂದು ಆದರ್ಶಮಯ ತಾಣವಾಗಿದೆ ಈ ಸ್ಥಳ.

ಚಿತ್ರಕೃಪೆ: Manjil Purohit

ಗುಜರಾತ್:

ಗುಜರಾತ್:

ಅಹ್ಮದಾಬಾದ್ ನಲ್ಲಿರುವ ಅಮ್ದಾವಾದ್ನಿ ಗುಫಾ ಒಂದು ಆಕರ್ಷಣೀಯ ಪ್ರವಾಸಿ ಸ್ಥಳವಾಗಿದೆ. ಮೂಲತಃ ಇದೊಂದು ಭೂಗತವಾದ ಕಲಾ ಗ್ಯಾಲರಿ ಆಗಿದೆ. ಬಾಲಕೃಷ್ಣ ವಿಠಲ್ದಾಸ್ ದೋಷಿ ಎಂಬ ವಾಸ್ತುಶಿಲ್ಪಿಯಿಂದ ವಿನ್ಯಾಸಿಸಲ್ಪಟ್ಟ ಈ ಕಲಾ ಗ್ಯಾಲರಿಯು ಮುಖ್ಯವಾಗಿ ಮಕ್ಬೂಲ್ ಫಿದಾ ಹುಸೇನ್ ಅವರ ಕಲಾಕೃತಿಗಳನ್ನು ಅನಾವರಣಗೊಳಿಸುತ್ತದೆ.

ಚಿತ್ರಕೃಪೆ: Vaishal Dalal

ಗುಜರಾತ್:

ಗುಜರಾತ್:

ದೂರದರ್ಶನ ಪ್ರಸಾರಣ ಗೋಪುರ ಅಹ್ಮದಾಬಾದ್ ಪಟ್ಟಣದ ಒಂದು ಪ್ರಮುಖ ಹೆಗ್ಗುರುತಾಗಿ ಕಂಗೊಳಿಸುತ್ತದೆ.

ಚಿತ್ರಕೃಪೆ: Hardik jadeja

ಗುಜರಾತ್:

ಗುಜರಾತ್:

ಅಹ್ಮದಾಬಾದಿನ ಮೋಟೆರಾ ಪ್ರದೇಶದಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣ. 54000 ಜನ ಕುಳಿತು ಕೊಳ್ಳುವ ಸಾಮರ್ಥ್ಯವನ್ನು ಈ ಕ್ರೀಡಾಂಗಣ ಹೊಂದಿದೆ.

ಚಿತ್ರಕೃಪೆ: Hardik jadeja

ಗುಜರಾತ್:

ಗುಜರಾತ್:

ಅಹ್ಮದಾಬಾದ್ ಪಟ್ಟಣದ ಉಪನಗರವಾದ ಸಾಬರಮತಿಯಲ್ಲಿರುವ ಗಾಂಧಿ ಆಶ್ರಮ. ಮಹಾತ್ಮಾ ಗಾಂಧೀಜಿಯವರು ತಮ್ಮ ಪತ್ನಿಯೊಂದಿಗೆ ಸುಮಾರು 12 ವರ್ಷಗಳ ಕಾಲ ಈ ಮನೆಯಲ್ಲಿ ವಾಸಮಾಡಿದ್ದರು. ಇಂದು ಸಾಬರಮತಿ ಆಶ್ರಮವಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Nichalp

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ರಾಜಧಾನಿ ಹಾಗೂ ಮಹಾನಗರ ಗಾಂಧಿನಗರ. ಅಗಾಧವಾಗಿ ಸಸ್ಯ ಸಂಪತ್ತನ್ನು ಇದು ಹೊಂದಿದ್ದು ಹಸಿರು ನಗರ ಎಂತಲೂ ಕರೆಯಲ್ಪಡುತ್ತದೆ.

ಚಿತ್ರಕೃಪೆ: Gaurav.raval

ಗುಜರಾತ್:

ಗುಜರಾತ್:

ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಅಕ್ಷರಧಾಮ ದೇವಾಲಯವು ಗಾಂಧಿನಗರದಲ್ಲಿದೆ. 23 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಇದು ವ್ಯಾಪಿಸಿದೆ.

ಚಿತ್ರಕೃಪೆ: Harsh4101991

ಗುಜರಾತ್:

ಗುಜರಾತ್:

ಗುಜರಾತ್ ನ ಸೌರಾಷ್ಟ್ರ ಭಾಗ ವೇರಾವಳ್ ಬಳಿಯಿರುವ ಪ್ರಭಾಸ ಕ್ಷೇತ್ರದಲ್ಲಿ ಪ್ರಮುಖ ಜ್ಯೋತಿರ್ಲಿಂಗ ತಾಣವಾದ ಸೋಮನಾಥ ದೇವಾಲಯವಿದೆ. ಪ್ರತಿ ದಿನವು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಿರುತ್ತಾರೆ.

ಚಿತ್ರಕೃಪೆ: BeautifulEyes

ಗುಜರಾತ್:

ಗುಜರಾತ್:

ಸೂರತ್ ಗುಜರಾತ್ ರಾಜ್ಯದ ಎರಡನೇಯ ದೊಡ್ಡ ಪಟ್ಟಣವಾಗಿದೆ. ಸೂರತ್ ಪಟ್ಟಣವು, ಎನ್ಯುವಲ್ ಸರ್ವೇ ಆಫ್ ಇಂಡಿಯಾ'ಸ್ ಸಿಟಿ ಸಿಸ್ಟಮ್ಸ್ ( ASICS ) ವಿತರಿಸುವ ಉತ್ತಮ ನಗರ ಪ್ರಶಸ್ತಿಯನ್ನು 2013 ರಲ್ಲಿ ಬಾಚಿಕೊಂಡಿದೆ.

ಚಿತ್ರಕೃಪೆ: Rahulogy

ಗುಜರಾತ್:

ಗುಜರಾತ್:

ರಾತ್ರಿ ಸಮಯದಲ್ಲಿ ಕಂಗೊಳಿಸುವ ಸೂರತ್ ಪಟ್ಟಣದ ಒಂದು ನೋಟ.

ಚಿತ್ರಕೃಪೆ: Hemant meena

ಗುಜರಾತ್:

ಗುಜರಾತ್:

ಸೂರತ್ ನಗರದಲ್ಲಿರುವ ಮುಘಲ್ ಸರಾಯ್ ಒಂದು ಪ್ರಾಚೀನ ಸ್ಮಾರಕವಾಗಿದೆ. ಪ್ರಸ್ತುತ ಸೂರತ್ ಪುರಸಭೆಯ ಕಚೇರಿಯಾಗಿ ಇದು ಕಾರ್ಯನಿರ್ವಹಿಸುತ್ತಿದೆ.

ಚಿತ್ರಕೃಪೆ: Marwada

ಗುಜರಾತ್:

ಗುಜರಾತ್:

ಸೂರತ್ ನಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಹಾಸ್ಟೆಲ್ ಕಟ್ಟಡ.

ಚಿತ್ರಕೃಪೆ: Hemant meena

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ಜುನಾಗಡ್ ಜಿಲ್ಲೆಯ ಅಪರ್ ಕೋಟೆಯ ಬೌದ್ಧ ಗುಹೆಗಳ ಸಮೂಹವು ಆಸಕ್ತಿಕರ ಪ್ರವಾಸಿ ಕ್ಷೇತ್ರವಾಗಿದೆ.

ಚಿತ್ರಕೃಪೆ: Bernard Gagnon

ಗುಜರಾತ್:

ಗುಜರಾತ್:

ಖಂಬಾಲಿದಾ ಗುಹೆಗಳು ಗುಜರಾತ್ ರಾಜ್ಯದ ರಾಜಕೋಟ್ ನಲ್ಲಿದೆ. ಇಲ್ಲಿ ಚೈತ್ಯ ಹಾಗೂ ಸ್ತೂಪ ಹೊಂದಿರುವ ಮೂರು ಗುಹೆಗಳನ್ನು ಕಾಣಬಹುದಾಗಿದ್ದು, ಬೋಧಿಸತ್ವ, ಪದ್ಮಪಾಣಿ, ವಜ್ರಪಾಣಿಗಳ ಕೆತ್ತನೆಯನ್ನು ಕಾಣಬಹುದು.

ಚಿತ್ರಕೃಪೆ: Cakothari

ಗುಜರಾತ್:

ಗುಜರಾತ್:

ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿರುವ ತಾರ್ನೇತರ್ ಒಂದು ಪುಟ್ಟ ಹಳ್ಳಿ. ವಾರ್ಷಿಕವಾಗಿ ಇಲ್ಲಿ ಜರುಗುವ ತ್ರಿನಿತೇಶ್ವರ ಮಹಾದೇವ ಮೇಳದಿಂದ ಇದು ಅತಿ ಹೆಸರುವಾಸಿಯಾಗಿದೆ. ರಾಜ್ಯದೆಲ್ಲೆಡೆಯಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Harsh.dattani

ಗುಜರಾತ್:

ಗುಜರಾತ್:

ಲವಣ ಪ್ರದೇಶವಾದ ಕಚ್ ನಲ್ಲಿ ಜರುಗುವ ಕಚ್ ಉತ್ಸವದ ಒಂದು ನೋಟ.

ಚಿತ್ರಕೃಪೆ: Bhargavinf

ಗುಜರಾತ್:

ಗುಜರಾತ್:

ಅಹ್ಮದಾಬಾದ್ ಪಟ್ಟಣದಲ್ಲಿರುವ ಲಾ ಉದ್ಯಾನದ ಒಂದು ಮುಂಜಾವಿನ ನೋಟ.

ಚಿತ್ರಕೃಪೆ: Maulik Joshi

ಗುಜರಾತ್:

ಗುಜರಾತ್:

ಗುಜರಾತಿನ ಜುನಾಗಡ್ ಜಿಲ್ಲೆಯಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಿಂತಲೂ ಪುರಾತನವಾದ ಗಿರ್ನಾರ್ ಪರ್ವತ ಶ್ರೇಣಿಗಳ ಪವಿತ್ರ ಯಾತ್ರೆ ಇಲ್ಲಿನ ಹಿಂದೂ ಹಾಗೂ ಜೈನ ಸಮುದಾಯದವರ ಪಾಲಿಗೆ ಅತಿ ಮಹತ್ವದ್ದಾಗಿದೆ.

ಚಿತ್ರಕೃಪೆ: Nileshbandhiya

ಗುಜರಾತ್:

ಗುಜರಾತ್:

ಗಿರ್ನಾರ್ ನಲ್ಲಿರುವ ಭಾವನಾಥ ಮಹಾದೇವ ಮಂದಿರ.

ಚಿತ್ರಕೃಪೆ: Nileshbandhiya

ಗುಜರಾತ್:

ಗುಜರಾತ್:

ಗಿರ್ನಾರ್ ಪರ್ವತ ಶ್ರೇಣಿಗೆ ಯಾತ್ರೆಗೆ ಹೋಗುವುದನ್ನು ಗಿರ್ನಾರ್ ಪರಿಕ್ರಮಾ ಎಂದು ಕರೆಯಲಾಗುತ್ತದೆ. ಗಿರ್ನಾರ್ ಪರಿಕ್ರಮಾದಲ್ಲಿ ಪಾಲ್ಗೊಂಡಿರುವ ಭಕ್ತಾದಿಗಳು.

ಚಿತ್ರಕೃಪೆ: Nileshbandhiya

ಗುಜರಾತ್:

ಗುಜರಾತ್:

ವಿವಿಧ ಸಾಧು ಬಾಬಾಗಳು, ಧರ್ಮಾಧಿಕಾರಿಗಳು ಈ ಉತ್ಸವದಲ್ಲಿ ಬರುವುದು ಸಾಮಾನ್ಯ.

ಚಿತ್ರಕೃಪೆ: Nileshbandhiya

ಗುಜರಾತ್:

ಗುಜರಾತ್:

ಗರ್ಬಾ ನೃತ್ಯವು ಗುಜರಾತ್ ಸಂಸ್ಕೃತಿಯ ಪ್ರಧಾನ ಅಂಗ. ನವರಾತ್ರಿಯ ಸಂದರ್ಭದಲ್ಲಿ ಗುಜರಾತಿನೆಲ್ಲೆಡೆ ಈ ನೃತ್ಯವನ್ನು ಕಾಣಬಹುದು.

ಚಿತ್ರಕೃಪೆ: Hardik jadeja

ಗುಜರಾತ್:

ಗುಜರಾತ್:

ಗುಜರಾತಿನ ಮೂರನೇಯ ದೊಡ್ಡದಾದ ಪಟ್ಟಣ ವಡೋದರಾ ಅಥವಾ ಬರೋಡಾ. ರಾಜ ವಂಶಾವಳಿಯ ಕುರುಹನ್ನು ಹೊತ್ತಿರುವ ಈ ನಗರ ಐತಿಹಾಸಿಕವಾಗಿಯೂ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Ekabhishek

ಗುಜರಾತ್:

ಗುಜರಾತ್:

ಭಾರತದ ಹಾಲಿನ ರಾಜಧಾನಿ ಆನಂದ ಪಟ್ಟಣವು ಇರುವುದು ಗುಜರಾತ್ ರಾಜ್ಯದಲ್ಲಿ. ಸುಪ್ರಸಿದ್ಧ ಅಮೂಲ್ ಡೈರಿ ಹಾಗೂ ಹಾಲಿನ ಕ್ರಾಂತಿಯಿಂದಾಗಿ ಈ ಪಟ್ಟಣವು ಹೆಚ್ಚು ಜನಪ್ರಿಯವಾಯಿತು.

ಚಿತ್ರಕೃಪೆ: Balajijagadesh

ಗುಜರಾತ್:

ಗುಜರಾತ್:

ಅನೇಕ ಐತಿಹಾಸಿಕ ಸ್ಮಾರಕಗಳನ್ನೊಳಗೊಂಡ ಭಾವನಗರ್ ಗುಜರಾತಿನ ಐದನೇಯ ದೊಡ್ಡ ಪಟ್ಟಣವಾಗಿದೆ.

ಚಿತ್ರಕೃಪೆ: Bernard Gagnon

ಗುಜರಾತ್:

ಗುಜರಾತ್:

ಒಂದೊಮ್ಮೆ ಪ್ರಬಲ ಭೂಕಂಪನದಿಂದಾಗಿ ತತ್ತರಿಸಿದ್ದ ಭುಜ್ ಪಟ್ಟಣವು ತನ್ನ ಸುತ್ತ ಮುತ್ತಲೂ ಹಲವಾರು ಅಭಯಾರಣ್ಯಗಳನ್ನು ಹೊಂದಿದೆ.

ಚಿತ್ರಕೃಪೆ: Bhargavinf

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ನಾಲ್ಕನೇಯ ದೊಡ್ಡ ಪಟ್ಟಣ ರಾಜಕೋಟ್. ಒಂದೊಮ್ಮೆ ಸೌರಾಷ್ಟ್ರ ರಾಜ್ಯದ ರಾಜಧಾನಿಯಾಗಿದ್ದ ರಾಜಕೋಟ್ ಪಟ್ಟಣವು ಅಜಿ ಹಾಗೂ ನ್ಯಾರಿ ನದಿಗಳ ದಂಡೆಯ ಮೇಲೆ ನೆಲೆಸಿದೆ. ಪ್ರಸ್ತುತ ನಗರವು ಶೀಘ್ರವಾಗಿ ಬೆಳೆಯುತ್ತಿದೆ.

ಚಿತ್ರಕೃಪೆ: Apoorvjani

ಗುಜರಾತ್:

ಗುಜರಾತ್:

ಜಾಮ್ ನಗರ್, ಕುಮಾರ್ ಶ್ರೀ ರಂಜೀತ್ ಸಿಂಗ್ ಜಿ ಅವರಿಂದ 1920 ರಲ್ಲಿ ಸ್ಥಾಪಿಸಲ್ಪಟ್ಟಿದ್ದು ಅಂದಿನ ದಿನಗಳಲ್ಲಿ ನವಾನಗರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ರಿಲಯ್ನ್ಸ್ ಸಂಸ್ಥೆಯ ಅತಿ ಬೃಹತ್ತಾದ ತೈಲ್ ಸಂಸ್ಕರಣಾ ಘಟಕವನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: 4patelsid

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ಏಳನೇಯ ದೊಡ್ಡ ಪಟ್ಟಣವಾಗಿರುವ ಜುನಾಗಡ್ ಗಿರ್ನಾರ್ ಪರ್ವತ ಶ್ರೇಣಿಯಲ್ಲಿ ನೆಲೆಸಿದೆ.

ಚಿತ್ರಕೃಪೆ: Bernard Gagnon

ಗುಜರಾತ್:

ಗುಜರಾತ್:

ಗುಜರಾತಿನ ಭಾವನಗರ್ ಜಿಲ್ಲೆಯಲ್ಲಿರುವ ಪಾಲಿತಾನಾ ಪಟ್ಟಣವು ಸಾವಿರ ದೇವಾಲಯಗಳುಳ್ಳ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದೆ.

ಚಿತ್ರಕೃಪೆ: Bernard Gagnon

ಗುಜರಾತ್:

ಗುಜರಾತ್:

ಗುಜರಾತ್ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್ ದೇಶದ ಪಿತಾಮಹ ಎಂದು ಖ್ಯಾತಿ ಪಡೆದ ಗಾಂಧೀಜಿಯವರ ಹುಟ್ಟೂರಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Dn9ahx

ಗುಜರಾತ್:

ಗುಜರಾತ್:

ಗುಜರಾತಿನ ಕಡಲ ತೀರ ಪಟ್ಟಣ ವಲ್ಸಾದ್ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Prky21

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X