Search
  • Follow NativePlanet
Share
» »ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

By Vijay

ಏನೀದು ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ತಾಳಿ..ಅವಸರ ಪಡಬೇಡಿ ಹೀಗೆಂದರೇನು ಎಂದು ಸಮಾಧಾನವಾಗಿ ಎಳೆ ಎಳೆಯಾಗಿ ತಿಳಿದು ಕೊಳ್ಳೋಣ. ಅಕ್ಷರಶಃ ಈ ಶಬ್ದದ ಅರ್ಥ ಕನ್ನಡದಲ್ಲಿ ಬಂಗಾರದ/ಸುವರ್ಣ ಚತುರ್ಭುಜ ಎಂದಾಗುತ್ತದೆ.

ಪ್ರಾಥಮಿಕವಾಗಿ ತಿಳಿದುಕೊಳ್ಳಬೇಕಾಗಿರುವ ಅಂಶವೆಂದರೆ ಇದೊಂದು ಬೃಹತ್ ಯೋಜನೆ. ಅದೂ ಭಾರತದ ಅಗ್ರಗಣ್ಯ ಮಹಾನಗರಗಳನ್ನು ಸುಲಲಿತವಾಗಿ ಒಂದಕ್ಕೊಂದು ಸಂಪರ್ಕ ಹೊಂದುವಂತೆ ಮಾಡಿದ ಯಶಸ್ವಿ ಪರಿಕಲ್ಪನೆ. ಮೂಲತಃ ಇದೊಂದು ರಸ್ತೆಗಳ ಜಾಲ.

ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳನ್ನು ಭೌಗೋಳಿಕವಾಗಿ ಗಮನಿಸಿದಾಗ ಅವು ಚತುರ್ಭುಜಾಕೃತಿಯ ಆಕಾರದಲ್ಲಿ ನೆಲೆಸಿರುವುದು ಕಂಡುಬರುತ್ತದೆ. ಈ ನಾಲ್ಕೂ ಮಹಾನಗರಗಳನ್ನು ಒಂದು ಸಮರ್ಪಕವಾದ ರಸ್ತೆ ಜಾಲದಲ್ಲಿ ಒಂದಕ್ಕೊಂದು ಬೆಸೆಯುವಂತೆ ಮಾಡುವ ಯೋಜನೆಗೆ ಸುವರ್ಣ ಚತುಷ್ಪಥ ಎಂದು ಹೇಳಲಾಗಿದೆ.

ಈ ಮಹಾ ಯೋಜನೆಯು ಕೇಂದ್ರದಲ್ಲಿ ಎನ್‍ಡಿಎ ಸರ್ಕಾರವಿದ್ದಾಗ ಅಂದಿನ ಪ್ರಧಾನ ಮಂತ್ರಿಯಾದ ಅಟಲ್ ಬಿಹಾರಿ ವಾಜಪೇಯಿ ಅವರಿಂದ 2001ರಲ್ಲಿ ಪ್ರಾರಂಭಗೊಂಡಿತು. ಈ ಯೋಜನೆಗಳಲ್ಲಿ ಕೇವಲ ರಾಷ್ಟ್ರೀಯ ಹೆದ್ದಾರಿಗಳನ್ನು ಮಾತ್ರವೆ ಬಳಸಿಕೊಳ್ಳಲಾಗಿದೆ. ನಾಲ್ಕು ಜೋಡಣಾ ಮಾರ್ಗಗಳಿದ್ದು ಪ್ರತಿಯೊಂದು ಜೋಡಣೆಗಳಲ್ಲಿ ಯಾವೇಲ್ಲ ಪ್ರಮುಖ ನಗರಗಳು ಸಂಪರ್ಕ ಪಡೆದುಕೊಳ್ಳುತ್ತವೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಈ ಯೋಜನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಗರಗಳು ಸಂಪರ್ಕ ಪಡೆಯುತ್ತಾವಾದರೂ ಕೇವಲ ಪ್ರಾಮುಖ್ಯತೆಯುಳ್ಳ ನಗರಗಳನ್ನು ತಿಳಿಸಲಾಗಿದೆ.

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಮೊದಲ ಕೊಂಡಿ ದೆಹಲಿಯಿಂದ ಕೊಲ್ಕತ್ತಾ. ರಾಷ್ಟ್ರೀಯ ಹೆದ್ದಾರಿ 2 ರಿಂದ ದೆಹಲಿಯು ಕೊಲ್ಕತ್ತಾ ನಗರದೊಂದಿಗೆ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: Avik Haldar

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ದೆಹಲಿಯಿಂದ ಕೊಲ್ಕತ್ತಾಗೆ ತೆರಳುವ ರಸ್ತೆಯಲ್ಲಿ ಸಿಗುವ ಪ್ರಮುಖ ಸ್ಥಳಗಳಲ್ಲಿ ಒಂದು ಮಥುರಾ ಭಗವಂತ ಕೃಷ್ಣನ ಜನ್ಮ ಸ್ಥಳವಾಗಿ ಮಥುರಾ ಪ್ರಖ್ಯಾತಿ ಪಡೆದಿದೆ. ಇಲ್ಲಿ ಹೋಲಿ ಅಥವಾ ಬಣ್ಣ್ಣದ ಓಕುಳಿ ಹಬ್ಬವನ್ನು ಅತಿ ಸಡಗರದಿಂದ ಆಚರಿಸಲಾಗುತ್ತದೆ. ಸ್ಥಳದ ಕುರಿತು ಹೆಚ್ಚಾಗಿ ತಿಳಿಯಿರಿ : ಮಥುರಾ

ಚಿತ್ರಕೃಪೆ: Sreeram Nambiar

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಮಥುರಾದ ನಂತರ ಈ ಹೆದ್ದಾರಿಯು ನೇರವಾಗಿ ಆಗ್ರಾ ಪಟ್ಟಣಕ್ಕೆ ಕರೆದೊಯ್ಯುತ್ತದೆ. ತಾಜ್ ಮಹಲ್, ಕೋಟೆ ಮುಂತಾದ ಆಕರ್ಷಣೆಗಳನ್ನು ಹೊತ್ತ ಆಗ್ರಾ ಹೆಸರುವಾಸಿಯಾದ ಪ್ರವಾಸಿ ಪಟ್ಟಣವಾಗಿದೆ. ಚಿತ್ರದಲ್ಲಿರುವುದು ಆಗ್ರಾದಲ್ಲಿರುವ ಆಗ್ರಾ ಕೋಟೆ.

ಚಿತ್ರಕೃಪೆ: Kinshuk Kashyap

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಆಗ್ರಾ ನಂತರದಲ್ಲಿ ಈ ರಸ್ತೆಯಲ್ಲಿ ಸಾಗಿದರೆ ದೊರೆಯುವ ಸ್ಥಳ ಉತ್ತರ ಪ್ರದೇಶ ರಾಜ್ಯದ ಕಾನಪುರ್. ಕಾನಪುರ್ ಪಟ್ಟಣದ ಒಂದು ಚಿತ್ರ.

ಚಿತ್ರಕೃಪೆ: vishal thakur

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಈ ರಸ್ತೆಯ ಮೇಲೆ ಕಾನಪುರ್ ನಂತರದಲ್ಲಿ ದೊರೆಯುವ ಭವ್ಯ ಪ್ರವಾಸಿ ಸ್ಥಳ ತ್ರಿವೇಣಿ ಸಂಗಮದ ಅಲಹಾಬಾದ್ ಪಟ್ಟಣ. ಧಾರ್ಮಿಕ ಪ್ರಖ್ಯಾತಿಯ ಅಲಹಾಬಾದ್ ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತಿರುತ್ತದೆ. ಚಿತ್ರದಲ್ಲಿ ಕಾಣುತ್ತಿರುವುದು ಅಲಹಾಬಾದ್‍ನ ಕುಂಭ ಮೇಳದ ಒಂದು ದೃಶ್ಯ.

ಚಿತ್ರಕೃಪೆ: Seba Della y Sole Bossio

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಅಲಹಾಬಾದ್ ನಂತರದಲ್ಲಿ ದೊರೆಯುವ ಮತ್ತೊಂದು ಪುಣ್ಯ ಕ್ಷೇತ್ರ ವಾರಣಾಸಿ. ಇದೊಂದು ಆಧ್ಯಾತ್ಮಿಕ ಮಹತ್ವದ ತಾಣವಾಗಿದ್ದು ಹಿಂದೂ ಸಮುದಾಯದವರ ಪಾಲಿಗೆ ಅತಿ ಮಹತ್ವ ಪಡೆದ ಪುಣ್ಯ ಕ್ಷೇತ್ರವಾಗಿದೆ. ಇದರ ಕುರಿತು ಹೆಚ್ಚಿಗೆ ಓದಿ.

ಚಿತ್ರಕೃಪೆ: Davi1974d

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ದುರ್ಗಾಪುರ: ವಾರಣಾಸಿ ನಂತರದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ದುರ್ಗಾಪುರ ಪಟ್ಟಣವು ಈ ರಸ್ತೆಯೊಂದಿಗೆ ಸಂಪರ್ಕ ಹೊಂದಿದೆ. ಇದೊಂದು ನಗರ ಪಟ್ಟಣವಾಗಿದ್ದು, ಉಕ್ಕಿನ ಕಾರ್ಖಾನೆಗೆ ಹೆಸರು ಪಡೆದಿದೆ.

ಚಿತ್ರಕೃಪೆ: shankar s.

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಬರ್ಧಮಾನ ಪಶ್ಚಿಮ ಬಂಗಾಳದ ದುರ್ಗಾಪುರ ಪಟ್ಟಣದ ನಂತರದಲ್ಲಿ ಬರುವ ಸ್ಥಳ. ಈ ಪಟ್ಟಣದಲ್ಲಿ ಕರ್ಜನ್ ದ್ವಾರ, ರಾಮಣ ಬಾಗಾನ್, 108 ಶಿವ ದೇವಾಲಯ ಹೀಗೆ ಹತ್ತು ಹಲವು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಚಿತ್ರದಲ್ಲಿರುವುದು 108 ಶಿವ ದೇವಾಲಯಗಳು.

ಚಿತ್ರಕೃಪೆ: Mondal.koustav

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಕೊಲ್ಕತ್ತಾ, ದೆಹಲಿಯಿಂದ ಕೊಲ್ಕತ್ತಾದವರೆಗಿನ ಜೋಡಣೆಯ ಕೊನೆಯ ಸ್ಥಳ. ಹಿಂದೆ ಭಾರತದ ರಾಜಧಾನಿಯಾಗಿದ್ದ ಕೊಲ್ಕತ್ತಾ ನಗರ ಇಂದು ದೇಶದ ನಾಲ್ಕು ಮಹಾನಗರಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ಕೊಲ್ಕತ್ತಾ ನಗರದ ಪ್ರಸಿದ್ಧ ವಿದ್ಯಾ ಸಾಗರ ಸೇತುವೆ.

ಚಿತ್ರಕೃಪೆ: Rajarshi MITRA

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಚತುಷ್ಪಥದ ಮತ್ತೊಂದು ಭುಜ ಕೊಲ್ಕತ್ತಾದಿಂದ ಚೆನ್ನೈವರೆಗೆ. ಕೊಲ್ಕತ್ತಾದಿಂದ ಪ್ರಾರಂಭವಾಗಿ ಮುಂದೆ ಸಾಗುವಾಗ ಈ ಹೆದ್ದಾರಿಯಲ್ಲಿ ಸಿಗುವ ಸ್ಥಳ ಖರಗಪುರ್. ಖರಗಪುರ್ ಒಂದು ನಗರ ಪ್ರದೇಶವಾಗಿದ್ದು ತನ್ನಲ್ಲಿರುವ ಪ್ರತಿಷ್ಠಿತ ಐ ಐ ಟಿ ವಿದ್ಯಾ ಸಂಸ್ಥೆಗೆ ಹೆಚ್ಚು ಪ್ರಖಾತಿ ಗಳಿಸಿಸಿದೆ. ಚಿತ್ರದಲ್ಲಿರುವುದು ಐಐಟಿ ಖರಗಪುರ್ ಕಟ್ಟಡ.

ಚಿತ್ರಕೃಪೆ: Katochnr

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

"ಮಿಲೇನಿಯಮ್ ಸಿಟಿ", "ಸಿಲ್ವರ್ ಸಿಟಿ" ಎಂಬೆಲ್ಲ ಬಿರುದುಗಳುಳ್ಳ ಕಟಕ್ ಒಡಿಶಾ ರಾಜ್ಯದ ಎರಡನೇಯ ದೊಡ್ಡ ನಗರ ಪಟ್ಟಣವಾಗಿದೆ. ರಾಜ್ಯದ ಮಾಜಿ ರಾಜಧಾನಿಯಾದ ಈ ಪಟ್ಟಣದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಅಲ್ಲದೆ ರಾಜ್ಯದ ಉಚ್ಚ ನ್ಯಾಯಾಲಯವು ಈ ನಗರದಲ್ಲಿ ನೆಲೆಸಿದೆ. ಚಿತ್ರದಲ್ಲಿರುವುದು ಕಟಕ್ ನ ಮಹಾನದಿಗೆ ಕಟ್ಟಲಾದ ಸೇತುವೆ.

ಚಿತ್ರಕೃಪೆ: Sourav Das

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಕಟಕ್ ನಂತರದಲ್ಲಿ ಈ ಹೆದ್ದಾರಿಯಲ್ಲಿ ದೊರೆಯುವ ಪ್ರಮುಖ ಸ್ಥಳವೆಂದರೆ ಭುವನೇಶ್ವರ. ಒಡಿಶಾ ರಾಜ್ಯದ ರಾಜಧಾನಿ. ರಾಜಧಾನಿ ಹಾಗೂ ದೊಡ್ಡ ನಗರವಾಗಿರುವುದರಿಂದ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Sankara Subramanian

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಕಟಕ್ ನಂತರದಲ್ಲಿ ಈ ರಸ್ತೆಯು ಆಂಧ್ರ ಪ್ರದೇಶ ರಾಜ್ಯದ ವೈಜಾಗ್/ವಿಶಾಖಪಟ್ಟಣಂಗೆ ಸಂಪರ್ಕ ಕಲ್ಪಿಸುತ್ತದೆ. ವಿಶಾಖಾಪಟ್ಟಣ ಒಂದು ಬಂದರು ನಗರಿಯಾಗಿದ್ದು ಸುಂದರವಾದ ಕಡಲ ತೀರದ ಜೊತೆಗೆ ಹಲವು ಆಕರ್ಷಣೆಗಳನ್ನು ಪ್ರವಾಸಿಗರಿಗಾಗಿ ಕರುಣಿಸುತ್ತದೆ.

ಚಿತ್ರಕೃಪೆ: Candeo gauisus

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ವಿಶಾಖಾಪಟ್ಟಣವನ್ನು ಈ ಹೆದ್ದಾರಿಯು ಆಂಧ್ರ ಪ್ರದೇಶದ ಮತ್ತೊಂದು ಮುಖ್ಯ ನಗರವಾದ ರಾಜಮುಂಡ್ರಿಯೊಂದಿಗೆ ಬೆಸೆಯುತ್ತದೆ. ರಾಜಮುಂಡ್ರಿ ಪೂರ್ವ ಗೋದಾವರಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ಗೋದಾವರಿ ಸೇತುವೆ.

ಚಿತ್ರಕೃಪೆ: Rishabhchandan

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ರಾಜಮುಂಡ್ರಿಯ ನಂತರದಲ್ಲಿ ದೊರೆಯುವ ಸ್ಥಳ ವಿಜಯವಾಡಾ. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪ್ರಮುಖ ಹಾಗೂ ವಾಣಿಜ್ಯ ನಗರವಾಗಿ ವಿಜಯವಾಡಾ ಗಮನ ಸೆಳೆಯುತ್ತದೆ. ವಿಜಯವಾಡಾ ನಗರದ ಪಾಕ್ಷಿಕ ನೋಟ.

ಚಿತ್ರಕೃಪೆ: Man praveen

ಸುವರ್ಣ ಚತುಷ್ಪಥ:

ಸುವರ್ಣ ಚತುಷ್ಪಥ:

ಎರಡನೇಯ ಕೊಂಡಿಯ ರಸ್ತೆಯ ಕೊನೆಯ ಹಾಗೂ ತಲುಪಬೇಕಾದ ನಿಗದಿತ ಸ್ಥಳ ತಮಿಳುನಾಡಿನ ಚೆನ್ನೈ ಮಹಾನಗರ. ಚೆನ್ನೈ ನಗರವು ಪ್ರವಾಸಿಗರಿಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಇಲ್ಲಿನ ಆಕರ್ಷಣೆಗಳ ಕುರಿತು ತಿಳಿಯಬೇಕಿದ್ದಲ್ಲಿ ಈ ಕೊಂಡಿಯನ್ನು ಕ್ಲಿಕ್ ಮಾಡಿ.

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥದ ಮೂರನೇಯ ಕೊಂಡಿಯು ಚೆನ್ನೈ ನಿಂದ ಮುಂಬೈವರೆಗಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4, 7 ಹಾಗೂ 46 ಗಳನ್ನು ಒಳಗೊಂಡಿದೆ. ಚೆನ್ನೈನಿಂದ ಪ್ರಾರಂಭವಾಗಿ ಈ ರಸ್ತೆಯು ಮೊದಲು ಶ್ರೀಪೆರುಂಬುದುರ್ ಪಟ್ಟಣಕ್ಕೆ ಸಂಪರ್ಕ ಬೆಸೆಯುತ್ತದೆ. ಚೆನ್ನೈನಿಂದ 40 ಕಿ.ಮೀ ದೂರದಲ್ಲಿರುವ ಶ್ರೀಪೆರುಂಬುದುರ್ ವೈಷ್ಣವ ಪಂಥದ ಶ್ರೀರಾಮಾನುಜರು ಹುಟ್ಟಿದ ಸ್ಥಳವಾಗಿದೆ. ಅಲ್ಲದೆ ಶ್ರೀ ಆದಿಕೇಶವ ಪೆರುಮಾಳ ದೇವಸ್ಥಾನದಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Planemad

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಶ್ರೀಪೆರುಂಬುದುರ್ ನಂತರದಲ್ಲಿ ದೊರೆಯುವ ಸ್ಥಳ ಕಾಂಚೀಪುರಂ. ಕಾಮಾಕ್ಷಿ ದೇವಿ ನೆಲೆಸಿರುವ ಈ ಪಟ್ಟಣವು ಒಂದು ಪ್ರಖ್ಯಾತ ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವುದು ಅಲ್ಲದೆ ಇಲ್ಲಿ ದೊರೆಯುವ ರೇಷ್ಮೆ ಸೀರೆಗಳಿಗೂ ಪ್ರಖ್ಯಾತಿ ಪಡೆದಿದೆ. ವರದರಾಜ ಪೆರುಮಾಳ್, ಏಕಾಂಬರೇಶ್ವರರ್ ನಂತಹ ಪ್ರಮುಖ ದೇವಾಲಯಗಳನ್ನೂ ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Santhosh Janardhanan

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಕಾಂಚೀಪುರಂ ನಂತರದಲ್ಲಿ ದೊರೆಯುವ ಸ್ಥಳ ವೇಲೂರು/ವೆಲ್ಲೋರ್. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಈ ಪಟ್ಟಣವು ಪಾಲಾರ್ ನದಿಯ ದಡದ ಮೆಲೆ ನೆಲೆಸಿದೆ.

ಚಿತ್ರಕೃಪೆ: Surya Teja

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ವೇಲೂರಿನಿಂದ ಮುಂದೆ ಸಾಗುವ ಈ ರಸ್ತೆ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸುತ್ತ ಬೆಂಗಳೂರು ಮಹಾನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ಆಧುನಿಕ ಮುಖವೆಂದೆ ಹೇಳಲಾಗುವ ಬೆಂಗಳೂರು ಅತಿ ಶೀಘ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದ್ದು ಸಾಕಷ್ಟು ಪ್ರವಾಸಿ ಆಯ್ಕೆಗಳನ್ನು ಇದು ಒದಗಿಸುತ್ತದೆ.

ಚಿತ್ರಕೃಪೆ: Prathapwagle

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 4 ರ ಮೂಲಕ ಈ ಕೊಂಡಿಯು ಸಾಗುತ್ತ ಮುಂದೆ ಚಿತ್ರದುರ್ಗಕ್ಕೆ ಸಂಪರ್ಕ ಬೆಸೆಯುತ್ತದೆ. ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಚಿತ್ರದುರ್ಗವು ತನ್ನಲ್ಲಿರುವ ಏಳು ಸುತ್ತಿನ ಕಲ್ಲಿನ ಕೋಟೆಯಿಂದಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Nagarjun Kandukuru

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಚಿತ್ರದುರ್ಗದಿಂದ ಮುಂದೆ ಸಾಗುವ ಮೂರನೇಯ ಕೊಂಡಿಯ ಈ ರಸ್ತೆಯು ದಾವಣಗೆರೆ ಎಂಬ ಪಟ್ಟಣದೊಂದಿಗೆ ಸಂಪರ್ಕ ಬೆಸೆಯುತ್ತದೆ. ದಾವಣಗೆರೆ ಪಟ್ಟಣವು ತನ್ನಲ್ಲಿ ದೊರೆಯುವ ಬೆಣ್ಣೆ ಮಸಾಲೆ ದೋಸೆಗೆ ಹೆಚ್ಚು ಪ್ರಖ್ಯಾತಿ ಗಳಿಸಿದೆ.

ಚಿತ್ರಕೃಪೆ: Irrigator

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ದಾವಣಗೆರೆಯ ನಂತರದಲ್ಲಿ ದೊರೆಯುವ ಸ್ಥಳ ಕರ್ನಾಟಕದ ಅವಳಿ ನಗರವೆಂದೆ ಜನ ಮನ್ನಣೆಗಳಿಸಿದ ಹುಬ್ಬಳ್ಳಿ-ಧಾರವಾಡ. "ಚೋಟಾ ಮುಂಬೈ" ಎಂಬ ಅಂಕಿತ ನಾಮವನ್ನು ಪಡೆದಿರುವ ಹುಬ್ಬಳ್ಳಿ ನಗರವು ಉತ್ತರ ಕರ್ನ್ನಾಟಕದ ವ್ಯಾಪಾರು ವಹಿವಾಟುಗಳ ಪ್ರಮುಖ ಪಟ್ಟಣವಾಗಿದೆ.

ಚಿತ್ರಕೃಪೆ: Mohd Khaise Ahmed

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಹುಬ್ಬಳ್ಳಿ ನಂತರದಲ್ಲಿ ಸಿಗುವ ಸ್ಥಳ ಉತ್ತರ ಕರ್ನಾಟಕದ ಮಲೆನಾಡು ಎಂಬ ಖ್ಯಾತಿ ಪಡೆದ ಬೆಳಗಾವಿ ಶಹರ/ಪಟ್ಟಣ. ಕರ್ನಾಟಕದ ಈ ನಾಡಿನಲ್ಲಿ ಕನ್ನಡ ಹಾಗೂ ಮರಾಠಿಯ ವಿಶೇಷ ಸಂಸ್ಕೃತಿಯನ್ನು ಕಾಣಬಹುದಾಗಿದ್ದು ಹಲವು ಪ್ರವಾಸಿ ಆಕರ್ಷಣೆಗಳನ್ನು ಈ ನಗರದ ಸುತ್ತ ಮುತ್ತಲಿನಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: amol

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಬೆಳಗಾವಿಯಿಂದ ಮುಂದೆ ಸಾಗುವ ಈ ರಸ್ತೆ ನಂತರದಲ್ಲಿ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣಗಳ ಪೈಕಿ ಒಂದಾದ ಕೊಲ್ಲಾಪುರಕ್ಕೆ ಸಂಪರ್ಕ ಸಾಧಿಸುತ್ತದೆ. ಕೊಲ್ಲಾಪುರವು ಧಾರ್ಮಿಕ ಮಹತ್ವ ಪಡೆದ ಸ್ಥಳವಾಗಿದ್ದು ಪ್ರಚಲಿತದಲ್ಲಿರುವ ಶಕ್ತಿ ಪೀಠಗಳ ಪೈಕಿ ಒಂದಾಗಿದೆ. ಕೊಲ್ಲಾಪುರ ಕುರಿತು ಹೆಚ್ಚಿಗೆ ತಿಳಿಯಿರಿ. ಚಿತ್ರದಲ್ಲಿರುವುದು ಕೊಲ್ಲಾಪುರಿನ ನೀವ್ ಪ್ಯಾಲೇಸ್/ಹೊಸ ಅರಮನೆ.

ಚಿತ್ರಕೃಪೆ: Vijayshankar.munoli

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಕೊಲ್ಲಾಪುರದ ನಂತರ ಈ ರಸ್ತೆಯು ಸಾಂಗ್ಲಿ-ಮೀರಜ್, ಕರಾಡ್ ಮಾರ್ಗವಾಗಿ ಸತಾರಾ ಪಟ್ಟಣಕ್ಕೆ ಸಂಪರ್ಕ ಸಾಧಿಸುತ್ತದೆ. ಸತಾರಾ ಸುತ್ತ ಮುತಾಲಿನಲ್ಲಿ ಅನೇಕ ಗಮ್ಯ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಚಿತ್ರದಲ್ಲಿರುವುದು ಸತಾರಾ ಬಳಿಯ ಕಾಸ್ ಹೂವಿನ ಕಣಿವೆ.

ಚಿತ್ರಕೃಪೆ: Travelling Slacker

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಸತಾರಾ ನಂತರದಲ್ಲಿ ದೊರೆಯುವ ಪಟ್ಟಣ ಪುಣೆ ಮಹಾನಗರ. ಮಹಾರಾಷ್ಟ್ರದ ದೊದ್ಡ ಪಟ್ಟಣಗಳ ಪೈಕಿ ಒಂದಾಗಿರುವ ಪುಣೆ ಮಹಾನಗರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Kristina D.C. Hoeppner

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಪುಣೆ ನಂತರದಲ್ಲಿ ಈ ರಸ್ತೆಯು ಮುಂದೆ ಸಾಗುತ್ತ ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈ ಮಹಾನಗರವನ್ನು ಮೂರನೇಯ ಕೊಂಡಿಯ ಕೊನೆಯ ನಿಲ್ದಾಣವಾಗಿ ತಲುಪುತ್ತದೆ.

ಚಿತ್ರಕೃಪೆ: sajpics

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ನಾಲ್ಕನೇಯ ಕೊಂಡಿಯ ರಸ್ತೆಯು ಮುಂಬೈನಿಂದ ಪ್ರಾರಂಭವಾಗಿ ಮೊದಲು ಸಿಲ್ವಾಸ್ಸಾ ತಲುಪುತ್ತದೆ. ಇದು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಹಾಗೂ ನಗರ್ ಹವೇಲಿಯ ರಾಜಧಾನಿ ಪಟ್ಟಣವಾಗಿದೆ.

ಚಿತ್ರಕೃಪೆ: Sharada Prasad CS

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಸಿಲ್ವಾಸ್ಸಾದ ನಂತರ ಈ ರಸ್ತೆಯು ಗುಜರಾತ್ ರಾಜ್ಯಕ್ಕೆ ಪ್ರವೇಶಿಸುತ್ತ ಮೊದಲಿಗೆ ವಾಪಿ ಹಾಗೂ ನಂತರದಲ್ಲಿ ವಲ್ಸಾದ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಸುಂದರ ಕಡಲ ತೀರದ ವಲ್ಸಾದ್ ಮನಮೋಹಕ ಪಟ್ಟಣವಾಗಿದೆ.

ಚಿತ್ರಕೃಪೆ: Prky21

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ವಲ್ಸಾದ್ ನಂತರ ಈ ರಸ್ತೆಯು ಮುಂದೆ ಸಾಗುತ್ತ ಗುಜರಾತಿನ ಪ್ರಮುಖ ಪಟ್ಟಣಗಳ ಪೈಕಿ ಒಂದಾದ ಸೂರತ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಸೂರತ್ ಗುಜರಾತ್ ರಾಜ್ಯದ ಎರಡನೇಯ ದೊಡ್ಡ ನಗರವಾಗಿದೆ.

ಚಿತ್ರಕೃಪೆ: Rahulogy

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಸೂರತ್ ನಿಂದ ಮುಂದೆ ಸಾಗುತ್ತ ಈ ರಸ್ತೆಯು ವಡೋದರಾ ಅಥವಾ ಬರೋಡಾ ನಗರಕ್ಕೆ ಸಂಪರ್ಕ ಸಾಧಿಸುತ್ತದೆ. ವಿಶ್ವಾಮಿತ್ರಿ ನದಿಯ ತಟದಲ್ಲಿ ನೆಲೆಸಿರುವ ಈ ಪಟ್ಟಣ ಗುಜರಾತ್ ರಾಜ್ಯದ ಮೂರನೇಯ ದೊಡ್ಡ ನಗರವಾಗಿದೆ ಹಾಗೂ ಐತಿಹಾಸಿಕ ಮಹತ್ವ ಪಡೆದಿದೆ. ಚಿತ್ರದಲ್ಲಿರುವುದು 2014 ರಲ್ಲಿ ಉದ್ಘಾಟನೆಗೊಂಡ ಅತ್ಯಾಧುನಿಕ ಬಸ್ಸು ನಿಲ್ದಾಣ.

ಚಿತ್ರಕೃಪೆ: Narendra Modi

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ವಡೋದರಾ ನಂತರ ಬರುವ ಅತಿ ದೊಡ್ಡ ನಗರ ಅಹ್ಮದಾಬಾದ್. ಇದು ಗುಜರಾತ್ ನ ಅತಿ ದೊಡ್ಡ ನಗರವೂ ಹೌದು. ಸಾಬರಮತಿ ನದಿ ದಂಡೆಯ ಮೇಲೆ ನೆಲೆಸಿರುವ ಅಹ್ಮದಾಬಾದ್ ಗುಜರಾತ್ ರಾಜ್ಯದ ಪ್ರಮುಖ ವಾಣಿಜ್ಯ್ ಕೇಂದ್ರವೂ ಹೌದು.

ಚಿತ್ರಕೃಪೆ: Emmanuel DYAN

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಅಹ್ಮದಾಬಾದ್ ನಂತರದಲ್ಲಿ ಸಿಗುವ ಸ್ಥಳ ಗುಜರಾತಿನ ಮತ್ತೊಂದು ಪ್ರಮುಖ ಪಟ್ಟಣ ಹಾಗು ಗುಜರಾತ್ ರಾಜ್ಯದ ರಾಜಧಾನಿ ನಗರ ಗಾಂಧಿ ನಗರ. ಇದು ಅಹ್ಮದಾಬಾದ್ ನಗರದಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: jaimin naik

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಗಾಂಧಿನಗರದ ನಂತರ ಈ ರಸ್ತೆಯು ರಾಜಸ್ಥಾನ ರಾಜ್ಯಕ್ಕೆ ಪ್ರವೇಶಿಸುತ್ತ ಮೊದಲಿಗೆ ಈ ರಜ್ಜ್ಯದ ಪ್ರಮುಖ ಪಟ್ಟಣಗಳ ಪೈಕಿ ಒಂದಾದ, ಸರೋವರಗಳ ನಗರ ಎಂದು ಕರೆಯಲ್ಪಡುವ ಉದೈಪುರಕ್ಕೆ ಸಂಪರ್ಕ ಸಾಧಿಸುತ್ತದೆ. ಉದೈಪುರ ಗಮ್ಯವಾದ ಪ್ರವಾಸಿ ಸ್ಥಳವಾಗಿದೆ. ದೇಶ ಮಾತ್ರವಲ್ಲದೆ ವಿದೇಶದಿಂದಲೂ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಚಿತ್ರಕೃಪೆ: Pranshu Dubey

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಉದೈಪುರದಿಂದ ಈ ರಸ್ತೆಯು ಚಿತ್ತೌರ್‌‌‌‌‌‌‌‍ಗಡ್ ಮೂಲಕ ಅಜ್ಮೇರ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಇದು ರಾಜಸ್ಥಾನ ರಾಜ್ಯದ ಐದನೇಯ ದೊಡ್ಡ ನಗರವಾಗಿದ್ದು, ರಾಜಧಾನಿ ಜೈಪುರದಿಂದ 135 ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Singh92karan

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಅಜ್ಮೇರ್ ನಿಂದ ಮುಂದೆ ಸಾಗುವ ಈ ರಸ್ತೆಯು ನಂತರ ರಾಜಸ್ಥಾನ ರಾಜ್ಯದ ರಾಜಧಾನಿ ನಗರ ಹಾಗೂ ಆಕರ್ಷಕ ಪ್ರವಾಸಿ ತಾಣವಾದ ಜೈಪುರದೊಂದಿಗೆ ಸಂಪರ್ಕ ಸಾಧಿಸುತ್ತದೆ. ಚಿತ್ರದಲ್ಲಿರುವುದು ಜೈಪುರಿನ ವರ್ಲ್ಡ್ ಟ್ರೇಡ್ ಪಾರ್ಕ್.

ಚಿತ್ರಕೃಪೆ: Wikisidd

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಜೈಪುರದ ನಂತರ ರಾಜಸ್ಥಾನದ ಗಡಿಯನ್ನು ತ್ಯಜಿಸುವ ಈ ರಸ್ತೆಯು ಹರ್ಯಾಣ ರಾಜ್ಯದ ಗುರ್ಗಾಂವ್ ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಹೆಸರು ಮಾಡಿರುವ ಗುರ್ಗಾಂವ್ ನ್ಯಾಷನಲ್ ಕ್ಯಾಪಿಟಲ್ ರೀಜನ್ ನ ಭಾಗವಾಗಿದ್ದು ದೇಶದ ರಾಜಧಾನಿ ದೆಹಲಿಗೆ ಹತ್ತಿರದಲ್ಲಿದೆ.

ಚಿತ್ರಕೃಪೆ: Dinesh Pratap Singh

ಸುವರ್ಣ ಚತುಷ್ಪಥ

ಸುವರ್ಣ ಚತುಷ್ಪಥ

ಕಡೆಗೆ ಕೊನೆಯ ಕೊಂಡಿಯ ಕೊನೆಯ ನಿಗದಿತ ಸ್ಥಳವಾಗಿ ಈ ರಸ್ತೆಯು ದೇಶದ ರಾಜಧಾನಿ ದೆಹಲಿಯೊಂದಿಗೆ ಸಂಪರ್ಕ ಸಾಧಿಸುತ್ತದೆ. ಈ ರೀತಿಯಾಗಿ ನಾಲ್ಕು ಕೊಂಡಿಗಳು ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ನಾಲ್ಕು ಚತುರ್ಭುಜಾಕೃತಿಯಲ್ಲಿ ನೆಲೆಸಿರುವಂತಹ ಭಾರತದ ನಾಲ್ಕು ಮಹಾನ್ ನಗರಗಳನ್ನು ತನ್ನ ಸಮರ್ಪಕ ರಸ್ತೆ ಜಾಲದಲ್ಲಿ ಬೆಸೆಯುತ್ತದೆ.

ಚಿತ್ರಕೃಪೆ: Retro00064

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X