Search
  • Follow NativePlanet
Share
» »ಆತ್ಮ ಲಿಂಗ ಕ್ಷೇತ್ರ ಗೋಕರ್ಣದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಆತ್ಮ ಲಿಂಗ ಕ್ಷೇತ್ರ ಗೋಕರ್ಣದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಒಂದು. ಪವಿತ್ರವಾದ ಯಾತ್ರಾಸ್ಥಳದಲ್ಲಿ ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರ, ಪೂರ್ವದ

ನಮ್ಮ ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಒಂದು. ಪವಿತ್ರವಾದ ಯಾತ್ರಾಸ್ಥಳದಲ್ಲಿ ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರ, ಪೂರ್ವದಲ್ಲಿ ಸಿದ್ದೇಶ್ವರ ಕ್ಷೇತ್ರ, ಉತ್ತರದಲ್ಲಿ ಗಂಗಾವಳಿ ನದಿ, ದಕ್ಷಿಣದಲ್ಲಿ ಅಘನಾಶಿನಿ ನದಿಗಳಿವೆ.

ಇಂಥಹ ಪ್ರಕೃತಿ ರಮಣೀಯತೆಯಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರದಲ್ಲಿ ಶಿವನ ಆತ್ಮ ಲಿಂಗವು ನೆಲೆಸಿದೆ. ಈ ಪುಣ್ಯ ಕ್ಷೇತ್ರದ ಬಗ್ಗೆ ಸಾಕಷ್ಟು ಉಲ್ಲೇಖಗಳನ್ನು ಕಾಣಬಹುದು. ಪ್ರಮುಖವಾಗಿ ಪವಿತ್ರವಾದ ಗ್ರಂಥವಾದ ರಾಮಾಯಾಣ ಹಾಗೂ ಮಹಾ ಭಾರತದಲ್ಲಿ ಕಾಣಬಹುದಾಗಿದೆ. ಇಂಥಹ ಮಾಹಿಮಾನ್ವಿತ ದೇವಾಲಯವಿರುವುದು ನಮ್ಮ ಕರ್ನಾಟಕದಲ್ಲಿ ಎಂಬುದು ಹೆಮ್ಮೆಯ ವಿಷಯವಾಗಿದೆ.

ಪ್ರಸ್ತುತ ಲೇಖನದಲ್ಲಿ ಆತ್ಮ ಲಿಂಗ ಕ್ಷೇತ್ರ ಗೋಕರ್ಣದ ಸ್ಥಳ ಪುರಾಣದ ಬಗ್ಗೆ ಕೆಲವು ಪ್ರಮುಖವಾದ ಮಾಹಿತಿಗಳನ್ನು ತಿಳಿಯೋಣ...

ಎಲ್ಲಿದೆ?

ಎಲ್ಲಿದೆ?

ಈ ಸುಂದರವಾದ ಕ್ಷೇತ್ರ ಗೋರ್ಕಣವಿರುವುದು ಮಂಗಳೂರಿನ ಕುದ್ರೂಳಿಯಲ್ಲಿ. ಇಲ್ಲಿ ಪರಮಶಿವನು ಆತ್ಮಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ. ಮಂಗಳೂರಿನಿಂದ ಗೋರ್ಕಣ ಪುಣ್ಯಕ್ಷೇತ್ರಕ್ಕೆ ಸುಮಾರು 2 ಕಿ.ಮೀ ಅಂತರದಲ್ಲಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಈ ಗೋಕರ್ಣ ಕ್ಷೇತ್ರದ ಸ್ಥಳ ಪುರಾಣವೆಂದರೆ ಒಮ್ಮೆ ರಾವಣನು ಘೋರವಾದ ತಪಸ್ಸು ಮಾಡುತ್ತಾನೆ. ಅವನ ತಪಸ್ಸನ್ನು ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷವಾಗಿ ವರವನ್ನು ಕೋರು ಎಂದು ಹೇಳುತ್ತಾನೆ.

ರಾವಣ

ರಾವಣ

ಆಗ ರಾವಣನು ವರವಾಗಿ ಆತ್ಮಲಿಂಗ ಬೇಕು ಎಂದು ಕೇಳಿಕೊಂಡನು. ಇದಕ್ಕೆ ಒಪ್ಪಿದ ಶಿವನು ಒಂದು ನಿಬಂಧನೆಯನ್ನು ವಿಧಿಸಿದನು. ನಿಬಂಧನೆಯ ಪ್ರಕಾರ ರಾವಣನಿಗೆ ಆತ್ಮಲಿಂಗವನ್ನು ವರವಾಗಿ ನೀಡಿದನು.

ನಿಬಂಧನೆ

ನಿಬಂಧನೆ

ಆ ನಿಬಂಧನೆ ಏನೆಂದರೆ ಆತ್ಮಲಿಂಗವನ್ನು ಲಂಕದವರೆವಿಗೂ ನೆಲದ ಮೇಲೆ ಇರಿಸದೇ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ನೆಲೆಕ್ಕೆ ಆತ್ಮಲಿಂಗ ತಾಕಿದರೆ ಘೋರವಾದ ಪ್ರಮಾದವಾಗುತ್ತದೆ ಎಂದು ತಿಳಿಸಿದನು.

ದೇವತೆಗಳು

ದೇವತೆಗಳು

ಆತ್ಮಲಿಂಗ ರಾವಣನಲ್ಲಿ ಇದ್ದರೆ ಲೋಕವೆಲ್ಲಾ ಅಲ್ಲಕಲ್ಲೋಲವಾಗುತ್ತದೆ ಎಂದು ಭಾವಿಸಿದ ದೇವತೆಗಳು ತಮ್ಮನ್ನು ಕಾಪಾಡಬೇಕು ಎಂದು ವಿಷ್ಣು, ಬ್ರಹ್ಮ, ಮಹೇಶ್ವರನಲ್ಲಿ ಕೇಳಿಕೊಂಡರು. ಗಣಪತಿಯು ಚಿಕ್ಕ ಬಾಲಕನ ವೇಷಧಾರಿಯಾದನು.

ಗಣಪತಿ

ಗಣಪತಿ

ರಾವಣನು ಆತ್ಮಲಿಂಗವನ್ನು ಲಂಕಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಮಾರ್ಗ ಮಧ್ಯೆಯಲ್ಲಿ ಚಿಕ್ಕ ಬಾಲಕನ ವೇಷಧರಿಸಿ ಗಣಪತಿಯು ಸಮೀಪಿಸುತ್ತಾನೆ.

ವಿಷ್ಣು ಮೂರ್ತಿ

ವಿಷ್ಣು ಮೂರ್ತಿ

ಸೂರ್ಯನಿಗೆ ಅಡ್ಡವಾಗಿ ವಿಷ್ಣು ಮೂರ್ತಿಯು ತನ್ನ ಸುದರ್ಶನ ಚಕ್ರವನ್ನು ಅಡ್ಡವಾಗಿ ಇಡುತ್ತಾನೆ. ಅದಾಗಲೇ ಸೂರ್ಯಾಸ್ತವಾಯಿತು ಎಂದು ಕೊಂಡ ರಾವಣನು ಸಂಧ್ಯಾವಂದನೆಯನ್ನು ನಿರ್ವಹಿಸಬೇಕು ಎಂದು ಕೊಳ್ಳುತ್ತಾನೆ.

ಆತ್ಮಲಿಂಗ

ಆತ್ಮಲಿಂಗ

ಆದರೆ ಅವನ 2 ಕೈಗಳಲ್ಲೂ ಶಿವನ ಆತ್ಮಲಿಂಗವಿದೆ. ಆ ದಾರಿ ಮಧ್ಯೆಯಲ್ಲಿ ಬಂದ ಬಾಲಕ(ಗಣಪತಿ)ನಿಗೆ ಕೆಲವು ಸಮಯದವರೆಗೆ ಆತ್ಮಲಿಂಗವನ್ನು ಹಿಡಿದುಕೋ ಎಂದು ತಿಳಿಸುತ್ತಾನೆ.

ಗಣಪತಿ

ಗಣಪತಿ

ಇದಕ್ಕೆ ಒಪ್ಪಿದ ಬಾಲಕನು ನಾನು ಮೂರು ಬಾರಿ ಕರೆಯುತ್ತೇನೆ. ಆದರೂ ಕೂಡ ನೀವು ಬಾರದಿದ್ದರೆ ಆತ್ಮಲಿಂಗವನ್ನು ಕೆಳಗೆ ಇಟ್ಟು ಬಿಡುತ್ತೇನೆ ಎಂದು ಹೇಳುತ್ತಾನೆ. ಬೇರೆ ದಾರಿ ಇಲ್ಲದ ರಾವಣನಿಗೆ ಈ ನಿಬಂಧನೆಯನ್ನು ಒಪ್ಪುತ್ತಾನೆ.

ಮೂರು ಬಾರಿ ಕೂಗು

ಮೂರು ಬಾರಿ ಕೂಗು

ರಾವಣ ಸಂಧ್ಯಾವಂದನೆಗೆ ಹೋಗಿದ ಮರುಕ್ಷಣವೇ ರಾವಣನ ಹೆಸರು ಮೂರು ಬಾರಿ ಕರೆದು ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟುಬಿಡುತ್ತಾನೆ. ಇದರಿಂದ ಕೋಪಗೊಂಡ ರಾವಣಾಸುರನು ಬಾಲಕ (ವಿನಾಯಕ)ನ ತಲೆಯ ಮೇಲೆ ಹೊಡೆಯುತ್ತಾನೆ.

ಪ್ರಯತ್ನ

ಪ್ರಯತ್ನ

ರಾವಣನು ನೆಲದಮೇಲೆ ಇರುವ ಆತ್ಮಲಿಂಗವನ್ನು ತೆಗೆಯಲು ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿದರೂ ಕೂಡ ವ್ಯರ್ಥವಾಗುತ್ತದೆ. ಆತ್ಮಲಿಂಗವಿರುವ ಕ್ಷೇತ್ರವನ್ನು ಶೈವ ಪಂಚ ಕ್ಷೇತ್ರ ಎಂದೂ ಪ್ರಸಿದ್ಧಿಯನ್ನು ಪಡೆದಿದೆ.

ಮಯೂರ ವರ್ಮ

ಮಯೂರ ವರ್ಮ

ಕದಂಬ ಚಕ್ರವರ್ತಿ ಮಯೂರವರ್ಮನು ತನ್ನ ಆಳ್ವಿಕೆಯ ಸಮಯದಲ್ಲಿ ಈ ದೇವಾಲಯದಲ್ಲಿ ನಿತ್ಯ ಪೂಜೆಗಳನ್ನು ನೆರವೇರಿಸುವಂತೆ ಏರ್ಪಾಟು ಮಾಡುತ್ತಿದ್ದನಂತೆ ಹೇಳುತ್ತಾರೆ.

ವಿಜಯ ನಗರ ರಾಜರು

ವಿಜಯ ನಗರ ರಾಜರು

ಗೋಕರ್ಣಕ್ಷೇತ್ರವನ್ನು ವಿಜಯ ನಗರ ರಾಜರು ಅಭಿವೃದ್ಧಿ ಮಾಡಿದರು ಎನ್ನಲಾಗಿದೆ.

ಶಿವಾಜಿ

ಶಿವಾಜಿ

ಕ್ರಿ.ಶ 1665 ರಲ್ಲಿ ಛತ್ರಪತಿ ಶಿವಾಜಿ ಈ ಕ್ಷೇತ್ರವನ್ನು ದರ್ಶಿಸಿ ಪೂಜೆಯನ್ನು ಮಾಡಿದನಂತೆ. ಗೋಕರ್ಣದಲ್ಲಿ ಪ್ರಧಾನವಾದ ದೇವಾಲಯ ಮಹಾಬಲೀಶ್ವರ ದೇವಾಲಯ.

ಕೋಟಿ ತೀರ್ಥ

ಕೋಟಿ ತೀರ್ಥ

ಸ್ವಾಮಿಯ ದರ್ಶನ ಮಾಡುವುದಕ್ಕಿಂತ ಮುಂಚೆ ಕೋಟಿ ತೀರ್ಥದಲ್ಲಿ ಸ್ನಾನ ಭಕ್ತರು ಮಾಡುತ್ತಾರೆ. ಈ ಪವಿತ್ರವಾದ ಜಲದಲ್ಲಿ ಸ್ನಾನ ಮಾಡಿದರೆ ಸಮಸ್ತ ರೋಗಗಳು ಪರಿಹಾರವಾಗುತ್ತದೆ ಎಂದು ಪ್ರತೀತಿ ಇದೆ.

ಅರೇಬಿಯಾ ಸಮುದ್ರ

ಅರೇಬಿಯಾ ಸಮುದ್ರ

ದೇವಾಲಯದ ಸಮೀಪದಲ್ಲಿನ ಅರೇಬಿಯಾ ಸಮುದ್ರದಲ್ಲಿ ಸ್ನಾನ ಮಾಡಿದರೆ ಪೂರ್ವ ಜನ್ಮದ ಪಾಪವೆಲ್ಲಾ ಪರಿಹಾರವಾಗುತ್ತದೆ ಎಂಬುದು ಭಕ್ತರ ಧೃಡವಾದ ನಂಬಿಕೆ.

ವರಟೇಶ್ವರ ಲಿಂಗ

ವರಟೇಶ್ವರ ಲಿಂಗ

ದೇವಾಲಯ ಸಮೀಪದಲ್ಲಿ ಅಗಸ್ತ್ಯ ಮುನಿಗಳು ಸ್ಥಾಪಿಸಿರುವ ವರಟೇಶ್ವರ ಶಿವಲಿಂಗವಿದೆ. ಈ ದೇವಾಲಯವು 24 ಗಂಟೆ ತೆರದೇ ಇರುತ್ತದೆ. ಪುರಾತನವಾದ ಈ ದೇವಾಲಯವು ಹಲವಾರು ಭಕ್ತರನ್ನು ಹೊಂದಿದೆ.

12 ವರ್ಷಕ್ಕೆ ಒಮ್ಮೆ

12 ವರ್ಷಕ್ಕೆ ಒಮ್ಮೆ

ಈ ಪುಣ್ಯ ಕ್ಷೇತ್ರದಲ್ಲಿ 12 ವರ್ಷಕ್ಕೆ ಒಮ್ಮೆ ಒಂದು ವಿಷೇಶವಾದ ಕಾರ್ಯಕ್ರಮ ನಡೆಯುತ್ತದೆ. ಆಗ ನಿಜವಾದ ಆತ್ಮಲಿಂಗವನ್ನು ಹೊರಗೆ ತೆಗೆದು ಪೂಜೆಗಳನ್ನು ನೆರವೇರಿಸುತ್ತಾರೆ. ಆ ಸಮಯದಲ್ಲಿ ದೇಶ, ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಈ ಗೋಕರ್ಣ ಕ್ಷೇತ್ರಕ್ಕೆ ತಲುಪಬೇಕಾದರೆ ಬೆಂಗಳೂರು ನಗರದಿಂದ ಹಲವಾರು ಬಸ್, ರೈಲ್ವೆ ಸಮರ್ಪಕವಿದ್ದು, ಸುಲಭವಾಗಿ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X