Search
  • Follow NativePlanet
Share
» »ಚಿಕ್ಕ ಗೋವಾದಲ್ಲೊಂದು ದೊಡ್ಡ ದಿನ

ಚಿಕ್ಕ ಗೋವಾದಲ್ಲೊಂದು ದೊಡ್ಡ ದಿನ

By Vijay

ಭಾರತದ ಪಶ್ಚಿಮ ಕರಾವಳಿಯ ಅತ್ಯದ್ಭುತ ಮತ್ತು ಅತಿಯಾಗಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಗೋವಾ. 'ಕಾಸ್ಮೊಪಾಲಿಟನ್' ನಗರವಾಗಿರುವ ಗೋವಾ ತನ್ನಲ್ಲಿರುವ ಅದ್ಭುತ ಬೀಚ್ ಗಳು ಮತ್ತು ಸರಳವಾಗಿ ಹಾಗು ಅಷ್ಟೆ ಕಡಿಮೆ ದರದಲ್ಲಿ ದೊರಕುವಂಥ ಮದ್ಯದಿಂದ ಯುವಜನರಲ್ಲಿ ಮಾತ್ರವೆ ಅಲ್ಲದೆ ಹಿರಿಯರಲ್ಲೂ ಕೂಡ ಹೆಚ್ಚು ಜನಪ್ರಿಯವಾಗಿದೆ. ರಜೆಯ ಮೋಜಿನ ಪರಿಣಾಮಕಾರಿಯಾದ ಅನುಭವವನ್ನು ಪಡೆಯಲು ಗೋವಾ ಇಡಿ ಭಾರತದಲ್ಲೇ ನೆಚ್ಚಿನ ತಾಣವಾಗಿದ್ದು, ಬೇರಾವ ಕರಾವಳಿ ಪ್ರದೇಶವು ಇದರ ಮಟ್ಟಕ್ಕೆ ಬೆಳೆದಿಲ್ಲ ಎಂದರೆ ತಪ್ಪಾಗಲಾರದು.

ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ

ಆದರೆ ಗೋವಾ ನಮ್ಮಲ್ಲಿ ಬಹುತೇಕರು ತಿಳಿದ ಹಾಗೆ ಕೇವಲ ಬೀಚುಗಳು, ರಿಸಾರ್ಟುಗಳು, ಕ್ಲಬ್ಬುಗಳು, ಪಾರ್ಟಿಗಳು ಹೀಗೆ ಇವುಗಳಿಗೆ ಮಾತ್ರ ಸೀಮಿತವಾಗಿದೆಯೆ? ಖಂಡಿತ ಇಲ್ಲ. ಗೋವಾದ ಜೀವನ ಶೈಲಿಯೂ ಸಹ ಅಪಾರವಾದ ವಿಶಿಷ್ಟತೆಗಳಿಂದ ಕೂಡಿದೆ. ಹೊಲ ಗದ್ದೆಗಳು, ಹಿಂದೂ ದೇವಾಲಯಗಳು, ಕ್ರೈಸ್ತ ದೇವಾಲಯಗಳು, ಮಸೀದಿಗಳು, ಹಳ್ಳಿ ಜೀವನ, ನಗರದ ಜೀವನ ಮುಂತಾದವುಗಳು, ಗೋವಾ ಒಂದು ಸುಪ್ರಸಿದ್ಧ ಕಡಲ ತೀರಗಳ ಅತ್ಯಂತ ಜನಪ್ರೀಯ ಪಟ್ಟಣ ಎಂಬ ಖ್ಯಾತಿಯ ನಡುವೆಯೂ ಯಾವುದೆ ಅಹಂಕಾರವಿಲ್ಲದೆ ದಿನದೂಡುತ್ತವೆ.

ವಿಶೇಷ ಲೇಖನ : ಗೋವಾದ ಕೆಲ ಸುಂದರ ಕಡಲ ತೀರಗಳು

ಗೋವಾಗೆ ತೆರಳಲು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ರೈಲು ಮಾರ್ಗ, ರಸ್ತೆ ಮಾರ್ಗ ಹಾಗೂ ವಾಯು ಮಾರ್ಗಗಳು ಉತ್ತಮವಾಗಿದ್ದು ಭಾರತದ ಎಲ್ಲ ನಗರಗಳೊಂದಿಗೆ ಸಂಪರ್ಕ ಬೆಸೆಯುತ್ತದೆ. ಬೆಂಗಳೂರಿನಿಂದ ಗೋವಾ 560 ಕಿ.ಮೀ, ಬೆಳಗಾವಿಯಿಂದ 150 ಕಿ.ಮಿ ಹಾಗೂ ಕಾರವಾರದಿಂದ 87 ಕಿ.ಮೀ ಗಳಷ್ಟು ದೂರದಲ್ಲಿದೆ.

ವಿಶೇಷ ಲೇಖನ : ಗೋವಾದ ಅಗೋಚರ ಮುಖಗಳು

ಈ ಲೇಖನವು ಗೋವಾದ ಪ್ರತಿ ದಿನ ಜೀವನ ಶೈಲಿಯ ಒಂದು ಸೂಕ್ಷ್ಮ ನೋಟವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಪಡಿಸಲಾಗಿದೆ. ಗೋವಾದಲ್ಲಿರುವ ಹೋಟೆಲುಗಳು

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಸಾಹೆಬ್ರೆ...ಕೇವಲ ಕಡಲ ತೀರಗಳಲ್ಲ, ಹೊಲಗದ್ದೆಗಳೂ ಸಹ ನಮ್ಮ ಜೀವನದ ಅವಿಭಾಜ್ಯ ಅಂಗ.

ಚಿತ್ರಕೃಪೆ: Joel's Goa Pics

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಪಣಜಿ - ಪೊಂಡಾ ರಸ್ತೆಯಲ್ಲಿರುವ ಮಂಗೇಶಿ ಹಿಂದೂ ದೇವಾಲಯ. ಜಗತ್ತಿನ ಬಹುತೇಕ ಗೌಡ ಸಾರಸ್ವತ ಬ್ರಾಹ್ಮಣರ ಕುಲದೇವರಾದ ಮಂಗೇಶಿ ದೇವಾಲಯದ ಮಂಗರೀಶ ಮೂಲ ದೇವರು ಶಿವನ ಅವತಾರವಾಗಿದ್ದು, ಇದು ಗೋವಾದ ಮುಖ್ಯ ಸ್ಥಳಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Arun Prabhu

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ನಾವೂ ಕೂಡ ಪ್ರವಾಸಿಗರು...ನಮಗೂ ಕೂಡ ಸಮುದ್ರ ತೀರಗಳಲ್ಲಿ ವಿಶ್ರಮಿಸಬೇಕು!

ಚಿತ್ರಕೃಪೆ: Jean-Pierre Dalbéra

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಪತ್ರೋಳೆ ಎಲೆಗಳಲ್ಲಿ ಬಡಿಸಲಾಗುವ ಸಾಂಪ್ರದಾಯಿಕ ಗೋವಾದ ಊಟ.

ಚಿತ್ರಕೃಪೆ: Joel's Goa Pics

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಜೀವ ನದಿ ಎಂದೆ ಹೇಳಬಹುದಾದ ಜುವಾರಿ ನದಿಯ ಪಾಕ್ಷಿಕ ನೋಟ. ಸ್ಥಳೀಯ ಕೈಗಾರಿಕೆಗಳಿಗೆ ಈ ನದಿಯು ಒಂದು ಮುಖ್ಯ ಸರಕು ಸಂಚಾರಿ ಮಾರ್ಗವಾಗಿದೆ.

ಚಿತ್ರಕೃಪೆ: Abhisek Sarda

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಮಳೆಗಾಲವೂ ಲೆಕ್ಕಕ್ಕಿಲ್ಲ ಮೆರವಣಿಗೆಯ ಸಂದರ್ಭದಲ್ಲಿ...

ಚಿತ್ರಕೃಪೆ: Joel's Goa Pics

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ನೇತ್ರಾವಳಿ, ಗೋವಾದಲ್ಲಿರುವ ಮೈನಾಪಿ ಜಲಪಾತವು ಟ್ರೆಕ್ ಪ್ರೀಯರ ನೆಚ್ಚಿನ ತಾಣ. ಈ ಸಂದರ್ಭದಲ್ಲಿ ಸ್ಥಳೀಯವಾಗಿ ಸಿಗುವ ಲಘು ಉಪಹಾರ. ಸಾಂಪ್ರದಾಯಿಕ ಹಾಗೂ ರುಚಿಕರ.

ಚಿತ್ರಕೃಪೆ: Joel's Goa Pics

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಸ್ಥಳೀಯವಾಗಿ ಸಾಂಪ್ರದಾಯಿಕ ವಸ್ತುಗಳು ದೊರೆಯುವ ಗೋವಾದ ಎಂಎಂಸಿ ಮಾರುಕಟ್ಟೆ ಪ್ರಾಂಗಣ.

ಚಿತ್ರಕೃಪೆ: Greg Younger

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಅತ್ಯಂತ ಪುರಾತನ ಹಿಂದೂ ದೇವಾಲಯವಿದು. ಶಿವನಿಗೆ ಮುಡಿಪಾದ ಈ ದೇವಾಲಯದ ಹೆಸರು ತಂಬ್ಡಿ ಸುರ್ಲಾ ಮಹಾದೇವ ಮಂದಿರ. ಹೇಮಾದ್ರಿ ಶೈಲಿಯ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವು ಯಾದವ ದೊರೆ ರಾಮಚಂದ್ರನಿಂದ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ.

ಚಿತ್ರಕೃಪೆ: Ramnath Bhat

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ನದಿಯ ಮೇಲೆ ಚಲಿಸುತ್ತ ಸಾಗರ ನೋಡ ಹೊರಟೆ....ಕೊಂಕಣ ರೈ;ಇನಲ್ಲಿ ಗೋವಾಗೆ ತೆರಳುವಾಗ

ಚಿತ್ರಕೃಪೆ: abcdz2000

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ನಿತ್ಯ ಕಾಯಕದಂತೆ ಬೀದಿಗಳಲ್ಲಿ ಬಾಳೆ ಹಣ್ಣುಗಳನ್ನು ಮಾರುತ್ತಿರುವ ಗೋವಾ ಮಹಿಳೆ.

ಚಿತ್ರಕೃಪೆ: Ian D. Keating

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಹಳೆ ಗೋವಾ ಪ್ರದೇಶದಲ್ಲಿರುವ ಸೀ ಕ್ಯಾಥೇಡ್ರಲ್ ಕ್ರೈಸ್ತ ದೇವಾಲಯದ ಅದ್ಭುತವಾದ ಒಳಾಂಗಣ.

ಚಿತ್ರಕೃಪೆ: Adam Jones

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಸ್ಥಳೀಯ ಗೋವಾ ವ್ಯಾಪಾರಿ ಮಹಿಳೆಯರು ಸೂರ್ಯ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಇವರ ಜೀವನವು ಮುಖ್ಯವಾಗಿ ಗೋವಾಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಸಾಂಪ್ರದಾಯಿಕವಾಗಿ ಈ ಮಹಿಳೆಯರು ಸೂರ್ಯನನ್ನು ಕುರಿತು ವಾತಾವರಣದಲ್ಲಿ ಹೆಚ್ಚು ತಾಪಮಾನ ಏರಿಸದಿರು ಎಂದು ಪ್ರಾರ್ಥಿಸುತ್ತಾರೆ.

ಚಿತ್ರಕೃಪೆ: Sean Ellis

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಫೆನಿ ಅಥವಾ ನೀರೊ ಗೋವಾದ ಜನಪ್ರೀಯ ಪಾನೀಯ. ಇದನ್ನು ಗೋಡಂಬಿ ಹಣ್ಣುಗಳನ್ನು ಜಜ್ಜಿ ಅದನ್ನು ರಾಶಿ ಹಾಕಿ ಅದರ ಮೇಲೆ ತೂಕದ ಕಲ್ಲನ್ನು ಇಟ್ಟು ಹೊರತೆಗೆಯುತ್ತಾರೆ. ಆ ಒಂದು ಕಾರ್ಯದಲ್ಲಿ ನಿರತವಾಗಿರುವ ಮಹಿಳೆ.

ಚಿತ್ರಕೃಪೆ: abcdz2000

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾ ಕಾರ್ನಿವಾಲ್ ಉತ್ಸವದ ಸಂದರ್ಭದಲ್ಲಿ...

ಚಿತ್ರಕೃಪೆ: Joel's Goa Pics

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ಸ್ಥಳೀಯ ನಗರ ಪ್ರದೇಶ ರಾತ್ರಿಯ ಸಂದರ್ಭದಲ್ಲಿ.

ಚಿತ್ರಕೃಪೆ: cprogrammer

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾ ರಾಜಧಾನಿ ಪಣಜಿ ನಗರ ವಾಣಿಜ್ಯ ಪ್ರದೇಶ.

ಚಿತ್ರಕೃಪೆ: Nikkul

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ಏಕತೆಯನ್ನು ಪ್ರತಿನಿಧಿಸುವ ಗೋವಾ ಸ್ಮಾರಕ ಪ್ರತಿಮೆ.

ಚಿತ್ರಕೃಪೆ: Nikhil Kulkarni

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಪಣಜಿಯಿಂದ 33 ಕಿ.ಮೀ ದೂರದಲ್ಲಿರುವ ಪೊಂಡಾ ತಾಲೂಕಿನ ಕವಲೇಮ್ ಹಳ್ಳಿಯಲ್ಲಿರುವ ಶಾಂತಾದುರ್ಗಾ ದೇವಸ್ಥಾನ.

ಚಿತ್ರಕೃಪೆ: Nkodikal

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಚಪೋರಾ ಬಳಿಯಿರುವ ಪುರಾತನವಾದ ಪೊರ್ಚುಗೀಸ್ ಕಾಲದ ವಿಲ್ಲಾ ಅಥವಾ ಬಂಗಲೆ.

ಚಿತ್ರಕೃಪೆ: Dominik Hundhammer

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಪಣಜಿಯಲ್ಲಿ ಸೈಕಲ್ ಮೇಲೆ ಸಾಗುತ್ತ ವ್ಯಾಪಾರ ಮಾಡುವ ಪಾನಿ ಪುರಿ, ಮಸಾಲೆ ಪುರಿ ವ್ಯಾಪಾರಿಗಳು.

ಚಿತ್ರಕೃಪೆ: psubhashish

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಕೆಲ ಹೋಟೆಲುಗಳಲ್ಲಿ, ರಿಸಾರ್ಟುಗಳಲ್ಲಿ ಪ್ರದರ್ಶನ ನೀಡುವ ಸ್ಥಳೀಯ ಲೈವ್ ಬ್ಯಾಂಡ್.

ಚಿತ್ರಕೃಪೆ: psubhashish

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಸಾಂಪ್ರದಾಯಿಕ ನೃತ್ಯ.

ಚಿತ್ರಕೃಪೆ: Eustaquio Santimano

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಮ್ಹಾರ್ದೋಲ್ ನಲ್ಲಿರುವ ಮಹಾಲಾಸಾ ದೇವಿ ದೇವಾಲಯದ ಪಲ್ಲಕ್ಕಿ ಉತ್ಸವ.

ಚಿತ್ರಕೃಪೆ: Kaveri

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಅಲ್ಡೋನಾದಲ್ಲಿರುವ ಶ್ರೀ ಭಗವತಿ ಸಕ್ಲೇಶ್ವರ ದೇವಸ್ಥಾನ.

ಚಿತ್ರಕೃಪೆ: Kshama.nar

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಉತ್ತರ ಗೋವಾದ ಮರ್ದೋಲ್ ಪ್ರದೇಶದಲ್ಲಿ ಸ್ಥಿತವಿರುವ ಬಾಲಾಜಿ ದೇವಸ್ಥಾನ. ಇದು ಬೆಳಿಗ್ಗೆ 8 ರಿಂದ ರಾತ್ರಿ 8 ಘಂಟೆಯವರೆಗೂ ತೆರೆದಿರುತ್ತದೆ.

ಚಿತ್ರಕೃಪೆ: Aruna

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ಕಂಗೋಲಿಸುವ ಹಸಿರುಮಯ ಭತ್ತದ ಗದ್ದೆಗಳು.

ಚಿತ್ರಕೃಪೆ: Nikkul

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾದ ಕವಳೆ ಪ್ರದೇಶದಲ್ಲಿರುವ ಗೌಡಪಾದಾಚಾರ್ಯ ಮಠದಲ್ಲಿರುವ ಭವಾನಿ ಶಂಕರ ಪ್ರತಿಮೆ.

ಗೋವಾದಲ್ಲೊಂದು ದಿನ:

ಗೋವಾದಲ್ಲೊಂದು ದಿನ:

ಗೋವಾ ರಾಜ್ಯದ ಪೊಂಡಾ ತಾಲೂಕಿನ ಮಾರ್ಸೆಲ್ ಎಂಬ ಪ್ರದೇಶದಿಂದ ಐದು ಕಿ.ಮೀ ದೂರದಲ್ಲಿರುವ ಬೆಟಕಿ ಎಂಬಲ್ಲಿರುವ ಶ್ರೀ ಮಂಡೋದರಿ ದೇವಿಯ ದೇವಸ್ಥಾನ.

ಚಿತ್ರಕೃಪೆ: Bartsson

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X