Search
  • Follow NativePlanet
Share
» »ಗಂಗಾ ದೇವಿಗೊಂದು ನಮನ

ಗಂಗಾ ದೇವಿಗೊಂದು ನಮನ

ಬೆಂಗಳೂರಿನಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಗಂಗಮ್ಮಾ ದೇವಿ ದೇವಾಲಯವೂ ಒಂದು. ಗಂಗಾದೇವಿಯನ್ನು ಆರಾಧಿಸಲ್ಪಡುವ ಈ ದೇವಾಲಯ ವಿಶೇಷ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ.

By Divya

ಬೆಂಗಳೂರಿನಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಗಂಗಮ್ಮಾ ದೇವಿ ದೇವಾಲಯವೂ ಒಂದು. ಗಂಗಾದೇವಿಯನ್ನು ಆರಾಧಿಸಲ್ಪಡುವ ಈ ದೇವಾಲಯ ವಿಶೇಷ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ಭಕ್ತರನ್ನು ಸದಾ ಕಾಪಾಡುವ ಈ ದೇವಿಗೆ ವರ್ಷಕ್ಕೊಮ್ಮೆ ಜಾತ್ರೆ ಮಾಡಲಾಗುತ್ತದೆ. ಜೊತೆಗೆ ಅನೇಕ ಹೋಮ ಹವನಗಳನ್ನು ನಡೆಸಿಕೊಡಲಾಗುತ್ತದೆ. ಈ ದೇವಾಲಯವನ್ನು ಧರ್ಮನಿಷ್ಠೆ ಹಾಗೂ ಶುದ್ಧತೆಗೆ ಪ್ರತೀಕ ಎಂದು ಹೇಳುತ್ತಾರೆ.

ಗಂಗಾ ದೇವಿಗೊಂದು ನಮನ

ವಿಶೇಷ ಆರಾಧನೆ
ಭಕ್ತರು ದೇವಸ್ಥಾನದ ನಿರ್ವಹಣಾಧಿಕಾರಿಗಳ ಪರವಾನಗಿ ಪಡೆದು, ದುರ್ಗಾ ಹೋಮ, ಚಂಡಿ ಪಾರಾಯಣ, ಕ್ಷೀರಾಭಿಷೇಕ ಹಾಗೂ ಗಂಗಮ್ಮಾ ದೇವಿಗೆ ಪಂಚಾಂಮೃತ ಅಭಿಷೇಕಗಳನ್ನು ಮಾಡಿಸಬಹುದು. ಈ ದೇವಾಲಯದಲ್ಲಿ ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಧನ್ವಂತರಿ ಹೋಮ, ಆಯುಷ್ಯ ಶಾಂತಿ ಹೋಮವನ್ನು ಬಹಳ ವಿಶೇಷವಾಗಿ ಮಾಡುತ್ತಾರೆ.

ಗಂಗಾ ದೇವಿಗೊಂದು ನಮನ

PC: en.wikipedia.org

ದೇಗುಲದ ವಿವರ
ಪ್ರತಿದಿನ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಸಂಜೆ 5 ರಿಂದ 8.45ರವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
ಮಲ್ಲೇಶ್ವರಂನ 15ನೇ ಅಡ್ಡರಸ್ತೆಯಲ್ಲಿ ಇರುವ ಈ ದೇಗುಲಕ್ಕೆ ಮೆಜೆಸ್ಟಿಕ್‍ನಿಂದ ಅನೇಕ ಬಸ್‍ಗಳ ವ್ಯವಸ್ಥೆಯಿದೆ.

ಹತ್ತಿರದ ಆಕರ್ಷಣೆ
ದೇಗುಲದ ಹತ್ತಿರ ಸ್ಯಾಂಕಿ ಕೆರೆ, ಕಾಡು ಮಲ್ಲೇಶ್ವರ ದೇಗುಲ, ಚೌಡಯ್ಯಾ ಮೆಮೊರಿಯಲ್ ಹಾಲ್, ಸಾಯಿ ಬಾಬಾ ದೇಗುಲ, ಮಾರಮ್ಮಾ ದೇಗುಲ ಹಾಗೂ ಗಂಗಮ್ಮಾ ದೇಗುಲವಿದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X