Search
  • Follow NativePlanet
Share
» »ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

By Vijay

ಗುರುಗಳಿಗೆ ಗುರುವಾದ ಶ್ರೀ ದತ್ತಾತ್ರೇಯರು ನೆಲೆಸಿರುವ ಪ್ರಭಾವಿ ಕ್ಷೇತ್ರವೆ ಗಾಣಗಾಪುರ. ಹಾಗಾಗಿ ಗಾಣಗಾಪುರವನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ದತ್ತಾತ್ರೇಯರನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಅವತಾರವೆಂದೆ ಹೇಳಲಾಗುತ್ತದೆ.

ವಿಠ್ಠಲ ನೆಲೆಸಿರುವ ಶ್ರೀಕ್ಷೇತ್ರ ಪಂಢರಪುರ ದರ್ಶನ

ಹಿಂದೊಮ್ಮೆ ಅತ್ರಿ ಮಹರ್ಷಿಗಳು ಘೋರವಾದ ತಪಸ್ಸನ್ನಾಚರಿಸಿ ಶಿವನನ್ನು ಮೆಚ್ಚಿಸಿ ಶಿವನೆ ತನಗೆ ಮಗನಾಗಿ ಹುಟ್ಟಿ ಬರಬೇಕೆಂದು ಪ್ರಾರ್ಥಿಸಿದ್ದರು. ಅದಕ್ಕೆ ಶಿವನು ಸಮ್ಮತಿಸಿದ್ದನು. ಹಾಗಾಗಿ ದತ್ತಾತ್ರೇಯನ ರೂಪದಲ್ಲಿ ಅತ್ರಿ ಮಹರ್ಷಿಗೆ ಮಗನಾಗಿ ಮೂರು ಮುಖಗಳುಳ್ಳ ದತ್ತಾತ್ರೇಯರು ಜನಸಿದರು. ಒಂದು ಶಿವನ ಅವತಾರವಾದರೆ ಇನ್ನೆರಡು ಮುಖಗಳು ವಿಷ್ಣು ಹಾಗೂ ಬ್ರಹ್ಮನ ಅವತಾರಗಳೆನ್ನಲಾಗಿದೆ.

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ನಿರ್ಗುಣ ಮಠ, ಚಿತ್ರಕೃಪೆ: Satish-ansingkar

ಇನ್ನೂ ಕೆಲವರು ನಾಥ ಸಂಪ್ರದಾಯದ ಆದಿ ಗುರು ಅಂದರೆ ಮೊದಲ ಗುರುವಾಗಿ ದತ್ತಾತ್ರೇಯರನ್ನು ಆರಾಧಿಸುತ್ತಾರೆ. ಹಾಗಾಗಿ ಗುರುಗಳಿಗೆ ಗುರುವಾಗಿಯೂ, ಯೋಗದ ಗುರುವಾಗಿಯೂ ಗುರು ದತ್ತಾತ್ರೇಯರನ್ನು ಆರಾಧಿಸಲಾಗುತ್ತದೆ. ಇನ್ನೂ ಈ ದತ್ತಾತ್ರೇಯರ ಮರು ಅವತಾರವೆನ್ನಲಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಯವರು ನೆಲೆಸಿರುವ ಕ್ಷೇತ್ರವೆ ಶ್ರೀಕ್ಷೇತ್ರ ಗಾಣಗಾಪುರ.

ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಶ್ರೀ ಗುರು ಚರಿತ್ರ ಗ್ರಂಥದಲ್ಲಿ ನರಸಿಂಹ ಸರಸ್ವತಿ ಸ್ವಾಮಿಯವರು ಗುರು ದತ್ತ ಕ್ಷೇತ್ರದ ಮಹಿಮೆ ಕುರಿತು ಹಾಗೂ ತಾವು ಸದಾ ಈ ಕ್ಷೇತ್ರದಲ್ಲೆ ಜಾಗೃತವಾಗಿ ನೆಲೆಸಿರುವುದರ ಕುರಿತು ಉಲ್ಲೇಖಿಸಿದ್ದಾರೆ. ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದ ಗಾಣಗಾಪುರಕ್ಕೆ ಇನ್ನೂ ಹೆಚ್ಚಿನ ವಿಶೇಷವಿದೆ.

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ನರಸಿಂಹ ಸರಸ್ವತಿ ಸ್ವಾಮಿ, ಚಿತ್ರಕೃಪೆ: Palaviprabhu

ಇಲ್ಲಿರುವ ಮುಖ್ಯ ದೇವಾಲಯವೆ ದತ್ತಾತ್ರೇಯರ ಅವತಾರವಾದ ನರಸಿಂಹ ಸರಸ್ವತಿಯವರಿಗೆ ಮುಡಿಪಾದ ನಿರ್ಗುಣ ಮಠ ಅಥವಾ ದೇವಾಲಯ. ಇಲ್ಲಿಗೆ ಬರುವ ಭಕ್ತರು ವಿಶೇಷವಾಗಿ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುತ್ತಾರೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ.

ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ.

ದತ್ತಾತ್ರೇಯ ನೆಲೆಸಿರುವ ಶ್ರೀಕ್ಷೇತ್ರ ಗಾಣಗಾಪುರ

ಭೀಮಾ-ಅಮರ್ಜಾ ಸಂಗಮ ಸ್ಥಳ, ಚಿತ್ರಕೃಪೆ: Satish-ansingkar

ಈ ರೀತಿ ಮಾಡುವುದರಿಂದ ದತ್ತಾತ್ರೇಯರ ಕೃಪೆ ಉಂಟಾಗಿ ಭಕ್ತರ ಎಲ್ಲ ಬಯಕೆಗಳು ನಿಖರವಾಗಿ ಈಡೇರುತ್ತವೆಂದು ಅಚಲವಾಗಿ ನಂಬಲಾಗುತ್ತದೆ. ಗುರು ಪೂರ್ಣಿಮೆ, ದತ್ತ ಜಯಂತಿ ಹಾಗೂ ಇತರೆ ಉತ್ಸವಗಳನ್ನು ಇಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ. ಗಾಣಗಾಪುರ ಒಂದು ಹಳ್ಳಿಯಾಗಿದ್ದು ಉತ್ತರ ಕರ್ನಾಕ ಭಾಗದ ಕಲಬುರಗಿ (ಹಿಂದಿನ ಗುಲಬರ್ಗಾ) ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿದೆ.

ಸೋಲಾಪುರ ಪಟ್ಟಣ ಹಾಗೂ ಪ್ರಭಾವಿ ಸ್ಥಳಗಳು

ಕಲಬುರಗಿ ನಗರ ಕೇಂದ್ರದಿಂದ 40 ಕಿ.ಮೀ ಗಳಷ್ಟು ದೂರವಿರುವ ಗಾಣಗಾಪುರಕ್ಕೆ ತೆರಳಲು ಕಲಬುರಗಿಯಿಂದ ಸಾಕಷ್ಟು ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಗಾಣಗಾಪುರ ರಸ್ತೆ ರೈಲು ನಿಲ್ದಾಣವಿದ್ದು ಕಲಬುರಗಿ-ಮುಂಬೈ ರೈಲು ಮಾರ್ಗದಲ್ಲಿ ಬರುತ್ತದೆ. ಇಲ್ಲಿಂದ 22 ಕಿ.ಮೀ ದೂರದಲ್ಲಿ ಗಾಣಗಾಪುರವಿದೆ. ಗಾಣಗಾಪುರದಲ್ಲಿ ತಂಗಲು ಲಾಡ್ಜುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X