Search
  • Follow NativePlanet
Share
» »ಮೋಡಿ ಮಾಡುವ ಕೊಡಗಿನ ಗಾಳಿಬೀಡು ಟ್ರೆಕ್!

ಮೋಡಿ ಮಾಡುವ ಕೊಡಗಿನ ಗಾಳಿಬೀಡು ಟ್ರೆಕ್!

ಕರ್ನಾಟಕದ ಮಡಿಕೇರಿ ಪಟ್ಟಣದಿಂದ ಹತ್ತು ಕಿ.ಮೀ ದೂರದಲ್ಲಿರುವ ಗಾಳಿಬೀಡು ಶಿಖರಕ್ಕೆ ಚಾರಣವು ಯೋಗ್ಯಮಯವಾಗಿದ್ದು ಸಾಕಷ್ಟು ಗಮನಸೆಳೆಯುತ್ತದೆ

By Vijay

ವಾರಾಂತ್ಯ ಅಥವಾ ದೀರ್ಘ ರಜೆಗಳು ಬಂತೆಂದರೆ ಸಾಕು, ಮಹಾನಗರಗಳ ಸಾಕಷ್ಟು ಉತ್ಸಾಹಿ ಯುವ ಪೀಳಿಗೆಯವರು ಏನಾದರೊಂದು ಸಾಹಸಮಯ ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಕೆಲವರಿ ಬೆಳ್ಳಂಬೆಳಿಗ್ಗೆ ಮೋಟಾರು ಬೈಕು ಹಿಡಿದುಕೊಂಡು ದೀರ್ಘ ಪ್ರಯಾಣ ಮಾಡುವ ಹಂಬಲವಿದ್ದರೆ,

ಅದೆಷ್ಟೊ ಜನರಿಗೆ ಸೈಕ್ಲಿಂಗ್ ಮಾಡುವ ಹವ್ಯಾಸವಿರುತ್ತದೆ. ಇನ್ನೂ ಕೆಲವರಿಗೆ ಸಾಹಸಮಯ ಆಟಗಳಿರುವ ಮನರಂಜನಾ ಉದ್ಯಾನಗಳಿಗೆ ಭೇಟಿ ನೀಡುವ ತವಕವಿದ್ದರೆ, ಇನ್ನಷ್ಟು ಜನರಿಗೆ ವಿಕೆಂಡ್ ನಲ್ಲಿ ಟ್ರೆಕ್ ಮಾಡುವ ಆಸೆಯಿರುತ್ತದೆ. ನೀವೂ ಸಹ ಟ್ರೆಕ್ ಪ್ರಿಯರಾಗಿದ್ದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಟ್ರೆಕ್ ಅನ್ನು ಒಮ್ಮೆ ಮಾಡಿ ನೋಡಿ.

ಗಟ್ಟಿಗನಿಗೂ ನೀರಿಳಿಸುವ ಬಂಡಾಜೆ ಟ್ರೆಕ್!

ಬೆಂಗಳೂರು, ಮೈಸೂರುಗಳಿಗೆ ತುಸು ಹತ್ತಿರವೆ ಇರುವ, ದಟ್ಟಾರಣಗಳಲ್ಲಿ ಅವಿತು ಕುಳಿತಿರುವ ಅದ್ಭುತ ಬೆಟ್ಟ ಪ್ರದೇಶ ಇದಾಗಿದೆ. ವಾರಾಂತ್ಯದ ರಜೆಯಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದಂತಿದೆ. ಸಾಕಷ್ಟು ಜನರಿಗೆ ಈ ಟ್ರೆಕ್ ಕುರಿತು ಅಷ್ಟೊಂದಾಗಿ ತಿಳಿದಿಲ್ಲ. ಹಾಗಾಗಿ ಇಲ್ಲಿ ಟ್ರೆಕ್ ಮಾಡುವವರ ಸಂಖ್ಯೆಯೂ ವಿರಳವೆ.

ಆದರೆ ಈ ಟ್ರೆಕ್ ಎಂದಿಗೂ ಮರೆಯದ ಸುಂದರ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ. ಪಶ್ಚಿಮ ಘಟ್ಟಗಳ ಅನ್ವೇಷಿಸಬಹುದಾದ ಸಾಕಷ್ಟು ಶ್ರೀಮಂತಿಕೆಯನ್ನು ಇದು ನಿಮ್ಮ ಕಣ್ಣುಗಳ ಮುಂದೆ ತೆರೆದಿಡುತ್ತದೆ. ಇದೆ ಗಾಳಿಬೀಡು ಟ್ರೆಕ್. ಕೊಡಗಿನಲ್ಲಿ ಆಸ್ವಾದಿಸಬಹುದಾದ ಒಂದು ರೋಮಾಂಚಕಮಯ ಟ್ರೆಕ್.

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಕೃಪೆ : Brunda Nagaraj

ಮಡಿಕೇರಿ

ಮಡಿಕೇರಿ

ನೀವು ಈ ಬಾರಿ ಬೆಂಗಳೂರಿಗೆ ಹತ್ತಿರದಲ್ಲೆ ಒಂದೊ, ಎರಡೊ ದಿನಗಳನ್ನು ಅದೂ ಸಹ ದಟ್ಟವಾದ ಬೆಟ್ಟ ಗುಡ್ಡಗಳ ಮಧ್ಯೆ ವ್ಯಯಿಸಿ, ಹುರುಪು-ಉತ್ಸಾಹಗಳನ್ನು ಇಮ್ಮಡಿ ಮಾಡಿಕೊಂಡು ಮತ್ತೆ ಸೋಮವಾರದ ಯುದ್ಧಕ್ಕೆ ಸಿದ್ಧರಾಗಲು ಬಯಸಿದ್ದರೆ ಈ ಟ್ರೆಕ್ ಒಂದು ಅದ್ಭುತ ಅವಕಾಶ ನೀಡಬಲ್ಲುದು.

ಮೊನಚಾದ ತಿರುವುಗಳು

ಮೊನಚಾದ ತಿರುವುಗಳು

ಈ ಟ್ರೆಕ್ ಅಥವಾ ಚಾರಣ ಮಾರ್ಗವು ಉಬ್ಬು-ತೆಗ್ಗುಗಳು, ಮೊನಚಾದ ತಿರುವುಗಳು, ಗಿಡ-ಗಂಟಿಗಳ ಮಧ್ಯೆ ಹಾದು ಹೋಗುವುದರಿಂದ ಸಾಕಷ್ಟು ಜಾಗೃತೆಯನ್ನು ವಹಿಸಬೇಕು. ಅಲ್ಲದೆ ಕಾಫಿ ತೋಟಗಳ ಕಂಪಾದ ವಾಸನೆಯು ನಿಮ್ಮನ್ನು ಒಂದು ಮತ್ತಿನ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ.

ಚಿಲಿ-ಪಿಲಿ ಕಲರವ

ಚಿಲಿ-ಪಿಲಿ ಕಲರವ

ಜುಳು ಜುಳು ಎಂದು ಹರಿಯುವ ಚಿಕ್ಕ ಪುಟ್ಟ ನೀರಿನ ತೊರೆಗಳು, ಅಲ್ಲಲ್ಲಿ ಬೀಡು ಬಿಟ್ಟ ಚಿಕ್ಕ ಪುಟ್ಟ ಕೊಳಗಳು, ಒಂದೆ ಸಮ್ಮನೆ ಕಿವಿಯನ್ನು ಗೋಳು ಹೊಯ್ದುಕೊಳ್ಳುವ ವಿವಿಧ ಕೀಟಗಳ ಶಬ್ದಗಳು ಯಾವುದೊ ಲೋಕಕ್ಕೆ ಕರೆದೊಯ್ಯುತ್ತದೆ.

ಸಾಕಾಯಿತೆ?

ಸಾಕಾಯಿತೆ?

ದಿನನಿತ್ಯ ಗದ್ದಲದ ಜೀವನ, ಟ್ರಾಫಿಕ್ ಕಿರಿಕಿರಿಯಿಂದ ಬಳಲಿ ಬೆಂಡಾದವರಿಗಂತೂ ಮರಭೂಮಿಯಲ್ಲಿ ಹಟಾತ್ತಾಗಿ ನೀರಿನ ಮೂಲವೊಂದು ಕಂಡುಬಂದ ಹಾಗೆಯೆ ಆನಂದ ನೀಡುತ್ತದೆ. ಈ ಸಮಯವು ಇಲ್ಲಿಗೆ ಹೀಗೆ ನಿಂತು ಹೋಗಲಿ ಎಂದು ನಿಮಗನಿಸಿದರೂ ತಪ್ಪಿಲ್ಲ.

ಅದ್ಭುತ ಸೌಂದರ್ಯ

ಅದ್ಭುತ ಸೌಂದರ್ಯ

ಮೇಲಾಗಿ ಕೊಡಗು ನಾಡಿನ ಮೋಡಿ ಮಾಡುವ ಅಗಾಧ ಪ್ರಾಕೃತಿಕ ಶ್ರೀಮಂತಿಕೆ ನಿಮ್ಮಲ್ಲೆ ನೀವು ಕಳೆದುಹೋಗುವಂತೆ ಮಾಡುತ್ತದೆ. ಆ ಎತ್ತರೆತ್ತರದ ಗಿಡ-ಮರಗಳು, ಗಿಡ-ಬಳ್ಳಿಗಳು ಅದರೊಳ ಬಿಟ್ಟ ಬಣ್ಣ ಬಣ್ಣದ ಹೂವುಗಳು, ಅವುಗಳನರಸಿ ಅಲೆಮಾರಿಗಳಾಗಿ ಅತ್ತಿಂದಿತ್ತ ಹಾರಾಡುವ ದುಂಬಿಗಳು, ಚಿಟ್ಟೆಗಳು ಮನದಲ್ಲಿ ನವರಂಗ ಚಿತ್ತಾರಗಳನ್ನೆ ಬಿಡಿಸುತ್ತವೆ.

ಯೋಗ್ಯಸ್ಥಳ

ಯೋಗ್ಯಸ್ಥಳ

ಗಾಳಿಬೀಡು ಕೊಡಗಿನಲ್ಲಿ ಕಂಡುಬರುವ ಹಲವು ಶಿಖರಗಳ ಪೈಕಿ ಒಂದಾಗಿದ್ದು ಟ್ರೆಕ್ಕಿಂಗ್ ಮಾಡಲು ಬಲು ಯೋಗ್ಯವಾದ ಸ್ಥಳವಾಗಿದೆ. ಆದರೆ ಈ ಟ್ರೆಕ್ಕಿಂಗ್ ಅಷ್ಟೆ ಸರಳ ಎಂದು ಭಾವಿಸಬೇಡಿ. ನೀವು ಇಲ್ಲಿ ಪದೆ ಪದೆ ಬಂದಿದ್ದರೂ ಚಾರಣ ಮಾರ್ಗವು ಗೊಂದಲಮಯವಾಗಿಯೆ ಕಾಣಬಹುದು.

ಕಡೆಗಣಿಸದಿರಿ

ಕಡೆಗಣಿಸದಿರಿ

ಆ ಕಾರಣವಾಗಿ ನೀವು ಮೊದಲ ಬಾರಿ ಈ ಟ್ರೆಕ್ಕಿಂಗ್ ಮಾಡುತ್ತಿದ್ದರೆ ಸ್ಥಳೀಯವಾಗಿ ಸುಲಭವಾಗಿ ದೊರಕುವ ಮಾರ್ಗದರ್ಶಿಗಳನ್ನು ಕರೆದುಕೊಂಡು ಹೋಗುವುದು ಉತ್ತಮ ಹಾಗೂ ಒಂದು ರೀತಿಯಲ್ಲಿ ಅವಶ್ಯಕವೆಂದೆ ಹೇಳಬಹುದು. ಇಲ್ಲವಾದಲ್ಲಿ ಈ ಪ್ರದೇಶವು ಸಾಕಷ್ಟು ವಿಶಾಲಮಯವಾಗಿದ್ದು ನೀವು ದಾರಿ ತಪ್ಪಬಹುದಾದ ಸಂಭವನೀಯತೆ ತುಸು ಹೆಚ್ಚೆ ಆಗಿದೆ.

ಆನಂದಿಸಿ

ಆನಂದಿಸಿ

ಪ್ರಸ್ತುತ ಈ ಶಿಖರವನ್ನೇರಿ ಸ್ವಲ್ಪ ಹೊತ್ತು ಅದರ ಮೇಲೆ ಕಳೆದು, ಸುತ್ತಮುತ್ತಲಿನ ಅದ್ಭುತ ದೃಶ್ಯಾವಳಿಗಳನ್ನು ಸವಿದು ಮತ್ತೆ ಕೆಳಗೆ ಹಿಂತಿರುಗಿ ಬರುವ ಚಟುವಟಿಕೆಯು ಸಾಕಷ್ಟು ಜನಪ್ರೀಯತೆಗಳಿಸಿದ್ದು ವಾರಾಂತ್ಯದ ಸಂದರ್ಭದಲ್ಲಿ ಕೊಡಗಿನ ಸುತ್ತಮುತ್ತಲಿನ ಅನೇಕ ನಗರಗಳಿಂದ ಉತ್ಸಾಹಿ ಯುವ ಪಡೆಯು ಇಲ್ಲಿಗೆ ಭೇಟಿ ಣೀಡುತ್ತಾರೆ.

ಬೆಂಗಳೂರು-ಮೈಸೂರು

ಬೆಂಗಳೂರು-ಮೈಸೂರು

ಅದರಲ್ಲೂ ವಿಶೇಷವಾಗಿ ಬೆಂಗಳೂರು ಹಾಗೂ ಮೈಸೂರುಗಳಂತಹ ನಗರಗಳಿಂದ ಈ ಟ್ರೆಕ್ಕಿಂಗ್ ಮಾಡಲು ತಂಡಗಳು ಇಲ್ಲಿಗೆ ಭೇಟಿ ನೀಡುವುದು ಈಗೀಗ ಸ್ವಲ್ಪ ಮಾಮೂಲಿಯೆ ಆಗಿದೆ. ಆದಾಗ್ಯೂ ಈ ಚಾರಣವನ್ನು ಪ್ರತಿಯೊಬ್ಬರು ತಮ್ಮದೆ ಗುಂಪಿನೊಡನೆ ಸೇರಿಕೊಂಡು ಮಾಡಿ ಆನಂದಮಯ ಕ್ಷಣಗಳನ್ನು ಕಳೆಯುತ್ತಾರೆ.

ಸಾಮಾನ್ಯ ವಿಷಯ

ಸಾಮಾನ್ಯ ವಿಷಯ

ಈಗೀಗ ಮಹಾನಗರಗಳಲ್ಲಿ ವಾರಾಂತ್ಯ ರಜೆಗಳಂದು ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ಹೊರ ಪ್ರವಾಸ ಹೋಗುವುದು ಬಲು ಸಾಮಾನ್ಯವಾದ ವಿಷಯವಾಗಿದ್ದು ಅದರಲ್ಲಿ ಟ್ರೆಕ್ಕಿಂಗ್ ಸಹ ಸೇರಿಕೊಂಡಿದೆ. ಆ ಕಾರಣ ಮಹಾನಗರಗಳ ಎಷ್ಟೊ ಪ್ರವಾಸಿ ಸಂಸ್ಥೆಗಳು ಗಾಳಿಬೀಡುವಿಗೆ ಟ್ರೆಕ್ಕಿಂಗ್ ಸೇವೆಯನ್ನು ಕಲ್ಪಿಸುತ್ತವೆ.

ಸಾಕಷ್ಟಿವೆ

ಸಾಕಷ್ಟಿವೆ

ಈ ಟ್ರೆಕ್ಕಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಮುಂಚಿತವಾಗಿಯೆ ಬಸ್ಸನ್ನು ಎಲ್ಲಿ ಹಿಡಿಯಬೇಕು ಹಾಗೂ ಎಲ್ಲಿ ಇಳಿಯಬೇಕು ಎಂಬುದರ ಕುರಿತು ಮಾಹಿತಿ ನೀಡಿರುತ್ತದೆ. ಅದರಂತೆ ಗುಪ್ಂಪುಗಳಲ್ಲಿ ಎಲ್ಲರೂ ಒಂದೆಡೆ ಸೇರಿ ಮಡಿಕೇರಿ ಪಟ್ಟಣಕ್ಕೆ ತಲುಪಿ ಅಲ್ಲಿಂದ ಟ್ರೆಕ್ ಹೊರಡಬಹುದು.

ನಿಶ್ಚಿಂತರಾಗಿ

ನಿಶ್ಚಿಂತರಾಗಿ

ಇಂತಹ ಟ್ರೆಕ್ಕಿಂಗ್ ಪ್ಯಾಕೆಜುಗಳು ತಂಗುವ, ಉಟೋಪಹಾರಗಳ ಹಾಗೂ ಮಾರ್ಗದರ್ಶಿ ಹೀಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತವೆ. ನೀಮಗೇನಾದರೂ ಎಲ್ಲವನ್ನು ಯೋಜಿಸಿ ಟ್ರೆಕ್ ಮಾಡಲು ಇಷ್ಟವಿಲ್ಲದಿದ್ದಲ್ಲಿ ಇಂತಹ ಸಂಸ್ಥೆಗಳಲ್ಲಿ ಮುಂಚಿತವಾಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಂಡು ಈ ಚಾರಣದಾನಂದ ಪಡೆಯಬಹುದು.

ಅಲ್ಲಿ ಮಾರ್ಗದರ್ಶಿ ಪಡೆಯಿರಿ

ಅಲ್ಲಿ ಮಾರ್ಗದರ್ಶಿ ಪಡೆಯಿರಿ

ಇಲ್ಲವಾದಲ್ಲಿ ನೀವು ನಿಮ್ಮ ಸ್ನೇಹಿತರೊಡಗೂಡಿ ನೀವಾಗಿಯೆ ಈ ಟ್ರೆಕ್ ಮಾಡಲು ಬಯಸಿದ್ದರೆ ಮೊದಲು ಮಡಿಕೇರಿಗೆ ತೆರಳಿ ಅಲ್ಲಿ ಸ್ಥಳೀಯವಾಗಿ ದೊರಕುವ ಮಾರ್ಗದರ್ಶಿಯನ್ನು ಪಡೆದು ನಿಮಗೆ ಬೆಕಾದ ತಿಂಡಿ ತಿನಿಸುಗಳನ್ನು ಮುಂಚಿತವಾಗಿಯೆ ತೆಗೆದುಕೊಂಡು ಈ ಸುಂದರ ಟ್ರೆಕ್ ಅನ್ನು ಮಾಡಬಹುದು.

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಮಡಿಕೇರಿಯು ಬೆಂಗಳೂರಿನಿಂದ 265 ಕಿ.ಮೀ ಹಾಗೂ ಮೈಸೂರಿನಿಂದ 92 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಈ ಎರಡೂ ನಗರಗಳಿಂದ ಮಡಿಕೇರಿ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಲಭ್ಯವಿದೆ.

ಬಸ್ಸು ನಿಲ್ದಾಣದಲ್ಲೆ

ಬಸ್ಸು ನಿಲ್ದಾಣದಲ್ಲೆ

ಒಂದೊಮ್ಮೆ ಮಡಿಕೇರಿ ತಲುಪಿದರೆ ಸಾಕು ಅಲ್ಲಿ ಲಘು ಉಪಹಾರಾದಿಗಳನ್ನು ಮುಗಿಸಿಕೊಂಡು ಬಸ್ಸು ನಿಲ್ದಾಣದಲ್ಲೆ ವಿಚಾರಿಸಿ ಮಾರ್ಗದರ್ಶಿಯನ್ನು ಗಾಳಿಬೀಡು ಟ್ರೆಕ್ಕಿಗೆ ಗೊತ್ತು ಮಾಡಬಹುದು. ಅಲ್ಲಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿ ಬಾಡಿಗೆ ರಿಕ್ಷಾದಲ್ಲಿ ತಲುಪಿ, ರಸ್ತೆಯೊಂದು ಧಿಡೀರನೆ ನಿಂತು ಹೋದ ಸ್ಥಳದಿಂದ ಟ್ರೆಕ್ ಆರಂಭಿಸಬಹುದು.

ಆಕರ್ಷಕ

ಆಕರ್ಷಕ

ಇನ್ನೂ ಟ್ರೆಕ್ ಪೂರ್ಣಗೊಂಡ ನಂತರ ಇಳಿಯುವ ಮಾರ್ಗವು ಬೇರೆಯಾಗಿದ್ದು ಇಲ್ಲಿಂದಲೂ ಸಹ ಅದ್ಭುತ ದೃಶ್ಯಾವಳಿಗಳನ್ನು ವೀಕ್ಷಿಸುತ್ತ ಇಳಿಯಬಹುದು. ಮುಖ್ಯವಾಗಿ ಈ ಮಾರ್ಗದಲ್ಲಿ ಇಳಿಯುವಾಗ ಚಿಕ್ಕ ಪ್ರದೇಶದ ದೇವಿಯ ಗುಡಿಯೊಂದನ್ನು ಕಾಣಬಹುದು.

ಸುತ್ತಮುತ್ತಲು

ಸುತ್ತಮುತ್ತಲು

ಚಿಕ್ಕ ಗೋಪುರ ಹಾಗೂ ಮುಂದೆ ಮಂಟಪವನ್ನು ಹೊಂದಿರುವ ಈ ದೇವಾಲಯದ ಸುತ್ತಮುತ್ತಲಿನ ಪರಿಸರವು ದಟ್ಟವಾದ ಗಿಡ-ಮರಗಳಿಂದ ಕೂಡಿದ್ದು ನೋಡಲು ಬಲು ಆಕರ್ಷಕವಾಗಿದೆ.

ಬಾಡಿಗೆ ಕಾರು

ಬಾಡಿಗೆ ಕಾರು

ಹೀಗೆ ಈ ಟ್ರೆಕ್ ಮುಕ್ತಾಯವಾಗಿ ನೀವು ಮತ್ತೆ ಮಡಿಕೇರಿ ತಲುಪುವ ಮಾರ್ಗಕ್ಕೆ ಮಾರ್ಗದರ್ಶಿಯ ಸಹಾಯದಿಂದ ಬಂದಿಳಿಯುತ್ತೀರಿ. ಇಲ್ಲಿಂದ ನೀವು ಮೊದಲೆ ಗೊತ್ತುಪಡಿಸಿದ ಬಾಡಿಗೆ ಕಾರಿನವರು ನೀವು ಹೇಳಿದ ನಿಗದಿತ ಸಮಯಕ್ಕೆ ಬಂದು ನಿಂತಿರುತ್ತಾರೆ. ಅಲ್ಲಿಂದ ಗಾಡಿ ಹತ್ತಿ ನೇರವಾಗಿ ಮಡಿಕೇರಿಗೆ ಹಿಂತಿರುಗಿ.

ದೇವರ ಮೀನುಗಳು

ದೇವರ ಮೀನುಗಳು

ಗಾಡಿಯಲ್ಲಿ ಮಡಿಕೇರಿಗೆ ಸಾಗುವಾಗ ನಿಮಗೆ ಚಂದ್ರಮುಖಿ ನದಿಯು ಬಿಳ್ಕೊಡುವಂತೆ ಹರಿಯುತ್ತಿರುವುದನ್ನು ಕಾಣಬಹುದು. ಇಲ್ಲಿಯೆ ಚಾಮುಂಡೇಶ್ವರಿಯ ದೇವಾಲಯವೊಂದಿದೆ. ಈ ನದಿಯಲ್ಲಿ ದೇವರ ಮೀನುಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ಕಾಣಬಹುದು. ಇವನ್ನು ಹಿಡಿಯುವಂತಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X