Search
  • Follow NativePlanet
Share
» »15 ಕೆ.ಜಿ ಭಾರದ ಕಲ್ಲು ನೀರಿನಲ್ಲಿ ತೇಲಾಡುತ್ತದೆ: ರಾಮೇಶ್ವರ

15 ಕೆ.ಜಿ ಭಾರದ ಕಲ್ಲು ನೀರಿನಲ್ಲಿ ತೇಲಾಡುತ್ತದೆ: ರಾಮೇಶ್ವರ

ನಿತ್ಯ ಜೀವನದಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅವೆಲ್ಲವೂ ಕಣ್ಣಾರೆ ಕಂಡಾಗಲೇ ನಮಗೆ ನಂಬಿಕೆ ಎಂಬುದು ಹುಟ್ಟುತ್ತದೆ. ಕರ್ನಾಟಕದಲ್ಲಿ ಹಲವಾರು ರಾಮಾಲಯವನ್ನು ದರ್ಶನ ಮಾಡಿರುತ್ತೇವೆ. ಆದರೆ ತಮಿಳು ನಾಡಿನಲ್ಲಿರುವ ಪವಿತ್ರವಾದ ಪ

ನಿತ್ಯ ಜೀವನದಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅವೆಲ್ಲವೂ ಕಣ್ಣಾರೆ ಕಂಡಾಗಲೇ ನಮಗೆ ನಂಬಿಕೆ ಎಂಬುದು ಹುಟ್ಟುತ್ತದೆ. ಕರ್ನಾಟಕದಲ್ಲಿ ಹಲವಾರು ರಾಮಾಲಯವನ್ನು ದರ್ಶನ ಮಾಡಿರುತ್ತೇವೆ. ಆದರೆ ತಮಿಳು ನಾಡಿನಲ್ಲಿರುವ ಪವಿತ್ರವಾದ ಪುಣ್ಯ ಕ್ಷೇತ್ರ ರಾಮೇಶ್ವರದ ಮಹಿಮೆ ಬಗ್ಗೆ ನಿಮಗೆ ಎಷ್ಟು ತಿಳಿದಿದೆ?..

ರಾಮೇಶ್ವರ ಶೈವರಿಗೇ ಅಲ್ಲದೇ ವೈಷ್ಣವರಿಗೂ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ರಾಮೇಶ್ವರ ತೀರ್ಥಕ್ಷೇತ್ರವಿರುವುದು ತಮಿಳು ನಾಡು ರಾಜ್ಯದಲ್ಲಿನ ರಾಮನಾಥಪುರ ಎನ್ನುವ ಜಿಲ್ಲೆಯಲ್ಲಿ. ಈ ಪಟ್ಟಣಕ್ಕೆ ಚೆನ್ನೈನಿಂದ ಸುಮಾರು 572 ಕಿ,ಮೀ ದೂರದಲ್ಲಿದೆ.

ಪುರಾಣಗಳ ಪ್ರಕಾರ ಶ್ರೀರಾಮನು ರಾವಣನ ಲಂಕಾ ಸ್ಥಳಕ್ಕೆ ಸೇರಿಕೊಳ್ಳಲು ರಾಮೇಶ್ವರದಲ್ಲಿ ಸೇತುವೆಯನ್ನು ನಿರ್ಮಿಸಿದನು. ಇಲ್ಲಿ ರಾಮನು ನಿರ್ಮಿಸಿದ ಸೇತುವೆಯನ್ನು ರಾಮ ಸೇತು ಎಂದು ಕರೆಯುತ್ತಾರೆ. ಆಶ್ಚರ್ಯವೆನೆಂದರೆ ಇಲ್ಲಿ ಸುಮಾರು 15 ಕೆ.ಜಿ ಭಾರವಿರುವ ಕಲ್ಲು ನೀರಿನಲ್ಲಿ ತೇಲುತ್ತಿರುತ್ತದೆ.

ಈ ತೇಲಾಡುವ ಕಲ್ಲಿನ ಮಹಿಮೆಯ ಕುರಿತು ಲೇಖನದ ಮೂಲಕ ತಿಳಿಯೋಣ.

ರಾಮಸೇತು

ರಾಮಸೇತು

ರಾವಣನ್ನು ಸಂಹಾರ ಮಾಡಿದ ನಂತರ ತನಗೆ ಅಂಟಿದ ಬ್ರಹ್ಮ ಹತ್ಯಾಪಾತಕವನ್ನು ನಿರ್ಮೂಲನೆ ಮಾಡಿಕೊಳ್ಳುವುದಕ್ಕೋಸ್ಕರ ರಾಮೇಶ್ವರದಲ್ಲಿ ರಾಮನಾಥೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿದನು. ಆಶ್ಚರ್ಯವೆನೆಂದರೆ ರಾಮೇಶ್ವರದಿಂದ ಶ್ರೀ ಲಂಕವನ್ನು ಕಾಣಬಹುದಾಗಿದೆ.

PC:Ssriram mt

ಚರಿತ್ರೆ

ಚರಿತ್ರೆ

ಪುಣ್ಯ ಕ್ಷೇತ್ರ ಕಾಶಿಯಲ್ಲಿನ ಗಂಗಾ ತೀರ್ಥವನ್ನು ತೆಗೆದುಕೊಂಡು ಬಂದು ರಾಮೇಶ್ವರದ ಸಮುದ್ರದಲ್ಲಿ ಲೀನಗೊಳಿಸಿದರೆ ಕಾಶಿಯಾತ್ರೆಯು ಪೂರ್ಣಗೊಳ್ಳುತ್ತದೆ ಎಂದು ಭಾರತೀಯರಲ್ಲಿನ ಆನೇಕ ಮಂದಿ ಹಿಂದೂಗಳ ನಂಬಿಕೆಯಾಗಿದೆ.

PC:Ssriram mt

ಕಲಾ ವೈಭವ

ಕಲಾ ವೈಭವ

ಭಾರತೀಯ ನಿರ್ಮಾಣ ಕಲಾ ಸೌಂದರ್ಯಕ್ಕೆ ರಾಮೇಶ್ವರ ದೇವಾಲಯವು ಉದಾಹರಣೆ ಎಂದರೆ ತಪ್ಪಾಗಾಲಾರದು. 12 ನೇ ಶತಮಾನದಿಂದ ಈ ದೇವಾಲಯವು ವಿವಿಧ ರಾಜರಿಂದ ನಿರ್ಮಾಣವಾಗಿದೆ.

PC:Vishnukiran L.S

ಲಿಂಗ

ಲಿಂಗ

ರಾಮೇಶ್ವರದಲ್ಲಿರುವ ಲಿಂಗವನ್ನು ಸ್ವತಃ ಶ್ರೀರಾಮನೇ ಪ್ರತಿಷ್ಟಾಪಿಸಿದ್ದು ಎಂದು ಹೇಳಲಾಗುತ್ತದೆ. ರಾವಣ ಒಬ್ಬ ಬ್ರಾಹ್ಮಣ. ಆತನಿಗೆ ಯುದ್ಧ ಭೂಮಿಯಲ್ಲಿ ಸಂಹಾರ ಮಾಡಿದ್ದಕ್ಕಾಗಿ ಬ್ರಹ್ಮ ಹತ್ಯಾ ಪಾತಕವನ್ನು ಕಳೆದುಕೊಳ್ಳಲು ಶ್ರೀರಾಮನು ಸೀತಾ ದೇವಿಯ ಜೊತೆ ಶಿವಲಿಂಗವನ್ನು ಪ್ರತಿಷ್ಟಾಪಿಸಿದನು ಎಂದು ಪುರಾಣಗಳು ಹೇಳುತ್ತವೆ.

ಹನುಮಂತ

ಹನುಮಂತ

ಇಲ್ಲಿ ಶಿವಲಿಂಗ ಪ್ರತಿಷ್ಟಾಪನೆ ಮಾಡುವುದಕ್ಕೆ ಕೈಲಾಸದಿಂದ ಲಿಂಗವನ್ನು ತೆಗೆದುಕೊಂಡು ಬರುವಂತೆ ರಾಮನು ಹನುಮಂತನಿಗೆ ಕಳುಹಿಸಿದನಂತೆ. ಆದರೆ ಮೂಹೂರ್ತ ದಾಡುತ್ತಿರುವುದನ್ನು ಕಂಡು ಸೀತ ದೇವಿ ತನ್ನ ಕೈಯಲ್ಲಿ ಮಾಡಿದ ಲಿಂಗವನ್ನು ಶ್ರೀರಾಮನು ಪ್ರತಿಷ್ಟಾಪಿಸುತ್ತಾನೆ.


PC:Balaji Photography

ಮೂಹೂರ್ತ

ಮೂಹೂರ್ತ

ಕೈಲಾಸ ಗಿರಿಯಿಂದ ಹನುಮಂತನು ಶಿವಲಿಂಗವನ್ನು ತರುತ್ತಾನೆ. ಈಗಾಗಲೇ ಶಿವಲಿಂಗದ ಪ್ರತಿಷ್ಟಾಪನೆಯನ್ನು ಕಂಡ ಹನುಮಂತನ ಕೋಪವನ್ನು ಕಂಡು ಶ್ರೀರಾಮನು ಹನುಮಂತ ತಂದ ಶಿವಲಿಂಗವನ್ನೂ ಕೂಡ ಪ್ರತಿಷ್ಟಾಪಿಸಿ ಮೊದಲು ಹನುಮ ತಂದ ಶಿವಲಿಂಗಕ್ಕೆ ಪೂಜೆಗಳು ಆದ ನಂತರವೇ ತಾನು ಪ್ರತಿಷ್ಟಾಪಿಸಿದ ಶಿವಲಿಂಗಕ್ಕೆ ಪೂಜೆಗಳು ನೆರವೇರಬೇಕು ಎಂದು ಶ್ರೀ ರಾಮನು ಹೇಳುತ್ತಾನೆ ಎಂದು ಈ ಬಗ್ಗೆ ಪುರಾಣದಲ್ಲಿವೆ.


PC:MY DEN

15 ಕೆ.ಜಿ ಇರುವ ಕಲ್ಲು

15 ಕೆ.ಜಿ ಇರುವ ಕಲ್ಲು

ಇಂತಹ ಪುರಾಣವಿರುವ ಈ ದೇವಾಲಯದಲ್ಲಿ ಆಶ್ಚರ್ಯಕರವಾದ ಘಟನೆ ಇದೆ. ಅದೆನೆಂದರೆ ಅದು 15 ಕೆ.ಜಿ ಭಾರವಿರುವ ಕಲ್ಲು ನೀರಿನಲ್ಲಿ ತೇಲಾಡುವುದು. ಇದೊಂದು ಮಹಿಮೆಯನ್ನು ಒಳ್ಳ ಪವಿತ್ರವಾದ ಕಲ್ಲು ಎಂದು ಭಕ್ತರು ಹೇಳುತ್ತಾರೆ. ಈ ವಿಚಿತ್ರವನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದ ಈ ರಾಮೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಭಕ್ತರು

ಭಕ್ತರು

ಭಕ್ತರು ಪವಿತ್ರವಾದ ಆ ಕಲ್ಲನ್ನು ನೀರಿನಿಂದ ಎತ್ತಿ ಮತ್ತೆ ನೀರಿನಲ್ಲಿ ಬಿಡುತ್ತಾರೆ. ಪುರಾಣಗಳ ಪ್ರಕಾರ ಇಂಥಹ ಕಲ್ಲುಗಳನ್ನು ಬಳಸಿಯೇ ರಾಮನು ತನ್ನ ವಾನರ ಸೈನ್ಯದ ಸಹಾಯದಿಂದ ಲಂಕಕ್ಕೆ ರಾಮ ಸೇತುವೆಯನ್ನು ನಿರ್ಮಿಸಿದನು.


PC:Vishvesh war

ಸಮುದ್ರ ಸ್ನಾನ

ಸಮುದ್ರ ಸ್ನಾನ

ರಾಮೇಶ್ವರ ಕ್ಷೇತ್ರದಲ್ಲಿ ಸಾವಿರಾರು ಭಕ್ತರು ಸ್ನಾನವನ್ನು ಮಾಡುತ್ತಾರೆ. ಅದರಲ್ಲಿ ಹೆಚ್ಚಾಗಿ ಕಾಶಿಗೆ ತೆರಳುವವರು ತಪ್ಪದೇ ಇಲ್ಲಿ ಸ್ನಾನ ಮಾಡಲೇಬೇಕು ಎಂಬ ನಂಬಿಕೆ ಇದೆ.

PC::எஸ். பி. கிருஷ்ணமூர்த்தி

ಬೀಚ್

ಬೀಚ್

ರಾಮೇಶ್ವರದಲ್ಲಿ ಸುಂದರವಾದ ಬೀಚ್‍ಗಳಿವೆ. ಆ ಬೀಚ್‍ಗಳ ಸೌಂದರ್ಯ ನೋಡಬೇಕು ಎಂದರೆ ಸೂರ್ಯೋದಯದ ಸಮಯ ಹಾಗೂ ಸೂರ್ಯಾಸ್ತ ಸಮಯ ನೋಡುಗರಿಗೆ ಉತ್ತಮವಾದ ಅನುಭೂತಿಯನ್ನು ಹಾಗೂ ಪ್ರಶಾಂತತೆಯನ್ನು ಉಂಟು ಮಾಡುತ್ತದೆ.


PC:RAJ

ರಾಮೇಶ್ವರಕ್ಕೆ ಹೇಗೆ ಸಾಗಬೇಕು?

ರಾಮೇಶ್ವರಕ್ಕೆ ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ: ರಾಮೇಶ್ವರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮದುರೈ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್‍ನ ಮೂಲಕ ಸುಲಭವಾಗಿ ರಾಮೇಶ್ವರಕ್ಕೆ ತಲುಪಬಹುದು.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಚೆನ್ನೈನಿಂದ ರಾಮೇಶ್ವರಕ್ಕೆ ಪ್ರತಿ ದಿನ 2 (ಮಂಗಳವಾರ ಹಾಗೂ ಶನಿವಾರ) ಒಟ್ಟು 4 ರೈಲುಗಳು ತಿರುಗುತ್ತಾ ಇರುತ್ತದೆ. ಮೊದಲೇ ಟಿಕೆಟ್ ಕಾಯ್ದಿಕರಿಸುವುದು ಉತ್ತಮ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಚೆನ್ನೈ ಮತ್ತು ರಾಜ್ಯದ ಇತರ ಪ್ರಧಾನ ನಗರಗಳಿಂದ ರಾಮೇಶ್ವರಕ್ಕೆ ಪ್ರತಿದಿನ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸೌಕರ್ಯವಿರುತ್ತದೆ.

PC:On the road

ರಾಮೇಶ್ವರದಲ್ಲಿ ವಸತಿ ಸೌಲಭ್ಯಗಳು

ರಾಮೇಶ್ವರದಲ್ಲಿ ವಸತಿ ಸೌಲಭ್ಯಗಳು

ರಾಮೇಶ್ವರದಲ್ಲಿ ವಸತಿ ಸೌಲಭ್ಯಗಳು ಉತ್ತಮವಾಗಿದೆ. ಎಲ್ಲಾ ವರ್ಗಗಳಿಗೂ ಕೊಠಡಿಗಳನ್ನು ನೀಡುತ್ತಾರೆ. ಹೀಗಾಗಿ ರಾಮೇಶ್ವರದಲ್ಲಿ ಆರಾಮವಾಗಿ 2 ದಿನಗಳ ಕಾಲ ಇರಬಹುದು.


PC:Ramnathswamy2007

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X