Search
  • Follow NativePlanet
Share
» »ದ.ಭಾರತದಲ್ಲಿರುವ ವಿಶೇಷ ಹಾಗೂ ಅದ್ಭುತ ಗುಹೆಗಳು

ದ.ಭಾರತದಲ್ಲಿರುವ ವಿಶೇಷ ಹಾಗೂ ಅದ್ಭುತ ಗುಹೆಗಳು

By Vijay

ಗುಹೆಗಳು ಮೊದಲಿನಿಂದಲೂ ಮನುಷ್ಯನಿಗೆ ಕುತೂಹಲ ಕೆರಳಿಸುವ ರಚನೆಗಳಾಗಿವೆ. ಕೆಲ ಗುಹೆಗಳನ್ನು ಮಾನವ ತನ್ನ ವಾಸಕ್ಕೆಂದು ನಿರ್ಮಿಸಿಕೊಂಡಿದ್ದರೆ ಇನ್ನೂ ಕೆಲ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡು ಮಾನವನ ವಾಸಕ್ಕೆಂದು ಬಳಸಲ್ಪಡುತ್ತಿದ್ದವು. ಪುರಾತನ ಕಾಲದಲ್ಲಿ ಮಾನವ ತನ್ನ ಸಂರಕ್ಷಣೆಗಾಗಿ ಗುಹೆಗಳಲ್ಲಿ ಬದುಕುತ್ತಿದ್ದುದನ್ನು ನಾವು ಇತಿಹಾಸದ ಮೂಲಕ ತಿಳಿದಿದ್ದೇವೆ.

ಆದರೆ ಇಂದು ಗುಹೆಗಳು ಸಾಕಷ್ಟು ಕುತೂಹಲ ಕೆರಳಿಸುತ್ತವೆ. ಗುಹೆಯ ಒಳಾಂಗಣ ಹೇಗಿರುತ್ತದೆ? ಯಾವ ಯಾವ ವಸ್ತುಗಳು ಬಳಸಲ್ಪಡುತ್ತಿದ್ದವು? ಯಾವ ರೀತಿ ಪುರಾತನ ಮಾನವ ಗುಹೆಗಳನ್ನು ತನ್ನ ವಾಸಕ್ಕೆಂದು ವ್ಯವಸ್ಥೆಗೊಳಿಸಿಕೊಂಡಿದ್ದ? ಮುಂತಾದ ಹಲವಾರು ಪ್ರಶ್ನೆಗಳು ನಮ್ಮನ್ನು ಸುತ್ತುವರೆಯುತ್ತವೆ. ಅಂತೆಯೆ ಇಂದಿಗೂ ಸಹ ಸಾಕಷ್ಟು ಉತ್ಸುಕಮಯ ಪ್ರವಾಸಿಗರು ಗುಹೆಗಳಿಗೆ ಭೇಟಿ ನೀಡಲು ಹಾತೊರೆಯುತ್ತಾರೆ.

ವಿಶೇಷ ಲೇಖನ : ಭೇಟಿ ನೀಡಲು ಯೋಗ್ಯವಾದ ಪ್ರಖ್ಯಾತ ಗುಹಾಂತರ ದೇವಾಲಯಗಳು

ಇಂದು ಜಗತ್ತಿನ ವಿವಿಧೆಡೆಗಳಲ್ಲಿ ಕಂಡುಬರುವಂತೆ ಭಾರತದಲ್ಲಿಯೂ ಸಹ ಸಾಕಷ್ಟು ಪುರಾತನ ಗುಹೆಗಳು ಕಂಡುಬರುತ್ತವೆ. ಕೆಲ ಗುಹೆಗಳಂತೂ ಅದ್ಭುತವಾದ ಶಿಲ್ಪ ಕಲೆ ಹಾಗೂ ವರ್ಣ ಚಿತ್ರಗಳಿಗೆ ವಿಶ್ವದಲ್ಲೆ ಹೆಸರುವಾಸಿಯಾಗಿದ್ದು, ಯುನೆಸ್ಕೊದಿಂದ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣಗಳಾಗಿ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಇನ್ನೂ ಕೆಲ ಗುಹೆಗಳು ತಮ್ಮ ಸುತ್ತಲೂ ರೋಚಕವಾದ ದಂತ ಕಥೆಗಳನ್ನು ಹೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರಸ್ತುತ ಲೇಖನದ ಮೂಲಕ ದಕ್ಷಿಣ ಭಾರತದಲ್ಲಿ ಕಂಡುಬರುವ ಕೆಲ ಪ್ರಮುಖ ಗುಹೆಗಳು ಯಾವುವು ಹಾಗೂ ಅವುಗಳು ಇರುವುದೇಲ್ಲಿ ಎಂಬುದರ ಕುರಿತು ತಿಳಿಯಿರಿ.

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಬೊರಾ ಗುಹೆಗಳು : ಆಂಧ್ರ ಪ್ರದೇಶದ ಅರಕು ಕಣಿವೆ ಪ್ರದೇಶದಲ್ಲಿರುವ ಬೊರಾ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡ ವಿಸ್ಮಯಕಾರಿ ಗುಹೆಯಾಗಿದೆ. ಇದು ಪ್ರಮುಖವಾಗಿ ಹೆಸರುವಾಸಿಯಾಗಿರುವುದು ಸ್ಟ್ಯಾಲಗ್ಮೈಟ್ ಮತ್ತು ಸ್ಟ್ಯಾಲಕ್ಟೈಟ್ ಎಂಬ ಶಿಲಾ ರಚನೆಗಳಿಗಾಗಿ.

ಚಿತ್ರಕೃಪೆ: Raj srikanth800

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಅತಿ ಆಳ ಹೊಂದಿರುವ ಹಾಗೂ ಬೃಹತ್ ಗುಹೆಗಳ ಪೈಕಿ ಒಂದಾಗಿರುವ ಬೊರಾ ಗುಹೆಗಳು ಕೌತುಕಮಯ ವಿನ್ಯಾಸ ಹಾಗೂ ಮನಮೋಹಕ ಬಣ್ಣ ಹೊಂದಿರುವ ಅನನ್ಯ ಶಿಲಾ ರಚನೆಗಾಗಿ ಪ್ರಖ್ಯಾತಿ ಪಡೆದಿವೆ.

ಚಿತ್ರಕೃಪೆ: Bhaskaranaidu

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಈ ಗುಹೆಗಳ ಹಿಂದೆ ಹಲವಾರು ದಂತ ಕಥೆಗಳು ತಳುಕು ಹಾಕಿಕೊಂಡಿವೆ. ಒಂದು ದಂತ ಕಥೆಯ ಪ್ರಕಾರ, ಒಂದೊಮ್ಮೆ ಈ ಪ್ರದೇಶದಲ್ಲಿ ಆಕಳೊಂದು ಮೇಯುತ್ತಿದ್ದಾಗ ಆಕಸ್ಮಿಕವಾಗಿ ಗುಹೆಯ ಮೇಲ್ಭಾಗದಲ್ಲಿದ್ದ ಒಂದು ಖಿಂಡಿಯ ಮೂಲಕ ಕೆಳಗೆ ಬಿದ್ದಿತು.

ಚಿತ್ರಕೃಪೆ: Snehareddy

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ದನಗಾಹಿಯು ಆ ಆಕಳನ್ನು ಹುಡುಕುತ್ತ ಅಲೆಯುವಾಗ ಈ ಗುಹೆಗಳನ್ನು ನೋಡಿದನು ಹಾಗೂ ಅದರಲ್ಲಿ ಅವನಿಗೆ ಒಂದು ಶಿವ ಲಿಂಗದ ಆಕಾರದ ಕಲ್ಲು ದೊರೆಯಿತು. ಇದರಿಂದ ಆತ ಶಿವನೆ ತನ್ನ ಆಕಳನ್ನು ರಕ್ಷಿಸಿರುವನೆಂದು ಬಗೆದನು.

ಚಿತ್ರಕೃಪೆ: Snehareddy

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿ, ತಂಡೋಪತಂಡವಾಗಿ ಹಳ್ಳಿ ಜನರು ಅಲ್ಲಿಗೆ ಬಂದು ಭಕ್ತಿ ಭಾವಗಳನ್ನು ಮೆರೆದರು ಹಾಗೂ ಶಿವನಿಗೆ ಮುಡಿಪಾಗಿ ಒಂದು ಚಿಕ್ಕ ದೇವಾಲಯವನ್ನೂ ಸಹ ಗುಹೆಯ ಪಕ್ಕದಲ್ಲಿ ನಿರ್ಮಿಸಿದರು. ಇಂದಿಗೂ ಭೇಟಿ ನೀಡುವ ಪ್ರವಾಸಿಗರು ಆ ದೇಗುಲಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Snehareddy

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಮತ್ತೊಂದು ಕಥೆಯ ಪ್ರಕಾರ, ಗುಹೆಯ ಆಳದಲ್ಲಿ ಶಿವಲಿಂಗವಿದ್ದು ಆಕಳನ್ನು ಹೋಲುವ ಒಂದು ಶಿಲಾ ರಚನೆಯಿಂದ ಆವೃತವಾಗಿದೆ. ವಿಜಿನಗರಂ ಹಾಗೂ ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಹರಿಯುವ ಗೋಸ್ಥಾಣಿ ಎಂಬ ನದಿಯ ಮೂಲ ಗುಹೆಯಲ್ಲಿರುವ ಆ ಆಕಳಿನ ಕೆಚ್ಚಲಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Joshi detroit

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಅರಕು ಕಣಿವೆಯಿಂದ ಸುಮಾರು 29 ಕಿ.ಮೀ ಗಳಷ್ಟು ದೂರವಿರುವ ಬೊರ್‍ರಾ ಗುಹೆಗಳಲ್ಲಿ ಪ್ರಮುಖವಾಗಿ ಸಸ್ಯಾಹಾರಿ ಬಾವಲಿಗಳು ಹಾಗೂ ವಿಶಿಷ್ಟ ಬಗೆಯ ಹಲ್ಲಿಗಳು ಪ್ರಮುಖವಾಗಿ ಕಂಡುಬರುತ್ತವೆ. ಅಲ್ಲದೆ ಅಳಿವಿನಂಚಿನಲ್ಲಿರುವ ವಿಶಿಷ್ಟ ಪಾಚಿ ಹಾಗೂ ಅಲ್ಗೆಗಳೂ ಸಹ ಇಲ್ಲಿ ಕಂಡುಬರುತ್ತವೆ. ಆಂಧ್ರ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ರೂಪಿಸಲಾದ ರೈಲು ಹಾಗೂ ರಸ್ತೆಯ ಮೂಲಕ ಅರಕು ಮತ್ತು ಬೊರಾ ಪ್ರವಾಸ ಸೇವೆಯು ಒಂದು ಉತ್ತಮ ಆಯ್ಕೆಯಾಗಿದೆ.

ಚಿತ್ರಕೃಪೆ: Robbygrine

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಅಲ್ಲದೆ ಸರ್ಕಾರವು ಗುಹೆಯೊಳಗೆ ಸೋಡಿಯಮ್ ವೆಪರ್, ಹ್ಯಾಲೋಜನ್ ನಂತಹ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಗುಹೆಯೊಳಗೆ ಪ್ರವೇಶಿಸಿದಾಗ ಯಾವುದೋ ಮಾಯಾ ಲೋಕಕ್ಕೆ ಬಂದೆವೇನೊ ಎಂಬಂತೆ ಭಾಸ ಉಂಟಾಗುವುದು ಸಹಜವೆನಿಸುತ್ತದೆ.

ಚಿತ್ರಕೃಪೆ: Rajib Ghosh

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಎಡಕಲ್ಲು ಗುಹೆಗಳು : ಇವು ಪ್ರಕೃತಿ ಸಹಜವಾಗಿ ನಿರ್ಮಿತವಾದ ಎರಡು ನೈಸರ್ಗಿಕ ಗುಹೆಗಳಾಗಿವೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 25 ಕಿ.ಮೀ ಗಳಷ್ಟು ದೂರದಲ್ಲಿರುವ ಎಡಕ್ಕಲ್ ಎಂಬ ಸ್ಥಳದಲ್ಲಿ ಈ ಗುಹೆಗಳಿರುವುದರಿಂದ ಇವುಗಳನ್ನು ಎಡಕಲ್ ಗುಹೆಗಳು ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Satheesan.vn

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಅಂಬುಕುಟ್ಟಿ ಮಾಲಾ ಎಂಬ ಪರ್ವತ ಶ್ರೇಣಿಯ ಪುರಾತನ ವ್ಯಾಪಾರ ಮಾರ್ಗದ ವ್ಯಾಪ್ತಿಯಲ್ಲಿ ಈ ಗುಹೆಗಳಿವೆ. ಹಿಂದೆ ಈ ಪರ್ವತ ಮಾರ್ಗವು ಕರ್ನಾಟಕದ ಮೈಸೂರು ಹಾಗೂ ಕೇರಳದ ಮಲಬಾರ್ ಕರಾವಳಿಯನ್ನು ಒಂದಕ್ಕೊಂದು ಬೆಸೆಯುತ್ತಿದ್ದವು.

ಚಿತ್ರಕೃಪೆ: Aravind K G

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಇಲ್ಲಿನ ಗುಹೆಗಳಲ್ಲಿ ಪುರಾತನ ವರ್ಣಚಿತ್ರಗಳು ಹಾಗೂ ಕೆತ್ತಲಾದ ಶಾಸನಗಳು ಲಭಿಸಿದ್ದು ಇವು ಕ್ರಿ.ಪೂ 6000 ನೆಯ ಸಂದರ್ಭಕ್ಕೆ ಕೊಂಡೊಯ್ಯುತ್ತದೆ. ಅಂದರೆ ನವಶಿಲಾಯುಗದ ಸಮಯದಿಂದ ಇಲ್ಲಿ ಮನುಷ್ಯನ ಚಟುವಟಿಕೆ ಇತ್ತೆಂಬುದು ತಿಳಿದುಬರುತ್ತದೆ.

ಚಿತ್ರಕೃಪೆ: Sreejith K

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂದ್ಲಾ ತಾಲೂಕಿನ ಬೇಲಮ್ ಹಳ್ಳಿಯಲ್ಲಿ ಕಂಡುಬರುವ ಬೇಲಮ್ ಗುಹೆಗಳು ಭಾರತ ಉಪಖಂಡದಲ್ಲೆ ಎರಡನೆಯ ಅತಿ ದೊಡ್ಡದಾದ ಗುಹೆಯಾಗಿದ್ದು, ಅತಿ ಉದ್ದನೆಯ ಗುಹೆ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. 3,229 ಮೀ.ಗಳಷ್ಟು ಉದ್ದವಿರುವ ಈ ಪ್ರಕೃತಿ ಸಹಜ ನಿರ್ಮಿತ ಗುಹೆಯು ಆಂಧ್ರದ ಕೊಲಿಮಿಗುಂದ್ಲಾ ತಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: PP Yoonus

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುವ ಈ ಗುಹೆಯ ಕುರಿತು ಸ್ಥಳೀಯರಿಗೆ ಗೊತ್ತಿದ್ದರೂ ಪುಸ್ತಕದಲ್ಲಿ ಮೊದಲು ದಾಖಲಿಸಿದ್ದು ಬ್ರಿಟೀಷ್ ಸಮೀಕ್ಷಕ (ಸರ್ವೇಯರ್) ರಾಬರ್ಟ್ ಬ್ರೂಸ್ ಫೂಟ್ ಅದೂ 1884 ರಲ್ಲಿ. ತದನಂತರ ಒಂದು ಶತಮಾನಗಳಷ್ಟು ನೆನೆಗುದಿಗೆ ಬಿದ್ದ ಈ ಗುಹೆಯ ಕುರಿತು 1982-84 ರಲ್ಲಿ ಜರ್ಮನಿ ದೇಶದ ಗುಹಾ ವಿಜ್ಞಾನಿಯಾದ ಡೆನಿಯಲ್ ಗೆಬ್ಯೋರ್ ಹಾಗು ಆತನ ತಂಡವು ವಿಸ್ತೃತವಾದ ಅನ್ವೇಷಣೆಯನ್ನು ನಡೆಸಿದರು.

ಚಿತ್ರಕೃಪೆ: Rajesh Kumar Karumanchi

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ತರುವಾಯ 1988 ರಲ್ಲಿ ಆಂಧ್ರ ಸರ್ಕಾರವು ಈ ಗುಹೆಯನ್ನು ರಕ್ಷಿತ ಪ್ರದೇಶವನ್ನಾಗಿ ಘೋಷಿಸಿ ಪ್ರವಾಸೋದ್ಯಮ ಇಲಾಖೆಯು ಇದರ ಸಂಪೂರ್ಣ ಅಭಿವೃದ್ಧಿ ಕಾರ್ಯದ ಹೊಣೆ ಹೊತ್ತಿತು. ಅಂತಿಮವಾಗಿ ಫೆಬ್ರುವರಿ 2002 ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಪ್ರಸ್ತುತ, ಈ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಗುಹೆಯು 3.5 ಕಿ.ಮೀ ವರೆಗೆ ಅನ್ವೇಷಿಸಲ್ಪಟ್ಟಿದ್ದು, ಜನರಿಗೆ 1.5 ಕಿ.ಮೀ ದೂರದವರೆಗೆ ಪ್ರವೇಶಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಸಂಗತಿಯೆಂದರೆ ಸಂಸ್ಕೃತ ಪದವಾದ "ಬಿಲಂ" (ಗುದ್ದ/ರಂಧ್ರ) ನಿಂದ ಇದಕ್ಕೆ ಬೇಲಮ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Praveen

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಕೋಟಿ ಲಿಂಗಾಲು ಚೇಂಬರ್: ಬೆಕ್ಕಿನ ದ್ವಾರ ಎಂಬ ಅರ್ಥ ಕೊಡುವ ಇದು ಒಂದು ಆರ್ಚ್ ಆಕಾರದಲ್ಲಿ ಸ್ವಾಭಾವಿಕವಾಗಿ ರೂಪಗೊಂಡ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಯಾಗಿದೆ. ಇಲ್ಲಿ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಲಿಂಗದ ಆಕಾರದಲ್ಲಿ ರೂಪಗೊಂಡಿರುವುದನ್ನು ಗಮನಿಸಬಹುದು. ಬಹು ಸಂಖ್ಯೆಯಲ್ಲಿ ಈ ತರಹದ ಲಿಂಗ ರಚನೆಗಳು ಇಲ್ಲಿ ಕಂಡುಬರುವುದರಿಂದ ಇದನ್ನು ಕೋಟಿ ಲಿಂಗಾಲು ಚೇಂಬರ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Dr Murali Mohan Gurram

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಪಾತಾಳಗಂಗಾ: ಇದೊಂದು ಪುಟ್ಟ ನೀರಿನ ತೊರೆಯಾಗಿದ್ದು ಆಗ್ನೇಯ ದಿಕ್ಕಿನಿಂದ ವಾಯವ್ಯ ದಿಕ್ಕಿಗೆ ಹರಿಯುತ್ತ ಗುಹಾ ಭೂಮಿಯೊಳಗೆ ಅದೃಶ್ಯವಾಗುತ್ತದೆ. ಗುಹೆಯಿಂದ ಎರಡು ಕಿ.ಮೀ ದೂರದಲ್ಲಿರುವ ಒಂದು ಬಾವಿಯೊಳಗೆ ಈ ನೀರು ಸೇರುತ್ತದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Naga Praveena Sharma P

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಸಪ್ತಸ್ವರ ಗುಹಾ ಅಥವಾ ಮ್ಯೂಸಿಕಲ್ ಚೇಂಬರ್: ಇಲ್ಲಿರುವ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಕಟ್ಟಿಗೆ ಅಥವಾ ಇತರೆ ವಸ್ತುಗಳಿಂದ ಮೀಟಿದಾಗ ಸಂಗೀತ ಸ್ವರಗಳನ್ನು ಹೊರಹೊಮ್ಮಿಸುತ್ತವೆ. 2006 ರಲ್ಲಿ ಈ ಸಂಗೀತ ಕೋಣೆಯನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು.

ಚಿತ್ರಕೃಪೆ: Pravinjha

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಧ್ಯಾನ ಮಂದಿರ: ಗುಹೆಯ ಆರಂಭದ ಹಂತದಲ್ಲೆ ಈ ಭಾಗವನ್ನು ಕಾಣಬಹುದಾಗಿದೆ. ಈ ಕೋಣೆಯಲ್ಲಿನ ರಚನೆಯು ಗಾದೆ ಹಾಗು ದಿಂಬಿನ ಆಕಾರದಲ್ಲಿ ರೂಪಗೊಂಡಿದ್ದು ನೋಡಲು ಆಕರ್ಷಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Rajesh Kumar Karumanchi

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಸಾವಿರ ಹೆಡೆಗಳು/ಥೌಸಂಡ್ ಹುಡ್: ಗುಹೆಯ ಈ ಭಾಗವು ಅದ್ಭುತವಾದ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳನ್ನು ಹೊಂದಿದೆ. ಇವುಗಳು ನಾಗರ ಹಾವಿನ ಹೆಡೆಗಳಂತೆ ಗೋಚರಿಸುವುದರಿಂದ ಇದನ್ನು ಥೌಸಂಡ್ ಹುಡ್ ಗಳೆಂದು ಕರೆಯಲಾಗುತ್ತದೆ.

ಚಿತ್ರಕೃಪೆ: Dr Murali Mohan Gurram

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಬನ್ಯನ್ ಅಥವಾ ಆಲದ ಮರ ಕೋಣೆ: ಗುಹೆಯ ಈ ಭಾಗದಲ್ಲಿ ಒಂದು ಖಂಬವನ್ನು ನೋಡಬಹುದಾಗಿದ್ದು ಅದರ ಮೇಲಿನ ಛಾವಣಿಯಿಂದ ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಮರದ ರೆಂಬೆಗಳಂತೆ ಎಲ್ಲೆಡೆ ಹರಡಿವೆ. ಅಣತೆ ದೂರದಿಂದ ಇದನ್ನು ನೋಡಿದಾಗ ಆಲದ ಮರದ ಹಾಗೆ ಗೋಚರಿಸುವುದರಿಂದ ಇದನ್ನು ಬನಿಯನ್ ಟ್ರಿ ಕೋಣೆ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Pravinjha

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಮಂಡಪಂ/ಮಂಟಪ: ಇದು ಗುಹೆಯ ವಿಶಾಲವಾದ ಭಾಗವಾಗಿದ್ದು ಸುತ್ತಲು ಸ್ಟ್ಯಾಲಕ್ಟೈಟ್ಸ್ (ನೀರ್ಗೋಲುಗಳು) ರಚನೆಗಳು ಖಂಬಗಳ ರೂಪದಲ್ಲಿ ಕಾಣುವುದರಿಂದ ಮಂಟಪದ ಹಾಗೆ ಇದು ಗೋಚರಿಸುತ್ತದೆ.

ಚಿತ್ರಕೃಪೆ: Mahesh Telkar

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಬರುವ ಈ ಗುಹೆಯೊಳಗೆ ಪ್ರವೇಶಿಸಲು ಭಾರತೀಯರಿಗೆ 50 ಹಾಗು ವಿದೇಶಿಯರಿಗೆ 300 ರೂಪಾಯಿಗಳನ್ನು(ಪ್ರತಿ ತಲೆಗೆ) ಶುಲ್ಕವನ್ನು ನಿಗದಿಪಡಿಸಲಾಗಿದೆ. ಗುಹೆಯೊಳಗೆ ಪ್ರವೇಶಿಸಲು ಲೋಹದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಗುಹೆಯೊಳಗೆ ಸರಾಗವಾಗಿ ಸಾಗಲು ಸೋಡಿಯಂ ವೆಪರ್ ಲೈಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಚಿತ್ರಕೃಪೆ: Rajesh Kumar Karumanchi

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ನೆಲ್ಲಿತೀರ್ಥ ಗುಹೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಿವನಿಗೆ ಮುಡಿಪಾದ ಸೋಮನಾಥೇಶ್ವರ ದೇವಾಲಯ ಹೊಂದಿರುವ ನೆಲ್ಲಿತೀರ್ಥ ಕ್ಷೇತ್ರದಲ್ಲಿ ಈ ಗುಹೆಯಿದೆ. ಈ ಕ್ಷೇತ್ರವನ್ನು ಮಂಗಳೂರಿನಿಂದ ಗುರುಪುರ, ಕೈಕಂಬ ಹಾಗೂ ಯಡಪಡವು ಮಾರ್ಗವಾಗಿ ತಲುಪಬಹುದಾಗಿದೆ. ಯಡಪಡುವಿನಿಂದ ನೆಲ್ಲಿತೀರ್ಥವು ಕೇವಲ ಎಂಟು ಕಿ.ಮೀ ಗಳಷ್ಟು ಅಂತರದಲ್ಲಿದೆ. ಹಿಂದೆ ಈ ಗುಹೆಯಲ್ಲಿ ಜಬಲಿ ಮಹರ್ಷಿಗಳು ತಪಗೈದಿದ್ದರೆನ್ನಲಾಗಿದೆ. ಈ ನೈಸರ್ಗಿಕ ಗುಹೆಯು 660 ಅಡಿಗಳಷ್ಟು ಉದ್ದವಿದ್ದು ತೆರಳುವುದು ಬಲು ಕಷ್ಟಕರವಾಗಿದೆ, ಕಾರಣ ಇದರಲ್ಲಿ ನೇರವಾಗಿ ನಡೆಯಲು ಅಸಾಧ್ಯವಾಗಿದ್ದು ಬಗ್ಗಿಕೊಂಡು ತೆವಳುತ್ತ ಸಾಗಬೇಕಾಗುತ್ತದೆ. ಕೊನೆಯಲ್ಲಿ ಈ ಒಂದು ನೀರಿನ ಮೂಲ ಹಾಗೂ ಶಿವಲಿಂಗವಿರುವುದನ್ನು ಕಾಣಬಹುದು.

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ನೆಡುಮಲ ಗುಹೆಗಳು : ಕೇರಳದ ಇಡುಕ್ಕಿ ಹಾಗೂ ಎರ್ನಾಕುಲಂ ಜಿಲ್ಲೆಗಳ ಗಡಿಗಳ ಬಳಿಯಿರುವ ಪಿರಲಿಮಟ್ಟಂ ಎಂಬಲ್ಲಿ ಈ ಗುಹೆಗಳಿವೆ.

ಚಿತ್ರಕೃಪೆ: Jayakumar13s

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ಮಮಂದೂರು ಗುಹಾ ದೇವಾಲಯ : ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿರುವ ಒಂದು ಗ್ರಾಮವೆ ಮಮಂದೂರು. ಈ ಗ್ರಾಮವು ಪ್ರಸಿದ್ಧವಾಗಿರುವುದಕ್ಕೆ ಕಾರಣ ಇಲ್ಲಿರುವ ಏಳನೆಯ ಶತಮಾನದಲ್ಲಿ ನಿರ್ಮಿಸಲಾದ ಗುಹಾ ದೇವಾಲಯದ ರಚನೆ. ಭಾರತೀಯ ಪುರಾತತ್ವ ಇಲಾಖೆಯಿಂದ ಇದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ.

ಚಿತ್ರಕೃಪೆ: Raamanp

ದ.ಭಾರತದ ಸುಂದರ ಗುಹೆಗಳು:

ದ.ಭಾರತದ ಸುಂದರ ಗುಹೆಗಳು:

ತ್ರಿಕ್ಕೂರು ಮಹಾದೇವಾ ದೇವಾಲಯ : ಕೇರಳದ ತ್ರಿಶ್ಶೂರು ಜಿಲ್ಲೆಯ ತ್ರಿಕ್ಕೂರು ಗ್ರಾಮದಲ್ಲಿ ಈ ಗುಹಾ ದೇವಾಲಯವಿದೆ. 7, 8 ನೆಯ ಶತ್ಮಾನದಲ್ಲಿ ನಿರ್ಮಾಣವಾದ ಈ ಗುಹೆಯಲ್ಲಿ ಮೊದಲಿಗೆ ಜೈನ ದೇವಾಲಯವಿತ್ತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Aruna

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X