Search
  • Follow NativePlanet
Share
» »ದ.ಭಾರತದ ವಿಶಿಷ್ಟ ರಾಮನ ದೇವಾಲಯಗಳು

ದ.ಭಾರತದ ವಿಶಿಷ್ಟ ರಾಮನ ದೇವಾಲಯಗಳು

By Vijay

ಹಿಂದೂ ಸಂಪ್ರದಾಯದಲ್ಲಿ ಮರ್ಯಾದಾ ಪುರುಷೋತ್ತಮನೆಂದೆ ಕರೆಯಲ್ಪಡುವ, ರಾಮಾಯಣ ಮಹಾಕಾವ್ಯದ ಮುಖ್ಯ ನಾಯಕ ಹಾಗೂ ವಿಷ್ಣುವಿನ ಅವತಾರವೆಂದೆ ಬಿಂಬಿತವಾದ ಶ್ರೀರಾಮಚಂದ್ರನಿಗೆ ಮುಡಿಪಾದ ಸಾಕಷ್ಟು ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು.

ದಶರಥ ಮಹಾರಾಜನ ಮಗ, ಅಯೋಧ್ಯೆಯ ರಾಜನಾದ ಶ್ರೀ ರಾಮಚಂದ್ರನು ಧರ್ಮ ಮಾರ್ಗದಲ್ಲಿ ಸಾಗುವಾಗ ಪಡುವ, ಬರುವ ತೊಂದರೆಗಳನ್ನು ನಿಗ್ರಹಿಸಿಕೊಂಡು ಯಾವ ರೀತಿ ಧರ್ಮದಿಂದಲೆ ಬದುಕಬೇಕೆಂಬುದನ್ನು ತೋರಿಸಿಕೊಡುವಲ್ಲಿ ಸಮಸ್ತ್ ಲೋಕಕ್ಕೆ ಮಾದರಿಯಾಗಿದ್ದಾನೆಂದು ಹಿಂದು ಸಂಸ್ಕೃತಿಯಲ್ಲಿ ನಂಬಲಾಗುತ್ತದೆ.

ನಿಮಗಿಷ್ಟವಾಗಬಹುದಾದ : ವಿಷ್ಣುವಿಗೆ ಮುಡಿಪಾದ ವಿಶಿಷ್ಟ ದೇವಾಲಯಗಳು

ಸೀತಾಪತಿ ಶ್ರೀರಾಮಚಂದ್ರನು ಹುಟ್ಟಿದ ದಿನವನ್ನು ಹಿಂದುಗಳು ರಾಮನವಮಿಯನ್ನಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಯುಗಾದಿ ಹಬ್ಬದ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಂದು ರಾಮನವಮಿಯನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ಆ ದಿನದಂದು ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.

ಪ್ರಸ್ತುತ ಲೇಖನದ ಮುಲಕ ದಕ್ಷಿಣ ಭಾರತದಲ್ಲಿರುವ ಕೆಲವು ಆಯ್ದ ವಿಶಿಷ್ಟವಾದ ರಾಮನ ದೇವಾಲಯಗಳು ಎಲ್ಲಿಲ್ಲಿವೆ ಎಂಬುದರ ಕುರಿತು ತಿಳಿಯಿರಿ.

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಭದ್ರಾಚಲಂ ರಾಮಚಂದ್ರ ದೇವಸ್ಥಾನ : ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಭದ್ರಾಚಲಂ ಒಂದು ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದ್ದು ತನ್ನಲ್ಲಿರುವ ಶ್ರೀ ರಾಮಚಂದ್ರನ ದೇವಾಲಯಕ್ಕಾಗಿ ಹೆಸರುವಾಸಿಯಾಗಿದೆ. ರಾಮನವಮಿಯನ್ನು ಬಲು ಸಡಗರದಿಂದ ಆಚರಿಸಲಾಗುವ ದೇವಾಲಯಗಳ ಪೈಕಿ ಒಂದಾಗಿರುವ ಭದ್ರಾಚಲಂ ದೇವಸ್ಥಾನ ಲಕ್ಷ ಲಕ್ಷ ಸಂಖ್ಯೆಯಲ್ಲಿ ದೇಶದೆಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Bcmnet

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಭದ್ರಾಚಲಂ ದೇವಸ್ಥಾನದ ಕುರಿತು ರೋಚಕವಾದ ವಿಷಯಗಳಿವೆ. ಹಿಂದೆ ಅಂದರೆ 17 ನೇಯ ಶತಮಾನದ ಅರ್ಧದಲ್ಲಿ ಕಂಚರ್ಲಾ ಗೋಪಣ್ಣ ಎಂಬುವವರು ಭದ್ರಾಚಲಂನ ತಹಸೀಲ್ದಾರರಾಗಿದ್ದರು. ರಾಮನ ಪರಮ ಭಕ್ತರಾಗಿದ್ದ ಇವರು ಖಜಾನೆಯ ಹಣವನ್ನು ಉಪಯೋಗಿಸಿ ಭದ್ರಾಚಲಂ ದೇವಸ್ಥಾನ ಕಟ್ಟಿಸಿದರು. ಈ ವಿಷಯ ರಾಜನಿಗೆ ಗೊತ್ತಾಗಿ ಅವರು ಬಂಧಿಸಲ್ಪಟ್ಟರು.

ಚಿತ್ರಕೃಪೆ: Trived m96

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಆದರೆ ಪವಾಡವೆಂಬಂತೆ ರಾಜನಿಗೆ ದೇವಾಲಯ ನಿರ್ಮಾಣದಲ್ಲಿ ವ್ಯಯಿಸಲಾದ ಹಣ ಮರಳಿ ದೊರೆತು ಗೋಪಣ್ಣನನ್ನು ಬಿಡುಗಡೆಗೊಳಿಸಿದ. ಈ ಪವಾಡವರಿತ ಗೋಪಣ್ಣ ಮುಂದೆ ಭಕ್ತ ರಾಮದಾಸರಾಗಿ ರಾಮನ ಕುರಿತು ಅನೇಕ ಗೀತೆಗಳನ್ನು ರಚಿಸಿ ಪ್ರಸಿದ್ಧರಾದರು.

ಚಿತ್ರಕೃಪೆ: Bcmnet

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇನ್ನೊಂದು ಸಂಗತಿಯೆಂದರೆ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ್ದ ಕಬೀರದಾಸರು ಒಮ್ಮೆ ಇಲ್ಲಿಗೆ ಬಂದಾಗ ಅವರಿಗೆ ರಾಮನ ದರ್ಶನಕ್ಕೆಂದು ದೇವಾಲಯದಲ್ಲಿ ಪ್ರವೇಶಿಸುವ ಅನುಮತಿ ಕೊಡದಿದ್ದಾಗ ದೇವಾಲಯದಲ್ಲಿದ್ದ ರಾಮನ ಕೆಲವು ಚಿತ್ರಗಳು ವಿಚಿತ್ರವಾಗಿ ಮಾಯವಾಗತೊಡಗಿದವು. ಇದನ್ನರಿತ ದೇವಾಲಯ ಅರ್ಚಕಾಧಿಕಾರಿಗಳು ಕಬೀರರನ್ನು ಹೃತ್ಪೂರ್ವಕವಾಗಿ ಒಳಪ್ರವೇಶಿಸಲು ಕೋರಿದಾಗ ಆ ರಾಮನ ಚಿತ್ರಗಳು ಮತ್ತೆ ಕಾಣತೊಡಗಿದವು.

ಚಿತ್ರಕೃಪೆ: Pranayraj1985

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇನ್ನೊಂದು ಐತಿಹ್ಯದ ಪ್ರಕಾರ, ಮೇರು ಹಾಗೂ ಮೇನಕೆಯ ಪುತ್ರ ಭದ್ರನು ಈ ಸ್ಥಳದಲ್ಲಿಯೆ ರಾಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸಿದ್ದನು. ಹೀಗಾಗಿ ಭದ್ರಾಚಲಂನ ಭದ್ರಗಿರಿ ಎಂಬ ಬೆಟ್ಟದ ಮೇಲೆ, ಗೋದಾವರಿ ನದಿ ತಟದ ಬಳಿ ಶ್ರೀರಾಮಚಂದ್ರನ ಈ ದೇವಾಲಯ ಸ್ಥಿತವಿದೆ. ಹಿಂದೆ ಲಂಕೆಗೆ ಹೋಗುವಾಗ ಶ್ರೀರಾಮನು ಲಕ್ಷ್ಮಣನೊಡನೆ ಈ ಸ್ಥಳದಲ್ಲಿರುವ ಗೊದಾವರಿ ನದಿಯನ್ನು ದಾಟಿ ಹೋಗಿದ್ದನೆಂದು ತಿಳಿಯಲಾಗಿದೆ.

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಕೋದಂಡ ರಾಮ ದೇವಾಲಯ : ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಿಂದ ಕೇವಲ 20 ಕಿ.ಮಿ ದೂರದಲ್ಲಿರುವ ಗೊಲ್ಲಾಲಾ ಮಾಮಿಡಾಡಾ ಎಂಬ ಗ್ರಾಮದಲ್ಲಿರುವ ರಾಮ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವ ವೈಷ್ಣವ ದೇವಾಲಯವಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ರಾಮನವಮಿಯ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಇಲ್ಲಿ ಜರುಗುತ್ತದೆ. ಇದೆ ಸಂದರ್ಭದಲ್ಲಿ ಕಲ್ಯಾಣೋತ್ಸವವನ್ನೂ ಸಹ ನೆರೆವೇರಿಸಲಾಗುತ್ತದೆ. ಭದ್ರಾಚಲಂ ನಂತೆಯೆ ರಾಮನ ಈ ದೇವಸ್ಥಾನವೂ ಸಹ ಸಾಕಷ್ಟು ಭಕ್ತಾದಿಗಲಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Adityamadhav83

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಪರ್ಣಶಾಲೆ : ಖಮ್ಮಂ ಜಿಲ್ಲೆಯ ಭದ್ರಾಚಲಂ ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪರ್ಣಶಾಲೆಯು ರಾಮಾಯಣದ ಮಹತ್ತರ ಘಟನೆಗಳಿಗೆ ಸಾಕಷಿಯಾಗಿದೆ. ಇಲ್ಲಿ ಇಂದಿಗೂ ಕುಟಿರವೊಂದಿದ್ದು ಅದರಲ್ಲಿಯೆ ಹಿಂದೆ ಶ್ರೀರಾಮಚಂದ್ರನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣನೊಂದಿಗೆ ವಾಸಿಸುತ್ತಿದ್ದನೆನ್ನಲಾಗಿದೆ.

ಚಿತ್ರಕೃಪೆ: Adityamadhav83

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇಂದು ಅದರ ಸುತ್ತಮುತ್ತಲು ಸುಂದರವಾದ ಉದ್ಯಾನವನ್ನು ನಿರ್ಮಿಸಲಾಗಿದ್ದು ಸೀತಾಪಹರಣ ಪ್ರಸಂಗ ವಿವರಿಸುವಂತಹ ಶಿಲ್ಪಗಳನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಇಲ್ಲಿನ ಗೋದಾವರಿ ನದಿ ತಟದಲ್ಲಿ ಹಿಂದೆ ರಾಮ ಸೀತೆಯರು ಸ್ನಾನ ಮಾಡಿ ಬಟ್ಟೆ ಒಣಹಾಕುತ್ತಿದ್ದರು ಆ ಸ್ಥಳವನ್ನು ರಾಧಾಗುಟ್ಟ ಎಂದು ಕರೆಯುತ್ತಾರೆ.

ಚಿತ್ರಕೃಪೆ: Adityamadhav83

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಅಲ್ಲದೆ, ಈ ಒಂದು ಸ್ಥಳದಲ್ಲಿಯೆ ರಾವಣ ಸೀತೆಯನ್ನು ಅಪರಿಸಿದ್ದ ಎನ್ನಲಾಗುತ್ತದೆ. ಇಂದಿಗೂ ಸೀತೆಯ ಸೀರೆಯಲ್ಲಿದ್ದ ಅರಿಷಿಣದ ಗುರುತು ಹಾಗೂ ಸೀರೆಯ ಗುರುತು ಇಲ್ಲಿನ ಬಂಡೆಯೊಂದರ ಮೇಲೆ ಕಾಣಬಹುದು. ಇನ್ನೊಂದು ಮೂಲದ ಪ್ರಕಾರ ಈ ಸ್ಥಳದಲ್ಲಿಯೆ ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಣಿಗೆ ಬಿದ್ದಿದ್ದನಂತೆ.

ಚಿತ್ರಕೃಪೆ: vimal_kalyan

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಕೋದಂಡರಾಮ ದೇವಾಲಯ : ಆಂಧ್ರ ಪ್ರದೇಶದ ಕೋರಾಜಂಪೇಟ ತಾಲೂಕಿನ ಒಂಟಿಮಿಟ್ಟದಲ್ಲಿರುವ ಕೋದಂಡರಾಮನ ದೇವಾಲಯ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ದೇವಾಲಯವಾಗಿದೆ. ದಂತಕಥೆಯ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿದ್ದ ಒಂಟುದು ಹಾಗೂ ಮಿಟ್ಟುದು ಎಂಬ ಇಬ್ಬರು ದರೋಡೆಕೋರರು ಕ್ರಮೇಣ ಅಪ್ರತಿಮ ರಾಮಭಕ್ತರಾಗಿ ಈ ದೇವಾಲಯ ನಿರ್ಮಿಸಿದರಂತೆ. ಅಲ್ಲದೆ ಪ್ರಖ್ಯಾತ ತೆಲುಗು ಕವಿ/ಸಾಹಿತಿ ಬೊಮ್ಮರ ಪೋತನ ಒಂಟಿಮಿಟ್ಟದಲ್ಲಿದ್ದುಕೊಂಡೆ ಮಹಾಭಾಗವತವನ್ನು ತೆಲುಗುವಿನಲ್ಲಿ ರಚಿಸಿ ಅದನ್ನು ಶ್ರೀರಾಮನಿಗೆ ಸಮರ್ಪಿಸಿದ್ದರು.

ಚಿತ್ರಕೃಪೆ: Trulyajays

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಹಜಾರ ರಾಮನ ದೇವಾಲಯ : ಕರ್ನಾಟಕದ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಬಳ್ಳಾರಿ ಜಿಲ್ಲೆಯ ಹಂಪಿಯ ಗತ ವೈಭವ ಸಾರುವ ವಿಜಯನಗರ ಸಾಮ್ರಾಜ್ಯದ ಕುರುಹುಗಳಿರುವ ಪ್ರದೇಶದಲ್ಲಿ ಇತರೆ ಜಗತ್ಪ್ರಸಿದ್ಧ ರಚನೆಗಳ ಜೊತೆಗೆ ರಾಮನಿಗೆ ಮುಡಿಪಾದ ಹಜಾರ ರಾಮನ ದೇವಾಲಯವನ್ನೂ ಸಹ ಕಾಣಬಹುದು. ಹಜಾರಾ ಎಂದರೆ ಅಂಗಳ ಎಂಬ ಅರ್ಥವೂ ಇರುವುದರಿಂದ ಇದನ್ನು ಹಜಾರಾ ರಾಮನ ದೇವಾಲಯವೆಂದು ಕರೆಯಲಾಗಿದೆ ಎಂದು ಒಂದು ಮೂಲ ಹೇಳಿದರೆ,

ಚಿತ್ರಕೃಪೆ: Manikanteswar Madala

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇನ್ನೊಂದು ಮೂಲದ ಪ್ರಕಾರ, ದೇವಾಲಯದ ಒಳಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಾಮನ ಚಿತ್ರ ಬಿಡಿಸಿರುವುದರಿಂದ ಹಾಗೂ ಅದನ್ನು ನೋಡಿದಾಗ ಸಾವಿರ ಸಾವಿರ ಸಂಖ್ಯೆಯಲ್ಲಿ ರಾಮಚಿತ್ರವಿರುವ ಹಾಗೆ ಭಾಸವಾಗುವುದರಿಂದ ಇದಕ್ಕೆ ಹಜಾರ ರಾಮನ ದೇವಾಲಯ ಎಂದು ಕರೆಯಲಾಗುತ್ತದೆ. ಹಜಾರ್ ಎಂದರೆ ಸಾವಿರ ಎಂಬ ಅರ್ಥವಿದೆ.

ಚಿತ್ರಕೃಪೆ: Aravindreddy.d

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಕೋದಂಡರಾಮ ದೇವಸ್ಥಾನ : ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಚಿಕ್ಕಮಗಳೂರು ಬಳಿಯಿರುವ ಹಿರೆಮಗಳೂರು ಎಂಬಲ್ಲಿರುವ ಈ ದೇವಸ್ಥಾನ ರಾಮನಿಗೆ ಮುಡಿಪಾದ ಸುಂದರ ಹಾಗೂ ಜನಪ್ರೀಯ ದೇವಸ್ಥಾನವಾಗಿದೆ. ರಾಮ, ಲಕ್ಷ್ಮಣ ಹಾಗೂ ಸೀತೆಯರಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಜನ ಭೆಟಿ ನೀಡುತ್ತಾರೆ ಹಾಗೂ ರಾಮ ನವಮಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Byakudan2009

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ರಾಮ ಮಂಟಪ ಹಾಗೂ ರಾಮೇಶ್ವರ ದೇವಾಲಯ : ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪ್ರಮುಖ ಗುರುತರವಾದ ದೇವಾಲಯ ರಾಮೇಶ್ವರ ದೇವಾಲಯ. ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯರೂಪದಲ್ಲಿ ಬರಲಾಗಿ ಅದನ್ನು ಕಂಡು ಸೀತೆಯು ಆ ಜಿಂಕೆಯು ತನಗೆ ಬೇಕೆಂಬ ಆಸೆಯನ್ನು ಪತಿ ಶ್ರೀರಾಮನಿಗೆ ವ್ಯಕ್ತಪಡಿಸಿದಳು.

ಚಿತ್ರಕೃಪೆ: Manjeshpv

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಈ ರೀತಿಯಾಗಿ ಆ ಮಾಯಾ ಜಿಂಕೆಯ ಬೆನ್ನಟ್ಟಿದ ರಾಮನು ಕೊನೆಯದಾಗಿ ತನ್ನ ಬಾಣದಿಂದ ಅದನ್ನು ಸಂಹರಿಸಿದನು. ಒಟ್ಟಾರೆಯಾಗಿ ಈ ಪ್ರಸಂಗ ಜರುಗಿದ್ದು ಈ ಸ್ಥಳದಲ್ಲಿಯೆ ಎಂದು ಕೂಡ ಹೇಳಲಾಗುತ್ತದೆ. ಇದಕ್ಕೆ ಅನುರೂಪವೆಂಬಂತೆ ಮೃಗವಧೆ ಎಂಬ ತಾಣವನ್ನು ಇಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ಪರಶುರಾಮರ ತಪಸ್ಸನ್ನಾಚರಿಸಿದ್ದರೆನ್ನಲಾದ ರಾಮ ಮಂಟಪ ಬಳಿಯಿರುವ ಶಿವಲಿಂಗ ಹಾಗೂ ನಂದಿ ವಿಗ್ರಹಗಳು.

ಚಿತ್ರಕೃಪೆ: Manjeshpv

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇದೆ ತೀರ್ಥಹಳ್ಳಿಯಲ್ಲಿರುವ ಧಾರ್ಮಿಕ ಆಕರ್ಷಣೆಯ ಶ್ರೀ ರಾಮ ಮಂಟಪ.

ಚಿತ್ರಕೃಪೆ: Manjeshpv

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮಸ್ವಾಮಿ ದೇವಾಲಯ : ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯ ಪೂರ್ವದಲ್ಲಿ ಸ್ಥಿತವಿರುವ ಪ್ರಮುಖ ದೇವಾಲಯ ಇದಾಗಿದೆ. ರಾಮ ನವಮಿಯನ್ನು ಅತ್ಯಂತ ಭಕ್ತಿ ಶೃದ್ಧೆಗಳಿಂದ ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ತಿರುವಂಗಾಡ್ ದೇವಾಲಯ ಎಂಬ ಹೆಸನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Primejyothi

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ತ್ರಿಪ್ರಯಾರ್ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಪಟ್ಟಣವಾಗಿದ್ದು ಇದು ಪ್ರಮುಖವಾಗಿ ತನ್ನಲ್ಲಿರುವ ರಾಮನ ದೇವಾಲಯದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದನ್ನು ತ್ರಿಪ್ರಯಾರ್ ದೇವಾಲಯವೆಂದೆ ಕರೆಯಲಾಗುತ್ತದೆ. ಥೀವ್ರಾ ನದಿಯ ತಟದಲ್ಲಿ ನೆಲೆಸಿರುವ ಈ ದೇವಾಲಯಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

ಚಿತ್ರಕೃಪೆ: Kevinsooryan

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ರಾಮನವಮಿಯನ್ನು ಅತಿ ಅದ್ದೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ, ದೇವಸ್ಥಾನದ ಆರಾಧ್ಯ ದೈವ ಶ್ರೀ ರಾಮನು ನಾಲ್ಕು ಕೈಗಳನ್ನು ಹೊಂದಿದ್ದು ಶಂಖ, ಚಕ್ರ, ಬಿಲ್ಲು ಹಾಗು ಹೂಮಾಲೆಗಳನ್ನು ಹಿಡಿ ನಿಂತಿರುವುದನ್ನು ಕಾನಬಹುದು.

ಚಿತ್ರಕೃಪೆ: Challiyan

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ರಾಮಾಪುರಂ ದೇವಾಲಯ : ಕೇರಳದ ಮಲಪ್ಪುರಂನ ಉಪನಗರವಾದ ರಾಮಾಪುರಂನಲ್ಲಿ ರಾಮನಿಗೆ ಮುಡಿಪಾದ ದೇವಾಲಯವಿದ್ದು ಅದರ ಸುತ್ತಮುತ್ತಲಿನ ಎರಡು ಕಿ.ಮೀ ಪರೀಧಿಯಲ್ಲೆ ಲಕ್ಷ್ಮಣ, ಸೀತಾ, ಭರತ ಹಾಗೂ ಶತ್ರುಘ್ನರಿಗೆ ಮುಡಿಪಾದ ದೇವಾಲಯಗಳಿರುವುದು ವಿಶೇಷ.

ಚಿತ್ರಕೃಪೆ: Dvellakat

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಏರಿ ಕಥಾ ರಾಮರ್ ದೇವಾಲಯ : ತಮಿಳುನಾಡಿನ ಕಂಚೀಪುರಂ ಜಿಲ್ಲೆಯ ಮಧುರಾಂತಕಂ ಪಟ್ಟಣದಲ್ಲಿ ರಾಮನಿಗೆ ಮುಡಿಪಾದ ಈ ಪ್ರಸಿದ್ಧ ದೇವಾಲಯವಿದೆ. ಇಲ್ಲಿನ ಮೂಲ ವಿಗ್ರಹವನ್ನು ರಾಮಾನುಜ ಎಂದು ಕರೆಯಲಾಗಿದ್ದು ಈ ದೇವಾಲಯ ಮಧುರಾಂತಕ ಚತುರ್ವೇದಿ ಮಂಗಳಂ, ವೈಕುಂಠ ವರ್ಧನಂ, ತಿರುಮಂತಿರ ತಿರುಪತಿ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Ssriram mt

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ಇನ್ನೊಂದು ವಿಶೇಷವೆಂದರೆ ತಿರುಮಲಿಸೈ ಅಳ್ವಾರ್ ಶೈವಸಮುದಾಯದ ತಮಿಳು ಸಂತರು ಈ ಸ್ಥಳದಲ್ಲಿಯೆ ನಿರ್ವಾಣ ಹೊಂದಿದ್ದರು. ಅಲ್ಲದೆ ವೈಷ್ಣವ ಸಮುದಾಯದ ಶ್ರೀ ರಾಮಾನುಜರಿಗೆ ಪಂಚ ಸಂಸ್ಕಾರ್ ಮಂತ್ರವನ್ನು ಇಲ್ಲಿಯೆ ಉಪದೇಶಿಸಲಾಗಿತ್ತು.

ಚಿತ್ರಕೃಪೆ: Ssriram mt

ಶ್ರೀ ರಾಮನ ದೇವಾಲಯಗಳು:

ಶ್ರೀ ರಾಮನ ದೇವಾಲಯಗಳು:

ರಾಮಸ್ವಾಮಿ ದೇವಾಲಯ : ತಮಿಳುನಾಡಿನ ತಂಜಾವೂರು ಜಿಲ್ಲೆಯ ದೇವಾಲಯಗಳ ಪಟ್ಟಣವೆಂದೆ ಖ್ಯಾತಿಯಾದ ಕುಂಭಕೋಣಂನಲ್ಲಿದೆ, ರಾಮನಿಗೆ ಮುಡಿಪಾದ ಈ ರಾಮಸ್ವಾಮಿ ದೇವಾಲಯ. ರಾಮನವಮಿಯನ್ನು ಬಲು ಸಡಗರದಿಂದ ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X