Search
  • Follow NativePlanet
Share
» »ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು

ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು

By Vijay

ಲ್ಯಾಂಡ್ ಮಾರ್ಕ್ಸ್ ಅಥವಾ ಹೆಗ್ಗುರುತುಗಳೆಂದರೆಯೆ ಹಾಗೆ...ಆ ಸ್ಥಳ ಯಾವುದೆಂದು ಮನದಲ್ಲಿ ಸ್ಪಷ್ಟವಾಗಿ ಬಿಡುತ್ತದೆ. ನಾವು ನಿತ್ಯ ಜೀವನದಲ್ಲಿ ಯಾವುದಾದರೂ ವಿಳಾಸ ಹುಡುಕಿಕೊಂಡು ಹೊರೆಟೆವೆಂದಿಟ್ಟುಕೊಳ್ಳಿ. ಮೊದಲಿಗೆ ಅದಕ್ಕೆ ಸಂಬಂಧಿಸಿದಂತೆ ಲ್ಯಾಂಡ್ ಮಾರ್ಕ್ ಕೇಳಲು ಮರೆಯುವುದಿಲ್ಲ. ಅಲ್ಲದೆ ಯಾರಾದರಿಗೂ ನಿರ್ದಿಷ್ಟ ವಿಳಾಸದ ಕುರಿತು ವಿಚಾರಿಸಿದಾಗ ಲ್ಯಾಂಡ್ ಮಾರ್ಕ್ ಏನು ಸ್ವಾಮಿ? ಎಂಬ ಮರು ಪ್ರಶ್ನೆಯು ಬಂದೆ ಬಿಡುತ್ತದೆ.

ಹೋಟೆಲ್, ಬಸ್ ಮತ್ತು ಫ್ಲೈಟ್ ಬುಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

ಅಂದರೆ ಹೆಗ್ಗುರುತು ಅನ್ನುವುದು ಕೇವಲ ಆ ಸ್ಥಳ ಯಾವುದೆಂದು ಹೇಳುವುದು ಮಾತ್ರವಲ್ಲದೆ ಆ ಸ್ಥಳದ ಸಂಕ್ಷೀಪ್ತ ಪರಿಚಯವನ್ನೂ ಸಹ ಮಾಡಿಸಿಬಿಡುತ್ತದೆ. ಭಾರತ ದೇಶವೂ ಸಹ ಇದಕ್ಕೆ ಹೊರತಾಗಿಲ್ಲ. ಇಲ್ಲಿರುವ ಅನೇಕ ಸ್ಮಾರಕಗಳು ಇತರರಿಗೆ ಅದರಲ್ಲೂ ವಿಶೇಷವಾಗಿ ವಿದೇಶಿಯರಿಗೆ "ಇದು ಭಾರತ" ಅಥವಾ "ಇದು ಭಾರತದಲ್ಲ್ರುವ ಈ ಸ್ಥಳ"ಎಂದು ಪರಿಚಯ ಮಾಡಿಕೊಡುತ್ತದೆ. ಪ್ರಸ್ತು ಲೇಖನದ ಮೂಲಕ ಭಾರತದಲ್ಲಿ ಕಾಣಬಹುದಾದ ಕೆಲ ಪ್ರಮುಖ ಸ್ಥಳಗಳ ಮುಖ್ಯ ಹೆಗ್ಗುರುತುಗಳ ಕುರಿತು ತಿಳಿಯಿರಿ.

ವಿಶೇಷ ಲೇಖನ : ಭಾರತದ ಭವ್ಯ ಸ್ಮಾರಕಗಳು ಹಾಗೂ ಭಾರತದ 10 ಅದ್ಭುತ ಸ್ಥಳಗಳು

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಇಲ್ಲಿ ತಿಳಿಸಲಾಗಿರುವ ಸ್ಥಳಗಳು ಅಥವಾ ಹೆಗ್ಗುರುತುಗಳು ಆಯಾ ಸ್ಥಳ ಹಾಗೂ ನಗರಗಳ ಪ್ರಮುಖ ಅಂಗಳಾಗಿ ಕಂಡುಬರುತ್ತವ.

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ವಿಧಾನ ಸೌಧ, ಬೆಂಗಳೂರು : ಬೆಂಗಳೂರೆಂದರೆ ವಿಧಾನ ಸೌಧ, ವಿಧಾನ ಸೌಧವೆಂದರೆ ಬೆಂಗಳೂರು ಅನ್ನುವಷ್ಟರ ಮಟ್ಟಿಗೆ ಇದು ಇತರರಲ್ಲಿ ಜನಪ್ರೀಯವಾಗಿದೆ. ಇಟ್ಟಿಗೆ ಹಾಗು ಕಲ್ಲುಗಳ ಅದ್ಭುತ ಕಾಮಗಾರಿಯನ್ನು ಹೊಂದಿರುವ, ರಾಜ್ಯಸಚಿವಾಲಯವೂ ಆಗಿರುವ ಬೆಂಗಳೂರಿನ ವಿಧಾನ ಸೌಧವು ಭೇಟಿ ನೀಡಲೇ ಬೇಕಾದ ಒಂದು ಸ್ಥಳ. ಈ ಕಟಡವು 46ಮಿ. ಗಳಷ್ಟು ಎತ್ತರವಾಗಿದ್ದು ಬೆಂಗಳೂರಿನ ಎತ್ತರದ ಕಟ್ಟಡಗಳ ಪೈಕಿ ಇದೂ ಸಹ ಒಂದಾಗಿದೆ. ವಿಶೇಷವೆಂದರೆ ಇದು ದ್ರಾವಿಡಿಯನ್ ಮತ್ತು ಆಧುನಿಕ ಶೈಲಿಯ ಕ್ರೀಯಾತ್ಮಕ ಮಿಶ್ರಣವಾಗಿದ್ದು, ಸಂದರ್ಶಕರಿಗೆ ನೀರಾಸೆಯನ್ನುಂಟು ಮಾಡುವುದಿಲ್ಲ. ಇದನ್ನು ಎಲ್ಲ ದಿಕ್ಕಿನಿಂದಲೂ ಕೂಡ ಸರಳವಾಗಿ ಪ್ರವೇಶಿಸಬಹುದು. ಸಾರ್ವಜನಿಕ ರಜಾ ದಿನಗಳು ಮತ್ತು ಪ್ರತಿ ಭಾನುವಾರ ಸಾಯಂಕಾಲದಂದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಡುವದರಿಂದ ಇನ್ನಷ್ಟು ಸುಂದರವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಇದು ಪ್ರತಿದಿನ ಸಾಯಂಕಾಲ 6 ರಿಂದ 8.30 ರ ವರೆಗೆ ದೀಪಗಳಿಂದ ಬೆಳಗುವದರಿಂದ, ನೀವು ಇದನ್ನು ನೋಡುವುದನ್ನು ತಪ್ಪಿಸಿಕೋಳ್ಳಲೇ ಬಾರದು.ಇದು ಬೆಂಗಳೂರು ನಗರ ಜಂಕ್ಷನನಿಂದ 9 ಕಿ.ಮೀ. ದೂರದಲ್ಲಿದೆ. ಹಚ್ಚಹಸಿರಿನ ಕಬ್ಬನ್ ಪಾರ್ಕಿನ ಹತ್ತಿರದಲ್ಲಿರುವ ವಿಧಾನ ಸೌಧವು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದ್ದು, ಕ್ರೀಯಾತ್ಮಕ ವ್ಯಕ್ತಿಗಳು ಮಧುರತೆಯಿಂದ ದಿನ ಕಳೆಯಲು ಅತ್ಯಂತ ಸೂಕ್ತವಾಗಿದೆ.

ಚಿತ್ರಕೃಪೆ: Börkur Sigurbjörnsson

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಚೆನ್ನೈ ಕೇಂದ್ರ ರೈಲು ನಿಲ್ದಾಣ, ಚೆನ್ನೈ : ದಕ್ಷಿಣ ಭಾರತದ ಪ್ರಮುಖ ರೈಲು ನಿಲ್ದಾಣವಾಗಿರುವ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಕಟ್ಟಡವು ಚೆನ್ನೈನ ಪ್ರಮುಖ ಹೆಗ್ಗುರುತಾಗಿದೆ. ಸಾಕಷ್ಟು ಸಂಖ್ಯೆಯ ತಮಿಳು ಚಿತ್ರಗಳು ಈ ಕಟ್ಟಡದಲ್ಲಿ ಚಿತ್ರೀಕರಣಗೊಂಡಿವೆ. ಕೇವಲ ಕಟ್ಟಡವಲ್ಲದೆ ಈ ರೈಲು ನಿಲ್ದಾಣವು ದಕ್ಷಿಣ ಭಾರತದ ಸರ್ವ ಸ್ಥಳಗಳಿಗೆ ತಲುಪಲು ಅನುಕೂಲಕರವಾಗಿದ್ದು ಭಾರತದಾದ್ಯಂತ ಸಂಚರಿಸಲು ವಿವಿಧ ರೈಲು ಸೇವೆಗಳು ಇಲ್ಲಿ ದೊರೆಯುತ್ತವೆ. ಗೋಥಿಕ್ ಹಾಗೂ ರೋಮನ್ಸ್ಕ್ಯೂ ವಾಸ್ತು ಶೈಲಿಯ ಸುಂದರ ಮಿಶ್ರಣವಾಗಿರುವ ಈ ಕಟ್ಟಡವು ನಗರದ ಪಾರಂಪರಿಕ ಕಟ್ಟಡ ಎಂದು ಘೋಷಿಸಲ್ಪಟ್ಟಿದೆ.

ಚಿತ್ರಕೃಪೆ: jamal haider

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಹಿನ್ನೀರು ಹಾಗೂ ದೋಣಿ ಮನೆ : ಶುಭ್ರ ಪರಿಸರ, ಪಕ್ಷಿ ಕುಲಗಳ ಲವಲವಿಕೆ, ಹಚ್ಚಹಸಿರಿನ ಹಾಗೂ ತಾಜಾ ವಾತಾವರಣ, ಸುತ್ತಲೂ ಜಲರಾಶಿ ಅದರ ಮೇಲೆ ಹಾಯಾದ ದೋಣಿ ಮನೆಗಳು ಇದನ್ನು ಕೇಳಿದಾಗ ಮನದಲ್ಲಿ ಎಲ್ಲಿಲ್ಲದ ಆನಂದ ಉಂಟಾಗಿ ಒಂದೊಮ್ಮೆ ಇಂತಹ ಪ್ರವಾಸ ಮಾಡಲೇಬೇಕೆಂದು ಮನ ಚಡಪಡಿಸುತ್ತದಲ್ಲವೆ? ಹಾಗಾದರೆ "ದೇವರ ಸ್ವಂತ ನಾಡು" ಎಂಬ ಪಟ್ಟ ಹೊತ್ತ ಕೇರಳ ರಾಜ್ಯಕ್ಕೆ ಪ್ರವಾಸ ಹೊರಡಿ. ಮೇಲೆ ಹೇಳಿದ ಹಾಗೆ ಈ ರಾಜ್ಯದ ಪ್ರಮುಖ ಹೆಗ್ಗುರುತು ಇಲ್ಲಿರುವ ಹಿನ್ನೀರು ಹಾಗೂ ದೋಣಿ ಮನೆಗಳು.

ಚಿತ್ರಕೃಪೆ:Jean-Pierre Dalbéra

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಅಜಂತಾ ಮತ್ತು ಎಲ್ಲೋರಾ ಗುಹೆಗಳು : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯು ಪ್ರಮುಖ ಹೆಗ್ಗುರುತಾಗಿ ಅಜಂತಾ ಹಾಗೂ ಎಲ್ಲೋರಾ ಗುಹೆಗಳು ಸುಪ್ರಸಿದ್ಧವಾಗಿವೆ. ಕೇವಲ ಭಾರತದಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಸಹ ಕಲ್ಲಿನಲ್ಲಿ ಕಡೆಯಲಾದ ಈ ಐತಿಹಾಸಿಕ ಪ್ರಮುಖ ತಾಣಕ್ಕೆ ಭೇಟಿ ನೀಡುತ್ತಾರೆ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ಗುಹಾ ರಚನೆಗಳು, ಬೌದ್ಧ ಧರ್ಮದ ವರ್ಣ ಚಿತ್ರಗಳು, ಜೈನ ಧರ್ಮ ಹಾಗೂ ಹಿಂದೂ ಧರ್ಮಗಳ ಸಂಸ್ಕೃತಿಗಳನ್ನು ಅನಾವರಣಗೊಳಿಸುತ್ತವೆ. ಎಲ್ಲೋರಾ ಗುಹೆಗಳು ಔರಂಗಾಬಾದ್ ಪಟ್ಟಣದಿಂದ 30 ಕಿ.ಮೀ ಗಳಷ್ಟು ದೂರದಲ್ಲಿದೆ. ಚಿತದಲ್ಲಿರುವುದು ಅಜಂತಾ ಗುಹೆಗಳು.

ಚಿತ್ರಕೃಪೆ: Pebble101

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಗೇಟ್ ವೇ ಆಫ್ ಇಂಡಿಯಾ : ಸುಮಾರು ಎಂಟಕ್ಕಿಂತ ಹೆಚ್ಚು ಕಥೆಗಳನ್ನು ತನ್ನ ಸುತ್ತ ಹೊಂದಿರುವ, ಮುಂಬೈನಲ್ಲಿರುವ ಭಾರತದ ಗೇಟ್ ವೇ ಅಥವಾ ದ್ವಾರವು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಹಿಂದೂ ಹಾಗೂ ಮುಸ್ಲಿಂ, ಈ ಎರಡೂ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ದ್ವಾರ, 1911 ರಲ್ಲಿ ಬ್ರಿಟೀಷ್ ಆಡಳಿತವಿದ್ದಾಗ ಇಂಗ್ಲೆಂಡಿನಿಂದ ಭಾರತಕ್ಕಾಗಮಿಸಿದ ಐದನೆಯ ಕಿಂಗ್ ಜಾರ್ಜ್ ಹಾಗೂ ರಾಣಿ ಮೇರಿಯ ಗೌರವಾರ್ಥವಾಗಿ ಇದನ್ನು ಕಟ್ಟಲಾಯಿತು. ಮುಂಬೈಗೆ ಪ್ರವಾಸಕ್ಕೆ ಬಂದರೆ, ಇಲ್ಲಿಗೆ ಭೇಟಿ ನೀಡಿ ನಿಮ್ಮ ಒಂದಿಷ್ಟು ಸಮಯವನ್ನು ಇಲ್ಲಿ ಕಳೆಯದಿದ್ದರೆ ನಿಮ್ಮ ಮುಂಬೈ ಪ್ರಯಾಣ ಅಪೂರ್ಣವಾದಂತೆಯೇ ಸರಿ! ಇದನ್ನು ಒಮ್ಮೊಮ್ಮೆ ಮುಂಬೈನ ತಾಜ್ ಮಹಲ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Rhaessner

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಬೃಹದೇಶ್ವರ ದೇವಸ್ಥಾನ : ತಮಿಳುನಾಡು ರಾಜ್ಯದ ತಂಜಾವೂರಿನ ಹೆಗ್ಗುರುತು ಪ್ರಖ್ಯಾತ ಬೃಹದೇಶ್ವರ ದೇವಸ್ಥಾನ. ಚೋಳ ಸಾಮ್ರಾಜ್ಯದ ದೊರೆ ಒಂದನೇಯ ರಾಜ ರಾಜ ಚೋಳನಿಂದ 1010 ರಲ್ಲಿ ನಿರ್ಮಿಸಲಾದ ಈ ದೇವಾಲಯ 2010 ಕ್ಕೆ ತನ್ನ ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದೆ. ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ.

ಚಿತ್ರಕೃಪೆ: vishwaant avk

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಮೀನಾಕ್ಷಿ ಅಮ್ಮನವರ ದೇವಸ್ಥಾನ : ತಮಿಳುನಾಡಿನ ಮದುರೈ ನಗರವು ಎಂದೂ ನಿದ್ರಿಸಲಾರದ ನಗರ ಅಡ್ಡ ನಾಮವನ್ನೂ ಸಹ ಹೊಂದಿದೆ. ಈ ನಗರದ ಪ್ರಮುಖ ಹೆಗ್ಗುರುತಾಗಿದೆ ಇಲ್ಲಿರುವ ಪ್ರಖ್ಯಾತ ಮೀನಾಕ್ಷಿ ಅಮ್ಮನವರ ದೇವಸ್ಥಾನ. ಮದುರೈ ಮೀನಾಕ್ಷಿ ದೇವಸ್ಥಾನವು ಪಟ್ಟಣದ ಪ್ರಮುಖ ಹೆಗ್ಗುರುತಾಗಿದ್ದು, ಮೀನಾಕ್ಷಿ ಎಂದರೆ ಶಿವನ ಪತ್ನಿ ಪಾರ್ವತಿ ದೇವಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಾಗಿದೆ.

ಚಿತ್ರಕೃಪೆ: Surajram

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಪಂಬನ್ ಸೇತುವೆ : ತಮಿಳುನಾಡಿನ ರಾಮೇಶ್ವರಂ ಪುಣ್ಯ ಕ್ಷೇತ್ರದ ಪ್ರಮುಖ ಹೆಗ್ಗುರುತಾಗಿದೆ. ಪಂಬನ್ ಸೇತುವೆ. ಅನ್ನೈ ಇಂದಿರಾ ಗಾಂಧಿ ರಸ್ತೆ ಸೇತುವೆ, ಪಂಬನ್ ಸೇತುವೆಗೆ ನೀಡಿದ ಅಧಿಕೃತ ಹೆಸರು. ಈ ಸೇತುವೆಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಬ್ರಿಡ್ಜ್ ಆಗಿದೆ. ಈ ಸೇತುವೆ ರಾಮೇಶ್ವರಂ ಅನ್ನು ಭಾರತ ದೇಶದ ಮಹಾಭೂಮಿಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆಯು ವಿಶಿಷ್ಟವಾಗಿದ್ದು ಸಮುದ್ರದ ಮೇಲೆ ನಿರ್ಮಾಣ ಮಾಡಲಾಗಿರುವ ಈ ರೀತಿಯ ಸೇತುವೆಗಳಲ್ಲಿ ಮೊದಲನೆಯದಾಗಿದೆ. ಇದು 2.3 ಕಿ. ಮೀ ಉದ್ದವನ್ನು ಹೊಂದಿರುವ ದೇಶದ ಎರಡನೇ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.

ಚಿತ್ರಕೃಪೆ: Ashwin Kumar

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಗೋಲ ಗುಮ್ಮಟ, ವಿಜಯಪುರ (ಹಿಂದಿನ ಬಿಜಾಪುರ) : ಬಿಜಾಪುರಿನ ವಿಶ್ವ ಪ್ರಖ್ಯಾತ ಹೆಗ್ಗುರುತಾಗಿದೆ ಈ ಭವ್ಯ ಬೃಹತ್ ಸ್ಮಾರಕ. 1659 ರಲ್ಲಿ ಮೊಹಮ್ಮದ್ ಆದಿಲ್ ಶಾಹ್ ಹಾಗು ಕುಟುಂಬದವರಿಂದ ನಿರ್ಮಿಸಲ್ಪಟ್ಟ ಈ ಅದ್ಭುತ ರಚನೆಯು ಅರ್ಧ ಗೋಲಾಕಾರದ ಬೃಹತ್ ಗುಮ್ಮಟವನ್ನು ಹೊಂದಿದ್ದು, ಜಗತ್ತಿನಲ್ಲೆ ಎರಡನೇಯ ದೊಡ್ಡ ಖಂಬಗಳ ಆಧಾರವಿಲ್ಲದ ಗುಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲನೆಯದು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್. ಈ ರಚನೆಯು ಎಷ್ಟೊಂದು ಅದ್ಭುತವಾಗಿದೆಯೆಂದರೆ ಸುಮಾರು 38 ಮೀ ಗಳಷ್ಟು ದೂರದಲ್ಲೂ ಕೂಡ ಒಂದು ಸೂಜಿಯು ಬಿದ್ದ ಸಪ್ಪಳವನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ ಇಲ್ಲಿನ ವ್ಹಿಸ್ಪರಿಂಗ್ ಗ್ಯಾಲರಿಯಲ್ಲಿ. ಅಲ್ಲದೆ ಒಮ್ಮೆ ಚಪ್ಪಾಳೆಯನ್ನು ಹೊಡೆದರೆ ಹತ್ತು ಬಾರಿ ಅದು ಪ್ರತಿಧನಿಸುತ್ತದೆ.

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಜೋಗ ಜಲಪಾತ, ಶಿವಮೊಗ್ಗ : ಕರ್ನಾಟಕದ ಮಲೆನಾಡು ಭಾಗದ ಶಿವಮೊಗ್ಗ ಜಿಲ್ಲೆಯು ತನ್ನಲ್ಲಿರುವ ಸುಂದರ ಪ್ರವಾಸಿ ಆಕರ್ಷಣೆಗಳಿಂದ ಸದಾ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಜಿಲ್ಲೆಯ ಪ್ರಮುಖ ಹೆಗ್ಗುರುತೆಂದರೆ ಜೋಗ ಜಲಪಾತ. ಭಾರತದ ಅತಿ ಎತ್ತರದ ಜಲಪಾತಗಳ ಪೈಕಿ ಈ ಜಲಪಾತವು ಜಗತ್ತಿನ ಎರಡನೇಯ ಅತಿ ಎತ್ತರದ ಧುಮುಕುವ (ಪ್ಲಂಜ್) ಜಲಪಾತವಾಗಿದೆ.

ಚಿತ್ರಕೃಪೆ: Vmjmalali

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ತಾಜ್ ಮಹಲ್, ಆಗ್ರಾ : ಜಗತ್ತಿನ ಏಳು ವಿಸ್ಮಯಗಳ ಪೈಕಿ ಒಂದಾಗಿರುವ ತಾಜ್ ಮಹಲ್ ಆಗ್ರಾ ಪಟ್ಟಣದ ಹೆಗ್ಗುರುತಾಗಿರುವುದಲ್ಲದೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತ ದೇಶದ ಹೆಗ್ಗುರುತೂ ಸಹ ಹೌದು.

ಚಿತ್ರಕೃಪೆ: TausP.

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಇಂಡಿಯಾ ಗೇಟ್, ದೆಹಲಿ : ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು, ಪ್ಯಾರಿಸ್‌ನ ಆರ್ಕ್- ದೇ- ಥ್ರೋಂಫ್‌ಗಾಗಿ ನಿರ್ಮಿಸಲಾಗಿತ್ತು. ಈ ಸ್ಮಾರಕವನ್ನು ಅಸಲಿಯಾಗಿ ಆಲ್‌ ಇಂಡಿಯಾ ವಾರ್‌ ಮೆಮೊರಿಯಲ್‌ ಕೊಮೆಮೊರೇಟ್‌ ಎನ್ನಲಾಗಿದೆ. ಸುಮಾರು 70,000 ಮಂದಿ ಬ್ರಿಟಿಷ್‌ ಸೈನಿಕರು 1919 ರಲ್ಲಿ ನಡೆದ ಮೂರನೇ ಆಗ್ಲೋ- ಆಫ್ಗನ್‌ ಯುದ್ಧ ಹಾಗೂ ಮೊದಲ ವಿಶ್ವ ಮಹಾಯುದ್ಧದಲ್ಲಿ ಮಡಿದಿದ್ದರು. ಅವರ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Bijoy Mohan

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ದಾಲ್ ಸರೋವರ, ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ದಾಲ್ ಸರೋವರ ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದ ಸರೋವರವಾಗಿದೆ. ಇಲ್ಲಿ ಕಂಡುಬರುವ ದೋಣಿಗಳು ಹಾಗೂ ದೋಣಿ ಮನೆಗಳನ್ನು ಶಿಕಾರಾ ಎಂದು ಕರೆಯಲಾಗುತ್ತದೆ. ಈ ಶಿಕಾರಾಗಳು ಪ್ರವಾಸೋದ್ಯಮದ ದೃಷ್ಟಿಯಿಂದ ತಮ್ಮದೆ ಆದ ವಿಶಿಷ್ಟ ಕೊಡುಗೆಯನ್ನು ಕರುಣಿಸಿವೆ. ಇಂತಹ ಶಿಕಾರಾಗಳಲ್ಲಿ ಹಾಯಾಗಿ ವಿಹರಿಸುತ್ತ ತಾಜಾ ಹಾಗೂ ಕಲ್ಮಶರಹಿತ ಪರಿಸರದ ಆನಂದವನ್ನು ಭೋಗಿಸುವುದಕ್ಕೆಂದೆ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Basharat Alam Shah

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಅಂಬರ್ ಕೋಟೆ, ಜೈಪುರ : ರಾಜಸ್ಥಾನ ರಾಜ್ಯದ ಜೈಪುರದ ಪ್ರಮುಖ ಹೆಗ್ಗುರುತಾಗಿರುವ ಅಂಬರ್ ಕೋಟೆಯು ರಾಜ ಮಾನ್‌ ಸಿಂಗ್‌, ಮಿರ್ಝಾ ರಾಜಾ ಜೈ ಸಿಂಗ್‌ ಮತ್ತು ಸವಾಯಿ ಜೈ ಸಿಂಗ್‌ರಿಂದ ನಿರ್ಮಿಸಲ್ಪಟ್ಟಿದೆ. ಈ ಕಟ್ಟಡದ ನಿರ್ಮಾಣಕ್ಕೆ ಸುಮಾರು 200 ವರ್ಷಗಳು ತಗುಲಿದೆ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಕೋಟೆಯು ಮೂಥಾ ಕೆರೆಯ ದಡದಲ್ಲಿದ್ದು, ಪೆವಿಲಿಯನ್‌ಗಳು, ಹಾಲ್‌ಗಳು, ದೇವಸ್ಥಾನಗಳು ಮತ್ತು ಉದ್ಯಾನಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Fulvio Giovanola

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಹೌರಾ ಸೇತುವೆ, ಕೊಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಪಟ್ಟಣವಾದ ಕೊಲ್ಕತ್ತಾ ನಗರದ ಪ್ರಮುಖ ಹೆಗ್ಗುರುತಾಗಿದೆ ಹೌರಾ ಸೇತುವೆ. ಹೌರಾ ಬ್ರಿಜ್ ತನ್ನ ಮನಸೂರೆಗೊಳ್ಳುವ ಸೌಂದರ್ಯದಿಂದ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಇದು ಹೌರಾ ಹಾಗೂ ಕೋಲ್ಕತ್ತಾ ಸಂಪಕಿಸುತ್ತದೆ ಹಾಗೂ ಇದನ್ನು ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಚಿತ್ರಕೃಪೆ: Manuel Menal

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಸುವರ್ಣ ಮಂದಿರ, ಅಮೃತಸರ : ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. 19ನೇ ಶತಮಾನದ ಪ್ರಾರಂಭದಲ್ಲಿ ಮಹಾರಾಜ ರಂಜಿತ್ ಸಿಂಗ್ ಮೇಲಿನ ಅಂತಸ್ತುಗಳನ್ನು 400 ಕೆಜಿ ಬಂಗಾರದಿಂದ ಅಲಂಕರಿಸಿದ. ಅದಕ್ಕಾಗಿ ಈ ಮಂದಿರವನ್ನು ಗೋಲ್ಡನ್ ಟೆಂಪಲ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Roshan Travel Photography

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಮೈಸೂರು ಅರಮನೆ, ಮೈಸೂರು : ನಗರದ ಅತಿ ಪ್ರತಿಷ್ಠಿತ ಹೆಗ್ಗುರುತು ಇದಾಗಿದೆ. ನಗರದ ಕೇಂದ್ರಭಾಗದಲ್ಲಿರುವ ಈ ಭವ್ಯ ಅರಮನೆಯು ಮೈಸೂರು ಸಿಟಿ ರೈಲು ಜಂಕ್ಷನ್ ನಿಂದ ಕೇವಲ 2 ಕಿ.ಮೀ ದೂರದಲ್ಲಿದ್ದು ಐರ್‌‌‌‌‌‌‌ವಿನ್ ರಸ್ತೆ ನಂತರ ಸಯ್ಯಾಜಿ ರಾವ್ ರಸ್ತೆಯ ಮುಖಾಂತರ ಇದನ್ನು ಸುಲಭವಾಗಿ ತಲುಪಬಹುದು. ಈ ಅರಮನೆಯು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ರ ವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ. ಅರಮನೆಯ ಭೇಟಿ ಸಂತೃಪ್ತತೆಯನ್ನು ತರಬೇಕೆಂದರೆ ಕನಿಷ್ಠ ಎರಡು ಘಂಟೆಯನ್ನಾದರೂ ಇದಕ್ಕೆ ಮೀಸಲಿಡಬೇಕು. ಇದರ ಆವರಣದಲ್ಲಿ ಹಲವಾರು ದೇವಾಲಯಗಳು, ಉದ್ಯಾನ, ಆನೆ ಸವಾರಿ ಎಲ್ಲವೂ ಲಭ್ಯ. ಇವುಗಳನ್ನು ದಿನದಲ್ಲಿ ಅನುಭವಿಸಬಹುದಾದರೆ ರಾತ್ರಿಯ ವೇಳೆಯಲ್ಲಿ ಹೊರಗಿನಿಂದ ಅರಮನೆಯು ಸುಸಜ್ಜಿತವಾಗಿ ಪ್ರಕಾಶಮಾನವಾಗಿ ಬೆಳುಗುತ್ತಿರುವುದನ್ನು ಪ್ರತಿ ಭಾನುವಾರ ರಾತ್ರಿ 7 ರಿಂದ 8 ಘಂಟೆಯವರೆಗೆ ವೀಕ್ಷಿಸಬಹುದು.

ಚಿತ್ರಕೃಪೆ: Aastha lall

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಲೇಕ್ ಪ್ಯಾಲೇಸ್, ಉದೈಪುರ : ಲೇಕ್ ಪ್ಯಾಲೇಸ್‌ ಇರುವುದು ಪಿಚೋಲಾ ಕೆರೆಯ ಮಧ್ಯೆ ಇರುವ ಜಗ್‌ ನಿವಾಸ ದ್ವೀಪದಲ್ಲಿ. ಮಹಾರಾಣ ಜಗತ್‌ ಸಿಂಗ್‌ ಈ ಅರಮನೆಯನ್ನು 1743ರಲ್ಲಿ ನಿರ್ಮಿಸಿದರು. ಸದ್ಯ ಈ ಅರಮನೆಯನ್ನು ಫೈವ್‌ ಸ್ಟಾರ್ ಹೊಟೆಲ್‌ ಆಗಿ ಪರಿವರ್ತಿಸಲಾಗಿದೆ. ಈ ಕಟ್ಟಡ ವಾಸ್ತುಶಿಲ್ಪ ಶೈಲಿಯು ಅತ್ಯಂತ ಸುಂದರವಾಗಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಅರಮನೆಗಳಲ್ಲಿ ಇದೂ ಒಂದು. ಸುಂದರವಾಗಿ ನಿರ್ಮಿಸಿದ ಕಂಬಗಳು, ಅಂಕಣಗಳನ್ನು ಹೊಂದಿರುವ ವೆರಾಂಡಾ, ಉದ್ಯಾನಗಳು ಮತ್ತು ಕಾರಂಜಿಗಳು ಈ ಅರಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿದೆ.

ಚಿತ್ರಕೃಪೆ: Arnie Papp

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಖುಜುರಾಹೊ, ಮಧ್ಯ ಪ್ರದೇಶ : ಖಜುರಾಹೊದ ಕಲೆ ಮತ್ತು ಶಿಲ್ಪಗಳು ಜೀವನೋತ್ಸಹದ ಧ್ಯೋತಕಗಳಾಗಿ ನಿಂತಿವೆ. ಇಲ್ಲಿನ ಪ್ರತಿ ದೇಗುಲಗಳಲ್ಲಿ ಹೊರಹೊಮ್ಮಿರುವ ಭವ್ಯ ವಾಸ್ತುಶಿಲ್ಪವು, ಮಾನವನ ಜೀವನ ಮತ್ತು ಸೃಜನಶೀಲತೆ ಎರಡನ್ನು ಸೇರಿಸಿ ಸೃಷ್ಟಿಸಿರುವ ಒಂದು ಅಪೂರ್ವ ಭಾವಗೀತೆಯಂತಿದೆ. ಖಜುರಾಹೊದಲ್ಲಿರುವ ದೇವಾಲಯಗಳಲ್ಲಿ ಹಲವು ದೇವಾಲಯಗಳು ಹಿಂದೂ ದೇವರುಗಳಿಗೆ ಸಮರ್ಪಿಸಲ್ಪಟ್ಟಿದ್ದರು ಸಹ, ಶೃಂಗಾರವನ್ನು ಅಭಿವ್ಯಕ್ತಿಪಡಿಸುವ ಶಿಲ್ಪಗಳಿಗೆ ಹೆಚ್ಚು ಖ್ಯಾತಿ ಪಡೆದಿದೆ. ಈ ಎಲ್ಲಾ ಕಾರಣಗಳಿಗಾಗಿ ಇದನ್ನು ಭಾರತದ ಏಳು ಅದ್ಭುತಗಳಲ್ಲಿ ಒಂದು ಎಂದು ವರ್ಣಿಸಿರುವುದು ಹೆಚ್ಚು ಸಮಂಜಸವಾಗಿದೆ ಎಂದು ಹೇಳಬಹುದು. [ಖಜುರಾಹೊವಿನ ಮಿಥುನ ಶಿಲ್ಪಕಲೆಗಳು]

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ವೆಂಕಟರಮಣ ದೇವಸ್ಥಾನ, ತಿರುಪತಿ ತಿರುಮಲ : ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಹೈದರಾಬಾದ್ ನಗರದಿಂದ 600 ಕಿ.ಮೀ ದೂರವಿರುವ ಈ ಕ್ಷೇತ್ರವು ಚೆನ್ನೈನಿಂದ 138 ಕಿ.ಮೀ ಹಾಗು ಬೆಂಗಳೂರು ನಗರದಿಂದ 291 ಕಿ.ಮೀ ಗಳಷ್ಟು ಅಂತರದಲ್ಲಿದೆ. ಇದು ಆಂಧ್ರ ಪ್ರದೇಶ ರಾಜ್ಯದ ಹೆಗ್ಗುರುತಾಗಿದೆ.

ಚಿತ್ರಕೃಪೆ: Raji.srinivas

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಗೊಮ್ಮಟೇಶ್ವರ ಪ್ರತಿಮೆ, ಹಾಸನ : ಕರ್ನಾಟಕ ಹಾಸನ ಜಿಲ್ಲೆಯ ಪ್ರಮುಖ ಹೆಗ್ಗುರುತು ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನ ಬೃಹತ್ ಪ್ರತಿಮೆ. ಜೈನ ಧರ್ಮದವರಿಗೆ ಪೂಜ್ಯನಾದ ಗೊಮ್ಮಟನ ಬೃಹತ್ ಏಕ ಶಿಲಾ ಪ್ರತಿಮೆಯು ಶ್ರವಣಬೆಳಗೊಳದಲ್ಲಿದೆ. ಈ ಪ್ರತಿಮೆಯು ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಏಕಶಿಲಾ ಪ್ರತಿಮೆಗಳ ಪೈಕಿ ಒಂದಾಗಿದ್ದು ಸುಮಾರು 58 ಅಡಿಗಳಷ್ಟು ಎತ್ತರವಿದೆ. ಶ್ರವಣ ಬೆಳಗೊಳದಲ್ಲಿರುವ ವಿಂಧ್ಯಗಿರಿ ಎಂಬ ಬೆಟ್ಟದ ಮೇಲೆ ಗೊಮ್ಮಟನ ಈ ಪ್ರತಿಮೆಯನ್ನು ಗ್ರಾನೈಟು ಕಲ್ಲಿನಲ್ಲಿ ಕಡೆಯಲಾಗಿದ್ದು ನೋಡಲು ಆಕರ್ಷಕವಾಗಿದೆ.

ಚಿತ್ರಕೃಪೆ: romana klee

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಹಂಪಿ ಶಿಲ್ಪಕಲೆ, ಬಳ್ಳಾರಿ : ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. 14 ರಿಂದ 16 ನೆಯ ಶತಮಾನದವರೆಗೆ ಕರ್ನಾಟಕವನ್ನಾಳಿದ ವಿಜಯನಗರ ಸಾಮ್ರಾಜ್ಯದ ಅತಿ ವೈಭವಯುತ ರಾಜಧಾನಿಯಾಗಿದ್ದ ಹಂಪಿ ನಗರವು ಪ್ರಖ್ಯಾತ ವಿಟ್ಠಲ ಮಂದಿರ, ವಿರೂಪಾಕ್ಷ ದೇವಾಲಯ, ಹಜಾರ ರಾಮನ ದೇವಾಲಯ, ಸಾಸಿವೆಕಾಳು ಗಣೇಶ, ಪಟ್ಟಾಭಿರಾಮನ ದೇವಾಲಯ, ಕಲ್ಲಿನ ರಥ, ಗಜಶಾಲೆ, ಮೆಟ್ಟಿಲು ಬಾವಿ, ಅಂತಃಪುರ, ಕಮಲದ ಅರಮನೆಗಳಂತಹ ಅತ್ಯಂತ ಕಲಾತ್ಮಕವಾದ ಸ್ಮಾರಕಗಳನ್ನು ಒಳಗೊಂಡಿದೆ. [ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಚಿತ್ರಕೃಪೆ: Dr Murali Mohan Gurram

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಅದ್ದೂರಿ ಕಡಲ ತೀರಗಳು, ಗೋವಾ : ಗೋವಾ ಅಂತೂ ತನ್ನಲ್ಲಿರುವ ಅದ್ಭುತವಾದ ಕಡಲ ತೀರಗಳಿಂದ ಸಾಕಷ್ಟು ಕಂಗೊಳಿಸುತ್ತದೆ ಹಾಗೂ ವಾತಾವರಣದಲ್ಲಿ ಏನೋ ಒಂದು ರೀತಿಯ ಆಯಾಸ್ಕಾಂತೀಯ ಅಲೆಗಳು ರೂಪಗೊಂಡು ಜನರನ್ನು ತಮ್ಮತ್ತ ಆಕರ್ಷಿಸುತ್ತ ತೊಡಗುತ್ತವೆ. ಮೂಲವಾಗಿ ಗೋವಾದ ಸುಂದರ ಕಡಲ ಕಿನಾರೆಗಳಲ್ಲಿ ಜನರು ಆನಂದಮಯವಾದ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. [ಗೋವಾ ಕಡಲ ತೀರಗಳು]

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಭಾರತದ ಕೆಲ ಮುಖ್ಯ ಹೆಗ್ಗುರುತುಗಳು:

ಕಣಿವೆ ಹಾಗೂ ಬೆಟ್ಟ ಗುಡ್ಡಗಳು, ಲಡಾಖ್ : ಇಂಡಸ್‌ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣ ಲಡಾಖ್‌. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜನಪ್ರಿಯ ಹಾಗೂ ಗುರುತಾದ ಪ್ರವಾಸಿ ತಾಣ. ಇದು ಲಡಾಖ್‌ ಎಂಬ ಹೆಸರಿನಿಂದ ಮಾತ್ರವಲ್ಲ, 'ಕೊನೆಯ ಸಂಗ್ರೀಲಾ', 'ಕಿರು ಟಿಬೇಟ್‌', 'ಚಂದ್ರನ ಭೂಮಿ' ಹಾಗೂ 'ಚಂದ್ರನ ತುಂಡು' ಎಂಬಿತ್ಯಾದಿ ಹೆಸರುಗಳಿಂದ ಜನಪ್ರಿಯವಾಗಿದೆ. ಇಲ್ಲಿ ಕಂಡುಬರು ಮೈಜುಮ್ಮೆನಿಸುವಂತಹ ಕಣಿವೆಗಳು, ಕಂದಕಗಳು, ಹಿಮಚ್ಛಾದಿತ ಬೆಟ್ಟ ಪರ್ವತಗಳು ಲಡಾಖ್ ಅನ್ನು ವ್ಯಾಖ್ಯಾನಿಸುವ ಪ್ರಮುಖ ಲಕ್ಷಣಗಳಾಗಿವೆ.

ಚಿತ್ರಕೃಪೆ: Margarita

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X