Search
  • Follow NativePlanet
Share
» »ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

By Vijay

ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಹಾಗೂ ಬಂದರು ನಗರ ಮಂಗಳೂರು. ಅರಬ್ಬಿ ಸಮುದ್ರದ ಜೊತೆ ಜೊತೆಯಾಗಿ ಚಾಚಿರುವ ಮಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲದೆ ಧಾರ್ಮಿಕವಾಗಿ ಭೇಟಿ ನೀಡಬಹುದಾದ ಹಲವಾರು ಪ್ರಮುಖ ದೇವಾಲಯ ತಾಣಗಳಿವೆ.

ಮಂಗಳೂರಿನಲ್ಲಿ ನಿಮ್ಮ ಮನಸೆಳೆವ ಆಕರ್ಷಣೆಗಳು

ಅಂತಹ ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಾಲಯ. ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರವೆ ಕುದ್ರೋಳಿ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಚಿತ್ರಕೃಪೆ: Premkudva

ಕಾರಣಿಕ ಕ್ಷೇತ್ರವೆಂದೇ ಹೆಸರುಗಳಿಸಿರುವ ಕುದ್ರೋಳಿಯಲ್ಲಿ ಸ್ಥಿತವಿರುವ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವು ಕ್ರಾಂತಿಪುರುಷ ಎಂದೆ ಕರೆಯಲಾಗುವ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿದ್ದು ನಗರದಲ್ಲಿರುವ ಪ್ರಮುಖ ದೇವಾಲಯಗಳ ಪೈಕಿ ಒಂದಾಗಿದೆ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ.

ಶತಮಾನಗಳಷ್ಟು ಹಳೆಯದಾದ ಈ ದೇವಾಲಯ ನಿರ್ಮಾಣಕ್ಕೆ ಸಾಕಷ್ಟು ಗಣ್ಯ ಹಾಗೂ ಸಮಾಜಮುಖಿ ವ್ಯಕ್ತಿಗಳ ಬಹಳಷ್ಟು ಪರಿಶ್ರಮವಿದೆ. ಇವರೊಂದಿಗೆ ದೇಗುಲದ ಅಭಿವೃದ್ಧಿಗೆ ದುಡಿದವರು ಸಾಕಷ್ಟು ಮಹನೀಯರುಗಳು ತಮ್ಮ ಕೊಡುಗೆಗಳನ್ನು ನೀಡಿದ್ದು 1908 ರಲ್ಲಿ ದೇವಾಲಯ ನಿರ್ಮಾಣಕ್ಕೆಂದೆ ಟೊಂಕಕಟ್ಟಿ ನಿಂತು ಶ್ರಮಿಸಿದವರಲ್ಲಿ ಕೊರಗಪ್ಪನವರ ಮೊಮ್ಮಗ ಎಚ್.ಎಸ್. ಸಾಯಿರಾಂ ಸಹ ಒಬ್ಬರು.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಚಿತ್ರಕೃಪೆ: Kensplanet

ಸದಾಭಕ್ತರಿಂದ ತುಂಬಿತುಳುಕುವ ಈ ದೇವಾಲಯದ ಕಟ್ಟಡ ಇತ್ತೀಚಿಗಷ್ಟೆ ಭವ್ಯವಾಗಿ ನಿರ್ಮಾಣಗೊಂಡಿದೆ. ದ್ರಾವಿಡ ಶೈಲಿಯ ಈ ದೇವಾಲಯದ ಮುಭಾಗದಲ್ಲಿ ಭವ್ಯವಾದ ರಾಜಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ.

ವಿಶಾಲವಾದ ಪ್ರಾಕಾರವಿರುವ ದೇವಾಲಯದ ಆವರಣದಲ್ಲಿ ಶಿವ ಹಾಗೂ ಗಣಗಳು ಸೇರಿದಂತೆ ದೇವಾನು ದೇವತೆಗಳ ಸುಂದರವಾದ ಶಿಲ್ಪ ಕಲಾಕೃತಿಗಳಿವೆ. ಗರ್ಭಗೃಹದಲ್ಲಿ ಶಿವನನ್ನು ಗೋಕರ್ಣನಾಥೇಶ್ವರನನ್ನಾಗಿ ಪ್ರತಿಷ್ಠಾಪಿಸಲಾಗಿದೆ. ಶಿರದ ಮೇಲೆ ಗಂಗೆ ಹೊತ್ತಿರುವ ಶಿವನನ್ನು ನೋಡಲು ಸಾಕಷ್ಟು ಜನ ಭಕ್ತಾದಿಗಳು ಆಗಮಿಸುತ್ತಾರೆ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಚಿತ್ರಕೃಪೆ: Redtigerxyz

ದೇವಾಲಯದ ಆವರಣದಲ್ಲಿ ಕೇವಲ ಮುಖ್ಯ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲದೆ ಗಣಪತಿ, ಕೃಷ್ಣ ಹಾಗೂ ನಾರಾಯಣ ಗುರುಗಳಿಗೆ ಮುಡಿಪಾದ ಪ್ರತ್ಯೇಕ ಮಂದಿರಗಳಿರುವುದನ್ನು ಕಾಣಬಹುದು. ಹೊರ ಆವರಣದಲ್ಲಿ ಶುದ್ಧ ನೀರಿನ ಕೊಳ, ಹಚ್ಚ ಹಸುರಿನ ಉದ್ಯಾನವನ, ಕೈಲಾಸಗಿರಿ, ಮುಗಿಲಿನತ್ತ ಎತ್ತರ ಎತ್ತರ ಚಿಮ್ಮುವ ಕಾರಂಜಿ, ವಾಚನಾಲಯ ಎಲ್ಲವೂ ಇದೆ.

ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ

ವಿಶೇಷವೆಂದರೆ ಇಲ್ಲಿ ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಕೂರಿಸಿ ಮಾಡುವ ಭವ್ಯ ಮೆರವಣಿಗೆ ವಿಶೇಷ ಪೂಜೆಗಳು ಜನಾಕರ್ಷಣೆಯ ಮುಖ್ಯ ಚಟುವಟಿಕೆಗಳಾಗಿವೆ. ಮಸಿಸೂರಿನ ಹಾಗೆ ಇಂದು ಈ ಉತ್ಸವ ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿದೆ. ಶಿವರಾತ್ರಿಯ ಸಮಯದಲ್ಲಿ ಕೂಡ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಮಂಗಳೂರಿಗಿರುವ ರೈಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X