Search
  • Follow NativePlanet
Share
» »ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

ಚಿತ್ರೀಕರಣಕ್ಕೆಂದೆ ಹೇಳಿ ಮಾಡಿಸಿದ ಅದ್ಭುತ ಸ್ಥಳಗಳು

By Vijay

ಇಂದಿನ ಒತ್ತಡದ ಜೀವನದಲ್ಲಿ ಪ್ರವಾಸ ಎಂಬುದು ಪ್ರಸನ್ನಗೊಳಿಸುವ ಚಟುವಟಿಕೆಯಾದರೆ, ಚಲನಚಿತ್ರಗಳು ಮನರಂಜನೆಗೆ ಹೇಳಿ ಮಾಡಿಸಿದ ಪರಿಹಾರಗಳು. ವಾರವಿಡಿ ಕೆಲಸ ಕಾರ್ಪಣ್ಯಗಳನ್ನು ಮಾಡಿ ಸುಸ್ತಾದ ಮನಸಿಗೆ ವಾರಾಂತ್ಯದಲ್ಲಿ ಚಲನಚಿತ್ರಗಳು ತುಸು ವಿರಾಮ ನೀಡಿ ಮತ್ತೆ ಉತ್ಸಾಹವನ್ನು ತುಂಬುತ್ತದೆ.

ಉಚಿತ ಕೂಪನ್ನುಗಳು : ಗೊಐಬಿಬೊದಿಂದ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂಪಾಯಿ ಕಡಿತ

ಕೆಲವರಿಗೆ ಚಲನಚಿತ್ರಗಳನ್ನು ನೊಡುವುದೇ ಸುಖಮಯ ಚಟುವಟಿಕೆಯಾದರೆ, ಇನ್ನೂ ಕೆಲವರಿಗೆ ಆ ಚಲನಚಿತ್ರ ಎಲ್ಲೇಲ್ಲಿ ಚಿತ್ರೀಕರಣಗೊಂಡಿದೆ ಎಂಬುದರ ಕುರಿತು ಕುತೂಹಲ ಉಂಟಾಗುತ್ತದೆ. ಸಾಕಷ್ಟು ಜನ ಚಲನಚಿತ್ರಗಳಿಂದಲೆ ಅದ್ಭುತವಾದ ಪರಿಸರದ ಹಲವಾರು ಸ್ಥಳಗಳ ಕುರಿತು ತಿಳಿದುಕೊಳ್ಳುತ್ತಾರೆ. ಅಂದರೆ ಚಲನಚಿತ್ರಗಳು ಪ್ರವಾಸೋದ್ಯಮಕ್ಕೂ ಸಹಕಾರಿ. ವಸ್ತಿನಿಷ್ಠವಾಗಿ ಹೇಳಬೇಕೆಂದರೆ ಚಲನಚಿತ್ರಗಳು ಹಾಗೂ ಪ್ರವಾಸೋದ್ಯಮ ಎರಡು ಒಂದಕ್ಕೊಂದು ಸಹಕರಿಸುತ್ತಲೆ ಅಭಿವೃದ್ಧಿ ಹೊಂದಬೇಕು.

ವಿಶೇಷ ಲೇಖನ : ಭಾರತದ ರೋಮಾಂಚಕ ಸ್ಥಳಗಳು

ಇಂದಿನ ಬಹುತೇಕ ಎಲ್ಲ ಭಾಷೆಯ ಚಿತ್ರಗಳು ವಿದೇಶಗಳಲ್ಲಿ ಚಿತ್ರೀಕರಣಗೊಂಡರೂ ಭಾರತದ ಸ್ಥಳಗಳು ಅಂದಚೆಂದಗಳಿಗೇನೂ ಕಮ್ಮಿ ಇಲ್ಲ. ಅಂತೆಯೆ ಭಾರತದ ಹಲವು ಸ್ಥಳಗಳು ಎಲ್ಲ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಸುಂದರ ವಾತಾವರಣ, ಪರಿಸರ ಹೊಂದಿವೆ. ಅಲ್ಲದೆ ವಿದೇಶಗಳಿಗೆ ಹೋಲಿಸಿದಾಗ ಭಾರತದಲ್ಲೆ ಚಿತ್ರೀಕರಣ ಮಾಡಿದಾಗ ತಗಲುವ ಖರ್ಚು ವೆಚ್ಚಗಳೂ ಸಹ ಬಲು ಕಡಿಮೆ. ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿರುವ ನಿರ್ದೇಶಕ, ನಿರ್ಮಾಪಕರ ನೆಚ್ಚಿನ ಕೆಲ ಆ ಪ್ರಮುಖ ಸ್ಥಳಗಳು ಯಾವುವು ಎಂಬುದರ ಕುರಿತು ತಿಳಿಯಿರಿ.

ಉಪಯುಕ್ತ ಕೊಂಡಿಗಳು : ಜೈಪುರ ಹೋಟೆಲುಗಳು ಉದೈಪುರ ಹೋಟೆಲುಗಳು ಕೊಚ್ಚಿ ಹೋಟೆಲುಗಳು

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚೈಲ್ ಅರಮನೆ : ಹಿಮಾಚಲ ಪ್ರದೇಶದ ಸುಂದರ ರಾಜಧಾನಿಯಾದ ಶಿಮ್ಲಾ ನಗರದಿಂದ ಸುಮಾರು 44 ಕಿ.ಮೀ ದೂರದಲ್ಲಿರುವ ಚೈಲ್ ಗಿರಿಧಾಮವು ಒಂದು ಅದ್ಭುತ ವಾತಾವರಣವಿರುವ, ನಯನ ಮನೋಹರ ಪ್ರಕೃತಿ ಸೌಂದರ್ಯವಿರುವ ಸ್ಥಳವಾಗಿದೆ. ಈ ಸ್ಥಳವು ಚಿತ್ರೀಕರಣಕ್ಕೆ ಹೇಳಿಮಾಡಿಸಿದಂತಹ ಸ್ಥಳವಾಗಿದ್ದು ಸಾಕಷ್ಟು ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಅದರಲ್ಲೂ ವಿಶೇಷವಾಗಿ ಇಲ್ಲಿ ಹಿಂದಿನ ಪಟಿಯಾಲಾ ಮಾಹಾರಜರಿಂದ ನಿರ್ಮಿಸಲ್ಪಟ್ಟ ಚೈಲ್ ಅರಮನೆ ಬಲು ನೆಚ್ಚಿನ ಚಿತ್ರೀಕರಣದ ತಾಣವಾಗಿದೆ.

ಚಿತ್ರಕೃಪೆ: Aleksandr Zykov

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಉದೈಪುರ : "ಸರೋವರಗಳ ನಗರ" ಎಮ್ಬ ಬಿರುದನ್ನು ಪಡೆದಿರುವ ರಾಜಸ್ಥಾನ ರಾಜ್ಯದ ಉದೈಪುರ ಪಟ್ಟಣವು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣ. ಬಾಲಿವುಡ್ ನ ತಾರಾ ನಟ ದಿ. ದೇವಾನಂದ್ ಅವರು ಸುಮಾರು 60 ರ ದಶಕದಲ್ಲಿ ಉದೈಪುರಿನ ಸಿಟಿ ಪ್ಯಾಲೇಸ್ ಆವರಣದಲ್ಲಿ ಪ್ರಥಮ ಬಾರಿಗೆ ಗೈಡ್ ಎಂಬ ಯಶಸ್ವಿ ಚಿತ್ರದ ಚಿತ್ರೀಕರಣ ನಡೆಸಿದ ನಂತರ ಕಾಲ ಉರುಳಿದಂತೆ ಉದೈಪುರ ಪಟ್ಟಣವು ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿ ಬೆಳೆಯುತ್ತ ಹೋಯಿತು. ಕೇವಲ ಭಾರತೀಯ ಚಿತ್ರಗಳಲ್ಲದೆ ಹಾಲಿವುಡ್ ಗೂ ಸಹ ಇದು ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: Deepak Gupta

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಜಲ್ ಮಹಲ್ : ರಾಜಸ್ಥಾನವು ಸಾಕಷ್ಟು ಅದ್ಭುತ ಪುರಾತನ ಅರಮನೆ ಕಟ್ಟಡಗಳನ್ನು ಹೊಂದಿರುವ ರಾಜ್ಯವಾಗಿದೆ. ವಿಶೇಷವೆಂದರೆ ಇಂದಿಗೂ ಆ ಅರಮನೆಗಳನ್ನು ಅಚ್ಚು ಕಟ್ಟಾಗಿ ಸಂರಕ್ಷಿಸಲಾಗಿದೆ. ಅಲ್ಲದೆ ಅವುಗಳಲ್ಲಿ ಸಾಕಷ್ಟು ಅರಮನೆಗಳು ಆಧುನಿಕ ಮೆರುಗನ್ನು ಪಡೆದು ಸಾಂಪ್ರದಾಯಿಕ ಶೈಲಿಯ ಪಂಚತಾರಾ ಮೌಲ್ಯದ ಹೋಟೆಲುಗಳಾಗಿ ಮಾರ್ಪಟ್ಟಿವೆ. ಅಂತೆಯೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣಗಳು ನಡೆಯುತ್ತಲೆ ಇರುತ್ತವೆ. ಜೈಪುರದಲ್ಲಿರುವ ಜಲ್ ಮಹಲ್ ಕೂಡ ಚಿತ್ರೀಕರಣಕ್ಕೆ ಪ್ರಸಿದ್ಧಿ ಪಡೆದ ತಾಣವಾಗಿದೆ.

ಚಿತ್ರಕೃಪೆ: wonker

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಉಮೈದ್ ಭವನ : ರಾಜಸ್ಥಾನದ ಜೋಧಪುರದಲ್ಲಿರುವ ಅತ್ಯಂತ ದೊಡ್ಡ ಖಾಸಗಿ ಅರಮನೆಯಾದ ಉಮೈದ್ ಭವನ ಹಲವು ಚಿತ್ರ ನಿರ್ಮಾಪಕರ ಬಹು ನೆಚ್ಚಿನ ತಾಣವಾಗಿದೆ. ಇಂದಿಗೂ ಜೋಧಪುರದ ಅಂದಿನ ಮಾಹಾರಾಜನಾಗಿದ್ದ ಉಮೈದ್ ಸಿಂಗ್ ನ ಕುಲದವರು ಇದರ ಒಡೆತನ ಹೊಂದಿದ್ದು ಅರಮನೆಯ ಕೆಲ ಭಾಗ ಮಾತ್ರ ತಾಜ್ ಹೋಟೆಲ್ ಅವರಿಗೆ ಸೇರಿದೆ. 300 ಕ್ಕೂ ಹೆಚ್ಚು ವೈಭವೋಪೇತ ಕೋಣೆಗಳಿರುವ ಈ ಅರಮನೆಯು ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರ ನಿರ್ಮಿಸುವವರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: BOMBMAN

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಸರಿಸ್ಕಾ ಅರಮನೆ : ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕಾ ಒಂದು ರಕ್ಷಿತ ಹುಲಿ ಮೀಸಲು ಪ್ರದೇಶವಾಗಿದೆ. ಈ ಪ್ರದೇಶದಲ್ಲೆ ನಿರ್ಮಾಣಗೊಂಡಿರುವ ಸರಿಸ್ಕಾ ಅರಮನೆ ನೆಚ್ಚಿನ ಚಿತ್ರೀಕರಣ ತಾಣವಾಗಿದೆ.

ಚಿತ್ರಕೃಪೆ: ptwo

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಲೇಹ್ : ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಹಿಮಾವೃತ ಹಿಮಾಲಯ ಪರ್ವತಗಳು ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಸಾಹಸದಲ್ಲಿ ಮನಸ್ಸು ಹಾಗೂ ಪ್ರೀತಿ ಉಳ್ಳವರು ಚಾರಣದ ಮೂಲಕ ಹಿಮಾಲಯ ವನ್ನು ಏರುತ್ತ ಸೌಂದರ್ಯವನ್ನು ಸವಿಯಬಹುದು. ಅಲ್ಲದೆ ಸಾಕಷ್ಟು ಹಿಂದಿ ಚಿತ್ರ ನಿರ್ದೇಶಕರ ನೆಚ್ಚಿನ ತಾಣವಾಗಿಯೂ ಲೇಹ್ ಅಪಾರ ಖ್ಯಾತಿ ಗಳಿಸಿದೆ. ಲೇಹ್ ನಲ್ಲಿರುವ ಪ್ಯಾಂಗಾಂಗ್ ಸೊ ಕೆರೆ. ಥ್ರೀ ಇಡಿಯಟ್ಸ್ ಚಿತ್ರ ಇಲ್ಲಿ ಚಿತ್ರೀಕರಣಗೊಂಡಿದೆ.

ಚಿತ್ರಕೃಪೆ: shankii

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಲಡಾಖ್ : ಹಿಂದಿ ಚಿತ್ರರಂಗದ ದಿಗ್ಗಜ ನಿರ್ಮಾಪಕ ಹಾಗೂ ನಿರ್ದೇಶಕ ದಿ.ಯಶ್ ಚೋಪ್ರಾರವರ ನೆಚ್ಚಿನ ತಾಣವಾಗಿತ್ತು ಲಡಾಖ್. ಲಡಾಖ್‌, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜನಪ್ರಿಯ ಹಾಗೂ ಗುರುತಾದ ಪ್ರವಾಸಿ ತಾಣ. ಇದು ಲಡಾಖ್‌ ಎಂಬ ಹೆಸರಿನಿಂದ ಮಾತ್ರವಲ್ಲ, 'ಕೊನೆಯ ಸಂಗ್ರೀಲಾ', 'ಕಿರು ಟಿಬೇಟ್‌', 'ಚಂದ್ರನ ಭೂಮಿ' ಹಾಗೂ 'ಚಂದ್ರನ ತುಂಡು' ಎಂಬಿತ್ಯಾದಿ ಹೆಸರುಗಳಿಂದಲೂ ಸಹ ಜನಪ್ರಿಯವಾಗಿದೆ. ಅಲ್ಲದೆ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಪ್ರಕೃತಿ ಸೌಂದರ್ಯದ ಖಜಾನೆಯನ್ನೂ ಸಹ ಇಲ್ಲಿ ಆಸ್ವಾದಿಸಬಹುದು.

ಚಿತ್ರಕೃಪೆ: Margarita

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ತವಾಂಗ್ : ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಮತ್ತೊಂದು ತಾಣವೆಂದರೆ ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಪಟ್ಟಣ. ತವಾಂಗ್, ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ಏಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ (10,000 ಅಡಿಗಳಷ್ಟು) ಎತ್ತರದಲ್ಲಿದ್ದು, ಅಪಾರ ಪ್ರಕೃತಿ ವೈಭವದಿಂದ ಕೂಡಿದೆ. ತವಾಂಗ್ ನಲ್ಲಿ ಸ್ಥಳೀಯವಾಗಿ ಚಿತ್ರೀಕರಿಸಲಾಗುತ್ತಿರುವ ಚಿತ್ರದ ಒಂದು ದೃಶ್ಯ.

ಚಿತ್ರಕೃಪೆ: rajkumar1220

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ದಾರ್ಜೀಲಿಂಗ್ : ಭಾರತದ ಸಿನೆಮಾಗಳಲ್ಲಿ ಈಗಾಗಲೇ ಚಿರಸ್ಥಾಯಿಯಾಗಿರುವ ದಾರ್ಜೀಲಿಂಗ ನ ಬೆಟ್ಟ ಹಾಗೂ ಕಣಿವೆಗಳಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುವಂತಹ ಮಿನಿ ರೈಲು ಸೇವೆಯಾದ ವಿಶ್ವಪ್ರಸಿದ್ಧ ದಾರ್ಜೀಲಿಂಗ ಹಿಮಾಲಯನ್ ರೈಲು ಹಾಲಿವುಡ್ ನಲ್ಲಿಯೂ ಸಹ ತನ್ನ ಸ್ಥಾನ ಪಡೆದುಕೊಂಡಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿರುವ ದಾರ್ಜೀಲಿಂಗ ಗಿರಿಧಾಮವು ಹಿಮದಿಂದ ಆವೃತವಾದ ಶಿಖರಗಳು, ಸಣ್ಣ ಹಿಮಾಲಯ ಅಥವಾ ಮಹಾಭಾರತ ಪರ್ವತ ಶ್ರೇಣಿಯ ನಿಜವಾದ ಸ್ವರ್ಗ. ದಾರ್ಜೀಲಿಂಗ ನಲ್ಲಿನ ಸಮಶೀತೋಷ್ಣ ವಲಯದ ಕಾಡುಗಳಲ್ಲಿರುವ ಸಾಲ್ ಮತ್ತು ಓಕ್ ಮರಗಳನ್ನು ಹೊಂದಿರುವ ಉನ್ನತ ಪರ್ವತ ಪ್ರದೇಶವು ಪ್ರಕೃತಿ ಪ್ರೇಮಿಗಳಿಗೆ ಒಂದು ಅದ್ಭುತ ತಾಣ. ಹವಾಮಾನ ಬದಲಾಗುತ್ತಿದ್ದರೂ ದಾರ್ಜೀಲಿಂಗ ನ ಅರಣ್ಯವು ಯಾವಾಗಲೂ ಹಚ್ಚಹಸಿರಿನಿಂದ ಕಂಗೊಳಿಸುವುದು ದಾರ್ಜೀಲಿಂಗ ನ ಪ್ರವಾಸೋದ್ಯಮಕ್ಕೆ ಮೆರಗು ನೀಡಿದೆ.

ಚಿತ್ರಕೃಪೆ: Ankit Agarwal

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಹೌರಾ ಸೇತುವೆ : ಕೊಲ್ಕತ್ತಾದ ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾದ, ಕೊಲ್ಕತ್ತಾ ನಗರದ ಪ್ರಮುಖ ಹೆಗ್ಗುರುತು ಎಂದೇ ಹೇಳಬಹುದಾದ ಹೌರಾ ಸೇತುವೆಯ ಮೇಲೆ ಸಾಕಷ್ಟು ಹಿಂದಿ ಚಿತ್ರಗಳು ಚಿತ್ರೀಕರಣಗೊಂಡಿದ್ದು ಈಗಲೂ ಚಿತ್ರೀಕರಣಕ್ಕೆ ಸಾಕಷ್ಟು ಬೇಡಿಕೆಯನ್ನು ಹೊಂದಿದೆ ಇ ಅದ್ಭುತ ಸೇತುವೆ.

ಚಿತ್ರಕೃಪೆ: Anirban Biswas

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಭಾರತದ ವಾಯುವ್ಯ ಭಾಗದ ಶಿವಾಲಿಕ್ ತಪ್ಪಲಿನಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢ್ ನಗರ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಇಲ್ಲಿರುವ ಪುರಾತನ ದೇವಾಲಯದಲ್ಲಿರುವ ಹಿಂದೂ ದೇವತೆ ಚಂಡಿಯಿಂದಾಗಿ ನಗರಕ್ಕೆ ಚಂಡೀಗಢ್ ಎನ್ನುವ ಹೆಸರು ಬಂದಿದೆ. ಚಂಡೀಗಢ್ ನಗರ ಅದರ ವಿನ್ಯಾಸ ಮತ್ತು ವಾಸ್ತುಶಿಲ್ಪದಿಂದಾಗಿ ಭಾರತದ ಮೊದಲ ಯೋಜಿತ ನಗರವೆಂದು ಪ್ರಖ್ಯಾತಿ ಪಡೆದುಕೊಂಡಿದೆ. ಅಲ್ಲದೆ ಚಲನಚಿತ್ರಗಳ ಚಿತ್ರೀಕರಣಕ್ಕೂ ಈ ನಗರ ಹೆಸರುವಾಸಿಯಾಗಿದೆ. ಚಂಡೀಗಢದ ಪಿಂಜೋರ್ ಉದ್ಯಾನ.

ಚಿತ್ರಕೃಪೆ: DevashishP

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ. ಈ ಕೋಟೆಯಲ್ಲಿ ಹಲವು ಹಿಂದಿ ಹಾಗೂ ಕನ್ನಡ ಚಿತ್ರಗಳ ಚಿತ್ರೀಕರಣ ಮಾಡಲಾಗಿದೆ. ಕೋಟೆಯ ಪರಿಸರವು ಚಿತ್ರ ನಿರ್ಮಾಣಗಾರರ ನೆಚ್ಚಿಗೆ ಗಳಿಸಿದೆ.

ಚಿತ್ರಕೃಪೆ: Santosh3397

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಆದರೆ, ಒಂದೆ ಸ್ಥಳದಲ್ಲಿ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ ನಿರಾಯಾಸವಾಗಿ ಚಿತ್ರೀಕರಣ ಮಾಡುವುದೆಂದರೆ...ನಿರ್ಮಾಪಕರು ಮಾತ್ರವಲ್ಲ ಚಿತ್ರ ತಂಡದವರು ನಿಟ್ಟುಸಿರು ಬಿಟ್ಟ ಹಾಗಿರುತ್ತದೆ. ಇಂತಹ ಸೌಲಭ್ಯಗಳನ್ನು ಒದಗಿಸುವುದೆ ಫಿಲ್ಮ್ ಸಿಟಿಗಳು. ಇಲ್ಲಿ ಮನೆಗಳಿಂದ ಹಿಡಿದು ಭವನಗಳು, ರಸ್ತೆಗಳಿಂದ ಹಿಡಿದು ನಿಲ್ದಾಣಗಳವರೆಗೂ ಎಲ್ಲವನ್ನು ಅಚ್ಚುಅಕಟ್ಟಾಗಿ ನಿರ್ಮಿಸಲಾಗಿರುತ್ತದೆ. ನಮ್ಮ ದೇಶದಲ್ಲೂ ಇಂತಹ ಫಿಲ್ಮ್ ಸಿಟಿಗಳನ್ನು ಕಾಣಬಹುದು. ಆದರೆ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾತ್ರ ಅಗ್ರ ಗಣ್ಯ ಸ್ಥಾನದಲ್ಲಿ ನಿಂತಿದೆ. ಆಂಧ್ರದ ಹೈದರಾಬಾದ್ ನಲ್ಲಿರುವ ಹಯಾತ್ ನಗರದ ಬಳಿ ಈ ಭವ್ಯ ಚಿತ್ರ ನಗರವು ನೆಲೆಸಿದೆ.

ಚಿತ್ರಕೃಪೆ: ಚಿತ್ರಕೃಪೆ: Sissssou

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. ಚಿತ್ರೀಕರಣಕ್ಕೂ ಸಹ ಇದು ಹಲವು ಉತ್ತರ ಹಾಗೂ ದಕ್ಷಿಣ ಚಿತ್ರರಂಗಗಳ ನಿರ್ದೇಶಕರ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: Dr Murali Mohan Gurram

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕರ್ನಾಟಕದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣಗಳನ್ನು ಹೆಸರಿಸುವುದಾದರೆ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಕೂರ್ಗ್ ಎಂತಲೂ ಕರೆಯಲ್ಪಡುವ ಕೊಡಗು ಜಿಲ್ಲೆ. ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 240 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಸ್ಥಳವನ್ನು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುಲಭವಾಗಿ ತಲುಪಬಹುದು. ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯು 4,102 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಹರಡಿದ್ದು ಹಲವು ಪ್ರಾಕೃತಿಕವಾಗಿ ಸಂಪದ್ಭರಿತ ಪ್ರವಾಸಿ ಆಕರ್ಷಣೆಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಪ್ರಸ್ತುತ ಇದು ನವದಂಪತಿಗಳ ಮಧುಚಂದ್ರದ ತಾಣವಾಗಿಯೂ ಹೆಸರುವಾಸಿಯಾಗಿದ್ದರೂ ಅದಕ್ಕೆ ಮಾತ್ರ ಸೀಮಿತವಾಗಿಲ್ಲ ಆವಾಗಾವಾಗ ಚಿತ್ರೀಕರಣಗಳೂ ಕೂಡ ನಡೆಯುತ್ತಿರುತ್ತವೆ.

ಚಿತ್ರಕೃಪೆ: Kalidas Pavithran

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಸಾಕಷ್ಟು ಬೇರೆ ಬೇರೆ ಭಾಷೆಗಳ ಚಲನಚಿತ್ರಗಳು ಇದರ ಮನಮೋಹಕತೆಗೆ ತಲೆ ಬಾಗಿ ಇಲ್ಲಿ ಚಿತ್ರೀಕರಣಗೊಂಡಿವೆ. ಶಾಂತ ಪರಿಸರ, ಹಿತಕರವಾದ ವಾತಾವರಣ, ಪರಿಶುದ್ಧವಾದ ಗಾಳಿ, ತಾಜಾ ತನದ ಅನುಭವ ಎಲ್ಲವೂ ಇರುವ ಈ ಗಿರಿಧಾಮ ತಾಣವು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಚಿತ್ರಕೃಪೆ: Venky TV

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ. ಚಿತ್ರೀಕರಣಗಳು ಕೂಡ ಇಲ್ಲಿ ನಡೆಯುತ್ತಿರುತ್ತವೆ.

ಚಿತ್ರಕೃಪೆ: V.v

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿರುವ ಅತ್ತಿರಪಲ್ಲಿ ಚಿತ್ರೀಕರಣಗಳ ಸ್ವರ್ಗವಾಗಿದೆ. ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಾಕಷ್ಟು ಚಿತ್ರಗಳು ಈ ಜಲಪಾತ ತಾಣದಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Thangaraj Kumaravel

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕರ್ನಾಟಕದ ಸಾಂಪ್ರದಾಯಿಕ ರಾಜಧಾನಿ ಮೈಸೂರು ನಗರವೂ ಸಹ ಚಿತ್ರೀಕರಣಗಳಿಗೆ ಹೆಸರುವಾಸಿಯಾದ ಪಟ್ಟಣವಾಗಿದೆ. ಹಲವು ರಾಜ ವೈಭವ ಸ್ಮಾರಕ ರಚನೆಗಳು, ವಿಶ್ವ ವಿಖ್ಯಾತ ಮೈಸೂರು ಅರಮನೆ ಮುಂತಾದವುಗಳು ಚಿತ್ರ ನಿರ್ದೇಶಕರ ಬಲು ನೆಚ್ಚಿನ ತಾಣಗಳಾಗಿವೆ. ಅಂತೆಯೆ ಪ್ರಮುಖವಾಗಿ ಕನ್ನಡ ಸೇರಿದಂತೆ ಇತರೆ ದಕ್ಷಿಣದ ಭಾಷೆಗಳ ಚಿತ್ರಗಳ ಚಿತ್ರೀಕರಣವು ಇಲ್ಲಿ ನಡೆಯುತ್ತಿರುತ್ತದೆ.

ಚಿತ್ರಕೃಪೆ: Mahantesh Sajjan

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕರ್ನಾಟಕ ರಾಜಧಾನಿ ಬೆಂಗಳೂರು ವಿಶ್ವ ಭೂಪಟದಲ್ಲೆ ತನ್ನ ಗುರುತನ್ನು ಮೂಡಿಸಿರುವ ಭಾರತದ ಹೆಮ್ಮೆಯ ಮಾಹಿತಿ ತಂತ್ರಜ್ಞಾನ ನಗರ. ಕನ್ನಡ ಚಿತ್ರರಂಗದ ವಾಣಿಜ್ಯ ಕೇಂದ್ರವೂ ಆಗಿರುವ ಬೆಂಗಳೂರು ಪ್ರಮುಖವಾಗಿ ಕನ್ನಡ ಚಿತ್ರಗಳ ಚತ್ರೀಕರಣದ ಪ್ರಮುಖ ಭಾಗವಾಗಿದೆ. ಕಬ್ಬನ್ ಉದ್ಯಾನ, ಲಾಲ್ ಬಾಗ್, ವಿಧಾನ ಸೌಧ ಹೀಗೆ ಬೆಂಗಳೂರಿಬ್ನ ಹಲವು ಭಾಗಗಳು ಚಿತ್ರೀಕರಣಕ್ಕೆ ನೆಚ್ಚಿನ ತಾಣಗಳಾಗಿವೆ.

ಚಿತ್ರಕೃಪೆ: Ashwin Kumar

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕಾರೈಕುಡಿ : ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು ಭಾಗವಾಗಿದ್ದು, ಒಟ್ಟಾರೆಯಾಗಿ 75 ಗ್ರಾಮಗಳನ್ನು ಹೊಂದಿದೆ. ಅತ್ಯುತ್ತಮವಾದ ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಕರೈಕುಡಿಯು ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಪಕರ ಅಚ್ಚುಮೆಚ್ಚಿನ ತಾಣವು ಹೌದು. ಸಿನಿಮಾ ಆಕರ್ಷಣೆಯ ಜೊತೆಗೆ ಪ್ರವಾಸಿಗರು ಬಾಯಿಯಲ್ಲಿ ನೀರೂರಿಸುವ ಇಲ್ಲಿನ ಆಹಾರ ರುಚಿಗೆ ಕಟ್ಟುಬಿದ್ದು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. "ಚೆಟ್ಟಿನಾಡ್" ಎಂದೆ ಕರೆಯಲ್ಪಡುವ ಇಲ್ಲಿನ ಆಹಾರ ಪದ್ದತಿಯು ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಚೆಟ್ಟಿನಾಡ್ ಅರಮನೆ.

ಚಿತ್ರಕೃಪೆ: Natesh Ramasamy

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಪೊಲ್ಲಾಚಿ : ಪೊಲ್ಲಾಚಿ ನಗರ ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿದೆ. ಕೊಯಮತ್ತೂರ್ ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ ವಾತಾವರಣ ಕೊಡುವುದು ಮಾತ್ರವಲ್ಲ, ಮನಮೋಹಕ ಸೌಂದರ್ಯದ ಖಣಿಯೂ ಹೌದು. ಸಿನಿಮಾ ಮಂದಿಗೂ ಪೊಲ್ಲಾಚಿ ಪ್ರಿಯವಾದ ಸ್ಥಳವಾಗಿದ್ದು ಸುಮಾರು 1500 ಕ್ಕೂ ಹೆಚ್ಚು ಸಿನಿಮಾ ಚಿತ್ರೀಕರಣ ಹಿಂದಿನ ಕೆಲವು ವರ್ಷಗಳಲ್ಲಿ ಇಲ್ಲಿ ನಡೆದಿದೆ.

ಚಿತ್ರಕೃಪೆ: Raghavan Prabhu

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಧನುಷ್ಕೋಡಿ : ರಾಮಾಯಣದ ಹಿನ್ನಿಲೆ ಹೊಂದಿದ್ದು, ರಾಮನ ಹಲವಾರು ದೇವಸ್ಥಾನಗಳನ್ನು ಹೊಂದಿದ್ದು, ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳನ್ನು ಹೊಂದಿದ್ದು, ಪ್ರಸ್ತುತ ಅವೆಲ್ಲವೂ ಪಾಳು ಬಿದ್ದು, ಅಕ್ಷರಶಃ ಸರ್ವನಾಶವಾಗಿ, ಇತಿಹಾಸದ ಪುಟಕ್ಕೆ ಸೇರುತ್ತಿದ್ದ ಗ್ರಾಮವೊಂದು ಇತ್ತೀಚಿನ ಕೆಲ ವರ್ಷಗಳಿಂದ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿ ಪ್ರಯತ್ನ ಪಡುತ್ತಿದೆ. ಆ ಸ್ಥಳ ಇಂದು ಪ್ರವಾಸಿ ಆಕರ್ಷಣೆಯಾಗಿ ಏನಿಲ್ಲವೆಂದರೂ ಪ್ರತಿನಿತ್ಯ 500 ರ ಆಸು ಪಾಸಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಹಾಗೂ ಈ ಸಂಖ್ಯೆಯು ಇನ್ನೂ ಹೆಚ್ಚುವ ಸೂಚನೆಯನ್ನು ನೀಡುತ್ತಿದೆ. ಈ ಸ್ಥಳಕ್ಕೆ ತೆರಳಲು ಅಧಿಕೃತ ಬಸ್ಸುಗಳಾಗಲಿ, ರೈಲಾಗಲಿ ಇಲ್ಲವೆ ಇಲ್ಲ. ಕೇವಲ ಖಾಸಿ ಜೀಪಿನಂತಹ ವಾಹನಗಳನ್ನು ಬಾಡಿಗೆಗೆ ಪಡೆದು ತಲುಪಬೇಕು. ಹೌದು, ಇದೇ ಧನುಷ್ಕೋಡಿ, ತಮಿಳುನಾಡಿನ ರಾಮೇಶ್ವರ ದ್ವೀಪದಲ್ಲಿ ನೆಲೆಸಿರುವ ಒಂದು ಸಣ್ಣ ಹಳ್ಳಿ. ಹಳ್ಳಿಯ ಪೂರ್ವ ಕರಾವಳಿಯ ದ್ವೀಪದ ದಕ್ಷಿಣ ಅತ್ಯಂತ ತುದಿಯಲ್ಲಿದೆ. ಈ ಹಳ್ಳಿಯು ಶ್ರೀಲಂಕಾದ ತಲೈಮನ್ನಾರ್ ನಿಂದ ಕೇವಲ 31 ಕಿ. ಮೀ ಅಂತರದಲ್ಲಿದೆ.

ಚಿತ್ರಕೃಪೆ: Nataraja

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಮದುರೈ : ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮದುರೈ ನಗರವು ಒಂದು ಪ್ರಾಚೀನ ನಗ್ರವಾಗಿದ್ದು ಹಗಲು ರಾತ್ರಿ ಎನ್ನದೆ ನಿರಂತರ ಚಟುವಟಿಕೆಯಿಂದ ಕೂಡಿರುವ ತಾಣ. ಆದ್ದರಿಂದಲೆ ಈ ಕ್ಷೇತ್ರವನ್ನು ಪ್ರೀತಿಯಿಂದ "ನಿದ್ರಿಸಲಾರದ ನಾಡು" ಎಂದು ಕರೆಯುತ್ತಾರೆ. ವೈಗೈ ನದಿ ತೀರದಲ್ಲಿ ಸ್ಥಿತವಿರುವ ಈ ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇಗುಲದಿಂದಾಗಿ ಇದು ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ತಮಿಳು ಚಿತ್ರರಂಗದ ಸಾಕಷ್ಟು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚೆನ್ನೈ : ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ರಾಜ್ಯವಾದ ತಮಿಳುನಾಡಿನ ರಾಜಧಾನಿಯೆ ಚೆನ್ನೈ (ಹಿಂದಿನ ಮದ್ರಾಸ್). ಪ್ರಸ್ತುತ ಚೆನ್ನೈ ದೇಶದ ನಾಲ್ಕು ಪ್ರಮುಖ ಮಹಾನಗರಗಳ ಪೈಕಿ ಒಂದಾಗಿದ್ದು ಅತ್ಯುತ್ತಮ ಎನ್ನಬಹುದಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಆಧುನಿಕ ಉಪಕರಣಗಳ ಉದ್ಯಾನವಿರಬಹುದು ಇಲ್ಲವೆ ಪುರಾತನ ಕಟ್ಟಡಗಳಿರಬಹುದು, ಸಾಂಪ್ರದಾಯಿಕ ಮಾರುಕಟ್ಟೆಗಳಿರಬಹುದು ಇಲ್ಲವೆ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಗಳಿರಬಹುದು ಎಲ್ಲವನ್ನು ಕಾಣಬಹುದು ಈ ಮಹಾನಗರದಲ್ಲಿ. ತಮಿಳು ಚಿತ್ರರಂಗವಾದ ಕಾಲಿವುಡ್ ಗೆ ತವರಾಗಿರುವ ಚೆನ್ನೈ ನಗರ ವಲಯದಲ್ಲಿ ಹಾಗೂ ಸುತ್ತುಮುತ್ತಲು ಹಲವಾರು ಗಮ್ಯವಾದ ಪ್ರವಾಸಿ ಆಕರ್ಷಣೆಗಳಿವೆ.

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಕೊಚ್ಚಿ : ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ ರೂಪುಗೊಂಡಂತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಪೃಕೃತಿ ರಮ್ಯತೆಯೊಂದಿಗೆ, ಔದ್ಯೋಗಿಕ ಹಾಗೂ ವ್ಯಾಪಾರೀ ಕ್ಷೇತ್ರವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ. ಇನ್ನೂ ಮಲಯಾಳಂ ಚಿತ್ರರಂಗದ ಬಹುತೇಕ ಚಿತ್ರಗಳು ಈ ಸುಂದರ ನಗರದಲ್ಲಿ ಚಿತ್ರೀಕರಣಗೊಳ್ಳುತ್ತಲೇ ಇರುತ್ತವೆ.

ಚಿತ್ರಕೃಪೆ: Challiyil Eswaramangalath Pavithran Vipin

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಮುನ್ನಾರ್ : ಪಶ್ಚಿಮ ಘಟ್ಟಗಳ ಮಾಯಾ ಪ್ರಪಂಚದಲ್ಲಿ ಸುಂದರ ಕನ್ಯೆಯಂತೆ ಅವಿತು ಕುಳಿತಿದೆ ಮುನ್ನಾರ್. ಚಿತ್ರಕಾರನೊಬ್ಬ ಪ್ರಕೃತಿಯ ಸುಂದರವಾದ ವರ್ಣಚಿತ್ರವನ್ನು ರಚಿಸಿದಂತೆ ಈ ಪ್ರದೇಶದ ಭೂದೃಶ್ಯಾವಳಿಗಳು ಕಾಣಸಿಗುತ್ತವೆ. ಅಲ್ಲದೆ ಈ ಪ್ರದೇಶದ ವಾತಾವರಣವು ಹಿತಕರವಾಗಿದ್ದು ವರ್ಷದ ಯಾವುದೆ ದಿನದಲ್ಲೂ ಭೇಟಿ ನೀಡಿದಾಗ ಉತ್ತಮ ಪ್ರವಾಸಿ ಅನುಭವವನ್ನು ಇದು ಕರುಣಿಸುತ್ತದೆ. ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1600 ಮೀ. ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳ ಹಳ್ಳಿಯಲ್ಲಿರುವ ಮುನ್ನಾರ್ ಪದದ ಮೂಲ ಅರ್ಥ "ಮೂರು ನದಿಗಳು" ಎಂದಾಗುತ್ತದೆ. ವೈಭವಯುತ ಪ್ರಕೃತಿ ಸೊಬಗಿನೊಂದಿಗೆ 557 ಚ.ಕಿ.ಮೀ ವಿಸ್ತೀರ್ಣದಷ್ಟು ಈ ಪ್ರದೇಶ ಹರಡಿದೆ ಹಾಗೂ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಚಿತ್ರಕೃಪೆ: Bimal K C

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ವಯನಾಡ್ : ವಯನಾಡ್ ಕೇರಳದಲ್ಲಿರುವ ಹನ್ನೆರಡು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳವಾಗಿದೆ. ಈ ಸ್ಥಳವು ಹಚ್ಚ ಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಗೊಂಡಿದೆ. ಅಲ್ಲದೆ ದಕ್ಷಿಣ ಚಿತ್ರರಂಗದ ಹಲವು ನಿರ್ದೇಶಕರ ಅತಿ ನೆಚ್ಚಿನ ತಾಣವಾಗಿ ಕಂಗೊಳಿಸುತ್ತದೆ ವಯನಾಡ್.

ಚಿತ್ರಕೃಪೆ: Nishanth Jois

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಚಿತ್ರೀಕರಣಕ್ಕೆಂದೆ ಪ್ರಸಿದ್ಧವಾದ ಸ್ಥಳಗಳು:

ಬೇಕಲ್ : ಬೆಕಲ್ ಕೋಟೆಯು ಕೇರಳದಲ್ಲಿಯೇ ಅತ್ಯಂತ ದೊಡ್ಡ ಕೋಟೆಯಾಗಿದ್ದು 40 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಈ ಕೋಟೆಯ ಪ್ರಮುಖ ಗುರುತುಗಳೆಂದರೆ, ದಕ್ಷಿಣದಲ್ಲಿನ ಸುರಂಗ, ಸೈನಿಕರಿಗಾಗಿ ಆಹಾರ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕಾಗಿ ವಿಶಾಲವಾದ ಕೋಣೆ/ಸ್ಥಳ ಹಾಗೂ ಶತ್ರುಗಳ ಬರುವಿಕೆಯನ್ನು ಕಂಡುಹಿಡಿಯಲು ಅತ್ಯಂತ ಎತ್ತರದಲ್ಲಿ ಕಟ್ಟಲಾದ ದಿಕ್ಸೂಚಿಯಂತಹ ಟವರ್. ಅಲ್ಲದೆ ಸಾಕಷ್ಟು ಮಲಯಾಳಂ, ಹಿಂದಿ ಹಾಗೂ ತಮಿಳು ಚಿತ್ರಗಳು ಈ ತಾಣದಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Renjith Sasidharan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X