Search
  • Follow NativePlanet
Share
» »ಗೋವಾದಲ್ಲಿರುವ ಕೆಲ ಪ್ರಸಿದ್ಧ ದೇವಾಲಯಗಳು

ಗೋವಾದಲ್ಲಿರುವ ಕೆಲ ಪ್ರಸಿದ್ಧ ದೇವಾಲಯಗಳು

By Vijay

ರಜೆಗಳೆ ಇರಲಿ ಅಥವಾ ಸಾಮಾನ್ಯ ದಿನಗಳೆ ಇರಲಿ ಗೋವಾ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಅತ್ಯದ್ಭುತ ಕಡಲ ತೀರಗಳು, ರಾತ್ರಿಯ ಜಗಮಗಿಸುವ ಔತಣಕೂಟಗಳು, ಪಾನ ಪ್ರೀಯರಿಗೆ ವೈವಿಧ್ಯಮಯ ಮದ್ಯಗಳು, ಜಲಕ್ರೀಡೆಗಳು, ಮೀನು ಖಾದ್ಯಗಳು ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ.

ವಿಶೇಷ ಲೇಖನ : ಗೋವಾದ ಇನ್ನೊಂದು ಮುಖ

ಬಹುಶಃ ಒಂದೊಮ್ಮೆಯಾದರೂ ಯಾರಾದರೊಡನೆ ಗೋವಾದಲ್ಲಿ ದೇವಸ್ಥಾನಗಳು ಎಂದರೆ ಸಾಕು ಒಂದು ಕ್ಷಣ ಅವರು ಅಚ್ಚರಿ ಪಡದೆ ಇರಲಾರರು. ಎಲ್ಲಿಯ ಮೋಜು, ಮಸ್ತಿ, ಎಲ್ಲಿಯ ಧಾರ್ಮಿಕತೆ ಎಂಬ ಸಂಶಯ ಅವರ ಮನದಲ್ಲಿ ಮೂಡಲೂಬಹುದು. ಆದರೆ ನಿಮಗೆ ಗೊತ್ತಿರಬೇಕಾದ ಸಂಗತಿಯೆಂದರೆ ಗೋವಾದಲ್ಲಿಯೂ ಸಹ ಕೆಲವು ವಿಶಿಷ್ಟ ಹಿಂದೂ ದೇವಸ್ಥಾನಗಳಿವೆ ಎಂಬುದು ಹಾಗೂ ಆ ದೇವಸ್ಥಾನಗಳು ಪ್ರವಾಸಿ ದೃಷ್ಟಿಯಿಂದಲೂ ಸಾಕಷ್ಟು ಮಹತ್ವ ಪಡೆದಿವೆ ಎಂಬ ಅಂಶ.

ವಿಶೇಷ ಲೇಖನ : ಗೋವಾದಲ್ಲಿ ನೋಡಲೇಬೇಕಾದ ಕಡಲ ತೀರಗಳು

ಹಾಗಾದರೆ ನೀವು ಗೋವಾಗೇನಾದರೂ ಕುಟುಂಬದೊಡನೆ ಪ್ರವಾಸ ಮಾಡಿದರೆ ಚಿಂತಿಸಬೇಕಾಗಿಲ್ಲ, ಕಡಲ ತೀರಗಳ ಜೊತೆ ಜೊತೆಗೆ ಈ ವಿಶಿಷ್ಟ ದೇವಾಲಯಗಳಿಗೂ ಸಹ ಭೇಟಿ ನೀಡಿ ನಿಮ್ಮ ಕುಟುಂಬದವರಿಗೆ ಸಂತಸ, ಸಂತೃಪ್ತಿ ನೀಡಬಹುದು! ಇಲ್ಲಿ ಕೆಲವು ಜನಪ್ರೀಯವಾದ ಗೋವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ.

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಶಾಂತಾದುರ್ಗಾ ದೇವಸ್ಥಾನ: ಗೋವಾದ ಪೊಂಡಾ ತಾಲೂಕಿನಲ್ಲಿರುವ ಕವಲೇಮ್ ಎಂಬ ಗ್ರಾಮದ ಬೆಟ್ಟದ ಬುಡದಲ್ಲಿ ಈ ದೇವಸ್ಥಾನವಿದೆ. ಗೋವಾ ರಾಜಧಾನಿ ಪಣಜಿಯಿಂದ 33 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು ದುರ್ಗೆಯ ಅವತಾರವಾದ ಶಾಂತಾದುರ್ಗಾ ದೇವಿಗೆ ಮುಡಿಪಾಗಿದೆ. ಈ ದೇವಿಯನ್ನು ಸ್ಥಳೀಯವಾಗಿ ಶಾಂತೇರಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Nkodikal

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಮೊದಲಿಗೆ ಈ ದೇವಿಯ ದೇವಸ್ಥಾನವು ಮುಂಬೈನ ಬಳಿಯಿರುವ ಸಾಲ್ಸೆಟ್ ಎಂಬ ದ್ವೀಪದಲ್ಲಿತ್ತು. ಪೋರ್ಚುಗೀಸರು ಭಾರತಕ್ಕೆ ಬಂದಾಗ ಅದನ್ನು ನಾಶ ಮಾಡಲು, ದೇವಿಯ ವಿಗ್ರಹವನ್ನು ಈಗಿರುವ ಗೋವಾದ ಕವಲೇಮ್ ಗ್ರಾಮದಲ್ಲಿ ಸ್ಥಾಪಿಸಲಾಯಿತು. 1730 ರಲ್ಲಿ ದೇವಸ್ಥಾನದ ಅಡಿಪಾಯ ಕಲ್ಲನ್ನು ಹಾಕಿ 1738 ರಲ್ಲಿ ನಿರ್ಮಾಣ ಪೂರ್ಣಗೊಳಿಸಲಾಯಿತು. ಮತ್ತೆ 1966 ರಲ್ಲಿ ಇದನ್ನು ನವೀಕರಣಗೊಳಿಸಲಾಯಿತು. ಹಿನ್ನಿಲೆಯಲ್ಲಿ ಹಸಿರು ತುಂಬಿದ ಗುಡ್ಡವಿದ್ದು ಶಾಂತವಾದ ಪರಿಸರದಲ್ಲಿರುವ ದೇವಾಲಯವು ಭೇಟಿ ನೀಡುವವರಿಗೆ ಸುಂದರ ಅನುಭವ ಕರುಣಿಸುತ್ತದೆ.

ಚಿತ್ರಕೃಪೆ: Vivo78

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಮಂಗೇಶಿ ದೇವಸ್ಥಾನ: ಗೋವಾದ ಪೊಂಡಾ ತಾಲೂಕಿನ ಪ್ರಿಯೋಲ್ ಪ್ರದೇಶದ ಮಂಗೇಶಿ ಗ್ರಾಮದಲ್ಲಿ ಶಿವನಿಗೆ ಮುಡಿಪಾದ ಈ ಸುಂದರ ಹಾಗೂ ದೊಡ್ಡ ದೇವಸ್ಥಾನವಿದೆ. ಈ ದೇವಸ್ಥಾನವು ಪಣಜಿಯಿಂದ 21 ಹಾಗೂ ಮರಗೋವಾ (ಮಡಗಾಂವ್) ದಿಂದ 26 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Vivo78

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಶಿವನಿಗೆ ಮುಡಿಪಾದ ಈ ದೇವಸ್ಥಾನವು ಗೋವಾದಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ದೇವಸ್ಥಾನವಾಗಿದೆ. ಎಲ್ಲ ದೇವಾಲಯಗಳಂತೆ ಇಲ್ಲಿಯೂ ಸಹ ಪ್ರತಿನಿತ್ಯ ಶಿವನ ಅವತಾರದ ಮಂಗೇಶ ಲಿಂಗಕ್ಕೆ ಶೋಡೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ.

ಚಿತ್ರಕೃಪೆ: Vinayaraj

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಸ್ಥಳ ಪುರಾಣದ ಪ್ರಕಾರ, ಒಮ್ಮೆ ಶಿವನು ಪಾರ್ವತಿಯನ್ನು ತಮಾಷೆಯಲ್ಲಿ ಹೆದರಿಸಲು ಭಯಂಕರವಾದ ಹುಲಿಯ ರೂಪ ಪಡೆದು ಅವಳ ಮುಂದೆ ಬಂದು ನಿಂತ. ಹುಲಿಯ ಕಂಡು ಬೆಚ್ಚಿ ಬಿದ್ದ ಪಾರ್ವತಿಯು ಶಿವನನ್ನು ಹುಡುಕುತ್ತ ಪರ್ವತಗಳ ಕುರಿತು "ತ್ರಾಹಿ ಮಾಂ ಗಿರೀಶ " ಎಂದು ಕೂಗಿದಳು. ಇದನ್ನು ಹೇಳುತ್ತಿದ್ದಂತೆಯೆ ಶಿವನು ತನ್ನ ನಿಜ ರೂಪಕ್ಕೆ ಬಂದು ಅವಳನ್ನು ಸಂತೈಸಿದ. ನಂತರ ಈ ಪದವು ಶಿವನೊಂದಿಗೆ ಜೋಡಣೆಯಾಗೆ ಮಾಂಗಿರೀಶ ನಂತರ ಕ್ರಮೇಣವಾಗಿ ಮಂಗೇಶ ಎಂಬ ಹೆಸರು ಪಡೆಯಿತು.

ಚಿತ್ರಕೃಪೆ: Mangesh Nadkarni

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಶ್ರೀಬೇತಾಳ ದೇವಸ್ಥಾನ : ಶಿವನ ಯೋಧ ರೂಪವಾದ ರುದ್ರನ ಅವತಾರವಾಗಿ ಪೂಜಿಸಲಾಗುವ ಬೇತಾಳನಿಗೆ ಮುಡಿಪಾದ ದೇವಸ್ಥಾನ ಇದಾಗಿದೆ. ಗೋವಾದ ಬೀಚೋಲಿಂ ತಾಲೂಕಿನಲ್ಲಿರುವ ಅಮೋನಾ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಶಿನಾರಿ, ಗಾವಾ, ಫಡಾಟೆ ಮುಂತಾದ ಕುಟುಂಬಗಳಿಂದ ಪೂಜಿಸಲ್ಪಡುವ ಬೇತಾಳನು ಈ ಹಳ್ಳಿಯ ಗ್ರಾಮ ದೇವತೆಯೂ ಹೌದು.

ಚಿತ್ರಕೃಪೆ: Agawas

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಸಪ್ತಕೋಟೇಶ್ವರ ದೇವಸ್ಥಾನ : ಗೋವಾದಲ್ಲಿರುವ ನರ್ವೆ ಎಂಬುದೊಂದು ಪುಟ್ಟ ಹಳ್ಳಿಯಾಗಿದೆ. ಈ ಹಳ್ಳಿಯು ಪಣಜಿ ನಗರದಿಂದ 35 ಕಿ.ಮೀ ಗಳಷ್ಟು ದೂರವಿದ್ದು ತನ್ನಲ್ಲಿರುವ ಸಪ್ತಕೋಟೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿದೆ. ಕದಂಬ ದೋರೆಯೊಬ್ಬನಿಂದ ತನ್ನ ಪತ್ನಿ ಕಮಲಾದೇವಿಗಾಗಿ ನಿರ್ಮಿಸಿದ ದೇವಾಲಯ ಇದಾಗಿದೆ. ಈ ದೇಗುಲವನ್ನು ಮಾಂಡೋವಿ ನದಿಯಲ್ಲಿರುವ ದಿವರ್ ಎಂಬ ನಡುಗಡ್ಡೆಯಿಂದ ಫೆರ್‍ರಿ ದೋಣಿಯ ಮೂಲಕ ಮಾತ್ರವೆ ತಲುಪಬಹುದಾಗಿದೆ.

ಚಿತ್ರಕೃಪೆ: ~Beekeeper~

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಭಗವತಿ ಒಬ್ಬಳು ದೇವಿಯಾಗಿದ್ದು ದುರ್ಗಾ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಶಕ್ತಿ ಹೀಗೆ ಎಲ್ಲ ದೇವಿಯರನ್ನು ಪ್ರತಿನಿಧಿಸುತ್ತಾಳೆ. ಕೇರಳ, ಕೊಂಕಣ ಭಾಗಗಳು ಹಾಗೂ ಗೋವಾದಲ್ಲಿ ಭಗವತಿ ದೇವಿಯನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಗೋವಾದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ, ಭಂಡಾರಿ, ದೈವಜ್ಞ್ಯ ಬ್ರಾಹ್ಮಣ ಸಮುದಾಯದವರು ಭಗವತಿಯನ್ನು ಮಹಿಷಾಸುರ ಮರ್ದಿನಿಯ ಅವತಾರದಲ್ಲಿ ಪೂಜಿಸುತ್ತಾರೆ. ಗೋವಾದ ಪೆರ್ನೆಮ್ ಎಂಬಲ್ಲಿ ಈ ದೇವಿಗೆ ಮುಡಿಪಾದ ದೇವಾಲಯವಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Sujithvv

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಉತ್ತರ ಗೋವಾದ ಮರ್ದೋಲ್ ಪ್ರದೇಶದಲ್ಲಿ ಸ್ಥಿತವಿರುವ ಬಾಲಾಜಿ ದೇವಸ್ಥಾನ. ಇದು ಬೆಳಿಗ್ಗೆ 8 ರಿಂದ ರಾತ್ರಿ 8 ಘಂಟೆಯವರೆಗೂ ತೆರೆದಿರುತ್ತದೆ.

ಚಿತ್ರಕೃಪೆ: Aruna

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಗೋವಾ ರಾಜ್ಯದ ಪೊಂಡಾ ತಾಲೂಕಿನ ಮಾರ್ಸೆಲ್ ಎಂಬ ಪ್ರದೇಶದಿಂದ ಐದು ಕಿ.ಮೀ ದೂರದಲ್ಲಿರುವ ಬೆಟಕಿ ಎಂಬಲ್ಲಿರುವ ಶ್ರೀ ಮಂಡೋದರಿ ದೇವಿಯ ದೇವಸ್ಥಾನ.

ಚಿತ್ರಕೃಪೆ: Bartsson

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಕಾಮಾಕ್ಷಿ ಅಮ್ಮನ ದೇವಸ್ಥಾನ : ಗೋವಾದಲ್ಲಿರುವ ಪೊಂಡಾ ತಾಲೂಕಿನ ಶಿರೋಡಾ ಗ್ರಾಮದಲ್ಲಿದೆ ಈ ದೇವಸ್ಥಾನ. ಸುತ್ತಮುತ್ತಲಿನ ಸಾಕಷ್ಟು ಹಿಂದೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ದೇವಸ್ಥಾನ ಸಮೀತಿಯು ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಿದೆ. ಇತ್ತೀಚಿಗಷ್ಟೆ ಈ ದೇವಸ್ಥಾನಕ್ಕೆ ವಿದೇಶಿಗರ ಪ್ರವೇಶವನ್ನು ನಿಷೇಧಿಸಲಾಗಿದ್ದು ಅವರ ಆಕ್ಷೇಪಾರ್ಹ ಉಡುಗೆಗಳೆ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ದೇವಾಲಯ ಸಂಕೀರ್ಣದಲ್ಲಿ ಶಾಂತಾದುರ್ಗಾ ಹಾಗೂ ಲಕ್ಷ್ಮಿನಾರಾಯಣರ ದೇಗುಲಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Karunakar Rayker

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

12 ನೇಯ ಶತಮಾನಕ್ಕೆ ಸಂಬಂಧಿಸಿದ ಈ ದೇವಸ್ಥಾನ ಗೋವಾದ ಪುರಾತನ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿವನಿಗೆ ಮುಡಿಪಾದ ಗೋವಾದ ಈ ಮಹಾದೇವ ದೇವಸ್ಥಾನವು ತಂಬ್ಡಿ ಸುರ್ಲಾ ಎಂಬ ಪ್ರದೇಶದಲ್ಲಿದೆ. ಪಣಜಿಯಿಂದ ಸುಮಾರು 65 ಕಿ.ಮೀ ದೂರವಿರುವ ಈ ದೇವಸ್ಥಾನವು ಗೋವಾದ ಈಶಾನ್ಯ ವಲಯದ ಭಗವಾನ್ ಮಹಾವೀರ ವನ್ಯಧಾಮ ಹಾಗೂ ಮೊಲ್ಲೆಮ್ ವನ್ಯಧಾಮ ಪ್ರದೇಶದಲ್ಲಿದೆ.

ಚಿತ್ರಕೃಪೆ: AshLin

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಮಹಲ್ಸಾ ನಾರಾಯಣಿ ದೇವಸ್ಥಾನ: ಗೋವಾದ ಮಾರ್ದೋಲ್ ಎಂಬಲ್ಲಿ ಈ ದೇವಸ್ಥಾನವಿದೆ. ಮಾರ್ದೋಲ್ ಪೊಂಡಾ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲಿ ಮಹಲ್ಸಾಳನ್ನು ವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯನ್ನಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Kaveri

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಮಹಾಮಾಯಾ ಕಾಳಿಕಾ ದೇವಸ್ಥಾನ: ಗೋವಾದ ಬೀಚೋಲಿಮ್ ತಾಲೂಕಿನ ಕಸರ್ಪಾಲ್ ಹಳ್ಳಿಯಲ್ಲಿ ಕಾಳಿ ದೇವಿಗೆ ಮುಡಿಪಾದ ಈ ದೇವಸ್ಥಾನವಿದೆ. ಇಲ್ಲಿ ಕಾಳಿ ದೇವಿಯನ್ನು ಮಹಾಮಾಯಾ ಅವತಾರದಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಗಳ ಸಂದರ್ಭದಲ್ಲಿ ಸಾಕಷ್ಟು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: wikipedia

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ರಾಮನಾಥಿ ದೇವಸ್ಥಾನ : ಗೌಡ ಸಾರಸ್ವತ ಬ್ರಾಹ್ಮಣ ಹಾಗೂ ಕಾಶಿ ಮಠ ಪರಿಪಾಲಿಸುವವರು ಪ್ರಮುಖವಾಗಿ ನಡೆದುಕೊಳ್ಳುವ ದೇವಸ್ಥಾನ ಇದಾಗಿದೆ. ಇಲ್ಲಿ ಪಂಚಾಯತನ ಅನುಸರಿಸುವವರು ನಡೆದುಕೊಳ್ಳುವುದರಿಂದ ಇಲ್ಲಿ ರಾಮನಾಥ (ಮುಖ್ಯ ದೇವತೆ), ಶಾಂತಾದುರ್ಗ, ಕಾಮಾಕ್ಷಿ, ಲಕ್ಷ್ಮಿನಾರಾಯಣ, ಗಣಪತಿ, ಬೇತಾಳ, ಕಾಲಭೈರವರ ವಿಗ್ರಹಗಳನ್ನೂ ಸಹ ಕಾಣಬಹುದು. ಈ ದೇವಸ್ಥಾನವು ಗೋವಾದ ಬಂಡಿವಾಡೆಯಲ್ಲಿರುವ ರಾಮನಾಥಿಮ್ ಎಂಬ ಪ್ರದೇಶದಲ್ಲಿದೆ.

ಚಿತ್ರಕೃಪೆ: Drshenoy

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಶಾಂತೇರಿ ದೇವಾಲಯ: ಗೋವಾದ ಬಾರ್ಡೇಜ್ ತಾಲೂಕಿನಲ್ಲಿರುವ ಸಿಯೋಲಿಮ್ ಎಂಬಲ್ಲಿ ಈ ದೇವಸ್ಥಾನವಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಜನರು ಗುಂಪು ಗುಂಪಾಗಿ ಬರುತ್ತಾರೆ. ವಿಶೇಷವಾಗಿ ಮಹಿಳೆಯರು ಎಣ್ಣೆಯ ದೀಪಗಳನ್ನು ತಮ್ಮ ಕೈಯಲ್ಲಿ ಹಾಗೂ ತಲೆ ಮೇಲೆ ಇಟ್ಟುಕೊಂಡು ಈ ದೇವಸ್ಥಾನದ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ಇದಲ್ಲದೆ ಇಲ್ಲಿ ಏಕ ಮುಖ ದತ್ತಾತ್ರೇಯ ದೇವಸ್ಥಾನವೂ ಸಹ ಇದೆ. ಈ ದೇವಸ್ಥನವು ಜನ ಚಟುವಟಿಕೆಯಿಲ್ಲದ ಶಾಂತವಾದ ಪರಿಸರದಲ್ಲಿದ್ದು ಧ್ಯಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಏಕಮುಖಿ ದತ್ತಾತ್ರೇಯ ದೇಗುಲ ಅಪರೂಪದ್ದಾಗಿದ್ದು ಪವಿತ್ರವೆಂಬ ಭಾವನೆ ಹಿಂದೂಗಳಲ್ಲಿದೆ.

ಚಿತ್ರಕೃಪೆ: Nichalp

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಗೋಪಾಲ ಗಣಪತಿ ದೇವಸ್ಥಾನ : ಪೊಂಡಾದಿಂದ ಪಣಜಿಯೆಡೆಗೆ ಹೋಗುವ ರಸ್ತೆಯಲ್ಲಿ ಕೇವಲ ಮೂರು ಕಿ.ಮೀ ಗಳ ಅಂತರದಲ್ಲಿ ಗೋಪಾಲ ಗಣಪನ ಈ ವಿಶೇಷ ದೇವಸ್ಥಾನವಿದೆ.

ಚಿತ್ರಕೃಪೆ: Agawas

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ನಾಗೇಶಿ ದೇವಸ್ಥಾನ : ಶಿವನಿಗೆ ಮುಡಿಪಾದ ಮಂಗೇಶಿಯ ಹಾಗೆಯೆ ಪೊಂಡಾದಲ್ಲಿ ನಾಗೇಶಿ ದೇವಸ್ಥಾನವೂ ಸಹ ಇರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಗೋವಾದ ಬಹುತೇಕ ಹಿಂದೂ ದೇವಾಲಯಗಳು (ಮೂಲ ವಿಗ್ರಹಗಳು) ಬೇರೆಡೆಯಿಂದ ತರಲಾದ ವಿಗ್ರಹಗಳನ್ನು ಹೊಂದಿವೆ. ಆದರೆ ಈ ಒಂದು ದೇವಸ್ಥಾನದ ವಿಗ್ರಹ ಇಲ್ಲಿಯೆ ಮೊದಲಿನಿಂದ ಪ್ರತಿಷ್ಠಾಪಿಸಲ್ಪಟ್ಟದ್ದಾಗಿದೆ.

ಚಿತ್ರಕೃಪೆ: Konkani Manis

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಸಾವಿರ ಧ್ವಜಗಳ ದೇವಾಲಯ : ಗೋವಾದ ಬಳಿ ವೆಂಗುರ್ಲಾಗೆ ಹೋಗುವ ದಾರಿಯಲ್ಲಿ ಈ ವಿಚಿತ್ರ ದೇವಾಲಯವನ್ನು ಕಾಣಬಹುದು. ಯಾವುದೆ ದೊಡ್ಡ ಗೋಪುರವಾಗಲಿ, ಕಟ್ಟಡವಾಗಲಿ ಇಲ್ಲ. ಚಿಕ್ಕ ರಚನೆ ಹಾಗೂ ಅದರಲ್ಲಿ ನೂರಾರು ಸಂಖ್ಯೆ ಕೇಸರಿ ವರ್ಣದ ಬಟ್ಟೆಯ ಧ್ವಜಗಳು ಹಾರಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಬಂದು ನಿಮ್ಮ ಇಷ್ಟಾರ್ಥ ತಿಳಿಸಿದ್ದಲ್ಲಿ ಅದು ಶೀಘ್ರವೆ ನೆರವೇರುತ್ತದೆಂದು ಹೇಳಲಾಗುತ್ತದೆ. ಒಂದೊಮ್ಮೆ ನಿಮ್ಮ ಇಚ್ಛೆ ಈಡೇರಿದರೆ ಅದಕ್ಕೆ ಪ್ರತಿಫಲವಾಗಿ ಧ್ವಜವನ್ನು ಸಮರ್ಪಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಯಾರ ವಿಗ್ರಹವೂ ಇಲ್ಲಿ ಒಂದು ರೀತಿಯ ಅಗೋಚರ ಶಕ್ತಿಯ ಅನುಭವ ಉಂಟಾಗುತ್ತದೆಂದು ಇಲ್ಲಿ ತಮ್ಮ ಇಷ್ಟಾರ್ಥಗಳು ಪುರ್ಣಗೊಂಡ ಭಕ್ತಾದಿಗಳು ಹೇಳುತ್ತಾರೆ.

ಚಿತ್ರಕೃಪೆ: Ravi Khemka

ಗೋವಾದ ಅದ್ಭುತ ದೇವಾಲಯಗಳು:

ಗೋವಾದ ಅದ್ಭುತ ದೇವಾಲಯಗಳು:

ಗೋವಾ ರಾಜಧಾನಿ ನಗರ ಪಣಜಿಯಲ್ಲಿರುವ ಪುಟ್ಟ ಬೆಟ್ಟದ ಮೇಲೊಂದು ಸುಂದರವಾದ ದೇವಸ್ಥಾನವಿರುವುದನ್ನು ಕಾಣಬಹುದು. ಆ ದೇವಸ್ಥಾನವೆ ಗುಡ್ಡದ ತುದಿಯ ಆಂಜನೇಯ ಸ್ವಾಮಿಯ ದೇವಸ್ಥಾನ. ಆಕರ್ಷಕ ಕಟ್ಟಡ ಹಾಗೂ ಸುಂದರ ಪರಿಸರದಿಂದ ಕೂಡಿರುವ ಈ ತಾಣ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Nagarjun Kandukuru

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X