Search
  • Follow NativePlanet
Share
» »ರಾಜಸ್ಥಾನದ ಭವ್ಯ ಅರಮನೆಗಳು ಮತ್ತು ಕೋಟೆಗಳು

ರಾಜಸ್ಥಾನದ ಭವ್ಯ ಅರಮನೆಗಳು ಮತ್ತು ಕೋಟೆಗಳು

By Vijay

ಪ್ರಬಲ ರಜಪೂತ ಸಾಮ್ರಾಜ್ಯವಾಳಿದ ಉತ್ತರ ಭಾರತದ ರಾಜ ಪರಂಪರೆಯ ಸೊಗಡಿರುವ ಒಂದು ಭವ್ಯ ರಾಜ್ಯ ರಾಜಸ್ಥಾನ. ವಿದೇಶಿ ಪ್ರವಾಸಿಗರ ಅತಿ ನೆಚ್ಚಿನ ಸ್ಥಾನವಾಗಿರುವ ರಾಜಸ್ಥಾನ ತನ್ನದೆ ಆದ ವಿಶಿಷ್ಟ ಸಂಸ್ಕೃತಿಅ ಸಂಪ್ರದಾಯಗಳಿಂದ ಸಂಪದ್ಭರಿತವಾಗಿದೆ.

ರೆಡ್ ಬಸ್ ಕೂಪನ್ನುಗಳು : ಬಸ್ ಟಿಕೆಟುಗಳ ಮೇಲೆ ನೇರ 40% ರಷ್ಟು ಕಡಿತ

ಹಲವು ಪ್ರವಾಸ ವಿಶೇಷತೆಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಇಂದಿಗೂ ಸುಸ್ಥಿತಿಯಲ್ಲಿರುವ ಅನೇಕ ಕೋಟೆ ಹಾಗೂ ಅರಮನೆಗಳು ಭೇಟಿ ನೀಡಲು ಹಾತೊರೆಯುವ ವಿದೇಶಿ ಪ್ರವಾಸಿಗರ ಬಹು ಪ್ರಮುಖ ಆಕರ್ಷಣೆಯಾಗಿದೆ.

ವಿಶೇಷ ಲೇಖನ : ಭಾರತದ ಪ್ರಚಂಡ ಕೋಟೆಗಳು

ರಾಜ್ಯದ ಪ್ರವಾಸೋದ್ಯಮಕ್ಕೆ ಗುರುತರವಾದ ಕಾಣಿಕೆ ನೀಡುತ್ತಿರುವ ಹಲವು ಭವ್ಯ ಅರಮನೆಗಳು ಇಂದು ಭವ್ಯ ಅತಿಥಿಗೃಹಗಳಾಗಿ, ಪಾರಂಪರಿಕ ಹೋಟೆಲುಗಳಾಗಿ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಬಹುತೇಕ ಭಾರತೀಯರಿಗೆ ತಿಳಿದಿರುವಂತೆ ರಾಜಸ್ಥಾನವು ಕೋಟೆ ಹಾಗೂ ಅರಮ್ನೆಗಳಿಗಾಗಿ ದೇಶದಲ್ಲೆ ಪ್ರಸಿದ್ಧವಾದ ರಾಜ್ಯವಾಗಿದೆ.

ಈ ರೀತಿಯಾಗಿ ರಾಜಸ್ಥಾನ ಇಂತಹ ರಚನೆಗಳಿಗೆ ಏಕೆ ಪ್ರಸಿದ್ಧಿ ಪಡೆದಿದೆ ಎಂಬ ಕುತೂಹಲ ನಿಮಗುಂಟಾದರೆ, ಇಲ್ಲಿರುವ ಅರಮನೆಗಳಿಗೊಮ್ಮೆ ಭೇಟಿ ನೀಡಲೇಬೇಕು. ಅಪಾರ ಕೌಶಲ್ಯದ, ಅದ್ಭುತ ಕಲಾಕೃತಿಗಳ, ಸ್ಥಳೀಯ ಸಂಸ್ಕೃತಿಯನ್ನು ಶಿಲ್ಪಕಲೆಯಲ್ಲಿ ನಿಪುಣತೆಯಿಂದ ಬಿಗಿ ಹಿಡಿದಿರುವ ಇಲ್ಲಿನ ಅರಮನೆಗಳು ಹಾಗೂ ತಂತ್ರಗಾರಿಕೆಯ ಕೌಶಲ್ಯವುಳ್ಳ ಕೋಟೆಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂಶಯವೆ ಇಲ್ಲ.

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಜಲ್ ಮಹಲ್ : ಜೈಪುರ ನಗರದಲ್ಲಿ ಕಾಣಬಹುದಾದ ಮನ್ ಸಾಗರ ಎಂಬ ಕೆರೆಯ ಒಡಲಿನಲ್ಲಿ ನಿಂತು ಮಿನುಗುವ ಜಲ ಮಹಲ್‌ ಒಂದು ಸುಂದರವಾದ ಅರಮನೆಯಾಗಿದೆ. ಹಿಂದಿನ ಸಮಯದಲ್ಲಿ ಈ ಅರಮನೆಯು ರಾಜರ ಹಾಗೂ ಅವರ ಕುಟುಂಬದವರು ಬೇಟೆಯಾಡಲು ಕಾಡುಗಳಿಗೆ ಭೇಟಿ ನೀಡುತ್ತಿದ್ದ ಸಮಯದಲ್ಲಿ ಅವರಿಗಾಗಿ ವಿಶ್ರಾಂತಿ ಗೃಹವಾಗಿ ಬಳಸಲ್ಪಡುತ್ತಿತ್ತು.

ಚಿತ್ರಕೃಪೆ: vil.sandi

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಅಂಬರ ಅರಮನೆ : ಪಿಂಕ್ ಸಿಟಿ ಎಂಬ ಖ್ಯಾತಿಯ ಜೈಪುರದಲ್ಲಿರುವ ಅಂಬರ್ ಕೋಟೆಯು ರಾಜ ಮಾನ್‌ ಸಿಂಗ್‌, ಮಿರ್ಝಾ ರಾಜಾ ಜೈ ಸಿಂಗ್‌ ಮತ್ತು ಸವಾಯಿ ಜೈ ಸಿಂಗ್‌ರಿಂದ ನಿರ್ಮಿಸಲ್ಪಟ್ಟಿದೆ. ಅರಮನೆಯು ಮೂಥಾ ಎಂಬ ಕೆರೆಯ ದಡದ ಮೇಲಿದ್ದು ಪ್ರಾಂಗಣಗಳು, ಸಭಾಂಗಣಗಳು, ದೇವಸ್ಥಾನಗಳು ಮತ್ತು ಉದ್ಯಾನವನ್ನು ಹೊಂದಿದೆ. ಪ್ರವಾಸಿಗರಿಗೆ ಆನೆ ಸವಾರಿ ಇಲ್ಲಿ ಲಭ್ಯವಿದ್ದು, ಆನೆಯ ಮೇಲಿನಿಂದ ಪ್ರವಾಸಿಗರು ಕೋಟೆಯ ದೃಶ್ಯವನ್ನು ನೋಡಬಹುದು. ಅರಮನೆಯ ಆವರಣದಲ್ಲಿ ಹಿಂದೂ ದೇವತೆಯಾದ ಶೀಲಾ ಮಾತಾಗೆ ಅರ್ಪಿತವಾದ ದೇವಸ್ಥಾನವೂ ಕೂಡಾ ಇದೆ.

ಚಿತ್ರಕೃಪೆ: Ross Huggett

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಉಮೇದ್ ಭವನ : ರಾಜಸ್ಥಾನದ ಜೋಧಪುರ ಪಟ್ಟಣದಲ್ಲಿರುವ ಉಮೇದ್‌ ಭವನ ಅರಮನೆಗೆ ಈ ಹೆಸರು ಬಂದಿದ್ದು ಮಹಾರಾಜ ಉಮೇದ್‌ ಸಿಂಗ್ ಇದನ್ನು ನಿರ್ಮಿಸಿದ್ದರಿಂದ. ಈ ಸುಂದರ ಅರಮನೆಯು ಮನಮೋಹಕವಾದ ಚಿತ್ತಾರ ಕಲೆಗಳಿಂದ ಸಂಪದ್ಭರಿತವಾಗಿದ್ದು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಟ್ಟಡವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಇದರ ವೈಶಿಷ್ಟ್ಯವೆಂದರೆ ಪ್ರತಿಯೊಂದು ಕಲ್ಲನ್ನೂ ಇನ್ನೊಂದು ಕಲ್ಲಿಗೆ ಕೊಂಡಿಯಾಗಿ ಬಳಸಲಾಗಿದೆ. ಇದರಿಂದಾಗಿ ಕಲ್ಲುಗಳನ್ನು ಸೇರಿಸಲು ಯಾವುದೇ ಪ್ರತ್ಯೇಕ ಸಾಮಗ್ರಿಯನ್ನು ಬಳಸಿಲ್ಲ. ಈ ವೈಶಿಷ್ಟ್ಯತೆಯನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ.

ಚಿತ್ರಕೃಪೆ: humdingor

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಹವಾ ಮಹಲ್ : ಜೈಪುರದಲ್ಲಿರುವ ಹವಾ ಮಹಲ್‌ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸವಾಯಿ ಪ್ರತಾಪ್‌ ಸಿಂಗ್‌ ಎಂಬಾತನು ಈ ಅರಮನೆಯನ್ನು ಕ್ರಿ.ಶ1799 ರಲ್ಲಿ ನಿರ್ಮಿಸಿದ್ದಾನೆ. ನಗರದ ಜೊಹಾರಿ ಬಜಾರ್‌ನ ಸಮೀಪದಲ್ಲಿರುವ ಈ ಐದು ಅಂತಸ್ತಿನ ಅರಮನೆಯು ಕೆಂಪು ಮತ್ತು ಗುಲಾಬಿ ಬಣ್ಣದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಈ ಕಟ್ಟಡದ ವಿನ್ಯಾಸವನ್ನು ಮಾಡಿದ್ದು ಲಾಲ್ ಚಂದ್‌ ಉಸ್ತಾ ಹಾಗೂ ಈ ಅರಮನೆಯು 950ಕ್ಕೂ ಹೆಚ್ಚು ಕಿಟಕಿಗಳನ್ನು ಹೊಂದಿದೆ. ಅಂತೆಯೆ ಸಾಕಷ್ಟು ಬೆಳಕು, ಗಾಳಿ ಬರುವುದರಿಂದ ಇದಕ್ಕೆ ಹವಾ ಮಹಲ್ ಎಂದು ಕರೆಯುತ್ತಾರೆ. ಹವಾ ಎಂದರೆ ಗಾಳಿ ಎಂದರ್ಥ. ಅರಮನೆಯು ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದು, ಅಲ್ಲಿರುವ ಜಾಲಿ ತೆರೆಗಳ ಮೂಲಕ ಹಿಂದಿನ ಸಮಯದಲ್ಲಿ ಮಹಿಳೆಯರು ಅರಮನೆಯ ಕಾರ್ಯಕ್ರಮಗಳನ್ನು ನೋಡಲು ಅನುಕೂಲವಾಗುವಂತೆ ಮಾಡಲಾಗಿದೆ.

ಚಿತ್ರಕೃಪೆ: Chris Brown

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ದೀಘ್ ಕೋಟೆ : ಭರತ್ಪುರ್ ಗೆ 35 ಕಿ.ಮೀ ದೂರದಲ್ಲಿರುವ, ದೀಗ್ ಕೋಟೆ ಮಹಾರಾಜ ಸೂರಜ್ ಮಲ್ ನಿಂದ 1730 ರಲ್ಲಿ ನಿರ್ಮಿತವಾಗಿದೆ. ಜಟ್ ಆಡಳಿತಗಾರರ ಮಾಜಿ ರಾಜಧಾನಿಯಾದ ದೀಗ್ ಪಟ್ಟಣದಲ್ಲಿ ಈ ಕೋಟೆ ಇದೆ.ಕೋಟೆಯ ಮಧ್ಯ ಗೋಪುರವನ್ನು ಎತ್ತರದಲ್ಲಿ ನಿರ್ಮಿಸಲಾಗಿದ್ದು, ಕಿರಿದಾದ ಕಾಲುವೆಯು ಅದನ್ನು ಸುತ್ತುವರೆದಿದೆ.

ಚಿತ್ರಕೃಪೆ: GFDL

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಕೋಟೆಯಲ್ಲಿರುವ ಸುಂದರವಾದ ಉದ್ಯಾನಗಳನ್ನು, ಪರ್ಷೀಯನ್ ವಿನ್ಯಾಸದ 'ಚಾರ್ ಬಾಗ್' ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಂದು ಕೋಟೆಯ ಒಳಾಂಗಣವು ಅವಶೇಷವಾಗಿ ಉಳಿದಿದೆ.ದೀಗ್ ಅರಮನೆಯನ್ನು ದೀಗ್ ಕೋಟೆಯ ಪಕ್ಕದಲ್ಲೇ ಕಾಣಬಹುದಾಗಿದೆ. ಈ ಅರಮನೆಯು ಪುರಾನಾ ಮಹಲ್, ಶೀಶ್ ಮಹಲ್, ಸೂರಜ್ ಭವನ್, ನಂದ ಭವನ್, ಕಿಶನ್ ಭವನ್, ಕೇಶವ ಭವನ್ ಮತ್ತು ಗೋಪಾಲ ಭವನ್ ಗಳ ಪಿಂಡೀಕರಣವಾಗಿದೆ.

ಚಿತ್ರಕೃಪೆ: carol mitchell

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಸಿಟಿ ಪ್ಯಾಲೆಸ್, ಜೈಪುರ : ಜೈಪುರದ ಮಧ್ಯಭಾಗದಲ್ಲಿರುವ ಸಿಟಿ ಪ್ಯಾಲೇಸ್‌ ಪ್ರಮುಖ ಪ್ರವಾಸಿ ತಾಣ. ನಗರದಲ್ಲಿ ಪ್ರಮುಖವಾದ ಕಟ್ಟಡವಿದು. ಈ ಅರಮನೆಯನ್ನು ನಿರ್ಮಿಸಿದ್ದು ರಾಜ ಮಹಾರಾಜ ಸವಾಯಿ ಮಾಧೋ ಸಿಂಗ್‌. ಇದನ್ನು ಪ್ರವೇಶ ಪ್ರದೇಶವಾಗಿ ಉಪಯೋಗಿಸಲಾಗುತ್ತಿತ್ತು. ಇಂದು ಇದರ ಆವರಣದಲ್ಲಿ ವಸ್ತು ಸಂಗ್ರಹಾಲಯವಿದ್ದು 15 ನೆಯ ಶತಮಾನದ ವಿಶಿಷ್ಟ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಚಿತ್ರಕೃಪೆ: Richard Moross

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಸಿಟಿ ಪ್ಯಾಲೆಸ್, ಉದೈಪುರ : ಸಿಟಿ ಪ್ಯಾಲೇಸ್‌ ರಾಜಸ್ಥಾನದ ಸರೋವರಗಳ ಪಟ್ಟಣ ಎಂಬ ಖ್ಯಾತಿಯ ಉದಯಪುರದಲ್ಲೇ ಅತ್ಯಂತ ಸುಂದರವಾಗಿರುವ ಕಟ್ಟಡವಾಗಿದೆ. ಇದನ್ನು ರಾಜಸ್ಥಾನದಲ್ಲೇ ಅತಿ ದೊಡ್ಡ ಕಟ್ಟಡ ಎಂದು ಕರೆಯಲಾಗಿದೆ. ಪಿಚೋಲಾ ಕೆರೆಯ ದಡದಲ್ಲಿ ಭವ್ಯವಾಗಿ ನೆಲೆಸಿರುವ ಈ ಅರಮನೆಯನ್ನು ಮಹಾರಾಣ ಉದಯ್‌ ಮಿರ್ಜಾ ಸಿಂಗ್‌ ಎಂಬಾತನು 1559ರಲ್ಲಿ ನಿರ್ಮಿಸಿದ್ದಾನೆ. ಅರಮನೆಗೆ ಹಲವು ಪ್ರವೇಶದ್ವಾರಗಳಿವೆ. ಬಾರಾ ಪೋಲ್‌ ಅಥವಾ ಗ್ರೇಟ್‌ ಗೇಟ್‌ ಎಂಬುದು ಅರಮನೆಗೆ ಮುಖ್ಯ ಪ್ರವೇಶದ್ವಾರ ಐತಿಹಾಸಿಕ ಪೀಠೋಪಕರಣಗಳು, ಸುಂದರವಾದ ಪೇಂಟಿಂಗ್‌ಗಳು, ಸುಂದರವಾದ ಗಾಜುಗಳು ಮತ್ತು ಆರ್ನಮೆಂಟಲ್‌ ಟೈಲ್‌ಗಳು ಅರಮನೆಯ ಒಳಗಿದೆ.

ಚಿತ್ರಕೃಪೆ: Edwin Poon

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಲೇಕ್ ಪ್ಯಾಲೆಸ್ : ಉದೈಪುರದ ಪಿಚೋಲಾ ಕೆರೆಯ ಮಧ್ಯದಲ್ಲಿಯೆ ಈ ಅದ್ಭುತವಾದ ಲೇಕ್ ಪ್ಯಾಲೆಸ್ ಸ್ಥಿತವಿದೆ. ಮಹಾರಾಣ ಜಗತ್‌ ಸಿಂಗ್‌ ನಿಂದ 1743ರಲ್ಲಿ ನಿರ್ಮಾಣವಾದ ಈ ಅರಮನೆ ಪ್ರಸ್ತುತ ಪಂಚತಾರಾ ಹೋಟೆಲ್ ಆಗಿ ಪರಿವರ್ತಿತವಾಗಿದೆ. ಈ ಅರಮನೆಗೆ ತೆರಳಲು ದೋಣಿಯಿಂದ ಮಾತ್ರವೆ ಹೋಗಬೇಕಾಗಿದ್ದು ನಾಲ್ಕು ಸುತ್ತಲೂ ನೀರಿನಿಂದ ಆವೃತವಾಗಿರುವ ಇದರ ಪರಿಸರವು ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Arian Zwegers

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ತಾರಾಗಡ್ ಕೋಟೆ : ತಾರಾಗಡ್ ಕೋಟೆಯು ರಾಜಸ್ಥಾನದ ಬುಂದಿ ನಗರದಲ್ಲಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು 1354 ರಲ್ಲಿ ನಿರ್ಮಿಸಲಾಗಿದ್ದು ನಗರದಲ್ಲೇ ಅತ್ಯಂತ ಸುಂದರ ತಾಣವಾಗಿ ಜನಪ್ರೀಯವಾಗಿದೆ. ಇದು ಕಡಿದಾದ ಗುಡ್ಡದ ಮೇಲೆ ನಿರ್ಮಾಣಗೊಂಡಿದ್ದು ನಗರದ ಸುಂದರ ನೋಟವನ್ನು ಕರುಣಿಸುತ್ತದೆ. ಯಾವತ್ತೂ ಒಣಗದ ಮೂರು ಕೆರೆಗಳನ್ನು ಈ ಕೋಟೆಯು ಹೊಂದಿದೆ. ಆ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮತ್ತು ವಿನ್ಯಾಸ ಯೋಜನೆಯ ಅದ್ಭುತ ಬಳಕೆಗೆ ಒಂದು ಜೀವಂತ ಉದಾಹರಣೆ ಇದಾಗಿದೆ.

ಚಿತ್ರಕೃಪೆ: Daniel Villafruela

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಜೈಸಲ್ಮೇರ್ ಕೋಟೆ : ಜೈಸಲ್ಮೇರ್ ಕೋಟೆ ' ಜೈಸಲ್ಮೇರಿನ ಹೆಮ್ಮೆ' ಎಂದೆ ಪರಿಗಣಿಸಲ್ಪಟ್ಟಿದೆ. ಇದು ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಸೂರ್ಯಾಸ್ತದ ಸಮಯದಲ್ಲಿ ಈ ಕೋಟೆಯ ಹಳದಿ ಮರಳುಗಲ್ಲುಗಳು ಬಂಗಾರದ ಬಣ್ಣದಲ್ಲಿ ಕಂಗೊಳಿಸುವ ಕಾರಣವಾಗಿ ಇದನ್ನು 'ಸೋನಾರ್ ಕಿಲಾ' ಅಥವಾ ' ಗೋಲ್ಡನ್ ಫೊರ್ಟ್ ' ಎಂಬ ಹೆಸರಿನಿಂದ ಸಹ ಕರೆಯುತ್ತಾರೆ.

ಚಿತ್ರಕೃಪೆ: Adrian Sulc

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಜಗ್ ಮಂದಿರ : ಉದೈಪುರದ ಪಿಚೋಲಾ ಕೆರೆಯಲ್ಲಿರುವ ಮತ್ತೊಂದು ಉದ್ಯಾನ ಅರಮನೆಯಾಗಿ ಜಗ್ ಮಂದಿರ ಹೆಸರುವಾಸಿಯಾಗಿದೆ. ಈ ಅರಮನೆಯನ್ನು ಕಟ್ಟಿದ್ದು ಮೇವಾರ ರಾಜ್ಯದ ಮೂವರು ಸಿಸೋಡಿಯಾ ರಜಪೂತ ರಾಜರುಗಳು. ಈ ಅರಮನೆಯಲ್ಲಿ ಹೂವಿನ ಉದ್ಯಾನವಿದ್ದು ಪ್ರವಾಸಿಗರು ಬೋಗನ್‌ವಿಲ್ಲಾಗಳು, ಗುಲಾಬಿ ತೋಟಗಳು, ಹಾಗೂ ಇತರ ಹಲವು ವಿಧದ ತೋಟಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Antoine Taveneaux

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ನಿಮ್ರಾನಾ ಕೋಟೆ : ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ನಿಮ್ರಾನಾ ಒಂದು ಪ್ರಸಿದ್ಧ ಐತಿಹಾಸಿಕ ಪಟ್ಟಣ. ಈ ಪಟ್ಟಣದ ಎತ್ತರವಾದ ಬೆಟ್ಟವೊಂದರ ತುದಿಯಲ್ಲಿ ನಿಮ್ರಾನಾ ಕೋಟೆಯಿರುವುದನ್ನು ಕಾಣಬಹುದು. ಈ ಕೋಟೆಯಿಂದ ಸುತ್ತಮುತ್ತಲಿನ ಸ್ಥಳದ ಸೌಂದರ್ಯವು ಆಕರ್ಷಕವಾಗಿ ಕಂಡುಬರುತ್ತದೆ. ಇಂದು ಈ ಕೋಟೆಯು ಪಾರಂಪರಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡಿರುವ ರಿಸಾರ್ಟುಗಳ ಪೈಕಿ ಒಂದಾಗಿ ಪರಿವರ್ತಿತವಾಗಿದೆ.

ಚಿತ್ರಕೃಪೆ: Archit Ratan

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಮಬಾಗ್ ಅರಮನೆ : ಜೈಪುರ ನಗರದಿಂದ ಐದು ಕಿ.ಮೀ ಗಳಷ್ಟು ದೂರದಲ್ಲಿ ಭವಾನಿ ಸಿಂಗ್ ರಸ್ತೆಯ ಮೇಲೆ ಅದ್ಭುತವಾಗಿ ಎದ್ದು ನಿಂತಿರುವ, ಭವ್ಯ ಹೋಟೆಲ್ ಆಗಿ ಪರಿವರ್ತಿತವಾಗಿರುವ ರಾಮಬಾಗ್ ಅರಮನೆಯು ಆಕರ್ಷಕ ತಾಣವಾಗಿದೆ.

ಚಿತ್ರಕೃಪೆ: Lunialaura

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಸಾಮೋದ ಅರಮನೆ : ಜೈಪುರದ ಸಾಮೋದ ಅರಮನೆಯು ತನ್ನ ವಾಸ್ತುಶಿಲ್ಪದಿಂದಾಗಿ ಜನಪ್ರಿಯವಾಗಿದೆ. ಈ ಅರಮನೆಯು ಸದ್ಯ ಐಷಾರಾಮಿ ಹೋಟೆಲ್‌ ಆಗಿದೆ. ಜೈಪುರ ನಗರಕ್ಕೆ ಹತ್ತಿರದಲ್ಲೇ ಈ ಅರಮನೆಯಿದೆ. ಈ 4000 ವರ್ಷಗಳ ಹಿಂದಿನ ಅರಮನೆಯಲ್ಲಿ ಸಾಮೋದ ಗಾರ್ಡನ್‌, ಸಾಮೋದ ಕೋಟೆ ಮತ್ತು ದರ್ಬಾರ್ ಹಾಲ್‌ಗಳನ್ನು ಪ್ರವಾಸಿಗರು ನೋಡಬಹುದು.

ಚಿತ್ರಕೃಪೆ: Richard Moross

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಶಿವ್ ನಿವಾಸ ಅರಮನೆ : ಉದೈಪುರದ ಪಿಚೋಲಾ ನದಿ ತಟದ ಮೇಲೆ ನೆಲೆಸಿರುವ ಈ ಭವ್ಯ ಅರಮನೆಯು ಹಿಂದೆ ಉದೈಪುರ ಮಹಾರಾಜರ ವಾಸ ಸ್ಥಳವಾಗಿತ್ತು. ಸಿಟಿ ಪ್ಯಾಲೆಸ್ ಸಂಕೀರ್ಣದ ದಕ್ಷಿಣಕ್ಕಿರುವ ಈ ಅರಮನೆಯು ಇಂದು ಹೋಟೆಲ್ ಆಗಿ ಮಾರ್ಪಾಟಾಗಿದೆ.

ಚಿತ್ರಕೃಪೆ: SINHA

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಜೈಗಡ್ ಕೋಟೆ : ವಿಜಯದ ಕೋಟೆ ಎಂತಲೂ ಕರೆಯಲ್ಪಡುವ ಜೈಗಡ್ ಕೋಟೆಯು ಜೈಪುರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ನಗರದ ಮತ್ತೊಂದು ಪ್ರಸಿದ್ಧ ಕೋಟೆಯಾದ ಅಂಬರ ಕೋಟೆಯಿಂದ ಸುಮಾರು 400 ಅಡಿ ಎತ್ತರದಲ್ಲಿದೆ. ಕೋಟೆಗೆ ಎರಡು ಪ್ರಮುಖ ಪ್ರವೇಶದ್ವಾರಗಳಿದ್ದು ಅವುಗಳನ್ನು ಡುಂಗರ್ ದರ್ವಾಜಾ ಹಾಗೂ ಅವಾನಿ ದರ್ವಾಜಾ ಎಂದು ಕರೆಯಲಾಗುತ್ತದೆ. ಕೋಟೆಯನ್ನು ಸೇನೆಯ ಉದ್ದೇಶಕ್ಕೆ ನಿರ್ಮಿಸಲಾಗಿತ್ತು. ಸುಮಾರು 3 ಕಿ.ಮೀ ವ್ಯಾಪ್ತಿಯನ್ನು ಈ ಕೋಟೆ ಹೊಂದಿದೆ.

ಚಿತ್ರಕೃಪೆ: Abhinavmnnit

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಮೆಹ್ರಾನಗಡ್ ಕೋಟೆ : ಈ ಕೋಟೆಯು ರಾಜಸ್ಥಾನದ ಜೋಧಪುರ ನಗರದ ಪ್ರಖ್ಯಾತ ಆಕರ್ಷಣೆ. ಕೋಟೆಯು ಗುಡ್ಡದ ಮೇಲಿದ್ದು ಸುಮಾರು 150 ಮೀಟರ್ ಗಳಷ್ಟು ಎತ್ತರದಲ್ಲಿದೆ. ಈ ಗಮನಾರ್ಹ ಕೋಟೆಯು 1459 ರಲ್ಲಿ ರಾವ್ ಜೋಧಾರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಜೋಧಪುರ ನಗರದಿಂದ ರಸ್ತೆ ಪ್ರಯಾಣದ ಮೂಲಕ ತಲುಪಬಹುದು. ಈ ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಎರಡನೇ ಪ್ರವೇಶದ್ವಾರದ ಮೇಲೆ ಗುಂಡುಗಳಿಂದ ಹೊಡೆದ ಗುರುತುಗಳನ್ನು ಪ್ರವಾಸಿಗರು ಗುರುತಿಸಬಹುದು.

ಚಿತ್ರಕೃಪೆ: A Vahanvati

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ದೇವಿಗಡ್ ಕೋಟೆ : ರಾಜಸ್ಥಾನದ ಉದೈಪುರ ನಗರದ ದೆಲ್ವಾರಾ ಹಳ್ಳಿಯಲ್ಲಿರುವ 18 ನೆಯ ಶತಮಾನದ ದೇವಿಗಡ್ ಅರಮನೆಯು ಇಂದು ಒಂದು ಸುಂದರ ಹೋಟೆಲ್ ಆಗಿ ಪರಿವರ್ತಿತವಾಗಿದೆ. 2006 ರಲ್ಲಿ "ದಿ ನಿವ್ ಯಾರ್ಕ್ ಟೈಮ್ಸ್" ನಿಯತಕಾಲಿಕೆಯು ಈ ಹೋಟೆಲ್ ಅನ್ನು ಭಾರತದ ಅತ್ಯುನ್ನತ ಮಂಚೂಣಿಯಲ್ಲಿರುವ ಹೋಟೆಲುಗಳ ಪೈಕಿ ಒಂದೆಂದು ಬರೆದಿತ್ತು.

ಚಿತ್ರಕೃಪೆ: Prashant Ram

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಜುನಾಗಡ್ ಕೋಟೆ : ಜುನಾಘಡ್ ಕೋಟೆಯನ್ನು ರಾಜಸ್ಥಾನದ ಬಿಕಾನೇರ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಅಭೇದ್ಯ ಕೋಟೆಯನ್ನು 1593 ರಲ್ಲಿ ರಾಜ ರೈ ಸಿಂಗ್ ಎಂಬಾತನು ನಿರ್ಮಿಸಿದ್ದಾನೆ. ಹಲವಾರು ಅರಮನೆಗಳನ್ನು ಹೊಂದಿರುವ ಈ ಕೋಟೆಯು ಕಂದಕದಿಂದ ಸುತ್ತುವರೆದಿದೆ. ಪ್ರತಿ ಅರಮನೆಗಳಲ್ಲಿ ಸುಂದರವಾದ ವರ್ಣ ಕಲಾಕೃತಿಗಳನ್ನು ಪ್ರವಾಸಿಗರು ಕಾಣಬಹುದು.

ಚಿತ್ರಕೃಪೆ: Arian Zwegers

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಲಾಲ್ ಗಡ್ ಅರಮನೆ : 20 ನೆಯ ಶತಮಾನದ ಪ್ರಾರಂಭಿಕ ಸಮಯದಲ್ಲಿ ಬಿಕಾನೇರ್ ಪ್ರಾಂತ್ಯವನ್ನು ಆಳುತ್ತಿದ್ದ ಗಂಗಾ ಸಿಂಗ್ ಮಹಾರಾಜನು ಈ ಭವ್ಯ ಅರಮನೆಯ ನಿರ್ಮಾತೃ. ಇಂದು ಇದು ಗುರುತರವಾದ ಪ್ರವಾಸಿ ಆಕರ್ಷಣೆಯಾಗಿ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದೆ.

ಚಿತ್ರಕೃಪೆ: Noledam

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಚಿತ್ತೋಡ್ ಕೋಟೆ : ರಾಜಸ್ಥಾನದ ದಕ್ಷಿಣ ಭಾಗದಲ್ಲಿರುವ ಚಿತ್ತೋರಗಡ್ ನಗರದಲ್ಲಿರುವ ಕೋಟೆ ಇದಾಗಿದ್ದು, ಪ್ರಾಯಶಃ ರಾಜಸ್ಥಾನದ ರಾಜ್ಯದಲ್ಲೆ ಕಂಡುಬರುವ ಅತಿ ವೈಭವಯುತ ಕೋಟೆ ಇದಾಗಿದೆ. ಭಾರತದ ಬೃಹತ್ ಕೋಟೆಗಳ ಪೈಕಿಯೂ ಒಂದಾಗಿರುವ ಈ ಕೋಟೆಯು ಪ್ರದೇಶದ ಪ್ರಖ್ಯಾತ ಐತಿಹಾಸಿಕ ಪ್ರವಾಸಿ ತಾಣವೂ ಹೌದು.

ಚಿತ್ರಕೃಪೆ: Santosh Namby

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಕುಂಬಳಗಡ್ ಕೋಟೆ : ರಾಜಸ್ಥಾನಿನ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಲ್ಗಡ್, ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳವು ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಇದನ್ನು ಕುಂಭಲ್ಮೇರ್ ಎಂದೂ ಕರೆಯಲಾಗುತ್ತದೆ. ಇಲ್ಲಿರುವ ಕುಂಭಲ್ಗಡ್ ಕೋಟೆಯು ರಾಜಸ್ಥಾನ ರಾಜ್ಯದ ಎರಡನೇ ಮಹತ್ವದ ಕೋಟೆಯಾಗಿದೆ. 15 ನೇ ಶತಮಾನದಲ್ಲಿ ರಾಣಾ ಕುಂಭನಿಂದ ಇದು ನಿರ್ಮಿತವಾಗಿದೆ. ಪ್ರವಾಸಿಗರು ಈ ಕೋಟೆಯ ಮೇಲಿಂದ ಸುತ್ತ ಮುತ್ತ ಪ್ರದೇಶಗಳ ವಿಹಂಗಮ ದೃಶ್ಯಗಳನ್ನು ಮನಸಾರೆ ವಿಕ್ಷೀಸಬಹುದು. ಇಲ್ಲಿ, ಶತ್ರುಗಳಿಂದ ರಕ್ಷಣೆಗಾಗಿ, ವಕ್ರಾಕಾರದಲ್ಲಿ ಎತ್ತರವಾದ ಗೋಡೆಯನ್ನು ಕಟ್ಟಲಾಗಿದೆ. ಚೀನಾ ಗೋಡೆಯ ನಂತರ, ಈ ಗೋಡೆಯನ್ನು ಪ್ರಪಂಚದ ಎರಡನೇ ಉದ್ದವಾದ ಗೋಡೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Nagarjun Kandukuru

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಮಾನ್ಸೂನ್ ಪ್ಯಾಲೆಸ್, ಉದೈಪುರ : ಸಜ್ಜನಗಡ್ ಅರಮನೆ ಎಂತಲೂ ಕರೆಯಲ್ಪಡುವ ಈ ಕೋಟೆಯು ಉದೈಪುರದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಫತೇ ಸಾಗರ್ ಎಂಬ ಕೆರೆಗೆ ಅಭಿಮುಖವಾಗಿ ಎತ್ತರದಲ್ಲಿ ನೆಲೆಸಿರುವ ಈ ಅರಮನೆಯ ಸ್ಥಳದಿಂದ ಉದೈಪುರ ನಗರದ ಹಾಗೂ ಅಲ್ಲಿನ ಅದ್ಭುತ ಕೆರೆಗಳ ವಿಹಂಗಮ ನೋಟವನ್ನು ಪ್ರವಾಸಿಗರು ನೋಡಿ ಆನಂದಿಸಬಹುದು.

ಚಿತ್ರಕೃಪೆ: Selmer van Alten

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ರಾಜಸ್ಥಾನದ ಕೋಟೆಗಳು ಮತ್ತು ಅರಮನೆಗಳು:

ಮಾನ್ಸೂನ್ ಪ್ಯಾಲೆಸ್ ನಿಂದ ಉದೈಪುರದ ನೋಟವು ಹೀಗೆ ಕಂಡುಬರುತ್ತದೆ.

ಚಿತ್ರಕೃಪೆ: Selmer van Alten

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X