Search
  • Follow NativePlanet
Share
» »ಕೆಲ ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು

ಕೆಲ ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು

By Vijay

ಪ್ರವಾಸವು ಸಾಮಾನ್ಯವಾಗಿ ಭೇಟಿ ನೀಡುವ ಸ್ಥಳಗಳ ಕುರಿತು ಐತಿಹಾಸಿಕ ಮಾಹಿತಿ, ಸ್ಥಳ ವಿಶೇಷ, ಅಲ್ಲಿನ ಸಂಸ್ಕೃತಿ - ಸಂಪ್ರದಾಯಗಳ ಕುರಿತು ತಿಳಿಸುತ್ತದೆ. ಇದರಲ್ಲಿ ಅಲ್ಲಿ ದೊರೆಯುವ ಖಾದ್ಯಗಳೂ ಸಹ ಅಷ್ಟೆ ಮುಖ್ಯ. ಆಯಾ ಸ್ಥಳಗಳ ವಿಶೇಷ ತಿಂಡಿ ತಿನಿಸುಗಳು ಪ್ರವಾಸದ ಒಂದು ಮುಖ್ಯ ಗುಣಲಕ್ಷಣವಾಗಿರುತ್ತದೆ ಎಂದರೂ ತಪ್ಪಾಗಲಾರದು.

ಒಂದೊಂದು ಸ್ಥಳಗಳು ಒಂದೊಂದು ಬಗೆಯ ತಿಂಡಿ ತಿನಿಸುಗಳಿಗೆ ಜನಪ್ರೀಯವಾಗಿರುತ್ತವೆ. ಇದು ಹಿರಿಯರಿಂದ ಬಳುವಳಿಯಾಗಿ ಬಂದ ಖಾದ್ಯಗಳ ತಯಾರಿಕಾ ವಿಧಾನವಿರಬಹುದು ಅಥವಾ ಅಲ್ಲಿನ ವಾತಾವರಣದ ಗುಣ ಲಕ್ಷಣಗಳಿರಬಹುದು ಒಟ್ಟಾರೆ ಆ ಪ್ರದೇಶವು ಒಂದು ರೀತಿಯ ಸಿಹಿ ತಿಂಡಿಗೋ ಇಲ್ಲವೆ ಪೂರ್ಣ ಪ್ರಮಾಣದ ಊಟಗಳಿಗೊ ಅಥವಾ ಖಾರಯುಕ್ತ ತಿಂಡಿಗೋ ಹೆಚ್ಚು ಜನಪ್ರೀಯತೆ ಪಡೆದಿರುತ್ತವೆ.

ವಿಶೇಷ ಲೇಖನ : ಬೆಂಗಳೂರಿನ ವಿಶೇಷ ದರ್ಶಿನಿಗಳು

ಪ್ರಸ್ತುತ ಲೇಖನವು ವೈವಿಧ್ಯಮಯ ಖಾದ್ಯಗಳನ್ನು ಇಷ್ಟಪಡುವ ಪ್ರವಾಸಿ ಪ್ರೀಯರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದ್ದು, ಇಲ್ಲಿ ನೀಡಲಾಗಿರುವ ಯಾವ ಸ್ಥಳಗಳಿಗಾದರೂ ಪ್ರವಾಸ ಹೋದರೆ ಅಲ್ಲಿ ದೊರೆಯುವ ವಿಶೇಷ ತಿನಿಸುಗಳೇನು ಎಂಬುದರ ಕುರಿತು ತಿಳಿಸುವ ಚಿಕ್ಕ ಪ್ರಯತ್ನ ಇದಾಗಿದೆ. ಕೇವಲ ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಹಾಗೂ ಮಹಾರಾಷ್ಟ್ರದ ಕೇವಲ ಆಯ್ದ ಸ್ಥಳಗಳ ಕುರಿತು ಮಾತ್ರವೆ ತಿಳಿಸಲಾಗಿದೆ.

ವಿ.ಸೂ : ಇದಲ್ಲದೆ ನಿಮಗೆ ಹೆಚ್ಚಿನ ವಿವರಗಳು ತಿಳಿದಿದ್ದಲ್ಲಿ ಅವುಗಳನ್ನು ನಮ್ಮೊಂದಿಗೆ ಪ್ರತಿಕ್ರಿಯೆ ನೀಡುವುದರ ಮೂಲಕ ಮುಕ್ತವಾಗಿ ಹಂಚಿಕೊಳ್ಳಿ.

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಬೆಂಗಳೂರು : ಮೊದಲಿಗೆ ನಮ್ಮ ನಾಡಿನ ರಾಜಧಾನಿ ನಗರ ಬೆಂಗಳೂರಿನಿಂದ ಪ್ರಾರಂಭಿಸೋಣ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಎಲ್ಲ ಬಗೆಯ ಆಹಾರ ತಿಂಡಿಗಳು ಲಭ್ಯವಿದೆ. ಆದರೂ ಸಾಕಷ್ಟು ಬೆಂಗಳೂರೇತರರು ಅಥವಾ ಹೊರ ರಾಜ್ಯದವರು ಇಲ್ಲಿಗೆ ಬಂದಾಗ ಅವರಿಗೆ ವಿಶೇಷವಾಗಿ ಕಂಡುಬರುವ ಖಾದ್ಯಗಳೆಂದರೆ ಬಿಸಿಬೇಳೆ ಭಾತ್ ಹಾಗೂ ಚೌ ಚೌ ಭಾತ್. ಅಂದರೆ ಬೆಂಗಳೂರಿನಲ್ಲಿ ನೀವು ಎಲ್ಲೆ ಇದ್ದರೂ ಸಹ ಬೆಳಿಗ್ಗೆಯ ಫಲಾಹಾರದ ಸಂದರ್ಭದಲ್ಲಿ ಚಿಕ್ಕ ಪುಟ್ಟ ದರ್ಶಿನಿಯಲ್ಲಿಯೂ ಸಹ ಈ ಖಾದ್ಯಗಳ ರುಚಿಯನ್ನು ಸವಿಯಬಹುದು. ಬೆಂಗಳೂರಿನ ಆಕರ್ಷಣೆಗಳು

ಚಿತ್ರಕೃಪೆ: Prathapwagle

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಬೆಳಗಾವಿ : ಬೆಳಗಾವಿ ಜಿಲ್ಲೆಯು ಕರ್ನಾಟಕದ ದೊಡ್ಡ ಹಾಗೂ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಇದನ್ನು ಪ್ರೀತಿಯಿಂದ ಕುಂದಾ ನಗರಿ ಎಂದೂ ಸಹ ಕರೆಯಲಾಗುತ್ತದೆ. ಅಂದರೆ ಇಲ್ಲಿ ವಿಶೇಷವಾಗಿ ದೊರೆಯುವ ಕುಂದಾ ಎಂಬ ಸಿಹಿ ಖಾದ್ಯವು ಎಂತಹವರಾದರೂ ಸರಿ...ಒಂದು ಸಲ ಬಾಯಿ ಚಪ್ಪರಿಸಿದರೆ ಸಾಕು ಖಂಡಿತವಾಗಿಯೂ ಅದರ ಸ್ವಾದವನ್ನು ಜೀವಮಾನದಲ್ಲೆ ಮರೆಯುವಂತಿಲ್ಲ. ನೀವೇನಾದರೂ ಬೆಳಗಾವಿಗೆ ಭೇಟಿ ನೀಡಿದರೆ ಕುಂದಾವನ್ನು ತಿನ್ನಲು ಮಾತ್ರ ಮರೆಯದಿರಿ. ಸಾಮಾನ್ಯವಾಗಿ ಕುಂದಾ ನಗರದ ಎಲ್ಲ ಸಿಹಿ ಅಂಗಡಿ ಮುಗ್ಗಟ್ಟುಗಳಲ್ಲಿ ದೊರೆಯುತ್ತದೆ. ಅಲ್ಲದೆ ಕಾಲೇಜ್ ರಸ್ತೆಯಲ್ಲಿರುವ ಪುರೋಹಿತ್ ಸ್ವೀಟ್ ಮಾರ್ಟ್ ಅಂಗಡಿಯು ವಿಶೇಷವಾದ ಕುಂದಾ ಗ್ರಾಹಕರಿಗೆ ನೀಡುತ್ತದೆ. ಇದಲ್ಲದೆ ಇಲ್ಲಿ ದೊರೆಯುವ ಕಲಾಕಂದ್ ಹಾಗೂ ಮಂಡಿಗೆಗಳೂ ಸಹ ಅಷ್ಟೆ ರುಚಿಕರವಾಗಿರುತ್ತದೆ. ಬೆಳಗಾವಿ ಜಿಲ್ಲೆಯ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಲು ಈ ಕೊಂಡಿಯನ್ನು ಕ್ಲಿಕ್ ಮಾಡಿ.

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಗೋಕಾಕ್ : ಬೆಳಗಾವಿ ಜಿಲ್ಲೆಯ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಇಲ್ಲಿಗೆ ತೆರಳಿದಾಗ ಇಲ್ಲಿನ ಮತ್ತೊಂದು ಜನಪ್ರಿಯ ಸಿಹಿ ಖಾದ್ಯವಾದ 'ಗೋಕಾಕ್ ಕರದಂಟ್' ಅನ್ನು ತಿನ್ನಲು ಮರೇಯಬೇಡಿ. ಬೆಳಗಾವಿ ಬಸ್ ಹಾಗು ರೈಲು ನಿಲ್ದಾಣಗಳಿಂದ ಗೋಕಾಕಿಗೆ ತೆರಳಲು ಬಸ್ ಹಾಗು ರೈಲುಗಳು ಲಭ್ಯವಿರುತ್ತದೆ.

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಧಾರವಾಡ : ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳು ಉತ್ತರ ಕರ್ನಾಟಕ ಭಾಗದ ವಾಣಿಜ್ಯ ನಗರಗಳಾಗಿವೆ. ಧಾರವಾಡ ನಗರವು ಒಂದು ಬೆಳೆಯುತ್ತಿರುವ ನಗರವಾಗಿದ್ದು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಅಲ್ಲದೆ ಈ ಜಿಲ್ಲೆಯಲ್ಲಿ ಕೆಲವು ಐತಿಹಾಸಿಕ ಪ್ರಸಿದ್ಧ ತಾಣಗಳನ್ನೂ ಸಹ ಕಾಣಬಹುದು. ಧಾರವಾಡ ನಗರವು ಪ್ರಮುಖವಾಗಿ ತನ್ನಲ್ಲಿ ದೊರೆಯುವ ಪೇಢಾ (ಪೇಡೆ) ಎಂಬ ಸಿಹಿಯಾದ ಖಾದ್ಯಕ್ಕೆ ಬಲು ಪ್ರಸಿದ್ಧವಾಗಿದೆ. ಇದು ಕರ್ನಾಟಕದಾದ್ಯಂತ ಧಾರವಾಡ ಮಿಶ್ರಾ ಪೇಡೆಗಳೆಂದೆ ಖ್ಯಾತಿ ಪಡೆದಿದೆ. ಧಾರವಾಡದಲ್ಲೊಂದು ಸೂರ್ಯಾಸ್ತ. ಹುಬ್ಬಳ್ಳಿ ಕುರಿತು ತಿಳಿಯಿರಿ

ಚಿತ್ರಕೃಪೆ: Niranjan Patil

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಮದ್ದೂರು ಎಂಬ ಈ ಪುಟ್ಟ ಪಟ್ಟಣವು ದೊರೆಯುತ್ತದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಮದ್ದೂರು ಪಟ್ಟಣವು "ಮದ್ದೂರು ವಡೆ" ಗಳಿಗಾಗಿ ಬಹು ಪ್ರಖ್ಯಾತಿ ಪಡೆದಿದೆ.

ಚಿತ್ರಕೃಪೆ: Charles Haynes

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಹೀಗೊಂದು ವಿರಾಮದ ಸಮಯದಲ್ಲಿ ರುಚಿಕರವಾದ ತಟ್ಟೆ ಇಡ್ಲಿಗಳನ್ನು ತಿನ್ನಲು ಮನ ಬಯಸಿದರೆ ನೇರವಾಗಿ ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಬಿಡದಿ ಪಟ್ಟಣಕ್ಕೆ ಹಾಯಾಗಿ ತೆರಳಿ ಬಿಡಿ. ಅರೆರೆ...ತಟ್ಟೆ ಇಡ್ಲಿಗಳು ಬೆಂಗಳೂರಿನಲ್ಲೂ ದೊರೆಯುವಾಗ ಬಿಡದಿಗೇಕೆ ಹೋಗಬೇಕು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ ತಟ್ಟೆ ಇಡ್ಲಿಗಳಿಗೆ ಬಿಡದಿಯು ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ತಟ್ಟೆ ಇಡ್ಲಿಗಳ ರುಚಿಯು ಬೇರೇಲ್ಲೂ ಸಿಗುವುದು ಕಷ್ಟ ಎಂದು ಹಲವರ ಅನಿಸಿಕೆ. ಅಲ್ಲದೆ ಈ ಪಟಣದಲ್ಲಿ ಇನ್ನೊವೇಟಿವ್ ಫಿಲ್ಮ್ ಸಿಟಿ ಎಂಬ ಮನರಂಜನಾ ಪಾರ್ಕ್ ಸಹ ಇರುವುದರಿಂದ ನಿಮ್ಮ ಭೇಟಿಯು ವ್ಯರ್ಥವಾಗಲಾರದು.

ಚಿತ್ರಕೃಪೆ: Soham Banerjee

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಉಡುಪಿ ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿರುವ ಶ್ರೀಕ್ರ್‍ಶ್ಣ ಮಠವು ಭಕ್ತಾದಿಗಳನ್ನು ದೇಶದೆಲ್ಲೆಡೆಯಿಂದ ಅಪಾರವಾಗಿ ಸೆಳೆಯುತ್ತದೆ. ಉಡುಪಿಯು ತನ್ನದೆ ಆದ ವಿಶಿಷ್ಟ ಭೋಜನಕ್ಕೆ ಹೆಸರುವಾಸಿಯೂ ಸಹ ಆಗಿದೆ. ಇದನ್ನು ಉಡುಪಿ ಶೈಲಿಯ ವ್ಯಂಜನ ಎಂತಲೂ ಕರೆಯಲಾಗುತ್ತದೆ. ಅಲ್ಲದೆ ಈ ನಗರವು ತನ್ನಲ್ಲಿ ದೊರೆಯುವ ಗರಿ ಗರಿಯಾದ ಮಸಾಲೆ ದೋಸೆಗಳಿಗೆ ಅಪಾರ ಜನಮನ್ನಣೆ ಗಳಿಸಿದೆ. ಉಡುಪಿಗೆ ತೆರಳಿದ್ದಾಗ ಮಸಾಲೆ ದೋಸೆಯ ಸ್ವಾದವನ್ನು ಸವಿಯಲು ಮರೆಯದಿರಿ. ಉಡುಪಿಯ ಪ್ರವಾಸಿ ಆಕರ್ಷಣೆಗಳು.

ಚಿತ್ರಕೃಪೆ: sanchantr

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಈ ಕರಾವಳಿ ಪಟ್ಟಣವು ಸಮುದ್ರ ಜೀವಿ ಖಾದ್ಯಗಳಿಗೆ ಪ್ರಸಿದ್ಧವಾಗಿರುವುದಲ್ಲದೆ ವೈವಿಧ್ಯಮಯ ಶಾಖಾಹರ ಖಾದ್ಯಗಳಿಗೂ ಹೆಸರುವಾಸಿಯಾಗಿದೆ. ಅವುಗ್ಫ಼ಳಲ್ಲಿ ಪ್ರಮುಖವಾಗಿ ಹೇಳಬೇಕೆಂದರೆ ಇಲ್ಲಿ ದೊರೆಯುವ ತುಸು ಸಿಹಿಯಾಗಿ ಸ್ವಾದ ಕೊಡುವ ಭಜ್ಜಿ ಹಾಗೂ ನೀರ್ದೊಸೆ ಅಥವಾ ನೀರು ದೋಸೆ. ಏಕೆಂದರೆ ಇದರ ರುಬ್ಬಿದ ಹಿಟ್ಟು ನೀರಿನಂತೆಯೆ ತೆಳುವಾಗಿರುತ್ತದೆ. ಮಂಗಳೂರಿನ ಆಕರ್ಷಣೆಗಳು

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಉತ್ತರ ಕರ್ನಾಟಕ ಭಾಗವು ತನ್ನದೆ ಆದ ವಿಶಿಷ್ಟ ವ್ಯಂಜನವನ್ನು ಹೊಂದಿದೆ. ಸಾಮಾನ್ಯವಾಗಿ ಬಕ್ರಿ (ಜೋಳದ ರೊಟ್ಟಿ) ಇಲ್ಲಿ ಬಹುವಾಗಿ ಊಟದಲ್ಲಿ ಬಳಸಲ್ಪಡುತ್ತದೆ. ಇದಕ್ಕೆ ಜೋತೆಯಾಗಿ ತುಂಬುಗಾಯಿ ಅಥವಾ ಎಣ್ಣೆಗಾಯಿ (ಇಡಿಯಾದ ಬದನೆ ಕಾಯಿಯನ್ನು ಅಲ್ಲಲ್ಲಿ ಸಿಳಿ ಮಸಾಲೆ ತುಂಬಿ ನಂತರ ಎಣ್ಣೆಯಲ್ಲಿ ಬೇಯಿಸಿ ಮಾಡಲಾಗುವ ಪಲ್ಯ), ಬೆಳ್ಳುಳ್ಳಿ ಖಾರ, ಪಚಡಿ, ಹಸಿಯಾದ ಇರುಳ್ಳಿ ಹೋಳುಗಳು ಬಾಯಲ್ಲಿ ನೀರೂರಿಸುತ್ತವೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಈ ಊಟವನ್ನು ಕಾಣಬಹುದಾಗಿದ್ದು ಅದರಲ್ಲೂ ವಿಶೇಷವಾಗಿ ವಿಜಯಪುರ (ಹಿಂದಿನ ಬಿಜಾಪುರ) ಜಿಲ್ಲೆಯು ತನ್ನ ಉತ್ಕೃಷ್ಟ ಮಟ್ಟದ ಜೋಳದ ರೊಟ್ಟಿ ಊಟಕ್ಕಾಗಿ ಬಲು ಪ್ರಸಿದ್ಧಿ ಪಡೆದಿದೆ. ಬಿಸಿಯಲ್ಲೂ ಕಣ್ಮನ ತಂಪಾಗಿಸುವ ವಿಜಯಪುರ

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕರ್ನಾಟಕದ 30 ಜಿಲ್ಲೆಗಳಲ್ಲೊಂದಾದ ದಾವಣಗೆರೆ ಜಿಲ್ಲೆಯ ದಾವಣಗೆರೆ ಪಟ್ಟಣವು ಬೆಣ್ಣೆ ಮಸಾಲೆ ದೋಸೆಗಾಗಿ ರಾಜ್ಯದಲ್ಲೆ ಹೆಸರುವಾಸಿಯಾಗಿದೆ. ಇದರ ಜನಪ್ರೀಯತೆ ಎಷ್ಟಿದೆ ಎಂದರೆ ಬಹುತೇಕ ರಾಜ್ಯದ ಎಲ್ಲ ಪ್ರಮುಖ ಮಹಾ ನಗರಗಳಲ್ಲಿ ದಾವಣಗೆರೆ ಬೆಣ್ಣೆ ದೊಸೆ ಒದಗಿಸುವ ಹೋಟೆಲುಗಳನ್ನು ಕಾಣಬಹುದು.

ಚಿತ್ರಕೃಪೆ: Kiran Kollepalli

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಕರೆಯಲ್ಪಡುವ ಮೈಸೂರು ನಗರ ಪ್ರವಾಸಿ ವಿಶೇಷ ನಗರವೂ ಹೌದು. ಸಾಕಷ್ಟು ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಈ ನಗರಕ್ಕೆ ಅದರಲ್ಲೂ ವಿಶೇಷವಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ. ಮೈಸೂರು ತನ್ನಲ್ಲಿ ದೊರಕುವ ಒಂದು ಸಿಹಿ ಖಾದ್ಯವಾದ ಮೈಸೂರು ಪಾಕ್ ತಿನಿಸಕ್ಕೆ ಪ್ರಖ್ಯಾತಿ ಪಡೆದಿದೆ. ಮೈಸೂರು ಪ್ರವಾಸಿ ಆಕರ್ಷಣೆಗಳು

ಚಿತ್ರಕೃಪೆ: Ezhuttukari

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ನೂತನ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜಂಟಿ ರಾಜಧಾನಿ ನಗರವಾದ ಹೈದರಾಬಾದ್ ನಗರವು ತನ್ನಲ್ಲಿ ದೊರಕುವ ಉತ್ಕೃಷ್ಟ ಮಟ್ಟದ ಬಿರಿಯಾನಿ ಅನ್ನಕ್ಕಾಗಿ ಸುಪ್ರಸಿದ್ಧವಾಗಿದೆ. ಹೈದರಾಬಾದ್ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ದೊರೆಯುವ ಬಾಯಲ್ಲಿ ನೀರೂರಿಸುವ ಬಿರಿಯಾನಿ ಚಪ್ಪರಿಸದೆ ಹಿಂತಿರುಗುವುದೇ ಇಲ್ಲ ಎಂದರೂ ತಪ್ಪಾಗಲಾರದು. ಹೈದರಾಬಾದ್ ಪ್ರವಾಸಿ ಆಕರ್ಷಣೆಗಳು

ಚಿತ್ರಕೃಪೆ: Kumar's Edit

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ತಮಿಳುನಾಡಿನ ಮದುರೈ ಪಟ್ಟಣವು ಎಂದಿಗೂ ನಿದ್ರಿಸಲಾರದ ನಗರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ದೇವಾಲಯಗಳ ಈ ಸುಂದರ ತೀರ್ಥ ಕ್ಷೇತ್ರವು ಒಂದು ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗುವ ತಂಪು ಪಾನೀಯಕ್ಕೆ ಬಲು ಖ್ಯಾತಿ ಗಲಿಸಿದೆ. ಹೌದು ಈ ಪಾನೀಯವನ್ನು ಇಲ್ಲಿ "ಜಿಗರ್ ಥಂಡಾ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಹಿಂದಿಯ ಈ ಪದವನ್ನು ಅರ್ಥೈಸಿದಾಗ "ಹೃದಯ ತಂಪಾಗಿಸುವ" ಪಾನೀಯ ಎಂದು ಹೇಳಬಹುದು. ಹೆಚ್ಚಾಗಿ ಬೇಸಿಗೆಯ ಸಂದರ್ಭದಲ್ಲಿ ಮದುರೈನ ಎಲ್ಲ ಪಾನೀಯ ಅಂಗಡಿಗಳಲ್ಲಿ ಇದು ದೊರೆಯುತ್ತದೆ. ಮದುರೈ ಕುರಿತು

ಚಿತ್ರಕೃಪೆ: எஸ்ஸார்

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಅರಿಸೀಯಂ ಪರುಪು ಎಂಬ ಸರಳವಾದ ಖಾದ್ಯ ತಮಿಳುನಾಡಿನ ಕೋಯಮತ್ತೂರಿನ ವಿಶೇಷ ಖಾದ್ಯ. ಇದು ಒಂದು ರೀತಿಯಲ್ಲಿ ಬಿಸಿಬೇಳೆ ಭಾತ್ ರೀತಿಯ ಹಾಗೆ ತಯಾರಿಸಲಾಗುತ್ತದೆ.

ಚಿತ್ರಕೃಪೆ: Sodabottle

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು ಭಾಗವಾಗಿದ್ದು, ಒಟ್ಟಾರೆಯಾಗಿ 75 ಗ್ರಾಮಗಳನ್ನು ಹೊಂದಿದೆ. ಚೆಟ್ಟಿನಾಡ್ ಪ್ರಾಂತ್ಯದ ಭಾಗವಾಗಿರುವುದರಿಂದ ಚೆಟ್ಟಿನಾಡ್ ಶೈಲಿಯ ಊಟಕ್ಕೆ ಇದು ಸುಪ್ರಸಿದ್ಧವಾಗಿದೆ. ಚೆಟ್ಟಿನಾಡ್ ಭೋಜನವು ಸಾಮಾನ್ಯವಾಗಿ ಖಾರಮಯವಾಗಿದ್ದು ಶಾಖಾಹಾರ ಮತ್ತು ಮಾಂಸಾಹಾರಗಳೆರಡನ್ನೂ ಒಳಗೊಂಡಿರುತ್ತದೆ. ಅದರಲ್ಲೂ ವಿಶೇಷವಾಗಿ ಚಿಕನ್ ಖಾದ್ಯವು ಬಲು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sonja Pieper

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಅಂಬೂರ್ ತಮಿಳುನಾಡಿನ ವೆಲೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಈ ಪಟ್ಟಣವು ತನ್ನಲ್ಲಿ ದೊರಕುವ ಅಂಬೂರ್ ದ್ಮ್ ಬಿರಿಯಾನಿಯಿಂದ ಇಡೀ ರಾಜ್ಯದಲ್ಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Vivekmandre

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕೊಂಕಣ ಮಹಾರಾಷ್ಟ್ರವು ತನ್ನದೆ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಇದರ ಪರಿಣಾಮವು ಅಲ್ಲಿ ತಯಾರಿಸಲಾಗುವ ಖಾದ್ಯಗಳ ಮೇಲೆಯೂ ಆಗಿರುವುದನ್ನು ಗಮನಿಸಬಹುದು. ಪಾಲ್ಘಡ್, ರಾಯ್ಗಡ್, ಮುಂಬೈ, ರತ್ನಾಗಿರಿ ಹಾಗೂ ಸಿಂಧುದುರ್ಗ ಪ್ರಾಂತ್ಯಗಳು ಕೊಂಕಣ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಂಬ್ಡಿ ವಡಾ ಕೊಂಕಣ ಶೈಲಿಯ ಒಂದು ರುಚಿಕರ ಖಾದ್ಯವೆಂದೇ ಹೇಳಬಹುದು. ಇದು ಮೂಳೆಯುಕ್ತ ಚಿಕನ್ ತುಂಡುಗಳನ್ನು ಒಳಗೊಂಡಿರುತ್ತದೆ.

ಚಿತ್ರಕೃಪೆ: Ishan Manjrekar

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಭಾರತದ ಆರ್ಥಿಕ ಶಕ್ತಿ ಕೇಂದ್ರ ಎಂದೆ ಬಿಂಬಿತವಾಗಿರುವ ಮುಂಬೈ ಮಹಾ ನಗರವು ಸಾಕಷ್ಟು ವೈವಿಧ್ಯಮಯ ದೇಶೀಯ ಹಾಗೂ ವಿದೇಶೀಯ ಖಾದ್ಯಗಳು ದೊರಕುವ ಸ್ಥಳ. ಆದರೂ ಈ ನಗರದ ಮಧ್ಯಮ ವರ್ಗದವರ ಪಾಲಿಗೆ ಇಂದೂ ಕೂಡ ವಡಾ ಪಾವ್ ನೆಚ್ಚಿನ ಖಾದ್ಯ. ಹೀಗಾಗಿ ಒಮ್ದು ರೀತಿಯಲ್ಲಿ ಮುಂಬೈ ಅಂದಾಗ ಇತರೆ ಮಸಾಲೆ ಚಾಟ್ ಗಳ ವಡಾ ಪಾವ್ ಬಹುವಾಗಿ ಜ್ಞಾಪಿಸಿಕೊಳ್ಳಲಾಗುತ್ತದೆ. ಮುಂಬೈ ಜೀವನ ಅಗೋಚರ ಮುಖಗಳು

ಚಿತ್ರಕೃಪೆ: Dinesh Bareja

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಮಹಾರಾಷ್ಟ್ರದ ಮತ್ತೊಂದು ಪ್ರವಾಸಿ ಪುಣ್ಯ ಕ್ಷೇತ್ರವಾದ ಕೊಲ್ಹಾಪುರವು ಲಕ್ಷ್ಮಿ ದೇವಿಯ ಗುಡಿಗೆ ಹೆಸರಾಗಿರುವುದು ಅಲ್ಲದೆ ತನ್ನಲ್ಲಿ ದೊರಕುವ ಮಿಸಲ್ ಪಾವ್ ಗೂ ಕೂಡ ಪ್ರಸಿದ್ಧಿ ಪಡೆದಿದೆ. ಇದು ಪಾವ್ ಭಾಜಿಯಂತೆಯೆ ಕಂಡರೂ ಕೂಡ ರುಚಿಯಲ್ಲಿ ಗುರುತರವಾದ ಬದಲಾವಣೆ ಹೊಂದಿದ್ದು ಹೆಚ್ಚು ಖಾರವಾಗಿರುತ್ತದೆ. ಪಾವ್ ಬದಲಾಗಿ ಬ್ರೆಡ್ ಗಳನ್ನು ಬಳಸಲಾಗುತ್ತದೆ.

ಚಿತ್ರಕೃಪೆ: Ankur P

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕೊಟ್ಟಾಯಂ, ಕೇರಳಾ ರಾಜ್ಯದ ಬಹು ಪುರಾತನ ನಗರ. ದೇವರ ಸ್ವಂತ ನಗರ ಎಂದೇ ಕರೆಸಿಕೊಳ್ಳುವ ಕೊಟ್ಟಾಯಂ ಇಲ್ಲಿನ ಜಿಲ್ಲಾ ಕೇಂದ್ರವೂ ಹೌದು. ಶಿಕ್ಷಣ ಹಾಗೂ ಮುದ್ರಣ ಮಾಧ್ಯಮಕ್ಕೆ ಈ ನಗರ ಅಪಾರ ಕೊಡುಗೆ ನೀಡಿರುವುದರಿಂದ ಇಂದು ಈ ನಗರವನ್ನು 'ಅಕ್ಷರ ನಗರ' ಅಥವಾ 'ಸಿಟಿ ಆಫ್ ಲೆಟರ್ಸ್' ಎಂದು ಕರೆಯುತ್ತಾರೆ. ಮಲಯಾಳಂ ಪದ 'ಕೊಟ್ಟ' ಅಂದರೆ ಕೋಟೆ ಹಾಗೂ 'ಅಕ್ಕಂ' ಎಂದರೆ ಒಳಭಾಗ ಎಂಬ ಅರ್ಥ ನೀಡುತ್ತದೆ. ಈ ಎರಡು ಪದಗಳು ಸೇರಿ ಕೊಟ್ಟಾಯಂ ಎಂಬ ಹೆಸರು ಬಂದಿದ್ದು ಇದರ ಸಂಪೂರ್ಣ ಅರ್ಥ 'ಕೋಟೆಯ ಒಳಭಾಗ'ಎಂದಾಗಿದೆ. ಇದು ಪ್ರಸಿದ್ಧವಾಗಿರುವುದು ಅಪ್ಪಂ ಎಂಬ ಖಾದ್ಯಕ್ಕೆ. ಇದು ದೋಸೆಯಂತೆ ಅನಿಸಿದರೂ ಸಹ ಬಟ್ಟಲಾಕಾರದಲ್ಲಿದ್ದು ಹಾಲು ಇಲ್ಲವೆ ಮಾಂಸಾಹಾರದೊಂದಿಗೆ ತಿನ್ನಲಾಗುತ್ತದೆ.

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕೇರಳದ ಕಣ್ಣೂರು ಜಿಲ್ಲೆಯ ಜನಪ್ರಿಯ ನಗರಿ ತಲಸ್ಸೆರಿ. ಉತ್ತರ ಕೇರಳ ರಾಜ್ಯದ ಡೈನಾಮಿಕ್‌ ನಗರಿ. ಇದು ತೆಲ್ಲಿಚ್ಚೆರ್ರಿ ಅನ್ನುವ ಹೆಸರಿನಿಂದಲೂ ಪರಿಚಿತವಾಗಿದೆ. ಈ ನಗರಿಯು ಮಲಬಾರ್‌ ಕಡಲ ತೀರದ ಚಿನ್ನದ ಹೊದಿಕೆಯನ್ನೇ ಹೊದ್ದು ಕುಳಿತಿದೆ. ಅತ್ಯಾಕರ್ಷಕ ನಿಸರ್ಗ ಸೌಂದರ್ಯ ಒಳಗೊಂಡಿರುವ ಜತೆಗೆ ಈ ನಗರಿಯು ವಿಶಿಷ್ಟ ಹಾಗೂ ಮಹತ್ವದ ಇತಿಹಾಸವನ್ನು ಹೊಂದಿದೆ. ಇದು ಜನಪ್ರೀಯವಾಗಿರುವುದು ಇಲ್ಲಿ ದೊರಕುವ ಬಿರಿಯಾನಿಗಾಗಿ. ಇದು ತಲಸ್ಸೇರಿ ಬಿರಿಯಾನಿ ಎಂದೆ ಕೇರಳ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Ks.mini

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕೇರಳದ ರಾಜ್ಯದ ರಾಜಧಾನಿ ತಿರುವನಂತಪುರಂ ದೇವತೆಗಳ ನಾಡು ಎಂದೇ ಕರೆಯಲ್ಪಡುತ್ತದೆ. ತಿರುವನಂತಪುರಂ ನ್ನು ಕೆಲವೊಮ್ಮೆ ತ್ರಿವೇಂದ್ರಂ ಎಂದೂ ಕರೆಯಲಾಗುತ್ತದೆ. ಇದು ಭಾರತದ ದಕ್ಷಿಣದ ತುದಿಯ ಪಶ್ಚಿಮ ಕರಾವಳಿಯಲ್ಲಿದೆ. ಇತ್ತೀಚಿಗೆ ರಾಷ್ಟ್ರೀಯ ಬೌಗೋಳಿಕ / ನ್ಯಾಶನಲ್ ಜಿಯೋಗ್ರಫಿ ಟ್ರಾವೆಲರ್ ಈ ಸ್ಥಳವನ್ನು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಎಂದು ಪಟ್ಟಿಮಾಡಿದ್ದಾರೆ. ಪುಟ್ಟ ಎಂಬ ಹೆಸರಿನ ಶಾಖಾಹಾರ ತಿಂಡಿಯು ಇಲ್ಲಿ ಹೆಸರುವಾಸಿಯಾಗಿದೆ. ಇದನ್ನು ಅಕ್ಕಿ, ಹಾಲು ಹಾಗೂ ತೆಂಗಿನ ಕೊಬ್ಬರಿಯಿಂದ ತಯಾರಿಸಲಾಗುತ್ತದೆ.

ಚಿತ್ರಕೃಪೆ: Marie-Leonie

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಪೃಕೃತಿ ರಮ್ಯತೆಯೊಂದಿಗೆ, ಔದ್ಯೋಗಿಕ ಹಾಗೂ ವ್ಯಾಪಾರೀ ಕ್ಷೇತ್ರವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ. 'ಕೊಚ್ಚಿ' ಅಂದರೆ ಮಲಯಾಳಂ ನಲ್ಲಿ ಒಂದು ಸಣ್ಣಗಿನ ತಗ್ಗಾದ ಪ್ರದೇಶ ಎಂಬಂರ್ಥವಿದೆ. ಕೋಚು ಮತ್ತು ಅಝಿ ಎಂಬೆರಡು ಶಬ್ದಗಳ ಕೂಡುವಿಕೆಯಿಂದ ಈ ಹೆಸರಿನ ಉತ್ಪತ್ತಿಯಾಗಿದೆ. ಈ ಹೆಸರು ಬಂದರು ನಗರಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ವಿಶ್ವದಾದ್ಯಂತ ಈ ಹೆಸರಿಗೆ ಮೆಚ್ಚುಗೆಯಿದೆ. ಮೊದಲೆ ಕರಾವಳಿ ತೀರವಾಗಿರುವುದರಿಂದ ಸಮುದ್ರ ಜೀವಿಗಳ ಖಾದ್ಯಗಳಿಗೆ ಇದು ಹೆಸರುವಾಸಿಯಾಗಿದೆ. ಅದರಲ್ಲೂ ವಿಶೇಷವಾಗಿ ಇದು ಮೀನಿನ ಖಾದ್ಯಕ್ಕೆ ಹೆಚ್ಚು ಪ್ರಸಿದ್ಧ.

ಚಿತ್ರಕೃಪೆ: Hans A. Rosbach

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಪ್ರವಾಸಿ ಸ್ಥಳಗಳ ವಿಶೇಷ ಖಾದ್ಯಗಳು:

ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ ತೀರ ಹೊಂದಿರುವ ಭಟ್ಕಳ ಪಟ್ಟಣವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಭಟ್ಕಳ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ನಂ.17 ರ ಮಾರ್ಗದಲ್ಲಿದ್ದು ಇಲ್ಲಿಗೆ ಕೊಂಕಣ ರೈಲು ಮಾರ್ಗದ ಮೂಲಕವೂ ತಲುಪಬಹುದಾಗಿದೆ. ಭಟ್ಕಳದ ಬಿರಿಯಾನಿ ಹೆಚ್ಚು ಪ್ರಸಿದ್ಧವಾಗಿದ್ದು ಭಟ್ಕಳ ಬಿರಿಯಾನಿ ಎಂತಲೆ ಕರೆಯಲ್ಪಡುತ್ತದೆ.

ಚಿತ್ರಕೃಪೆ: Sharf Tonse

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X