Search
  • Follow NativePlanet
Share
» »ತಮಿಳುನಾಡಿನ ಪ್ರಮುಖ ದೇವಿಯ ದೇವಾಲಯಗಳು

ತಮಿಳುನಾಡಿನ ಪ್ರಮುಖ ದೇವಿಯ ದೇವಾಲಯಗಳು

By Vijay

ದಕ್ಷಿಣ ಭಾರತದಲ್ಲಿ ಸಾಕಷ್ಟು ದೇವಾಲಯ ಮತ್ತು ದೇಗುಲಗಳಿಂದ ಕೂಡಿರುವ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವೂ ಸಹ ಒಂದು. ಈ ರಾಜ್ಯದಲ್ಲಿ ಏನಿಲ್ಲವೆಂದರೂ ಬಹೌತೇಕವಾಗಿ 33,000 ಗಳಷ್ಟು ಪುರಾತನ ಹಿಂದೂ ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಬಹಳಷ್ಟು ದೇವಾಲಯಗಳು 800 ರಿಂದ 1200 ವರ್ಷಗಳಷ್ಟು ಪುರಾತವಾದುದುಗಳಾಗಿವೆ.

ಆದ್ದರಿಂದ ಈ ರಾಜ್ಯವನ್ನು ಒಮ್ಮೊಮ್ಮೆ "ದೇವಾಲಯಗಳ ಭೂಮಿ" ಎಂತಲೂ ಕರೆಯುತ್ತಾರೆ. ದೊಡ್ಡ ಗೋಪುರಗಳ, ಕಟ್ಟಡ ಸಂಕೀರ್ಣಗಳ ಹೆಚ್ಚು ಹಿಂದೂ ದೇವಾಲಯಗಳನ್ನು ಈ ರಾಜ್ಯದಲ್ಲಿಯೆ ಕಾಣಬಹುದು. ಅಲ್ಲದೆ ಈ ರಾಜ್ಯವು ದೇವಿಯ ದೇವಾಲಯಗಳಿಗೂ ಸಹ ಹೆಸರುವಾಸಿ.

ವಿಶೇಷ ಲೇಖನ : ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಯಾತ್ರೆಗಳು

ಸಾಮಾನ್ಯವಾಗಿ ಇಲ್ಲಿ ದೇವಿಯ ದೇವಾಲಯಗಳನ್ನು ಅಮ್ಮನವರ ಸನ್ನಿಧಿ ಎಂದು ಸಂಭೋದಿಸಿ ಕರೆಯುತ್ತಾರೆ. ಶಾಂತಮಯ ಕನ್ಯಾಕುಮಾರಿಯಿಂದ ಹಿಡಿದು ರುದ್ರಮಯ ಕಾಳಿಯವರೆಗೆ ಸಾಕಷ್ಟು ಸುಪ್ರಸಿದ್ಧ ದೇವಿಯ ದೇವಾಲಯಗಳನ್ನು ತಮಿಳುನಾಡಿನಲ್ಲಿ ಕಾಣಬಹುದು.

ಪ್ರಸ್ತುತ ಲೇಖನದ ಮೂಲಕ ಈ ರಾಜ್ಯದಲ್ಲಿರುವ, ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿರುವ ಕೆಲವು ಪ್ರಮುಖ ದೇವಿಯ ದೇವಾಲಯಗಳ ಕುರಿತು ತಿಳಿಯಿರಿ.

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಅಷ್ಟಲಕ್ಷ್ಮಿ ದೇವಸ್ಥಾನ : ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈ ನಗರದಲ್ಲಿರುವ ಈ ದೇವಸ್ಥಾನವು ಲಕ್ಷ್ಮಿ ದೇವಿಗೆ ಮುಡಿಪಾದ ಸುಂದರ ದೇವಾಲಯವಾಗಿದೆ. ಲಕ್ಷ್ಮಿ ದೇವಿಯ ಅಷ್ಟ ಅಂದರೆ ಎಂಟು ರೂಪಗಳಿಗೆ ಇದು ಹೆಸರುವಾಸಿಯಾಗಿದ್ದು ನಗರದ ಎಲಿಯಟ್ ಕಡಲ ತೀರದ ಬಳಿ ನೆಲೆಸಿದೆ.

ಚಿತ್ರಕೃಪೆ: Summer yellow

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

1974 ರಲ್ಲಿ ಶಂಖು ಸ್ಥಾಪನೆಯಾಗಿ ಕಂಚಿ ಮಠದ ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳಿಂದ ಈ ದೇವಾಲಯ ನಿರ್ಮಾಣವಾಗಿದ್ದು 1976 ಸಂಪೂರ್ಣ ನಿರ್ಮಾಣ ಕಾಮಗಾರಿ ಮುಗಿದು ದೇವಿಯರು ಪ್ರತಿಷ್ಠಾಪಿಸಲ್ಪಟ್ಟರು. ಪ್ರಸ್ತುತ ದೇವಾಲಯದಲ್ಲಿ ಎಂಟು ಪ್ರತ್ಯೇಕ ಗರ್ಭಗೃಹಗಳಿದ್ದು ಅವುಗಳಲ್ಲಿ ಎಂಟು ರೂಪದ ಅಷ್ಟ ಲಕ್ಷ್ಮಿಯರನ್ನು ಕಾಣಬಹುದು. ಸಾಮಾನ್ಯವಾಗಿ ಶುಕ್ರವಾರಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Sudharsun.j

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪಟ್ಟೀಶ್ವರಂ ದುರ್ಗಾ ದೇವಿ ದೇವಾಲಯ : ತಂಜಾವೂರು ಜಿಲ್ಲೆಯ ಕುಂಭಕೋಣಂ ತಾಲೂಕಿನ ಪಟ್ಟೀಶ್ವರಂ ಹಾಳಿಯಲ್ಲಿ ಈ ದೇವಾಲಯವಿದೆ. ಮೂಲತಃ ಇದು ಪಟ್ಟೀಶ್ವರರ ಅಂದರೆ ಶಿವನಿಗೆ ಮುಡಿಪಾದ ದೇವಸ್ಥಾನವಾಗಿದೆಯಾದರೂ ಇಲ್ಲಿರುವ ಪ್ರಸನ್ನ ಮುಖದ ಮುಋ ಕಣ್ಣುಗಳುಳ್ಳ ದುರ್ಗಾ ಮಾತೆಯ ಸನ್ನಿಧಿಯು ಅಪಾರ ಜನಪ್ರೀಯತೆ ಗಳಿಸಿದೆ.

ಚಿತ್ರಕೃಪೆ: VasuVR

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪ್ರತ್ಯಂಗಿರಾ ದೇವಿ ದೇವಾಲಯ : ಮಹಾ ಪ್ರತ್ಯಂಗಿರಾ ದೇವಿಯ ಶಾಂತ ರೂಪದ ವಿಗ್ರಹವಿರುವ ಅಪರೂಪದ ದೇವಸ್ಥಾನ ಇದಾಗಿದ್ದು ಚೆನ್ನೈನಲ್ಲಿರುವ ಶೊಲ್ಲಿಂಗನಲ್ಲೂರಿನಲ್ಲಿದೆ. ಈ ದೇವಿಗೆ ಸಂಭದಿಸಿದಂತೆ ಹಲವು ಕಥೆಗಳು ಚಾಲ್ತಿಯಲ್ಲಿವೆ. ಸಿಂಹದ ಮುಖ ಸ್ತ್ರೀಯ ದೇಹ, ತಲೆಬುರುಡೆಗಳ ಹಾರ, ಸಿಂಹ ವಾಹನ, ತ್ರಿಶೂಲ, ಸರ್ಪ, ಚಂದ್ರಾದಿಗಳನ್ನು ಹಿಡಿದಿರುವ ಈ ದೇವಿಯನ್ನು ನರಸಿಂಹಿಕಾ ಎಂದು ಬಣ್ಣಿಸಲಾಗಿದೆ. ಇನ್ನೊಂದು ಕಥೆಯ ಪ್ರಕಾರ, ನರಸಿಂಹ ದೇವ ಉಗ್ರತೆಯನ್ನು ಶಮನಗೊಳಿಸಲು ತ್ರಿಮೂರ್ತಿಗಳ ಪತ್ನಿಯರು ಈ ದೇವಿಯನ್ನು ನಿರ್ಮಿಸಿದರೆನ್ನಲಾಗುತ್ತದೆ. ದುಷ್ಟ ಹಾಗೂ ಮಂತ್ರ ತಂತ್ರ ಶಕ್ತಿಗಳು ನುಸುಳದೆ ಇರಲು ಈ ದೇವಿಯನ್ನು ಪೂಜಿಸುತ್ತಾರೆ.

ಚಿತ್ರಕೃಪೆ: Ganapati Pujans

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯ ಬಳಿ ಸ್ಥಿತವಿರುವ ಈ ದೇವಿಯ ದೇವಾಲಯವು ಪ್ರತಿ ದಿನ ಬೆಳಿಗ್ಗೆ ಎಂಟರಿಂದ ಅಪರಾಹ್ನದವರೆಗೂ, ಸಂಜೆ ನಾಲ್ಕರಿಂದ ರಾತ್ರಿ ಎಂಟರವರೆಗೂ ತೆರೆದಿರುತ್ತದೆ. ಇನ್ನೂ ರವಿವಾರದಂದ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೂ ತೆರೆದಿರುತ್ತದೆ.

ಚಿತ್ರಕೃಪೆ: Work2win

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಅಂಗಾಳಮ್ಮನವರ ದೇವಾಲಯ : ವಿಲ್ಲುಪುರಂ ಜಿಲ್ಲೆಯ ಸೆಂಜಿಯಲ್ಲಿರುವ ಮಲ್ಮಲಯೂರ್ ನಲ್ಲಿರುವ ಈ ದೇವಾಲಯವು ಪ್ರದೇಶದ ಸುಪ್ರಸಿದ್ಧ ದೇವಿಯ ದೇವಾಲಯವಾಗಿದ್ದು ದಕ್ಷಿಣ ಭಾರತದಿಂದೆಲ್ಲ ಭಕ್ತಾದಿಗಳು ಈ ದೇವಿಯ ದರುಶನಕ್ಕೆ ಅದರಲ್ಲೂ ವಿಶೇಷವಾಗಿ ಹುಣ್ಣಿಮೆಯ ದಿನಗಳಂದು ಆಗಮಿಸುತ್ತಾರೆ. ಈಕೆಯನ್ನು ಅತ್ಯಂತ ಶಕ್ತಿಶಾಲಿ ದೇವಿಯಂದು ಸ್ಥಳೀಯರು ನಂಬುತ್ತಾರೆ.

ಚಿತ್ರಕೃಪೆ: Sakthijanani

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಬನ್ನಾರಿ ಅಮ್ಮನವರ ದೇವಾಲಯ : ತಮಿಳುನಾಡಿನಲ್ಲಿರುವ ಅಮ್ಮನವರ ಪ್ರಮುಖ ದೇವಸ್ಥಾನಗಳ ಪೈಕಿ ಇದೂ ಸಹ ಒಂದು. ಬನ್ನಾರಿ ಪಟ್ಟಣದಲ್ಲಿರುವ ಈ ದೇವಾಲಯವು ಈರೋಡ್ ಜಿಲ್ಲೆಯ ಸತ್ಯಮಂಗಲಂಗೆ ಹತ್ತಿರದಲ್ಲಿದೆ. ದೇವಸ್ಥಾನದ ಪ್ರವೇಶ ದ್ವಾರ.

ಚಿತ್ರಕೃಪೆ: Krishnaeee

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಲಕ್ಷ್ಮಿ ದೇವಸ್ಥಾನ : ವೇಲೂರು ನಗರದ ಮಲೈಕೊಡಿ ಎಂಬ ಸ್ಥಳದಲ್ಲಿರುವ ಶ್ರೀ ಲಕ್ಷ್ಮಿ ದೇವಿಯ ದೇವಸ್ಥಾನವು ತನ್ನ ಚಿನ್ನದ ವೈಭವಕ್ಕಾಗಿ ಪ್ರಖ್ಯಾತವಾಗಿದೆ. ಲಕ್ಷ್ಮಿ ನಾರಾಯಣಿ ದೇವಸ್ಥಾನ ಎಂದು ಕರೆಯಲಾಗುವ ಈ ದೇವಸ್ಥಾನದ ನಿರ್ಮಾಣದಲ್ಲಿ ಕೆಲವು ಭಾಗಗಳನ್ನು ಚಿನ್ನದ ಹಾಳೆಗಳನ್ನು ಬಳಸಿ ನಿರ್ಮಿಸಲಾಗಿದೆ. ನಕ್ಷತ್ರಾದಾಕರದಲ್ಲಿರುವ ಸ್ಥಳದಲ್ಲಿ ನಿರ್ಮಾಣವಾಗಿದ್ದು ಲಕ್ಷ್ಮಿ ದೇವಿಯು ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಾಳೆ.

ಚಿತ್ರಕೃಪೆ: Dsudhakar555

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ತಾಮ್ರದ ಹಲಗೆಗಳ ಮೇಲೆ ಚಿನ್ನದ ಹಾಳೆಗಳನ್ನು ಬಳಸಿ ನಿಪುಣ ಶಿಲ್ಪಿಗಳಿಂದ ಅದರಲ್ಲೂ ವಿಶೇಷವಾಗಿ ಚಿನ್ನದ ಕುಸುರಿ ಕೆಲಸ ಮಾಡುವವರಿಂದ ಕೆತ್ತನೆಗಳನ್ನು ಸೂಕ್ಷ್ಮವಾಗಿ ಅಷ್ಟೆ ಮನೋಹರವಾಗಿ ಕೆತ್ತಿಸಲಾಗಿದ್ದು, ಕೊಳದ ಮಧ್ಯದಲ್ಲಿ ನಿಂತಿರುವ ದೇವಾಲಯವು ವೈಭವೋಪೇತವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ag1707

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪೆರಿಯನಾಯಕಿ ಅಮ್ಮನವರ ದೇವಸ್ಥಾನ : ತಿರುವಣ್ಣಾಮಲೈ ಜಿಲ್ಲೆಯ ದೇವಿಕಾಪುರಂ ಪಟ್ಟಣದಲ್ಲಿರುವ ದೇವಿಯ ಈ ದೇವಸ್ಥಾನವು ತಿರುವಣ್ಣಾಮಲೈನ ಅರುಣಾಚಲೇಶ್ವರರ್ ದೇವಸ್ಥಾನದ ನಂತರದಲ್ಲಿರುವ ಎರಡನೆಯ ದೊಡ್ಡ ದೇವಾಲಯವಾಗಿದೆ. ವಿಜಯನಗರದ ಅರಸರಿಂದ 14 ನೆಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.

ಚಿತ್ರಕೃಪೆ: Balu 606902

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಕಾಮಾಕ್ಷಿ ಅಮ್ಮನವರ ದೇವಸ್ಥಾನ : ಕಾಮಾಕ್ಷಿ ದೇವಾಲಯವು ಪಾರ್ವತೀದೇವಿಯ ಒಂದು ರೂಪವಾದ ಕಾಮಾಕ್ಷಿ ಡೆವಿಗೆ ಮುಡಿಪಾದ ದೇವಾಲಯವಾಗಿದೆ. ಬಹುಶಃ ದೇವಾಲಯವನ್ನು ಪಲ್ಲವ ವಂಶದ ರಾಜರು ಆರನೇಯ ಶತಮಾನದಲ್ಲಿ ಕಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಕಂಚಿಪುರಂನಲ್ಲಿರುವ ಈ ದೇವಿಯ ದೇವಸ್ಥಾನ ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: SINHA

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ವಿಶೇಷವೆಂದರೆ ದೇವಾಲಯದಲ್ಲಿರುವ ಅಮ್ಮನವರ ವಿಗ್ರಹವು ನಿಂತಿರುವ ಭಂಗಿಯಲ್ಲಿರಲಾರದೆ ಬದಲಾಗಿ ಕುಳಿತಿರುವ ಭಂಗಿಯಲ್ಲಿದೆ. ಕಾಮಾಕ್ಷಿ ದೇವಿಯು ಯೋಗಮುದ್ರೆಯಲ್ಲಿ ಕುಳಿತಿದ್ದು, ತುಂಬ ಶಾಂತ ಮತ್ತು ಗಂಭೀರವಾಗಿದ್ದಾಳೆ. ಆಶ್ಚರ್ಯವೆಂದರೆ ಹಿಂದೂಗಳಲ್ಲಿ ತುಂಬ ಜನಪ್ರಿಯ ದೇವತೆಯಾಗಿದ್ದರೂ ಪಾರ್ವತಿಯ ಈ ದೇವಾಲಯ ನಗರದಲ್ಲಿನ ಏಕೈಕ ದೇವಾಲಯವಾಗಿದೆ.

ಚಿತ್ರಕೃಪೆ: SINHA

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಮೂಲ ಭಾಗಗಳು ನೈಸರ್ಗಿಕಪ್ರಕೋಪಗಳಲ್ಲಿ ನಾಶವಾದ ಕಾರಣಕ್ಕೋ ಅಥವಾ ಕಾಲನ ಹೊಡೆತವನ್ನು ತಾಳದೆ ಇದ್ದ ಕಾರಣಕ್ಕೋ ಈ ದೇವಾಲಯದ ಅನೇಕ ಭಾಗಗಳು ಮರುನಿರ್ಮಾಣ ಕಂಡಿವೆ. ಏನೇ ಇರಲಿ, ಕಾಂಚೀಪುರಂನ ಎಲ್ಲ ರಾಜರು ಮೊದಲು ನಿರ್ಮಾಣಗೊಂಡಿದ್ದಂತೆ ದೇವಾಲಯವನ್ನು ಮರುನಿರ್ಮಿಸಲು ತಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಮೊದಲಿಗೆ ದೇವಾಲಯವನ್ನು ಕಟ್ಟಿದಾಗ ಗೋಡೆಗಳ ಮೇಲೆ ಇದ್ದ ಮೂಲದ ವಾಸ್ತುಶಿಲ್ಪವನ್ನು ಗುರುತಿಸುವಲ್ಲಿ ಸೂಕ್ಷ್ಮ ದೃಷ್ಟಿಯುಳ್ಳವರು ಯಶಸ್ವಿಯಾಗುತ್ತಾರೆ.

ಚಿತ್ರಕೃಪೆ: Will De Freitas

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಕೊಟ್ಟೈ ಮಾರಿ ಅಮ್ಮನವರ ದೇವಾಲಯ : ಈ ದೇವಾಲಯವು ಸೇಲಂ ಪಟ್ಟಣದಲ್ಲಿದೆ. ತಿರುಮನಿಮುತರ್ ನದಿಯ ಭಾಗದಲ್ಲಿರುವ ಈ ಪುರಾತನ ದೇವಸ್ಥಾನ ಸೇಲಂ ನ ಅತ್ಯಂತ ಪ್ರಾಚೀನ ದೇವಾಲಯ. ಇಲ್ಲಿ ಮಾರಿಯಮ್ಮ ದೇವಿಯ ವಿಗ್ರಹವಿದ್ದು ಇದು ಸೇಲಂ ಕೋಟೆಯನ್ನು ಕಾಯುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮಳೆಬಾರದ ಸಂದರ್ಭದಲ್ಲಿ ಭಕ್ತಾದಿಗಳು ಈ ದೇವಿ ಪೂಜೆಯನ್ನು ಮಾಡಿದರೆ ವರ್ಷಧಾರೆ ಆಗುವುದಾಗಿ ದೇವಿ ನುಡಿದಿದ್ದಾಳೆ ಎಂದು ಕೂಡ ಹೇಳಲಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದೇವಾಲಯವು ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: த*உழவன்

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಈ ಪ್ರದೇಶವನ್ನು ಆಳುವಾಗ ಚರ ರಾಜವಂಶದವರು ಈ ದೇವಸ್ಥಾನವನ್ನು ನಿರ್ಮಿಸಿದರು. ಸೇಲಂ ಕೋಟೆಯ ಹತ್ತಿರದಲ್ಲೆ ಇದನ್ನು ಕಟ್ಟಿದ್ದರಿಂದ ಈ ದೇವಸ್ಥಾನವನ್ನು ಕೋಟೆ ದೇವಸ್ಥಾನ ಎನ್ನಲಾಯಿತು. ಪ್ರತಿವರ್ಷ ಜುಲೈ ಮತ್ತು ಆಗಸ್ಟ್ ನಲ್ಲಿ ಒಂದು ವಾರ ನಡೆಯುವ ಸೇವಾಪತ ಮಾರಿಯಮ್ಮನ ಜಾತ್ರೆಗೆ ನೂರಾರು ಭಕ್ತಾದಿಗಳು ಇಲ್ಲಿ ಸೇರುವುದನ್ನು ಕಾಣಬಹುದು.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಮದಗು ಕತ್ತಾ ಅಮ್ಮನವರ ದೇವಸ್ಥಾನ : ಕೆಲವು ಗ್ರಾಮಗಳಲ್ಲಿ, ಸ್ಥಳಗಳಲ್ಲಿ ಇರಬಹುದಾದ ನೈಸರ್ಗಿಕ ಸಂಪತ್ತನ್ನು ಆಯಾ ಸ್ಥಳಗಳ ಕೆಲವು ಪ್ರಮುಖ ದೇವ, ದೇವತೆಗಳೆ ರಕ್ಷಿಸುತ್ತಾರೆ ಎಂಬ ನಂಬಿಕೆ ಭಾರತ ದೇಶದ ಸಾಕಷ್ಟು ಹಳ್ಳಿ, ಪಟ್ಟಣಗಳಲ್ಲಿ ಕಾಣಬಹುದು. ಅದೆ ರೀತಿಯ ಅಮ್ಮನವರ ದೇವಸ್ಥಾನ ಇದೂ ಸಹ ಆಗಿದೆ. ಅಂದರೆ ಗ್ರಾಮದ ಸಂಪನ್ಮೂಲವಾದ ನೀರಿನ ಜಲಾಶಯವನ್ನು ಎಂದಿಗೂ ಬತ್ತದೆ ಹೋಗುವಂತೆ ಮಾಡಿ ಈ ದೇವಿಯೆ ಕಾಪಾಡುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರದ್ದು. ವೇಲೂರು ಜಿಲ್ಲೆಯ ಅರಕೋಣಂ ತಾಲೂಕಿನ ಮಹೇಂದ್ರವಾಡಿ ಎಂಬ ಗ್ರಾಮದಲ್ಲಿ ದೇವಿಯ ಈ ದೇವಸ್ಥಾನವಿದೆ.

ಚಿತ್ರಕೃಪೆ: Narazu

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ದೇವಿಯದಲ್ಲದೆ ಇಲ್ಲಿ ವಿಷ್ಣು ಹಾಗೂ ಶಿವನ ದೇವಸ್ಥಾನಗಳನ್ನೂ ಸಹ ಕಾಣಬಹುದು. ಶಿವನ ದೇವಸ್ಥಾನವನ್ನು ಬ್ರಾಹ್ಮಣೇತರರು ನಿರ್ವಹಿಸಿದರೆ, ವಿಷ್ಣುವಿನ ದೇವಸ್ಥಾನವನ್ನು ಬ್ರಾಹ್ಮಣ ಕುಲದವರು ನಿರ್ವಹಿಸುತ್ತಾರೆ. ಆದರೆ ದೇವಿಯನ್ನು ಆರಾಧಿಸುವ ವರ್ಷಕ್ಕೊಮ್ಮೆ ಎರಡು ದಿನಗಳ ಕಾಲ ಜರುಗುವ ಉತ್ಸವಕ್ಕೆ ಎಲ್ಲರೂ ಒಮ್ಮತದಿಂದ ಪಾಲ್ಗೊಳ್ಳುತ್ತಾರೆ ಹಾಗೂ ದೇವಿಯನ್ನು ಅದ್ಭುತವಾಗಿ ಅಲಂಕರಿಸಿ ಸಡಗರದಿಂದ ಆರಾಧಿಸುತ್ತಾರೆ.

ಚಿತ್ರಕೃಪೆ: Narazu

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ನಾಮಗಿರಿ ಲಕ್ಷ್ಮಿ ದೇವಾಲಯ : ತಮಿಳುನಾಡಿನ ನಾಮಕ್ಕಲ್ ಅಥವಾ ನಾಮಗಿರಿ ನಗರದಲ್ಲಿರುವ ನಾಮಗಿರಿ ಲಕ್ಷ್ಮಿ ದೇವಿಯು ಸಾಕಷ್ಟು ಪ್ರಸಿದ್ಧಿ ಪಡೇದ ದೇವಿಯಾಗಿದ್ದಾಳೆ. ನಾಮಗಿರಿ ಲಕ್ಷ್ಮಿ ದೇವಿಯು ಭಾರತ ಕಂಡ ಅದ್ಭುತ ಗಣಿತಜ್ಞರಾಗಿದ್ದ ಶ್ರೀನಿವಾಸ ರಾಮಾನುಜಂ ಅವರ ಕುಟುಂಬ ದೇವಿಯೂ ಆಗಿದ್ದಾಳೆ. ನಗರದಲ್ಲಿರುವ ಹೆಸರಾಂತ ನರಸಿಂಹಸ್ವಾಮಿ ದೇವಾಲಯ ಸಂಕೀರ್ಣದಲ್ಲಿ ಈ ಲಕ್ಷ್ಮಿ ದೇವಿಯ ಪ್ರತ್ಯೇಕ ಸನ್ನಿಧಿಯಿದೆ.

ಚಿತ್ರಕೃಪೆ: Balajijagadesh

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ವೆಕ್ಕಾಲಿ ಅಮ್ಮನವರ ದೇವಸ್ಥಾನ : ತಿರುಚಿರಾಪಳ್ಳಿಯ ವರೈಯೂರ್ ಉಪನಗರದಲ್ಲಿ ದೇವಿಯ ಈ ದೇವಾಲಯವಿದೆ. ಪಾರ್ವತಿ ದೇವಿಯ ಅವತಾರವಾಗಿ ವೆಕ್ಕಾಲಿ ದೇವಿಯನ್ನು ಆರಾಧಿಸಲಾಗುತ್ತದೆ. ಪ್ರದೇಶವನ್ನು ಕಾಯುತ್ತಿರುವ ದೇವಿಯಾಗಿಯೂ ವೆಕ್ಕಾಲಿಯನ್ನು ಪೂಜಿಸಲಾಗುತ್ತದೆ.

ಚಿತ್ರಕೃಪೆ: TRYPPN

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಈ ದೇವಾಲಯದ ವಿಶೇಷವೆಂದರೆ ಇಲ್ಲಿನ ದೇವಿಯ ಗರ್ಭ ಗುಡಿಯಲ್ಲಿ ವಿಗ್ರಹದ ಮೇಲೆ ಯಾವ ಛಾವಣಿಯೂ ಇಲ್ಲದಿರುವುದು. ಪ್ರತಿ ದಿನವು ದೇವಿಯನ್ನು ಆರು ರೀತಿಯ ವಿಧಿ ವಿಧಾನಗಳಿಂದ ಆರಾಧಿಸಲಾಗುತ್ತದೆ ಹಾಗೂ ವರ್ಷದಲ್ಲಿ ಆರು ಬಾರಿ ವಿಶೇಷ ಪೂಜಾ ಕೈಂಕರ್ಯಗಳನ್ನು ಅಥವಾ ಉತ್ಸವಗಳನ್ನು ಆಯೋಜಿಸಲಾಗುತ್ತದೆ.

ಚಿತ್ರಕೃಪೆ: TRYPPN

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ದೇವಾಲಯದ ರಥವು ಚಿನ್ನದಿಂದ ನಿರ್ಮಿಸಲ್ಪಟ್ಟಿದ್ದು 2010 ರಲ್ಲಿ ಉದ್ಘಾಟಿಸಲಾಯಿತು. ದೇವಿಯ ಕುರಿತು ಇರುವ ಸ್ಥಳ ಪುರಾಣದ ಪ್ರಕಾರ, ಸಾಕಷ್ಟು ಬಾರಿ ದೇವಿಯ ವಿಗ್ರಹಕ್ಕೆ ಛಾವಣೆ ನಿರ್ಮಿಸಲಾಯಿತಾದರೂ ದೇವಿಯ ಶಕ್ತಿಯಿಂದ ಪ್ರತಿ ಸಲ ಛಾವಣಿಯು ಸುಟ್ಟು ಭಸ್ಮವಾಯಿತು.

ಚಿತ್ರಕೃಪೆ: TRYPPN

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಮೀನಾಕ್ಷಿ ಅಮ್ಮನವರ ದೇವಸ್ಥಾನ : ಮೀನಾಕ್ಷಿ ಆಮ್ಮನವರ ದೇವಸ್ಥಾನ ಅಥವಾ ಮೀನಾಕ್ಷಿ ದೇವಸ್ಥಾನವು ಶಿವನ ಪತ್ನಿ ಪಾರ್ವತಿಯ ಇನ್ನೊಂದು ಅವತಾರವಾದ ಮೀನಾಕ್ಷಿ ದೇವಿಗೆ ಮುಡಿಪಾಗಿದೆ.ಪಾರ್ವತಿಗೆ ಮೀನಾಕ್ಷಿ ಎಂಬ ಹೆಸರು ಇದೆ.

ಚಿತ್ರಕೃಪೆ: Alessandro Malatesta

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಈ ದೇವಸ್ಥಾನವು ತಮಿಳುನಾಡಿನಲ್ಲಿರುವ ಪ್ರಖ್ಯಾತ ಪ್ರವಾಸಿ ಕ್ಷೇತ್ರವಾದ ಮದುರೈ ನಗರದಲ್ಲಿದೆ ಹಾಗೂ ನಗರದ ಅತ್ಯಂತ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಪುರಾಣಗಳ ಪ್ರಕಾರ, ಶಿವನು ಒಂದೊಮ್ಮೆ ವಿವಾಹವಾಗುವ ಇಚ್ಚೆಯನ್ನು ತಳೆದು ಸುಂದರ ವಧುವಿನ ನಿರೀಕ್ಷೆಯಲ್ಲಿದ್ದಾಗ ಆ ವಧುವು ನೆಲೆಸಿರುವ ನಗರ ಮದುರೈ ಪಟ್ಟಣ ಎಂದು ತಿಳಿದು ಬಂತು. ನಗರದ ಎಲ್ಲೆಡೆಯಿಂದಲೂ ಕಾಣುವ ಮೀನಾಕ್ಷಿ ದೇವಾಲಯದ ಅದ್ಭುತವಾದ ಗೋಪುರ.

ಚಿತ್ರಕೃಪೆ: Esme Vos

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪಾರ್ವತಿಯನ್ನು ಮದುವೆಯಾಗುವ ಉದ್ದೇಶದಿಂದ ಶಿವನು ಮದುರೈ ನಗರಕ್ಕೆ ಭೇಟಿ ನೀಡಿದನು ಎಂಬ ನಂಬಿಕೆ ಇದೆ. ವೈಗೈ ನದಿಯ ದಕ್ಷಿಣ ತೀರದಲ್ಲಿ ಈ ಪ್ರಸಿದ್ಧ ದೇವಾಲಯವನ್ನು ಕಾಣಬಹುದಾಗಿದ್ದು, ಇದನ್ನು ಕ್ರಿ.ಶ 1600 ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ದೇವಾಲಯದ ಸಂಕೀರ್ಣದಲ್ಲಿರುವ ಪಾತಾಳ ಕಾಳಿಯ ವಿಗ್ರಹ.

ಚಿತ್ರಕೃಪೆ: Kesavan Muthuvel

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಆದರೆ ದೇವಸ್ಥಾನದ ಇಂದಿನ ರೂಪವನ್ನು ಪುನರ್ ನಿರ್ಮಿಸಿದ್ದು ಹಿಂದೆ ಈ ನಗರವನ್ನು ಆಳಿದ್ದ ನಾಯಕ ರಾಜವಂಶದವರು. ಈ ದೇವಸ್ಥಾನವನ್ನು ಆರು ಹೇಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು , ಹನ್ನೆರಡು ಪ್ರಮುಖ ದ್ವಾರಗಳನ್ನು ಹೊಂದಿದೆ. ಉತ್ಕೃಷ್ಟವಾದ ಕೆತ್ತನೆಗಳಿಂದ ಮನಸೆಳೆವ ದೇವಸ್ಥಾನದ ಖಂಬಗಳು.

ಚಿತ್ರಕೃಪೆ: cotaro70s

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಕಲೆಯಿಂದಾಗಿ ಈ ದೇವಸ್ಥಾನವು ವಿಶ್ವಖ್ಯಾತಿಯನ್ನು ಗಳಿಸಿದೆ. ಇಲ್ಲಿನ ಪ್ರಮುಖ ದ್ವಾರಗಳು 45 -50 ಮೀಟರಗಷ್ಟು ಎತ್ತರವಿದ್ದು ಅದರ ಮೇಲೆ ದೇವ ಮತ್ತು ದೇವತೆಗಳ ಕೆತ್ತಿರುವ ಚಿತ್ರಗಳಿವೆ.ಈ ದೇವಸ್ಥಾನದಲ್ಲಿ 985 ಖಂಬಗಳು ಮತ್ತು 14 ಗೋಪುರಗಳಿವೆ. ರಾತ್ರಿಯ ಸಮಯದಲ್ಲಂತೂ ಅದ್ಭುತವಾಗಿ ಗೋಚರಿಸುವ ಉದ್ದವಾದ, ವಿಶಿಷ್ಟವಾಗಿ ದೀಪಾಲಂಕೃತವಾದ ಖಂಬಗಳು.

ಚಿತ್ರಕೃಪೆ: J'ram DJ

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಕನ್ಯಾಕುಮಾರಿ ದೇವಸ್ಥಾನ : ಹೆಸರೆ ಹೇಳುವ ಹಾಗೆ ತಮಿಳುನಾಡಿನ ಒಂದು ಪ್ರಖ್ಯಾತ ಪ್ರವಾಸಿ ತಾಣವಾದ ಕನ್ಯಾಕುಮಾರಿಯಲ್ಲಿದೆ ಈ ದೇವಸ್ಥಾನ. ಈ ದೇವಿಯ ಹೆಸರಿನಿಂದಾಗಿಯೆ ಈ ಪಟ್ಟಣಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು ಸ್ವ-ಶಿಕ್ಷೆ ಕೊಟ್ಟುಕೊಳ್ಳುವ ಪಾರ್ವತಿಯ ಮರು ಅವತಾರವೆನ್ನಲಾದ ದೇವತೆಯ ದೇವಾಲಯವಾಗಿದೆ. ಕನ್ಯಾಕುಮಾರಿ ಎಂಬ ಹೆಸರು 'ಕನ್ಯಾ' ಮತ್ತು 'ಕುಮಾರಿ' ಎಂಬ ಎರಡು ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ ಎಂದರೆ ಹುಡುಗಿ ಎಂದರ್ಥವಾಗುತ್ತದೆ.

ಚಿತ್ರಕೃಪೆ: Sankarrukku

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಕಥೆಯ ಪ್ರಕಾರ, ಶಿವ ಮತ್ತು ಕನ್ಯಾಕುಮಾರಿಯ ಮದುವೆ ನಡೆಯದ ಕಾರಣ ಕನ್ಯಾಕುಮಾರಿಯು ಕನ್ಯೆಯಾಗಿಯೇ ಇರಲು ತೀರ್ಮಾನಿಸಿದಳು. ಮದುವೆಯ ಔತಣಕೂಟಕ್ಕೆಂದು ತರಲಾಗಿದ್ದ ದವಸ ಧಾನ್ಯಗಳೆಲ್ಲವು ಹಾಗೆ ಉಳಿದಿದ್ದರಿಂದ ಕಲ್ಲುಗಳಾಗಿ ಪರಿವರ್ತಿತವಾದವು ಎಂದು ಹೇಳಲಾಗುತ್ತದೆ. ಇಂದು ಪ್ರವಾಸಿಗರು, ನಡೆಯದೆ ಇರುವ ಆ ಮದುವೆಯ ಸ್ಮರಣಾರ್ಥವಾಗಿ ದವಸ ಧಾನ್ಯಗಳ ರೂಪದಲ್ಲೆ ಸಿಗುವ ಕಲ್ಲುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು. ಇಲ್ಲಿನ ವಿವೇಕಾನಂದ ಬಂಡೆಯ ಮೇಲಿರುವ ಕನ್ಯಾಕುಮಾರಿ ದೇವಸ್ಥಾನ.

ಚಿತ್ರಕೃಪೆ: Shantul

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

8 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಪಾಂಡ್ಯರಿಂದ ಕಟ್ಟಲಾಯಿತು. ನಂತರ ವಿಜಯನಗರ, ಚೋಳ ಹಾಗು ನಾಯಕ ರಾಜರಿಂದ ನವೀಕರಣಕ್ಕೊಳಪಟ್ಟಿತು. 18 ನೇ ಶತಮಾನದ ಪುಣ್ಯ ಸ್ಥಳವೊಂದು ಈ ದೇವಾಲಯದಲ್ಲಿದೆ ಎನ್ನಲಾಗಿದೆ. ಇಲ್ಲಿ ದೇವತೆಗಳ ಹೆಜ್ಜೆ ಗುರುತುಗಳನ್ನು ಕಾಣಬಹುದು.

ಚಿತ್ರಕೃಪೆ: Kainjock

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪಚ್ಚಿಯಮ್ಮಳ ದೇವಸ್ಥಾನ : ಸೇಲಂ ಜಿಲ್ಲೆಯ ಮಂಗುಪ್ಪೈ ಪಂಚಾಯತ್ ಪಟ್ಟಣದಲ್ಲಿರುವ ಪಚ್ಚಿಯಮ್ಮ ದೇವಾಲಯವು ಪಾರ್ವತಿ ದೇವಿಗೆ ಮುಡಿಪಾದ ದೇವಾಲಯವಾಗಿದೆ. ಇಲ್ಲಿ ಸಾಮಾನ್ಯವಾಗಿ ಎಲ್ಲೆಡೆ ದೇವಾಲಯಗಳಲ್ಲಿ ಕಂಡುಬರುವಂತೆ ಶಿಲೆಯ ವಿಗ್ರಹವಿರಲಾರದೆ ಮಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಕಾಣಬಹುದು.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಅಲ್ಲದೆ ಈ ದೇವಾಲಯದಲ್ಲಿ ಹಲವು ದೇವರುಗಳ ಬೊಂಬೆಗಳ ರೀತಿಯ ಮಣ್ಣಿನ ವಿಗ್ರಹಗಳಿದ್ದು ನೋಡಲು ಆಕರ್ಷಣೀಯವಾಗಿರುವುದು ಅಲ್ಲದೆ ಒಂದು ರೀತಿಯಲ್ಲಿ ಕುತೂಹಲ ಕೆರಳಿಸುತ್ತವೆ. ಮುಂದಿನ ಸ್ಲೈಡುಗಳಲ್ಲಿ ಈ ದೇವಸ್ಥಾನದಲ್ಲಿ ಕಂಡು ಬರುವ ಕೆಲವು ವಿಶೀಷ್ಟ ಮಣ್ಣಿನ ವಿಗ್ರಹಗಳನ್ನು ನೋಡಿ.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಪಚ್ಚಿಯಮ್ಮನ ಕುರಿತು ಆಸಕ್ತಿಕರವಾದ ಕಥೆಯೊಂದು ಪ್ರಚಲಿತದಲ್ಲಿದೆ. ಹಿಂದೆ ಪಾರ್ವತಿ ದೇವಿಯು ವಿನೋದಮಯವಾಗಿ ತಪಗೈಯುತ್ತಿದ್ದ ಶಿವನ ಕಣ್ಣುಗಳನ್ನು ತನ್ನ ಕೈಗಳಿಂದ ಹಿಡಿದಾಗ ಅದರಿಂದ ಕೋಪಗೊಂಡ ಶಿವನು ಅವಳಿಗೆ ಭೂಮಿಯ ಮೇಲೆ ಅವತರಿಸುವಂತೆ ಶಾಪ ನೀಡುತ್ತಾನೆ.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಆ ರೀತಿಯಾಗಿ ಭೂಮಿಗೆ ಬಂದ ದೇವಿಯು ಮತ್ತೆ ಶಿವನನ್ನು ಸೇರಲು ತಪಗೈಯಲು ನಿರ್ಧರಿಸಿ, ಒಂದು ಜಾಗವನ್ನು ನಿರ್ಧರಿಸಿ ನೀರಿಗಾಗಿ ಹುಡುಕುತ್ತಾಳೆ. ಇತ್ತ ಗಣೇಶ ಹಾಗೂ ಸುಬ್ರಹ್ಮಣರೂ ಕೂಡ ತಮ್ಮ ತಾಯಿಗೆ ನೆರವಾಗಲು ನೀರನ್ನು ತರಲು ಹೊರಡುತ್ತಾರೆ. ದೇವಿಯು ತನ್ನ ಕೈಗಳಿಂದ ಒಂದು ಕಟ್ಟಿಗೆಯನ್ನು ಹಿಡಿದು ಭೂಮಿಯನ್ನು ಅಗೆದಾಗ ನೀರು ಹೊರಹೊಮ್ಮುತ್ತದೆ.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಆ ನೀರನ್ನು ಉಪಯೋಗಿಸಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸುತ್ತಾಳೆ. ದಿನೆ ದಿನೆ ದೇವಿಯ ದರುಶನಕ್ಕಾಗಿ ಜನ ಬರತೊಡಗುತ್ತಾರೆ. ಈ ವಿಷಯ ಪ್ರದೇಶದ ರಾಜನಿಗೆ ಗೊತ್ತಾಗಿ ಆತನು ದೇವಿಯನ್ನು ಓಡಿಸಲೆಂದು ಅಲ್ಲಿಗೆ ಬಂದು ಆಕೆಯ ಸುಂದರತೆಗೆ ಮಾರು ಹೋಗಿ ಮದುವೆಯ ಪ್ರಸ್ತಾಪ ಮುಂದಿಡುತ್ತಾನೆ.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಇದರಿಂದ ಕೆರಳಿದ ದೇವಿಯು ಕಾಳಿಯ ರೂಪ ಧರಿಸಿ, ಶಿವ, ಸಪ್ತ ಋಷಿಗಳು ಎಲ್ಲರೂ ಸೇರಿ ಯೋಧರ ರೂಪ ತಳೆದು ರಾಜ ಹಾಗೂ ಆತ್ನ ಸೈನ್ಯವನ್ನು ಸೆದೆ ಬಡಿಯುತ್ತಾರೆ.

ಚಿತ್ರಕೃಪೆ: Thamizhpparithi Maari

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಸಮಯಪುರಂ ಮಾರಿ ಅಮ್ಮನ ದೇವಸ್ಥಾನ : ತಿರುಚಿರಾಪಳ್ಳಿಯ ಸಮಯಪುರಂ ಬಳಿಯಿದೆ ಮಾರಿ ಅಮ್ಮನವರ ದೇವಸ್ಥಾನ. ಅಮ್ಮನ ವಿಗ್ರಹವನ್ನು ಮರಳು ಹಾಗೂ ಜೇಡಿ ಮಣ್ಣಿನಿಂದ ಮಾಡಲಾಗಿದ್ದು ಶಕ್ತಿಶಾಲಿ ದೇವಿಯನ್ನಾಗಿ ಜನರು ಈಕೆಯನ್ನ ಪೂಜಿಸುತ್ತಾರೆ. ಸಾಮಾನ್ಯವಾಗಿ ಎಲ್ಲ ಹಿಂದೂ ದೇವಾಲಯಗಳಲ್ಲಿ ಕಂಡುಬರುವಂತೆ ಇಲ್ಲಿ ದೇವಿಯ ವಿಗ್ರಹಕ್ಕೆ ನೇರವಾಗಿ ಅಭಿಷೇಕ ಮಾಡಲಾಗುವುದಿಲ್ಲ. ಬದಲಾಗಿ ಆಕೆಯ ಚಿಕ್ಕ ಕಲ್ಲಿನಲ್ಲಿ ಕೆತ್ತಲಾದ ವಿಗ್ರಹವೊಂದನ್ನ ಮೂಲ ವಿಗ್ರಹದ ಮುಂದಿಟ್ಟು ಅದಕ್ಕೆ ಅಭಿಶೇಕಾದಿಗಳನ್ನು ಮಾಡಲಾಗುತ್ತದೆ.

ಚಿತ್ರಕೃಪೆ: wikipedia

ಸುಪ್ರಸಿದ್ಧ ದೇವಿ ದೇವಾಲಯಗಳು:

ಸುಪ್ರಸಿದ್ಧ ದೇವಿ ದೇವಾಲಯಗಳು:

ಇನ್ನೊಂದು ವಿಶೇಷವೆಂದರೆ ಈ ದೇವಿಯು ದೈಹಿಕ ಕಾಯಿಲೆಗಳನ್ನು ವಾಸಿ ಮಾಡುತ್ತಾಳೆಂದು ಪ್ರತೀತಿಯಿದೆ. ಆದಕಾರಾಣ ಯಾವುದಾದರೂ ದೈಹಿಕ ಕಾಯಿಲೆಯಿಂದ ಬಳಲುತ್ತಿರುವವರು ದೇಹದ ಆ ಭಾಗದ ಲೋಹದ ರೂಪಗಳನ್ನು ತಯಾರಿಸಿ ದೇವಿಗೆ ಸಮರ್ಪಿಸಿ ಭಕ್ತಿಯಿಂದ ಬೇಡಿಕೊಂಡರೆ ಆ ಕಾಯಿಲೆ ಗುಣವಾಗುವುದಂತೆ. ಅಲ್ಲದೆ ಕೆಲವು ಅತಿಶಯವಾದ ಕಾರ್ಯಗಳನ್ನು ಭಕ್ತರು ಇಲ್ಲಿ ಕೈಗೊಳ್ಳುತ್ತಾರೆ. ಅಂದರೆ ಉರಿಯುತ್ತಿರುವ ಕಲ್ಲಿದ್ದಿಲಿನ ಮೇಲೆ ಓಡುವುದು, ಅತ್ಯಂತ ಬಿಸಿಯಿಂದ ಕೂಡಿರುವ ಪರಿಕರಗಳನ್ನು ಬರಿಗೈಯಲ್ಲೆ ಹಿಡಿಯುವುದು ಇತ್ಯಾದಿ.

ಚಿತ್ರಕೃಪೆ: wikipedia

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X