Search
  • Follow NativePlanet
Share
» »ಇಡುಕ್ಕಿಯ ಭವ್ಯವಾದ ಅಣೆಕಟ್ಟುಗಳ ನಡುವೆ ಒಂದು ಪಯಣ

ಇಡುಕ್ಕಿಯ ಭವ್ಯವಾದ ಅಣೆಕಟ್ಟುಗಳ ನಡುವೆ ಒಂದು ಪಯಣ

By Sowmyabhai

ಸುಂದರವಾದ ತಾಣದಲ್ಲಿ ತಂಪಾಗಿ ಹಸಿರಿನ ಮಧ್ಯೆ ಕೆಲವು ದಿನ ಕಾಲ ಕಳೆಯಲು ಬಯಸುವವರಿಗೆ ಕೇರಳ ರಾಜ್ಯದ ಇಡುಕ್ಕಿಅತ್ಯಂತ ಒಳ್ಳೆಯ ಪ್ರವಾಸಿತಾಣ. ಸುತ್ತಲು ಇರುವ ಹಸಿರು ಸಿರಿ, ಶಾಂತವಾದ ವಾತಾವರಣ, ಸುಂದರವಾದ ಅಣೆಕಟ್ಟುಗಳು, ತಂಪಾದ ಗಾಳಿ, ಗಿರಿಶಿಖರಗಳ ಮೇಲಿನ ಹುಲ್ಲುಗಾವಲುಗಳು ಹಾಗೂ ಭೋರ್ಗರೆಯುವ ತೊರೆಗಳ್ಳುಳ ಪ್ರದೇಶಗಳು ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇಂಥಹ ಪ್ರಾಕೃತಿಕ ಸೊಬಗು ಹೊಂದಿರುವ ತಾಣವು ಪ್ರವಾಸಿಗರನ್ನು ಎಂದೂ ನಿರಾಶೆಗೊಳಿಸಲಾರದು. ಕೇರಳದ ಇಡುಕ್ಕಿಯು ಭವ್ಯವಾದ ಅಣೆಕಟ್ಟುಗಳನ್ನು ಹೊಂದಿದ್ದು ಈ ಅಣೆಕಟ್ಟುಗಳೇ ಇಡುಕ್ಕಿ ಪ್ರವಾಸಿತಾಣಕ್ಕೆ ಒಂದು ಶ್ರೀಮಂತ ಮೆರಗು. ಪ್ರಸ್ತುತ ಈ ಲೇಖನದಲ್ಲಿ ಕೇರಳದ ಭವ್ಯವಾದ ಅಣೆಕಟ್ಟುಗಳ ಸ್ಥಳದ ಕುರಿತು ಚರ್ಚಿಸೊಣ.

List of dams and reservoirs in Kerala

PC: Drbijith

ಇಡುಕ್ಕಿಯ ಕಮಾನು ಅಣೆಕಟ್ಟು(ಡ್ಯಾಮ್)
ಇಡುಕ್ಕಿಯಲ್ಲಿನ ಅಣೆಕಟ್ಟುಗಳಲ್ಲಿಯೇ ಕಮಾನು ಅಣೆಕಟ್ಟು ಸುಪ್ರಸಿದ್ದವಾಗಿದೆ. ಏಷ್ಯಾದಲ್ಲಿಯೇ ಮೊದಲ ಕಮಾನು ಅಣೆಕಟ್ಟು ಹೊಂದಿರುವ ರಾಜ್ಯ ಎಂಬ ಖ್ಯಾತಿಯನ್ನು ಕೇರಳದ ಇಡುಕ್ಕಿ ಮುಡಿಗೇರಿಸಿಕೊಂಡಿದ್ದೆ ಅಲ್ಲದೇ ಈ ಅಣೆಕಟ್ಟು ತಾಂತ್ರಿಕ ವಿಸ್ಮಯಕ್ಕೂ ಸಾಕ್ಷಿಯಾಗಿದೆ. ಈ ಅಣೆಕಟ್ಟನ್ನು ಇಡುಕ್ಕಿಯ ಕುರವನ್ ಮತ್ತು ಕುರಾತಿ ಬೆಟ್ಟಗಳ ನಡುವೆ ನಿರ್ಮಿಸಲಾಗಿದೆ. ಕೇರಳದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದೆ.

List of dams and reservoirs in Kerala

PC: Rameshng

ಮುಲ್ಲಾಪೆರಿಯಾರ್ ಅಣೆಕಟ್ಟು(ಡ್ಯಾಮ್)
ಇಡುಕ್ಕಿಯಲ್ಲಿನ ಮತ್ತೊಂದು ಸುಂದರವಾದ ಆಕರ್ಷಣೆ ಎಂದರೆ ಮುಲ್ಲಾಪೆರಿಯಾರ್ ಅಣೆಕಟ್ಟು. ಮುಲ್ಲಾಯರ್ ಮತ್ತು ಪೆರಿಯಾರ್ ಎಂಬ ಎರಡು ನದಿಗಳ ಹೆಸರಿನಿಂದ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟನ್ನು ತಮಿಳುನಾಡಿನ ಕೆಲವು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಮಿಸಲಾಗಿದೆ. ಇಲ್ಲಿ ಕೃತಕವಾಗಿ ನಿರ್ಮಿಸಲಾದ ಸರೋವರವಿದ್ದು ಬೋಟಿಂಗ್ ಮಾಡಲು ಅವಕಾಶವಿದೆ.

List of dams and reservoirs in Kerala

PC: Jaseem Hamza

ಕುಲಮಾವು ಅಣೆಕಟ್ಟು(ಡ್ಯಾಮ್)
ಇಡುಕ್ಕಿಗೆ ತಲುಪುವ ದಾರಿಯಲ್ಲೇ ಕುಲಮಾವು ಅಣೆಕಟ್ಟುವಿದೆ. ಈ ಅಣೆಕಟ್ಟು ಇಡುಕ್ಕಿಯ ಕಮಾನು ಅಣೆಕಟ್ಟುಗಿಂತ ಚಿಕ್ಕದಾದುದು ಆದರೆ ಇದರ ಪ್ರಾಕೃತಿಕ ಸೊಬಗಿನಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕುಲುಮಾವು ಅಣೆಕಟ್ಟಿಗೆ ಟ್ರೆಕ್ಕಿಂಗ್ ಹೋಗಬೇಕಾದರೆ ಇಡುಕ್ಕಿಯ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಬಹುದು. ನೀವು ಟ್ರೆಕ್ಕಿಂಗ್ ಮಾಡಲು ಪ್ರವಾಸಿತಾಣದ ಹುಡುಕಾಟದಲ್ಲಿದ್ದರೆ ಈ ಕುಲಮಾವು ಡ್ಯಾಮ್ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ.

List of dams and reservoirs in Kerala

PC: Bhibin

ಪುಣ್‍ಮುಡಿ ಅಣೆಕಟ್ಟು(ಡ್ಯಾಮ್)
ಈ ಅಣೆಕಟ್ಟನ್ನು ಇಡುಕ್ಕಿಯ ಪೆನ್ನೀಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಿಲ್ಲೆಯ ಇನ್ನೊಂದು ಆಕರ್ಷಣಿಯವಾದ ಅಣೆಕಟ್ಟು ಈ ಪುಣ್‍ಮುಡಿಯಾಗಿದೆ. ಇಲ್ಲಿ ದಟ್ಟವಾದ ಹಸಿರು ಸಿರಿಯಿಂದ ತುಂಬಿದ್ದು ಪ್ರವಾಸಕ್ಕೆ ಯೋಗ್ಯವಾದ ತಾಣವಾಗಿದೆ. ವಿಷೇಶವೆನೆಂದರೆ ಇಲ್ಲಿ ಟೀ ಫಾರೆಸ್ಟ್ ಇದೆ ಇದು ಟ್ರೆಕ್ಕಿಂಗ್ ಮಾಡುವವರಿಗೆ ಸ್ವರ್ಗವಿದ್ದಂತೆ. ಈ ಸ್ಥಳಕ್ಕೆ ಮುಂಗಾರಿನ ಅವಧಿಯ ಮುಂಚೆ ಭೇಟಿ ನೀಡಬಹುದು.

ಚೆರುತೊನಿ ಅಣೆಕಟ್ಟು(ಡ್ಯಾಮ್)
ಇಡುಕ್ಕಿಯ ಅತ್ಯಂತ ಸುಂದರ ಪಿಕ್ನಿಕ್‍ತಾಣ ಈ ಚೆರುತೊನಿ ಆಗಿದೆ. ಈ ಅಣೆಕಟ್ಟು ಇಡುಕ್ಕಿಯ ಕಮಾನು ಡ್ಯಾಮ್‍ಗೆ ಹತ್ತಿರವಾಗಿದೆ. ಈ ಅಣೆಕಟ್ಟನ್ನು ಪೆರಿಯಾರ್ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದು, ಇದು ಭಾರತದ ಮೂರನೇ ಅತ್ಯಂತ ಎತ್ತರದ ಅಣೆಕಟ್ಟಾಗಿದೆ. ಈ ಡ್ಯಾಮ್‍ಗೆ ಜೀಪ್‍ನ ಮೂಲಕ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X