Search
  • Follow NativePlanet
Share
» »ಬೆಂಗಳೂರಿನ ಪ್ರಸಿದ್ಧ ಚರ್ಚುಗಳು

ಬೆಂಗಳೂರಿನ ಪ್ರಸಿದ್ಧ ಚರ್ಚುಗಳು

By Vijay

ಐಟಿ ನಗರಿ ಬೆಂಗಳೂರಿನಲ್ಲಿ ಎಷ್ಟೊ ಸಂಖ್ಯೆಯಲ್ಲಿ ಚರ್ಚುಗಳಿವೆ. ಕೆಲವು ಐದು ಪ್ರಸಿದ್ಧ ಚರ್ಚುಗಳ ಕುರಿತು ಇಲ್ಲಿ ತಿಳಿಸಲಾಗಿದೆ. ಕ್ರೈಸ್ತರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಆಚರಿಸುವ ಕ್ರಿಸ್ಮಸ್ ಹಬ್ಬದ ಸಂಭ್ರಮವು ಪ್ರಾರಂಭಗೊಳ್ಳುವುದು ಹಬ್ಬದ ಹಿಂದಿನ ದಿನ ರಾತ್ರಿಯಲ್ಲಿ ವಿವಿಧ ಚರ್ಚುಗಳಲ್ಲಿ ವೈಭವೋಪೇತವಾಗಿ ಆಚರಿಸಲ್ಪಡುವ ಹೋಲಿ ಮಾಸ್ (ಪವಿತ್ರ ಧರ್ಮಾಚರಣೆ) ಮೂಲಕ.

ಈ ಸಂದರ್ಭದಲ್ಲಿ ಏಸುವಿನ ಜನನದ ಸಂಭ್ರಮವನ್ನು ಕ್ರೈಸ್ತ ಬಾಂಧವರು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಏಸುವಿನ ಹುಟ್ಟಿತ್ತಿರುವ ಸಂದರ್ಭದ ಯಥಾವತ್ ಮಾದರಿಯನ್ನು ನಿರ್ಮಿಸಿ ಸಂಭ್ರಮ ಪಡುತ್ತಾರೆ. ಪ್ರಾರ್ಥನೆಗಳನ್ನು ಹಾಡುತ್ತ ಏಸುವಿನ ಜನ್ಮ ದಿನದ ಶುಭವನ್ನು ಕೋರುತ್ತಾರೆ. ಕೇಕುಗಳನ್ನು ಹಂಚಿ ನಕ್ಕು ನಲಿಯುತ್ತಾರೆ. ಈ ರೀತಿಯ ಸಂಭ್ರಮದ, ಉತ್ಸಾಹದ ವಾತಾವರಣಕ್ಕೆ ಅಂದು ಎಲ್ಲ ಚರ್ಚುಗಳು ಸಾಕ್ಷಿಯಾಗುತ್ತವೆ.

ಇನ್ಫಂಟ್ ಜೀಸಸ್ ಚರ್ಚ್:

ಇನ್ಫಂಟ್ ಜೀಸಸ್ ಚರ್ಚ್:

ಬೆಂಗಳೂರಿನ ವಿವೇಕ ನಗರ ಬಡಾವಣೆಯಲ್ಲಿರುವ ಈ ಚರ್ಚ್ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದ್ದು 1971 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಬಾಲ ಏಸುವಿಗೆ ಸಮರ್ಪಿತವಾದ ಈ ಕ್ರೈಸ್ತ ದೇವಾಲಯದಲ್ಲಿ ಹಲವು ಪವಾಡಗಳು ಜರುಗಿದೆ ಎಂದು ನಂಬಲಾಗಿದ್ದು ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಕ್ರಿಸ್ಮಸ್ ಹಬ್ಬವೂ ಅದ್ದೂರಿಯಿಂದ ಆಚರಿಸಲ್ಪಡುತ್ತದೆ.

ಚಿತ್ರಕೃಪೆ: Johnchacks

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್ ಕ್ಯಾಥೇಡ್ರಲ್:

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್ ಕ್ಯಾಥೇಡ್ರಲ್:

ಬೆಂಗಳೂರಿನ ಫ್ರೇಸರ್ ಟೌನ್ ಬಡಾವಣೆಯಲ್ಲಿರುವ ಈ ಚರ್ಚ್ ಅನ್ನು 26 ಮೇ 1932 ರಲ್ಲಿ ಉಧಾಟಿಸಲಾಯಿತು. ಈ ಚರ್ಚ್ ವಿಶಾಲವಾದ ಆವರಣ ಹೊಂದಿದ್ದು ಮೂರು ಶಾಲೆಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Saad Faruque

ಸೇಂಟ್ ಮೇರಿ ಬೆಸಿಲಿಕಾರ ಚರ್ಚ್:

ಸೇಂಟ್ ಮೇರಿ ಬೆಸಿಲಿಕಾರ ಚರ್ಚ್:

ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಈ ಪುರಾತನ ಚರ್ಚ್ ಒಂದು ಭವ್ಯ ಕ್ರೈಸ್ತ ದೇವಾಲಯವಾಗಿದ್ದು ಸೆಪ್ಟಂಬರ್ ನಲ್ಲಿ ಜರುಗುವ ಸೇಂಟ್ ಮೇರಿಯ ಉತ್ಸವ ಹಾಗು ಕ್ರಿಸ್ಮಸ್ ಉತ್ಸವಗಳು ಅದ್ದೂರಿಯಾಗಿ ಆಚರಿಸಲ್ಪಡುತ್ತವೆ.

ಚಿತ್ರಕೃಪೆ: Tinucherian

ಹೋಲಿ ಟ್ರಿನಿಟಿ ಚರ್ಚ್:

ಹೋಲಿ ಟ್ರಿನಿಟಿ ಚರ್ಚ್:

ಬೆಂಗಳೂರಿನ ಪ್ರತಿಷ್ಠಿತ ಎಂ.ಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿಯಿದೆ ಈ ಚರ್ಚ್. 1851 ರಲ್ಲಿ ನಿರ್ಮಿಸಲ್ಪಟ್ಟ ಈ ಬೃಹತ್ ಕ್ರೈಸ್ತ ದೇವಾಲಯವು 700 ಜನರು ಹಿಡಿಸಬಹುದಾದಂತಹ ವಿಶಾಲವಾದ ಪ್ರಾಂಗಣವನ್ನು ಹೊಂದಿದೆ.

ಚಿತ್ರಕೃಪೆ: Charles

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X