Search
  • Follow NativePlanet
Share
» »ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

ಕಸದಿಂದ ರಸ ಮಾಡುವುದು ಒಂದು ಕಲೆ. ಬಿಟ್ಟ ವಸ್ತುಗಳಿಂದ ಅಥವಾ ವಿಶಿಷ್ಟ ಕಲೆಯಿಂದ ಉದ್ಯಾನವನ್ನು ರಚಿಸುವುದು ಸಾಹಸ.

By Divya

ಕಸದಿಂದ ರಸ ಮಾಡುವುದು ಒಂದು ಕಲೆ. ಬಿಟ್ಟ ವಸ್ತುಗಳಿಂದ ಅಥವಾ ವಿಶಿಷ್ಟ ಕಲೆಯಿಂದ ಉದ್ಯಾನವನ್ನು ರಚಿಸುವುದು ಸಾಹಸ. ಬೇಕೆಂದಲ್ಲಿ ಕಲ್ಲುಗಳನ್ನು ಇಟ್ಟು, ದಿಬ್ಬ ಹಾಗೂ ದಿಣ್ಣೆಗಳನ್ನು ರಚಿಸಿ, ಅವುಗಳ ಮಧ್ಯೆ ಹೊಂದಿಕೊಳ್ಳುವುಂತಹ ಸಸ್ಯಗಳನ್ನು ಬೆಳೆಸಿ, ನೋಡುಗರಿಗೆ ಸಂತೋಷ ನೀಡುವಂತೆ ನಿರ್ಮಿಸುವುದೇ ಕಲ್ಲು ಉದ್ಯಾನ (ರಾಕ್ ಗಾರ್ಡನ್). ಹೆಚ್ಚು ಶ್ರಮವಿಲ್ಲದೆ ಸುಂದರವಾಗಿ ಕಾಣುವಂತೆ ಉದ್ಯಾನಗಳನ್ನು ನಿರ್ಮಿಸುವುದು ಜಾಣ್ಮೆ. ಇಂತಹ ಜಾಣ್ಮೆಯಿಂದಾಗಿ ನಮ್ಮ ದೇಶದ ಹಲವೆಡೆ ಅನೇಕ ರಾಕ್ ಗಾರ್ಡನ್‍ಗಳನ್ನು ಕಾಣಬಹುದು.

ಸೂಕ್ತ ಗಿಡಗಳ ಜೋಡಣೆ, ಕೃತಕವಾಗಿ ಹರಿಯುವ ಜಲಪಾತ, ನೀರಿನ ಕಣಿವೆ, ಕಲೆಗಾರನ ಚಮತ್ಮಾಕ ಹಾಗೂ ಬೇಡದ ವಸ್ತುಗಳಿಂದ ಕಂಗೊಳಿಸುವ ಕೆಲವು ಉದ್ಯಾನಗಳು ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿವೆ. ಅವುಗಳೆಂದರೆ ಚಂಡೀಘಢ, ಕರ್ನಾಟಕ, ಡಾರ್ಜಿಲಿಂಗ್, ಓರ್ವಕಲ್ಲು ಹಾಗೂ ರಾಂಚಿ ರಾಕ್ ಉದ್ಯಾನ.

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

PC: en.wikipedia.org

ಚಂಡೀಘಢ ರಾಕ್ ಉದ್ಯಾನ
40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನದ ಸಂಸ್ಥಾಪಕರು ನೆಕ್ ಚೆಂದ್. ಕೈಗಾರಿಕೆ ಹಾಗೂ ಮನೆ ಬಳಕೆಯ ತ್ಯಾಜ್ಯವಸ್ತುಗಳಿಂದ ಈ ಉದ್ಯಾನ ನಿರ್ಮಾಣಗೊಂಡಿದೆ. ಪ್ರವಾಸಿಗರ ಸಡಗರವನ್ನು ಹೆಚ್ಚಿಸಲು ಕೃತಕವಾದ ಜಲಪಾತ ಹಾಗೂ ನೀರಿನ ಕೊಳಗಳನ್ನು ರಚಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ಅನೇಕ ಜೋಕಾಲಿಗಳಿವೆ. ಈ ಉದ್ಯಾನಕ್ಕೆ ಹತ್ತಿರವಾಗಿರುವ ಸುಖ್ನಾ ನೀರಿನ ಕೊಳವನ್ನು ಕಾಣಬಹುದು. ಚಂಡೀಘಢ ನಗರ ಪ್ರದೇಶದಿಂದ 3.8 ಕಿ.ಮೀ. ದೂರದಲ್ಲಿದೆ.

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

PC: en.wikipedia.org

ಡಾರ್ಜಿಲಿಂಗ್ ರಾಕ್ ಉದ್ಯಾನ
ಡಾರ್ಜಿಲಿಂಗ್ ನಗರ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿರುವ ಈ ಉದ್ಯಾನ ಗುಡ್ಡ ಪ್ರದೇಶದಲ್ಲಿದೆ. ದಟ್ಟವಾದ ಹಸಿರು ಸಿರಿ, ನೈಸರ್ಗಿಕವಾಗಿ ಹರಿಯುವ ಜಲಪಾತ ಇಲ್ಲಿಯ ಪ್ರಮುಖ ಆಕರ್ಷಣೆ. ಇಳಿಜಾರು ಪ್ರದೇಶದಲ್ಲಿರುವ ಈ ಉದ್ಯಾನದಲ್ಲಿ ಅಪರೂಪದ ಹೂ-ಗಿಡಗಳು ಹಾಗೂ ವಿಶ್ರಾಂತಿಯ ಸ್ಥಳಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ.

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

PC: en.wikipedia.org

ಉತ್ಸವ ಉದ್ಯಾನ
ಹಳ್ಳಿಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಈ ಉದ್ಯಾನ ನೋಡುಗರಿಗೆ ಅದ್ಭುತ ಅನುಭ ನೀಡುತ್ತದೆ. ಹಸಿರು ತೋಟದ ಮಧ್ಯೆ ಜೀವಂತವಾಗಿ ಕಾಣುವಂತಹ ಪ್ರತಿಮೆಗಳಿರುವುದೇ ವಿಶೇಷ. ಮಕ್ಕಳಿಗೆ ಆಡಲು ಹಾಗೂ ದೋಣಿ ಪ್ರಯಾಣಕ್ಕೆ ಇಲ್ಲಿ ಅವಕಾಶವಿದೆ.

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

PC: en.wikipedia.org
ಓರ್ವಕಲ್ಲು ಉದ್ಯಾನ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಈ ಉದ್ಯಾನ ಪಟ್ಟಣ ಪ್ರದೇಶದಿಂದ 22 ಕಿ.ಮೀ. ದೂರದಲ್ಲಿದೆ. ಸಾವಿರಾರು ಎಕರೆ ಪ್ರದೇಶದಲ್ಲಿರುವ ಈ ಉದ್ಯಾನ ಲಾವಾರಸದಿಂದ ಉಂಟಾದ ಶಿಲೆಗಳಿಂದ ಕೂಡಿದೆ. ನೈಸರ್ಗಿಕವಾದ ಹಸಿರು ಸಿರಿಗಳು ಈ ಉದ್ಯಾನದ ಸೊಬಗನ್ನು ಹೆಚ್ಚಿಸುತ್ತವೆ.

ಕಲ್ಲಲ್ಲಿ ಅರಳಿರುವ ಸುಂದರ ಉದ್ಯಾನಗಳು

PC: commons.wikimedia.org

ರಾಂಚಿ ಉದ್ಯಾನ
ಬೇಸಿಗೆಯಲ್ಲಿ ನೋಡಬೇಕಾದ ಸುಂದರವಾದ ಉದ್ಯಾನವನ ರಾಂಚಿ ರಾಕ್ ಉದ್ಯಾನವನ. ಕಂಕೆ ಅಣೆಕಟ್ಟುವಿಗೆ ಒರಗಿ ಕೊಂಡಿರುವ ಈ ಉದ್ಯಾನ ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದೆ. ಸುಂದರವಾದ ಜಾಗದಲ್ಲಿ ರಮ್ಯವಾದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದೊಂದು ಸೂಕ್ತ ತಾಣ.

Read more about: chandigarh darjeeling ranchi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X