Search
  • Follow NativePlanet
Share
» »ತಮಿಳುನಾಡು ಇನ್ನೊಂದಕ್ಕೆ ಬಲು ಹೆಸರುವಾಸಿ!

ತಮಿಳುನಾಡು ಇನ್ನೊಂದಕ್ಕೆ ಬಲು ಹೆಸರುವಾಸಿ!

ತಮಿಳುನಾಡು ದಕ್ಷಿಣ ಭಾರತದಲ್ಲಿರುವ ರಾಜ್ಯವಾಗಿದ್ದು ತನ್ನಲ್ಲಿರುವ ಪ್ರಮುಖ ದೇವಾಲಯಗಳು ಹಾಗೂ ಅವುಗಳ ಭವ್ಯ ಗೋಪುರಗಳಿಂದಾಗಿ ದೇಶದಲ್ಲೆ ಸಾಕಷ್ಟು ಪ್ರಖ್ಯಾತಿಗಳಿಸಿದೆ

By Vijay

ತಮಿಳುನಾಡು ದಕ್ಷಿಣ ಭಾರತದಲ್ಲಿ ತನ್ನದೆ ಆದ ವಿಶೇಷವಾದ ಸ್ಥಾನಮಾನ ಹೊಂದಿದೆ. ಅಸಂಖ್ಯಾತ ದೇವಾಲಯಗಳಿಗೆ, ತೀರ್ಥಕ್ಷೇತ್ರಗಳಿಗೆ, ದಂತಕಥೆಗಳಿಗೆ, ಕೈಗಾರಿಕೆಗಳಿಗೆ, ಪಟಾಕಿ ಕಾರ್ಖಾನೆಗಳಿಗೆ ಸಾಕಷ್ಟು ಹೆಸರುವಾಸಿಯಾಗಿರುವ ತಮಿಳುನಾಡು ರಾಜ್ಯವು ಅದ್ಭುತವಾದ ಶಿಲ್ಪಕಲೆಗಳುಳ್ಳ, ಕೆತ್ತನೆಗಳುಳ್ಳ, ವಿಶಾಲಕಾಯದ ಗೋಪುರಗಳಿಗೂ ಸಹ ಪ್ರಸಿದ್ಧಿ ಪಡೆದಿದೆ.

ಹೌದು, ತಮಿಳುನಾಡಿನಲ್ಲಿ ಸಾವಿರಾರು ದೇವಾಲಯಗಳಿವೆ. ಅದರಲ್ಲೂ ಕೆಲವು ಅತ್ಯಂತ ಪುರಾತನ ದೇವಾಲಯಗಳಾಗಿದ್ದು ತಮ್ಮ ದೈತ್ಯ ಗಾತ್ರ ಹಾಗೂ ಅವು ಹೊಂದಿರುವ ಅಗಾಧ ಕಲಾತ್ಮಕತೆಯ ಭವ್ಯ ಗೋಪುರಗಳಿಂದಾಗಿ ಪ್ರವಾಸಿ ಆಕರ್ಷಣೆಗಳಾಗಿ ಗಮನಸೆಳೆಯುತ್ತವೆ.

ಕರ್ನಾಟಕದ ಆಕರ್ಷಕ ದೇವಾಲಯ ಗೋಪುರಗಳು

ಕಲಾಪ್ರಿಯ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ಭಾರತೀಯ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿರುವ ವಿದೇಶಿಯರು ಸಾಮಾನ್ಯವಾಗಿ ತಮಿಳುನಾಡಿನ ಕೆಲ ದೇವಾಲಯಗಳಿಗೆ ಖಂಡಿತ ಭೇಟಿ ನೀಡಲು ಬಯಸುತ್ತಾರೆ. ಏಕೆಂದರೆ ರಾಜ್ಯದ ಕೆಲವು ಆಯ್ದ ದೇವಾಲಯಗಳು ತಮ್ಮ ಅದ್ಭುತ ವಾಸ್ತುಶೈಲಿ ಹಾಗೂ ಭವ್ಯ ಗೋಪುರಗಳಿಂದಾಗಿಯೆ ಸಾಕಷ್ಟು ಹೆಸರುವಾಸಿಯಾಗಿವೆ.

ಹಾಗಾದರೆ ತಮಿಳುನಾಡಿನಲ್ಲಿ ನೋಡಲು ಅಥವಾ ಒಮ್ಮೆಯಾದರೂ ಭೇಟಿ ನೀಡಲು ಯೋಗ್ಯವಾದಂತಹ ದೇವಾಲಯ ಗೋಪುರಗಳು ಯಾವುವು ಹಾಗೂ ಅವು ಎಲ್ಲೆಲ್ಲಿವೆ ಎಂಬುದರ ಕುರಿತು ಮಾಹಿತಿಯನ್ನು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ತಿರುವಣ್ಣಾಮಲೈ

ತಿರುವಣ್ಣಾಮಲೈ

ತಮಿಳುನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಾಲಯದ ಗೊಪುರ.

ಚಿತ್ರಕೃಪೆ: KARTY JazZ

ದಿವ್ಯ ದೇಸಂ

ದಿವ್ಯ ದೇಸಂ

ಅಳ್ವಾರರು ಪಟ್ಟಿ ಮಾಡಿರುವ 108 ನಾರಾಯಣನಿಗೆ ಮುಡಿಪಾದ ದೇವಾಲಯಗಳ ಶ್ರೀವಿಲ್ಲಿಪುತ್ತೂರು ದೇವಾಲಯವೂ ಸಹ ಒಂದು. ಇದು ಅಂಡಾಳ ದೇವಾಲಯವೆಂದು ಪ್ರಸಿದ್ಧಿಪಡೆದಿದ್ದು ತಮಿಳುನಾಡಿನ ವಿರುದ್ಧನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿದೆ.

ಚಿತ್ರಕೃಪೆ: Gauthaman

ತಿರುಚ್ಚಿ

ತಿರುಚ್ಚಿ

ಮೂಲತಃ ಶ್ರೀರಂಗಂ ಒಂದು ನಡುಗಡ್ಡೆ ಪ್ರದೇಶವಾಗಿದ್ದು ತಿರುಚ್ಚಿ ನಗರದ ಪ್ರಮುಖ ಭಾಗವಾಗಿ ನಿರ್ವಹಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆ ಅತಿ ವಿಶಾಲವಾದ ಶ್ರೀರಂಗನಾಥಸ್ವಾಮಿಯ ದೇವಾಲಯ ಸಂಕೀರ್ಣ.

ಚಿತ್ರಕೃಪೆ: Prabhu B Doss

156 ಎಕರೆಗಳಷ್ಟು!

156 ಎಕರೆಗಳಷ್ಟು!

ಇನ್ನೂ ಈ ದೇವಸ್ಥಾನದ ಗಾತ್ರಕ್ಕೆ ಬರುವುದಾದರೆ ಇದರ ಸಂಕೀರ್ಣ ವಿಶಾಲವಾಗಿದ್ದು 156 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಈ ಸಂಕೀರ್ಣದ ಸುತ್ತಳತೆಯೆ ಸುಮಾರು ನಾಲ್ಕು ಕಿ.ಮೀ ಗಳಷ್ಟೆಂದರೆ ನೀವೇ ಊಹಿಸಿಕೊಳ್ಳಬಹುದು.

ಚಿತ್ರಕೃಪೆ: BOMBMAN

ತಿರುನೆಲ್ವೇಲಿ

ತಿರುನೆಲ್ವೇಲಿ

ತಿರುನೆಲ್ವೇಲಿಯ ಪಾಳಯಂಕೊಟ್ಟೈನಲ್ಲಿರುವ ಅಳಗಿಯಮ್ಮನಾರ್ ರಾಜಗೋಪಾಲಸ್ವಾಮಿ ದೇವಾಲಯದ ಆಕರ್ಷಕ ಗೋಪುರ.

ಚಿತ್ರಕೃಪೆ: Mlakshmanan

ಕಾಲಕ್ಕಾಡ್

ಕಾಲಕ್ಕಾಡ್

ತಿರುನೆಲ್ವೇಲಿಯ ಕಾಲಕ್ಕಾಡ್ ನಲ್ಲಿರುವ ಸತ್ಯವಗೀಶ್ವರರ್ ದೇವಾಲಯ ಗೋಪುರ ಹಾಗೂ ವಿಮಾನ ರಚನೆಗಳು.

ಚಿತ್ರಕೃಪೆ: naidruva

ವೈದ್ಯನಾಥೇಶ್ವರ

ವೈದ್ಯನಾಥೇಶ್ವರ

ಈ ವೈದ್ಯನಾಥೇಶ್ವರನ ದೇವಾಲಯವಿರಿವುದು ಮದವರ ವಿಲಗಂ ಎಂಬ ಪಟ್ಟಣದಲ್ಲಿ. ಇದು ತಮಿಳುನಾಡಿನ ವಿರುಧ್ ನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಿಂದ ಕೇವಲ ಒಂದು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Srithern

ತಿರುಕೊಯಿಲೂರು

ತಿರುಕೊಯಿಲೂರು

ಮಹಾವಿಷ್ಣುವಿನ ಐದನೇಯ ಅವತಾರವಾದ ತ್ರಿವಿಕ್ರಮನ (ವಾಮನ) ದೇವರಿಗೆ ಮುಡಿಪಾದ ದೇವಾಲಯ ಇದಾಗಿದ್ದು ಅದ್ಭುತವಾದ ರಾಜ ಗೋಪುರವನ್ನು ಹೊಂದಿದೆ. ತಿರುಕೊಯಿಲೂರು ವಿಲ್ಲುಪುರಂ ಜಿಲ್ಲೆಯಲ್ಲಿದೆ.

ಚಿತ್ರಕೃಪೆ: Nandhini csekar

ಕಂಚೀಪುರಂ

ಕಂಚೀಪುರಂ

ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಂಚೀಪುರಂನಲ್ಲಿರುವ ಶಿವನಿಗೆ ಮುಡಿಪಾದ ಭವ್ಯ ದೇವಾಲಯವಾದ ಏಕಾಂಬರೇಶ್ವರರ್ ದೇವಾಲಯವು ಭವ್ಯವಾದ ಹಾಗೂ ನೋಡಲು ಆಕರ್ಷಕವಾದ ಗೋಪುರವನ್ನು ಹೊಂದಿದೆ.

ಚಿತ್ರಕೃಪೆ: Ssriram mt

ಮದುರೈ

ಮದುರೈ

ತಮಿಳುನಾಡಿನ ಬಲು ಪ್ರಸಿದ್ಧ ಯಾತ್ರಾ ಕ್ಷೆತ್ರವಾದ ಮದುರೈ ನಗರವು ತನ್ನಲ್ಲಿರುವ ಮೀನಾಕ್ಷಿ ಅಮ್ಮನವರ ದೇವಾಲಯದಿಂದಾಗಿ ದೇಶದಲ್ಲೆ ಹೆಸರುವಾಸಿಯಾಗಿದೆ. ಈ ಭವ್ಯ ದೇವಾಲಯವು ಅದ್ಭುತವಾಗಿ ನಿರ್ಮಾಣಗೊಂಡಿದ್ದು ಇದರ ಗೋಪುರವೂ ಸಹ ಸಾಕಷ್ಟು ಆಕರ್ಷಕವಾಗಿದೆ.

ಚಿತ್ರಕೃಪೆ: Kamal Baba

ನಯನಮನೋಹರ

ನಯನಮನೋಹರ

ದೇವಾಲಯದ ರಾಜಗೋಪುರವು ಸಾಕಷ್ಟು ನಯನಮನೋಹರವಾಗಿದ್ದು ಅದರ ಮೇಲೆ ಹಲವು ದೇವ, ದೇವತೆಯರ, ಪುರಾಣ ಪ್ರಸಂಗಗಳ ಹಲವಾರು ಚಿತ್ರಣಗಳನ್ನು ಶಿಲ್ಪಕಲೆಯ ರೂಪದಲ್ಲಿ ಕಾಣಬಹುದು.

ಚಿತ್ರಕೃಪೆ: strudelt

ತಂಜಾವೂರು

ತಂಜಾವೂರು

ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ದೇವಸ್ಥಾನವು ಇರುವುದು ದೇವಾಲಯಗಳ ರಾಜ್ಯ ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿ.

ಚಿತ್ರಕೃಪೆ: Thamizhpparithi Maari

ಚೋಳರ ನಿರ್ಮಾಣ

ಚೋಳರ ನಿರ್ಮಾಣ

ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ. ದೇವಸ್ಥಾನದ ವಿಶೇಷತೆಯೆಂದರೆ ಇದರ ಕಳಶವನ್ನು ಒಂದೆ ಕಲ್ಲಿನಲ್ಲಿ ಕೆತ್ತಲಾಗಿದ್ದು 80 ಟನ್ ಗಳಷ್ಟು ಭಾರ ಹೊಂದಿದೆ.

ಚಿತ್ರಕೃಪೆ: Thamizhpparithi Maari

ಕುಂಭಕೋಣಂ

ಕುಂಭಕೋಣಂ

ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ವಿಷ್ಣುವಿಗೆ ಮುಡಿಪಾದ ಸಾರಂಗಪಾಣಿ ದೇವಾಲಯ ಗೋಪುರವು ಸಾಕಷ್ಟು ಅದ್ಭುತವಾದ ರೀತಿಯಲ್ಲಿ ನಿರ್ಮಾಣವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Adam63

ಮನ್ನಾರ್ಗುಡಿ

ಮನ್ನಾರ್ಗುಡಿ

ತಮಿಳುನಾಡಿನ ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯ ಗೋಪುರವು ವಿಶಾಲವಾಗಿದ್ದು ನೋಡಲು ಆಕರ್ಷಕವಾಗಿದೆ.

ಚಿತ್ರಕೃಪೆ: Raji.srinivas

ಶಂಕರನ್ಕೋವಿಲ್

ಶಂಕರನ್ಕೋವಿಲ್

ಶಂಕರನ್ಕೋವಿಲ್ ತಿರುನೆಲ್ವೇಲಿ ಜಿಲ್ಲೆಯ ಎರಡನೇಯ ದೊಡ್ಡ ಪಟ್ಟಣವಾಗಿದ್ದು ಶಂಕರನಾರಾಯಣನ ದೇವಾಲಯದಿಂದಾಗಿ ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Vasanth2499

ಮದುರೈ

ಮದುರೈ

ಮದುರೈ ನಗರದ ವ್ಯಾಪ್ತಿಯಲ್ಲೆ ಬರುವ ಅಳಗರ್ ದೇವಾಲಯ ಇದಾಗಿದ್ದು ಶ್ರೀ ವಿಷ್ಣುವಿಗೆ ಮುಡಿಪಾಗಿದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X