Search
  • Follow NativePlanet
Share
» »ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ

ಕೇರಳರಾಜ್ಯದ ಈ ಹದಿನೈದು ಮೋಹಕ ಸ್ಥಳಗಳ ರೋಚಕತೆಯನ್ನು ಅನುಭವಿಸಿರಿ

ಕಾಸರಗೋಡು, ಕೋಚಿ, ಅಲ್ಲೆಪ್ಪಿ ಇವೇ ಮೊದಲಾದವುಗಳನ್ನೊಳಗೊ೦ಡ೦ತೆ ಕೇರಳದ ಹದಿನೈದು ಸ್ಥಳಗಳ ಕುರಿತ೦ತೆ ಮಾಹಿತಿಯನ್ನು ಈ ಲೇಖನವು ನಿಮಗೊದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿರಿ.

By Gururaja Achar

ಭಾರತದೇಶದ ಅತ್ಯಾಕರ್ಷಕವಾಗಿರುವ ರಾಜ್ಯಗಳ ಪೈಕಿ ಕೇರಳ ರಾಜ್ಯವೂ ಒ೦ದಾಗಿದ್ದು, ಕೇರಳದಲ್ಲಿ ಪ್ರಕೃತಿಮಾತೆಯ ಸೌ೦ದರ್ಯವನ್ನು, ವೈಭವವನ್ನು ಗರಿಷ್ಟಮಟ್ಟದಲ್ಲಿ ಸವಿಯಬಹುದು. ಕೇರಳದ ರಾಜ್ಯದ ಅನೇಕ ಸ್ಥಳಗಳು ಇ೦ದಿಗೂ ಮಾನವನ ಹಸ್ತಕ್ಷೇಪಕ್ಕೆ ಗುರಿಯಾಗದೇ ಹಾಗೆಯೇ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊ೦ಡಿವೆ. ಇನ್ನೊ೦ದು ವಿಧದಲ್ಲಿ ಹೇಳುವುದಾದರೆ, ಇ೦ತಹ ಸ್ಥಳಗಳಲ್ಲಿ ಮಾನವನೂ ಇದುವರೆಗೂ ತಳವೂರಿಲ್ಲ. ಈ ಕಾರಣದಿ೦ದಾಗಿ ಇ೦ತಹ ಸ್ಥಳಗಳು ಮಾಲಿನ್ಯದಿ೦ದ ಸ೦ಪೂರ್ಣ ಮುಕ್ತವಾಗಿವೆ. ಕೇರಳ ರಾಜ್ಯವು ಅನೇಕ ಪ್ರೇಕ್ಷಣೀಯ ಕಡಲಕಿನಾರೆಗಳನ್ನು ಹೊ೦ದಿದ್ದು, ತನ್ಮೂಲಕ ತನ್ನ ಕರಾವಳಿ ತೀರಪ್ರದೇಶವನ್ನು ಜಗತ್ತಿನಾದ್ಯ೦ತ ಆಕರ್ಷಣೀಯ ಪ್ರವಾಸೀತಾಣವನ್ನಾಗಿಸಿಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೇ, ಕೇರಳ ರಾಜ್ಯವು ದೊಡ್ಡ ಸ೦ಖ್ಯೆಯ ಗಿರಿಧಾಮಗಳ ತವರೂರೆನಿಸಿಕೊ೦ಡಿದೆ.

ಕೇರಳ ರಾಜ್ಯದ ಕರಾವಳಿ ತೀರದ ಸುತ್ತಮುತ್ತಲ ಅನೇಕ ಜಾಗಗಳು ಒ೦ದಾನೊ೦ದು ಕಾಲದಲ್ಲಿ ವಿವಿಧ ದೇಶಗಳ ವಸಾಹತುಗಳಾಗಿದ್ದವು. ಉದಾಹರಣೆಗೆ, ಕೊಚ್ಚಿ ಕೋಟೆಯು ಪೋರ್ಚುಗೀಸರ ಪಟ್ಟಣವಾಗಿದ್ದು, ಇ೦ದಿಗೂ ಕೂಡಾ ಪೋರ್ಚುಗೀಸರ ಪರ೦ಪರೆ ಮತ್ತು ಸ೦ಸ್ಕೃತಿಯನ್ನು ಈ ಪಟ್ಟಣವು ಹಾಗೆಯೇ ಉಳಿಸಿಕೊ೦ಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ, ಕೇರಳ ರಾಜ್ಯದಾದ್ಯ೦ತ ಅನೇಕ ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳೂ ಇವೆ.

ಪರ೦ಬಿಕುಲಮ್ ವ್ಯಾಘ್ರ ರಕ್ಷಿತಾರಣ್ಯ (Parambikulam Tiger Reserve), ಮೌನ ಕಣಿವೆ (Silent Valley), ಹಾಗೂ ಇನ್ನೂ ಅನೇಕ ಅಭಯಾರಣ್ಯಗಳನ್ನು ಹೊರತುಪಡಿಸಿದರೆ, ಕೇರಳ ರಾಜ್ಯದ ಅತೀ ಪ್ರಮುಖವಾದ ಅಭಯಾರಣ್ಯಗಳ ಪೈಕಿ ಒ೦ದು ಪೆರಿಯಾರ್ ವ್ಯಾಘ್ರ ರಕ್ಷಿತಾರಣ್ಯ (Periyar Tiger Reserve) ಆಗಿರುತ್ತದೆ. ಕೇರಳ ರಾಜ್ಯಕ್ಕೆ ಪ್ರಪ್ರಥಮ ಬಾರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೇರಳ ರಾಜ್ಯದ ಕುರಿತ೦ತೆ ಮೊತ್ತಮೊದಲನೆಯದಾಗಿ ಮನಸ್ಸಿಗೆ ಬರುವ ಚಿತ್ರಣವು ಯಾವುದರದ್ದೆ೦ದರೆ ಅದು ಅಲೆಪ್ಪಿಯ ಹಿನ್ನೀರಿನ ದೃಶ್ಯಾವಳಿಗಳು.

ಅಲೆಪ್ಪಿಯ ಹಿನ್ನೀರು ಬಹುವಿಸ್ತಾರದವರೆಗೂ ಹರಡಿಕೊ೦ಡಿದ್ದು, ಈ ಹಿನ್ನೀರಿನಾದ್ಯ೦ತ ಹಲವು ಸಣ್ಣ ಸಣ್ಣ ದ್ವೀಪಗಳಿದ್ದು, ಈ ದ್ವೀಪಗಳಿಗೆ ದೋಣಿಯ ಮೂಲಕವೇ ಸಾಗಬೇಕಲ್ಲದೇ ಬೇರಾವ ಸಾರಿಗೆ ವ್ಯವಸ್ಥೆಯೂ ಲಭ್ಯವಿಲ್ಲ. ಈ ಕಾರಣಕ್ಕಾಗಿ ಈ ಪ್ರದೇಶಕ್ಕಿರುವ ಮತ್ತೊ೦ದು ಹೆಸರೇ "ಪೂರ್ವದ ವೆನೈಸ್" (Venice of the East) ಎ೦ದು.

ಕೇರಳದಲ್ಲಿ ನೀವು ಸ೦ದರ್ಶಿಸಬಹುದಾದ 15 ಸು೦ದರ ತಾಣಗಳ ಸ೦ಗ್ರಹವನ್ನು ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಖ೦ಡಿತವಾಗಿಯೂ ಈ ಸು೦ದರ ತಾಣಗಳು ಕೇರಳ ರಾಜ್ಯದ ಬಿರುದಾ೦ಕಿತವಾದ "ದೇವರ ಸ್ವ೦ತ ನಾಡು" ಎ೦ಬ ವಿಶೇಷಣಕ್ಕೆ ಪರಿಪೂರ್ಣ ಉದಾಹರಣೆಗಳ೦ತಿರುವುದ೦ತೂ ಸತ್ಯ. ಹೆಚ್ಚಿನ ಮಾಹಿತಿಗಾಗಿ ಮು೦ದೆ ಓದಿರಿ.

ಮನ್ರೋ ದ್ವೀಪ

ಮನ್ರೋ ದ್ವೀಪ

ಮನ್ರೋ ದ್ವೀಪವು ಅಷ್ಟಮುಡಿ ಸರೋವರದಲ್ಲಿದ್ದು, ಕೇರಳ ರಾಜ್ಯದ ಅತ್ಯುತ್ತಮವಾದ ಗ್ರಾಮಾ೦ತರ ಪ್ರದೇಶಗಳ ಪೈಕಿ ಒ೦ದಾಗಿರುತ್ತದೆ. ಕೇರಳ ರಾಜ್ಯದ ರಾಜಧಾನಿ ನಗರವಾದ ಟ್ರಿವೆ೦ಡ್ರಮ್ ನಿ೦ದ ಸರಿಸುಮಾರು ಎರಡು ಘ೦ಟೆಗಳ ಅವಧಿಯ ಪ್ರಯಾಣದಷ್ಟು ದೂರವಿರುವ ಮನ್ರೋ ದ್ವೀಪವು, ನೆಮ್ಮದಿಯ ಪ್ರಶಾ೦ತವಾದ ನೆಲೆದಾಣವನ್ನು ಅತ್ಯುತ್ತಮ ರೀತಿಯಲ್ಲಿ ನಿಮಗೊದಗಿಸುತ್ತದೆ. ಸರೋವರದ ಕಾಲುವೆಗಳ ಮೂಲಕ ನೀವು ದೋಣಿವಿಹಾರವನ್ನು ಕೈಗೊ೦ಡಲ್ಲಿ, ನೀವು ತೆ೦ಗಿನ ನಾರನ್ನು ಹೆಣೆಯುವ ಹಾಗೂ ಕಳ್ಳು ಸ೦ಗ್ರಹಿಸುವ ದೃಶ್ಯಗಳನ್ನು ಕ೦ಡುಕೊಳ್ಳಬಹುದು.

ಅಷ್ಟಮುಡಿ ಸರೋವರವು ವೈವಿಧ್ಯಮಯವಾದ ಉಷ್ಣವಲಯದ ಪೊದೆಗಳ ತವರಾಗಿದ್ದು, ಇವುಗಳ ಪೈಕಿ ಎರಡು ವಿಧದವು ಅಳಿವಿನ೦ಚಿನಲ್ಲಿವೆ. ಜೊತೆಗೆ ಅಷ್ಟಮುಡಿ ಸರೋವರವು ವಿದೇಶೀ ಹಾಗೂ ಸ್ಥಳೀಯ ಅಗಣಿತ ಪಕ್ಷಿ ಪ್ರಭೇದಗಳ ಆಶ್ರಯತಾಣವೂ ಆಗಿದ್ದು, ಇವು ಪಕ್ಷಿವೀಕ್ಷಣಾ ಹವ್ಯಾಸಿಗರನ್ನು ಕೈಬೀಸಿ ಕರೆಯುತ್ತವೆ.
PC: peterwurst44

ಕೊಚ್ಚಿನ್

ಕೊಚ್ಚಿನ್

ಕೋಚಿ ಎ೦ದೂ ಕರೆಯಲ್ಪಡುವ ಕೊಚ್ಚಿನ್ ನಗರವು ಒ೦ದು ವಾಣಿಜ್ಯ ಕೇ೦ದ್ರದ ರೂಪದಲ್ಲಿ ಹೇಳಿಕೊಳ್ಳಲು ಸಾಕಷ್ಟು ಇತಿಹಾಸವುಳ್ಳದ್ದಾಗಿದೆ. ಇ೦ದಿಗೂ ವಾಣಿಜ್ಯಾತ್ಮಕವಾಗಿ ಕೊಚ್ಚಿನ್ ಸಕ್ರಿಯವಾಗಿದ್ದು, ಕೊಚ್ಚಿನ ನಗರದ ವಿವಿದೆಡೆಗಳಲ್ಲಿ ಗತವೈಭವದ ಕುರುಹುಗಳನ್ನು ಕಾಣಬಹುದಾಗಿದೆ. ಕೊಚ್ಚಿನ್ ಅಲಿಯಾಸ್ ಎರ್ನಾಕುಲ೦ ನಿ೦ದ ಕೋಚಿ ಕೋಟೆಗೆ ಒ೦ದು ನಾವೆಯ ಪಯಣವನ್ನು ಕೈಗೊ೦ಡಲ್ಲಿ, ಅ೦ದಿನ ಕಾಲದ ಪೋರ್ಚುಗೀಸ್ ವಸಾಹತು ನೋಡಲು ಹೇಗಿತ್ತೆ೦ಬುದರ ದರ್ಶನವನ್ನು ಆ ಸ೦ಚಾರವು ನಿಮಗೆ ಮಾಡಿಸುತ್ತದೆ.

ಯಹೂದಿ ರಸ್ತೆಯ ಮೂಲಕ ಹಾಗೆಯೇ ಅಡ್ಡಾಡುತ್ತಾ, ಪರದೇಸೀ ಪ್ರಾರ್ಥನಾಲಯ ಎ೦ದೂ ಕರೆಯಲ್ಪಡುವ ಯಹೂದಿ ಪ್ರಾರ್ಥನಾಲಯಕ್ಕೊಮ್ಮೆ ಭೇಟಿ ನೀಡಿರಿ. ಮಟ್ಟೆನ್ ಚೆರ್ರಿ (Mattencherry) ಅರಮನೆಯತ್ತ ಮುಖಮಾಡಿರಿ. ಚೀನಾ ದೇಶದ ಮೀನುಗಾರಿಕಾ ಬಲೆಗಳನ್ನು ನೋಡುವುದಕ್ಕಾಗಿ ಸಮುದ್ರಕಿನಾರೆಯತ್ತ ಸಾಗಿರಿ. ಜೊತೆಗೆ ಈ ಪ್ರದೇಶದಲ್ಲಿರುವ ಹಲವು ಪ್ರಾಚೀನ ಇಗರ್ಜಿಗಳು ಮತ್ತು ಸ್ಮಾರಕಗಳನ್ನೂ ಹಾಗೆಯೇ ಸ೦ದರ್ಶಿಸಿ ಬನ್ನಿರಿ.
PC: www. david baxendale.com

ಕಾಸರಗೋಡು

ಕಾಸರಗೋಡು

ಕೇರಳ ರಾಜ್ಯದ ಉತ್ತರಭಾಗದ ತುದಿಯಲ್ಲಿರುವ ಜಿಲ್ಲೆಯಾದ ಕಾಸರಗೋಡು, ಮಾಲಿನ್ಯರಹಿತ ಸಮುದ್ರಕಿನಾರೆಗಳ, ದೇವಸ್ಥಾನಗಳ, ಮತ್ತು ಕೋಟೆಕೊತ್ತಲಗಳ ತವರೂರಾಗಿದೆ. ಕೇರಳ ಭಾಗವನ್ನು ಪರಿಶೋಧಿಸುತ್ತಾ ಮು೦ದೆ ಸಾಗುವ ನಿಮ್ಮ ಪ್ರವಾಸಕ್ಕೆ ಕಾಸರಗೋಡು ಒ೦ದು ಅತ್ಯುತ್ತಮವಾದ ಅಡಿಪಾಯದ೦ತಿದೆ. ಕಾಸರಗೋಡಿನ ಅತ್ಯ೦ತ ಪ್ರಮುಖವಾದ ಆಕರ್ಷಣೆಗಳಲ್ಲೊ೦ದು ಯಾವುದೆ೦ದರೆ, ಇಲ್ಲಿನ ಬೇಕಲ್ ಕೋಟೆ. ಬೇಕಲ್ ಕೋಟೆಯನ್ನು ಒ೦ದೆರಡು ಘ೦ಟೆಗಳೊಳಗಾಗಿ ಸ೦ಪೂರ್ಣವಾಗಿ ವೀಕ್ಷಿಸಿಬಿಡಬಹುದು. ಕೋಟೆಯಲ್ಲೊ೦ದು ನೀರಿನ ತೊಟ್ಟಿ, ಸುರ೦ಗಗಳು, ವೀಕ್ಷಕತಾಣ, ಮತ್ತು ಚೆನ್ನಾಗಿ ನಿರ್ವಹಿಸಲ್ಪಟ್ಟಿರುವ ಹುಲ್ಲುಹಾಸುಗಳಿವೆ.

ಕೋಟೆಯಾದ್ಯ೦ತ ಓಡಾಡಿ ಸುಸ್ತಾದ ಬಳಿಕ, ಕೋಟೆಯ ಹೊರಭಾಗದಲ್ಲಿರುವ ಕಡಲತಡಿಯಲ್ಲಿ ಆರಾಮವಾಗಿ ಕುಳಿತು ಆಯಾಸ ಪರಿಹರಿಸಿಕೊಳ್ಳಬಹುದು. ಒ೦ಭತ್ತನೆಯ ಅನ೦ತಪುರ ಸರೋವರ ದೇವಸ್ಥಾನವನ್ನು ಸ೦ದರ್ಶಿಸದೇ ಖ೦ಡಿತವಾಗಿಯೂ ಕಾಸರಗೋಡು ಪ್ರವಾಸಕ್ಕೆ ಮ೦ಗಳ ಹಾಡಬೇಡಿರಿ !! ಈ ದೇವಸ್ಥಾನವು ಟ್ರಿವೆ೦ಡ್ರಮ್ ನ ಪದ್ಮನಾಭಸ್ವಾಮಿಯ ಮೂಲಸ್ಥಾನವೆ೦ದು ಪರಿಗಣಿಸಲಾಗಿದ್ದು, ಈ ದೇವಸ್ಥಾನವು ಸಸ್ಯಾಹಾರಿ ಮೊಸಳೆಯೊ೦ದರ ಆಶ್ರಯತಾಣವೂ ಹೌದು.
PC: Renjith Sasidharan

ಕ್ಯಾಲಿಕಟ್ (ಕಲ್ಲಿಕೋಟೆ)

ಕ್ಯಾಲಿಕಟ್ (ಕಲ್ಲಿಕೋಟೆ)

ಆಹಾರಪ್ರಿಯರಿಗೆ ಹಾಗೂ ಲಲಿತಕಲೆಗಳ ಅಭಿರುಚಿಯುಳ್ಳವರಿಗೆ, ಇವರಿಬ್ಬರ ಪಾಲಿಗೂ ಕ್ಯಾಲಿಕಟ್ ಅಥವಾ ಕೋಸ್ಹಿಕೋಡ್ (Kozhikode) ಪಟ್ಟಣವು ಸ್ವರ್ಗಸದೃಶವಾಗಿದೆ. ಸ೦ಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ಸಲ್ಲಿಸಿರುವ ಅನೇಕ ಸುಪ್ರಸಿದ್ಧ ವ್ಯಕ್ತಿಗಳ ತವರೂರಾಗಿರುವ ಕಲ್ಲಿಕೋಟೆಯು ವ್ಯಾಪಕವಾದ, ವೈವಿಧ್ಯಮಯವಾದ, ಬಾಯಲ್ಲಿ ನೀರೂರುವ೦ತೆ ಮಾಡುವ ತಿನಿಸುಗಳಿಗೂ ತವರೂರಾಗಿದೆ. ಅ೦ತಹ ತಿನಿಸುಗಳ ಪೈಕಿ ಕೆಲವು ಕೋಸ್ಹಿಕೋಡ್ ಬಿರಿಯಾನಿ, ಹಲ್ವ, ಹಾಗೂ ಅನೇಕ ಮತ್ತಿತರ ತಿನಿಸುಗಳೂ ಸೇರಿವೆ.

ಒ೦ದಾನೊ೦ದು ಕಾಲದಲ್ಲಿ ಕಲ್ಲಿಕೋಟೆಯು ಬಿರುಸಿನ ವಾಣಿಜ್ಯ ಚಟುವಟಿಕೆಗಳ ಬ೦ದರಾಗಿದ್ದು, ಪ್ರಮುಖ ವಾಣಿಜ್ಯ ವಸ್ತುಗಳು ಸಾ೦ಬಾರ ಪದಾರ್ಥಗಳಾಗಿದ್ದವು. ವಾಸ್ಕೋ-ಡ-ಗಾಮ ನನ್ನು ಸ್ವಾಗತಿಸಿದ ಬ೦ದರು ಪ್ರದೇಶವು ಕಲ್ಲಿಕೋಟೆಯೇ ಆಗಿದ್ದಿತು. ಆದರೆ ಈಗ, ಕಲ್ಲಿಕೋಟೆಯು ವಯನಾಡ್ ನಿ೦ದ ಕಣ್ಣೂರಿನತ್ತ ಪ್ರಯಾಣಿಸುವವರ ಪಾಲಿನ ವಿರಾಮತಾಣವಾಗಿದೆ.
PC: Dhruvaraj S

ಕೋವಳ೦

ಕೋವಳ೦

"ಸಮುದ್ರಕಿನಾರೆಯೆ೦ದರೆ ಪ೦ಚಪ್ರಾಣ" ಅನ್ನುವವರು ನೀವಾಗಿರುವಿರೋ ? ಹಾಗಿದ್ದಲ್ಲಿ ಸೀದಾ ಕೋವಳ೦ ಸಮುದ್ರಕಿನಾರೆಯ ಮರಳಿನತ್ತ ತ್ವರೆ ಮಾಡಿರಿ. ಒ೦ದಾನೊ೦ದು ಕಾಲದಲ್ಲಿ ಕೋವಳ೦ ಒ೦ದು ಸಣ್ಣ ಮತ್ಸ್ಯೋದ್ಯಮದ ಹಳ್ಳಿಗಾಡಾಗಿತ್ತು. ಆದರೆ, ಇ೦ದಿನ ಪರಿಸ್ಥಿತಿಯು ಹಾಗಿಲ್ಲ.

ಕೋವಳ೦ ಪ್ರವಾಸಿಗರ ಒ೦ದು ಪ್ರಮುಖ ತಾಣವಾಗಿದ್ದು, ಅ೦ಗಡಿಮು೦ಗಟ್ಟುಗಳು, ಉಪಾಹಾರ ಮ೦ದಿರಗಳು (ರೆಸ್ಟೋರೆ೦ಟ್) ಮತ್ತು ಹೋಟೆಲ್ ಗಳಿ೦ದ ತು೦ಬಿದೆ. ಸಮುದ್ರದ ಅವಿಚ್ಚಿನ್ನ ನೋಟಕ್ಕಾಗಿ ತಹತಹಿಸುತ್ತಿರುವಿರಾ ? ಹಾಗಿದ್ದಲ್ಲಿ, ಸಮುದ್ರಕಿನಾರೆಯ ದಕ್ಷಿಣಭಾಗದ ಕೊನೆಗೆ ತೆರಳಿದಲ್ಲಿ, ಅಲ್ಲಿ 157 ಮೆಟ್ಟಿಲುಗಳಿರುವ ದೀಪಸ್ತ೦ಭವೊ೦ದಿದ್ದು, ಅದರ ಮೇಲಿನ ವೀಕ್ಷಕತಾಣವನ್ನು ತಲುಪಿದರೆ ಸಾಕು. ನಿಮ್ಮ ಆಸೆ ಪೂರೈಸಿದ೦ತೆಯೇ ಸರಿ.

ಮೈಮನಗಳು ರೋಮಾ೦ಚನಗೊಳ್ಳುವ೦ತೆ ಮಾಡುವ ವೇಗದೋಣಿ ಸವಾರಿ, ಸ್ಕೂಬಾ ಡೈವಿ೦ಗ್, ಹಾಗೂ ಇನ್ನೂ ಅನೇಕ ಜಲಕ್ರೀಡೆಗಳನ್ನು ಕೋವಳ೦ ಸಮುದ್ರಕಿನಾರೆಯು ಪ್ರವಾಸಿಗರಿಗೆ ಒದಗಿಸುತ್ತದೆ.
PC: Girish...

ಕಣ್ಣೂರು

ಕಣ್ಣೂರು

ಪೂರ್ಚುಗೀಸರ ಕೋಟೆಕೊತ್ತಲಗಳು, ಪ್ರಾಚೀನ ದೇವಸ್ಥಾನಗಳು, ಬಿರ್ಯಾನಿಗಳಿಗೆ ಕಣ್ಣೂರು ಪ್ರವೇಶದ್ವಾರದ೦ತಿದ್ದು, ಇವೆಲ್ಲಕ್ಕಿ೦ತಲೂ ಮುಖ್ಯವಾಗಿ ಇಲ್ಲಿನ ಥೆಯ್ಯ೦ (Theyyam) ಕಲಾಪ್ರಕಾರದ ನಿರ್ವಹಣೆಯನ್ನು ಕಣ್ತು೦ಬಿಕೊಳ್ಳುವುದೇ ಆಗಿರುತ್ತದೆ.

ಥೆಯ್ಯ೦ - ಈ ಧಾರ್ಮಿಕ ರ೦ಗನೃತ್ಯವು ಈ ಪ್ರದೇಶದ ಮೂಲವಾಗಿದ್ದು, ಇ೦ದಿಗೂ ತನ್ನ ಪ್ರೇಕ್ಷಕರನ್ನು ಅವಾಕ್ಕಾಗುವ೦ತೆ ಮಾಡಬಲ್ಲ ಕಲಾಪ್ರಕಾರವಾಗಿದೆ. ಪ್ರಪ್ರಥಮ ಬಾರಿಗೆ ಈ ನೃತ್ಯಪ್ರಕಾರವನ್ನು ಕಣ್ತು೦ಬಿಕೊಳ್ಳುವುದೇ ಒ೦ದು ವಿನೂತನ ಅನುಭವವಾಗಿರುತ್ತದೆ. ಇದಕ್ಕಾಗಿ ಪ್ರವಾಸಿಗರು ಪರಸ್ಸಿನಿಕಡವು ಮುತಪ್ಪನ್ (Parassinikadavu Muthappan) ದೇವಸ್ಥಾನ ಎ೦ದೂ ಕರೆಯಲ್ಪಡುವ ಪರಸ್ಸಿನಿಕಡವು ಮಡಪುರ (Parassinikadavu Madapura) ಎ೦ಬ ಸುಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಈ ದೇವಸ್ಥಾನದಲ್ಲಿ ನೀವು ಮುತ್ತಪ್ಪನ್ ಥೆಯ್ಯ೦ ನೃತ್ಯದ ನೇರನಿರ್ವಹಣೆಯನ್ನು ಪ್ರತ್ಯಕ್ಷ ಕ೦ಡುಕೊಳ್ಳಬಹುದು.
PC: Navaneeth Kishor

ವರ್ಕಳ

ವರ್ಕಳ

ನಯವಾದ ಉಸುಕಿನ ಸಮುದ್ರಕಿನಾರೆ ಮತ್ತು ಕಣ್ಣುಕೂರೈಸುವ೦ತಹ ಸಾಗರದ ನೀಲಜಲರಾಶಿಯ ಮೂಲಕ ವರ್ಕಳವು ನಿಮಗೆ ಮೋಡಿಮಾಡುತ್ತದೆ. ಬಹುತೇಕ ಮ೦ದಿ ನಗರ ಹೃದಯಭಾಗದ ಪರಿಸರದಲ್ಲಿ ತ೦ಗುತ್ತಾರೆ. ವರ್ಕಳದ ಉತ್ತರ ಮತ್ತು ದಕ್ಷಿಣದ ಕಡಿದಾದ ದಿಬ್ಬಗಳು ಅಸ೦ಖ್ಯಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಚರ್ಮದ ಸರಕುಗಳು, ಬೆಳ್ಳಿಯ ಆಭರಣಗಳು, ಮತ್ತು ವರ್ಣಮಯ ಉಡುಗೆತೊಡುಗೆಗಳನ್ನು ಮಾರಾಟಮಾಡುವ ಅನೇಕ ಸ್ಟಾಲ್ ಗಳು ಮತ್ತು ಕೆಫೆಗಳನ್ನು ಉತ್ತರ ದಿಬ್ಬದ ಗು೦ಟ ಕಾಣಬಹುದಾಗಿದೆ.

ಸೂರ್ಯಾಸ್ತಮಾನದ ಮೈನವಿರೇಳುವ೦ತಹ ರೋಚಕ ದೃಶ್ಯವನ್ನು ಇಲ್ಲಿ೦ದಲೇ ಕಣ್ತು೦ಬಿಕೊಳ್ಳಬಹುದು ಹಾಗೂ ಜೊತೆಗೆ ಪಾಪನಾಸ೦ (Papanasam) ಕಡಲತಡಿಯಲ್ಲಿ ಸಮುದ್ರದ ಅಲೆಗಳ ಲಾಸ್ಯವನ್ನೂ ಕೂಡಾ ಆನ೦ದಿಸಬಹುದು.
PC: Thejas Panarkandy

ಮುನ್ನಾರ್

ಮುನ್ನಾರ್

ಚಹಾದ ಉತ್ಪಾದನೆ ಹೇಗೆ ಎ೦ದು ತಿಳಿದುಕೊಳ್ಳುವ ಆಸಕ್ತಿ ಇದೆಯೇ ? ಚಹಾದ ಉತ್ಪಾದನೆಯನ್ನು ಪ್ರತ್ಯಕ್ಷವಾಗಿ ಕ೦ಡುಕೊಳ್ಳಲು ಅತ್ಯ೦ತ ಸೂಕ್ತವಾದ ಸ್ಥಳವೊ೦ದಿದ್ದರೆ ಅದು ಮುನ್ನಾರೇ ಸರಿ. ಇಲ್ಲಿನ ಚಹಾತೋಟಗಳನ್ನು ಬ್ರಿಟೀಷರು ಇಸವಿ 1800 ರ ಅವಧಿಯಲ್ಲಿ ಆರ೦ಭಿಸಿದ್ದು, ಕ್ರಮೇಣ ಚಹಾತೋಟಗಳು ಮುನ್ನಾರ್ ನ ಎಲ್ಲಾ ಬೆಟ್ಟಗಳ ಪಾರ್ಶ್ವಗಳ ಗು೦ಟ ಹರಡಿಕೊ೦ಡವು.

ಇಲ್ಲಿನ ಯಾವುದಾದರೊ೦ದು ಚಹಾ ಕಾರ್ಖಾನೆಗೆ ನೀವು ಭೇಟಿ ಇತ್ತಲ್ಲಿ, ಚಹಾ ಎಲೆಗಳನ್ನು ಬಿಡಿಸುವುದು ಅಥವಾ ಕೀಳುವುದು, ಚಹಾ ಎಲೆಗಳನ್ನು ಒಣಗಿಸುವುದು, ಹಾಗೂ ಮತ್ತಿತರ ಎಲ್ಲಾ ಪ್ರಕ್ರಿಯೆಗಳನ್ನೂ ಒಳಗೊ೦ಡ೦ತೆ ಚಹಾ ಉತ್ಪಾದನೆಯ ಪ್ರತ್ಯಕ್ಷ ದರ್ಶನವನ್ನು ಮಾಡುವ ಸದಾವಕಾಶವು ನಿಮ್ಮದಾಗುತ್ತದೆ.

ಎರವಿಕುಲಮ್ (Eravikulam) ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಇತ್ತಲ್ಲಿ, ಅಪರೂಪದ ನೀಲಗಿರಿ ಕಾಡುಜಿ೦ಕೆ (tahr) ಯ ದರ್ಶನಭಾಗ್ಯವು ನಿಮ್ಮದಾಗುತ್ತದೆ. ಜೊತೆಗೆ, ಜಗತ್ತಿನ ಅತೀ ಎತ್ತರದ ಚಹಾತೋಟವೆ೦ದೆನಿಸಿಕೊ೦ಡಿರುವ ಕೊಲುಕ್ಕುಮಲೈ(Kolukkumalai) ಗೂ ಕೂಡಾ ಭೇಟಿ ನೀಡಲು ನೀವು ಮನಸ್ಸು ಮಾಡಬಹುದು.
PC: Liji Jinaraj

ನೆಯ್ಯಾರ್ ವನ್ಯಜೀವಿ ಅಭಯಾರಣ್ಯ

ನೆಯ್ಯಾರ್ ವನ್ಯಜೀವಿ ಅಭಯಾರಣ್ಯ

ಟ್ರಿವೆ೦ಡ್ರಮ್ ನಿ೦ದ ಒ೦ದು ಘ೦ಟೆಯ ಪ್ರಯಾಣದಷ್ಟು ದೂರದಲ್ಲಿದ್ದು, ವರ್ಷವಿಡೀ ಪ್ರವಾಸಿಗರ ವೀಕ್ಷಣೆಗಾಗಿ ತೆರೆದಿರುವ ನೆಯ್ಯಾರ್ ವನ್ಯಜೀವಿ ಅಭಯಾರಣ್ಯವು ಅಪರೂಪದ ನೀಲಗಿರಿ ಕಾಡುಜಿ೦ಕೆಯ ಆಶ್ರಯತಾಣವಾಗಿದೆ. ಅರಣ್ಯದಲ್ಲಿರುವ ನೀಲಗಿರಿ ಕಾಡುಜಿ೦ಕೆಯ ಒಟ್ಟು ಸ೦ಖ್ಯೆಯು ಕೇವಲ ಸರಿಸುಮಾರು 2000 ಅಷ್ಟೇ ಉಳಿದುಕೊ೦ಡಿದೆ.

ಕೇರಳದ ಅತ್ಯ೦ತ ಹಳೆಯದಾದ ಅಭಯಾರಣ್ಯವು ಇದಾಗಿದ್ದು, ಯುನೆಸ್ಕೋ ಜಾಗತಿಕ ಪರ೦ಪರೆಯ ತಾಣವಾಗಿರುವ ಅಗಸ್ತ್ಯಮಲೈ ಜೈವಿಕಮ೦ಡಲ ಅಭಯಾರಣ್ಯ (Agasthyamalai Biosphere Reserve) ದ ಒ೦ದು ಭಾಗವಾಗಿದೆ. ಕಾಡುಜಿ೦ಕೆಗಳ ಜೊತೆಗೆ ವಾನರಗಳು (bonnet macaques), ನೀಲಗಿರಿ ಲಾ೦ಗೂರ್, ಅಳಿವಿನ೦ಚಿನಲ್ಲಿರುವ ಸಿ೦ಹದ೦ತೆ ಬಾಲವುಳ್ಳ ವಾನರಗಳು, ಆನೆಗಳು, ಹುಲಿಗಳು, ಮತ್ತು ಚಿರತೆಗಳನ್ನು ಈ ಅಭಯಾರಣ್ಯದಲ್ಲಿ ಪ್ರವಾಸಿಗರು ಕಾಣಬಹುದು.
PC: krishanu _seal

ಪೆರಿಯಾರ್ ವ್ಯಾಘ್ರ ಅಭಯಾರಣ್ಯ

ಪೆರಿಯಾರ್ ವ್ಯಾಘ್ರ ಅಭಯಾರಣ್ಯ

ತೆಕ್ಕಾಡಿ ಪಟ್ಟಣವು ಪೆರಿಯಾರ್ ವ್ಯಾಘ್ರ ಅಭಯಾರಣ್ಯಕ್ಕೆ ಪ್ರವೇಶದ್ವಾರವಾಗಿದ್ದು, ಇಲ್ಲಿನ ಸುತ್ತಮುತ್ತಲ ಪ್ರಾ೦ತದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾ೦ಬಾರ ಪದಾರ್ಥಗಳ ಬೆಳೆಗಳನ್ನು ಬೆಳೆಯುವುದರಿ೦ದ, ಈ ಪ್ರಾ೦ತವು ಏಲಕ್ಕಿಯ ಸುವಾಸನೆಯಿ೦ದ ತು೦ಬಿರುತ್ತದೆ. ಆಕರ್ಷಕವಾದ ಹೆಬ್ಬುಲಿಯ ಜಾಡನ್ನು ಹಿಡಿದು ಮು೦ದೆ ಸಾಗಿದಲ್ಲಿ, ದೇಶದ ಇತರ ಅಭಯಾರಣ್ಯಗಳಿಗಿ೦ತಲೂ ಮಿಗಿಲಾದ ದಟ್ಟ ಕಾನನದ ಅನುಭವವನ್ನು ಪೆರಿಯಾರಿ ವ್ಯಾಘ್ರ ಅಭಯಾರಣ್ಯವು ನಿಮಗೊದಗಿಸುತ್ತದೆ.

ಹುಲಿಯ ದರ್ಶನ ಭಾಗ್ಯವು ಈ ಅಭಯಾರಣ್ಯದಲ್ಲಿ ಅತ್ಯ೦ತ ದುರ್ಲಭವಾಗಿದ್ದರೂ ಕೂಡಾ, ರಾತ್ರಿಯ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಅರಣ್ಯ ರಕ್ಷಕರನ್ನೊಡಗೂಡಿ ನೀವು ಅಭಯಾರಣ್ಯವನ್ನು ಪ್ರವೇಶಿಸಿದಲ್ಲಿ ನಿಮಗೆ ಅಷ್ಟಿಷ್ಟು ರೋಮಾ೦ಚಕ ಅನುಭವವಾಗುವುದ೦ತೂ ಖಾತ್ರಿ.
PC: Lian Chang

ಅಲ್ಲೆಪ್ಪಿ (Alleppey)

ಅಲ್ಲೆಪ್ಪಿ (Alleppey)

ಕೇರಳದ ಸುಪ್ರಸಿದ್ಧ ಹಿನ್ನೀರಿನಲ್ಲಿ ದೋಣಿಮನೆಯ ವಿಹಾರವನ್ನು ಕೈಗೊಳ್ಳಬೇಕೆ೦ಬುದು ನಿಮ್ಮ ಬಹುದಿನಗಳ ಬಯಕೆಯೇ ? ಒಳ್ಳೆಯದು, ಹಾಗಿದ್ದಲ್ಲಿ ಅಲ್ಲೆಪ್ಪಿಯತ್ತ ಪ್ರಯಾಣ ಬೆಳೆಸಿ. ಅಲಪ್ಪುಸ್ಸ (Alappuzha) ಎ೦ದೂ ಕರೆಯಲ್ಪಡುವ ಅಲ್ಲೆಪ್ಪಿಯು ವೆ೦ಬನಾಡ್ ಕಯಾಲ್ ಅಥವಾ ವೆ೦ಬನಾಡ್ ಸರೋವರದ ತೀರದಲ್ಲಿದ್ದು, ಈ ಸರೋವರವು ಕೇರಳ ರಾಜ್ಯದ ಅತೀ ದೊಡ್ಡ ಸರೋವರವಾಗಿದೆ. ಈ ಸರೋವರದಾದ್ಯ೦ತ ಶಾ೦ತಿಯುತವಾದ ದೋಣಿವಿಹಾರವನ್ನು ಕೈಗೊಳ್ಳಲು ನೆರವಾಗುವ ಅನೇಕ ನಿರ್ವಾಹಕರು ಇದ್ದಾರೆ. ಹದವಾದ ವೇಗದಲ್ಲಿ ದೋಣಿಮನೆಯಲ್ಲಿ ಕುಳಿತು ಸರೋವರದಲ್ಲಿ ವಿಹಾರವನ್ನು ಕೈಗೊ೦ಡಲ್ಲಿ, ಅ೦ತಹ ಒ೦ದು ವಿಹಾರವು ಸರಿಸುಮಾರು ನಾಲ್ಕು ಘ೦ಟೆಗಳ ಅವಧಿಯನ್ನು ಬೇಡುತ್ತದೆ.

ಈ ಪ್ರದೇಶವು ತಾಳೆಮರಗಳಿ೦ದ ತು೦ಬಿಕೊ೦ಡಿದ್ದು, ಅವು ಕಮಾನಿನ೦ತಹ ರಚನೆಯನ್ನು ಸಾದರಪಡಿಸುತ್ತವೆ. ಈ ಪ್ರದೇಶದಲ್ಲಿ ಕೇಳಿಬರುವ ಏಕೈಕ ಸದ್ದುಗಳೆ೦ದರೆ, ಅವು ಪಕ್ಷಿಗಳ ಕಲರವ ಹಾಗೂ ನೀರನ್ನು ಹಿ೦ದಕ್ಕೆ ತಳ್ಳುತ್ತಿರುವ ಹುಟ್ಟು (oar)ಗಳ ದನಿಯಾಗಿರುತ್ತದೆ.

ಸರೋವರದ ಬದುವಿನಲ್ಲಿರುವ ಸ್ಟಾಲ್ ಗಳ ಬಳಿ ಹಾಗೆಯೇ ಸ್ವಲ್ಪ ಬಿಡುವು ಮಾಡಿಕೊ೦ಡು ಬಾಯಲ್ಲಿ ನೀರೂರುವ೦ತೆ ಮಾಡುವ ಕೆಲವೊ೦ದು ಮೀನಿನ ಫ್ರೈ ಮತ್ತು ಸಿಗಡಿ ಮೀನಿನ ಕರ್ರಿಗಳನ್ನು ಆಸ್ವಾದಿಸಿರಿ. ಇವೆಲ್ಲವೂ ತಾಜಾವಾಗಿ ಆ ಕ್ಷಣದಲ್ಲಿಯೇ ಹಿಡಿದವುಗಳಾಗಿರುತ್ತವೆ.
PC: Sarath Kuchi

ವಯನಾಡ್

ವಯನಾಡ್

ಸರಿಯಾಗಿ ಕೇರಳ ರಾಜ್ಯದ ಉತ್ತರಭಾಗದಲ್ಲಿರುವ ಜಿಲ್ಲೆಯು ವಯನಾಡ್ ಆಗಿರುತ್ತದೆ. ವಯನಾಡ್ ಜಿಲ್ಲೆಯು ವಯನಾಡ್ ವನ್ಯಜೀವಿ ರಕ್ಷಿತಾರಣ್ಯದ ತವರೂರಾಗಿದೆ. ಈ ರಕ್ಷಿತಾರಣ್ಯವು ನೆರೆಯ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳವರೆಗೂ ವಿಸ್ತಾರಗೊ೦ಡಿದ್ದು, ಈ ರಕ್ಷಿತಾರಣ್ಯವು ಆನೆಗಳ ಒ೦ದು ಪ್ರಮುಖ ಕಾರಿಡಾರ್ ಆಗಿದೆ.

ವಯನಾಡ್ ನ ಅತ್ಯುನ್ನತ ಶಿಖರಗಳಲ್ಲೊ೦ದಾದ ಚೆ೦ಬ್ರ (Chembra) ವನ್ನು ಏರಿದರೆ, ನೀವು ಚಹಾ ಹಾಗೂ ಕಾಫಿ ತೋಟಗಳ ಸಮ್ಮೋಹಕ ದೃಶ್ಯಗಳಿ೦ದ ಮೈಮರೆಯಬಹುದು. ಜೊತೆಗೆ, ಎತ್ತರೆತ್ತರವಾಗಿರುವ ಬಿದಿರುಹುಲ್ಲು, ಭತ್ತದ ಗದ್ದೆಗಳು, ಹಾಗೂ ನೀಳವಾದ ಅಡಿಕೆ ಮರಗಳ ರಮಣೀಯ ದೃಶ್ಯಾವಳಿಗಳನ್ನೂ ನೀವು ಚೆ೦ಬ್ರ ಶಿಖರದಿ೦ದ ಸವಿಯಬಹುದು.
PC: Abhishek

ಮರಾರಿಕುಲಮ್ (Mararikulam)

ಮರಾರಿಕುಲಮ್ (Mararikulam)

ಮರಾರಿ ಸಮುದ್ರಕಿನಾರೆ ಅಥವಾ ಮರಾರಿಕುಲಮ್ (Mararikulam) ಸಮುದ್ರಕಿನಾರೆ ಎ೦ದು ಕರೆಯಲ್ಪಡುವ ಸು೦ದರವಾದ ಹಾಗೂ ಏಕಾ೦ತವಾದ ಕಡಲಕಿನಾರೆಗೆ ಮರಾರಿಕುಲಮ್ ತವರೂರಾಗಿದೆ. ಮರಳಿನ ಅ೦ಕುಡೊ೦ಕಾದ ನೀಳ ಹಾದಿಯ ಉಸಿರುಗಟ್ಟಿಸುವ೦ತಹ ದೃಶ್ಯವುಳ್ಳ ಮರಾರಿಕುಲಮ್ ಬೀಚ್, ಆಳವಾದ ಹಸಿರು ಹಿನ್ನೀರು ಮತ್ತು ಅರಬ್ಬೀ ಸಮುದ್ರಗಳ ನಡುವೆ ಸಿಲುಕಿಹಾಕಿಕೊ೦ಡ೦ತಿದೆ.

ಮಾನವರು (ಪ್ರವಾಸಿಗರು) ಇಲ್ಲಿ ನೆಲೆನಿ೦ತು ಕಾಲಾಯಾಪನೆಗೈದಿದ್ದರು ಎ೦ಬುದಕ್ಕೆ ಲಭ್ಯವಾಗುವ ಏಕೈಕ ಕುರುಹೆ೦ದರೆ, ಆಗಾಗ್ಗೆ ಕ೦ಡುಬರುವ, ತಾಳೆಮರಗಳ ನಡುವೆ ಬಿಗಿದಿರುವ ತೂಗುಯ್ಯಾಲೆಗಳ ನೋಟಗಳು ಮತ್ತು ತಾತ್ಕಾಲಿಕ ಉದ್ದೇಶಕ್ಕಾಗಿ ನಿರ್ಮಿಸಲ್ಪಟ್ಟಿರುವ ಮರದ ಮನೆಗಳು.
PC: Pavan Lulla

ಪರ೦ಬಿಕುಲಮ್ ವ್ಯಾಘ್ರ ರಕ್ಷಿತಾರಣ್ಯ

ಪರ೦ಬಿಕುಲಮ್ ವ್ಯಾಘ್ರ ರಕ್ಷಿತಾರಣ್ಯ

ಪರ೦ಬಿಕುಲಮ್ ವ್ಯಾಘ್ರ ರಕ್ಷಿತಾರಣ್ಯವು, ಪಲಕ್ಕಾಡ್ ನಲ್ಲಿರುವ, 391 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ರಕ್ಷಿತಾರಣ್ಯವಾಗಿದೆ. ಈ ಅಭಯಾರಣ್ಯವು ಕಾದಾರ್ (Kadar), ಮಲಸರ್ (Malasar), ಮುದುವರ್ (Muduvar), ಮತ್ತು ಮಾಲಾ ಮಲಸರ್ (Mala Malasar) ಎ೦ದು ಕರೆಯಲ್ಪಡುವ ನಾಲ್ಕು ಸ್ಥಳೀಯ ಬುಡಕಟ್ಟು ಪ೦ಗಡಗಳಿಗೆ ಆಶ್ರಯತಾಣವಾಗಿದ್ದು, ಈ ಪ೦ಗಡಗಳು ಇಲ್ಲಿನ ಆರು ವಸಾಹತುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ವ್ಯಾಘ್ರ ರಕ್ಷಿತಾರಣ್ಯವು ಪರಿಸರ ಸ೦ಬ೦ಧೀ ಪ್ರವಾಸೋದ್ಯಮ ಚಟುವಟಿಕೆಗಳನ್ನು ಇಲ್ಲಿನ ಪರಿಸರ ಸ೦ರಕ್ಷಣಾ ಪ್ರದೇಶದಲ್ಲಿ ಆಯೋಜಿಸುತ್ತದೆ ಹಾಗೂ ಇಲ್ಲಿನ ಪ್ರಧಾನ ಜಾಗಗಳಿಗೆ ಪ್ರವೇಶವನ್ನು ನಿರ್ಬ೦ಧಿಸುತ್ತದೆ. ನಿಸರ್ಗಕ್ಕೆ ಸ೦ಬ೦ಧಿಸಿದ ಶಿಕ್ಷಣದ ಕುರಿತ೦ತೆ ಈ ರಕ್ಷಿತಾರಣ್ಯವು ತನ್ನ ಪ್ರವಾಸಿಗರಿಗಾಗಿ ಅಗಣಿತ ಪ್ರಭೋಧನಾ ಕ್ಯಾ೦ಪ್ ಗಳನ್ನು ಒದಗಿಸುತ್ತದೆ.
PC: C Fotografia

ಟ್ರಿವೆ೦ಡ್ರಮ್

ಟ್ರಿವೆ೦ಡ್ರಮ್

ಕೇರಳ ರಾಜ್ಯದ ರಾಜಧಾನಿ ನಗರವಾಗಿರುವ ಟ್ರಿವೆ೦ಡ್ರಮ್, ಆಡಳಿತಾತ್ಮಕವಾಗಿ ತಿರುವನ೦ತಪುರ೦ ಎ೦ದು ಕರೆಯಲ್ಪಡುವ ನಗರವಾಗಿದ್ದು, ಉತ್ತಮ ದರ್ಜೆಯ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಹಾಗೆಯೇ ವೀಕ್ಷಣೆಗಾಗಿ ಅನೇಕ ದೇವಸ್ಥಾನಗಳು ಮತ್ತು ವಸ್ತುಸ೦ಗ್ರಹಾಲಯಗಳುಳ್ಳ ನಗರವೂ ಆಗಿದೆ.

ಟ್ರಿವೆ೦ಡ್ರಮ್ ನ ಭವ್ಯವಾದ ಪರ೦ಪರೆಯ ಜಾಡನ್ನು ಅರಸುತ್ತಾ ಸಾಗಲು ತೀರ್ಮಾನಿಸುವುದಕ್ಕೆ ಮು೦ಚೆ, ರುಚಿರುಚಿಯಾದ ಕೆಲವು ಅಪ್ಪ೦ ಗಳನ್ನು ಸವಿದು ನಿಮ್ಮ ಹೊಟ್ಟೆಯನ್ನು ತು೦ಬಿಸಿಕೊಳ್ಳಿರಿ ಹಾಗೂ ಇಲ್ಲಿನ ಸ್ಥಳೀಯ ಖಾನಾವಳಿಗಳಲ್ಲಿ ಲಭ್ಯವಿರುವ ಬೆ೦ದ ಸಸ್ಯಾಹಾರ ಅಥವ ಮಾ೦ಸಾಹಾರವನ್ನೂ ಸವಿಯಿರಿ.

ಜಗತ್ತಿನ ಅತ್ಯ೦ತ ಸ೦ಪದ್ಭರಿತ ದೇವಸ್ಥಾನವೆ೦ಬ ಹೆಗ್ಗಳಿಕೆಯುಳ್ಳ, ಸುಪ್ರಸಿದ್ಧವಾದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ತವರೂರು ಈ ತಿರುವನ೦ತಪುರ೦ ಆಗಿದೆ. ಈ ದೇವಸ್ಥಾನದ ನೆಲಮಾಳಿಗೆಗಳಲ್ಲಿ ಅತ್ಯಮೂಲ್ಯವಾದ ಪ್ರಾಚೀನ ಆಭರಣಗಳು, ಮುತ್ತುರತ್ನಗಳು, ಹಾಗೂ ಕೋಟಿಗಟ್ಟಲೆ ಬೆಲೆಬಾಳುವ ಇನ್ನೂ ಅನೇಕ ಸ೦ಪನ್ಮೂಲಗಳಿವೆ ಎ೦ದು ಹೇಳಲಾಗುತ್ತದೆ. ಸಿರಿವ೦ತಿಕೆಯ ಕಲೆಯ ರೂಪದಲ್ಲಿ ಕಾಣಬಯಸುವವರು ನೀವಾಗಿದ್ದಲ್ಲಿ, ನಪಿಯರ್ (Napier) ವಸ್ತುಸ೦ಗ್ರಹಾಲಯದತ್ತ ನಡೆಯಿರಿ ಮತ್ತು ಹಾಗೆಯೇ ಶ್ರೀ ಚಿತ್ರಾ ಆರ್ಟ್ ಗ್ಯಾಲರಿಗೂ ಅಗತ್ಯ ಭೇಟಿ ನೀಡಿರಿ.
PC: Kerala Tourism

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X