Search
  • Follow NativePlanet
Share
» »ಮೇಲುಕೋಟೆಗೊಂದು ಸುಂದರ ಸವಾರಿ

ಮೇಲುಕೋಟೆಗೊಂದು ಸುಂದರ ಸವಾರಿ

ದೇಗುಲಗಳ ನಗರ ಎಂದು ಹೆಸರಾದ ಮೇಲುಕೋಟೆ ಅನೇಕ ಪ್ರವಾಸ ತಾಣಗಳನ್ನು ಒಳಗೊಂಡಿದೆ. ಅವುಗಳ ಕಿರು ಪರಿಚಯ ಇಲ್ಲಿದೆ.

By Divya

ಬೆಂಗಳೂರು ನಗರ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ವಸತಿ, ಉದ್ಯೋಗ ಹಾಗೂ ಶಿಕ್ಷಣ ಸೇರಿದಂತೆ ಹಲವಾರು ವಿಚಾರಗಳಿಗೆ ಅನುಕೂಲಕರ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಹಾಗಾಗಿಯೇ ದೇಶದೆಲ್ಲೆಡೆಯ ಜನರು ಇಲ್ಲಿರುವುದನ್ನು ಕಾಣಬಹುದು. ಒತ್ತಡದಲ್ಲಿಯೇ ವಾರವಿಡೀ ಕೆಲಸಮಾಡುವವರಿಗೆ ರಜೆಯಲ್ಲಿ ಕೊಂಚ ಆರಾಮ ಹಾಗೂ ಸುಂದರ ತಾಣಗಳಿಗೆ ಭೇಟಿ ನೀಡಬೇಕೆಂಬ ಬಯಕೆ ಕಾಡುವುದು ಸಹಜ. ಇಂತಹ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೆಂಗಳೂರು ಸಮೀಪ ಅನೇಕ ತಾಣಗಳಿವೆ. ಅವುಗಳಲ್ಲಿ ಮೇಲುಕೋಟೆಯೂ ಒಂದು. ಮಂಡ್ಯ ಜಿಲ್ಲೆಯ ಆವೃತ್ತಿಯಲ್ಲಿ ಬರುವ ಮೇಲುಕೋಟೆ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಗಿರಿಧಾಮಗಳಿಗೆ ಹೆಸರಾಗಿದೆ. ಇಲ್ಲಿಗೆ ಹೋಗಲು ಪ್ರಮುಖವಾಗಿ ಎರಡು ಮಾರ್ಗಗಳನ್ನು ಅನುಸರಿಸಬಹುದು.

* ಮೊದಲ ಮಾರ್ಗ: ಬೆಂಗಳೂರು-ಯಡಿಯೂರು-ಮೇಲುಕೋಟೆ (159 ಕಿ.ಮೀ.)

* ಎರಡನೇ ಮಾರ್ಗ: ಬೆಂಗಳೂರು-ರಾಮನಗರ-ಮದ್ದೂರು-ಮಂಡ್ಯ-ಮೇಲುಕೋಟೆ (159ಕಿ.ಮೀ.)

Trip to temple town Melkote

ಎರಡನೇ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ 160 ಕಿ.ಮೀ. ರಸ್ತೆ ಪ್ರವಾಸ ಬೆಳೆಸಿ, ಸುಂದರವಾದ ಪೃಕೃತಿ ಸೌಂದರ್ಯ ಹಾಗೂ ಕೆಲವು ಪ್ರಸಿದ್ಧ ಸ್ಥಳಗಳನ್ನು ನೋಡುತ್ತಾ ಸಾಗಬಹುದು. ಬೆಳಗಿನಜಾವದಲ್ಲೇ ಪ್ರಯಾಣವನ್ನು ಪ್ರಾರಂಭಿಸಿದರೆ ಕುಡ್ಲಾ ರೆಸ್ಟೋರೆಂಟ್ ಅಥವಾ ಅಲ್ಲೇ ಹತ್ತಿರದಲ್ಲಿರುವ ಒಳ್ಳೆಯ ಹೋಟೆಲ್‍ಗಳಲ್ಲಿ ಬೆಳಗಿನ ತಿಂಡಿ ಮುಗಿಸಬಹುದು. ತಿಂಡಿಯ ನಂತರ ರಾಮನಗರ ದಾರಿ ಹಿಡಿಯಬೇಕು. ಸಿಟಿಯಿಂದ ಸುಮಾರು 54 ಕಿ.ಮೀ. ಅಷ್ಟು ದೂರದಲ್ಲಿ, ಹಿಂದಿಯಲ್ಲಿ ಹೆಸರು ಮಾಡಿರುವ ಶೋಲೆ ಚಿತ್ರದ ಚಿತ್ರೀಕರಣ ನಡೆದ ಸ್ಥಳ ಸಿಗುವುದು. ಇದು ಚಾರಣ ಮಾಡಲು ಉತ್ತಮ ಜಾಗ. ಇಲ್ಲಿ ಸ್ವಲ್ಪ ಸಮಯ ಕಳೆದು ಅಲ್ಲಿಂದ ಮದ್ದೂರಿಗೆ ಹೋಗಬೇಕು.

ಮೇಲುಕೋಟೆಯ ಪ್ರವಾಸ ತಾಣಗಳ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ

Trip to temple town Melkote

ಮದ್ದೂರು ರಾಮನಗರದಿಂದ 35 ಕಿ.ಮೀ. ದೂರದಲ್ಲಿದೆ. ಈ ತಾಣದಲ್ಲಿಯೇ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿವೆ. ಇಲ್ಲಿ ಒಂದು ಉಗ್ರ ನರಸಿಂಹ ದೇಗುಲವಿದೆ. ದೇವರ ದರ್ಶನ ಪಡೆದು ಹೊರಟರೆ 18 ಕಿ.ಮೀ. ದೂರದಲ್ಲಿ ಸಕ್ಕರೆ ನಾಡು ಮಂಡ್ಯದ ದರ್ಶನವಾಗುತ್ತದೆ. ಇಲ್ಲಿ ವರದರಾಜ ಸ್ವಾಮಿ ದೇಗುಲ ಹಾಗೂ ಪಟ್ಟಭೀರಮ್ಮ ಎಂಬ ಎರಡು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಬಹುದು.

ಮಂಡ್ಯದಿಂದ ಮೇಲುಕೋಟೆಗೆ 53 ಕಿ.ಮೀ. ಅಷ್ಟೇ. ಇಲ್ಲಿಂದ ಅದ್ಭುತವಾದ ಪ್ರವಾಸಿ ತಾಣಗಳನ್ನು ನೋಡುತ್ತಾ ಸಾಗಬಹುದು. ಯಾದಗಿರಿಯ ಗುಡ್ಡದ ತುದಿಯಲ್ಲಿರುವ ಯೋಗ ನರಸಿಂಹ ಸ್ವಾಮಿ ದೇಗುಲ. ಹೊಯ್ಸಳರ ಕಾಲದ ಈ ದೇಗುಲದಲ್ಲಿ ಯೋಗ ನರಸಿಂಹ ದೇವರನ್ನು ಆರಾಧಿಸಲಾಗುತ್ತದೆ. ಇದನ್ನು ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದನು ನಿರ್ಮಿಸಿದ್ದನು ಎನ್ನಲಾಗುತ್ತದೆ. ಇದನ್ನು ಏಳು ಪ್ರಮುಖ ನರಸಿಂಹ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಮೇಲುಕೋಟೆಯ ಚೆಲುವನಾರಾಯಣ ದೇವಸ್ಥಾನದ ಬಗ್ಗೆ ಓದಿರಿ

Trip to temple town Melkote

PC: wikipedia.org

ಇಲ್ಲಿರುವ ಇನ್ನೊಂದು ದೇಗುಲವೆಂದರೆ ಚೆಲುವನಾರಾಯಣ ದೇಗುಲ. ಪುರಾತನ ಕಾಲದ ಈ ದೇಗುಲದಲ್ಲಿ ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ವೈಷ್ಣವ ಜನಾಂಗದವರ ಪವಿತ್ರ ಕ್ಷೇತ್ರವಿದು. ಈ ಸ್ಥಳ ರಾಮಾಯಣ ಕಾಲದ ಇತಿಹಾಸವನ್ನು ಒಳಗೊಂಡಿದೆ. ರಾಯ ಗೋಪುರವು ಇಲ್ಲಿಯ ಇನ್ನೊಂದು ಆಕರ್ಷಣೆ.

Trip to temple town Melkote

PC: wikipedia.org

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದನ್ನು ಅಪೂರ್ಣ ಕಟ್ಟಡ ಎಂದು ಹೇಳಲಾಗುತ್ತದೆ. ಈ ದೇಗುಲಕ್ಕೆ ಗೋಪುರಗಳಿಲ್ಲದಿರುವುದು ವಿಶೇಷ. ಇಲ್ಲಿ ಅನೇಕ ಕನ್ನಡ ಹಾಗೂ ಹಿಂದಿ ಚಲನಚಿತ್ರಗಳ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗುತ್ತದೆ.

Trip to temple town Melkote

PC: flickr.com

ಮೇಲುಕೋಟೆಗೆ ಹೊಂದಿಕೊಂಡಂತೆಯೇ ತೊಣ್ಣೂರು ಕೆರೆಯಿದೆ. ಹೊಯ್ಸಳರ ಕಾಲದಲ್ಲಿ ಬೇಸಿಗೆಯ ತಂಗುದಾಣವಾಗಿತ್ತು ಇದು ಎನ್ನುತ್ತಾರೆ. ರಾಮಾನುಜರು ಸಾವಿರಾರು ಜೈನ ಯತಿಗಳನ್ನು ವಾದದಲ್ಲಿ ಸೋಲಿಸಿದ್ದು ಇದೇ ಜಾಗದಲ್ಲಿ ಎಂಬ ಇತಿಹಾಸವಿದೆ. ಈ ಕೆರೆ ಪದ್ಮಗಿರಿ ಬೆಟ್ಟಕ್ಕೆ ಸುತ್ತುವರಿದಿರುವುದರಿಂದ ಇದರ ಸೌಂದರ್ಯ ಸುಂದರ ನಯನ ಮನೋಹರವಾಗಿದೆ. ಈ ಕೆರೆಯಲ್ಲಿ ಮುಳುಗೆದ್ದರೆ ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಗುಣಮುಖವಾಗುತ್ತವೆ.

ಮಂಡ್ಯದಲ್ಲಿ ಸಾಕಷ್ಟು ಹೋಟೆಲ್ ಹಾಗೂ ರೆಸಾರ್ಟ್‍ಗಳು ಇರುವುದರಿಂದ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗದು.

ಮೇಲುಕೋಟೆಯ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ಓದಿರಿ

Trip to temple town Melkote
Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X