Search
  • Follow NativePlanet
Share
» »ನೆಮ್ಮದಿಯ ಕಂಬಲಕೊಂಡ ರಾಷ್ಟ್ರೀಯ ಅಭಯಾರಣ್ಯ

ನೆಮ್ಮದಿಯ ಕಂಬಲಕೊಂಡ ರಾಷ್ಟ್ರೀಯ ಅಭಯಾರಣ್ಯ

By Vijay

ಸಮಯ ಸಿಕ್ಕಾಗ, ಅನುಕೂಲತೆಗಳಿದ್ದಾಗ ದೈನಂದಿನ ಒತ್ತಡಗಳಿಂದ ದೂರವಿರಲು ಮನ ಚಡಪಡಿಸುವುದು ಸಾಮಾನ್ಯ. ಅದಕ್ಕೆಂತಲೆ ಬಹುತೇಕ ಜನ ರಜೆ ಬಂದ ತಕ್ಷಣ ಸಾಕು ತಮ್ಮ ಸಾಮಾನು ಸಂಜಾಮುಗಳನ್ನು ಮೊದಲು ಸಿದ್ಧಪಡಿಸಿಕೊಂಡು ಜಾಲಿಯಾಗಿ ಎಲ್ಲಿಗಾದರೂ ಪ್ರವಾಸ ಹೊರಟೇ ಬಿಡುತ್ತಾರೆ.

ರೆಡ್ ಬಸ್ ಸೈಟಿನಲ್ಲಿ ಹೋಟೆಲುಗಳನ್ನು ಕಾಯ್ದಿರಿಸಿ ಹಾಗೂ 25% ರಷ್ಟು ರಿಯಾಯಿತಿ ಪಡೆಯಿರಿ

ಈ ರೀತಿಯಾಗಿ ಪ್ರವಾಸ ಮಾಡುವಾಗ ಯಾವುದಾದರೂ ವಿಶೇಷ ಎನ್ನುವ ಸ್ಥಳಕ್ಕೆ ಭೇಟಿ ನೀಡಿದರೆ ನಿಮ್ಮ ಪ್ರವಾಸವೂ ಸಾರ್ಥವೆನಿಸುತ್ತದೆ ಹಾಗೂ ಸಂತೋಷ ನೆಮ್ಮದಿಗಳು ಲಭಿಸುತ್ತವೆ. ಕೆಲವರಿಗೆ ಗಿರಿಧಾಮಗಳು, ತೀರ್ಥಕ್ಷೇತ್ರಗಳಿಗೆ ತೆರಳುವುದು ಮೆಚ್ಚುಗೆಯಾದರೆ ಇನ್ನೂ ಹಲವರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದವರಿಗೆ ಟ್ರೆಕ್ ಮಾಡುವುದೊ ಇಲ್ಲವೆ ಕಾಡು ಪ್ರದೇಶಗಳಿಗೆ ತೆರಳುವುದು ಆನಂದ ನೀಡುತ್ತದೆ.

ಪ್ರಸ್ತುತ ಲೇಖನವು ಹದಿಹರೆಯ್ದವರು ಇಷ್ಟಪಡಬಹುದಾದ, ಟ್ರೆಕ್ ಮಾಡಲೂ ಸಹ ಅನುಕೂಲವಿರುವ ಕಂಬಲಕೊಂಡ ಎಂಬ ಪೂರ್ವಘಟ್ಟದಲ್ಲಿರುವ ಹಸಿರುಮಯ ದಟ್ಟಾರಣ್ಯದ ಕುರಿತು ತಿಳಿಸುತ್ತದೆ. ಈ ಅಭಯಾರಣ್ಯವು ಆಂಧ್ರ ಪ್ರದೇಶದ ವೈಜಾಗ್ ಅಥವಾ ವಿಶಾಖಪಟ್ಟಣದ ಹೊರವಲಯದ ಭಾಗದಲ್ಲಿ ಸ್ಥಿತವಿದೆ.

ನಿಮಗಿಷ್ಟವಾಗಬಹುದಾದ ಇತರೆ ಲೇಖನಗಳು:

ನಾಗರಹೊಳೆ ಎಂಬ ಮೋಹಕ ಅರಣ್ಯ

ಹಲವು ಅದ್ಭುತಗಳ ಮುದುಮಲೈ ಅರಣ್ಯ

ಕಣ ಕಣದಲ್ಲೂ ಕಾಡಿನ ಸೌಂದರ್ಯ ಸುಂದರಬನ್ಸ್

ಸೂಚನೆ: ಪ್ರೀಯ ಪ್ರವಾಸಪ್ರಿಯ ಓದುಗರೆ, ನೀವೂ ಕೂಡ ನಿಮ್ಮ ಪ್ರವಾಸದ ಅನುಭವಗಳನ್ನು ಪ್ರವಾಸ ಲೇಖನದ ಮೂಲಕ ಇತರರೊಂದಿಗೆ ಹಂಚಿಕೊಳ್ಳಲು ಬಯಸಿದ್ದರೆ ನಿಮ್ಮ ಲೇಖನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಆದರೆ ಸ್ಥಳದ ಕುರಿತು ಹೇಗೆ ಹೋಗಬಹುದು, ಬಸ್ಸಿನ ಅನುಕೂಲ ಮುಂತಾದ ವಿಚಾರಗಳಿರಬೇಕು. ಸ್ಥಳದ ಆಕರ್ಷಕ ಚಿತ್ರಗಳು ಇರುವುದು ಅವಶ್ಯ. ಲೇಖನವು ನಿಮ್ಮ ಸ್ವಂತದ್ದಾಗಿದ್ದು ಎಲ್ಲಿಂದಲೂ ಕಾಪಿ ಮಾಡಿರದಾಗಿರಬೇಕು. ಲೇಖನವನ್ನು ನಿಮ್ಮ ಹೆಸರಿನಡಿಯಲ್ಲಿ ಪ್ರಕಟಿಸಲಾಗುವುದು. ಕಳುಹಿಸಬೇಕಾದ ವಿಳಾಸ : [email protected]

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಒಂದು ಜೈವಿಕ ಪರಿಸರದ ಉದ್ಯಾನವಾಗಿದ್ದು ಸುಮಾರು 70.70 ಚಕಿಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದೆ. ಇದೊಂದು ಒಣ ನಿತ್ಯಹರಿದ್ವರ್ಣದ ಕಾಡಾಗಿದ್ದು ಆಂಧ್ರಪ್ರದೇಶ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುತ್ತದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಈ ರಾಷ್ಟ್ರೀಯ ಉದ್ಯಾನವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5 ರ ಬಳಿಯಿದ್ದು ವಿಶಾಖಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿ ವಿಜಯನಗರಂ - ಶ್ರೀಕಾಕುಲಂ ರಸ್ತೆಯ ಮೇಲೆ ನೆಲೆಸಿದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಈ ಉದ್ಯಾನದ ಸಮ್ಮುಖದಲ್ಲೆ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಇಂದಿರಾಗಾಂಧಿ ಪ್ರಾಣಿಶಾಸ್ತ್ರೀಯ ಉದ್ಯಾನವನ್ನು ಕಾಣಬಹುದು. ಈ ಉದ್ಯಾನವನ್ನು ವೈಜಾಗ್ ಝೂ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ರಾಷ್ಟ್ರೀಯ ಉದ್ಯಾನದೊಳಗೆ ಪ್ರವೇಶಿಸಲು ಪ್ರವೇಶ ಶುಲ್ಕವಿದ್ದು ಮಕ್ಕಳಿಗೆ 5 ರೂ ಹಾಗೂ ವಯಸ್ಕರಿಗೆ 10 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಒಳಗಡೆಗೆ ನಿಮ್ಮ ಸ್ವಂತ ವಾಹನಗಳನ್ನೂ ಸಹ ಒಯ್ಯಬಹುದಾಗಿದೆ. ಇದಕ್ಕೆ 200 ರೂಪಾಯಿ ಶುಲ್ಕವನ್ನು ಕಟ್ಟಬೇಕು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ರಾಷ್ಟ್ರೀಯ ಉದ್ಯಾನದಲ್ಲಿ ಕೊಚ ಹೊತ್ತು ವಿಶ್ರಮಿಸಲು ಬಯಸಿದರೆ ಪ್ರತ್ಯೇಕ ಶುಲ್ಕ ನೀಡಿ ಇಲ್ಲಿರುವ ಕಾಟೆಜುಗಳನ್ನು ಬಾಡಿಗೆಗೆ ಪಡೆಯಬಹುದು. ಅಲ್ಲದೆ ಉಪಹಾರ ಗೃಹವೂ ಸಹ ಉದ್ಯಾನದೊಳಗೆ ಲಭ್ಯವಿದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಇನ್ನು ಉದ್ಯಾನದಲ್ಲಿ ವಿಹರಿಸುವಾಗ ಜಿಂಕೆಗಳು ಸ್ವಚ್ಛಂದವಾಗಿ ವಿಹರಿಸುತ್ತಿರುವುದನ್ನು ಕಾಣಬಹುದು. ಮಳೆ ನೀರನ್ನು ಸಂಗ್ರಹಿಸುವ ಚಿಕ್ಕ ನೀರಿನ ಕೊಳವೊಂದು ಉದ್ಯಾನದೊಳಗಿದ್ದು ಇಲ್ಲಿ ದೋಣಿ ವಿಹಾರದ ಆನಂದವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಎಲ್ಲ ದಿನಗಳಲ್ಲೂ ತೆರೆದಿರುವ ಉದ್ಯಾನ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 4.30 ರ ವರೆಗೆ ಮಾತ್ರ ತೆರೆದಿರುತ್ತದೆ. ಟ್ರೆಕ್ ಮಾಡಬಯಸುವವರಿಗೆ ಕುಂಬಲಕೊಂಡ ರಾಷ್ಟ್ರೀಯ ಉದ್ಯಾನದಲ್ಲಿ ಹಲವು ಮಾರ್ಗಗಳಿವೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಹತ್ತು ಜನರ ಒಂದು ಗುಂಪಿಗೆ ನಿಗದಿತ ಶುಲ್ಕವಿದ್ದು ಅದನ್ನು ಪಾವತಿಸುವುದರ ಮೂಲಕ ಟ್ರೆಕ್ ಗೆ ತೆರಳಬಹುದು. ಆ ಗುಂಪಿಗೆ ಒಬ್ಬ ಮಾರ್ಗದರ್ಶಕನನ್ನು ಒದಗಿಸಲಾಗುತ್ತದೆ. ಸಾಮಾನ್ಯವಾಗಿ ಟ್ರೆಕ್ ಬೆಳಿಗ್ಗೆ ಆರು ಘಂಟೆಗೆ ಆರಂಭಗೊಂಡು ಮತ್ತೆ ಹಿಂತಿರುಗುವವರೆಗೆ ಸುಮಾರು ಮೂರರಿಂದ ನಾಲ್ಕು ಘಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಟ್ರೆಕ್ ಕುರಿತು ಒಂದಿನ ಮುಂಚಿತವಾಗಿಯೆ ಇಲ್ಲಿನ ಅರಣ್ಯ ಇಲಾಖೆಯ ಸ್ವಾಗತ ಕಚೇರಿಯಲ್ಲಿ ತಿಳಿಸಿರಬೇಕು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಚಳಿಗಾಲದ ಸಮಯದಲ್ಲಂತೂ ವೈಜಾಗ್ ಹಾಗೂ ಸುತ್ತಮುತ್ತಲಿನ ಸಾಕಷ್ಟು ಜನರು ಸ್ನೇಹಿತರೊಂದಿಗೆ, ಕುಟುಂಬದವರೊಡನೆ ಇಲ್ಲಿಗೆ ಬರುತ್ತಾರೆ ಹಾಗೂ ಅರಣ್ಯದೊಳಗೆ ಅತಿ ಸಂತಸದಿಂದ ವಿಶ್ರಮಿಸುತ್ತ ಸಮಯ ಕಳೆಯುತ್ತಾರೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ವೈಜಾಗ್ ನಿಂದ ಇಲ್ಲಿಗೆ ಬರಲು ಸಾಕಷ್ಟು ಅನುಕೂಲತೆಗಳಿವೆ. ಇನ್ನು ವೈಜಾಗ್ ಒಂದು ಪ್ರಮುಖ ಬಂದರು ಪಟ್ಟಣವಾಗಿದ್ದು ದೇಶದ ಮೂಲೆ ಮೂಲೆಗಳಿಗೂ ಸಹ ಉತ್ತಮವಾದ ರೈಲಿನ ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಜೈವಿಕ ಪರಿಸರ ಉದ್ಯಾನದಲ್ಲಿರುವ ಕೂರುವ ಬೆಂಚುಗಳು. ಸುತ್ತಾಡಿದ ತರುವಾಯ ಹಾಯಾಗಿ ಕುಳಿತು ವಿಶ್ರಾಂತಿ ಪಡೆಯಬಹುದಿಲ್ಲಿ.

ಚಿತ್ರಕೃಪೆ: Srichakra Pranav

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ಗೆದ್ದಲು ಹುಳುಗಳ ಹುತ್ತು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ಕೀಟ ಜಗತ್ತಿನ ವಿವಿಧ ಕೀಟಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ಕೀಟ ಜಗತ್ತಿನ ವಿವಿಧ ಕೀಟಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ಕೀಟ ಜಗತ್ತಿನ ವಿವಿಧ ಕೀಟಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ಕೀಟ ಜಗತ್ತಿನ ವಿವಿಧ ಕೀಟಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ವೈವಿಧ್ಯಮಯ ಸಸ್ಯ ರಾಶಿಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು. ವೈವಿಧ್ಯಮಯ ಸಸ್ಯ ರಾಶಿಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು.

ಚಿತ್ರಕೃಪೆ: Adityamadhav83

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ರಾಷ್ಟ್ರೀಯ ಉದ್ಯಾನ:

ಕಂಬಲಕೊಂಡ ಅಭಯಾರಣ್ಯದ ವಿಹಂಗಮ ದೃಶ್ಯಾವಳಿಗಳು.

ಚಿತ್ರಕೃಪೆ: Adityamadhav83

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X