Search
  • Follow NativePlanet
Share
» »ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ತಮಿಳುನಾಡಿನ ತಿರುಚಿರಾಪಳ್ಳಿಯ ಹೊರವಲಯದಲ್ಲಿರುವ ವರೈಯೂರು ಎಂಬಲ್ಲಿರುವ ಪ್ರಖ್ಯಾತ ವೆಕ್ಕಾಳಿ ಅಮ್ಮನ ದೇವಾಲಯ ಸೂರಿಲ್ಲದ ಗರ್ಭಗುಡಿಯಿಂದಾಗಿ ಗಮನಸೆಳೆಯುತ್ತದೆ

By Vijay

ಪಾರ್ವತಿಯ ಅವತಾರದ ಕಾಳಿ ಮಾತೆ ನೆಲೆಸಿರುವ ದೇವಾಲಯವಿದು. ಇದು ನಲೆಸಿರುವ ಊರಿನ ಪ್ರಮುಖ ದೇವಾಲಯ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಶಕ್ತಿ ದೇವಿಯು ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಶಕ್ತಿದೇವಿಯ ಹಾಗೆ ನಿಂತಿಲ್ಲ.

ಬದಲಾಗಿ ಒಂದು ವಿಶೇಷವಾದ ಭಂಗಿಯಲ್ಲಿ ನಿಂತಿದ್ದಾಳೆ. ಅದುವೆ ಬಲಗಾಲಿನ ಕೆಳಗೆ ರಾಕ್ಷಸನನ್ನು ಹಿಡಿದಿರುವ ಭಂಗಿ ಇದಾಗಿದೆ. ಯೋಗಿಕವಾಗಿ ಈ ಮುದ್ರೆಯು ಅಪಾರ ಪ್ರಮಾಣದಲ್ಲಿ ಶಕ್ತಿ ಪ್ರವಹಿಸುವ ಮುದ್ರೆಯಾಗಿದೆ. ಅಂತೆಯೆ ಈ ದೇವಿಯ ನೆಲೆಯಲ್ಲಿ ಅದರಲ್ಲೂ ವಿಶೇಷವಾಗಿ ಗರ್ಭಗೃಹದಲ್ಲಿ ಹೆಚ್ಚಿನ ಶಕ್ತಿ ಪ್ರವಹಿಸುತ್ತಿರುತ್ತದೆ ಎಂಬ ನಂಬಿಕೆಯಿದೆ.

ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ಚಿತ್ರಕೃಪೆ: TRYPPN

ಆ ಕಾರಣದಿಂದಾಗಿಯೆ ಈ ದೇವಿಗೆ ಸೂರಿಲ್ಲ! ಅರ್ಥಾತ್ ಛಾವಣಿಯಿಲ್ಲ. ಏಕೆಂದರೆ ಇಲ್ಲಿ ರೂಪಗೊಳ್ಳುವ ಶಕ್ತಿಯು ಮೇಲ್ಮುಖವಾಗಿ ಪ್ರವಹಿಸುತ್ತದೆ ಹಾಗೂ ಅದು ಪ್ರವಹಿಸುವಾಗ ಏನೆ ಅಡ್ಡವಿದ್ದರೂ ಅದನ್ನು ತಡೆದು ಒಡೆದು ಮುನ್ನುಗ್ಗುತ್ತದೆ ಎಂದು ನಂಬಲಾಗಿದೆ.

ಈ ದೇವಿಯ ದೇವಾಲಯಕ್ಕೆ ಛಾವಣಿ ನಿರ್ಮಿಸಿಯೆ ಇಲ್ಲ ಅಂತೇನೂ ಇಲ್ಲ. ಕೆಲವು ಬಾರಿ ಈ ಪ್ರಯತ್ನಗಳನ್ನು ಮಾಡಲಾಗಿದ್ದು ತದನಂತರ ಆ ಛಾವಣಿಗಳು ಬಿದ್ದು ಹೋಗಿವೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಹಾಗಾಗಿ ಇಂದಿಗೂ ಈ ದೇವಿಯ ಶಕ್ತಿಗೆ ತಡೆಯೊಡ್ಡಲಾರದಂತೆ ಸೂರನ್ನು ನಿರ್ಮಿಸಲಾಗಿಲ್ಲ.

ಈ ದೇವಿಯ ಶಕ್ತಿಗೆ ಸೂರು ಕಟ್ಟಿದರೂ ಮರೆಯಾಗುತ್ತವೆ!

ಚಿತ್ರಕೃಪೆ: TRYPPN

ತಮಿಳುನಾಡಿನ ತಿರುಚಿರಾಪಳ್ಳಿಯ ಹೊರವಲಯದಲ್ಲಿರುವ ವರೈಯೂರು ಎಂಬಲ್ಲಿರುವ ಪ್ರಖ್ಯಾತ ವೆಕ್ಕಾಳಿ ಅಮ್ಮನ ದೇವಾಲಯ ಇದಾಗಿದ್ದು ಪಾರ್ವತಿ ದೇವಿಯ ಅವತಾರವಾಗಿ ವೆಕ್ಕಾಳಿ ಅಮ್ಮನವರನ್ನು ಇಲ್ಲಿ ಪೂಜಿಸಲಾಗುತ್ತದೆ. ವರೈಯೂರು ನಿವಾಸಿಗಳು ವೆಕ್ಕಾಳಿ ಅಮ್ಮನವರನ್ನು ಪ್ರಧಾನ ದೇವಿಯಾಗಿ ಆರಾಧಿಸುತ್ತಾರೆ.

ಈ ದೇವಾಲಯದಲ್ಲಿ ಪ್ರತಿನಿತ್ಯ ಏಳು ಬಾರಿ ವಿವಿಧ ಪೂಜೆ ಪುನಸ್ಕಾರಗಳು ದೇವಿಗೆ ನಡೆಯುತ್ತವೆ. ಅಲ್ಲದೆ ಎಪ್ರಿಲ್-ಮೇ ಸಂದರ್ಭದಲ್ಲಿ ಚಿತ್ತಿರೈ ಉತ್ಸವ, ಪಂಗುಣಿ ಉತ್ಸವ ಹೀಗೆ ಕೆಲವು ಹಬ್ಬಗಳನ್ನು ಇಲ್ಲಿ ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ. ದೇವಾಲಯದ ಸುವರ್ಣ ರಥವು ಅದ್ಭುತವಾಗಿದ್ದು ಉತ್ಸವದ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಇದರಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಕೆಲವು ಅದ್ಭುತ ಕಾಳಿ ದೇವಾಲಯಗಳು!

ಉಚಿತ ಅನ್ನ ಒದಗಿಸುವ ತಮಿಳುನಾಡು ಸರ್ಕಾರದ ಯೋಜನೆಯ ಒಂದು ಭಾಗವಾಗಿ ಈ ದೇವಾಲಯದಲ್ಲಿ ಪ್ರತಿನಿತ್ಯ ಐವತ್ತು ಜನರಿಗೆ ಉಚಿತ ಅನ್ನ ಸಂತರ್ಪಣೆ ನಡೆಯುತ್ತದೆ. ಈ ಕ್ರಮವು ಸಾಕಷ್ಟು ಗಣ್ಯರಿಂದ ಶ್ಲಾಘಿಸಲ್ಪಟ್ಟಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕೆಂಬ ಆಸೆ ಸಕಲ ಭಕ್ತವೃಂದದವರಲ್ಲಿದೆ.

ಮಾಟ-ಮಂತ್ರ ಶಕ್ತಿಗಳಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X