Search
  • Follow NativePlanet
Share
» »ಕಡಲದೊಡನೆ ದಾರಿ ಜೊತೆಯಾಗಿ ಸಾಗಿದಾಗ

ಕಡಲದೊಡನೆ ದಾರಿ ಜೊತೆಯಾಗಿ ಸಾಗಿದಾಗ

By Vijay

ಈಸ್ಟ್ ಕೋಸ್ಟ್ ರೋಡ್ (ಇ ಸಿ ಆರ್) ಅಥವಾ ಪೂರ್ವ ಕರಾವಳಿ ಹೆದ್ದಾರಿಯು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರ ಹಾಗೂ ಅದ್ಭುತವಾಗಿ ಹರಡಿದ ರಾಜ್ಯ ಹೆದ್ದಾರಿಯಾಗಿದೆ. ವಿಶೇಷವೆಂದರೆ ಈ ರಾಜ್ಯ ಹೆದ್ದಾರಿ ಸಂಖ್ಯೆ 49, ಬಹುತೇಕವಾಗಿ ಬಂಗಾಳ ಕೊಲ್ಲಿ ಸಮುದ್ರದ ಸಮಾನಾಂತರವಾಗೆ ಸಾಗುತ್ತದೆ ಹಾಗೂ ನಿಮ್ಮ ಪ್ರಯಾಣವು ಎಂದೂ ಬೇಸರಿಸಿಗೊಳ್ಳದ ಹಾಗೆ ಸುಂದರ ಕಡಲ ದೃಶ್ಯಾವಳಿಗಳನ್ನು ಕರುಣಿಸುತ್ತದೆ.

ಚೆನ್ನೈ ಪಟ್ಟಣದಿಂದ ತೂತುಕುಡಿ ಪಟ್ಟಣದವರೆಗಿರುವ ಈ ರಸ್ತೆಯು ಒಟ್ಟಾರೆ 690 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದೆ. ದಕ್ಷಿಣ ಚೆನ್ನೈ ನಗರದ ಒಂದು ಸ್ಥಳವಾದ ತಿರುವಾನ್ಮಿಯೂರ್ ನಿಂದ ಆರಂಭಗೊಳ್ಳುವ ಈ ರಸ್ತೆಯು ಪಾಂಡಿಚೆರಿ, ಕಾರೈಕಲ್, ರಾಮನಾಥಪುರಂ ಮಾರ್ಗವಾಗಿ ಕೊನೆಯದಾಗಿ ತೂತುಕುಡಿಯನ್ನು ತಲುಪುತ್ತದೆ. ತಮಿಳುನಾಡು ರಸ್ತೆ ಅಭಿವೃದ್ಧಿ ನಿಗಮದಿಂದ ನಿರ್ವಹೈಸಲ್ಪಡುವ ಈ ರಾಜ್ಯ ಹೆದ್ದಾರಿ ಟಾಲ್ ಯುಕ್ತ ರಸ್ತೆಯಾಗಿದೆ.

ವಿಶೇಷವೆಂದರೆ ಈ ರಸ್ತೆಯು ಸಾಕಷ್ಟು ಪ್ರವಾಸಿ ಆಕರ್ಷಣೆಗಳ ಮೂಲಕ ಸಾಗಿ ಹೋಗುವುದು. ವಿಭಿನ್ನ ಬೀಚುಗಳು ಅದಕ್ಕೆ ಹೊಂದಿಕೊಂಡಂತೆ ರಿಸಾರ್ಟುಗಳು ಪ್ರವಾಸಿಗರ ಮನ ಸೆಳೆಯುತ್ತವೆ. ಹಾಗಾದರೆ ಬನ್ನಿ ಏನೇಲ್ಲ ಪ್ರವಾಸಿ ಆಕರ್ಷಣೆಗಳನ್ನು ಈ ರಸ್ತೆಯ ಸುತ್ತಮುತ್ತ ಕಾಣಬಹುದೆಂದು ಈ ಲೇಖನದ ಮೂಲಕ ತಿಳಿಯೋಣ.

ಮರುಂದೀಶ್ವರರ್ ದೇವಾಲಯ:

ಮರುಂದೀಶ್ವರರ್ ದೇವಾಲಯ:

ಚೆನ್ನೈನ ಅಡ್ಯಾರ್ ನಿಂದ ನಾಲ್ಕು ಕಿ.ಮೀ ದೂರವಿರುವ ಈ ದೇವಸ್ಥಾನವು ಈ ರಸ್ತೆಯ ಮೇಲಿರುವ ಒಂದು ಪ್ರಮುಖ ದೇವಾಲಯವಾಗಿದೆ. ಪೂರ್ವ ಕರಾವಳಿ ರಸ್ತೆಯ ಆರಂಭಿಕ ಪ್ರೇಕ್ಷಣೀಯ ಸ್ಥಳವಾಗಿ ಶಿವನಿಗೆ ಮುಡಿಪಾದ ಈ ದೇವಸ್ಥಾನ ಕಂಗೊಳಿಸುತ್ತದೆ.

ಚಿತ್ರಕೃಪೆ: Mohan Krishnan

ಶೋಲಿಂಗನಲ್ಲೂರು ಪ್ರತ್ಯಂಗಿರಾ ದೇವಿ ದೇವಾಲಯ:

ಶೋಲಿಂಗನಲ್ಲೂರು ಪ್ರತ್ಯಂಗಿರಾ ದೇವಿ ದೇವಾಲಯ:

ಇ ಸಿ ಆರ್ ರಸ್ತೆಯ ಜಂಕ್ಷನ್ ಬಳಿ ಈ ಒಂದು ದೇವಾಲಯ ಸ್ಥಿತವಿದೆ. ಶಕ್ತಿಯ ಸಂಕೇತವಾಗಿರುವ ಈ ದೇವಿಯು ರೌದ್ರಾವತಾರದಲ್ಲಿದ್ದು ದೊಡ್ಡ ವಿಗ್ರಹ ಹೊಂದಿದ್ದಾಳೆ. ಸಾಕಷ್ಟು ಜನ ಭಕ್ತಾದಿಗಳು ಈ ದೇವಿಯ ದರುಶನ ಕೋರಿ ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Work2win

ಇಸ್ಕಾನ್ ದೇವಸ್ಥಾನ:

ಇಸ್ಕಾನ್ ದೇವಸ್ಥಾನ:

ಈ ಹೆದ್ದಾರಿಯ ಮೇಲೆ ಪಯಣಿಸುವಾಗ ತಪ್ಪಿಸಿಕೊಳ್ಳಲಾರದಂತಹ ಮತ್ತೊಂದು ಆಕರ್ಷಣೆ ಇಸ್ಕಾನ್ ದೇವಾಲಯ. ಇದು ಶೋಲಿಂಗನಲ್ಲೂರಿನ ಅಕ್ಕರೈನಲ್ಲಿದೆ. 2012 ರ ಎಪ್ರಿಲ್ 26 ರಂದು ಉದ್ಘಾಟನೆಗೊಂಡ ಈ ಬೃಹತ್ ಇಸ್ಕಾನ್ ದೇವಸ್ಥಾನ ತಮಿಳುನಾಡಿನಲ್ಲಿ ಕಂಡುಬರುವ ರಾಧಾ ಕೃಷ್ಣರ ಬಹು ದೊಡ್ಡ ದೇವಾಲಯವಾಗಿದೆ.

ಚಿತ್ರಕೃಪೆ: Hayavadhan

ದಕ್ಷಿಣಚಿತ್ರ:

ದಕ್ಷಿಣಚಿತ್ರ:

ದಕ್ಷಿಣ ಭಾರತೀಯ ಜೀವನ ಶೈಲಿಯ ಹಲವಾರು ಸೂಕ್ಷ್ಮ ಸಂಸ್ಕೃತಿ ಸಂಪ್ರದಾಯ ಆಚರಣೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ನಿರ್ಮಾಣಗೊಂಡ ಕಾಲ್ಪನಿಕ ಸ್ಥಳವೆ ದಕ್ಷಿಣಚಿತ್ರ. ಇದೊಂದು ಸಾಂಪ್ರದಾಯಿಕ ಹಳ್ಳಿಯಗಿದ್ದು ಜೀವನ ಶೈಲಿಯ ನೈಜ ಚಿತ್ರಣವನ್ನು ಯಥಾವತ್ತಾಗಿ ಭೇಟಿ ನೀಡುವವರಿಗೆ ಕರುಣಿಸುತ್ತದೆ.

ಚಿತ್ರಕೃಪೆ: cprogrammer

ಮುಟ್ಟುಕಾಡು ದೋಣಿ ಮನೆ:

ಮುಟ್ಟುಕಾಡು ದೋಣಿ ಮನೆ:

ಅಡ್ಯಾರ್ ನಿಂದ 23 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಆಕರ್ಷಣೆ ಇ ಸಿ ಆರ್ ರಸ್ತೆಯ ಪ್ರವಾಸಿ ಆಕರ್ಷಣೆಯಾಗಿದ್ದು, ತಮಿಳುನಾಡು ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.

ಚಿತ್ರಕೃಪೆ: Simply CVR

ತಮೀಮ್ ಅನ್ಸಾರಿ ದರ್ಗಾ:

ತಮೀಮ್ ಅನ್ಸಾರಿ ದರ್ಗಾ:

ಮೊಹಮ್ಮದ ಪೈಗಂಬರರ ಸಂಬಂಧಿಕನಾಗಿದ್ದ ತಮೀಮ್ ಅನ್ಸಾರಿ ಎಂಬ ಮುಸ್ಲಿಮ್ ಸಂತರ ದರ್ಗಾ ಇದಾಗಿದೆ. ಸಾಕಷ್ಟು ಭಕ್ತಾದಿಗಳು ಈ ದರ್ಗಾಗೆ ಭೇಟಿ ನೀಡಲು ಬರುತ್ತಿರುತ್ತಾರೆ. ಇದು ಕೋವ್ಲಾಂಗ್/ಕೋವಲಂ ನಲ್ಲಿ ಸ್ಥಿತವಿದೆ.

ಚಿತ್ರಕೃಪೆ: VrMUSLIM

ಕೋವ್ಲಾಂಗ್:

ಕೋವ್ಲಾಂಗ್:

ಕೋವಲಂ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಕಡಲ ತೀರದ ಹಳ್ಳಿಯು ಒಂದು ಬೆಸ್ತ ಹಳ್ಳಿಯಾಗಿದ್ದು ಇ ಸಿ ಆರ್ ರಸ್ತೆಯ ಮೇಲಿರುವ ಒಂದು ಆಕರ್ಷಕ ಪ್ರವಾಸಿ ಸ್ಥಳವಾಗಿದೆ. ಇದು ಚೆನ್ನೈನಿಂದ 40 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Kmanoj

ಟೈಗರ್ ಗುಹೆ:

ಟೈಗರ್ ಗುಹೆ:

ಮಾಮಲ್ಲಪುರಂ ಅಥವಾ ಮಹಾಬಲಿಪುರಂನಿಂದ ಐದು ಕಿ.ಮೀ ದೂರದಲ್ಲಿರುವ ಒಂದು ಕೆತ್ತಿದ ಬಂಡೆಯಾಗಿದೆ ಈ ಟೈಗರ್ ಗುಹೆ.

ಚಿತ್ರಕೃಪೆ: The Enforcer

ತಿರುವಿಡಂಡೈ:

ತಿರುವಿಡಂಡೈ:

ವೈಷ್ಣವ ಸಮುದಾಯದವರು ನಡೆದುಕೊಳ್ಳುವ 108 ಪವಿತ್ರ ಸ್ಥಳಗಳ ಪೈಕಿ ಒಂದಾಗಿದೆ ಈ ಸ್ಥಳ. ನಿತ್ಯಕಲ್ಯಾಣ ಪೆರುಮಾಳನ ದೇವಸ್ಥಾನವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Raji.srinivas

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್:

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್:

ಇದೊಂದು ಸರಿಸೃಪಗಳ ಸಂಗ್ರಹಾಲಯವಾಗಿರುವುದು ಅಲ್ಲದೆ ಸಂಶೋಧನಾ ಕೇಂದ್ರವೂ ಸಹ ಆಗಿದೆ. ಇದು ಚೆನ್ನೈ ನಗರದಿಂದ 40 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ. ಅಳಿವಿನಂಚಿನಲ್ಲಿರುವ ಭಾರತದ ಮೂರು ಬಗೆಯ ಮೊಸಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಇದು ಸ್ಥಾಪಿಸಲ್ಪಟ್ಟಿದೆ.

ಚಿತ್ರಕೃಪೆ: Adam63

ಮಹಾಬಲಿಪುರಂ:

ಮಹಾಬಲಿಪುರಂ:

ಈ ರಸ್ತೆಯಲ್ಲಿ ಸಾಗುವಾಗ ಮತ್ತೊಂದು ಪ್ರೇಕ್ಷಣೀಯ ಸ್ಥಳವೆಂದರೆ ಮಹಾಬಲಿಪುರಂ. ಮಾಮ್ಮಲಪುರಂ ಎಂತಲೂ ಕರೆಯಲ್ಪಡುವ ಈ ಸ್ಥಳವು ಸುಂದರವಾದ ಕಡಲ ತೀರವನ್ನು ಹೊಂದಿದ್ದು ಕಡಲ ತಡಿಯ ಬಳಿ ಅದ್ಭುತವಾಗಿ ನಿರ್ಮಿಸಲ್ಪಟ್ಟ ದೇವಾಲಯ ಹಾಗೂ ಇತರೆ ರಚನೆಗಳಿಗಾಗಿ ಹೆಸರುವಾಸಿಯಾಗಿದೆ. [ಮಹಾಬಲಿಪುರಂ ಕುರಿತು ಹೆಚ್ಚಿಗೆ ತಿಳಿಯಿರಿ]

ಚಿತ್ರಕೃಪೆ: Owen Young

ಪಾಂಡಿಚೆರಿ:

ಪಾಂಡಿಚೆರಿ:

ಭಾರತದ ಏಳು ಕೇಂದ್ರಾಡಳಿತ ಪ್ರದೇಶಗಳ [ಕೇಂದ್ರಾಡಳಿತ ಪ್ರದೇಶಗಳ ಕೇಂದ್ರಾಕರ್ಷಣೆಗಳು] ಪೈಕಿ ಒಂದಾಗಿರುವ ಪಾಂಡಿಚೆರಿ ಒಂದು ಅದ್ಭುತ ಪ್ರವಾಸಿ ಸ್ಥಳವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತದೆ. [ಕರೆಯುತಿದೆ ಪಾಂಡಿಚೆರಿ]

ಚಿತ್ರಕೃಪೆ: N D Senthil Ram

ಕಡಲೂರು:

ಕಡಲೂರು:

ತಮಿಳುನಾಡಿನ ಕಡಲೂರು ಜಿಲ್ಲೆಯ ಕಡಲೂರು ಒಂದು ಪುರಸಭೆ ಪಟ್ಟಣವಾಗಿದೆ. ತಿರುವನಂತಿಪುರಂ ಹಾಗೂ ತಿರುಪತಿರಿಪುಳಿಯೂರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ಸಿಲ್ವರ್ ಬೀಚ್ ಎಂಬ ಕಡಲ ತೀರವು ಇಲ್ಲಿಗೆ ಸಾಕಷ್ಟು ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಡಲೂರಿನ ಪಾತಾಳೀಶ್ವರರ್ ದೇವಾಲಯ.

ಚಿತ್ರಕೃಪೆ: Mohan Krishnan

ಆಲಂಪಾರೈ ಕೋಟೆ:

ಆಲಂಪಾರೈ ಕೋಟೆ:

ಆಲಂಪಾರಾ ಎಂತಲೂ ಕರೆಯಲ್ಪಡುವ ಈ ಕೋಟೆಯಿರುವ ಹಳ್ಳಿಯು ಮಹಾಬಲಿಪುರಂ ನಿಂದ ಸುಮಾರು 50 ಕಿ.ಮೀ ಗಳಷ್ಟು ದೂರದಲ್ಲಿದೆ. 17 ನೇಯ ಸ್ಥಮಾನದ ಮುಘಲ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣಗೊಂಡ ಈ ಕೋಟೆಯು ಇಂದು ಐತಿಹಾಸಿಕ ಪ್ರವಾಸಿ ತಾಣವಾಗಿದೆ.

ಚಿತ್ರಕೃಪೆ: Djoemanoj

ಕಾರೈಕಾಲ್:

ಕಾರೈಕಾಲ್:

ಪಾಂಡಿಚೆರಿಯಲ್ಲಿರುವ ಕಾರೈಕಾಲ್ ಒಂದು ಬಂದರು ನಗರಿಯಾಗಿದೆ. ಒಂದಕ್ಕೊಂದು ಅಗಾಧ ಪ್ರಮಾಣದಲ್ಲಿ ದೂರದಲ್ಲಿರುವ ತಮಿಳುನಾಡಿನ ಎರಡು ಬಂದರು ನಗರಗಳಾದ ಚೆನ್ನೈ ಹಾಗೂ ತೂತುಕುಡಿಗಳಿಗೆ ಪರ್ಯಾಯ ಬಂದರು ಪಟ್ಟಣವಾಗಿ ಕಾರೈಕಾಲ್ ಸೇವೆ ಸಲ್ಲಿಸಲಿದೆ ಎಂದು ಅಪೇಕ್ಷಿಸಲಾಗಿದೆ. ಇದು ಚೆನ್ನೈ ಹಾಗೂ ತೂತುಕುಡಿ ಮಧ್ಯದಲ್ಲಿ ನೆಲೆಸಿದೆ.

ಚಿತ್ರಕೃಪೆ: Nissar16

ನಾಗೂರ್:

ನಾಗೂರ್:

ನಾಗಾಪಟ್ಟಿಣಂ ಜಿಲ್ಲೆಯಲ್ಲಿರುವ ನಾಗೂರ್ ಕಾರೈಕಾಲ್ ನಿಂದ ಕೇವಲ 12 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿರುವ ಪ್ರಮುಖ ಆಕರ್ಷಣೆ ಎಂದರೆ ನಾಗೂರ್ ದರ್ಗಾ. ಸುಮಾರು 500 ವರ್ಷಗಳಷ್ಟು ಪುರಾತನವಾಗಿರುವ ಈ ದರ್ಗಾ ಪ್ರತಿ ವರ್ಷ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತದೆ. ಅದು ಕೂಡ ಯಾವುದೇ ರೀತಿಯ ಜಾತಿ ಧಾರ್ಮಗಳ ಭೇದವಿಲ್ಲದೆಯೆ.

ಚಿತ್ರಕೃಪೆ: Jnzl's Public Domain Photos

ವೇದಾರಣ್ಯಂ-ಕೊಡಿಕ್ಕಾರೈ:

ವೇದಾರಣ್ಯಂ-ಕೊಡಿಕ್ಕಾರೈ:

ಇದೊಂದು ಕರಾವಳಿ ಪಟ್ಟಣವಾಗಿದೆ. ಇ ಸಿ ಆರ್ ರಸ್ತೆಯಿಂದ ವೇಲಂಕಣ್ಣಿಯ ಮೂಲಕ ಈ ಸುಂದರವಾದ ಪಟ್ಟಣಕ್ಕೆ ತಲುಪಬಹುದು. ಕೊಡಿಕ್ಕಾರೈ ನಿಸರ್ಗಿಕ ಸಂಪತ್ತುಗಳಿಂದ ಕಂಗೊಳಿಸುತ್ತಿರುವ ಒಂದು ಸುಂದರ ಸ್ಥಳವಾಗಿದೆ.

ಚಿತ್ರಕೃಪೆ: Marcus334

ಮುತುಪೆಟ್ ಲಗೂನು:

ಮುತುಪೆಟ್ ಲಗೂನು:

ಕಾವೇರಿ ನದಿಯ ದಕ್ಷಿಣ ತುದಿಯು ಬಂಗಾಳ ಕೊಲ್ಲಿ ಸಮುದ್ರದ ಬಳಿ ಒಂದು ಖಾರಿ ಅಥವಾ ಲಗೂನು ಆಗಿ ಆಕರ್ಷಿಸುತ್ತದೆ. [ಭಾರತದ ಎರಡು ದೊಡ್ಡ ಲಗೂನುಗಳು]

ಚಿತ್ರಕೃಪೆ: L. Shyamal

ತೂತುಕುಡಿ:

ತೂತುಕುಡಿ:

ಇ ಸಿ ಆರ್ ರಸ್ತೆಯ ಕೊನೆಯ ತಾಣವಾಗಿ ಸಿಗುವ ಸ್ಥಳ ತೂತುಕುಡಿ ಎಂಬ ಬಂದರು ಪಟ್ಟಣ. ಇದು ಟ್ಯೂಟಿಕಾರಿನ್ ಎಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ.

ಚಿತ್ರಕೃಪೆ: Ramr2r

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X