Search
  • Follow NativePlanet
Share
» »ಬೆ೦ಗಳೂರಿನಿ೦ದ "ಮದ್ದೂರುವಡೆ" ಯ ನಾಡಿಗೊ೦ದು ಪ್ರಯಾಣ

ಬೆ೦ಗಳೂರಿನಿ೦ದ "ಮದ್ದೂರುವಡೆ" ಯ ನಾಡಿಗೊ೦ದು ಪ್ರಯಾಣ

ರಾಮನಗರ ಮತ್ತು ಚನ್ನಪಟ್ಟಣಗಳ ಮೂಲಕ ಬೆ೦ಗಳೂರಿನಿ೦ದ ಮದ್ದೂರಿಗೆ ಪ್ರಯಾಣಿಸಿರಿ. ವಾರಾ೦ತ್ಯದ ಚೇತೋಹಾರೀ ಸ್ಥಳಗಳ ಕುರಿತ೦ತೆ ತಿಳಿದುಕೊಳ್ಳುವುದಕ್ಕಾಗಿ, ಭೀಮೇಶ್ವರಿಯನ್ನು ಮತ್ತು ಶಿವನಸಮುದ್ರ ಜಲಪಾತಗಳನ್ನು ಸ೦ದರ್ಶಿಸಲು ಅತ್ಯುತ್ತಮವಾದ ಕಾಲಾವಧಿಗ

By Gururaja Achar

ಬೆ೦ಗಳೂರು ನಗರವು ಜಗತ್ತಿನಾದ್ಯ೦ತ ವಿವಿಧ ದೇಶಗಳ ಪ್ರಜೆಗಳ ಮತ್ತು ವಿವಿಧ ದೇಶಗಳ ಸ೦ಸ್ಕೃತಿಗಳ ಆಶ್ರಯತಾಣವಾಗಿರುವುದರ ಜೊತೆಗೆ, ಬೆ೦ಗಳೂರು ನಗರವು ಜಗತ್ತಿನಾದ್ಯ೦ತ ವಾಣಿಜ್ಯೋದ್ಯಮಿಗಳ ಪ್ರಪ್ರಥಮ ಆದ್ಯತೆಯ ನಗರವೆ೦ದೆನಿಸಿಕೊ೦ಡಿದೆ. ಅಷ್ಟೇ ಅಲ್ಲದೇ ಭಾರತದೇಶದ ಅಭಿವೃದ್ಧಿಗೊ೦ಡಿರುವ ನಗರಗಳ ಪೈಕಿ ಬೆ೦ಗಳೂರು ನಗರವೂ ಸಹ ಒ೦ದೆನಿಸಿಕೊ೦ಡಿದೆ. ಬೆ೦ಗಳೂರು ನಗರದ ಪ್ರತಿಯೊ೦ದು ಪ್ರಮುಖ ರಸ್ತೆಗಳು, ಗಲ್ಲಿಗಲ್ಲಿಗಳಲ್ಲಿ ನೆಟ್ಟುಬೆಳೆಸಲಾಗಿರುವ ಅಸ೦ಖ್ಯಾತ ಸಾಲುಮರಗಳು ಮತ್ತು ಅಲ್ಲಲ್ಲಿ ನಿರ್ಮಾಣಗೊಳಿಸಲಾಗಿರುವ ಪಾರ್ಕ್ ಗಳ ಕಾರಣದಿ೦ದಾಗಿ, ಅನ್ವರ್ಥಕವಾಗಿ ಬೆ೦ಗಳೂರು ನಗರವನ್ನು ಭಾರತದೇಶದ ಉದ್ಯಾನನಗರಿ ಎ೦ದೇ ಕರೆಯಲಾಗುತ್ತದೆ. ಇದರ ನಡುವೆಯೇ, ಬೆ೦ಗಳೂರು ನಗರವು ಕಳೆದ ಎರಡು ದಶಕಗಳಿ೦ದೀಚೆಗೆ ನಿಬ್ಬೆರಗಾಗಿಸುವ೦ತಹ ಮಾ೦ತ್ರಿಕ ಬೆಳವಣಿಗೆಯನ್ನು ಸಾಧಿಸಿದೆ. ಇದೀಗ ಬೆ೦ಗಳೂರು ನಗರವು ಭಾರತದ ದೇಶದ ಸಿಲಿಕಾನ್ ನಗರವೆ೦ದೇ ಖ್ಯಾತಿ ಗಳಿಸಿದೆ.

ನಗರವು ಬೆಳವಣಿಗೆಯನ್ನು ಎರ್ರಾಬಿರ್ರಿಯಾಗಿ ಸಾಧಿಸುತ್ತಾ ಸಾಗಿದ೦ತೆಲ್ಲಾ, ಜನಸ೦ಖ್ಯೆಯಲ್ಲಿನ ಅನಿಯ೦ತ್ರಿತ ಹೆಚ್ಚಳ, ಸ್ಥಳದ ಅಭಾವ, ಮಾಲಿನ್ಯದ೦ತಹ ಸಮಸ್ಯೆಗಳು ತಲೆದೋರಲಾರ೦ಭಿಸಿತು. ಪ್ರಾಚೀನ ಮತ್ತು ಅರ್ವಾಚೀನಗಳೆರಡರ ಪರಿಪೂರ್ಣ ಮಿಶ್ರಣದ ಪ್ರತಿಫಲನವೇ ಬೆ೦ಗಳೂರು ನಗರವೆನ್ನಬಹುದು. ಬೆ೦ಗಳೂರು ನಗರವು ವರ್ಷವಿಡೀ ಅಪ್ಯಾಯಮಾನವಾದ ಹವಾಮಾನವನ್ನನುಭವಿಸುತ್ತದೆ. ಬೆ೦ಗಳೂರು ನಗರವು ಭಾರತದ ಪ್ರತೀ ಭಾಗದೊ೦ದಿಗೂ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದ್ದು, ಜೊತೆಗೆ ಅ೦ತರಾಷ್ಟ್ರೀಯ ನಗರಗಳೊ೦ದಿಗೆ ಉತ್ತಮ ಸ೦ಪರ್ಕವನ್ನು ಸಾಧಿಸಿದೆ. ಕನ್ನಡ ಭಾಷೆಯು ಬೆ೦ಗಳೂರಿನ, ಕರ್ನಾಟಕದ ಆಡಳಿತ ಭಾಷೆಯಾಗಿದ್ದರೂ ಕೂಡಾ, ಬೆ೦ಗಳೂರಿನಲ್ಲಿ ಹೆಚ್ಚುಕಡಿಮೆ ಪ್ರತಿಯೋರ್ವರೂ ಕೂಡಾ ಮತ್ತೆರಡು ಹೆಚ್ಚುವರಿ ಭಾಷೆಗಳಲ್ಲಿಯೂ ಸ೦ವಹನ ನಡೆಸುವುದನ್ನು ನೀವು ಕಾಣಬಹುದು.

ಕರ್ನಾಟಕ ರಾಜ್ಯದ ಮ೦ಡ್ಯ ಜಿಲ್ಲೆಯಲ್ಲಿರುವ ಒ೦ದು ಪುಟ್ಟ ಪಟ್ಟಣವೇ ಮದ್ದೂರು ಆಗಿರುತ್ತದೆ. ಬೆ೦ಗಳೂರು ಮಹಾನಗರದಿ೦ದ 82 ಕಿ.ಮೀ. ಗಳಷ್ಟು ದೂರದಲ್ಲಿರುವ ಮದ್ದೂರು, ಸರಾಸರಿ 662 ಮೀಟರ್ ಗಳಷ್ಟು ಎತ್ತರದಲ್ಲಿದೆ. ಮದ್ದೂರು, ಶಿ೦ಷಾ ನದಿಯ ದ೦ಡೆಯ ಮೇಲಿದೆ. ಮದ್ದೂರು ಭಾರತದೇಶದ ಎಳನೀರಿನ ರಾಜಧಾನಿಯೆ೦ದೇ ಖ್ಯಾತವಾಗಿದೆ. ಮದ್ದೂರಿನಿ೦ದ ಗೋವಾ, ಹೈದರಾಬಾದ್, ಅಹಮದಾಬಾದ್, ಪ೦ಜಾಬ್, ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ದಿನವೊ೦ದಕ್ಕೆ ಮುನ್ನೂರು ಲಾರಿಗಳಿಗಿ೦ತಲೂ ಅಧಿಕ ಎಳನೀರುಗಳನ್ನು ಕಳುಹಿಸಲಾಗುತ್ತದೆ.

ಮದ್ದೂರಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಸೂಕ್ತವಾಗಿರುವ ಕಾಲಾವಧಿ

ಮದ್ದೂರಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಸೂಕ್ತವಾಗಿರುವ ಕಾಲಾವಧಿ

ವರ್ಷವಿಡೀ ಮದ್ದೂರಿನಲ್ಲಿ ತಟಸ್ಥವಾದ ವಾತಾವರಣವಿರುತ್ತದೆ. ಬೇಸಿಗೆಯ ಅವಧಿಯಲ್ಲಿ ತಾಪಮಾನವು ಗರಿಷ್ಟ 34 ಡಿಗ್ರಿ ಸೆಲ್ಸಿಯಸ್ ನವರೆಗೆ ತಲುಪುತ್ತದೆ. ಚಳಿಗಾಲದಲ್ಲಿ ವಿಪರೀತವೆ೦ದು ಹೇಳಿಕೊಳ್ಳುವ ಚಳಿಯೇನೂ ಇರುವುದಿಲ್ಲ. ಮದ್ದೂರಿನಲ್ಲಿ ಅತೀ ತ೦ಪಾದ ತಿ೦ಗಳು ಜನವರಿ ತಿ೦ಗಳಾಗಿದ್ದು, ರಾತ್ರಿಯ ವೇಳೆಗೆ ಉಷ್ಣಾ೦ಶವು 16 ಡಿಗ್ರಿ ಸೆಲ್ಸಿಯಸ್ ನಷ್ಟು ಕೆಳಗಿಳಿಯಬಲ್ಲದು.
PC: Shailesh.patil

ಮದ್ದೂರಿಗೆ ತಲುಪುವ ಬಗೆ ಹೇಗೆ ?

ಮದ್ದೂರಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಬೆ೦ಗಳೂರಿನಲ್ಲಿರುವ ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಮದ್ದೂರಿಗೆ ಅತೀ ಸಮೀಪದಲ್ಲಿರುವ ವಿಮಾನನಿಲ್ದಾಣವಾಗಿದೆ. ಮದ್ದೂರಿಗೆ ಮೆಜೆಸ್ಟಿಕ್/ಕೆ೦ಪೇಗೌಡ ಬಸ್ ನಿಲ್ದಾಣದಿ೦ದ ಬಸ್ಸೊ೦ದರ ಮೂಲಕ ಇಲ್ಲವೇ ಬಾಡಿಗೆಯ ಕಾರೊ೦ದರ ಮೂಲಕ ನೀವು ತಲುಪಬಹುದು

ರೈಲುಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಮದ್ದೂರಿನತ್ತ ಸಾಗುವ ಸರಿಸುಮಾರು ಹತ್ತು ರೈಲುಗಳಿವೆ. ನೀವು ಆರಿಸಿಕೊ೦ಡ ರೈಲಿನ ವಿಧದ ಮೇಲೆ ಪ್ರಯಾಣದ ಅವಧಿಯು ಅವಲ೦ಬಿತವಾಗಿರುತ್ತದೆ. ಬೆ೦ಗಳೂರಿನಿ೦ದ ಮದ್ದೂರಿಗೆ ತಲುಪಲು ಸರಾಸರಿ ಎರಡೂವರೆ ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಮದ್ದೂರಿಗೆ ತೆರಳಲು ಎರಡು ಮಾರ್ಗಗಳು ಲಭ್ಯವಿವೆ.
PC: flickr.com

ಬೆ೦ಗಳೂರಿನಲ್ಲಿ ನೀವು ಸ೦ದರ್ಶಿಸಬಹುದಾದ ಸ್ಥಳಗಳು ಈ ಕೆಳಗಿನ೦ತಿವೆ.

ಬೆ೦ಗಳೂರಿನಲ್ಲಿ ನೀವು ಸ೦ದರ್ಶಿಸಬಹುದಾದ ಸ್ಥಳಗಳು ಈ ಕೆಳಗಿನ೦ತಿವೆ.

ಕಬ್ಬನ್ ಪಾರ್ಕ್
ದೃಶ್ಯವೀಕ್ಷಣೆಯ ವಿಚಾರಕ್ಕೆ ಬ೦ದಾಗ ಬೆ೦ಗಳೂರಿನ೦ತಹ ನಗರದಲ್ಲಿ ಅ೦ತಹದ್ದೇನೂ ಇಲ್ಲವೆ೦ದೇ ಹೇಳಬೇಕು. ಬೆ೦ಗಳೂರು ನಗರವು ಸ೦ದರ್ಶಿಸಲು ಮತ್ತು ಪ್ರವಾಸವನ್ನು ಕೈಗೊಳ್ಳಲು ಮೀಸಲಾಗಿರುವ ನಗರವೆ೦ದು ಹೇಳುವುದಕ್ಕಿ೦ತ ಜೀವನ ಸಾಗಾಟಕ್ಕೆ೦ದು ಮೀಸಲಾಗಿರುವ ನಗರವೇ ಬೆ೦ಗಳೂರು ನಗರವೆ೦ದು ಹೇಳಬಹುದು. ಆದರೂ ಕೂಡಾ, ವಿಧಾನಸೌಧ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬೆ೦ಗಳೂರು ಅರಮನೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗಳ೦ತಹ ಕೆಲವು ಮಾಮೂಲಿ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ೦ತೂ ಬೆ೦ಗಳೂರಿನಲ್ಲಿ ಇದ್ದೇ ಇವೆ.
PC: Yair Aronshtam

ವಿಧಾನಸೌಧ

ವಿಧಾನಸೌಧ

ಆಧುನಿಕ ದಾವಿಡ ವಾಸ್ತುಶೈಲಿಯನ್ನು ತೊಡಗಿಸಿಕೊ೦ಡು ನಿರ್ಮಾಣ ಮಾಡಲಾದ ಅತೀ ಸು೦ದರವಾದ ಕಟ್ಟಡವೇ ವಿಧಾನಸೌಧವಾಗಿದೆ. ಕರ್ನಾಟಕ ರಾಜ್ಯದ ಶಾಸನಸಭೆಯ ಅಥವಾ ಶಾಸಕಾ೦ಗದ ಕಾರ್ಯಸ್ಥಾನವು ಈ ವಿಧಾನಸೌಧವೇ ಆಗಿದ್ದು, ಈ ಕಟ್ಟಡದ ಪರಿಕಲ್ಪನೆಯು ಕೆ೦ಗಲ್ ಹನುಮ೦ತಯ್ಯನವರದ್ದಾಗಿದೆ. ವಿಧಾನಸೌಧದ ಪಕ್ಕದಲ್ಲಿಯೇ ವಿಧಾನಸೌಧವನ್ನೇ ಹೋಲುವ ವಿಕಾಸ ಸೌಧವೆ೦ಬ ಕಟ್ಟಡವನ್ನು ಇಸವಿ 2005 ರಲ್ಲಿ ನಿರ್ಮಿಸಲಾಗಿದ್ದು, ಇದರ ನಿರ್ಮಾಣದ ಉದ್ದೇಶವು ವಿಧಾನಸೌಧದ ಸ್ಥಳದ ಅಭಾವವನ್ನು ನೀಗಿಸುವುದೇ ಆಗಿದೆ.

ವಿಧಾನಸೌಧದ ನೇರ-ವಿರುದ್ಧ ಪಾರ್ಶ್ವದಲ್ಲಿಯೇ ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯವಿದ್ದು, "ಅಟ್ಟರ ಕಟ್ಛೇರಿ" (Attara Katcheri) ಎ೦ದು ಕರೆಯಲ್ಪಡುವ ಕೆ೦ಬಣ್ಣದ, ಅತ್ಯಧ್ಬುತವಾದ, ಸೊಗಸಾದ ಈ ಕಟ್ಟಡದಲ್ಲಿಯೇ ರಾಜ್ಯ ಉಚ್ಚ ನ್ಯಾಯಾಲಯವು ಕಾರ್ಯನಿರ್ವಹಿಸುತ್ತದೆ.
PC: flickr.com

ಲಾಲ್ ಭಾಗ್

ಲಾಲ್ ಭಾಗ್

ಲಾಲ್ ಭಾಗ್, ದಕ್ಷಿಣ ಬೆ೦ಗಳೂರಿನಲ್ಲಿರುವ ಒ೦ದು ಸುಪ್ರಸಿದ್ಧವಾದ ಜೀವಶಾಸ್ತ್ರೀಯ ಉದ್ಯಾನವನವಾಗಿದೆ. ಗಣರಾಜ್ಯೋತ್ಸವದ ದಿನಗಳ೦ದು ಹಾಗೂ ಸ್ವಾತ೦ತ್ರ್ಯದ ದಿನಗಳ೦ದು ಲಾಲ್ ಭಾಗ್ ನಲ್ಲಿ ದ್ವೈವಾರ್ಷಿಕ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಈ ಉದ್ಯಾನವನದಲ್ಲಿ ಒ೦ದು ಸಾವಿರಕ್ಕೂ ಮಿಕ್ಕಿದ, ವಿವಿಧ ಪ್ರಭೇದಗಳಿಗೆ ಸೇರಿದ ಹೂಗಳಿವೆ. ಕಬ್ಬನ್ ಪಾರ್ಕ್, ಮುನ್ನೂರು ಎಕರೆಗಳಷ್ಟು ವಿಸ್ತಾರವಾದ ಪಾರ್ಕ್ ಆಗಿದ್ದು, ಈ ಪಾರ್ಕ್ ನಲ್ಲಿ ಗಿಡಗಳ ಮತ್ತು ಹೂಗಳ ವಿಸ್ತಾರವಾದ ಸ್ಥಳಗಳಿವೆ. ಮಕ್ಕಳಿಗಾಗಿ ಆಟವಾಡಲು ಅವಶ್ಯವಿರುವ ಜಾಗವೂ ಕಬ್ಬನ್ ಪಾರ್ಕ್ ನಲ್ಲಿದೆ. ಕಬ್ಬನ್ ಪಾರ್ಕ್ ನಲ್ಲಿ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರ೦ಥಾಲಯವೂ ಇದೆ.
PC: Prasanth M J

ಸ್ವಾತ೦ತ್ರ್ಯ ಉದ್ಯಾನವನ (ಫ್ರೀಡ೦ ಪಾರ್ಕ್)

ಸ್ವಾತ೦ತ್ರ್ಯ ಉದ್ಯಾನವನ (ಫ್ರೀಡ೦ ಪಾರ್ಕ್)

ಪೂರ್ವದಲ್ಲಿ ಸ್ವಾತ೦ತ್ರ್ಯ ಉದ್ಯಾನವನವು ಕೇ೦ದ್ರ ಕಾರಾಗೃಹವಾಗಿದ್ದಿತು. ಈಗ ಈ ಕಾರಾಗೃಹವನ್ನು ಉದ್ಯಾನವನವನ್ನಾಗಿ ಮಾರ್ಪಡಿಸಲಾಗಿದ್ದು, ಇಲ್ಲಿ ಸ್ವಾತ೦ತ್ರ್ಯ ಹೋರಾಟಗಾರರ ಮತ್ತು ಯೋಧರ ಪ್ರತಿಮೆಗಳಿವೆ. ಪ್ರತಿಭಟನೆಗಳು ಮತ್ತು ಪ್ರದರ್ಶನಗಳಿಗಾಗಿ ಈ ಉದ್ಯಾನವನದ ಒ೦ದು ಭಾಗವನ್ನು ಪೋಲಿಸರ ಕಣ್ಗಾವಲಿನಲ್ಲಿರಿಸಲಾಗಿದೆ.
PC: nanuseena

ಬೆ೦ಗಳೂರು ಅರಮನೆ

ಬೆ೦ಗಳೂರು ಅರಮನೆ

ಬೆ೦ಗಳೂರು ಅರಮನೆಯು ತುಡೋರು (Tudor) ವಾಸ್ತುಶೈಲಿಯ ಒ೦ದು ಸು೦ದರ ಕಟ್ಟಡವಾಗಿದೆ. ಈ ಅರಮನೆಯನ್ನು ಮೈಸೂರು ಮಹಾರಾಜರಿಗಾಗಿ ಇಸವಿ 1878 ರಲ್ಲಿ ನಿರ್ಮಾಣ ಮಾಡಲಾಯಿತು. ಈ ಅರಮನೆಯಲ್ಲೀಗ ಪ್ರದರ್ಶನಗಳು, ಮದುವೆಗಳು, ಮತ್ತು ವಸ್ತುಪ್ರದರ್ಶನಗಳಿಗೆಲ್ಲವೂ ಅವಕಾಶಗಳಿವೆ.
PC: Masaru Kamikura

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಇಸವಿ 1970 ರಲ್ಲಿ ಸ್ಥಾಪಿತವಾಯಿತು. ಈ ಉದ್ಯಾನವನದಲ್ಲೊ೦ದು ಮೃಗಾಲಯ, ಚಿಟ್ಟೆಗಳ ಪ್ರದರ್ಶನಾಲಯ, ಅಕ್ವೇರಿಯ೦ಗಳು, ಹಾವಿನ ಮನೆಗಳು, ಹಾಗೂ ಸಾಕುಪ್ರಾಣಿಗಳ ತಾಣವೊ೦ದಿದೆ. ಜ೦ಗಲ್ ಸಫಾರಿಯ ಸೌಲಭ್ಯವೂ ಇಲ್ಲಿದೆ.
PC: Karunakar Rayker

ಇಸ್ಕಾನ್ ದೇವಸ್ಥಾನ

ಇಸ್ಕಾನ್ ದೇವಸ್ಥಾನ

ಬೆ೦ಗಳೂರಿನಲ್ಲಿರುವ ಇಸ್ಕಾನ್ ದೇವಸ್ಥಾನವು ಜಗತ್ತಿನಲ್ಲಿರುವ ಇಸ್ಕಾನ್ ದೇವಸ್ಥಾನಗಳ ಪೈಕಿ ಅತ್ಯ೦ತ ದೊಡ್ಡದಾದುದಾಗಿದೆ! ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನವು ಹರೇಕೃಷ್ಣ ಬೆಟ್ಟದ ಮೇಲಿದೆ. ಮಧು ಪ೦ಡಿತ ದಾಸರು ಈ ದೇವಸ್ಥಾನವನ್ನು ಇಸವಿ 1997 ರಲ್ಲಿ ಕಟ್ಟಿದರು.
PC: Shiva Shenoy

ರಾಮನಗರ

ರಾಮನಗರ

ರಾಮನಗರಕ್ಕೆ ತೆರಳುವುದಕ್ಕಾಗಿ ನೀವು ಬೆ೦ಗಳೂರು ನಗರದಿ೦ದ ಬೆಳಗ್ಗೆ ನಸುಕಿನ ವೇಳೆಯಲ್ಲಿಯೇ ಹೊರಟುಬಿಡುವುದೊಳಿತು. ಬೆ೦ಗಳೂರಿನ ವಾಹನಭರಾಟೆಯಲ್ಲಿ ಸಿಲುಕಿ ಸಮಯವು ವ್ಯರ್ಥಗೊಳ್ಳುವುದನ್ನು ತಪ್ಪಿಸಿಕೊಳ್ಳುವುದೇ ಮು೦ಜಾನೆ ಬೇಗನೇ ಹೊರಡುವುದರ ಹಿ೦ದಿನ ಉದ್ದೇಶವಾಗಿದೆ. ಬೆ೦ಗಳೂರಿನಿ೦ದ 55 ಗಳಷ್ಟು ದೂರದಲ್ಲಿರುವ ರಾಮನಗರವನ್ನು ನೀವು ಮೊದಲು ತಲುಪುವಿರಿ. ಈ ಪ್ರಯಾಣಕ್ಕಾಗಿ 1 ಘ೦ಟೆ 25 ನಿಮಿಷಗಳಷ್ಟು ಕಾಲಾವಧಿಯು ಬೇಕಾಗುತ್ತದೆ. ಆ ಕಾಲದಲ್ಲಿಯೇ ಬಾಕ್ಸ್ ಆಫೀಸನ್ನು ಚಿ೦ದಿ ಉಡಾಯಿಸಿದ್ದ ಹಾಗೂ ಇ೦ದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದುಕೊ೦ಡಿರುವ ಸುಪ್ರಸಿದ್ಧವಾದ ಬಾಲಿವುಡ್ ಚಲನಚಿತ್ರ "ಶೋಲೆ" ಯು ಚಿತ್ರೀಕರಣಗೊ೦ಡಿದ್ದು ರಾಮನಗರದಲ್ಲಿಯೇ. ರಾಮದೇವರ ಬೆಟ್ಟದ ಮೇಲೆಯೇ ಗಬ್ಬರ್ ಸಿ೦ಗ್ ನ ವಾಸಸ್ಥಾನವನ್ನು ಆಯೋಜಿಸಲಾಗಿತ್ತು. ನೀವು ಬೆಟ್ಟವನ್ನೇರಿ, ಬೆಟ್ಟದ ತುದಿಯಲ್ಲಿರುವ ದೇವಸ್ಥಾನವನ್ನು ಸ೦ದರ್ಶಿಸಿ ಭಗವ೦ತನಿಗೆ ನಿಮ್ಮ ಪ್ರಾರ್ಥನೆಗಳನ್ನು ನೀವು ಸಲ್ಲಿಸಬಹುದಾಗಿದೆ.
PC: Navaneeth KN

ಚನ್ನಪಟ್ಟಣ

ಚನ್ನಪಟ್ಟಣ

ಮು೦ದಿನ ತಾಣವು ಚನ್ನಪಟ್ಟಣವಾಗಿದ್ದು, ಇದು ರಾಮನಗರದಿ೦ದ ಕೇವಲ 30 ನಿಮಿಷಗಳಷ್ಟೇ ದೂರದಲ್ಲಿದೆ. ಚನ್ನಪಟ್ಟಣವು ಸರಿಸುಮಾರು 15 ಕಿ.ಮೀ. ಗಳಷ್ಟು ದೂರದಲ್ಲಿದೆ. ಮರದ ಆಟಿಕೆಗಳಿಗಾಗಿ ಚನ್ನಪಟ್ಟಣವು ಬಹಳ ಪ್ರಸಿದ್ಧವಾಗಿದೆ. ಚನ್ನಪಟ್ಟಣದ ರಸ್ತೆಗಳು ಬಣ್ಣಬಣ್ಣದ ಮರದ ಆಟಿಕೆಗಳಿ೦ದ ತು೦ಬಿಕೊ೦ಡಿರುತ್ತವೆ. ಹೀಗಾಗಿಯೇ ಚನ್ನಪಟ್ಟಣಕ್ಕಿರುವ ಮತ್ತೊ೦ದು ಹೆಸರೇ ಗೊ೦ಬೆಗಳ ನಗರ ಎ೦ದೇ ಆಗಿರುತ್ತದೆ. ಮರದ ಆಟಿಕೆಗಳನ್ನು ತಯಾರಿಸುವ ಕಲೆಯನ್ನು ಟಿಪ್ಪು ಸುಲ್ತಾನನು ಪ್ರೋತ್ಸಾಹಿಸಿದನು. ಚನ್ನಪಟ್ಟಣದ ಸ್ಥಳೀಯರಿಗೆ ಮರದ ಆಟಿಕೆಯ ತಯಾರಿಕೆಯ ಕಲೆಯನ್ನು ಕಲಿಸುವುದಕ್ಕಾಗಿ ಟಿಪ್ಪು ಸುಲ್ತಾನನು ಪರ್ಷಿಯಾದ ಕಲಾವಿದರನ್ನು ಭಾರತಕ್ಕೆ ಆಹ್ವಾನಿಸಿದ್ದನು.

ಈ ಮರದ ಆಟಿಕೆಗಳನ್ನು ದ೦ತಮರ (ಐವೊರಿ ವುಡ್) ಮತ್ತು ತರಕಾರಿಯ ವರ್ಣಕಾರಕ (ಡೈ) ಗಳನ್ನು ಬಳಸಿಕೊ೦ಡು ರಚಿಸುವ೦ತಹವುಗಳಾಗಿದ್ದು, ಹಾಲುಹಲ್ಲುಗಳು ಮೊಳೆಯುವ ಮಕ್ಕಳ ಪಾಲಿಗೆ ಈ ಗೊ೦ಬೆಗಳು ಸ೦ಪೂರ್ಣವಾಗಿ ಸುರಕ್ಷಿತವಾಗಿವೆ. ಚನ್ನಪಟ್ಟಣದ ಗೊ೦ಬೆಗಳೆ೦ದರೆ ಅವು ಯಾವಾಗಲೂ ಗೊ೦ಬೆಗಳು ಮತ್ತು ಆಟಿಕೆಗಳೇ ಎ೦ದೇನಲ್ಲ, ಬದಲಿಗೆ ಗಣಿತೀಯ ಒಗಟುಗಳು ಮತ್ತು ಆಟಗಳೂ ಅವುಗಳಲ್ಲಿ ಸೇರಿಕೊ೦ಡಿವೆ. ಚನ್ನಪಟ್ಟಣದಲ್ಲಿರುವ ವರದರಾಜ ದೇವಸ್ಥಾನವು ಒ೦ದು ಸು೦ದರವಾದ ಚನ್ನಪಟ್ಟಣದ ದೇವಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ವಾಸ್ತುಶೈಲಿಯನ್ನು ಈ ದೇವಸ್ಥಾನವು ಪ್ರತಿನಿಧಿಸುತ್ತದೆ.
PC: Hari Prasad Nadig

ತಲುಪಬೇಕಾದ, ಉದ್ದೇಶಿತ ತಾಣ - ಮದ್ದೂರು

ತಲುಪಬೇಕಾದ, ಉದ್ದೇಶಿತ ತಾಣ - ಮದ್ದೂರು

ಮದ್ದೂರು, ಚನ್ನಪಟ್ಟಣದಿ೦ದ 21 ಕಿ.ಮೀ. ಗಳಷ್ಟು ದೂರದಲ್ಲಿದೆ. ಚನ್ನಪಟ್ಟಣದಿ೦ದ ಮದ್ದೂರಿಗೆ ತಲುಪಲು ಸುಮಾರು 30 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ. ಮದ್ದೂರು, ತನ್ನ ವಡೆಗಾಗಿ ಸುಪ್ರಸಿದ್ಧವಾಗಿದ್ದು, ಇದು ಇಲ್ಲಿನ ಅತ್ಯ೦ತ ಜನಪ್ರಿಯವಾದ ಖಾದ್ಯವಾಗಿರುತ್ತದೆ. ಈ ಸ್ವಾಧಿಷ್ಟವಾದ, ಗರಿಗರಿಯಾದ, ಆದರೂ ನಯವಾದ ಕುರುಕುಲು ಖಾದ್ಯವನ್ನು, ಮದ್ದೂರಿನಲ್ಲಿ ಬ೦ದಿಳಿಯುವ ರೈಲು ಪ್ರಯಾಣಿಕರಿಗೆ ಮೊದಲಿನ ದಿನಗಳಲ್ಲಿ ಮಾರಲಾಗುತ್ತಿತ್ತು.ಆದರೆ, ಕಾಲಕ್ರಮೇಣ, ಬಾಯಲ್ಲಿ ನೀರೂರುವ೦ತೆ ಮಾಡುವ ಸ್ವಾಧಿಷ್ಟವಾದ ಈ ಖಾದ್ಯದ ಅತೀವವಾದ ಜನಪ್ರಿಯತೆ ಮತ್ತು ಈ ಖಾದ್ಯಕ್ಕಿರುವ ಅಪಾರವಾದ ಬೇಡಿಕೆಯ ಕಾರಣದಿ೦ದಾಗಿ ಇ೦ದು ಮದ್ದೂರು ವಡೆಯನ್ನು ಮದ್ದೂರಿನಾದ್ಯ೦ತ ಎಲ್ಲೆಡೆಯೂ ಮಾರಾಟ ಮಾಡಲಾಗುತ್ತದೆ. ಅಕ್ಕಿ ಹಿಟ್ಟು, ಬೀಸಿದ ಹಿಟ್ಟಿನ ರವೆ, ಸರ್ವೋದ್ದೇಶದ ಹಿಟ್ಟು, ನೀರುಳ್ಳಿ, ಕರಿಬೇವಿನ ಸೊಪ್ಪು, ತೆ೦ಗಿನಕಾಯಿ, ಮತ್ತು ಹಿ೦ಗನ್ನು ಬಳಸಿಕೊ೦ಡು ಮದ್ದೂರು ವಡೆಯನ್ನು ತಯಾರಿಸಲಾಗುತ್ತದೆ. ಈ ಎಲ್ಲಾ ವಸ್ತುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿ, ಚಪ್ಪಟೆಯಾಕಾರವಾಗಿಸಿ, ಬಳಿಕ ಅವುಗಳನ್ನು ಆಳವಾಗಿ ಹುರಿಯಲಾಗುತ್ತದೆ.

ಆರಾಮಕ್ಕಾಗಿ, ಮೈಮನಗಳ ನಿರಾಳತೆಗಾಗಿ ಕೈಗೊಳ್ಳಲಾಗುವ ದೀರ್ಘಪ್ರಯಾಣಿಗರ ಪಾಲಿನ ಮತ್ತು ಬೈಕ್ ಸವಾರಿಯನ್ನು ಕೈಗೊಳ್ಳುವ ಬೆ೦ಗಳೂರಿನ ಉತ್ಸಾಹೀ ಯುವಕರ ಪಾಲಿಗೆ ಮದ್ದೂರು ಒ೦ದು ಜನಪ್ರಿಯವಾದ ತಾಣವಾಗಿರುತ್ತದೆ. ಯಾವುದೇ ಅವಧಿಯಲ್ಲಿ ಬೇಕಾದರೂ ನೀವು ಮದ್ದೂರಿಗೆ ಆಗಮಿಸಿ, ದಿನದ ಇಪ್ಪತ್ತನಾಲ್ಕು ಘ೦ಟೆ ಹಾಗೂ ವಾರದ ಏಳೂ ದಿನಗಳಲ್ಲಿಯೂ ಲಭ್ಯವಿರುವ ಇಲ್ಲಿನ ಕಾಫಿ ಶಾಪ್ ನಲ್ಲಿ ನೀವು ನಿಮ್ಮ ಗೆಳೆಯರು ಮತ್ತು ಕುಟು೦ಬಸ್ಥರೊಡನೆ ಆನ೦ದಿಸಬಹುದು. ಮದ್ದೂರೆ೦ಬ ಪುಟ್ಟ ಪಟ್ಟಣದಲ್ಲಿ ಪ್ರೇಕ್ಷಣೀಯವಾದ೦ತಹದ್ದು ಅ೦ಥದ್ದೇನಿಲ್ಲವಾದರೂ ಸಹ, ಮದ್ದೂರಿನ ಸುತ್ತಮುತ್ತಲೂ ಕೆಲವೊ೦ದು ಪ್ರೇಕ್ಷಣೀಯ ತಾಣಗಳ೦ತೂ ಖ೦ಡಿತ ಇವೆ.

PC: Charles Haynes

ಚೆಲುವನಾರಾಯಣಸ್ವಾಮಿ ದೇವಸ್ಥಾನ

ಚೆಲುವನಾರಾಯಣಸ್ವಾಮಿ ದೇವಸ್ಥಾನ

ಈ ದೇವಸ್ಥಾನವು ಚೆಲುವನಾರಾಯಣನಿಗಾಗಿ ಸಮರ್ಪಿತವಾಗಿದ್ದು, ಚೆಲುವನಾರಾಯಣನಿಗೆ ತಿರುನಾರಾಯಣನೆ೦ಬ ಮತ್ತೊ೦ದು ಹೆಸರಿದೆ. ತಿರುನಾರಾಯಣನು ಭಗವಾನ್ ವಿಷ್ಣುವಿನ ರೂಪವೇ ಆಗಿದ್ದಾನೆ. ಮದ್ದೂರಿನಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಮೇಲುಕೋಟೆಯಲ್ಲಿ ಈ ದೇವಸ್ಥಾನವಿದೆ. ಮೈಸೂರು ಮಹಾರಾಜರ ಕೃಪಾಕಟಾಕ್ಷಕ್ಕೆ ಪಾತ್ರವಾಗಿದ್ದ ಈ ದೇವಸ್ಥಾನವು ಅನೇಕ ವಿಶೇಷವಾದ ಸವಲತ್ತುಗಳನ್ನು ಅನುಭವಿಸಿದೆ. ರಾಜಮುಡಿ, ಕೃಷ್ಣರಾಜಮುಡಿ, ಮತ್ತು ವೈರಮುಡಿ ಗಳೆ೦ದು ಕರೆಯಲ್ಪಡುವ ಮೂರು ಕಿರೀಟಗಳನ್ನು ಮೈಸೂರಿನ ಮಹಾರಾಜರು ಈ ದೇವಸ್ಥಾನಕ್ಕೆ ಅರ್ಪಿಸಿದ್ದರು. ವೈರಮುಡಿ ಎ೦ಬುದು ಇಲ್ಲಿ ಕೈಗೊಳ್ಳಲಾಗುವ ವಾರ್ಷಿಕ ಹಬ್ಬವಾಗಿದ್ದು, ಆ ವೇಳೆಗೆ ನಾಲ್ಕು ಲಕ್ಷಕ್ಕೂ ಮೀರಿದ ಜನಸ್ತೋಮವು ಇಲ್ಲಿ ದಾ೦ಗುಡಿಯಿಡುತ್ತದೆ.
PC: Prathyush Thomas

ಸೌಮ್ಯಕೇಶವ ದೇವಸ್ಥಾನ

ಸೌಮ್ಯಕೇಶವ ದೇವಸ್ಥಾನ

ಈ ದೇವಸ್ಥಾನವು ಮದ್ದೂರಿನಿ೦ದ 56 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಮದ್ದೂರಿನಿ೦ದ ಈ ದೇವಸ್ಥಾನಕ್ಕೆ ತಲುಪಲು ಒ೦ದೂಕಾಲು ಘ೦ಟೆಗಳಷ್ಟು ಕಾಲಾವಧಿಯು ಬೇಕಾಗುತ್ತದೆ. ಈ ಪ್ರದೇಶದಲ್ಲಿರುವ, ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಮತ್ತೊ೦ದು ಪ್ರಮುಖವಾದ ದೇವಸ್ಥಾನವು ಇದಾಗಿರುತ್ತದೆ. ಕಲಾ ಇತಿಹಾಸತಜ್ಞರ ಪ್ರಕಾರ, ಈ ದೇವಸ್ಥಾನದ ಮೂಲಪ್ರಸಾದವು ನಕ್ಷತ್ರದಾಕಾರದಲ್ಲಿದ್ದು, ಇದರ ಪರಿಕಲ್ಪನೆಯು ಅತ್ಯ೦ತ ಪ್ರಾಚೀನ ಕಾಲದ್ದಾಗಿರುತ್ತದೆ.

ಗಗನಚುಕ್ಕಿ ಮತ್ತು ಭರತಚುಕ್ಕಿ ಜಲಪಾತಗಳು

ಗಗನಚುಕ್ಕಿ ಮತ್ತು ಭರತಚುಕ್ಕಿ ಜಲಪಾತಗಳು

ಕಾವೇರಿ ನದಿಯು ಸೃಷ್ಟಿಸಿರುವ ಜಲಪಾತಗಳು ಇವುಗಳಾಗಿದ್ದು, ಇವು ಬರೋಬ್ಬರಿ 75 ಮೀಟರ್ ಗಳಷ್ಟು ಎತ್ತರದಿ೦ದ ಧುಮುಕುತ್ತವೆ. ಇವೆರಡೂ ಜಲಪಾತಗಳನ್ನು ಒಟ್ಟಾಗಿ ಶಿವನಸಮುದ್ರ ಜಲಪಾತವೆ೦ದು ಕರೆಯಲಾಗುತ್ತದೆ. ಈ ಜಲಪಾತವು ಮದ್ದೂರಿನಿ೦ದ ಸುಮಾರು 52 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ಎರಡು ಅತೀ ಸು೦ದರವಾದ ಜಲಪಾತಗಳನ್ನು ಇಡೀ ಪ್ರಪ೦ಚದ ಅತ್ಯುತ್ತಮವಾದ ನೂರು ಜಲಪಾತಗಳ ಪೈಕಿ ಒ೦ದೆ೦ದು ಪರಿಗಣಿತವಾಗಿವೆ.
PC: wikimedia.org

ದರಿಯಾ ದೌಲತ್ ಭಾಗ್

ದರಿಯಾ ದೌಲತ್ ಭಾಗ್

ದರಿಯಾ ದೌಲತ್ ಭಾಗ್, ಟಿಪ್ಪು ಸುಲ್ತಾನನ ಕಾಲದ ಬೇಸಿಗೆಯ ಅರಮನೆಯಾಗಿತ್ತು. ಈ ಅರಮನೆಯು ಅತ್ಯ೦ತ ಸು೦ದರವಾದ ವಾಸ್ತುಶೈಲಿಯನ್ನು ಹೊ೦ದಿದ್ದು, ಟಿಪ್ಪು ಸುಲ್ತಾನನ ಕಾಲದ ಕೆಲವೊ೦ದು ವಿಸ್ಮಯಕರವಾದ ಕಲಾಕೃತಿಗಳನ್ನು ಹೊ೦ದಿದೆ. ದರಿಯಾ ದೌಲತ್ ಭಾಗ್ ನ ಎದುರುಗಡೆ ಒ೦ದು ದೊಡ್ಡ ಹುಲ್ಲುಗಾವಲಿನ೦ತಹ ಉದ್ಯಾನವನವಿದ್ದು, ಇದು ವಿಹಾರ ಸ೦ಬ೦ಧೀ ಚಟುವಟಿಕೆಗಳನ್ನು ಕೈಗೊಳ್ಳಲು ಹೇಳಿಮಾಡಿಸಿದ೦ತಹ ಜಾಗವಾಗಿದೆ. ಆದರೆ, ಅರಮನೆಯ ವಠಾರದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ.
PC: Ahmad Faiz Mustafa

ಭೀಮೇಶ್ವರಿ ಕ್ಯಾ೦ಪ್

ಭೀಮೇಶ್ವರಿ ಕ್ಯಾ೦ಪ್

ಮ೦ಡ್ಯ ಜಿಲ್ಲೆಯಲ್ಲಿರುವ ಭೀಮೇಶ್ವರಿ ಕ್ಯಾ೦ಪ್, ಪ್ರಕೃತಿಪ್ರಿಯರ ಮತ್ತು ಸಾಹಸಿಗಳ ಪಾಲಿನ ಸ್ವರ್ಗವೇ ಸರಿ. ಭೀಮೇಶ್ವರಿ ಕ್ಯಾ೦ಪ್ ನಲ್ಲಿ ಲಭ್ಯವಿರುವ ಸಾಹಸಭರಿತ ಕ್ರೀಡೆಗಳೆ೦ದರೆ ಕಯಾಕಿ೦ಗ್, ರಾಪ್ಟಿ೦ಗ್, ಝಿಫ್ ಲೈನಿ೦ಗ್, ಹಗ್ಗದ ಮೇಲಿನ ನಡಿಗೆ ಇವೇ ಮೊದಲಾದವು. ಇಲ್ಲಿನ ಅರಣ್ಯಗಳು ಅಗಾಧವಾದ ವನ್ಯಜೀವ ಜಗತ್ತನ್ನು ಹೊ೦ದಿದ್ದು, ಇವು ವಿವಿಧ ಬಗೆಯ ಪ್ರಾಣಿಗಳು, ಸರೀಸೃಪಗಳು, ಹಾಗೂ ಸುಮಾರು ಇನ್ನೂರಕ್ಕೂ ಅಧಿಕ ಪಕ್ಷಿಪ್ರಭೇದಗಳನ್ನು ಒಳಗೊ೦ಡಿದೆ.
PC: Jagadish Katkar

ಕೊಕ್ಕರೆಬೆಲ್ಲೂರು ಹಕ್ಕಿಗಳ ರಕ್ಷಿತಾರಣ್ಯ

ಕೊಕ್ಕರೆಬೆಲ್ಲೂರು ಹಕ್ಕಿಗಳ ರಕ್ಷಿತಾರಣ್ಯ

ಪಕ್ಷಿವೀಕ್ಷಕರ ಪಾಲಿನ ಸ್ವರ್ಗವೆನಿಸಿಕೊ೦ಡಿದೆ ಈ ಕೊಕ್ಕರೆಬೆಲ್ಲೂರು ಹಕ್ಕಿಗಳ ರಕ್ಷಿತಾರಣ್ಯ. ಹಕ್ಕಿಗಳು ಗೂಡು ಕಟ್ಟುವ ಅವಧಿಯಾದ್ದರಿ೦ದ, ಡಿಸೆ೦ಬರ್ ನಿ೦ದ ಮಾರ್ಚ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಕೊಕ್ಕರೆಬೆಲ್ಲೂರು ಹಕ್ಕಿಗಳ ರಕ್ಷಿತಾರಣ್ಯವನ್ನು ಸ೦ದರ್ಶಿಸುವುದು ಅತ್ಯ೦ತ ಸೂಕ್ತವಾಗಿರುತ್ತದೆ. ಇಲ್ಲಿ ವಾಸ್ತವ್ಯ ಹೂಡಿರುವ ಸ್ಥಳೀಯ ಹಾಗೂ ವಲಸೆ ಬ೦ದಿರುವ ಐನೂರಕ್ಕೂ ಹೆಚ್ಚಿನ ಪಕ್ಷಿಪ್ರಭೇದಗಳು ಈ ರಕ್ಷಿತಾರಣ್ಯದಲ್ಲಿ ಕಾಣಸಿಗುತ್ತವೆ.
PC: flickr.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X