ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ವಜ್ರದ ಮಳೆ ಎಲ್ಲಿ ಬೀಳುತ್ತದೆ ಎಂಬುದು ನಿಮಗೆ ಗೊತ್ತೆ?

Written by:
Updated: Saturday, July 15, 2017, 15:10 [IST]
Share this on your social network:
   Facebook Twitter Google+ Pin it  Comments

ಅಲ್ಲಿ ವಜ್ರಗಳು ದೊರೆಯುತ್ತದೆ ಎಂತೆ. ಆಶ್ಚರ್ಯ ಪಡಬೇಡಿ ಇದು ನಿಜ. ವಜ್ರಗಳೆಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರು ಕೂಡ ವಜ್ರ ಎಂದರೆ ಎದ್ದು ನಿಲ್ಲುತ್ತಾರೆ. ಅವುಗಳು ಒಂದು ಸ್ಥಳದಲ್ಲಿ ದೊರೆಯುತ್ತವೆ ಎಂದರೆ ನಿದ್ರೆ, ಆಹಾರಗಳನ್ನು ಬಿಟ್ಟು ಕೂಡ ವಜ್ರಗಳನ್ನುಪಡೆಯಲು ಪ್ರಯತ್ನಿಸುತ್ತಾರೆ. ಹಾಗೆಯೇ ವಜ್ರಗಳು ನಿಜವಾಗಲು ದೊರೆಯುತ್ತದೆ ಎಂತೆ. ಎಲ್ಲಿ ಎಂದು ಕೇಳುತ್ತಾ ಇದ್ದೀರಾ?

ನಿಮಗೆ ಸಮಯವಿದ್ದರೆ ನೀವು ಕೂಡ ಆ ಸ್ಥಳಕ್ಕೆ ಹೋಗಿ ವಜ್ರದ ಬೇಟೆಯಾಡಿ. ಒಂದು ವಜ್ರ ದೊರಕಿದರೂ ಕೂಡ ನಿಮ್ಮ ಜೀವನ ಸೆಟಲ್ ಆಗುವುದಂತು ಖಂಡಿತ. ಹಲವಾರು ಪ್ರಜೆಗಳು ಪ್ರಸ್ತುತದಲ್ಲೇ ಅಲ್ಲದೇ ಪುರಾತನ ಕಾಲದಿಂದಲೂ ವಜ್ರಗಳ ಭೇಟೆಯಾಡುತ್ತಿದ್ದಾರೆ. ವಜ್ರದ ಅನ್ವೇಷಣೆ ಮಾಡಿ ಅದರಲ್ಲಿ ಜಯಗೊಂಡವರು ಅದೃಷ್ಟವಂತರು ಎಂದು ಭಾವಿಸಲಾಗುತ್ತದೆ.

ಪ್ರಸ್ತುತ ನಾನು ಹೇಳಲು ಬಯಸುತ್ತಿರುವ ಒಂದು ಪ್ರದೇಶದಲ್ಲಿ ವಜ್ರಗಳು ದೊರೆಯುತ್ತವೆ ಎಂತೆ. ಆ ಪ್ರದೇಶ ಯಾವುದು? ಹೇಗೆ ದೊರೆಯುತ್ತದೆ? ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ವಜ್ರದ ಮಳೆ ಎಲ್ಲಿ ಇದೆ?

ಮುಖ್ಯವಾಗಿ ಆ ವಜ್ರ ದೊರೆಯುವ ರಾಜ್ಯ ನಮ್ಮ ಪಕ್ಕದ ಆಂಧ್ರ ಪ್ರದೇಶದಲ್ಲಿ. ಆಂಧ್ರದ ವಿವಿಧ ಪ್ರದೇಶದಲ್ಲಿ ವಜ್ರಗಳು ದೊರೆಯುತ್ತವೆ. ಅವುಗಳೆಂದರೆ ಕೃಷ್ಣ, ಗೋದಾವರಿ ನದಿಗಳ ಮಧ್ಯೆಯಲ್ಲಿ ವಜ್ರಗಳು ಹೆಚ್ಚಾಗಿ ದೊರೆಯುತ್ತವೆ ಎಂತೆ.

ಅನಂತಪುರ, ಕರ್ನೂಲ್, ನಲ್ಕೊಂಡ, ಗುಂಟುರು, ಕೃಷ್ಣ, ಮೆಹೆಬೂಬ್ ನಗರ್, ಕಡಪ ಜಿಲ್ಲೆಗಳಲ್ಲಿ ವಜ್ರಗಳು ಹೆಚ್ಚಾಗಿ ದೊರೆಯುತ್ತವೆ.

 

ವಜ್ರಕ್ಕೆ ಪ್ರಸಿದ್ಧಿಗೊಂಡ ಗ್ರಾಮ?

ಕೃಷ್ಣಾ ನದಿ ಬಲಭಾಗದಲ್ಲಿ ಇರುವ ಕೊಳ್ಳೂರು ಪ್ರದೇಶದಲ್ಲಿ ವಜ್ರಗಳು ಹೆಚ್ಚಾಗಿ ದೊರೆಯುತ್ತವೆ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಇಂಡಿಯಾದಲ್ಲಿಯೇ ಮೊದಲ ಡೈಮಂಡ್ ಸೆಂಟರ್ ಎಂದು ಪ್ರಖ್ಯಾತಿ ಪಡೆದಿರುವ ಸ್ಥಳವಿದು.
16 ನೇ ಶತಮಾನದಿಂದ 19 ನೇ ಶತಮಾನದವರೆಗೆ ವಜ್ರಗಳಿಗೋಸ್ಕರ ಈ ಪ್ರದೇಶದಲ್ಲಿನ ಹಲವಾರು ಪ್ರದೇಶಗಳಲ್ಲಿ ಅಗೆದಿದ್ದರಂತೆ.

ದಾಖಲೆಗಳು ಏನು ಹೇಳುತ್ತಿವೆ?

ಕೊಳ್ಳೂರುನಲ್ಲಿಯೇ ಅಲ್ಲ ಕೃಷ್ಣ ಜಿಲ್ಲೆಯ ಗೋಲ್ಲಪಲ್ಲಿ, ಮಲ್ಲಪಲ್ಲಿ, ರಾಮಳ್ಳಕೋಟ, ಬನಗಾನಪಲ್ಲಿಗಳಲ್ಲಿ ಪುರಾತನ ಕಾಲದಲ್ಲಿ ವಜ್ರಗಳಿಗೆ ಹೆಚ್ಚು ಹುಡುಕಾಡಿದ ಪ್ರದೇಶಗಳಿವು. ಪುರುಷರು, ಮಹಿಳೆಯರು, ಚಿಕ್ಕವರು, ದೊಡ್ಡವರು ಎಂಬ ಯಾವುದೇ ಭೇದವಿಲ್ಲದೇ ಸುಮಾರು 60 ಸಾವಿರ ಮಂದಿ ಈ ಪ್ರದೇಶಗಳಲ್ಲಿ ವಜ್ರಕ್ಕಾಗಿ ಹುಡುಕಾಡಿದರಂತೆ.

ಕೋಹಿನೂರ್ ವಜ್ರ

ಈ ಪ್ರದೇಶವೆಲ್ಲಾ ಅಂದಿಗೆ ಗೋಲ್ಕೊಂಡ ರಾಜ್ಯದ ಭಾಗವಾಗಿ ಇತ್ತು. ಪ್ರಪಂಚ ಪ್ರಸಿದ್ಧಿ ಪಡೆದ ಕೋಹಿನೂರ್ ವಜ್ರ ಕೊಳ್ಳೂರುನಲ್ಲಿ ದೊರೆಯಿತು.

ವಜ್ರವನ್ನು ಗೋಲ್ಕುಂಡ ವಜ್ರಗಳು ಎಂದು ಯಾಕೆ ಕರೆಯುತ್ತಾರೆ?

ಬ್ರಿಟೀಷ್ ಕಾಲದಲ್ಲಿನ ಮಹಾರಾಣಿ ಕಿರೀಟಕ್ಕೆ ಕೋಹಿನೊರು ವಜ್ರವನ್ನು ಅಲಂಕರಿಸಿದರು. ಅಂದಿನಿಂದ ಈ ಪ್ರದೇಶದಲ್ಲಿ ದೊರೆತ ವಜ್ರಗಳನ್ನು ಗೋಲ್ಕುಂಡ ವಜ್ರಗಳು ಎಂದು ಪ್ರಪಂಚ ವ್ಯಾಪ್ತಿ ಪ್ರಖ್ಯಾತಿ ಪಡೆಯಿತು.

ವಿದೇಶಿ ಶಾಸ್ತ್ರಜ್ಞಾರು

ಇಂದಿಗೂ ಆನೇಕ ಮಂದಿ ವಿದೇಶಿ ಶಾಸ್ತ್ರಜ್ಞಾರು ಈ ಪ್ರದೇಶಕ್ಕೆ ಭೇಟಿ ನೀಡಿ ವಜ್ರಗಳ ಅನ್ವೇಷಣೆಗೆ ಇಳಿಯುತ್ತಿದ್ದಾರೆ. ಭೂಮಿಯನ್ನು ಅಗೆಯುವ ಮೂಲಕ ಹಾಗೂ ನದಿ ಗರ್ಭವನ್ನು ಅಗೆದು ಹಾಗೂ ಸಮುದ್ರದ ಆಳಕ್ಕೆ ತೆರಳಿ ವಜ್ರವನ್ನು ಹುಡುಕುತ್ತಿದ್ದಾರೆ. ಇಂತಹ ಅನ್ವೇಷಣೆ ಮಾಡಿ ಮಾಡಿ ಸಾಕಷ್ಟು ಧನವನ್ನು ಹಲವಾರು ಮಂದಿ ಹಾನಿ ಮಾಡಿಕೊಳ್ಳುತ್ತಿದ್ದಾರೆ.

ಎಂತಹ ಸ್ಥಳದಲ್ಲಿ ವಜ್ರಗಳು ದೊರೆಯುತ್ತವೆ?

ಸಾಧಾರಣ ಜನರು ದುಬಾರಿ ವೆಚ್ಚ ಮಾಡಿ ವಜ್ರವನ್ನು ಹುಡುಕುವುದು ಕಷ್ಟವೇ ಆದರೂ ಕೂಡ ವಜ್ರದ ಅನ್ವೇಷಣೆ ಇನ್ನೂ ಮುಂದುವೆರೆಸುತ್ತಾ ಇದ್ದಾರೆ.

ಅನಂತಪೂರ್ ವಜ್ರಕರೂರ್, ಕರ್ನೂಲ್ ಜಿಲ್ಲೆಯ ಪತ್ತಿ ಕೊಂಡ, ಮದ್ದಿಕರ, ತುಗ್ಗಲಿ, ನೆಲ್ಲೂರು ಜಿಲ್ಲೆಯ ತಿಮ್ಮ ಸಮುದ್ರ, ನಲಗೊಂಡ ಜಿಲ್ಲೆಯ ಕೃಷ್ಣ ನದಿ ತೀರದ ಆನೇಕ ಪ್ರದೇಶದಲ್ಲಿ ವಜ್ರಗಳು ದೊರೆಯುತ್ತವೆ ಎಂತೆ.

 

ವಜ್ರವನ್ನು ಹುಡುಕಲು ಉತ್ತಮವಾದ ಕಾಲಾವಧಿ

ಸಾಧಾರನ ಜನರು ಮಳೆ ಬಿದ್ದ ತಕ್ಷಣವೇ ಇಂತಹ ಪ್ರದೇಶಗಳಿಗೆ ತೆರಳಿ ವಜ್ರಕ್ಕಾಗಿ ಅನ್ವೇಷಣೆ ಮಾಡುತ್ತಾರೆ. ವಜ್ರವನ್ನು ಭೇಟಿಯಾಡಲು ಸರಿಯಾದ ಸಮಯವೆಂದರೆ ಅದು ಮಳೆಗಾಲವಾಗಿದೆ. ಮಳೆ ಬಿದ್ದ ಪ್ರತಿಬಾರಿಯು ಭೂಮಿಯ ಒಳಗೆ ಇರುವ ಹಲವಾರು ನೀಕ್ಷೇಪಗಳು, ವಜ್ರಗಳು ಹೊರಗೆ ಬರುತ್ತವೆಯಂತೆ. ಅಂದರೆ ವಜ್ರಗಳು ಮಳೆಗಾಲದಲ್ಲಿ ಮಾತ್ರ ದೊರೆಯುತ್ತವೆ ಎಂದು ಅಲ್ಲ.

ವಜ್ರವನ್ನು ಹೇಗೆ ಹುಡುಕಬೇಕು?

ಯಾವ ಕಾಲದಲ್ಲಿಯಾದರು ವಜ್ರಗಳನ್ನು ಹುಡುಕಬಹುದು. ವಜ್ರ ದೊರೆಯುತ್ತಿರುವ ಪ್ರದೇಶಕ್ಕೆ ಹೋಗಿ ಅಲ್ಲಿರುವ ಮಣ್ಣನ್ನು ಅಗೆದು ಸೂಕ್ಷ್ಮವಾಗಿ ಗಮನಿಸಿ ಕಲ್ಲುಗಳಲ್ಲಿ ವಜ್ರವೇನಾದರೂ ಇದೆಯಾ ಎಂದು ಹುಡುಕಬೇಕು.

ವಜ್ರಗಳನ್ನು ಸ್ವಂತ ಮಾಡಿಕೊಳ್ಳುವುದು ಸುಲಭವೇ?

ಹಾಗೆಯೇ ನದಿಗಳ ತಳ ಭಾಗದಲ್ಲಿ ಇರುವ ಮಣ್ಣಿನಲ್ಲಿರುವ ಕಲ್ಲುಗಳನ್ನು ಜಾಲಿಸಿ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವುಗಳಲ್ಲಿ ವಜ್ರಗಳು ಇರುವ ಸಾಧ್ಯತೆಗಳು ಇರುತ್ತವೆ. ಇದರಿಂದಾಗಿ ವಜ್ರಗಳನ್ನು ಸ್ವಂತ ಮಾಡಿಕೊಳ್ಳಬಹುದಾಗಿದೆ.

ವಿದೇಶಿ ಅನ್ವೇಷಣೆ

ಗುಂಟೂರು ಜಿಲ್ಲೆಯ ಕೊಳ್ಳೂರಿನ ಮಧ್ಯ ಭಾಗದಲ್ಲಿ ಬಂದ ಒಂದು ವಿದೇಶಿ ಅನ್ವೇಷಣಾ ಬೃಂದ ಅಲ್ಲಿರುವ ಕೃಷ್ಣನದಿಯ ಮಣ್ಣನ್ನು ತೆಗೆದು ಹಲವಾರು ಪ್ರಯೋಗಗಳನ್ನು ಮಾಡಿದ್ದರಿಂದ ಒಂದು ವಜ್ರ ದೊರೆಯಿತು. ಇದನ್ನು ಕಂಡ ಸ್ಥಳೀಯರು ಆಶ್ಚರ್ಯಕ್ಕೆ ಗುರಿಯಾದರು.

ಆಧುನಿಕ ಟೆಕ್ನಾಲಜಿ

ಪ್ರಸ್ತುತ ನಾವು ಹೇಳಿಕೊಂಡ ರೀತಿಯಲ್ಲಿ ಆನೇಕ ಜನರು ವಜ್ರಗಳನ್ನು ಸ್ವಂತ ಮಾಡುಕೊಳ್ಳುತ್ತಿರುತ್ತಾರೆ. ಅವರು ಹೆಚ್ಚಾಗಿ ಆಧುನಿಕ ಟೆಕ್ನಾಲಜಿಯನ್ನು ಬಳಸುವುದಿಲ್ಲ. ಆದರೆ ವಜ್ರವನ್ನು ಪರೀಕ್ಷಿಸಲು ಆಧುನಿಕ ಟೆಕ್ನಾಲಜಿಯ ಉಪಯೋಗ ಅಗತ್ಯವಿದೆ.

ಅನುಭವ

ಯಾವುದೇ ಆಧುನಿಕ ಟೆಕ್ನಾಲಜಿಯ ಸಹಾಯವಿಲ್ಲದೆಯೇ ತಮ್ಮ ಅನುಭವಗಳ ಮೂಲಕ ವಜ್ರವನ್ನು ಕಂಡುಹಿಡಿಯುತ್ತಾರೆ. ಹಲವಾರು ವರ್ಷಗಳಿಂದ ಕೆಲವು ಕುಟುಂಬಿಕರಿಗೆ ಅನುಭವದಿಂದಾಗಿ ಅನುಸರಿಸುತ್ತಾ ಬಂದಿದ್ದಾರೆ.

ಸ್ವಂತ

ಅಂತಹವರು ಹಲವಾರು ಮಂದಿ ಸ್ವಂತ ಮಾಡಿಕೊಂಡಿರುವ ಹಲವಾರು ಆಧಾರಗಳಿವೆ. ಯಾವುದೇ ರೀತಿಯಲ್ಲಿ ವಜ್ರಗಳು ಕರುಗುವುದಿಲ್ಲ ಅತ್ಯಂತ ಗಟ್ಟಿಯಾಗಿರುವ ಈ ವಜ್ರಗಳನ್ನು ಸುಲಭವಾಗಿ ಶೇಖರಿಸಬಹುದು ಎಂದು ಹೇಳುತ್ತಾರೆ ಕೆಲವರು.

ಯಾರಿಗೆ ಸಂಪರ್ಕಿಸಬೇಕು?

ಹಲವಾರು ಪದ್ಧತಿಗಳನ್ನು ಅನುಸರಿಸಿ ಎಷ್ಟೊ ಕಷ್ಟ ಪಟ್ಟು ಹುಡುಕಿದ ವಜ್ರಗಳನ್ನು ಯಾರಿಗೆ ಮಾರಾಟ ಮಾಡಬೇಕು? ಎಂಬ ವಿಷಯ ಮೂಡುತ್ತದೆ. ಒಂದು ವೇಳೆ ಅವು ವಜ್ರಗಳೇ ಆದರೆ ಅದರ ಬೆಲೆಯನ್ನು ಕಟ್ಟುವವರು ಯಾರು?

ವಜ್ರಕರೂರ್ ಗ್ರಾಮ

ಹಾಗಾದರೆ ಏಕೆ ಅಲಸ್ಯ. ಅನಂತಪುರ ಜಿಲ್ಲೆಯ ವಜ್ರಕೂರೂರ್ ಗ್ರಾಮಕ್ಕೆ ತೆರಳಿ...ನಿಮ್ಮ ಅದೃಷ್ಟವಶಾತ್ ವಜ್ರ ದೊರೆತರೆ ನಿಮ್ಮ ಜೀವನ ಸುಗಮವಾಗಿ ಬಿಡುತ್ತದೆ.

English summary

Do you know where the diamond rain falls?

There are diamonds available. Do not be surprised this is true. Say that diamonds do not like who they are. From young children to ages, even the diamond stands up. They get in one place, sleeping, and even trying to get diamonds out of the foods. As well as diamonds are really available. Are you listening to where?
Please Wait while comments are loading...