Search
  • Follow NativePlanet
Share
» »ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಭಾರತದ ಅತ್ಯಂತ ದೊಡ್ಡ ಕೋಟೆ ಯಾವುದು ಗೊತ್ತ?

ಕೋಟೆಗಳೆಂದರೆ ಅದೇನೂ ಆನಂದ. ಹಲವು ರಾಜರು ಯುದ್ಧ ಮಾಡಿದ, ವಾಸಿಸಿದ ನೆಲೆಯನ್ನು ಕಂಡಾಗ ಮನಸ್ಸು ಪುಳಕಿತಗೊಳ್ಳದೇ ಇರದು. ಕೋಟೆಯಲ್ಲಿರುವ ರಾಜನ ಕೊಠಡಿ, ರಾಣಿಯ ಕೊಠಡಿ, ಶಸ್ತ್ರಗಳ ಕೊಠಡಿ, ದೇವಾಲಯಗಳು, ವಾಸ್ತು ಶಿಲ್ಪಗಳು, ಫಿರಂಗಿಗಳು ಇನ್ನೂ ಹಲವ

ಕೋಟೆಗಳೆಂದರೆ ಅದೇನೂ ಆನಂದ. ಹಲವು ರಾಜರು ಯುದ್ಧ ಮಾಡಿದ, ವಾಸಿಸಿದ ನೆಲೆಯನ್ನು ಕಂಡಾಗ ಮನಸ್ಸು ಪುಳಕಿತಗೊಳ್ಳದೇ ಇರದು. ಕೋಟೆಯಲ್ಲಿರುವ ರಾಜನ ಕೊಠಡಿ, ರಾಣಿಯ ಕೊಠಡಿ, ಶಸ್ತ್ರಗಳ ಕೊಠಡಿ, ದೇವಾಲಯಗಳು, ವಾಸ್ತು ಶಿಲ್ಪಗಳು, ಫಿರಂಗಿಗಳು ಇನ್ನೂ ಹಲವಾರು.

ಸಾಮಾನ್ಯವಾಗಿ ಕೆಲವು ಕೋಟೆಗಳ ಬಗ್ಗೆ ನಿಮಗೆ ಗೊತ್ತು ಆದರೆ ಭಾರತದ ಅತ್ಯಂತ ದೊಡ್ಡ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು? ಬೃಹತ್ ಗಾತ್ರದ ಹಾಗೂ ಐತಿಹಾಸಿಕ ಸೊಬಗನ್ನು ಹೊಂದಿರುವ ಈ ಕೋಟೆಯು ನಮ್ಮ ಭಾರತದ ಸುಂದರ ಹಾಗೂ ದೊಡ್ಡ ಕೋಟೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಚಿತ್ತೋರ್ ಕೋಟೆ ಅಥವಾ ಚಿತ್ತೋರಗಢ ಭಾರತದ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇದು ವಿಶ್ವ ಪಂರಂಪರೆಯ ಪಟ್ಟಿಗೆ ಸೇರ್ಪಡೆಯಾಗಿದೆ. ರಾಜಸ್ಥಾನದ ಉತ್ತರ ದಿಕ್ಕಿಗೆ ಈ ಕೋಟೆಯನ್ನು ಕಾಣಬಹುದಾಗಿದೆ. ಅಜ್‍ಮಿರಾದಿಂದ ಸುಮಾರು 233 ಕಿ,ಮೀ ದೂರದಲ್ಲಿದೆ.

ಪ್ರಸ್ತುತ ಲೇಖನದಲ್ಲಿ ಭಾರತದ ಅತ್ಯಂತ ದೊಡ್ಡದಾದ ಕೋಟೆಯ ಬಗ್ಗೆ ಮಾಹಿತಿ ತಿಳಿಯೋಣ.

ಚಿತ್ತೋರ್ ಕೋಟೆ

ಚಿತ್ತೋರ್ ಕೋಟೆ

ಈ ಸುಂದರವಾದ ಕೋಟೆಯನ್ನು ಸಮುದ್ರ ಮಟ್ಟದಿಂದ ಸುಮಾರು 180 ಮೀಟರ್ ಎತ್ತರ ಹಾಗೂ ಸುಮಾರು 691.9 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಕೋಟೆಯ ಅವರಣದಲ್ಲಿ ಹಲವಾರು ಐತಿಹಾಸಿಕ ಅರಮನೆಗಳು, ಸುಂದರವಾದ ದ್ವಾರಗಳು, ದೇವಾಲಯಗಳು ಮತ್ತು 2 ಪ್ರಮುಖ ಸ್ಮರಣಾರ್ಥ ಗೋಪುರಗಳನ್ನು ಹೊಂದಿದೆ.


PC:WIKI

ಸಾಮ್ರಾಜ್ಯ

ಸಾಮ್ರಾಜ್ಯ

ಸುಮಾರು 7 ನೇ ಶತಮಾನದಲ್ಲಿ ಈ ಕೋಟೆಯನ್ನು ಮೇವಾರ್ ಸಾಮ್ರಾಜ್ಯಕಾರರು ಆಡಳಿತ ನಡೆಸಿದ್ದರು. ಈ ಕೋಟೆಗೆ ಮುಸ್ಲಿಂ ಆಡಳಿತಗಾರರಿಂದ ಮೂರು ಬಾರಿ ದಾಳಿ ಮಾಡಲಾಯಿತು. 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ರಾಣ ರತ್ನ ಸಿಂಗ್ ನನ್ನು ಸೋಲಿಸಿದನು. 1535 ರಲ್ಲಿ ಬಹದ್ದೂರ್ ಷಾ ಗುಜರಾತ್ ಸುಲ್ತಾನ್ ಚಿಕ್ರಮ್ಜೀತ್ ಸಿಂಗ್‍ನನ್ನು ಸೋಲಿಸಿದನು. ಇನ್ನೂ ಹಲವಾರು ರಾಜರು ಈ ಕೋಟೆಗಾಗಿ ಯುದ್ಧವನ್ನು ಮಾಡಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ.


PC: Sujay25

ವಿಶ್ವ ಪರಂಪರೆ

ವಿಶ್ವ ಪರಂಪರೆ

2013ರಲ್ಲಿ, ವಿಶ್ವ ಪರಂಪರೆ ಸಮಿತಿಯ 37 ನೇ ಅಧಿವೇಶನದಲ್ಲಿ, ನೋಮ್‍ವೆನ್, ಕಾಂಬೋಡಿಯಾ, ಚಿತ್ತೋರಗಢ ರಾಜಸ್ಥಾನದ 5 ಇತರ ಕೋಟೆಗಳನ್ನು ಒಳಗೊಂಡಂತೆ, ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಯಿತು.


PC:Milo & Silvia

ಅಕ್ಬರ್

ಅಕ್ಬರ್

ಮೊಗಲ್ ಚಕ್ರವರ್ತಿ ಅಕ್ಬರ್ ಈ ಕೋಟೆಗೆ ಮೇಲೆ ದಾಳಿ ಮಾಡಿದ್ದನು. ಆದರೆ ಮೇವಾರದ 84 ಕೋಟೆಗಳಲ್ಲಿ ಒಂದನ್ನು ಮಾತ್ರ ಆಕ್ರಮಿಸಿದನು.


PC:Sougata Bhar

ದ್ವಾರ

ದ್ವಾರ

ಈ ಕೋಟೆಗೆ ಒಟ್ಟು ಏಳು ದ್ವಾರಗಳನ್ನು ಹೊಂದಿದೆ. ಇದನ್ನು ಗೇಟ್ ಪೋಲ್ ಎಂದು ಸಹ ಕರೆಯಲಾಗುತ್ತದೆ. ಅವುಗಳೆಂದರೆ ಪಾದನ್ ಪೋಲ್, ಭೈರಾನ್ ಪೋಲ್, ಹನುಮಾನ್ ಪೋಲ್, ಗಣೇಶ ಪೋಲ್, ಜೊದ್ಲಾ ಪೋಲ್, ಲಕ್ಷ್ಮಣ್ ಪೋಲ್ ಮತ್ತು ರಾಮ್ ಪೋಲ್ ಎಂಬ ಮುಖ್ಯ 7 ಗೇಟ್‍ಗಳನ್ನು ಇಲ್ಲಿ ಕಾಣಬಹುದಾಗಿದೆ.


PC: ramnath

ಸುರಕ್ಷಿತ ಕೋಟೆ

ಸುರಕ್ಷಿತ ಕೋಟೆ

ಸುರಕ್ಷಿತದ ದೃಷ್ಟಿಯಿಂದ ಕೋಟೆಯ ಎಲ್ಲಾ ದ್ವಾರಗಳನ್ನು ಬೃಹತ್ ಕಲ್ಲಿನ ರಚನೆಗಳಾಗಿ ನಿರ್ಮಿಸಲಾಗಿದೆ. ಇವು ಸೈನಿಕರ ರಕ್ಷಣೆಗಾಗಿ ಸುರಕ್ಷಿತವಾದ ಕೋಟೆಯಾಗಿದೆ. ಅಂಕು ಡೊಂಕಾದ ಕಮಾನುಗಳೊಂದಿಗೆ ಬಾಗಿಲುಗಳನ್ನು ಭದ್ರಪಡಿಸಲಾಗಿದೆ. ಕೋಟೆಯ ಒಳ ಭಾಗದಲ್ಲಿ ಅರಮನೆ ಹಾಗೂ ಕೋಟೆಗಳನ್ನು ಕಾಣಬಹುದಾಗಿದೆ.


PC:lensnmatter

ವಿಜಯಸ್ತಂಭ

ವಿಜಯಸ್ತಂಭ

ಚಿತ್ತೋರಿನ ಚಿಹ್ನೆ ಮತ್ತು ವಿಜಯೋತ್ಸವದ ವಿಶೇಷವಾದ ದಪ್ಪ ಅಭಿವ್ಯಕ್ತಿ ಎಂದು ಕರೆಯಲ್ಪಡುವ ವಿಜಯ್ ಸ್ತಂಭ ಅಥವಾ ಜೈನ ಸ್ತಂಭವನ್ನು 1458 ಹಾಗೂ 1468 ಅಸು ಪಾಸಿನಲ್ಲಿ ಸ್ಥಾಪಿಸಲಾಗಿದೆ. ಈ ವಿಜಯಸ್ತಂಭವನ್ನು ಮಹಮದ್ ಷಾ ಐ ಖಿಲ್ಜಿಯವರ ನೆನಪಿಗಾಗಿ ರಾಣಾ ಕುಂಭ ನಿರ್ಮಿಸಿದ ಸ್ತಂಭವಾಗಿದೆ. ಈ ಸ್ತಂಭ ಕೋಟೆಯ ಮೆರಗು.


PC:Shakti

ಕೀರ್ತಿ ಸ್ತಂಭ

ಕೀರ್ತಿ ಸ್ತಂಭ

ಕೀರ್ತಿಸ್ತಂಭವು 22 ಅಡಿ ಎತ್ತರವಿರುವ ಗೋಪುರವಾಗಿದೆ. ಬಘರ್ವಾಲ್ ಎಂಬ ಜೈನ ವ್ಯಾಪಾರಿ ಮೊದಲ ಜೈನ ತೀರ್ಥಂಕರನ ನೆನೆಪಿಗಾಗಿ ನಿರ್ಮಿಸಿದ. ಗೋಪುರದ ಕೆಳಭಾಗದಲ್ಲಿ ಜೈನ ದೇವಾಲಯದ ವಿವಿಧ ತೀರ್ಥಂಕರರ ಚಿತ್ರಣಗಳನ್ನು ರಚಿಸಲಾಗಿದೆ. ಅವುಗಳು ವಿಶೇಷವಾದ ಗೂಡುಗಳಲ್ಲಿ ಕಾಣಬಹುದಾಗಿದೆ. ಈ ಸ್ಮಾರಕಗಳೆಲ್ಲವು ದಿಗಂಬರರ ಸ್ಮಾರಕಗಳಾಗಿವೆ.

PC:Findan

ರಾಣಾ ಕುಂಭ ಅರಮನೆ

ರಾಣಾ ಕುಂಭ ಅರಮನೆ

ವಿಜಯ ಸ್ತಂಭದ ಪ್ರವೇಶ ದ್ವಾರದಲ್ಲಿ ರಾಣಾ ಕುಂಭ ಅರಮನೆ ಇದೆ. ಈ ಅರಮನೆ ಅತ್ಯಂತ ಹಳೆಯದಾದ ಸ್ಮಾರಕವಾಗಿದೆ. ಈ ಅರಮನೆಯಲ್ಲಿ ಆನೆ, ಕುದುರೆಯ ಅಶ್ವಶಾಲೆಗಳು ಮತ್ತು ಶಿವನ ದೇವಾಲಯವಿದೆ. ಇಲ್ಲಿ ಸಿಂಗ್ ಚೌರಿ ದೇವಸ್ಥಾನ, ಪುರಾತತ್ವ ಕಚೇರಿ ಮತ್ತು ಮ್ಯೂಸಿಯಂ ಕೂಡ ಕಾಣಬಹುದಾಗಿದೆ.

PC:Visaran

ರಾಣಿ ಪದ್ಮಿನಿ ಅರಮನೆ

ರಾಣಿ ಪದ್ಮಿನಿ ಅರಮನೆ

ರಾಣಿ ಪದ್ಮಿನಿಯ ಅರಮನೆಯು ಬಿಳಿ ಕಟ್ಟಡ ಮತ್ತು ಮೂರು ಅಂತಸ್ತಿನ ಕಟ್ಟಡವಾಗಿದೆ. ಈ ಅರಮನೆಯನ್ನು 19 ನೇ ಶತಮಾನದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಇಲ್ಲಿ ನೀರಿನ ಕಂದಕವು ಅರಮನೆಯನ್ನು ಸುತ್ತುವರೆದಿದೆ.


PC:Sanyam Bahga

ಇತರ ದೇವಾಲಯಗಳು

ಇತರ ದೇವಾಲಯಗಳು

ಈ ಸುಂದರವಾದ ಕೋಟೆಯಲ್ಲಿ ಮೀರಾ ಬಾಯಿಯ ದೇವಾಲಯ, ಕಳೀಕಾ ಮಾತಾ ದೇವಾಲಯ, ಸೂರ್ಯ ದೇವಾಲಯ, ತುಳಜಾ ಭಾವನಿ ದೇವತೆಯ ದೇವಾಲಯ ಇನ್ನೂ ಹಲವಾರು ಈ ಕೋಟೆಯಲ್ಲಿ ಕಾಣಬಹುದಾಗಿದೆ.


PC:Greg Willis

ಪ್ರವೇಶ ಸಮಯ

ಪ್ರವೇಶ ಸಮಯ

ಈ ಸುಂದರವಾದ ಕೋಟೆಗೆ ಭೇಟಿ ನೀಡಲು ಪ್ರವಾಸಿಗರ ಪ್ರವೇಶ ಸಮಯವೆಂದರೆ ಬೆಳಗ್ಗೆ 9:45 ರಿಂದ ಸಂಜೆ 6:30 ರವರೆಗೆ.


PC:Sujay25

ಸುಂದರವಾದ ಪರಿಸರ

ಸುಂದರವಾದ ಪರಿಸರ

ಈ ಸುಂದರವಾದ ಕೋಟೆಯಲ್ಲಿ ಹಲವಾರು ನೀರಿನ ಕೊಳವಿದೆ. ಇಲ್ಲಿ ಮಳೆಯ ನೀರು ಈ ಕೋಟೆಯಲ್ಲಿ ಶೇಖರಣೆಯಾಗಿ ಕೊಳಗಳಾಗಿ ಮಾರ್ಪಾಟಾಗಿದೆ. ಇಲ್ಲಿ ಹಲವಾರು ಸರೋವರಗಳು, ಕೊಳಗಳನ್ನು ಕಾಣಬಹುದಾಗಿದೆ.


PC:Sujay25

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಈ ಕೋಟೆಗೆ ಅತ್ಯಂತ ಸಮೀಪವಾದ ರೈಲ್ವೆ ಮಾರ್ಗವೆಂದರೆ ಅದು ರಾಜಸ್ಥಾನದ ಚಿತ್ತೋರಗಢನ ನಿಮ್ಬಹೇರಾ ರೈಲ್ವೆ ನಿಲ್ದಾಣ.


PC:Krutikaa

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X