Search
  • Follow NativePlanet
Share
» »ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಇಲ್ಲಿ ಮದುವೆಯಾದ ಮರುದಿನವೇ ಸಾವಿರರು ಮಹಿಳೆಯರು ವಿಧವೆಯಾಗುವ ಬಗ್ಗೆ ನಿಮಗೆ ಗೊತ್ತೆ?

ಆದರೆ ಇಲ್ಲೊಂದು ವಿಚಿತ್ರವಿದೆ. ಅದೆನೆಂದರೆ ಇಲ್ಲಿ ಮದುವೆಯಾದ ಮರುದಿನವೇ ವಿಧವೆಯರಾಗುತ್ತಾರೆ. ಆ ವಿಧವೆಯಾಗುವವರು ಯಾರು ಗೊತ್ತ? ಮಂಗಳ ಮುಖಿಯರು. ಆಶ್ಚರ್ಯ ಪಡಬೇಡಿ ಇದು ನಿಜ. ಈ ಆಶ್ಚರ್ಯಕರವಾದ ಘಟನೆ ನಡೆಯುವುದು ತಮಿಳು ನಾಡು ರಾಜ್ಯದಲ್ಲಿ. ಇಲ

ಮದುವೆಯೆಂದರೆ ಎರಡು ಜೀವಗಳ ನಡುವೆ ಬೆಸೆಯುವ ಸಂಬಂಧ. ಈ ಸಂಬಂಧ ಭದ್ರವಾಗಿ ನೆಲೆಯಾಗಿರಬೇಕೆಂದು ಹಲವಾರು ಪತ್ನಿಯರು ದೇವರಲ್ಲಿ ಪ್ರಾರ್ಥಿಸುವುದುಂಟು. ಮದುವೆಯಾದ ಒಂದೇ ದಿನದಲ್ಲಿ ಪತಿಯು ಮರಣಿಸಿದರೆ ಆಗುವ ದುಃಖ ಮುಗಿಲಿಗೆ ಮುಟ್ಟುವಂತಹದು. ಅದೆಷ್ಟೊ ಮಹಿಳೆಯರು ಸುಮಂಗಳಿಯಾಗಿ ಮರಣ ಹೊಂದಬೇಕು ಎಂದು ಪೂಜೆಗಳನ್ನು ಮಾಡುತ್ತಾರೆ.

ಆದರೆ ಇಲ್ಲೊಂದು ವಿಚಿತ್ರವಿದೆ. ಅದೆನೆಂದರೆ ಇಲ್ಲಿ ಮದುವೆಯಾದ ಮರುದಿನವೇ ವಿಧವೆಯರಾಗುತ್ತಾರೆ. ಆ ವಿಧವೆಯಾಗುವವರು ಯಾರು ಗೊತ್ತ? ಮಂಗಳ ಮುಖಿಯರು. ಆಶ್ಚರ್ಯ ಪಡಬೇಡಿ ಇದು ನಿಜ. ಈ ಆಶ್ಚರ್ಯಕರವಾದ ಘಟನೆ ನಡೆಯುವುದು ತಮಿಳು ನಾಡು ರಾಜ್ಯದಲ್ಲಿ. ಇಲ್ಲಿನ ಒಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಕೂತಾಂಡವರ್ ದೇವಾಲಯದ ಉತ್ಸವದಲ್ಲಿ ಮಂಗಳ ಮುಖಿಯರು ವಿಧವೆಯಾಗುತ್ತಾರೆ.

ಹೀಗೆ ಮದುವೆಯಾಗುವ ಮರು ದಿನವೇ ವಿಧವೆಯವರಾಗಿ ಆಳುವುದೇಕೆ? ಎಂಬ ಹಲವಾರು ಪ್ರಶ್ನೆಗಳಿಗೆ ಈ ಲೇಖನದ ಮೂಲಕ ಉತ್ತರ ತಿಳಿಯಿರಿ.

ಎಲ್ಲಿದೆ?

ಎಲ್ಲಿದೆ?

ಈ ಆಶ್ಚರ್ಯಕರವಾದ ದೇವಾಲಯವಿರುವುದು ತಮಿಳುನಾಡು ರಾಜ್ಯದ ವಿಲ್ಲಪುರಂ ಜಿಲ್ಲೆಯ ಉಲುಂದೂರ್ ಪಟ್ಟಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ.

ಮಂಗಳ ಮುಖಿಯರ ದೇವಾಲಯ

ಮಂಗಳ ಮುಖಿಯರ ದೇವಾಲಯ

ಈ ವಿಶೇಷ ಮಂಗಳ ಮುಖಿಯರ ದೇವಾಲಯದ ಹೆಸರು ಕೂತಾಂಡವರ್ ದೇವಾಲಯ.

ದೇವಾಲಯದ ವಿಶೇಷ

ದೇವಾಲಯದ ವಿಶೇಷ

ಈ ದೇವಾಲಯದಲ್ಲಿ ಹೆಚ್ಚಾಗಿ ಮಂಗಳ ಮುಖಿಯರ ದೇವಾಲಯವೆಂದೇ ಖ್ಯಾತಿ ಪಡೆದಿರುವ ದೇವಾಲಯ ಇದಾಗಿದೆ. ಕೇವಲ ಮಂಗಳ ಮುಖಿಯರೇ ಅಲ್ಲದೇ ಇನ್ನು ಇತರ ಜನರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಉತ್ಸವ

ಉತ್ಸವ

ಇಲ್ಲಿ 18 ದಿನಗಳ ಕಾಲ ವೈಭವೋಪೇತವಾಗಿ ಉತ್ಸವವನ್ನು ಆಚರಿಸಲಾಗುತ್ತದೆ. ಒಂದೊಂದು ದಿನವು ಒಂದೊಂದು ಬಗೆಯ ಕಾರ್ಯಕ್ರಮಗಳಿರುತ್ತವೆ.

ಭಕ್ತರು

ಭಕ್ತರು

ಈ ವಿಶೇಷ ದೇವಾಲಯಕ್ಕೆ ದೇಶ, ವಿದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಸಾವಿರಾರು ಮಂಗಳ ಮುಖಿಯರು ಈ ದೇವಾಲಯದ ಉತ್ಸವಕ್ಕೆ ಪಾಲ್ಗೋಳ್ಳುತ್ತಾರೆ.

ಪತಿ

ಪತಿ

ಮಂಗಳ ಮುಖಿಯರ ಪತಿ ಯಾರು ಗೊತ್ತ? ಕೂತಾಂಡವರ್ ದೇವಾಲಯದಲ್ಲಿನ ದೇವತಾ ಮೂರ್ತಿ ಕೂತಾಂಡವರ್.

ಮೊದಲ ದಿನ

ಮೊದಲ ದಿನ

ಇಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಅವುಗಳಲ್ಲಿ ಬ್ಯೂಟಿ ಕಾನಟೆಸ್ಟ್ ಮತ್ತು ಪ್ರತಿಭಾ ಕಾರ್ಯಕ್ರಮ ಕೂಡ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಶೃಗಾಂರಗೊಂಡ ವಧುವಿನಂತೆ ಸಿಂಗಾರ ಮಾಡಿಕೊಂಡು ಕ್ಯಾಟ್ ವಾಕ್ ಮಾಡುತ್ತಾರೆ ಮಂಗಳ ಮುಖಿಯರು.

ಕೂತಾಂಡವರ್ ಉತ್ಸವ

ಕೂತಾಂಡವರ್ ಉತ್ಸವ

ಕೂತಾಂಡವರ್‍ನ ದೇವಾಲಯದಲ್ಲಿ 17 ನೇ ದಿನದಂದೂ ಭರ್ಜರಿಯಾಗಿ ಉತ್ಸವವನ್ನು ಆಚರಿಸುತ್ತಾರೆ. ಅಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಆ ಹಬ್ಬ ನೋಡುವುದೇ ಒಂದು ಅದ್ಭುತವಾಗಿರುತ್ತದೆ.

ವಧು

ವಧು

ಮಂಗಳ ಮುಖಿಯರು ಈ ಎಲ್ಲಾ ಕಾರ್ಯಕ್ರಮದ ನಂತರ 17 ನೇ ದಿನದಂದು ಶೃಗಾರಗೊಂಡ ವಧುವಿನಂತೆ ಅಲಂಕಾರ ಮಾಡಿಕೊಳ್ಳುತ್ತಾರೆ.

ಮದುವೆ

ಮದುವೆ

ಕೂತಾಂಡವರ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ಮಂಗಳಮುಖಿಯರಿಗೆ ಗಂಡ ಇಲ್ಲದೇ ಇರುವುದರಿಂದ ಕೂತಾಂಡವರ್ ದೈವವೇ ತನ್ನ ಗಂಡ ಎಂದು ಪೂಜಾರಿಗಳ ಕೈಯಲ್ಲಿ ತಾಳಿ ಕಟ್ಟಿಕೊಂಡು ಮದುವೆಯನ್ನು ಮಾಡಿಕೊಳ್ಳುತ್ತಾರೆ.

ಕೊನೆಯ ದಿನ

ಕೊನೆಯ ದಿನ

ಕೊನೆಯ ದಿನದಂದು ಕಾರ್ ಹಬ್ಬ ಎಂದು ಇಲ್ಲಿ ಆಚರಿಸಲಾಗುತ್ತದೆ. ಆ ಹಬ್ಬದೊಂದು ತಮ್ಮ ಪತಿ ಎಂದು ಭಾವಿಸಿದ್ದ ಕೂತಾಂಡವರ್ ಮರಣ ಹೊಂದಿದ ಎಂದು ಆಳುತ್ತಾರೆ.

ವಿಧವೆ

ವಿಧವೆ

ಮಂಗಳ ಮುಖಿಗಳು ವಿಧವೆಯ ವೇಶದಲ್ಲಿ ಅಂದರೆ ಬಿಳಿ ಸೀರೆಗಳು ಧರಿಸಿ ದೇವಾಲಯದ ಪ್ರಾಂಗಣದಲ್ಲಿ ಬಂದು ಸೇರುತ್ತಾರೆ.

ಶಾಸ್ತ್ರಗಳು

ಶಾಸ್ತ್ರಗಳು

ವಿಧವೆಗಳಿಗೆ ಶಾಸ್ತ್ರಗಳನ್ನು ಮಾಡುತ್ತಾರೆ. ಅಂದರೆ ಬಳೆಗಳನ್ನು ಒಡೆದು, ಹೂವುವನ್ನು ತೆಗೆದು, ಹರಿಶಿಣ ಕುಂಕುಮವನ್ನು ಒರೆಸಿ ಆಳುತ್ತಾ ಶಾಸ್ತ್ರಗಳನ್ನು ನೇರವೇರಿಸಿಕೊಳ್ಳುತ್ತಾರೆ.

ಕೂತಾಂಡವರ್ ಹಬ್ಬ

ಕೂತಾಂಡವರ್ ಹಬ್ಬ

ಈ ಕೂತಾಂಡವರ್ ದೇವಾಲಯದ 18 ದಿನದ ಉತ್ಸವವು ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಆ ಸಮಯದಲ್ಲಿ ಸಾವಿರಾರು ಮಂಗಳ ಮೂಖಿಯರು, ಪುರುಷರು, ಮಹಿಳೆಯರು ಈ ದೇವಾಲಯದ ಉತ್ಸವಕ್ಕೆ ಪಾಲ್ಗೋಳ್ಳುತ್ತಾರೆ.

ಪೂಜಾ ಸಮಯ

ಪೂಜಾ ಸಮಯ

ಕೂತಾಂಡವರ್ ದೇವಾಲಯದಲ್ಲಿ ಪೂಜಾ ಸಮಯವು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ತಮಿಳುನಾಡು ರಾಜ್ಯದ ವಿಲ್ಲಪುರಂ ಜಿಲ್ಲೆಯ ಉಲುಂದೂರ್ ಪಟ್ಟಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಈ ಕೂತಾಂಡವರ್ ದೇವಾಲಯವಿದೆ. ಉಲುಂದೂರ್‍ನಿಂದ ಸುಮಾರು 25 ಕಿ,ಮೀ ದೂರದಲ್ಲಿರುವುದರಿಂದ ಸುಲಭವಾಗಿ ತಲುಪಬಹುದು.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ಈ ಕೂತಾಂಡವರ್ ದೇವಾಲಯಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ವಿಲ್ಲೂಪುರಂ ರೈಲ್ವೆ ನಿಲ್ದಾಣ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಕೂತಾಂಡವರ್ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಪಾಂಡಿಚೇರಿ ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X