Search
  • Follow NativePlanet
Share
» »ವಿವಿಧ ಕೋನಗಳಲ್ಲಿ ಮುರುಡೇಶ್ವರ ಶಿವ ಪ್ರತಿಮೆ

ವಿವಿಧ ಕೋನಗಳಲ್ಲಿ ಮುರುಡೇಶ್ವರ ಶಿವ ಪ್ರತಿಮೆ

By Vijay

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರವು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಕ್ಷೇತ್ರ. ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ನೆಲೆಸಿರುವ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ವಿಶೇಷವಾಗಿ ತನ್ನಲ್ಲಿರುವ ಅತಿ ಎತ್ತರದ ದೇವಾಲಯ ಗೋಪುರ ಹಾಗೂ ಅತಿ ಎತ್ತರದ ಶಿವನ ಪ್ರತಿಮೆಗಳಿಂದಾಗಿ ಜನರ ಮನ್ನಣೆ ಗಳಿಸಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಭವ್ಯ ರಚನೆಗಳನ್ನು ದರ್ಶಿಸುವ ಉದ್ದೇಶದಿಂದ ಮುರುಡೇಶ್ವರಕ್ಕೆ ಆಗಮಿಸುತ್ತಲೆ ಇರುತ್ತಾರೆ. ಅಲ್ಲದೆ ಮುರುಡೇಶ್ವರ ಕಡಲ ತೀರವೂ ಸಹ ಒಂದು ಪ್ರವಾಸಿ ಆಕರ್ಷಣೆಯಾಗಿದ್ದು ಜನರನ್ನು ಚುಂಬಕದಂತೆ ಸೆಳೆಯುತ್ತದೆ.

ಒಂದೆಡೆ ಎತ್ತರದ ಗೋಪುರ, ಇನ್ನೊಂದೆಡೆ ಬೃಹತ್ತಾದ ಭವ್ಯವಾದ ಶಿವನ ಪ್ರತಿಮೆ ಅದೂ ಕೂಡ ಕಡಲ ತೀರವಿರುವ ಪ್ರದೇಶದಲ್ಲಿ....ಅಬ್ಬಾ, ಬಯಸಿದ್ದಕ್ಕಿಂತ ಹೆಚ್ಚೇ ಇರುವ ಈ ಸ್ಥಳಕ್ಕೆ ಭೇಟಿ ನೀಡದೆ ಇರುವುದಾದರೂ ಹೇಗೆ? ಹಾಗಾಗಿ ಈ ತಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಗಮನದಲ್ಲಿಡಬೇಕಾದ ಒಂದು ಸಂಗತಿ ಎಂದರೆ ಮುರುಡೇಶ್ವರ ಕಡಲ ತೀರವು ಅಪಾರವಾದ ಸಂಖ್ಯೆಯಲ್ಲಿ ಏಡಿಗಳಿಂದ ತುಂಬಿದ್ದು ಎಚ್ಚರವಹಿಸುವುದು ಅಗತ್ಯವಾಗಿದೆ.

ಮುರುಡೇಶ್ವರವು ಬೆಂಗಳೂರಿನಿಂದ 465 ಕಿ.ಮೀ ಗಳಷ್ಟು ದೂರವಿದ್ದು ರೈಲು ಹಾಗೂ ಬಸ್ಸಿನ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ಆದರೆ ಮಂಗಳೂರು ಹಾಗೂ ಮುಂಬೈನ ಕೆಲವು ನಿಗದಿತ ರೈಲುಗಳು ಮಾತ್ರ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು, ಇತರೆಡೆಯಿಂದ ತೆರಳಬೇಕೆಂದರೆ ಮೊದಲು ಮಂಗಳೂರಿಗೆ ತೆರಳಿ ಅಲ್ಲಿಂದ ಮುರುಡೇಶ್ವರಕ್ಕೆ ತಲುಪಬಹುದು. ಮಂಗಳೂರು ಹತ್ತಿರದ ರೈಲು ನಿಲ್ದಾಣವಾಗಿದೆ. ಅಲ್ಲದೆ ಬಸ್ಸುಗಳು ಮಂಗಳೂರು ಸೇರಿದಂತೆ ಬೆಂಗಳೂರಿನಿಂದಲೂ ಸಹ ಮುರುಡೇಶ್ವರಕ್ಕೆ ದೊರೆಯುತ್ತವೆ.

ಪ್ರಸ್ತುತ ಲೇಖನವು, ಹಲವು ಕೋನಗಳಲ್ಲಿ ಸೆರೆಹಿಡಿಯಲಾದ ಮುರುಡೇಶ್ವರದ ಶಿವನ ಪ್ರತಿಮೆಯ ಚಿತ್ರಗಳು ಹಾಗೂ ಎತ್ತರದ ದೇವಾಲಯ ಗೋಪುರದ ಪ್ರವಾಸವನ್ನು ಮಾಡಿಸುತ್ತದೆ.

ಮುರುಡೇಶ್ವರ:

ಮುರುಡೇಶ್ವರ:

ಅರಬ್ಬಿ ಸಮುದ್ರದ ಹಿನ್ನಿಲೆಯಲ್ಲಿ ಅದ್ಭುತವಾಗಿ ಗೋಚರಿಸುವ ಶಿವನ ಬ್ರೂಹತ್ ಪ್ರತಿಮೆ.

ಚಿತ್ರಕೃಪೆ: RNM

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಚಿತ್ರಕೃಪೆ: Thejas Panarkandy

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಚಿತ್ರಕೃಪೆ: Foliate08

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಚಿತ್ರಕೃಪೆ: Nkodikal

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಚಿತ್ರಕೃಪೆ: Harikuttan333

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ.

ಚಿತ್ರಕೃಪೆ: Prashant Sahu

ಮುರುಡೇಶ್ವರ:

ಮುರುಡೇಶ್ವರ:

ವಿವಿಧ ಕೋನಗಳಲ್ಲಿ ಸುಂದರವಾಗಿ ಕಾಣುವ ಮುರುಡೇಶ್ವರದ ಶಿವನ ಪ್ರತಿಮೆ. ರಾತ್ರಿಯ ಸಮಯದಲ್ಲಿ ಕಂಡುಬರುವ ನೋಟ

ಚಿತ್ರಕೃಪೆ: Abhijeetsawant

ಮುರುಡೇಶ್ವರ:

ಮುರುಡೇಶ್ವರ:

ಮುರುಡೇಶ್ವರದ ಶಿವನ ಪ್ರತಿಮೆ ಹಾಗೂ ಮುರುಡೇಶ್ವರ ದೇವಾಲಯದ ಅತಿ ಎತ್ತರದ ಗೋಪುರ.

ಮುರುಡೇಶ್ವರ:

ಮುರುಡೇಶ್ವರ:

ಕಡಲ ತೀರದ ಹಿನ್ನಿಲೆ ಇರುವ ದೇವಾಲಯ ಗೋಪುರದ ಇನ್ನೊಂದು ನೋಟ.

ಚಿತ್ರಕೃಪೆ: Yogesa

ಮುರುಡೇಶ್ವರ:

ಮುರುಡೇಶ್ವರ:

ಗಗನಚುಂಬಿ ದೇವಾಲಯ ಗೋಪುರ.

ಚಿತ್ರಕೃಪೆ: Pvnkmrksk

ಮುರುಡೇಶ್ವರ:

ಮುರುಡೇಶ್ವರ:

ಸುಂದರ ಪರಿಸರದಲ್ಲಿ ನಳನಳಿಸುವ ದೇವಾಲಯ ಗೋಪುರ.

ಚಿತ್ರಕೃಪೆ: Thejas Panarkandy

ಮುರುಡೇಶ್ವರ:

ಮುರುಡೇಶ್ವರ:

ಗಗನಚುಂಬಿ ದೇವಾಲಯ ಗೋಪುರ.

ಚಿತ್ರಕೃಪೆ: Ishwar

ಮುರುಡೇಶ್ವರ:

ಮುರುಡೇಶ್ವರ:

ಗೋಪುರದ ನಂತರ ಗರ್ಭ ಗೃಹವಿರುವ ದೇವಾಲಯದ ಸ್ವರ್ಣ ಬಣ್ಣದ ಲೇಪನ ಹೊಂದಿರುವ ವಿಮಾನ/ಕಳಶ.

ಚಿತ್ರಕೃಪೆ: Foliate08

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X